Skip to main content

Posts

Showing posts from 2022

ವಿಷ ಮಿಶ್ರಿತವಾದ ಆಯುಧದೊಂದಿಗೆ ಕೊಲ್ಲಲು ಬಂದ ವ್ಯಕ್ತಿಗೆ ಪ್ರೀತಿಯ ಆಸರೆ ನೀಡಿದ ಪೈಗಂಬರ್ ﷺِ

ವಿಷ ಮಿಶ್ರಿತವಾದ ಆಯುಧದೊಂದಿಗೆ ಕೊಲ್ಲಲು ಬಂದ ವ್ಯಕ್ತಿಗೆ ಪ್ರೀತಿಯ ಆಸರೆ ನೀಡಿದ  ಪೈಗಂಬರ್ ﷺِ ✍️ ಗಫೂರ್ ಬಾಯಾರ್ 〰️〰️〰️〰️〰️〰️〰️ ಆ ವ್ಯಕ್ತಿಯ ಹೆಸರು ಆಜಾಝ್ ಖೈಬರ್'ನ ಧೀರ ಶೂರ ಪರಾಕ್ರಮಿಗಳ ಪೈಕಿ ಒಬ್ಬನಾಗಿದ್ದ. ನಬಿﷺِರನ್ನು ಕೊಂದು ಅರಬ್ ಸಾಮ್ರಾಜ್ಯದ ಹೀರೋ ಆಗಬೇಕೆಂಬ ದುರಾಸೆಯಿಂದ ವಿಷ ಮಿಶ್ರಿತ ಕತ್ತಿಯೊಂದನ್ನು ಸೊಂಟಪಟ್ಟಿಯಲ್ಲಿ ಅಡಗಿಸಿ ವೇಷ ಮರೆಸಿಕೊಂಡು ನಬಿ ಸ್ವಲ್ಲಲ್ಲಾಹು ಅಲೈಹಿವ ಸಲ್ಲಮರು ನಿವಾಸವಾಜ ಮದೀನಾದ ಮಸ್ಜಿದುನ್ನಬವಿಗೆ ಆಗಮಿಸಿದನು. ಆಗ ನಬಿ ﷺِ ರವರು ಆರಾಧನಾ ಮಗ್ನರಾಗಿದ್ದರು. ಮಸೀದಿಯ ಬಾಗಿಲಿನಲ್ಲಿ ಕುಖ್ಯಾತ ಶೈತಾನನ್ನೂ ಬೆದರಿಸಿ ಬೆನ್ನಟ್ಟಿದ್ದ ಧೈರ್ಯಶಾಲಿ ಉಮರ್ ಬಿನ್ ಖತ್ತಾಬ್(ರ) ರವರು ಕಾವಲು ಕಾಯುತ್ತಿದ್ದರು. ಹಾಗೆ ಮದೀನಾ ಮಸೀದಿಯ ಮುಂದೆ ಬಂದು ನಿಂತ ಆಗಂತುಕನನ್ನು ಅಡಿಯಿಂದ ಮುಡಿಯ ತನಕ ಒಮ್ಮೆ ದುರುಗುಟ್ಟಿ ನೋಡಿದ ಉಮರ್ (ರ) ರವರು ತಮ್ಮ ಕಂಚಿನ ಕಂಠದಲ್ಲಿ ಯಾರು ನೀನು? ಎಂದರು. ನಾನು ಆಜಾಝ್.. ಖೈಬರ್‌ನಿಂದ ಬಂದಿದ್ದೇನೆ.. ಸರಿ..  ನಿನಗೆ ಏನು ಬೇಕು..? ಪ್ರವಾದಿ ಮುಹಮ್ಮದ್ ﷺِ ರನ್ನು ಕಾಣಲು ಬಂದಿದ್ದೇನೆ ಎಂದುತ್ತರಿಸಿದರು ಆಜಾಝ್. ಈಗ ನಬಿ ﷺِ ರು ಆರಾಧನಾ ನಿರತರಾಗಿದ್ದಾರೆ. ಸ್ವಲ್ಪ ಹೊತ್ತು ಕಾಯಿರಿ.  ಎಂದರು ಉಮರ್ (ರ) ಸರಿ ಎಂದ ಆಜಾಝ್,  ನಬಿ ﷺِ ರವರ ನಮಾಝ್ ಮುಗಿಯುವ ತನಕ ಅಲ್ಲೇ ಕಾಯುತ್ತಾ ಕುಳಿತನು. ನಬಿ ﷺِರವರ ನಮಾಝ್ ಮುಗಿದ ನಂತರ ಆಜಾಝ್'...

ಗೌಸುಲ್ ಆಝಮ್ ರಳಿಯಲ್ಲಾಹು ಅನ್ಹು'ರವರ ಬಾಲ್ಯದಲ್ಲಿನ 7 ಕರಾಮತ್'ಗಳು,

ಗೌಸುಲ್ ಆಝಮ್ ರಳಿಯಲ್ಲಾಹು ಅನ್ಹು'ರವರ ಬಾಲ್ಯದಲ್ಲಿನ 7 ಕರಾಮತ್'ಗಳು, ಗೌಸುಲ್ ಆಝಮ್ ರಳಿಯಲ್ಲಾಹು ಅನ್ಹು ಜನಿಸುವಾಗಲೇ ವಲಿಯ್ಯ್ ಎಂಬ ಪಟ್ಟವನ್ನು ಗಳಿಸಿದವರಾಗಿದ್ದಾರೆ. ಬಾಲ್ಯದಲ್ಲಿನ ಈ  ಎಲ್ಲಾ ಕರಾಮತ್'ಗಳಿಂದ ಅವರು ಅಲ್ಲಾಹನ ವಲಿಯ್ಯ್ ಎಂಬುವುದು ವ್ಯಕ್ತವಾಗುತ್ತದೆ. (1) ಗೌಸುಲ್ ಆಝಮ್ ರಳಿಯಲ್ಲಾಹು ಅನ್ಹು ರವರ ತಾಯಿ ಗರ್ಭಿಣಿಯಲ್ಲಿ ಸೀನಿದಾಗ ಅಲ್ ಹಮ್ದುಲಿಲ್ಲಾಹ್ ಎಂದು ಹೇಳಿದರೆ ಗರ್ಭಾಶಯದಲ್ಲಿರುವ ಗೌಸುಲ್ ಆಝಮ್ ರಳಿಯಲ್ಲಾಹು ಅನ್ಹು ರವರು   "ಯರ್'ಹಮ್ಕುಮುಲ್ಲಾಹ್" ಎಂದು ಉತ್ತರಿಸುತ್ತಿದ್ದರು. (ಅಲ್ ಹಖಾಯಿಕ್ ಫಿಲ್ ಹದಾಯಿಖ್ ಪುಟ-139 ) (2) ಗೌಸುಲ್ ಆಝಮ್ ರಳಿಯಲ್ಲಾಹು ಅನ್ಹು ರಮಝಾನಿನ ಪ್ರಥಮ ದಿನ ಸೂರ್ಯೋದಯದ ಸಮಯದಲ್ಲಿ ಜನಿಸಿರುತ್ತಾರೆ. ಅವರ ತುಟಿಯಿಂದ "ಅಲ್ಲಾಹ್..! ಅಲ್ಲಾಹ್" ಎಂಬ ಶಬ್ದವು ಹೊರಬರುತ್ತಿರುವುದನ್ನು ಕೇಳಲಾಗುತ್ತಿತ್ತು (ಅಲ್ ಹಖಾಯಿಕ್ ಫಿಲ್ ಹದಾಯಿಖ್ ಪುಟ-139) (3) ಗೌಸುಲ್ ಆಝಮ್ ರಳಿಯಲ್ಲಾಹು ಅನ್ಹು ಜನಿಸಿದ  ದಿನದಂದು ಇರಾಖಿನ ಜಿಲಾನ್ ಪ್ರದೇಶದಲ್ಲಿ 1100 ಗಂಡು ಮಗು ಜನಿಸುತ್ತಾರೆ. ಅವರೆಲ್ಲರೂ ಅಲ್ಲಾಹನ ವಲಿಯ್ಯ್ ಆಗಿದ್ದಾರೆ.  (ತಾರಿಖ್ ಉಲ್ ಕಥೀರ್, ಪುಟ-15) (4) ಗೌಸುಲ್ ಆಝಾಂ ರಳಿಯಲ್ಲಾಹು ಅನ್ಹು ರವರು ತಾನು ಜನಿಸಿದ ದಿನವೇ ಸೂರ್ಯಾಸ್ತಮವಾಗುವವರೆಗೆ ತನ್ನ ತಾಯಿಯ ಮೊಲೆಹಾಲನ್ನು ಕುಡಿಯದೆ ಉಪವಾಸ ಆಚರಿಸಿದ್ದಾರೆ.  ರಮಝಾನಿನ ...

ಶೈಖ್ ಅಬ್ದುಲ್ ಖಾದಿರ್ ಜೀಲಾನಿ ರಹ್ಮತುಲ್ಲಾಹಿ ಅಲೈಹಿ.

ಶೈಖ್ ಅಬ್ದುಲ್ ಖಾದಿರ್ ಜೀಲಾನಿ ರಹ್ಮತುಲ್ಲಾಹಿ ಅಲೈಹಿ.  _✒️ನಿಝಾರ್ ಸುಲ್ತಾನಿ ಅಸ್ಸಖಾಫಿ ಉಳ್ಳಾಲ_  ➖➖➖➖➖  *🟡ಸತ್ಯವಂತ ಅವರು:*  يقول الشيخ القدرة أبو عبد الله قائد الأواني كنت عند الشيخ عبد القادر فسأله سائل على ما بنيت أمرك قال علی الصدق ما كذبت قط. ಶೈಖ್ ಅಬೂ ಅಬ್ದುಲ್ಲಾ ಖಾಯಿದುಲ್ ಅವಾನಿ ರಹ್ಮತುಲ್ಲಾಹಿ ಅಲೈಹಿ ರವರು ಹೇಳುತ್ತಾರೆ: _ನಾನು ಶೈಖ್ ಅಬ್ದುಲ್ ಖಾದಿರ್ ರಹ್ಮತುಲ್ಲಾಹಿ ಅಲೈಹಿ ರವರ ಸಮೀಪ ಇದ್ದೆ. ಆಗ ಒಬ್ಬರು ಅವರಲ್ಲಿ ಕೇಳಿದರು: ನಿಮಗೆ ಪದವಿ ಲಭಿಸಲು ಕಾರಣ ವೇನು.? ಮಹಾನುಭಾವರು ಹೇಳಿದರು: ಸತ್ಯದ ಕಾರಣದಿಂದ, ಜೀವನದಲ್ಲಿ ನಾನು ಅಸತ್ಯವನ್ನು ನುಡಿದಿಲ್ಲ. ಮದ್ರಸದಲ್ಲಿ ಕಲಿಯುತ್ತಿದ್ದ ಕಾಲದಲ್ಲೂ ಕೂಡಾ._   *🟡ಪಶು ಮಾತಾಡಿತು:*  ثم قال رضي الله منه: كنت صغيرا في بلدنا فخرجت إلى السواد يوم عرفة وتبعن بقرة حرث فالتفتت الي بقرة وقالت با عبد القادر ما لهذا خلقت ولا بهذا امرت فرجعت فزعا إلى دارنا وصعدت إلی سطح الدار فرأيت الناس واقفين بعرفات فجئت إلى أمي وقلت لها هبينئ  لله عزوجل واذني لي بالمسير إلى بغداد اشتغل بالعلم وازور الصالحين. (بهجة الأسرار :٨٧) ನಂತರ ಹೇಳಿದರು: ನಾನು ನನ್ನ ಸಣ್ಣ ವಯಸ್ಸಿನಲ್ಲಿ ಊರಿನಲ್ಲಿ ಅರಫಾ ದಿವಸ ಗ್ರಾಮೀಣ...

ಸರಿಸಾಟಿಯಿಲ್ಲದ ಮಹಾ ತೇಜಸ್ಸು,ಉಲಮಾ ಜಗತ್ತಿನ ಕಿರೀಟ,ಶೈಖುನಾ ತಾಜುಲ್ ಉಲಮಾ (ಖ,ಸಿ)

ಸರಿಸಾಟಿಯಿಲ್ಲದ ಮಹಾ ತೇಜಸ್ಸು, ಉಲಮಾ ಜಗತ್ತಿನ ಕಿರೀಟ, ಶೈಖುನಾ ತಾಜುಲ್ ಉಲಮಾ (ಖ,ಸಿ) 🌠🌠🌠🌠🌠🌠🌠🌠🌠🌠  ✍️𝙏.𝙃 𝙈𝙐𝙃𝘼𝙈𝙈𝘼𝘿 𝙎𝘼𝙁𝙒𝘼𝙉 𝙉𝙀𝙇𝙇𝙔𝘼𝘿𝙄 🌠🌠🌠🌠🌠🌠🌠🌠🌠🌠 ಸಮಕಾಲೀನ ಮುಸ್ಲಿಂ ಜಗತ್ತಿನ ಅಗ್ರೇಸರ ವಿದ್ವಾಂಸ, ಅಹ್ಲುಸುನ್ನದ ಅಮರ ನಾಯಕ, ಉಲಮಾ ಲೋಕದ ಕಿರೀಟ, ಆಧ್ಯಾತ್ಮಿಕ ನಭೋಮಂಡಲದ ಮಿನುಗು ತಾರೆ ಶೈಖುನಾ ತಾಜುಲ್ ಉಲಮಾರವರ ಅಗಲುವಿಕೆಯ ನೋವು ಸುನ್ನೀ ಸಮೂಹಕ್ಕೆ ತುಂಬಲಾರದಷ್ಟು ನಷ್ಟವಾಗಿದೆ, ಅವರಿಲ್ಲದ ಶಿಷ್ಯಸಮೂಹವನ್ನು ಅನಾಥರನ್ನಾಗಿಸಿದೆ. ತಾಜುಲ್ ಉಲಮಾ ರು ಹಿಜ್ ರಾ 1431ರ ರಬೀವುಲ್ ಅವ್ವಲ್ 25ರಂದು ಭೂಲೋಕ ಕಂಡ ಪ್ರವಾದಿ ಕುಟುಂಬದ ಪುನೀತ ಸದಸ್ಯ,  ಪವಿತ್ರ ರಬೀವುಲ್ ಅವ್ವಲ್ ನ ವಿದಾಯದೊಂದಿಗೆ ಆಗಮಿಸಿದ ರಬೀವುಲ್ ಆಖಿರ್ ನ ಚಂದ್ರೋದಯ ವಿದ್ವತ್ ಸೋರ್ಯವೊಂದರ ಸಾಕ್ಷಿಯಾಗಿತ್ತು.  2014 ಫೆಬ್ರವರಿ 1, ರಬೀವುಲ್ ಆಖಿರ್ 1ರ  ಆ ದಿನ ಕೇರಳ ಕರ್ನಾಟಕ ಮತ್ತು ಅಲ್ಲಿನ ಧಾರ್ಮಿಕ ಚಟುವಟಿಕೆಗಳಲ್ಲಿ ಪ್ರಭಾವಿತಗೊಂಡ ಪ್ರಪಂಚದ ನಾನಾ ಕಡೆಗಳು ಹರಿಯಬಿಟ್ಟ ಕಣ್ಣೀರ ನದಿಗಳು ಕೇರಳದ ಎಟ್ಟಿಕ್ಕುಳಂ ಎಂಬ ಪಟ್ಟ ಊರನ್ನು ಬಹುದೊಡ್ಡ ಜನಸಾಗರವನ್ನಾಗಿ ಮಾಡಿಸಿತು. ತಾಜುಲ್ ಉಲಮಾ ರ ಅಗಲುವಿಕೆಯಿಂದ  ಸಮುದಾಯವೊಂದು ಧಾರ್ಮಿಕವಾಗಿ ಅನಾಥವಾಯಿತು. ಮಾತ್ರವಲ್ಲ ತನ್ನ ಪುರುಷಾಯುಷ್ಯವನ್ನ ಕರಾವಳಿ ಕನ್ನಡದ ತಟದಲ್ಲಿ ಕಳೆದು "ಉಳ್ಳಾಲ ತಂಙಳ್"  ಎಂದೇ ಜ...

ಅಂಚೆ ತಲುಪುವ ಮುಂಚೆಯೇ ತಲುಪಿತು, ಪ್ರವಾದಿ ಸನ್ನಿಧಿಗೆ ಆ ಕಾವ್ಯ.

ಅಂಚೆ ತಲುಪುವ ಮುಂಚೆಯೇ ತಲುಪಿತು, ಪ್ರವಾದಿ ಸನ್ನಿಧಿಗೆ ಆ ಕಾವ್ಯ... ಯೂಸುಫ್ ನಬ್‌ಹಾನಿ ಕುಕ್ಕಾಜೆ 8951287993 ಹನಫೀ  ಮಹ್‌ಹಬಿನ ಇಮಾಮ್, ಇಮಾಮ್ ಅಬೂಹನೀಫ (ರ) ರವರು ಪ್ರವಾದಿ ಮುಹಮ್ಮದ್ ﷺ ಹೊಗಳಿ ಅರಬಿ ಭಾಷೆಯಲ್ಲಿ ಒಂದು ಬಯ್‌ತ್ (ಪದ್ಯ) ರಚನೆ ಮಾಡಿದ್ದರು. ಆದರೆ ಅದನ್ನು ತನ್ನ ಸಹಪಾಠಿಗಳೋ ಅಥವಾ ಇತರರಿಗೋ ಯಾರಿಗೂ ತೋರಿಸಿರಲಿಲ್ಲ. ತನ್ನ ಕೆಲವು ಬ್ಯುಸಿ ಶೆಡ್ಯೂಲುಗಳ ಕಾರಣದಿಂದ ಅದನ್ನು ಇಶ್ಯೂ ಮಾಡಲು ಸಮಯ ಕೂಡ ದೊರಕಲಿಲ್ಲ.   ಒಮ್ಮೆ  ಇಮಾಮ್ ಅಬೂಹನೀಫರು ಮದೀನ ತಲುಪಿದಾಗ ಅಲ್ಲಿನ ಅವತ್ತಿನ ಮಸೀದಿಯ ಮುಅದ್ದಿನ್ (ಮುಕ್ರಿಕ) ರೌಲಾದ ಹತ್ತಿರ ಒಂದು ಕಡೆ ನಿಂತು ಏರು ದನಿಯಲ್ಲಿ ಈ ಪದ್ಯವನ್ನು ಹಾಡುತ್ತಿರುವುದು ತನ್ನ ಗಮನಕ್ಕೆ ಬಂತು. ತಾನು ರಚಿಸಿದ ಈ ಹಾಡು ಇವರಿಗೆ ಎಲ್ಲಿಂದ ದೊರಕಿತು? ಇದು ಹೇಗೆ ಸ್ಪ್ರೆಡ್ ಅಯಿತು?  ಎಂದು ಅದ್ಬುತಗೊಂಡು  ಮುಕ್ರಿಕರವರು ಪದ್ಯಹಾಡಿ ಮುಗಿಸಿದ ಕೂಡಲೇ ಅವರನ್ನು ಸಮೀಪಿಸಿ ಕೇಳಿದರು. "ಈ ಹಾಡು ಯಾರು ರಚನೆ ಮಾಡಿದ್ದು?" ಮುಕ್ರಿಕ:  ಇಮಾಮ್ ಅಬೂಹನೀಫ (ರ). ಅಬೂಹನೀಫ:  ನಿಮಗೆ ಅವರ ಪರಿಚಯ ಇದೆಯಾ? ನೀವು ಅವರನ್ನು ಕಂಡಿದ್ದೀರಾ? ಮುಕ್ರಿಕ:  ಇಲ್ಲ. ಅಬೂಹನೀಫ:  ಹಾಗಾದರೆ ಈ ಪದ್ಯ ನಿಮಗೆ ಎಲ್ಲಿಂದ ದೊರಕಿತು? ಮುಕ್ರಿಕ:  ಈ ಹತ್ತಿರದಲ್ಲಿ ಒಮ್ಮೆ ಪ್ರವಾದಿಯವರ ಎದುರಲ್ಲಿ ನಿಂತು ಒಬ್ಬರು ಈ ಪದ್ಯವನ್ನು ಹಾಡುತ್ತಿರುವುದನ...

ಈ ರಕ್ತ ಮಿಶ್ರಿತ ಕುರಾನ್ ಮರೆಯುವುದುಂಟೇ?

ಈ ರಕ್ತ ಮಿಶ್ರಿತ ಕುರಾನ್ ಮರೆಯುವುದುಂಟೇ? ಅದು,೨೦೧೩ ಮಾರ್ಚ್ ೨೩. ಸಿರಿಯದ ರಾಜಧಾನಿ ಡಮಸ್ಕಸಿನ ಪ್ರಧಾನ ಮಸೀದಿಯೊಂದರಲ್ಲಿ ಭೀಕರ ಸ್ಫೋಟವೊಂದು ಸಂಭವಿಸುತ್ತದೆ.ಪರಿಣಾಮ ನಲ್ವತ್ತೆಂಟು ನಾಗರಿಕರು ಬಲಿಯಾಗುತ್ತಾರೆ.ಜಾಗತಿಕ ಮಟ್ಟದಲ್ಲಿ ಈ ಸ್ಫೋಟದ ಸುದ್ದಿ ಚರ್ಚೆಯಾಗುತ್ತದೆ.ಅಲ್ಲಿನ ಸರಕಾರ ಮತ್ತು ವಿಪಕ್ಷ ಪರಸ್ಪರ ಆರೋಪ ಪ್ರತ್ಯಾರೋಪಗಳನ್ನು ಮಾಡಿ ಕೈ ತೊಳೆದುಕೊಳ್ಳಲು ಮುಂದಾಗುತ್ತಾರೆ,ಯಾವ ಉಗ್ರವಾದಿ ಸಂಘಟನೆಯೂ ಈ ಸ್ಫೋಟದ ಜವಾಬ್ದಾರಿಯನ್ನು ವಹಿಸಲು ಮುಂದಾಗಲ್ಲ,ಯಾಕೆ ಗೊತ್ತಾ! ಆ ನಲ್ವತ್ತೆಂಟು ನಾಗರಿಕರ ಪೈಕಿ,ಮುಸ್ಲಿಂ ಧರ್ಮಗುರುವೊಬ್ಬರು ಸಾವಿಗೀಡಾಗಿರುತ್ತಾರೆ.ಆ ಕಾಲದಲ್ಲಿ ಇಡೀ ಮುಸ್ಲಿಂ ಜಗತ್ತಿಗೆ ಮೇರು ಗ್ರಂಥಗಳನ್ನು ಸಂಭಾವನೆಗೈದ ಅತ್ಯುನ್ನತ ಧರ್ಮಗುರುಗಳ ಪೈಕಿ ಒಬ್ಬರಾಗಿದ್ದರು ಅವರು.ಜಾಗತಿಕ ಮಟ್ಟದಲ್ಲಿ ಆ ಧರ್ಮ ಗುರುವಿನ ಕೊಲೆಗೆ ವ್ಯಾಪಕ ಖಂಡನೆಗಳು ಕೇಳಿ ಬರುತ್ತದೆ.ಪ್ರತಿಭಟನೆಗಳು ಮೇಲಿಂದ ಮೇಲೆ ವ್ಯಕ್ತವಾಗುತ್ತದೆ.ಅಷ್ಟಕ್ಕೂ ಆ ಧರ್ಮ ಗುರು ಯಾರು ಗೊತ್ತೇ?ಇಸ್ಲಾಂ ಧರ್ಮವನ್ನು ಮುಂದಿಟ್ಟು ಉಗ್ರವಾದ ಮೆರೆಯುವ ನೂತನವಾದಿ ಭಯತ್ಪಾದಕರ ವಿರುದ್ಧ ನಿರಂತರವಾಗಿ ಹೋರಾಡಿದ,ಮುಸ್ಲಿಂ ಜಗತ್ತಿನ ಮಹೋನ್ನತ ಧರ್ಮಗುರು ಸಯೀದ್ ರಮದಾನ್ ಅಲ್ ಬೂತಿ. ಬೂತಿಯೂ ಇಮಾಂ ಗ್ರ್ಯಾಂಡ್ ಮಸೀದಿಯಲ್ಲಿ ಉಪನ್ಯಾಸ ನೀಡುತ್ತಿದ್ದ ವೇಳೆ,ಅವರು ಆಸೀನರಾಗಿರುವ ಮೇಜಿನಡಿಯಲ್ಲಿ ಬಾಂಬ್ ಸ್ಫೋಟಿಸುತ್ತದೆ.ಬೂತಿಯನ್ನು ಕೊಲ್ಲಲ್...

ಸ್ವರ್ಗ ನಮ್ಮದಾಗಿಸಬೇಕೆ? ಇತರರ ಮನಸ್ಸು ನೋಯಿಸದಿರೋಣ.

ಸ್ವರ್ಗ ನಮ್ಮದಾಗಿಸಬೇಕೆ? ಇತರರ ಮನಸ್ಸು ನೋಯಿಸದಿರೋಣ. ✍️  ನವಾಝ್ ಸಖಾಫಿ ಉಳ್ಳಾಲ  ಆ ಬರುತ್ತಿರುವ ವ್ಯಕ್ತಿಯನ್ನು ಗಮನಿಸಿ. ಸ್ವರ್ಗ ಪ್ರವೇಶಿಸುವ ವ್ಯಕ್ತಿಯನ್ನು ನೀವು ನೋಡಲು ಬಯಸಿದರೆ ಅವರನ್ನು ನೋಡಿ. ಬಾಗಿಲುಗಳನ್ನು ದೂಡಿ ತೆರೆದು ಒಳ ಪ್ರವೇಶಿಸಿದ ಸಅದುಬ್ನು ಅಬೀ ವಖ್ಖಾಸ್ ರವರ ಕುರಿತಾಗಿತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮ ಈ ರೀತಿ ಹೇಳಿದ್ದು.   ( ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮ ಅವರ ಕುರಿತು ಈ ರೀತಿ ಬೇರೆ ಬೇರೆ ಮೂರು ಕಡೆಗಳಲ್ಲಿ ಹೇಳಿದ್ದರು.)  ಮಸ್ಜಿದುನ್ನಬವಿಯಲ್ಲಿ ಪ್ರವಾದಿ (ಸ.ಅ) ರವರ ಸುತ್ತ ನೆರೆದಿದ್ದ ಸಹಾಬಿಗಳು ಒಳ ಪ್ರವೇಶಿಸಿದ ವ್ಯಕ್ತಿಯನ್ನು ನೋಡಿದರು.  ಅದೃಷ್ಟಶಾಲಿ ವ್ಯಕ್ತಿ. ಭಾಗ್ಯವಂತ. ಸಅದ್ (ರ) ರವರ ಈ ಸಾಧನೆಗೆ ಕಾರಣವೇನು?  ಸಭಿಕರೆಲ್ಲರೂ ಯೋಚಿಸಿದರು.  ಸಅದ್ (ರ) ನಾವು ಮಾಡದ ಒಳ್ಳೆಯ ಕೆಲಸವೇನಾದರೂ ಮಾಡುತ್ತಿದ್ದಾರೆಯೇ?  ಸಅದ್ (ರ) ಮದೀನಾ ಶರೀಫ್‌ನಲ್ಲಿರುವ ಸಾಮಾನ್ಯ ಕುಟುಂಬದ ಓರ್ವ ಸದಸ್ಯ.  ನಮ್ಮಂತೆಯೇ ಓರ್ವ ವಿಶ್ವಾಸಿ. ಸ್ವರ್ಗವು ಮುಂಚಿತವಾಗಿ ದೃಢೀಕರಿಸಲ್ಪಡುವಷ್ಟರ ಮಟ್ಟಿಗೆ ದೊಡ್ಡದೇನಾದರೂ ಒಳಿತು ಅವರು ಮಾಡುತ್ತಿರುವುದನ್ನು ನಾವು ತಿಳಿದಿಲ್ಲ.  ಅಲ್ಲಾಹನು ಸತ್ಕರ್ಮಿಗಳಿಗೆ ಸ್ವರ್ಗದ ಭರವಸೆ ನೀಡಿದ್ದಾನೆ.  ಆದರೆ ಅದನ್ನು ತಿಳಿಯಬೇಕಾದರೆ ಸ್ವರ್ಗದ ಹೆಬ್ಬಾಗಿಲುಗಳ ಮೇಲೆ ಕಾಲಿಡುವುದನ್ನು ಬ...