ಬದ್ರ್ ಶುಹಾದ (ರ)
✍🏾ಗಫೂರ್ ಬಾಯಾರ್.
🕌ಇಸ್ಲಾಮಿನ ವಿಕಾಸ ಚರಿತ್ರೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಮಹತ್ತರವಾದ ಪ್ರಥಮ ಪ್ರತಿರೋಧ ಸಮರವಾಗಿತ್ತು. *ಬದರ್ ಯುದ್ದ*.
ಮಕ್ಕ ಹಾಗು ಮದೀನದ ಮದ್ಯೆದಲ್ಲಿ ನೆಲೆಗೊಳ್ಳುವ ಬದರ್ ಎಂಬ ಸ್ಥಳದಲ್ಲಾಗಿದೆ ಸಮರ ನಡೆದಿರುವುದು. ಆದರಿಂದ್ದಲೇ ಅದೇ ಹೆಸರಿನಿಂದ ಅರಿಯಲ್ಪಡುವುದು.
ಹಿಜರಿ ವರ್ಷ ಎರಡನೇ ರಮಳಾನ್ ತಿಂಗಳಿನ 17ಕ್ಕೆ ಆಗಿತ್ತು ಘಟನೆ.
ಸಜ್ಜನರನ್ನು ಹಾಗು ಮಹಾತ್ಮಾರುಗಳನ್ನು ಅನುಸ್ಮರಿಸುವುದು, ಹಾಗು ಅವರ ಚರಿತ್ರೆಯ ಮಹತ್ವವನ್ನು ತಿಳಿಯುವುದು ಪುಣ್ಯ ಕಾರ್ಯವಾಗಿದೆ. ಅದು ಅವರ ಹತ್ತಿರ ಇರುವ ಸ್ನೇಹ, ಬಹುಮಾನದ ನಿಶಾನಿಯಾಗಿದೆ.
ಅಲ್ಲಾಹು ಹಾಗು ಅವನ ರಸೂಲರನ್ನು ﷺ ಪ್ರೀತಿಸುದರ ಭಾಗವಾಗಿದೆ, ಅಲ್ಲಾಹು ಮತ್ತು ರಸೂಲರು ﷺ ಪ್ರೀತಿಸಿದವರನ್ನು ಪ್ರೀತಿಸುವುದು. ಇದನ್ನು ವ್ಯಕ್ತಪಡಿಸುವ ಧಾರಾಳ ಹದೀಸುಗಳು, ಚರಿತ್ರೆಗಳು ಇದೆ.
ಬದ್ರ್ ನಲ್ಲಿ ಬಾಗವಹಿಸಿದವರನ್ನು ನಬಿ ﷺ ರವರು ಹಾಗು ಸಹಾಬಿವರ್ಯರು ಪ್ರತ್ಯೇಕ ಬಹುಮಾನಿಸುತ್ತಿದರು. ಬದ್ರ್ ಸಮರದಲ್ಲಿ ಬಾಗವಹಿಸಿದರ ಎಲ್ಲಾ ಪಾಪಗಳನ್ನು ಅಲ್ಲಾಹು ಮನ್ನಿಸಿ ಕೊಟ್ಟು, ಅವರತ್ತಿರ ಇಷ್ಟವಿರುಷ್ಟು ಕಾಲ ಕಾರ್ಯಚಿಸಲು ಅಲ್ಲಾಹು ಅನುಮತಿ ಕೊಟ್ಟಿದ್ದಾನೆಂದು ಬುಖಾರಿ (ರ) ರವರು ವರದಿ ಮಾಡಿದ ಹದೀಸುಗಳಲ್ಲಿ ಕಾಣಬಹುದು.
ಒಮ್ಮೆ *ಮದೀನದ ಸಣ್ಣ ಹೆಣ್ಣುಮಕ್ಕಳು ಬದ್ರ್ ಶುಹಾದಗಳ ಹೆಸರು ಹೇಳಿ ದಫ್ಫ್ ಬಾರಿಸಿ ಪ್ರಕೀರ್ತಿಸಿ ಹಾಡುತ್ತಾ ಇರುವಲ್ಲಿಗೆ ನಬಿ ﷺ ರವರು ಆಗಮಿಸಿದಾಗ, ಮಕ್ಕಳು ನಬಿ ﷺ ರವರ ಕುರಿತು ಹಾಡಲು ಶುರುಮಾಡಿದರು. ಆಗ ನಬಿ ﷺ ರವರು ಅವರತ್ತಿರ ಮೊದಲಿನ ಹಾಗೆ ಬದ್ರ್ ಶುಹಾದಗಳನ್ನು ಪ್ರಕಿರ್ತಿಸಿ ಹಾಡಲು ಕಲ್ಪಿಸಿದ್ದರು.*
ಈ ಸಂಭವ ಬುಖಾರಿ (ರ) ಹದೀಸಿನಲ್ಲಿ ಇದೆ. (5147)
ಬದರಿನಲ್ಲಿ ಬಾಗವಹಿಸಿದ ಸ್ವಹಾಬಿವರ್ಯರ ಹೆಸರುಗಳು ಅನುಸ್ಮರಿಸಿ ಅವರನ್ನು *ತವಸ್ಸುಲ್* ಮಾಡಿದರಿಂದ್ದ ಹಲವು ಕಷ್ಟಗಳಿಂದಲೂ, ಪ್ರಯಾಸದಿಂದಲೂ, ರಕ್ಷೆ ಹೊಂದಿರುದಾಗಿ ಹಲವು ಮಹಾತ್ಮಾಕರು ಅವರ ಅನುಭವವಾಗಿಯೂ ಅಲ್ಲದೆಯೂ ಉಲ್ಲೇಕಿಸಿದ್ದಾರೆ.
*ತಸ್ವವ್ವುಫುನಲ್ಲಿ ಅಂಗಿಕರಿಸಲ್ಪಟ ಹಲವು ಮಹಾತ್ಮಕರುಗಳು ಬದ್ರ್ ಶುಹಾದಗಳ ನಾಮಗಳು ಹೇಳುವುದು, ಬರೆದು ಇಡುವುದು, ಹಲವು ಅಪಘಡಗಳಿಂದ ಕಾವಲಾಗಿದೆಂದು ಉಪದೆಶಿಸಿದ್ದಾರೆ. ಅಬುಲ್ ಬರಕಾತ್ ನಾಸ್ವಿರುದ್ದೀನ್ ಅಬ್ದುಲ್ಲಾಹಿ ಅಸ್ಸುವೈದಿ (ರ) ರವರು ತನ್ನ ಅನ್ನಫ್ ಹತುಲ್ ಮಿಸ್ಕಿಯ್ಯ ಫರ್ ರಿಹ್ಲತಿಲ್ ಮಕ್ಕಿಯ* ಎಂಬ ಗ್ರಂಥದಲ್ಲಿ ಪ್ರಯಾಸಗಳಿಂದ ರಕ್ಷೆಗಾಗಿ ಬದ್ರ್ ಶುಹಾದಗಳ ಹೆಸರುಗಳು ಹೇಗೆ ಬರೆಯಲು ಶುರುಮಾಡಬೇಕೆಂದು ವಿವರಿಸುದರ ಜೊತೆಗೆ ಅದರ ಮಹತ್ವವನ್ನು ವಿಶದಿಕರಿಸಿದ್ದಾರೆ.
ಈ ಸಂಪ್ರದಾಯ ಎರಡು ಹರಮುಗಳಲ್ಲಿ, ಮತ್ತು ಶಾಮ್, ಹಾಗು ಹಲಬಿ ಎಂಬ ಸ್ಥಳಗಳಲ್ಲಿ ಪ್ರಶಿದ್ದವಾಗಿತ್ತೆಂದು ಅವರು ಹೇಳುತ್ತಾರೆ. ಶೈಖ್ ಅಬ್ದುಲ್ಲತಿಫ್ ಅಲ್ ಮಕ್ತಬಿ (ರ) ರಂತ ಹಲವರು ಈ ವಿಷಯದಲ್ಲಿ ಗ್ರಂಥ ರಚನೆ ನಡೆಸಿರುತ್ತಾರೆಂದು ಅವರು ಸ್ಮರಿಸುತ್ತಾರೆ.
ನಂತರ ಅವರು ಹೇಳುತ್ತಾರೆ;
ಬದ್ರ್ ಶುಹಾದಗಳ ಹೆಸರುಗಳು ಬರೆದದ್ದು ಕೈಯಲ್ಲಿ ಇಡುವುದರಿಂದ ಹಲವಾರು ಉಪಕಾರಗಳಿವೆ. ಶತ್ರುಗಳಿಂದ ಕಾವಲು ಸಿಕ್ಕುತ್ತಿತ್ತು.
ಔಲಿಯಾಗಳಲ್ಲಿ ಕೆಲವರಿಗೆ ಬದ್ರ್ ಶುಹಾದಗಳ ಹೆಸರಿನಿಂದಲೇ ಬರ್ಕತ್ತ್ ಲಬಿಸುತಿತ್ತು. ಹಲವಾರು ರೋಗಿಗಳು ಈ ನಾಮಗಳನ್ನು ಹೇಳಿ ತವಸ್ಸುಲ್ ಮಾಡಿ ಅಲ್ಲಾಹುವಿನತ್ತಿರ ಪ್ರಾರ್ಥನೆ ಮಾಡಿದಾಗ ಅವರ ರೋಗಗಳು ಗುಣಮುಖವಾಗಿತ್ತು.
ಆರಿಫಿಗಳಲ್ಲಿ ಒಳಪಟ್ಟ ಒಬ್ಬರು ಹೇಳಿದ್ದರು- ( ಒಂದು ರೋಗಿಯ ತಲೆಯಲ್ಲಿ, ಬದ್ರ್ ಶುಹಾದಗಳ ಹೆಸರು ಹೇಳಿ ನಾನು ಕೈ ಇಡುವಾಗ ರೋಗ ಗುಣಮುಖವಾಗುತಿತ್ತು. ಮರಣ ಸಮಯದಲ್ಲಾದರೆ ಅದು ಅವನಿಗೆ ಆಶ್ವಾಸನೆ ನೀಡುತಿತ್ತು) ಈ ನಾಮಗಳು ಪಾರಾಯಣ ಮಾಡಿಯೂ, ಬರೆದೂ ನನಗೆ ಇದರ ಅನುಭವವಿದೆಯೆಂದು, ಅದೇ ಪ್ರಕಾರ ಪ್ರಾರ್ಥನೆಗೆ ಬೇಗನೆ ಉತ್ತರ ಲಬಿಸುತಿತ್ತು ಎಂದು ಮತ್ತೊಂದು ಆರಿಫಾದ ವ್ಯಕಿಯು ಹೇಳಿದ್ದರು. ಜಹಫರ್ ಇಬ್ನು ಅಬ್ದಿಲ್ಲಾ (ರ) ಎಂಬವರತ್ತಿರ ಅವರ ತಂದೆ ನಬಿ ﷺ ರವರ ಸ್ವಹಾಬಿವರ್ಯರನ್ನು ಪ್ರೀತಿಸಲು, ಪ್ರಧಾನವಾದ ಕಾರ್ಯಳಲ್ಲಿ ಒಂದು ಅಹ್ಲು ಬದ್ರ್'ಗಳನ್ನು ತವಸ್ಸುಲ್ ಮಾಡಿ ಪ್ರಾರ್ಥಿಸಲು ವಸ್ವಿಯ್ಯತ್ ಮಾಡುತ್ತಿದ್ದರೆಂದು ಹೇಳುತ್ತಾರೆ. ಅವರನ್ನು ಪರಾಮರ್ಶೆ ಮಾಡುವ ಸ್ಥಳಗಳಲ್ಲಿ ಪ್ರಾರ್ಥನೆಗೆ ಉತ್ತರ ಲಬಿಸಲು ಸಾದ್ಯತೆ ಬಹಳ ಹೆಚ್ಚಾಯಾಗಿದೆ. ರಹ್ಮತ್ತ್, ಬರ್ಕತ್ತ್, ಮಗ್ಫಿರತ್ತ್, ರಿದ್ವಾನುಗಳು ಇದು ಪರಾಯಣ ಮಾಡುವವನನ್ನು ಸುತ್ತುವರಿಯುವುದು. ಎಲ್ಲಾ ದಿವಸಗಳಲ್ಲಿ ಇವರ ಹೆಸರನ್ನು ಹೇಳಿ ಅಲ್ಲಾಹುವಿನತ್ತಿರ ತನ್ನ ಅವಿಷ್ಯಗಳನ್ನು ಮುಂದಿಟ್ಟು ಕೇಳಿದ್ದರೆ ಅಲ್ಲಾಹು ಅದು ಸಾದಿಸಿ ಕೊಡುವನು. ಆದರೆ, ಪ್ರಧಾನವಾದ ಕಾರ್ಯಗಳ ಪೂರ್ತಿಗರಣಕ್ಕೆ ಅವರ ಒಬ್ಬೊಬ್ಬರ ಹೆಸರಿನೊಂದಿಗೆ ತರ್ಳಿಯತ್ ಹೇಳಬೇಕು. ಅದು ಪ್ರಾರ್ಥನೆಕ್ಕೆ ಉತ್ತರ ಲಬಿಸಲು ಅತೀ ಹೆಚ್ಚು ಅಭಿಕಾಮ್ಯವಾಗಿದೆ.
✍🏾ಗಫೂರ್ ಬಾಯಾರ್
🕎🕎🕎🕎🕎🕎🕎🕎
Comments