ಗೌಜಿ ಗದ್ದಲವಿಲ್ಲದೆ ಬದುಕಲು ಇಷ್ಟಪಟ್ಟ ತಂಙ್ಙಳ್ ಹಾಗೆಯೇ ಸದ್ದಿಲ್ಲದೆ ಹೋಗಿಬಿಟ್ಟರು ----- ಅಬೂಶಝ ಕೂರ್ನಡ್ಕ "ಇವಿಡೆ ಓರ್ ವರುಮ್,ಇವಿಡತ್ತೆ ಮಣ್ಣುಂ ವೆಳ್ಳವುಂ ಔಷಧಮಾವುಂ" ಇದು ಶೈಖುನಾ ಮಡವೂರು ಸಿ ಎಂ ವಲಿಯುಲ್ಲಾಹಿ ತಂಙ್ಙಳ್‌ರವರು ಅದೆಷ್ಟೋ ವರ್ಷಗಳ ಮುಂಚೆ ನಡೆಸಿದ ಪ್ರವಚನವಾಗಿತ್ತು! ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನಿಂದ ಹದಿನೆಂಟು ಕಿಲೋಮೀಟರ್ ದೂರದಲ್ಲಿರುವ ಕೂರ ಎಂಬ ಕುಗ್ರಾಮದಲ್ಲಿ ವಾಸಿಸುತ್ತಿದ್ದ ಯೂಸುಫ್ ಹಾಜಿ ಎಂಬ ಮುತವಲ್ಲಿಯವರು ಕುಂಬೋಳ್ ಪಾಪಂ ಕೋಯ ತಂಙಳ್, ಶೈಖುನಾ ಸಿ ಎಂ ವಲಿಯುಲ್ಲಾಹಿ ಮಡವೂರು ಮುಂತಾದ ಆಧ್ಯಾತ್ಮಿಕ ದಿಗ್ಗಜರೊಂದಿಗೆ ಆತ್ಮೀಯ ನಂಟು ಹೊಂದಿದವರಾಗಿದ್ದರು.ಹಾಗಾಗಿಯೇ ಅವರು ಕೂರತ್ ಎಂಬ ಕುಗ್ರಾಮಕ್ಕೆ ಬಂದು ಹಾಜಿಯವರ ಮನೆಯಲ್ಲಿ ತಂಗುತ್ತಿದ್ದರು.ಹೀಗೆ ಬೇಟಿ ನೀಡಿದ ಸಂಧರ್ಭದಲ್ಲೊಮ್ಮೆ ಸಿಎಂ ವಲಿಯುಲ್ಲಾಹಿ ಹೇಳಿದ ಮಾತಾಗಿತ್ತು."ಅವರು ಇಲ್ಲಿಗೆ ಬರುವರು,ಇಲ್ಲಿನ ಮಣ್ಣು ನೀರು ಔಷಧಿಯಾಗಲಿದೆ" ಪ್ರಸ್ತುತ ಪ್ರವಚನದ ಬಗ್ಗೆ ಅಂದು ಅವರಿಗೆ ಏನೆಂದು ಅರ್ಥವಾಗಲಿಲ್ಲವಾದರೂ ವರ್ಷಗಳ ನಂತರ ಸಯ್ಯದ್ ಕೂರತ್ ತಂಙಳ್ ಆ ಮಣ್ಣಿಗೆ ಕಾಲಿಟ್ಟಾಗ ಇತಿಹಾಸದ ಪ್ರಕಾಶ ಬೆಳಗಿತು. ಕೇರಳದ ಪಯ್ಯನ್ನೂರು ಎಟ್ಟಿಕ್ಕುಳಂ ನಾಲೂರಪ್ಪಾಟ್ಠ್ ಮಟ ತಂಙಳ್ ಹೌಸ್‌ನ ತಾಜುಲ್ ಉಲಮಾ ಅಸ್ಸಯ್ಯದ್ ಅಬ್ದುರ್ರಹ್ಮಾನ್ ಅಲ್ ಬುಖಾರಿ ತಂಙಳ್- ಪಝಯಂಙ್ಙಾಡಿ ಏಝಿಮಲ ತಂಙ್ಙಳ್ ಎಂದು ಪ್ರಸಿದ್ದ...
ಇದು ಅಹ್ಲುಸ್ಸುನ್ನತಿ ವಲ್ ಜಮಾಅತಿನ ನೈಜ ಆಶಯಾದರ್ಶಗಳನ್ನು ವಿವರಿಸುವ ಬ್ಲಾಗ್ ಆಗಿದೆ. More info cont - Nawaz Saqafi Al Amjadi Ullala.