*🌹ಸುನ್ನತ್ ಜಮಾಹತ್ ಚಕ್ರವರ್ತಿ🌹* *ಮರ್'ಹೂಂ ತಾಜುಲ್'ಉಲಮಾ* ("ಉಲಮಾಗಳ ಬಾದ್'ಷ") 🖊️ಹಮೀದ್ ಕಜ ಮಂಜೇಶ್ವರ *ತಾಜುಲ್ ಉಲಮಾ ಉಳ್ಳಾಲಂ ತಂಙಲ್ ಎಂಬ ಸಯ್ಯದ್ ಅಬ್ದುಲ್ ರಹಮಾನ್ ಕುಂಞಕೋಯ ಅಲ್ ಬುಖಾರಿ ತಂಙಳ್ ಅವರು 1921 ಹಿಜರಿ 1341 ರಬೀವುಲ್ ಅವ್ವಲ್ 25 ಶುಕ್ರವಾರ ಸಯ್ಯದ್ ಅಬೂಬಕ್ಕರ್ ಚೆರುಕುಂಞಿ ಕೋಯ ತಂಗಳ್ ಮತ್ತು ಹಲೀಮ ಕುಂಞಿ ಬೀಬಿಯವರ ಮುದ್ದಿನ ಮಗನಾಗಿ ಕ್ಯಾಲಿಕೆಟ್ ಕರುವಂತುರುತ್ತಿ ಎಂಬಲ್ಲಿ ಜನನ.* *ರಸೂಲ್ ಸ್ವಲ್ಲಲ್ಲಾಹು ಅಲೈವಸೆಲ್ಲಮರ ಮಗಳು ಫಾತಿಮ ಬೀಬಿಯವರ ಮಗ ಹಸನ್ (ರಅ)ರವರ 39 ನೇ ಪರಂಪರೆಯ ಪೌತ್ರ'ರಾಗಿದ್ದಾರೆ ತಾಜುಲ್ ಉಲಮ* *ಆತ್ಮೀಯತೆಯಿಂದ ಕೂಡಿದ ಉನ್ನತ ಕುಟುಂಬದ ತಂದೆ ಯವರನ್ನು ಎಲ್ಲರು ಗೌರವಿಸುತ್ತಾರೆ ಅಷ್ಟೇ ಭಯಪಡುತಿದ್ದರು. ತಮ್ಮ ಅಹವಾಲು ಕಷ್ಟಗಳನ್ನು ಮುಂದಿಟ್ಟು ಪ್ರಾರ್ಥಿಸಬೇಕೆಂದು ನಾನಾ ಕಡೆಗಳಿಂದ ಜನರು ಬರುತಿದ್ದರು* *ತಾಯಿ ಕುಂಞಿ ಬೀಬಿಯವರು ಯಾವಾಗಲೂ ಸುನ್ನತ್ ಉಪವಾಸ ಹಿಡಿದು ಹೆಚ್ಚೆಚ್ಚು ನಮಾಜ್ ನಿರ್ವಹಿಸುತ್ತಾ ಮಕ್ಕಳು ಉನ್ನತ ಸ್ಥಾನಕ್ಕೆ ಮುಟ್ಟಬೇಕೆಂದು ಸದಾ ಪ್ರಾರ್ಥಿಸುತ್ತಿದ್ದರು. ಹದಿನೈದು ವರ್ಷದವರೇಗೆ ಧಾರ್ಮಿಕ ವಿಧ್ಯಾಭ್ಯಾಸ ಆಗ ರಾಮಂತಳಿ ಸಯ್ಯದ್ ಅಹಮದ್ ಕೋಯ ತಂಙಳರವರ ಪುತ್ರಿ ಫಾತಿಮ ಕುಂಞಿ ಬೀಬಿಯರೊಂದಿಗೆ ತಂದೆ ನಿಕಾಹ್ ಮಾಡಿಸಿ ಬಿಡುತ್ತಾರೆ ಚಿಕ್ಕ ಪ್ರಾಯದಲ್ಲೇ ಇಲ್'ಮಿನಲ್ಲಿ ಅಗಾಧ ಪಾಂಡಿತ್ಯವಿದ್ದ ತಂಙ...
ಇದು ಅಹ್ಲುಸ್ಸುನ್ನತಿ ವಲ್ ಜಮಾಅತಿನ ನೈಜ ಆಶಯಾದರ್ಶಗಳನ್ನು ವಿವರಿಸುವ ಬ್ಲಾಗ್ ಆಗಿದೆ. More info cont - Nawaz Saqafi Al Amjadi Ullala.