Skip to main content

Posts

Showing posts from November, 2022

ವಿಷ ಮಿಶ್ರಿತವಾದ ಆಯುಧದೊಂದಿಗೆ ಕೊಲ್ಲಲು ಬಂದ ವ್ಯಕ್ತಿಗೆ ಪ್ರೀತಿಯ ಆಸರೆ ನೀಡಿದ ಪೈಗಂಬರ್ ﷺِ

ವಿಷ ಮಿಶ್ರಿತವಾದ ಆಯುಧದೊಂದಿಗೆ ಕೊಲ್ಲಲು ಬಂದ ವ್ಯಕ್ತಿಗೆ ಪ್ರೀತಿಯ ಆಸರೆ ನೀಡಿದ  ಪೈಗಂಬರ್ ﷺِ ✍️ ಗಫೂರ್ ಬಾಯಾರ್ 〰️〰️〰️〰️〰️〰️〰️ ಆ ವ್ಯಕ್ತಿಯ ಹೆಸರು ಆಜಾಝ್ ಖೈಬರ್'ನ ಧೀರ ಶೂರ ಪರಾಕ್ರಮಿಗಳ ಪೈಕಿ ಒಬ್ಬನಾಗಿದ್ದ. ನಬಿﷺِರನ್ನು ಕೊಂದು ಅರಬ್ ಸಾಮ್ರಾಜ್ಯದ ಹೀರೋ ಆಗಬೇಕೆಂಬ ದುರಾಸೆಯಿಂದ ವಿಷ ಮಿಶ್ರಿತ ಕತ್ತಿಯೊಂದನ್ನು ಸೊಂಟಪಟ್ಟಿಯಲ್ಲಿ ಅಡಗಿಸಿ ವೇಷ ಮರೆಸಿಕೊಂಡು ನಬಿ ಸ್ವಲ್ಲಲ್ಲಾಹು ಅಲೈಹಿವ ಸಲ್ಲಮರು ನಿವಾಸವಾಜ ಮದೀನಾದ ಮಸ್ಜಿದುನ್ನಬವಿಗೆ ಆಗಮಿಸಿದನು. ಆಗ ನಬಿ ﷺِ ರವರು ಆರಾಧನಾ ಮಗ್ನರಾಗಿದ್ದರು. ಮಸೀದಿಯ ಬಾಗಿಲಿನಲ್ಲಿ ಕುಖ್ಯಾತ ಶೈತಾನನ್ನೂ ಬೆದರಿಸಿ ಬೆನ್ನಟ್ಟಿದ್ದ ಧೈರ್ಯಶಾಲಿ ಉಮರ್ ಬಿನ್ ಖತ್ತಾಬ್(ರ) ರವರು ಕಾವಲು ಕಾಯುತ್ತಿದ್ದರು. ಹಾಗೆ ಮದೀನಾ ಮಸೀದಿಯ ಮುಂದೆ ಬಂದು ನಿಂತ ಆಗಂತುಕನನ್ನು ಅಡಿಯಿಂದ ಮುಡಿಯ ತನಕ ಒಮ್ಮೆ ದುರುಗುಟ್ಟಿ ನೋಡಿದ ಉಮರ್ (ರ) ರವರು ತಮ್ಮ ಕಂಚಿನ ಕಂಠದಲ್ಲಿ ಯಾರು ನೀನು? ಎಂದರು. ನಾನು ಆಜಾಝ್.. ಖೈಬರ್‌ನಿಂದ ಬಂದಿದ್ದೇನೆ.. ಸರಿ..  ನಿನಗೆ ಏನು ಬೇಕು..? ಪ್ರವಾದಿ ಮುಹಮ್ಮದ್ ﷺِ ರನ್ನು ಕಾಣಲು ಬಂದಿದ್ದೇನೆ ಎಂದುತ್ತರಿಸಿದರು ಆಜಾಝ್. ಈಗ ನಬಿ ﷺِ ರು ಆರಾಧನಾ ನಿರತರಾಗಿದ್ದಾರೆ. ಸ್ವಲ್ಪ ಹೊತ್ತು ಕಾಯಿರಿ.  ಎಂದರು ಉಮರ್ (ರ) ಸರಿ ಎಂದ ಆಜಾಝ್,  ನಬಿ ﷺِ ರವರ ನಮಾಝ್ ಮುಗಿಯುವ ತನಕ ಅಲ್ಲೇ ಕಾಯುತ್ತಾ ಕುಳಿತನು. ನಬಿ ﷺِರವರ ನಮಾಝ್ ಮುಗಿದ ನಂತರ ಆಜಾಝ್'...

ಗೌಸುಲ್ ಆಝಮ್ ರಳಿಯಲ್ಲಾಹು ಅನ್ಹು'ರವರ ಬಾಲ್ಯದಲ್ಲಿನ 7 ಕರಾಮತ್'ಗಳು,

ಗೌಸುಲ್ ಆಝಮ್ ರಳಿಯಲ್ಲಾಹು ಅನ್ಹು'ರವರ ಬಾಲ್ಯದಲ್ಲಿನ 7 ಕರಾಮತ್'ಗಳು, ಗೌಸುಲ್ ಆಝಮ್ ರಳಿಯಲ್ಲಾಹು ಅನ್ಹು ಜನಿಸುವಾಗಲೇ ವಲಿಯ್ಯ್ ಎಂಬ ಪಟ್ಟವನ್ನು ಗಳಿಸಿದವರಾಗಿದ್ದಾರೆ. ಬಾಲ್ಯದಲ್ಲಿನ ಈ  ಎಲ್ಲಾ ಕರಾಮತ್'ಗಳಿಂದ ಅವರು ಅಲ್ಲಾಹನ ವಲಿಯ್ಯ್ ಎಂಬುವುದು ವ್ಯಕ್ತವಾಗುತ್ತದೆ. (1) ಗೌಸುಲ್ ಆಝಮ್ ರಳಿಯಲ್ಲಾಹು ಅನ್ಹು ರವರ ತಾಯಿ ಗರ್ಭಿಣಿಯಲ್ಲಿ ಸೀನಿದಾಗ ಅಲ್ ಹಮ್ದುಲಿಲ್ಲಾಹ್ ಎಂದು ಹೇಳಿದರೆ ಗರ್ಭಾಶಯದಲ್ಲಿರುವ ಗೌಸುಲ್ ಆಝಮ್ ರಳಿಯಲ್ಲಾಹು ಅನ್ಹು ರವರು   "ಯರ್'ಹಮ್ಕುಮುಲ್ಲಾಹ್" ಎಂದು ಉತ್ತರಿಸುತ್ತಿದ್ದರು. (ಅಲ್ ಹಖಾಯಿಕ್ ಫಿಲ್ ಹದಾಯಿಖ್ ಪುಟ-139 ) (2) ಗೌಸುಲ್ ಆಝಮ್ ರಳಿಯಲ್ಲಾಹು ಅನ್ಹು ರಮಝಾನಿನ ಪ್ರಥಮ ದಿನ ಸೂರ್ಯೋದಯದ ಸಮಯದಲ್ಲಿ ಜನಿಸಿರುತ್ತಾರೆ. ಅವರ ತುಟಿಯಿಂದ "ಅಲ್ಲಾಹ್..! ಅಲ್ಲಾಹ್" ಎಂಬ ಶಬ್ದವು ಹೊರಬರುತ್ತಿರುವುದನ್ನು ಕೇಳಲಾಗುತ್ತಿತ್ತು (ಅಲ್ ಹಖಾಯಿಕ್ ಫಿಲ್ ಹದಾಯಿಖ್ ಪುಟ-139) (3) ಗೌಸುಲ್ ಆಝಮ್ ರಳಿಯಲ್ಲಾಹು ಅನ್ಹು ಜನಿಸಿದ  ದಿನದಂದು ಇರಾಖಿನ ಜಿಲಾನ್ ಪ್ರದೇಶದಲ್ಲಿ 1100 ಗಂಡು ಮಗು ಜನಿಸುತ್ತಾರೆ. ಅವರೆಲ್ಲರೂ ಅಲ್ಲಾಹನ ವಲಿಯ್ಯ್ ಆಗಿದ್ದಾರೆ.  (ತಾರಿಖ್ ಉಲ್ ಕಥೀರ್, ಪುಟ-15) (4) ಗೌಸುಲ್ ಆಝಾಂ ರಳಿಯಲ್ಲಾಹು ಅನ್ಹು ರವರು ತಾನು ಜನಿಸಿದ ದಿನವೇ ಸೂರ್ಯಾಸ್ತಮವಾಗುವವರೆಗೆ ತನ್ನ ತಾಯಿಯ ಮೊಲೆಹಾಲನ್ನು ಕುಡಿಯದೆ ಉಪವಾಸ ಆಚರಿಸಿದ್ದಾರೆ.  ರಮಝಾನಿನ ...

ಶೈಖ್ ಅಬ್ದುಲ್ ಖಾದಿರ್ ಜೀಲಾನಿ ರಹ್ಮತುಲ್ಲಾಹಿ ಅಲೈಹಿ.

ಶೈಖ್ ಅಬ್ದುಲ್ ಖಾದಿರ್ ಜೀಲಾನಿ ರಹ್ಮತುಲ್ಲಾಹಿ ಅಲೈಹಿ.  _✒️ನಿಝಾರ್ ಸುಲ್ತಾನಿ ಅಸ್ಸಖಾಫಿ ಉಳ್ಳಾಲ_  ➖➖➖➖➖  *🟡ಸತ್ಯವಂತ ಅವರು:*  يقول الشيخ القدرة أبو عبد الله قائد الأواني كنت عند الشيخ عبد القادر فسأله سائل على ما بنيت أمرك قال علی الصدق ما كذبت قط. ಶೈಖ್ ಅಬೂ ಅಬ್ದುಲ್ಲಾ ಖಾಯಿದುಲ್ ಅವಾನಿ ರಹ್ಮತುಲ್ಲಾಹಿ ಅಲೈಹಿ ರವರು ಹೇಳುತ್ತಾರೆ: _ನಾನು ಶೈಖ್ ಅಬ್ದುಲ್ ಖಾದಿರ್ ರಹ್ಮತುಲ್ಲಾಹಿ ಅಲೈಹಿ ರವರ ಸಮೀಪ ಇದ್ದೆ. ಆಗ ಒಬ್ಬರು ಅವರಲ್ಲಿ ಕೇಳಿದರು: ನಿಮಗೆ ಪದವಿ ಲಭಿಸಲು ಕಾರಣ ವೇನು.? ಮಹಾನುಭಾವರು ಹೇಳಿದರು: ಸತ್ಯದ ಕಾರಣದಿಂದ, ಜೀವನದಲ್ಲಿ ನಾನು ಅಸತ್ಯವನ್ನು ನುಡಿದಿಲ್ಲ. ಮದ್ರಸದಲ್ಲಿ ಕಲಿಯುತ್ತಿದ್ದ ಕಾಲದಲ್ಲೂ ಕೂಡಾ._   *🟡ಪಶು ಮಾತಾಡಿತು:*  ثم قال رضي الله منه: كنت صغيرا في بلدنا فخرجت إلى السواد يوم عرفة وتبعن بقرة حرث فالتفتت الي بقرة وقالت با عبد القادر ما لهذا خلقت ولا بهذا امرت فرجعت فزعا إلى دارنا وصعدت إلی سطح الدار فرأيت الناس واقفين بعرفات فجئت إلى أمي وقلت لها هبينئ  لله عزوجل واذني لي بالمسير إلى بغداد اشتغل بالعلم وازور الصالحين. (بهجة الأسرار :٨٧) ನಂತರ ಹೇಳಿದರು: ನಾನು ನನ್ನ ಸಣ್ಣ ವಯಸ್ಸಿನಲ್ಲಿ ಊರಿನಲ್ಲಿ ಅರಫಾ ದಿವಸ ಗ್ರಾಮೀಣ...