Skip to main content

Posts

Showing posts from May, 2020

20 ವರ್ಷಗಳ ಹಿಂದೆ ಕಂಡ ಕನಸೊಂದು ನನಸಾಯಿತು

20 ವರ್ಷಗಳ ಹಿಂದೆ ಕಂಡ ಕನಸೊಂದು ನನಸಾಯಿತು ? ಸುಮಾರು 20 ವರ್ಷಗಳ ಹಿಂದೆ. ಸೌದಿ ಪ್ರಜೆಯೊಬ್ಬರು ಹಜ್ ನಿರ್ವಹಿಸಿ, ಮಿನಾದ ಮಸ್ಜಿದ್ ಖೈಫ್‌ನಲ್ಲಿ ಬಳಲಿಕೆಯಿಂದ ನಿದ್ರೆ ಮಾಡಿದರು. ನಿದ್ರೆಯಲ್ಲೊಂದು ಅದ್ಭುತ ಕನಸು. ಈ ಕನಸಿ‌ನ ಹಿನ್ನಲೆ ಅರಿಯಲು ಅವರು ತನ್ನ ಪರಿಚಯದ ವಿದ್ವಾಂಸರ ಬಳಿ ಹೋದರು. ವಿಷಯ ಅರಿತ ವಿದ್ವಾಂಸರು ಹೇಳಿದರು. ಒಂದು ದಿನ ನೀನೊಬ್ಬನೆ ಕ‌ಅಬಾ ತವಾಫ್ ಮಾಡುತ್ತಿ. ಸೌದಿಗೆ ಪ್ರಜೆಗೆ ಅಚ್ಚರಿ. ಜನರಿಂದ ತುಂಬಿ ತುಳುಕುವ ಕ‌ಅಬಾವನ್ನು ನಾನೊಬ್ಬನೇ ತವಾಫ್ ಮಾಡುವುದಾ ? ವರ್ಷಗಳು ಉರುಳಿತು. ಕಳೆದ ರಮಳಾನ್ ಲಾಕ್ ಡೌನ್ ಸಂದರ್ಭ. ಅಧಿಕಾರಿಗಳ ಅನುಮತಿ ಪಡೆದು ಆತನೊಬ್ಬನೇ ತವಾಫ್ ಮಾಡಿದ.  ಈ ವಿಷಯವನ್ನು ಸೌದಿ ವಿದ್ವಾಂಸರಾದ ಶೈಖ್ ಅಹ್ಮದ್ ಅಲ್ ಖುದೈರ್ ಟ್ವಿಟರ್ ನಲ್ಲಿ ಬಹಿರಂಗ ಪಡಿಸಿದರು. ಕ್ಷಣಾರ್ಧದಲ್ಲಿ ಅದು ವೈರಲಾಯಿತು. ಅಲ್ಲಾಹನ ಅದ್ಭುತ ಸಾಮಾರ್ಥ್ಯ ವನ್ನು ಅರಿಯುವವರಾರು ?  ಅಲ್ಲಾಹನು ಒಂದು ಕಾರ್ಯ ಇಚ್ಚಿಸಿದರೆ ಅಸಾಧ್ಯವಾದದ್ದು ಕೂಡ ಸಾಧ್ಯವಾಗುತ್ತದೆ. ಅಲ್ಲಾಹ್  ನಿನಗೆ ಸರ್ವ ಸ್ತುತಿ        *ಎಂ ಎಂ ಸಖಾಫಿ*

ಸುಲಭವಾಗಿ ಖಿಬ್ಲಃ ತಿಳಿಯಲು ಇಂದು ತಮಗೆ ಸುವರ್ಣಾವಕಾಶ

ಸುಲಭವಾಗಿ ಖಿಬ್ಲಃ ತಿಳಿಯಲು ಇಂದು ತಮಗೆ ಸುವರ್ಣಾವಕಾಶ ವಿಶ್ವ ಮುಸಲ್ಮಾನರು ನಮಾಜು ನಿರ್ವಹಿಸಲು ಅಭಿಮುಖವಾಗಿ ನಿಲ್ಲಲು ಉಪಯೋಗಿಸುವ ಕೇಂದ್ರವನ್ನಾಗಿದೆ ಖಿಬ್ಲಃ ಎಂದು ಹೇಳುವುದು. ಪವಿತ್ರ ಮಕ್ಕಾದ ಮಸ್ಜಿದುಲ್ ಹರಾಮಿನ ಒಳ ಇರುವ ಪವಿತ್ರ ಕಅಬಾ ಆಗಿದೆ ಮುಸ್ಲಿಮರ ಖಿಬ್ಲಃ. ದಿಕ್ಕು ಎಂಬುದರ ಅರಬಿ ಪದವಾಗಿದೆ ಖಿಬ್ಲಃ ( قبلة ).  ನಮಾಜು ಮಾತ್ರವಲ್ಲ ಮುಸ್ಲಿಮನ ದೈನಂದಿನ ಬದುಕಿನ ವಿವಿಧ ಕಾರ್ಯ ಚಟುವಟಿಕೆಯಲ್ಲಿ ಖಿಬ್ಲಕ್ಕೆ ಪ್ರಾಧಾನ್ಯತೆ ಇದೆ. ನಿದ್ರಿಸುವಾಗ ಖಿಬ್ಲಾಭಿಮುಖವಾಗಿ ಮಲಗುವುದು ಉತ್ತಮವಾಗಿದೆ.  ಮುಸ್ಲಿಮರ ಮ್ರತ ಶರೀರ ದಫನ ಮಾಡುವುದು ಖಿಬ್ಲಃಕ್ಕೆ ನೇರ ಮುಖ ಬರುವ ರೀತಿಯಲ್ಲಾಗಿದೆ.  ಸೂರ್ಯನ ಉತ್ತರ, ದಕ್ಷಿಣ ಯಾನ ನಿಮಿತ್ತ ವರ್ಷದಲ್ಲಿ ಎರಡು ಬಾರಿಯಾಗಿದೆ ಸೂರ್ಯನು ಕಅಬಾದ ನೇರ ಮೇಲಿಂದ ಹಾದು ಹೋಗುವುದು. ಇದರ ಪ್ರಥಮ ಸಂಚಾರವಾಗಿದೆ ಮೇ 27 ಮಕ್ಕಾದ ಸಮಯ ಮಧ್ಯಾಹ್ನ 12 - 18 ಕ್ಕೆ ( ಭಾರತೀಯ ಕಾಲಮಾನ 2-48 Pm ಗೆ ) ಸಂಭವಿಸುವುದು. ಮಗದೊಂದು ಸಂಚಾರ ಜುಲೈ 16 ರಂದು ಮಕ್ಕಾದ ಸಮಯ ಮಧ್ಯಾಹ್ನ 12-27 ಕ್ಕೆ ( ಭಾರತೀಯ ಕಾಲಮಾನ 2-57 Pm ಗೆ ) ಸಂಭವಿಸುವುದು. ಈ ಸಮಯದಲ್ಲಿ ಕಅಬಾ, ಸುತ್ತಮುತ್ತಳ ಯಾವುದೇ ವಸ್ತುವಿಗೂ ನೆರಳಿರುವುದಿಲ್ಲ.  ಮಕ್ಕಾದ ಪೂರ್ವಜರು ಈ ಸಮಯದ ಕುರಿತು ಹೇಳುತ್ತಿದ್ದದ್ದು "ನೆರಳನ್ನು ಪಾದರಕ್ಷೆಯಾಗಿ ಧರಿಸುವ ದಿನ" ಎಂದಾಗಿದೆ. ಪ್ರಸ್ತುತ ಸಮಯದಲ್ಲಿ ಸೂರ್ಯನು ಸಂಪೂರ್ಣವಾಗಿ ಕಅಬಾ...

ಬಡತನ ಅಲ್ಲಾಹನ ಅನುಗ್ರಹ

ಬಡತನ ಅಲ್ಲಾಹನ ಅನುಗ್ರಹ __________________________ 🎙 ಉಸ್ತಾದ್ ಶರೀಫ್ ಸಖಾಫಿ ಮಾಣಿ ✍ ಆಸಿಫ್ ಆಚಂಗಿ __________________________ 👁‍🗨 ಒಮ್ಮೆ ಉಮರ್ ರಲಿಯಲ್ಲಾಹು ಅನ್ಹುರವರು ನಬಿﷺಮರ ಬಳಿ ಬಂದರು. ನಬಿವರ್ಯﷺಮರು ಮೇಲು ಹೊದಿಕೆಯಿಲ್ಲದೆ ಕೇವಲ ಖರ್ಜೂರದ ಗರಿಯಲ್ಲಿ ಮಲಗಿದ್ದರಿಂದ ಅದರ ಕಡ್ಡಿಗಳು ಪ್ರವಾದಿವರ್ಯ ﷺರ  ಮೈಮೇಲೆ ಗುರುತನ್ನು ಮಾಡಿದ್ದವು. ಒಂದು ದಿಂಬು ಮಾತ್ರ ಅವರೊಂದಿಗಿತ್ತು. ಅದಕ್ಕೆ ಒರಗಿ ಕುಳಿತುಕೊಳ್ಳುತ್ತಿದ್ದರು. ಉಮರ್ ರಲಿಯಲ್ಲಾಹು ಅನ್ಹುರವರು ಕೇಳಿದರು.  'ಓ ಪ್ರವಾದಿﷺಮರೇ ರೋಮ್ ಹಾಗೂ ಫ್ರಾನ್ಸ್ ನವರು ಮುಸ್ಲಿಮರಲ್ಲ. ಅವರೆಲ್ಲರು ದೊಡ್ಡ ದೊಡ್ಡ ಶ್ರೀಮಂತರು. ಅದೇ ರೀತಿ ಈ ಸಮುದಾಯದವರು ದೊಡ್ಡ ದೊಡ್ಡ ಶ್ರೀಮಂತರಾಗಲು ಪ್ರಾರ್ಥಿಸಿ ಎಂದರು. 'ಉಮರ್ ರವರೇ ನೀವು ಅವರಂತಾಗಲು ಇಚ್ಚಿಸುವಿರಾ..!? ಅವರಿಗೆ ಭೂಲೋಕವು ನಮಗೆ ಪರಲೋಕವನ್ನು ನೀಡುವುದಾಗಿದೆ ಅಲ್ಲಾಹನ ತೀರ್ಮಾನ'. ಅದರಲ್ಲಿ ನಿಮಗೆ ತೃಪ್ತಿಯಿಲ್ಲವೇ..?' ಎಂದು ಪ್ರವಾದಿವರ್ಯ ﷺರು ಕೇಳಿದರು.  👁‍🗨 ಸತ್ಯವಿಶ್ವಾಸಿಗೆ ಸಂಪತ್ತು ಸೌಕರ್ಯಗಳು ದೊರೆಯುತ್ತಿಲ್ಲ ಎಂಬುವುದು ಅಲ್ಲಾಹನು ಆತನಿಗೆ ನೀಡಿದ ದೊಡ್ಡ ಅನುಗ್ರಹವಾಗಿದೆ.  👁‍🗨 ಮನುಷ್ಯನಿಗೆ ಸಂಪತ್ತು ಸೌಕರ್ಯಗಳು ಲಭಿಸುವುದರಿಂದ ಅಲ್ಲಾಹನನ್ನು ಮರೆತು ಅಕ್ರಮ ಮತ್ತು ಅನಗತ್ಯ ಕಾರ್ಯಗಳಲ್ಲಿ, ತಪ್ಪುಗಳಲ್ಲಿ ಭಾಗಿಯಾಗುತ್ತಾನೆ. 👁‍🗨 ಮನುಷ್ಯನು ಮಾಡಿದ ತಪ್ಪುಗಳಿಗೆ ಪಾ...

ಎಸ್ಸೆಸ್ಸೆಫ್ ನಲ್ಲಿ ಯಾರ್ಯಾರಿದ್ದಾರೆ ಎಂಬುದು ಮುಖ್ಯ

Ssf ನಲ್ಲಿ ಯಾರೆಲ್ಲಾ ಇದ್ದಾರೆ..ಎಂಬುವುದು ಮುಖ್ಯ *SSF ಎಂಬ ಸಂಘಟನೆಯಿಂದ ಯಾರೆಲ್ಲಾ ಯಾಕ್ಯಾಕೆ ಹೊರ ಹೋಗಿದ್ದಾರೆ ಎಂಬುದಕ್ಕಿಂತಲೂ,  SSF ನಲ್ಲಿ ಯಾರೆಲ್ಲಾ ಇದ್ದಾರೆ, ಯಾಕಿದ್ದಾರೆ, SSF ಅನ್ನು ಯಾರೆಲ್ಲಾ ಅಂಗೀಕರಿಸುತ್ತಾರೆಂಬುದು ಮುಖ್ಯವಾಗಿದೆ.* ಸೈಯ್ಯಿದ್ ಕುಟುಂಬಸ್ತರೂ, ಉನ್ನತ ವಿದ್ವಾಂಸರೂ ತನ್ನ ಹಯಾತ್ ಕಾಲದಲ್ಲೂ ಮರಣಾ ನಂತರವೂ ಹಲವಾರು ಕರಾಮತ್ ಗಳ ಒಡೆಯ ತಾಜುಲ್ ಉಲಮಾ,  ವಿನಯದ ಪ್ರತೀಕವಾಗಿದ್ದ, ತನ್ನ ಜೀವಿತ ಕಾಲದಲ್ಲಿ ಯಾರಬಗ್ಗೆಯೂ  ವಿಮರ್ಶಿಸದ ಉಲಮಾ ಪ್ರಕಾಶ ಎಂ ಎ ಉಸ್ತಾದ್, ಎಸ್ಸೆಸ್ಸೆಫ್ ಕಾರ್ಯಕರ್ತರಿಗೆ ಆಶಿರ್ವದಿಸುತ್ತಾ ಹುರಿದುಂಬಿಸುತ್ತಿದ್ದ ವಲಿಯ್ಯುಲ್ಲಾಹಿ  ವಡಗರ ಮುಹಮ್ಮದ್ ಹಾಜಿ ತಂಙಳ್ , ವಲಿಯುಲ್ಲಾಹಿ ಕುಂಡೂರ್ ಉಸ್ತಾದ್, ಪೊಸೋಟ್ ತಂಙಳ್, ಕೂರಾ ತಂಙಳ್,  ಜಗತ್ತಲ್ಲೇ ಸರಿಸಾಟಿ ಇಲ್ಲದ ಉಲಮಾ ನಾಯಕ, ಅನಾಥ ನಿರ್ಗತಿಕರ ಪಾಲಕ,  ಸುಲ್ತಾನುಲ್ ಉಲಮಾ ಎಪಿ ಉಸ್ತಾದ್ ಅದೇರೀತಿ ಅನೇಕ ಉಲಮಾಗಳು, ಸಾವಿರಾರು  ಸೈಯ್ಯಿದ್-ಸಾದಾತುಗಳು, ವಲಿಯ್ಯ್ ಗಳು ನೇತೃತ್ವಕೊಡುವ ಪ್ರಮುಖ ಸಂಘಟನೆಯಾಗಿದೆ *SSF.* ವಿಶ್ವ ಶ್ರೇಷ್ಠ ಉಲಮಾ ನಾಯಕರುಗಳಾದ ಅಬ್ಬಾಸ್ ಅಲವೀ ಮಾಲಿಕಿ ಮಕ್ಕ, ಉಮರ್ ಅಲ್ ಕಾಮಿಲ್, ಶೈಕ್ ಶದ್ದಾದ್ (ರ), ಶೈಕ್ ಸ್ವಬಾಹುರ್ರಿಫಾಹಿ,  ಸೈಯ್ಯದ್ ಜಿಫ್ರೀ ತಂಙಳ್, ಸೇರಿದಂತೆ ವಿಶ್ವದ ಎಲ್ಲಾ ಪ್ರಮುಖ ಉಲಮಾ ಸಾದಾತುಗಳು ಎಪಿ ಉಸ್ತಾದ್ ಮತ್ತು ಎಪಿ ಉಸ್ತಾದ್ ನೇ...

ಸೀನುವಿಕೆ ಶರೀರದ ರೀ ಫ್ರೆಶರ್

ಸೀನುವಿಕೆ ಶರೀರದ ರೀ ಫ್ರೆಶರ್ 🎙ಉಸ್ತಾದ್ ಶರೀಫ್ ಸಖಾಫಿ ಮಾಣಿ ✍ ಆಸಿಫ್ ಆಚಂಗಿ _______________________________ 🍂 HIGHLIGHTS 🍂 👁‍🗨 ನಾವು ಸೀನುತ್ತೇವೆ. ಸೀನುವುದು ಆರೋಗ್ಯಕರ ವ್ಯಕ್ತಿಯ ಲಕ್ಷಣ. 👁‍🗨 ಇಮಾಮ್ ಬುಖಾರಿ ರಳಿಯಲ್ಲಾಹು ಅನ್ಹುರವರು ನಿವೇದಿಸುವ ಹದೀಸೊಂದರಲ್ಲಿ  'ಸೀನುವಿಕೆಯು ಅಲ್ಲಾಹನಿಗೆ ಇಷ್ಟಕರ ಸಂಗತಿ' ಎಂದಿದ್ದಾರೆ. 👁‍🗨 ಮನುಷ್ಯನ ಹೃದಯ ಮಿಡಿತ ಸಹಿತ ಶರೀರದ ಎಲ್ಲಾ ಅಂಗಾಂಗಗಳು ನಿಶ್ಚಲವಾಗುವುದು ಮರಣ ಬಿಟ್ಟರೆ ಆತ ಸೀನುವ ಸಂದರ್ಭದಲ್ಲಾಗಿದೆ. ಸೀನುವಾಗ ಯಾವುದೇ ವಸ್ತುವನ್ನು ನೋಡವುದು ಕೇಳುವುದು ಅಸಾಧ್ಯ..! 👁‍🗨 'ಸೀನುವಿಕೆ' ಎಂಬುವುದು ಶರೀರವನ್ನು ಸಂಪೂರ್ಣವಾಗಿ ರಿಫ್ರೆಶ್ ಮಾಡುವ ಅದ್ಭುತ ಸಂಗತಿ.  👁‍🗨 ಸೀನಿದ ಬಳಿಕ 'الحمد لله' ಹೇಳಲು ಪ್ರತ್ಯೇಕ ಸುನ್ನತ್ ಇದೆ.  👁‍🗨  ಸೀನಿದ ಬಳಿಕ  الحمد لله ಹೇಳಿದರೆ 'ಕಿವಿನೋವು ಮತ್ತು ಹೊಟ್ಟೆ ನೋವು ಇಲ್ಲವಾಗುತ್ತದೆ' ಎಂದು ಹದೀಸಿನಲ್ಲಿ ಕಾಣಬಹುದು.   👁‍🗨 ಸೀನಿದವನು الحمد لله ಎಂದು ಮಾತ್ರ ಹೇಳದೆ ಅದರ ಬಳಿಕ على كل حال، الف مرة ಅಥವಾ رب العالمين ಎಂದೆಲ್ಲಾ ಹೇಳಲು ಪ್ರತ್ಯೇಕ ಸುನ್ನತ್ತಿದೆ. 👁‍🗨 ಒಂದು ದಿನ ಪ್ರವಾದಿವರ್ಯ ﷺರು ನಮಾಜ್ ಮಾಡುತ್ತಿರುವಾಗ ಓರ್ವ ಸ್ವಹಾಬಿಯು 'الحمد لله حمدا كثيرا طيبا مباركا كما يحب ربنا ويرضى'  ಎಂದು ದೀರ್ಘವಾದ 'ಹಂದ...

ಈದ್ ಸ್ಪೆಶಲ್ ಝಿಕ್ರ್ ಪಟ್ಟಿ

*ಪೆರ್ನಾಳ್ ಸ್ಪೆಶಲ್ ಝಿಕ್ರ್ ಪಟ್ಟಿ* ಪೆರ್ನಾಳಿನ ಮಗ್ರಿಬಿನಿಂದ ಈದುಲ್ ಫಿತ್ರ್ ಪೆರ್ನಾಳ್ ನಮಾಜು ಪ್ರಾರಂಭಿಸುವ ತನಕ ಪುರುಷರೂ,ಮಹಿಳೆಯರೂ ನಿರಂತರ ಹೇಳುತ್ತಿರಬೇಕಾದ ಬಹಳ ಮುಖ್ಯ ಝಿಕ್ರಾದ ತಕ್ಬೀರ್ اَللَّهُ اَكْبَرُ اَللََّهُ اَكْبَرُ اَللَّهُ اَكْبَرُ لَااِلَهَ اِلَّا الَّلهُ وَالَّلهُ اَكْبَرُ ،اَللَّهُ اَكْبَرُ وَلِلَّهِ الْحَمْدُ، اَللَّهُ اَكْبَرُ كَبِيرََا، وَالْحَمْدُ لِلَّهِ كَثِيرََا، وَسُبْحَانَ اللَّهِ بُكْرَةََ وَاَصِيلاََ ،لَااِلَهَ اِلَّا الَّلهُ وَلاَ نَعْبُدُ اِلَّااِيَّاهُ مُخْلِصِينَ لَهُ الدِّينَ، وَلَوْ كَرِهَ الْكَافِرُونَ. لَااِلَهَ ِالَّا الَّلهُ وَحْدَهُ ،نَصَرَ عَبْدَهُ، وَاَعَزَّ جُنْدَهُ، وَهَزَمَ الْاَحْزَابَ وَحْدَهُ، لَااِلَهَ اِلَّا الَّلهُ وَالَّلهُ اَكْبَرُ اَللَّهُمَّ صَلِّ عَلَي سَيِّدِناَ مُحَمَّدِِ  وَعَليَ اۤلِ سَيِّدِناَ مُحَمَّدِِ وَعَلَي اَصْحَابِ سَيِّدِناَ مُحَمَّدِِ وَعَليَاَنْصَارِ سَيِّدِنَا مُحَمَّدِِ وَعَلَي اَزْوَاجِ سَيِّدِنَا مُحَمَّدِِ وَعَليَ ذُرِّيَّةِ سَيِّدِناَمُحَمّدِِ  وَ سَلَّمَ تَسْلِيماََ كَثِيرََا 👇👇👇👇👇 ಈದ್ ದಿನ ಸುಬ್ಹ್ ನಮಾಜಿನ ಬಳಿಕ 100 ಬಾರಿ ಕೆಳಗಿನ...

ಈದ್ ನಮಾಜಿನ ರೂಪ

*بسم الله الرحمن الرحيم الحمد لله رب العالمين والصلاة والسلام على سيدنا محمد وعلى آله وصحبه أجمعين* 🌸🌸🌸🌸🌸🌸🌸🌸🌸 ಈದ್ ನಮಾಜಿನ  ರೂಪ *ಈದುಲ್ ಫಿತ್ರ್(ಚೆರಿಯಪೆರ್ನಾಲ್) ಸುನ್ನತ್ ನಮಾಜ್ ಎರಡು ರಕ್ಅತ್( ಇಮಾಮಾಗಿ- ಇಮಾಗಿದ್ದಲ್ಲಿ-ಅಥವಾ- ಇಮಾಮಿನೊಂದಿಗೆ-ಮಅ್ಮೂಮ್ ಆಗಿದ್ದಲ್ಲಿ)  ಅಲ್ಲಾಹನಿಗಾಗಿ ನಾನು ನಿರ್ವಹಿಸುತ್ತೇನೆ ಎಂಬ ನಿಯತ್ತಿ ನೊಂದಿಗೆ ತಕ್ಬೀರ್ ಹೇಳಿ ನಮಾಝ್ ಪ್ರಾರಂಭಿಸಿ,ವಜ್ಜಹ್ತು...ಓದಿದ ಬಳಿಕ ಏಳು ತಕ್ಬೀರ್ ಹೇಳಬೇಕು.ಈ ತಕ್ಬೀರ್ ಗಳ ಎಡೆಯಲ್ಲಿ,*  *سُبْحَانَ اللَّهِ وَالْحَمْدُ لِلَّهِ ولا اله الا الله والله اكبر وَلاَ حَوْلَ وَلاَ قُوًّةَ اِلاَّ باِللَّهِ الْعَلِيِّ الْعَظِيمْ*  *ಎಂದು ನುಡಿಯಬೇಕು. ಏಳನೇ ತಕ್ಬೀರ್ ನಂತರ ಅಊದ್ಸು.. ಓದಿ  ಫಾತಿಹಾ ಮತ್ತು ಸೂರಾವನ್ನು ಓದಬೇಕು.  (ಸಬ್ಬಿಹಿಸ್ಮ.... ಓದಿದರೆ ಉತ್ತಮ). ಆಮೇಲೆ*  *ಎರಡನೇ ರಕ್ಅತ್ ಗೆ ಎದ್ದು ನಿಲ್ಲುವ ತಕ್ಬೀರ್ ಹೇಳಿದ ನಂತರ ಐದು ತಕ್ಬೀರ್ ಹೇಳಬೇಕು.  ಪ್ರತಿ ತಕ್ಬೀರ್ ಗಳ ಎಡೆಯಲ್ಲಿ,* *سُبْحَانَ اللَّهِ وَالْحَمْدُ لِلَّهِ ولا اله الا الله والله اكبر وَلاَ حَوْلَ وَلاَ قُوًّةَ اِلاَّ باِللَّهِ الْعَلِيِّ الْعَظِيمْ* *ಎಂದು ನುಡಿಯಬೇಕು.*  *ಐದನೇ ತಕ್ಬೀರ್ ನಂತರ ಫಾತಿಹಾ ಮತ್ತು ಸೂರ ಓದುವುದು.(...

ಸಂಚಾರಿಗಳಿಂದ ಮಾಣಿಕ್ಯವೆಂದು ಕರೆಸಿಕೊಂಡ ಸಮರ್‌ಖಂದ್. ಭಾಗ - 4 (ಕೊನೆಯ ಭಾಗ)

ಸಂಚಾರಿಗಳಿಂದ ಮಾಣಿಕ್ಯವೆಂದು ಕರೆಸಿಕೊಂಡ ಸಮರ್‌ಖಂದ್. ಭಾಗ - 4 (ಕೊನೆಯ ಭಾಗ) ಮೂಲ: ಇಸ್ಮಾಈಲ್ ಸಅದಿ ಮಾಚಾರ್ ರವರ ಇಫಾದ ಹದೀಸ್ ಕ್ಲಾಸ್ ನಂ -1496.  ಬರಹ ರೂಪಕ್ಕೆ --ಸಲೀಂ ಇರುವಂಬಳ್ಳ.  (ಕೆ.ಜಿ.ಎನ್ ದಅ್‌ವಾ ಕಾಲೇಜು ಮಿತ್ತೂರು) -------------------------- ಸಮರ್‌ಖಂದಿನಿಂದ ಬಂದ ಸೇವಕ ಉಮರ್‌ಬಿನ್ ಅಬ್ದುಲ್ ಅಝೀಝರಿಂದ ಪತ್ರವನ್ನು ಪಡೆದು ಸಮರ್‌ಖಂದಿನತ್ತ ನಡೆಯುತ್ತಾನೆ. ದಾರಿಯಲ್ಲಿ ಕಂಡವರೆಲ್ಲ ಇವನು ವಿದೇಶಿಗನು ಎಂದು ಹೇಳಿ ಅತಿಥಿ ಸತ್ಕಾರ ಮಾಡುತ್ತಾರೆ. ಒಂದೊಂದು ಮಸೀದಿಗೆ ತಲುಪಿದಾಗ ಜನರೆಲ್ಲರೂ ಸೇವಕನ ಪರಿಚಯ ಕೇಳುತ್ತಾರೆ. ಮನೆಗೆ ಕರೆದುಕೊಂಡು ಹೋಗುತ್ತಾರೆ. ಹಣವನ್ನು ನೀಡುತ್ತಾರೆ. ಇಸ್ಲಾಮ್ ಧರ್ಮದ ಸೌಂದರ್ಯ, ಸ್ನೇಹ ಕೊಡುಕೊಳ್ಳುವಿಕೆಯನ್ನು ಕಂಡು ಆತ ಸಂತೋಷಗೊಳ್ಳುತ್ತಾನೆ. ಮೊದಲು ಡಮಸ್ಕಸಿಗೆ ಹೋದ ಸೇವಕನಾಗಿರಲಿಲ್ಲ ಹಿಂದಿರುಗಿ ಬರುವಾಗ. ಸೇವಕ ಸಂಪೂರ್ಣ ಬದಲಾಗಿದ್ದ. ತಿಂಗಳುಗಟ್ಟಲೆ ಯಾತ್ರೆಗೈದು ಸೇವಕ ತನ್ನ ಊರಾದ ಸಮರ್‌ಖಂದಿಗೆ ತಲುಪುತ್ತಾನೆ. ಈಗ ಸೇವಕನಿಗೇನೂ ಭಯವಿಲ್ಲ. ಡಮಸ್ಕಸಿಗೆ ಹೋದ ನಂತರ ನೈಜ ಜೀವನದ ಕುರಿತು ಸೇವಕನಿಗೆ ಅರಿವಾಗಿದೆ. ಆದರೆ ಜೋತಿಷ್ಯರ ಮುಂದೆ ತಾನು ಇಸ್ಲಾಮಿಗೆ ಆಕರ್ಷಿತವಾದದ್ದು ಹೇಳಲಿಲ್ಲ.      ತಿಂಗಳುಗಟ್ಟಲೆ ಯಾತ್ರೆ ಮಾಡಿ ತಿರುಗಿ ಬಂದ ಸೇವಕನನ್ನು ಕಂಡ ಜೋತಿಷ್ಯರು ಸಂತೋಷಿತರಾಗುತ್ತಾರೆ. ಮತ್ತೆ ಸೇವಕ ತಿರುಗಿ ಬರಲ್ಲ ಎಂದು ಭಾವಿಸಿಕೊಂಡಿದ್ದ ಜೋತ...

ಸಂಚಾರಿಗಳಿಂದ ಮಾಣಿಕ್ಯವೆಂದು ಕರೆಸಿಕೊಂಡ ಸಮರ್‌ಖಂದ್. ಭಾಗ - 3

ಸಂಚಾರಿಗಳಿಂದ ಮಾಣಿಕ್ಯವೆಂದು ಕರೆಸಿಕೊಂಡ ಸಮರ್‌ಖಂದ್. ಭಾಗ - 3 ಮೂಲ: ಇಸ್ಮಾಈಲ್ ಸಅದಿ ಮಾಚಾರ್ ರವರ ಇಫಾದ ಹದೀಸ್ ಕ್ಲಾಸ್ ನಂ -1495.  ಬರಹ ರೂಪಕ್ಕೆ --ಸಲೀಂ ಇರುವಂಬಳ್ಳ.  (ಕೆ.ಜಿ.ಎನ್ ದಅ್‌ವಾ ಕಾಲೇಜು ಮಿತ್ತೂರು) -------------------------- ಸಮರ್'ಖಂದಿನಿಂದ ಬಂದ ಸೇವಕ ಖಲೀಫ ಉಮರ್'ಬಿನ್ ಅಬ್ದುಲ್ ಅಝೀಝರ ಮನೆ ಮುಂದೆ ತಲುಪಿದ್ದಾನೆ. ಆದರೆ ತನ್ನ ಸಂಶಯವಿನ್ನೂ ಆರಿಲ್ಲ. ಇದು ರಾಜರ ಮನೆಯಾಗಿರಬಹುದೇ..? ರಾಜರ ಮನೆಯೆಂದರೆ ಫ್ರೌಢಿಮೆಯಿಂದ ಕೂಡಿರಬೇಕಲ್ಲವೇ..! ಆದರೆ ಇದು ಹಾಗಲ್ಲವಲ್ಲಾ... ತನ್ನ ಸಂಶಯವನ್ನು ನಿವಾರಿಸಲು ಇನ್ನೊಮ್ಮೆ ಡಮಸ್ಕಸಿನ ವ್ಯಕ್ತಿಯ ಬಳಿ ಓಡಿದ. " ಹೌದು ಇದು ಉಮರ್'ಬಿನು ಅಬ್ದುಲ್ ಅಝೀಝ್ ರವರ ಮನೆಯಾಗಿದೆ. ಇಸ್ಲಾಮಿನ ಶರೀಅತ್ ಇವರಿಗೆ ಕಿಸ್ರಾ-ಖೈಸರ್, ಫಿರ್‌ಔನ್, ಖಾಕಾನ್ ರವರ ಕಿರೀಟವನ್ನು ನೀಡಿ ಗೌರವಿಸಿದೆ. ಆದರೆ ಅವರಿಗೆ ಇದಕ್ಕಿಂತ ಮಿಗಿಲಾದ ಕಿರೀಟವನ್ನಾಗಿದೆ ಕೊಡಬೇಕಾದದ್ದು. ಆದರೆ ಮಹಾನುಭಾವರು ಅರಬಿಗಳ ಕಿರೀಟವಾದ ರುಮಾಲು(ತಲೆಕಟ್ಟು)ವನ್ನಾಗಿದೆ ಧರಿಸುತ್ತಿರುವುದು. ಭೂ ಲೋಕದಲ್ಲೆಲ್ಲ ಸೌಂದರ್ಯವನ್ನು ಪ್ರಕಾಶಿಸಿದ ರಾಜರಾಗಿದ್ದಾರೆ ಇವರು. ತನ್ನ ಬಳಿ ಬಂದವರಿಗೆ ಕೈ ತುಂಬಾ ನೀಡಿ ಕಳುಹಿಸಿಕೊಡುವರು. ಬಡವರಿಗೆ ಮುತ್ತು-ರತ್ನವನ್ನು ದಯಪಾಲಿಸಿದ ಮಹಾನರಿವರು. ಆದರೆ ಇವರು ಮಾತ್ರ ಎಲ್ಲವನ್ನೂ ತ್ಯಜಿಸಿ  ಸಣ್ಣ  ಮನೆಯೊಂದರಲ್ಲಿ ಜೀವನ ಸಾಗಿಸುತ್ತಿದ್ದಾರೆ. ಇವರ ಮನಸ್ಸು ಇಹಕ್...

ಸಂಚಾರಿಗಳಿಂದ ಮಾಣಿಕ್ಯವೆಂದು ಕರೆಸಿಕೊಂಡ ಸಮರ್‌ಖಂದ್ ಭಾಗ--2

ಸಂಚಾರಿಗಳಿಂದ ಮಾಣಿಕ್ಯವೆಂದು ಕರೆಸಿಕೊಂಡ ಸಮರ್‌ಖಂದ್ ಭಾಗ--2 ಮೂಲ:  ಇಸ್ಮಾಈಲ್ ಸಅದಿ ಮಾಚಾರ್ ರವರ ಇಫಾದ ಹದೀಸ್ ಕ್ಲಾಸ್ ನಂ--1494. ಬರಹ ರೂಪಕ್ಕೆ --ಸಲೀಂ ಇರುವಂಬಳ್ಳ.  (ಕೆ.ಜಿ.ಎನ್ ದಅವಾ ಕಾಲೇಜು ಮಿತ್ತೂರು) -------------------------- ಸಮರ್'ಖಂದಿನಿಂದ ಬಂದ ಸೇವಕ ಡಮಸ್ಕಸ್ ತಲುಪುತ್ತಾನೆ. ಡಮಸ್ಕಸಿನ ರಾಜ್ಯ ಸೌಂದರ್ಯ, ಕೋಟೆಗಳನ್ನು ಕಂಡು ಚಿಂತಾ ಮಗ್ನನಾಗುತ್ತಾನೆ. 'ನಾನು ರಾಜರ ಆಸ್ಥಾನಕ್ಕೆ ಹೇಗೆ ತಲುಪಲಿ'.. ಎಂದು ಯೋಚಿಸತೊಡಗಿದ. ತಂಗಲು ಸ್ಥಳವನ್ನು ಹುಡುಕುತ್ತಾ ತನ್ನ ಹೆಜ್ಜೆ ಮುಂದಿಡತೊಡಗಿದ. ಯಾತ್ರಿಕರು ತಂಗುವ ಸ್ಥಳಕ್ಕಾಗಿ ನಡೆದು, ಒಂದು ಜಾಗಕ್ಕೆ ತಲುಪಿ ರಾತ್ರಿ ಅಲ್ಲಿಯೇ ತಂಗಿ ಬೆಳಗೆದ್ದು ಹೊಸ ವಸ್ತ್ರವ ಧರಿಸಿ ಅರಮನೆಯನ್ನು ಹುಡುಕುತ್ತಾ ನಡೆದ. ಪ್ರತಿ ಹೆಜ್ಜೆಯಿಡುವಾಗಲು 'ಜಗತ್ತಿನ ಅರ್ಧ ಭಾಗದಷ್ಟು ತನ್ನ ಕೈಯಲ್ಲಿರುವ ರಾಜನನ್ನಾಗಿದೆ ನಾನು ನೋಡಲು ಹೊರಟಿರುವುದು' ಎಂದು ಆಲೋಚಿಸುತ್ತಾ ಭಯದಿಂದ ಹೆಜ್ಜೆಯಿಡುತ್ತಾನೆ. ಅರಮನೆ ಯಾವುದೆಂದು ತಿಳಿಯದೆ ನನ್ನ ಮುಂದೆ ಯಾರು ಮೊದಲು ಕಣ್ಣಿಗೆ ಕಾಣುವನೋ ಅವನೊಂದಿಗೆ ಕೇಳಿಬಿಡೋಣವೆಂದು ನಿರ್ಧರಿಸಿ ಮುಂದೆ ಸಾಗುತ್ತಾನೆ. ಅಡಿಯಿಟ್ಟಂತೆ ವಿಶಾಲವಾದ ಬಾಗಿಲುಗಳುಳ್ಳ ಚೆಲುವಾದ ಕಟ್ಟಡವನ್ನು ಕಾಣುತ್ತದೆ. ಆ ಕಟ್ಟಡದ ಬಾಗಿಲಿನಿಂದ ಜನರು ಹೊರಗೆ ಬರುತ್ತಿದ್ದಾರೆ. ಕೆಲವರು ಒಳ ಹೋಗುತ್ತಿದ್ದಾರೆ. ಯಾರೂ ಕೇಳುವವರಿಲ್ಲ, ಭದ್ರತೆಯಾಳುಗಳಿಲ್ಲ. ಯಾರಿಗೂ ಹ...

ಸಂಚಾರಿಗಳಿಂದ 'ಮಾಣಿಕ್ಯ'ವೆಂದು ಕರೆಸಿಕೊಂಡ ಸಮರ್'ಖಂದ್. ಭಾಗ - 1

ಸಂಚಾರಿಗಳಿಂದ 'ಮಾಣಿಕ್ಯ'ವೆಂದು ಕರೆಸಿಕೊಂಡ ಸಮರ್'ಖಂದ್. ಭಾಗ - 1 ಮೂಲ: ಇಸ್ಮಾಈಲ್ ಸಅದಿ ಮಾಚಾರ್ ರವರ ಇಫಾದ ಹದೀಸ್ ಕ್ಲಾಸ್ ನಂ 1493.  --ಸಲೀಂ ಇರುವಂಬಳ್ಳ.  (ಕೆ.ಜಿ.ಎನ್ ದಅವಾ ಕಾಲೇಜು ಮಿತ್ತೂರು) -------------------------- ಸಮರ್ʼಖಂದ್ 'ಇಸ್ಲಾಮಿನ ಮಾಣಿಕ್ಯ' ಎಂಬ ಹೆಸರಿನಿಂದ ಪ್ರಖ್ಯಾತಿ ಹೊಂದಿದ ಊರು. ಪೂರ್ವ ಕಾಲವನ್ನು ನೋಡಿದಾಗ ನಮಗೆ ಆಶ್ಚರ್ಯಪಡುವಂತ ಊರುಗಳನ್ನು ಕಾಣಲು ಸಾಧ್ಯವಾಗುತ್ತದೆ. ಸ್ಪೈನ್, ಬಗ್ದಾದ್, ಸಮರ್ಖಂದ್, ಮಕ್ಕಾ, ಮದೀನಾ ಇವೆಲ್ಲವೂ ಜಗತ್ತಿಗೆ ಹಲವು ಇಸ್ಲಾಮಿಕ್ ಇತಿಹಾಸವನ್ನು ಕಲಿಸಿಕೊಟ್ಟ ಊರು. ಈ ಊರಿಗೆಲ್ಲ ಕಣ್ಣು ಹಾಯಿಸಿ ನೋಡಿದಾಗ ಕಾಣಲು ಸಾಧ್ಯವಾಗುವುದು ಇಸ್ಲಾಮೀ ಸಂಸ್ಕೃತಿ, ಮುಸ್ಲಿಮ್ ರಾಜರುಗಳ, ವಿದ್ವಾಂಸರುಗಳ ಕೊಡುಗೆ, ಸೇವೆಯನ್ನಾಗಿದೆ.         ಚರಿತ್ರೆಯನ್ನು ಕಲಿಯುವುದರಿಂದಾಗುವ ದೊಡ್ಡ ಲಾಭವೇನೆಂದರೆ; ಉದಾಹರಣೆಗೆ ನಾವು ಐವತ್ತು ವರ್ಷ ಬದುಕಿದರೂ ಐನೂರು ವರ್ಷದ ಇತಿಹಾಸವನ್ನು ಕಲಿತರೆ ನಾವು ಐನೂರು ವರ್ಷ ಜೀವಿಸಿದಂತೆ. ಇನ್ನು ಸಾವಿರ ವರ್ಷದ ಇತಿಹಾಸವನ್ನು ಕಲಿತರೆ ಕೇವಲ ಐವತ್ತು ವರ್ಷ ಪ್ರಾಯದಲ್ಲಿ ಸಾವಿರ ವರ್ಷ ಬದುಕಿದ ಹಾಗೆ ಆಗುತ್ತದೆ.       ಪೂರ್ವ ಕಾಲದಲ್ಲಿ ಅದ್ಭುತವನ್ನು ಸೃಷ್ಟಿಸಿದ, ಪ್ರಕಾಶಮಯ ಊರುಗಳಿವೆ. 'ಅವೆಲ್ಲದರ ಚರಿತ್ರೆಯನ್ನು ಓದಿ, ಕಲಿತು ಹೊಸ ನವೋಥ್ಥಾನಕ್ಕೆ ನಾವು ತಯಾರಾಗಬೇಕಿದೆ. ಉಝ್ಬಕಿ...