ರಜಬ್ ಅಲ್ಲಾಹನ ತಿಂಗಳು ▪ರಜಬ್ ಹಲವಾರು ಅಜಬ್‌ಗಳನ್ನು ತನ್ನೊಡಲಲ್ಲಿಟ್ಟು ಪ್ರತೀ ವರ್ಷವೂ ಆಗಮಿಸುತ್ತಿದೆ. ವರ್ಣಿಸಲು ಅಸಾಧ್ಯವಾದ ಹಿರಿಮೆ-ಮಹಿಮೆ ಈ ಮಾಸಕ್ಕಿದೆ. ▪ರಜಬ್ ಅರಬಿ ತಿಂಗಳುಗಳಲ್ಲಿ ಏಳನೆಯದ್ದು. 'ರಜಬ್' ಎಂಬ ಪದಕ್ಕೆ ಘನತೆ, ಗೌರವ, ನಾಚಿಕೆ, ಅಸ್ವಬ್ (ಯಥೇಷ್ಠ ಸುರಿಯುವುದು) ಅಸ್ವಮ್ಮ್ (ಕಿವಿ ಕೇಳದ) ಶಹರಜ್ಮ್ ಮುಂತಾದ ಹಲವಾರು ಹೆಸರುಗಳಿವೆ. ▪ರಜಬ್ ತಿಂಗಳಲ್ಲಿ ಜಗಳ, ಯುದ್ಧ, ಕಲಹ ಮಾಡುವುದೆಂದರೆ ಅರಬರು ಹೆದರುತ್ತಲೂ, ನಾಚುತ್ತಲೂ ಇದ್ದರಂತೆ. ಹಾಗಾಗಿ ರಜಬನ್ನು ಜಾಹಿಲಿಯ್ಯಾದ ಕಾಲದಲ್ಲಿಯೇ ತುಂಬಾ ಗೌರವದಿಂದ ಕಾಣುತ್ತಿದ್ದರು. ಇಸ್ಲಾಮ್ ಈ ಮಾಸದಲ್ಲಿ ಯುದ್ಧವನ್ನು ನಿಷಿದ್ಧಗೊಳಿಸಿದೆ. ▪ಈ ತಿಂಗಳನ್ನು ಅಸ್ವಬ್ (ಅಪಾರ ಸುರಿಯುವುದು) ಎಂದವರು ಹೇಳುವುದೇನೆಂದರೆ ಈ ಪವಿತ್ರ ತಿಂಗಳಲ್ಲಿ ಅಲ್ಲಾಹನ ರಹ್ಮತ್, ಬರ್ಕತ್, ನಿಅ'ಮತ್ ಹೇರಳವಾಗಿ ಸುರಿಯಲು ಆರಂಭವಾಗುತ್ತದೆ. ಅಸ್ವಮ್ಮ್ (ಕಿವಿಕೇಳದ) ಅಂದರೆ ಈ ತಿಂಗಳಲ್ಲಿ ಯುದ್ಧವೇ ನಿಷಿದ್ಧವಾದುದರಿಂದ ಯುದ್ಧಾಯುಧಗಳ ಶಬ್ದವೇ ಕೇಳಿಸದೆ ಇರುವುದರಿಂದ ಈ ಮಾಸಕ್ಕೆ ಈ ಹೆಸರು ಬಂದಿದೆ. ಶಹ್ರ್ ರ್ರಜ್‌ಮ್ (ಕಲ್ಲೆಸೆದು ಓಡಿಸುವುದು) ಎಂಬ ಹೆಸರಿನಿಂದ ಈ ಮಾಸವನ್ನು ಕರೆದ ಆರಿಫೀನ್‌ಗಳು ಹೇಳುವುದೇನೆಂದರೆ ಆರಾಧನೆಗೆ ತೊಂದರೆ ಕೊಡುವ, ಆರಾಧನೆಗಳನ್ನು ತಡೆಯುವ ಪಿಶಾಚಿಗಳನ್ನು ಓಡಿಸುವ ಕಾರ್ಯವು ವಿಶೇಷವಾಗಿ ಈ ತಿಂಗಳಿನಿಂದ ಆರಂಭವಾಗುವುದರಿಂದ ಈ ಹೆಸರು ಬರಲು ಕಾ...
ಇದು ಅಹ್ಲುಸ್ಸುನ್ನತಿ ವಲ್ ಜಮಾಅತಿನ ನೈಜ ಆಶಯಾದರ್ಶಗಳನ್ನು ವಿವರಿಸುವ ಬ್ಲಾಗ್ ಆಗಿದೆ. More info cont - Nawaz Saqafi Al Amjadi Ullala.