ಚುಳ್ಳಿಕೋಡ್ ಉಸ್ತಾದ್ ಒಮ್ಮೆ ಸುಲ್ತಾನುಲ್ ಉಲಮಾ ಕಾಂತಪುರಂ ಉಸ್ತಾದರೊಂದಿಗೆ ಕೇಳಿದರು .. "ತಾವು ಸ್ವರ್ಗವನ್ನು ಪ್ರವೇಶಿಸಿದರೆ ತಾವು ಅತಿ ಹೆಚ್ಚು ಆಗ್ರಹಿಸುವ ಕಾರ್ಯವೇನು?" ಉಸ್ತಾದರ ಉತ್ತರ: "ಉತ್ತಮ ಬುದ್ಧಿವಂತ ಮಕ್ಕಳನ್ನು ಮುಂದೆ ಕುಳ್ಳಿರಿಸಿ ಸಹೀಹ್ ಉಲ್-ಬುಖಾರಿ ತರಗತಿಯನ್ನು ನಡೆಸುವುದಾಗಿದೆ!" ವಿಶ್ವದ ಅತಿ ದೊಡ್ಡ ಸಹೀಹುಲ್ ಬುಖಾರಿ ತರಗತಿಗೆ ಇಂದು ನೇತೃತ್ವ ವಹಿಸುತ್ತಿರುವುದು ಸಾವಿರಾರು ಮಕ್ಕಳ ಪ್ರೀತಿಯ ಸಂರಕ್ಷಕ ಮತ್ತು ಸಾವಿರಾರು ಆಲಿಮ್‌ಗಳ ಗುರುಗಳಾದ ಸುಲ್ತಾನುಲ್ ಉಲಮಾ ಉಸ್ತಾದ್ ರವರಾಗಿದ್ದಾರೆ ಎಂಬುವುದರಲ್ಲಿ ಎರಡು ಮಾತಿಲ್ಲ. ಅದಕ್ಕಾಗಿಯೇ ಅರಬ್ ಪ್ರಪಂಚದ ಅತ್ಯಂತ ಪ್ರಖ್ಯಾತ ವಿದ್ವಾಂಸರುಗಳು ಸಹಾ ಸಹೀಹ್ ಅಲ್ ಬುಖಾರಿ ಪಠಿಸಲು ಮತ್ತು ಅದನ್ನು ಇತರರಿಗೆ ಕಲಿಸಿಕೊಡುವ ಇಜಾಝತ್ ಸ್ವೀಕರಿಸಲು ಉಸ್ತಾದರ ಸನಿಹ ಬರುತ್ತಾರೆ. ಜೀವನ ಪೂರ್ತಿ ಇಸ್ಲಾಂ ಧರ್ಮದ ಪಾಲಕರನ್ನು ರೂಪಿಸಲು ತನ್ನ ಜೀವನವನ್ನು ಮುಡಿಪಾಗಿಟ್ಟ ಉಸ್ತಾದರಿಗೆ ಅಲ್ಲಾಹನು ದೀರ್ಘಾಯುಷ್ಯ ನೀಡಲಿ . ಆಮೀನ್
ಇದು ಅಹ್ಲುಸ್ಸುನ್ನತಿ ವಲ್ ಜಮಾಅತಿನ ನೈಜ ಆಶಯಾದರ್ಶಗಳನ್ನು ವಿವರಿಸುವ ಬ್ಲಾಗ್ ಆಗಿದೆ. More info cont - Nawaz Saqafi Al Amjadi Ullala.