ಅಝ್‌ರಾಯೀಲ್ (ಅ) ರನ್ನು ಅಳುವಂತೆ ಮಾಡಿದ ಘಟನೆ! *✒ಯೂಸುಫ್ ನಬ್‌ಹಾನಿ ಕುಕ್ಕಾಜೆ* 📞00971553499119 ▪ *ಒಮ್ಮೆ ಮಲಕ್* ಅಝ್‌ರಾಯೀಲ್ (ಅ) ರವರನ್ನು ಅಲ್ಲಾಹನು ಒಂದು ಹೆಂಗಸಿನ ರೂಹನ್ನು ತೆಗೆಯಲು ಕಳುಹಿಸಿದನು. ಅಲ್ಲಾಹುವಿನ ಆಜ್ಞೆ ಕಟ್ಟುನಿಟ್ಟಾಗಿ ಪಾಲಿಸಬೇಕಾದ ಮಲಕ್ ಅಝ್‌ರಾಯೀಲ್ (ಅ) ರವರು ರೂಹ್ ತೆಗೆಯಲು ಬಂದಾಗ ಆ ಸಾಧು ಮಹಿಳೆಯು ಮನುಷ್ಯರು ಯಾರೂ ಇಲ್ಲದ ಒಂದು ನಿರ್ಜನ ಪ್ರದೇಶದಲ್ಲಿ ಒಂಟಿಯಾಗಿ ತನ್ನ ಪುಟ್ಟ ಕಂದನಿಗೆ ಮೊಲೆಯುಣಿಸುತ್ತಿದ್ದಳು. ▪ *ಏಕಾಂಗಿಯಾಗಿ* ಯಾರೂ ಇಲ್ಲದ ಒಂದು ಜಾಗದಲ್ಲಿ ತನ್ನ ಕಂದನನ್ನು ಲಾಲಿಸುತ್ತಾ ಮೊಲೆಯುಣಿಸುತ್ತಿರುವ ಮಹಿಳೆಯನ್ನು ಕಂಡಾಗ ಯಾರೂ ಇಲ್ಲದ ಜಾಗವಾದ್ದರಿಂದ ಆ ಮಗುವಿನ ಮುಂದಿನ ಭವಿಷ್ಯವನ್ನು ಆಲೋಚಿಸಿ ಮಲಕ್ ಅಝ್‌ರಾಯೀಲರಿಗೆ ಈ ಪ್ರಪಂಚವೇ ತನ್ನ ಮೇಲೆ ಬಿದ್ದಂತಾಯಿತು. ಬೇಸರದಿಂದ ಕಣ್ಣಲ್ಲಿ ನೀರು ಬಂತು. ಏನು ಮಾಡಬೇಕೆಂದು ತಿಳಿಯದೆ ಒಂದು ಕ್ಷಣ ನಿಂತಲ್ಲೇ ನಿಂತು ಹೋದರು. ಆದರೇನು ಮಾಡುವುದು.? ಏನೂ ಮಾಡುವಂತಿಲ್ಲ. ಅಲ್ಲಾಹನ ಕಟ್ಟುನಿಟ್ಟಿನ ಆಜ್ಞೆ ಪಾಲಿಸಲೇಬೇಕು. ಬೇರೆ ಏನೂ ಮಾಡುವಂತಿಲ್ಲ. ಕೊನೆಗೆ ಹೆಂಗಸಿನ ರೂಹ್ ತೆಗೆದುಕೊಂಡು ಮಲಕ್ ಅಝ್‌ರಾಯೀಲ್ ಆಕಾಶ ಲೋಕಕ್ಕೆ ಹೋದರು. ಹೆಂಗಸು ಮಯ್ಯಿತಾದರು. ಮಗು ನಿರ್ಜನ ಪ್ರದೇಶದಲ್ಲಿ ಒಂಟಿಯಾಗಿ ಅನಾಥವಾಯಿತು. ▪ *ವರ್ಷಗಳು* ಕಳೆಯಿತು. ಸಾಧಾರಣ ಕಸಬಿನಂತೆ ಮತ್ತೊಮ್ಮೆ ಹೀಗೆಯೇ ಬೇರೊಬ್ಬರ ರ...
ಇದು ಅಹ್ಲುಸ್ಸುನ್ನತಿ ವಲ್ ಜಮಾಅತಿನ ನೈಜ ಆಶಯಾದರ್ಶಗಳನ್ನು ವಿವರಿಸುವ ಬ್ಲಾಗ್ ಆಗಿದೆ. More info cont - Nawaz Saqafi Al Amjadi Ullala.