Skip to main content

Posts

Showing posts from September, 2022

ಸರಿಸಾಟಿಯಿಲ್ಲದ ಮಹಾ ತೇಜಸ್ಸು,ಉಲಮಾ ಜಗತ್ತಿನ ಕಿರೀಟ,ಶೈಖುನಾ ತಾಜುಲ್ ಉಲಮಾ (ಖ,ಸಿ)

ಸರಿಸಾಟಿಯಿಲ್ಲದ ಮಹಾ ತೇಜಸ್ಸು, ಉಲಮಾ ಜಗತ್ತಿನ ಕಿರೀಟ, ಶೈಖುನಾ ತಾಜುಲ್ ಉಲಮಾ (ಖ,ಸಿ) 🌠🌠🌠🌠🌠🌠🌠🌠🌠🌠  ✍️𝙏.𝙃 𝙈𝙐𝙃𝘼𝙈𝙈𝘼𝘿 𝙎𝘼𝙁𝙒𝘼𝙉 𝙉𝙀𝙇𝙇𝙔𝘼𝘿𝙄 🌠🌠🌠🌠🌠🌠🌠🌠🌠🌠 ಸಮಕಾಲೀನ ಮುಸ್ಲಿಂ ಜಗತ್ತಿನ ಅಗ್ರೇಸರ ವಿದ್ವಾಂಸ, ಅಹ್ಲುಸುನ್ನದ ಅಮರ ನಾಯಕ, ಉಲಮಾ ಲೋಕದ ಕಿರೀಟ, ಆಧ್ಯಾತ್ಮಿಕ ನಭೋಮಂಡಲದ ಮಿನುಗು ತಾರೆ ಶೈಖುನಾ ತಾಜುಲ್ ಉಲಮಾರವರ ಅಗಲುವಿಕೆಯ ನೋವು ಸುನ್ನೀ ಸಮೂಹಕ್ಕೆ ತುಂಬಲಾರದಷ್ಟು ನಷ್ಟವಾಗಿದೆ, ಅವರಿಲ್ಲದ ಶಿಷ್ಯಸಮೂಹವನ್ನು ಅನಾಥರನ್ನಾಗಿಸಿದೆ. ತಾಜುಲ್ ಉಲಮಾ ರು ಹಿಜ್ ರಾ 1431ರ ರಬೀವುಲ್ ಅವ್ವಲ್ 25ರಂದು ಭೂಲೋಕ ಕಂಡ ಪ್ರವಾದಿ ಕುಟುಂಬದ ಪುನೀತ ಸದಸ್ಯ,  ಪವಿತ್ರ ರಬೀವುಲ್ ಅವ್ವಲ್ ನ ವಿದಾಯದೊಂದಿಗೆ ಆಗಮಿಸಿದ ರಬೀವುಲ್ ಆಖಿರ್ ನ ಚಂದ್ರೋದಯ ವಿದ್ವತ್ ಸೋರ್ಯವೊಂದರ ಸಾಕ್ಷಿಯಾಗಿತ್ತು.  2014 ಫೆಬ್ರವರಿ 1, ರಬೀವುಲ್ ಆಖಿರ್ 1ರ  ಆ ದಿನ ಕೇರಳ ಕರ್ನಾಟಕ ಮತ್ತು ಅಲ್ಲಿನ ಧಾರ್ಮಿಕ ಚಟುವಟಿಕೆಗಳಲ್ಲಿ ಪ್ರಭಾವಿತಗೊಂಡ ಪ್ರಪಂಚದ ನಾನಾ ಕಡೆಗಳು ಹರಿಯಬಿಟ್ಟ ಕಣ್ಣೀರ ನದಿಗಳು ಕೇರಳದ ಎಟ್ಟಿಕ್ಕುಳಂ ಎಂಬ ಪಟ್ಟ ಊರನ್ನು ಬಹುದೊಡ್ಡ ಜನಸಾಗರವನ್ನಾಗಿ ಮಾಡಿಸಿತು. ತಾಜುಲ್ ಉಲಮಾ ರ ಅಗಲುವಿಕೆಯಿಂದ  ಸಮುದಾಯವೊಂದು ಧಾರ್ಮಿಕವಾಗಿ ಅನಾಥವಾಯಿತು. ಮಾತ್ರವಲ್ಲ ತನ್ನ ಪುರುಷಾಯುಷ್ಯವನ್ನ ಕರಾವಳಿ ಕನ್ನಡದ ತಟದಲ್ಲಿ ಕಳೆದು "ಉಳ್ಳಾಲ ತಂಙಳ್"  ಎಂದೇ ಜ...