Skip to main content

Posts

ಶಿಯಾಪಂಥ,ನವೋತ್ಥಾನದ ಉಗ್ರ ರೂಪವಿದು...

"ಬನೂ ಇಸ್ರಾಈಲ್ ವಿಭಾಗವು ಎಪ್ಪತ್ತೆರಡು ಪಂಗಡಗಳಾಗಿ ಛಿದ್ರವಾಗಿದ್ದರೆ ನನ್ನ ಸಮುದಾಯವು  ಎಪ್ಪತ್ತಮೂರು ಪಂಗಡಗಳಾಗಿ ವಿಭಜನೆಯಾಗುವುದು. ಅವರ ಪೈಕಿ ಒಂದು ವಿಭಾಗವನ್ನು ಹೊರತುಪಡಿಸಿ ಉಳಿದವರೆಲ್ಲಾ ನರಕದ ಹಾದಿ ಹಿಡಿಯುವರು" ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ನುಡಿಯಿದು. ರಕ್ಷೆ ಹೊಂದುವ ಆ ವಿಭಾಗ ಯಾವುದೆಂದು ಸ್ವಹಾಬಿಗಳು ಕೇಳಿದಾಗ 'ಅದು ನಾನು ಮತ್ತು ನನ್ನ ಸ್ವಹಾಬಿಗಳ ಹಾದಿಯನ್ನು ಹಿಂಬಾಲಿಸುವವರು' ಎಂದರು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು. ಇಮಾಂ ತುರ್ಮುದೀ, ಇಮಾಂ ಅಹ್ಮದ್, ಇಮಾಂ ಅಬೂದಾವೂದ್ ಮುಂತಾದ ಹದೀಸ್ ವಿದ್ವಾಂಸರು ಈ ಹದೀಸನ್ನು ವರದಿ ಮಾಡಿದ್ದಾರೆ. ರಕ್ಷೆ ಹೊಂದುವ ವಿಭಾಗವನ್ನು ಅಹ್ಲುಸ್ಸುನ್ನತ್ ವಲ್‌ಜಮಾಅತ್ ಎಂದು ನಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಹೆಸರೆತ್ತಿ ಸ್ಪಷ್ಟವಾಗಿ ಹೇಳಿದ್ದಾಗಿ ಇಮಾಂ ಅಬುಲ್ಲೈಸ್ ಸಮರ್‌ಖಂದಿಯವರ ತಂಬೀಹುಲ್ ಗಾಫಿಲೀನ್‌ನಲ್ಲಿ ಕಾಣಬಹುದು. ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ವಚನವು ಕಾಲಾಂತರದಲ್ಲಿ ನಿಜವಾಯಿತು. ಅವರು ಹೇಳಿದ ಹಾಗೆ ಇಲ್ಲಿ ಎಪ್ಪತ್ತ ಮೂರು ಪಂಗಡಗಳು ಪ್ರತ್ಯಕ್ಷವಾಯಿತು. ಇಮಾಂ ಮುಹ್ಯುದ್ದೀನ್ ಅಬ್ದುಲ್ ಖಾದಿರುಲ್ ಜೀಲಾನಿ(ರ) ಪ್ರಸ್ತುತ ಎಪ್ಪತ್ತಮೂರು ವಿಭಾಗವನ್ನು ತಮ್ಮ ಗುನ್ಯತು ತ್ವಾಲಿಬೀನ್‌ನಲ್ಲಿ ವಿವರಿಸಿದ್ದಾರೆ. ಅವರು ಹೇಳಿದರು: ಎಪ್ಪತ್ತಮೂರು ಪಂಗಡಗಳ ಮೂಲವು ಹತ್ತು ಪ್ರಮುಖ ವಿಭಾಗದಲ್ಲಿ ಸೇರುತ್ತದೆ. ಪ್ರತಿಯೊಂದರಲ...
Recent posts

ಉಳ್ ಹಿಯ್ಯತ್ : ಬಗ್ಗೆ ತಿಳಿಯೋಣ ಬನ್ನಿ

ಉಳ್ಹಿಯ್ಯತ್ ಕೆಲವು ಮಸ್‌ಅಲಗಳು. ಸಂಗ್ರಹ: ಅಬೂಶಝ ಕೂರ್ನಡ್ಕ ▪️ಉಳುಹಿಯ್ಯತ್ ನೀಡಿದರೆ ಸಹೀಹ್ ಆಗುವ ಪ್ರಾಣಿಗಳು . *ಆಡು,ಗೋವು [ಕೋಣ ಎಮ್ಮೆ,ದನ ಇತ್ಯಾದಿ..],ಒಂಟೆ* ▪️ಉಳುಹಿಯ್ಯತ್ ನೀಡಲ್ಪಡುವ ಜೀವಿಗಳ ವಯಸ್ಸು *ಒಂಟೆ 5 ವರ್ಷ ಪ್ರಾಯ ಆಡು ಮತ್ತು ಗೋವು ಎರಡು ವರ್ಷ ಪ್ರಾಯ* ▪️ಉಳುಹಿಯ್ಯತ್ ನೀಡಲು ಶ್ರೇಷ್ಟತೆ ಇರುವ ಜೀವಿ *ಒಂದನೇ ಸ್ಥಾನ ಒಂಟೆ*[ಕಾರಣ ಆಡು ಗೋವು ಇವುಗಳಿಗಿಂತ ಹೆಚ್ಚು ಪ್ರಮಾಣದ ಮಾಂಸ ಅದರಲ್ಲಿದೆ] *ಎರಡನೇ ಸ್ಥಾನ ಗೋವು* [ಕಾರಣ ಆಡುಗಿಂತ ಅಧಿಕ ಮಾಂಸ ಇದರಲ್ಲಿದೆ] *ಮೂರನೇ ಸ್ಥಾನ ಆಡು* ▪️ಒಂದು ಒಂಟೆ ಅಥವಾ ಒಂದು ಗೋವುಕ್ಕಿಂತ *7 ಆಡು* ಗಳನ್ನು ಉಳುಹಿಯ್ಯತ್ ನೀಡುವುದಾಗಿದೆ ಉತ್ತಮ. [ಕಾರಣ,ಒಂದಕ್ಕಿಂತ ಅಧಿಕ ಉಳುಹಿಯ್ಯತ್‌ನ ದ್ಸಬಹ್ ನಡೆಯುತ್ತದೆ.ಜೊತೆಗೆ ಆಡು ಮಾಂಸ ಶ್ರೇಷ್ಠ ಮಾಂಸ.] ▪️ಉಳಿಹಿಯ್ಯತ್ ನೀಡಲ್ಪಡುವ ಮೃಗವನ್ನು ಪೌಷ್ಟಿಕಾಂಶ ಆಹಾರ ನೀಡಿ ದಷ್ಠಪುಷ್ಟಗೊಳಿಸುವುದು ಸುನ್ನತ್ ಆಗಿದೆ. ▪️ಎರಡು ಸಣಕಲು ಮೃಗಗಳನ್ನು ಬಲಿ ನೀಡುವುದಕ್ಕಿಂತ ದಷ್ಟಪುಷ್ಟವಾದ ಒಂದು ಮೃಗವನ್ನು ಉಳುಹಿಯ್ಯತ್ ನೀಡುವುದು ಉತ್ತಮ. [ತುಹ್ಫಾ ,9/359] ▪️ *ಉಳುಹಿಯ್ಯತ್ ನೀಡಲ್ಪಡುವ ಮೃಗಗಳ ಬಣ್ಣಗಳು* ಒಂದನೇ ಸ್ಥಾನ ಬಿಳಿ ಬಣ್ಣ, ನಂತರದ ಸ್ಥಾನ ಹಳದಿ ಬಣ್ಣ ಮೂರನೇ ಸ್ಥಾನ ತೆಳ್ಳಗಿನ ಬಿಳಿ ಬಣ್ಣ, ನಾಲ್ಕನೇ ಸ್ಥಾನ ಸ್ವಲ್ಪ ಕಪ್ಪು ಮತ್ತು ಬಿಳಿ ಮಿಶ್ರಿತ ಬಣ್ಣ, ಐದನೇ ಸ್ಥಾನ ಕಪ್ಪು ಬಣ್ಣ *ಗಂಡು ಹೆಣ್ಣು* ಒಂದನೇ ಸ್ಥಾನ ...

ನೀರು

ನೀರು ಅಲ್ಲಾಹನ ಅತ್ಯಮೂಲ್ಯವಾದ ಅನುಗ್ರಹಗಳಲ್ಲೊಂದಾಗಿದೆ. ಜೀವ ನೆಲೆ ನಿಲ್ಲುವಿಕೆ ಮತ್ತು ಕ್ರಷಿ, ಮರ ಸಸ್ಯಗಳ ಬೆಳೆಯುವಿಕೆಗೆ ಪ್ರಮುಖವಾಗಿ ಬೇಕಾಗಿರುವ ನೀರಿನ ಕುರಿತು ಕುರಾನಿನಲ್ಲಿ ಹಲವಾರು ಕಡೆ ಪರಾಮರ್ಶಿಸಲಾಗಿದೆ. وَهُوَ الَّذِي يُرْسِلُ الرِّيَاحَ بُشْرًا بَيْنَ يَدَيْ رَحْمَتِهِ ۖ حَتَّىٰ إِذَا أَقَلَّتْ سَحَابًا ثِقَالًا سُقْنَاهُ لِبَلَدٍ مَيِّتٍ فَأَنْزَلْنَا بِهِ الْمَاءَ فَأَخْرَجْنَا بِهِ مِنْ كُلِّ الثَّمَرَاتِ ۚ كَذَٰلِكَ نُخْرِجُ الْمَوْتَىٰ لَعَلَّكُمْ تَذَكَّرُونَ ಅವನು (ಅಲ್ಲಾಹನೇ) ತನ್ನ ಅನುಗ್ರಹಕ್ಕೆ (ಮಳೆಗೆ) ಮುಂಚಿತವಾಗಿ, ಸಂತೋಷವಾರ್ತೆಯಾಗಿ ಗಾಳಿಯನ್ನು ಕಳುಹಿಸುವವನು. ಕೊನೆಗೆ ಅವು (ನೀರಿನಿಂದ) ಭಾರವಾದ ಮೋಡಗಳನ್ನು ಹೊತ್ತು ತಂದಾಗ ನಾವು ಅವುಗಳನ್ನು ನಿರ್ಜೀವ ನಾಡಿನೆಡೆಗೆ ಒಯ್ಯುತ್ತೇವೆ ಮತ್ತು ಅವುಗಳಿಂದ ನೀರನ್ನು ಸುರಿಸುತ್ತೇವೆ ಹಾಗೂ ಅದರ ಮೂಲಕ ನಾವು ಎಲ್ಲ ವಿಧದ ಫಸಲುಗಳನ್ನು ಹೊರತರುತ್ತೇವೆ – ಇದೇ ರೀತಿ ನಾವು ಮೃತರನ್ನು  ಹೊರ ತರಲಿದ್ದೇವೆ – ನೀವು ಚಿಂತಿಸಲು. أَلَمْ تَرَ أَنَّ اللَّهَ أَنْزَلَ مِنَ السَّمَاءِ مَاءً فَتُصْبِحُ الْأَرْضُ مُخْضَرَّةً ۗ إِنَّ اللَّهَ لَطِيفٌ خَبِيرٌ ನೀವು ಕಾಣಲಿಲ್ಲವೇ, ಅಲ್ಲಾಹನು ಆಕಾಶದಿಂದ ನೀರನ್ನು ಇಳಿಸಿದನು. ಅದರಿಂದ ಭೂಮಿಯು ಅರಳಿ ಹಸಿರಾಯಿ...

ಮಾದರೀ ವಿದ್ವಾಂಸ ಪಟ್ಟಾಂಬಿ ಉಸ್ತಾದ್

ಉಳ್ಳಾಲದಲ್ಲಿ ಧಾರ್ಮಿಕ ಅರಿವನ್ನು ಪಸರಿಸುವಲ್ಲಿ ಅನನ್ಯ ಕೊಡುಗೆ ನೀಡಿದ, ವಿಶೇಷವಾಗಿ ಅಳೇಕಲದಲ್ಲಿ 4 ದಶಕಗಳಿಂದ ಧಾರ್ಮಿಕ ರಂಗದ ನೇತ್ರತ್ವವನ್ನು ವಹಿಸಿ ಗಮನಾರ್ಹ ಸೇವೆ ನೀಡುತ್ತಿರುವ ಪಟ್ಟಾಂಬಿ ಉಸ್ತಾದರ ಬದುಕಿನ ಕಡೆ ಹ್ರಸ್ವ ನೋಟ ಬೀರೋಣ. ತಾಜುಲ್ ಉಲಮಾ ಉಳ್ಳಾಲ ತಂಙಲ್ ಖ.ಸಿ ರವರ ಪ್ರಮುಖ ಶಿಷ್ಯ, ಸರಳತೆ, ವಿನಯ, ಪ್ರೀತಿ, ಕರುಣೆ ಮೇಲೈಸಿದ ಅಪರೂಪದ ವಿದ್ವಾಂಸ ಪಟ್ಟಾಂಬಿ ಉಸ್ತಾದ್. ಅಬೂಝಿಯಾದ್ ಮುಹಮ್ಮದ್ ಮದನಿ ಪಟ್ಟಾಂಬಿ ಉಸ್ತಾದ್ ಎಂದು ಅವರ ಹೆಸರನ್ನು ಪೂರ್ತಿಯಾಗಿ ಹೇಳಲಾಗುತ್ತದೆ.  ಉಸ್ತಾದರ ನೈಜ ನಾಮ ಮುಹಮ್ಮದ್ ಎಂದಾಗಿದೆ. ಪ್ರೀತಿಯಿಂದ ಮಗನ ಹೆಸರು ಸೇರಿಸಿ ಅಬೂ ಝಿಯಾದ್ ಎಂದು ತನ್ನ ಹೆಸರಿನ ಮುಂದೆ ಸೇರಿಸಿ ಬರೆಯುತ್ತಾರೆ. ಉಳ್ಳಾಲದಲ್ಲಿ ಪಟ್ಟಾಂಬಿ ಉಸ್ತಾದ್ ಎಂದೇ ಚಿರಪರಿಚಿತ. ಮದನಿ ಎಂಬುವುದು ನಮಗೆ ತಿಳಿದಿರುವಂತೆ ಉಳ್ಳಾಲ ಸಯ್ಯಿದ್ ಮದನಿ ಅರೆಬಿಕ್ ಕಾಲೇಜಿನಲ್ಲಿ ಕಲಿತು ಪಡೆದ ಬಿರುದಿನ ಹೆಸರಾಗಿದೆ. 1952 ಮಾರ್ಚ್ ನಾಲ್ಕರಂದು ಪಾಲೋಳಿ ಮಹ್ಮೂದ್ ಮತ್ತು ಕೋಲ್ಕಾಟ್ ಫಾತಿಮ ಎಂಬವರ ಮಗನಾಗಿ ಜನಿಸಿದರು. ತಂದೆ ತಾಯಿಗೆ ಉಸ್ತಾದ್ ಸೇರಿ ಇಬ್ಬರು ಗಂಡು ಮಕ್ಕಳು. ಉಸ್ತಾದರು ಹಿರಿಯವರು. ಉಸ್ತಾದರ ತಮ್ಮ ಐದು ವರ್ಷಗಳ ಮುಂಚೆ ಮರಣ ಹೊಂದಿರುವರು. ಮಲಪ್ಪುರಂ ಜಿಲ್ಲೆಯ ಪುಣಪ್ಪ ಶಾಲೆಯಲ್ಲಿ 8 ನೇ ತರಗತಿ ತನಕ ಲೌಕಿಕ ಶಿಕ್ಷಣ ಪಡೆದರು. ತನ್ನ ತಂದೆಯ ಸಹೋದರಿಯ ಊರಾದ ಅರಿಪ್ರ ಎಂಬಲ್ಲಿ ಪ್ರಾಥಮಿಕ ಶಿಕ್ಷಣ ಪಡೆದರ...

ಎಸ್ ಎಂ ತಂಙಲ್ - ಊರವರ ಪ್ರೀತಿಯ ಬೆಲಿಯೋ ಉಸ್ತಾದ್

ನಿಶ್ಚಯವಾಗಿಯೂ ನನ್ನನ್ನು ಬೋಧಕನಾಗಿ ನಿಯೋಗಿಸಲಾಗಿದೆ ಎಂಬ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಸಂದೇಶದ ಮಹತ್ವವನ್ನು ಅರಿತು ತನ್ನ ಬದುಕಿನಲ್ಲೂ ಬೋಧನೆಯನ್ನು ಸಂಪೂರ್ಣವಾಗಿ ಮೈಗೂಡಿಸಿದ ಗುರುವಾಗಿದ್ದಾರೆ ಎಸ್ ಎಂ ತಂಙಲ್. ಪವಿತ್ರ ಅಹ್ಲು ಬೈತ್ ವಂಶದಲ್ಲಿ 1941 ನೇ ಇಸವಿಯಲ್ಲಿ ಅಳೇಕಲ ಪಾಂಡ್ಯಾಲ್ ಪಕ್ಕದ "ಸಯ್ಯದ್ ಆಟಕ್ಕೋಯ ತಂಙಲ್‌ ರವರ ಸುಪುತ್ರರಾಗಿ ಚರಿತ್ರೆ ಪ್ರಸಿದ್ದ 'ಅಜಿಲ ಮೊಗರು' ವಿನಲ್ಲಿ ಎಸ್ ಎಂ ತಂಙಲ್ ಜನಿಸಿದರು. ತನ್ನ ಶೈಶವ ಕಾಲವನ್ನು ಅಜಿಲಮೊಗರುವಿನಲ್ಲಿ ಕಳೆದರು. ನಂತರ ಅಳೇಕಲಕ್ಕೆ ಆಗಮಿಸಿದ ಎಸ್ ಎಂ ತಂಙಲ್ ಬಾಲ್ಯದಿಂದಲೇ ಅಹ್ಲು ಬೈತ್‌ನ ಶ್ರೇಷ್ಠತೆಗೆ ತಕ್ಕ ನಿಷ್ಕಳಂಕ ಧರ್ಮನಿಷ್ಠೆಯೊಂದಿಗೆ ಬಾಳಿ ಬದುಕಿದರು. ಉಳ್ಳಾಲವನ್ನು ಬೆಳಗಿಸಿದ ಆಧ್ಯಾತ್ಮಿಕ ಮಹಾ ಗುರು  ತಾಜುಲ್ ಉಲಮಾ ಉಳ್ಳಾಲ ತಂಙಲ್ ಖದ್ದಸಲ್ಲಾಹು ಸಿರ್ರಹುಲ್ ಅಝೀಝ್ ಮತ್ತು ಪ್ರಮುಖ ಸೂಫೀವರ್ಯರಾದ ಸಜಿಪ ಉಸ್ತಾದರ ಶಿಷ್ಯತ್ವದಲ್ಲಿ ಜ್ಞಾನಾರ್ಜನೆ ಮಾಡಿದರು. ಬಳಿಕ ನಾಡಿನ ಪ್ರಾಥಮಿಕ ಇಸ್ಲಾಮಿಕ್ ಶಿಕ್ಷಣ ಕೇಂದ್ರವಾದ ಮದ್ರಸದಲ್ಲಿ ಕ್ರಾಂತಿಕಾರಿ ಸೇವೆಯೊಂದಿಗೆ ತನ್ನ ಬದುಕು ಪೂರ್ತಿ ತೊಡಗಿಸಿಕೊಂಡರು. ಕಲ್ಲಾಪು, ಮಂಚಿಲ, ಮಾರ್ಗತಲೆ, ಚೊಂಬುಗುಡ್ಡೆ, ಹಳೇಕೋಟೆ ಹಾಗು ಆಸುಪಾಸಿನ ಊರುಗಳಿಗೆ ಕೇಂದ್ರವಾಗಿ ಕಾರ್ಯಾಚರಿಸುತ್ತಿದ್ದ ಅಳೇಕಲ ನಜಾತುಸ್ಸಿಬಿಯಾನ್ ಮದ್ರಸದಲ್ಲಿ ಮುಅಲ್ಲಿಮಾಗಿ, ಸದರ್ ಮುಅಲ್ಲಿಮಾಗಿ ಸೇವೆಯನ್ನು ನೀ...

ಈ ಕೊಳದ ನೀರಿನಿಂದ ಮಕ್ಕಾದ ಬೆಂಕಿ ನಂದಿತು

ಅಳೇಕಲ ಮಸೀದಿ ಸನಿಹ ಕೊಳವೊಂದಿದೆ. ಸುಮಾರು ಆರುನೂರು ವರ್ಷಗಳ ಹಿಂದೆಯೇ ಅಂದರೆ ಉಳ್ಳಾಲದ ಮೊದಲ ಸೂಫಿ ಸಂತರಾದ ವಲಿಯುಲ್ಲಾಹಿ ಅಚ್ಚಿಸಾಹಿಬ್ ಖ.ಸಿ ರವರ ಕಾಲದಲ್ಲೇ ಕೊಳವಿತ್ತು ಎಂದೂ ಅಲ್ಲ ಅವರ ಕಾಲದ ನಂತರ ಕೊಳ ನಿರ್ಮಾಣವಾದದ್ದು ಎಂದು ಎರಡಭಿಪ್ರಾಯವಿದೆ. ಏನೇ ಆದರೂ ಸಯ್ಯಿದ್ ಮದನಿ ಖ.ಸಿ ರವರ ಕಾಲದಲ್ಲಿ ಅಳೇಕಲದ ಕೊಳ ಪ್ರಸಿದ್ಧಿ ಪಡೆಯಿತು.  ಒಂದು ದಿನ ಸಯ್ಯಿದ್ ಮದನಿ ತಂಗಳ್ ಖ.ಸಿ ತನ್ನ ಪತ್ನಿಯ ಊರಾದ ಈ ಅಳೇಕಲದ ಮಸೀದಿ ಸಮೀಪದ ಇದೇ ಕೊಳದಲ್ಲಿ ನಮಾಝ್ ಗಾಗಿ ವುಲೂ ನಿರ್ವಹಿಸುತ್ತಿದ್ದರು. ವುಲೂ ನಿರ್ವಹಿಸುತ್ತಿರುವುದರ ಮಧ್ಯೆ ಒಂದೇ ಸಮನೆ ತನ್ನ ಎರಡು ಕೈಗಳಿಂದ ನೀರನ್ನೆತ್ತಿ ಮೇಲಕ್ಕೆ ಚಿಮ್ಮುತ್ತಲಿದ್ದರು. ಸನಿಹವಿದ್ದವರು ಮೂಕ ಪ್ರೇಕ್ಷಕರಾಗಿ ಇದನ್ನೇ ನೋಡುತ್ತಿದ್ದರು. ನೀರು ಚಿಮ್ಮಿಸುವುದನ್ನು ನಿಲ್ಲಿಸಿದಾಗ ಸನಿಹವಿದ್ದವರು ಆಶ್ಚರ್ಯದಿಂದ ಕೇಳಿದರು. ಮದನಿ ತಂಗಳರೇ. ತಾವು ಯಾಕೆ ವುಲೂವಿನ ಮಧ್ಯೆ ನೀರನ್ನು ಮೇಲಕ್ಕೆ ಚಿಮ್ಮಿಸಿದಿರಿ. ಮದನಿ ತಂಗಳ್ ಹೇಳಿದರು.ನಾನು ವುಲೂ ನಿರ್ವಹಿಸುತ್ತಿರುವುದರ ಮಧ್ಯೆ ಪವಿತ್ರ ಮಕ್ಕಾದ ಹರಂ ಶರೀಫ್ ನಲ್ಲಿ ಬೆಂಕಿ ಅನಾಹುತ ಸಂಭವಿಸುವುದನ್ನು ಕಂಡೆನು. ಅಲ್ಲಾಹನ ಆಜ್ಞೆಯಂತೆ ಆ ಬೆಂಕಿಯನ್ನು ನಂದಿಸಲು ನೀರನ್ನು  ಚಿಮ್ಮಿಸಿದೆ. ಅಲ್ಲಾಹನ ಅನುಗ್ರಹದಿಂದ ಬೆಂಕಿ ನಂದಿತು ಎಂದರು. ಸಯ್ಯಿದ್ ಮದನಿ ತಂಗಳ್ ರವರ ಈ ಅದ್ಬುತದಿಂದ  ಜನರು ಭಾರೀ ಅನಾಹುತದಿಂದ ರಕ್ಷೆ ಪಡೆದರು. ಆ...

ಮಹಾತ್ಮರೊಂದಿಗೆ ಆಟವಾಡದಿರಿ

ಸಯ್ಯಿದ್ ಮದನಿ ತಂಙಲ್ ರವರ ವಫಾತಿನ ಬಳಿಕ ನಡೆದ ಅದ್ಭುತ ಒಂದು ಘಟನೆ. ಒಂದಭಿಪ್ರಾಯದಂತೆ ಅಳೇಕಲದ ಪೊಲ್ಕರೆಯ ಮದನಿ ತಂಙಲ್ ರವರ ಮನೆಯ ತೆಂಗಿನ ಮರಗಳಿಂದ ಕಾಯಿ ಸೀಳಲು ಬಂದ ವ್ಯಕ್ತಿ ಸೋಮಾರಿತನ, ಅಸಡ್ಡೆ ತೋರಿಸಿದಾಗ ಸನಿಹವಿದ್ದವರು ನೀನು ಏನು ಮಾಡ್ತಾ ಇರುವೆ. ಇದು ಸಯ್ಯಿದ್ ಮದನಿ ತಂಙಲ್ ರವರ ತೆಂಗಿನ ಮರಗಳು ಎಂದು ಹೇಳಿದರಂತೆ. ಅದಕ್ಕೆ ಆತ ಅದಕ್ಕೇನಂತೆ, ಅವರ ತೆಂಗಿನಕಾಯಿಗೆ ಕೊಂಬಿದೆಯೇ ಎಂದು ತಾತ್ಸಾರ ಮನೋಭಾವದಿಂದ ಮಾತನಾಡಿದನಂತೆ. ಬಳಿಕ ಮರ ಹತ್ತಿ ತೆಂಗಿನ ಕಾಯಿ ಸೀಳಲು ಅಣಿಯಾದಾಗ ಏನದ್ಭುತ, ತೆಂಗಿನ ಕಾಯಿ ಗೊನೆಯಲ್ಲಿ ಕೊಂಬು ಕಂಡು ಆತ ಆಶ್ಚರ್ಯ ಚಕಿತನಾದನು. ಮತ್ತೆ ತನ್ನ ತಪ್ಪಿನ ಅರಿವಾಗಿ ಕ್ಷಮೆಯಾಚಿಸಿದನು. ಮತ್ತೊಂದು ಅಭಿಪ್ರಾಯದ ಪ್ರಕಾರ ಸಯ್ಯಿದ್ ಮದನಿ ತಂಗಳರ ಅತಿಯಾಗಿ ಗೌರವಿಸುತ್ತಿದ್ದ ಓರ್ವರು ತನ್ನ ಜಾಗದಲ್ಲಿ ತೆಂಗಿನ ಕಾಯಿಯನ್ನು ನೆಡುವಾಗ ಇದು ಮುಂದಕ್ಕೆ ಫಸಲು ನೀಡಿದರೆ ಮೊದಲ ಫಸಲಿನ ತೆಂಗಿನಕಾಯಿ ಗೊನೆಯನ್ನು ಸಯ್ಯಿದ್ ಮದನಿ ತಂಙಲ್ ಖ.ಸಿ ರವರ ದರ್ಬಾರಿಗೆ ನೀಡುತ್ತೇನೆ ಎಂದು ಹರಕೆ (ನೇರ್ಚೆ) ಮಾಡಿ ನೆಟ್ಟರು. ಆಗ ಅಲ್ಲಿದ್ದ ಓರ್ವ ವ್ಯಕ್ತಿ ಮದನಿ ತಂಙಲ್ ಹೆಸರಿನಲ್ಲಿ ಯಾಕೆ ಹರಕೆ ಮಾಡ್ತೀಯಾ, ಅವರಿಗೆ ಹರಕೆ ಮಾಡಿದರೆ ತೆಂಗಿನಕಾಯಿಗೆ ಕೊಂಬು ಬರುತ್ತದೆಯೇ ಎಂದು ವ್ಯಂಗ್ಯವಾಗಿ ಹೇಳಿದನಂತೆ. ತೆಂಗಿನ ಕಾಯಿ ಮೊಳಕೆಯೊಡೆಯಿತು. ಬೆಳೆಯಿತು. ಮರವಾಯಿತು. ಫಸಲು ನೀಡಿತು. ಮೊದಲ ಗೊನೆಯಲ್ಲಿ ಕೊಂಬಿರುವ ತೆಂಗಿನಕಾಯಿಗಳು ಪ್ರ...