Skip to main content

Posts

Showing posts from January, 2025

ಮಾದರೀ ವಿದ್ವಾಂಸ ಪಟ್ಟಾಂಬಿ ಉಸ್ತಾದ್

ಉಳ್ಳಾಲದಲ್ಲಿ ಧಾರ್ಮಿಕ ಅರಿವನ್ನು ಪಸರಿಸುವಲ್ಲಿ ಅನನ್ಯ ಕೊಡುಗೆ ನೀಡಿದ, ವಿಶೇಷವಾಗಿ ಅಳೇಕಲದಲ್ಲಿ 4 ದಶಕಗಳಿಂದ ಧಾರ್ಮಿಕ ರಂಗದ ನೇತ್ರತ್ವವನ್ನು ವಹಿಸಿ ಗಮನಾರ್ಹ ಸೇವೆ ನೀಡುತ್ತಿರುವ ಪಟ್ಟಾಂಬಿ ಉಸ್ತಾದರ ಬದುಕಿನ ಕಡೆ ಹ್ರಸ್ವ ನೋಟ ಬೀರೋಣ. ತಾಜುಲ್ ಉಲಮಾ ಉಳ್ಳಾಲ ತಂಙಲ್ ಖ.ಸಿ ರವರ ಪ್ರಮುಖ ಶಿಷ್ಯ, ಸರಳತೆ, ವಿನಯ, ಪ್ರೀತಿ, ಕರುಣೆ ಮೇಲೈಸಿದ ಅಪರೂಪದ ವಿದ್ವಾಂಸ ಪಟ್ಟಾಂಬಿ ಉಸ್ತಾದ್. ಅಬೂಝಿಯಾದ್ ಮುಹಮ್ಮದ್ ಮದನಿ ಪಟ್ಟಾಂಬಿ ಉಸ್ತಾದ್ ಎಂದು ಅವರ ಹೆಸರನ್ನು ಪೂರ್ತಿಯಾಗಿ ಹೇಳಲಾಗುತ್ತದೆ.  ಉಸ್ತಾದರ ನೈಜ ನಾಮ ಮುಹಮ್ಮದ್ ಎಂದಾಗಿದೆ. ಪ್ರೀತಿಯಿಂದ ಮಗನ ಹೆಸರು ಸೇರಿಸಿ ಅಬೂ ಝಿಯಾದ್ ಎಂದು ತನ್ನ ಹೆಸರಿನ ಮುಂದೆ ಸೇರಿಸಿ ಬರೆಯುತ್ತಾರೆ. ಉಳ್ಳಾಲದಲ್ಲಿ ಪಟ್ಟಾಂಬಿ ಉಸ್ತಾದ್ ಎಂದೇ ಚಿರಪರಿಚಿತ. ಮದನಿ ಎಂಬುವುದು ನಮಗೆ ತಿಳಿದಿರುವಂತೆ ಉಳ್ಳಾಲ ಸಯ್ಯಿದ್ ಮದನಿ ಅರೆಬಿಕ್ ಕಾಲೇಜಿನಲ್ಲಿ ಕಲಿತು ಪಡೆದ ಬಿರುದಿನ ಹೆಸರಾಗಿದೆ. 1952 ಮಾರ್ಚ್ ನಾಲ್ಕರಂದು ಪಾಲೋಳಿ ಮಹ್ಮೂದ್ ಮತ್ತು ಕೋಲ್ಕಾಟ್ ಫಾತಿಮ ಎಂಬವರ ಮಗನಾಗಿ ಜನಿಸಿದರು. ತಂದೆ ತಾಯಿಗೆ ಉಸ್ತಾದ್ ಸೇರಿ ಇಬ್ಬರು ಗಂಡು ಮಕ್ಕಳು. ಉಸ್ತಾದರು ಹಿರಿಯವರು. ಉಸ್ತಾದರ ತಮ್ಮ ಐದು ವರ್ಷಗಳ ಮುಂಚೆ ಮರಣ ಹೊಂದಿರುವರು. ಮಲಪ್ಪುರಂ ಜಿಲ್ಲೆಯ ಪುಣಪ್ಪ ಶಾಲೆಯಲ್ಲಿ 8 ನೇ ತರಗತಿ ತನಕ ಲೌಕಿಕ ಶಿಕ್ಷಣ ಪಡೆದರು. ತನ್ನ ತಂದೆಯ ಸಹೋದರಿಯ ಊರಾದ ಅರಿಪ್ರ ಎಂಬಲ್ಲಿ ಪ್ರಾಥಮಿಕ ಶಿಕ್ಷಣ ಪಡೆದರ...

ಎಸ್ ಎಂ ತಂಙಲ್ - ಊರವರ ಪ್ರೀತಿಯ ಬೆಲಿಯೋ ಉಸ್ತಾದ್

ನಿಶ್ಚಯವಾಗಿಯೂ ನನ್ನನ್ನು ಬೋಧಕನಾಗಿ ನಿಯೋಗಿಸಲಾಗಿದೆ ಎಂಬ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಸಂದೇಶದ ಮಹತ್ವವನ್ನು ಅರಿತು ತನ್ನ ಬದುಕಿನಲ್ಲೂ ಬೋಧನೆಯನ್ನು ಸಂಪೂರ್ಣವಾಗಿ ಮೈಗೂಡಿಸಿದ ಗುರುವಾಗಿದ್ದಾರೆ ಎಸ್ ಎಂ ತಂಙಲ್. ಪವಿತ್ರ ಅಹ್ಲು ಬೈತ್ ವಂಶದಲ್ಲಿ 1941 ನೇ ಇಸವಿಯಲ್ಲಿ ಅಳೇಕಲ ಪಾಂಡ್ಯಾಲ್ ಪಕ್ಕದ "ಸಯ್ಯದ್ ಆಟಕ್ಕೋಯ ತಂಙಲ್‌ ರವರ ಸುಪುತ್ರರಾಗಿ ಚರಿತ್ರೆ ಪ್ರಸಿದ್ದ 'ಅಜಿಲ ಮೊಗರು' ವಿನಲ್ಲಿ ಎಸ್ ಎಂ ತಂಙಲ್ ಜನಿಸಿದರು. ತನ್ನ ಶೈಶವ ಕಾಲವನ್ನು ಅಜಿಲಮೊಗರುವಿನಲ್ಲಿ ಕಳೆದರು. ನಂತರ ಅಳೇಕಲಕ್ಕೆ ಆಗಮಿಸಿದ ಎಸ್ ಎಂ ತಂಙಲ್ ಬಾಲ್ಯದಿಂದಲೇ ಅಹ್ಲು ಬೈತ್‌ನ ಶ್ರೇಷ್ಠತೆಗೆ ತಕ್ಕ ನಿಷ್ಕಳಂಕ ಧರ್ಮನಿಷ್ಠೆಯೊಂದಿಗೆ ಬಾಳಿ ಬದುಕಿದರು. ಉಳ್ಳಾಲವನ್ನು ಬೆಳಗಿಸಿದ ಆಧ್ಯಾತ್ಮಿಕ ಮಹಾ ಗುರು  ತಾಜುಲ್ ಉಲಮಾ ಉಳ್ಳಾಲ ತಂಙಲ್ ಖದ್ದಸಲ್ಲಾಹು ಸಿರ್ರಹುಲ್ ಅಝೀಝ್ ಮತ್ತು ಪ್ರಮುಖ ಸೂಫೀವರ್ಯರಾದ ಸಜಿಪ ಉಸ್ತಾದರ ಶಿಷ್ಯತ್ವದಲ್ಲಿ ಜ್ಞಾನಾರ್ಜನೆ ಮಾಡಿದರು. ಬಳಿಕ ನಾಡಿನ ಪ್ರಾಥಮಿಕ ಇಸ್ಲಾಮಿಕ್ ಶಿಕ್ಷಣ ಕೇಂದ್ರವಾದ ಮದ್ರಸದಲ್ಲಿ ಕ್ರಾಂತಿಕಾರಿ ಸೇವೆಯೊಂದಿಗೆ ತನ್ನ ಬದುಕು ಪೂರ್ತಿ ತೊಡಗಿಸಿಕೊಂಡರು. ಕಲ್ಲಾಪು, ಮಂಚಿಲ, ಮಾರ್ಗತಲೆ, ಚೊಂಬುಗುಡ್ಡೆ, ಹಳೇಕೋಟೆ ಹಾಗು ಆಸುಪಾಸಿನ ಊರುಗಳಿಗೆ ಕೇಂದ್ರವಾಗಿ ಕಾರ್ಯಾಚರಿಸುತ್ತಿದ್ದ ಅಳೇಕಲ ನಜಾತುಸ್ಸಿಬಿಯಾನ್ ಮದ್ರಸದಲ್ಲಿ ಮುಅಲ್ಲಿಮಾಗಿ, ಸದರ್ ಮುಅಲ್ಲಿಮಾಗಿ ಸೇವೆಯನ್ನು ನೀ...

ಈ ಕೊಳದ ನೀರಿನಿಂದ ಮಕ್ಕಾದ ಬೆಂಕಿ ನಂದಿತು

ಅಳೇಕಲ ಮಸೀದಿ ಸನಿಹ ಕೊಳವೊಂದಿದೆ. ಸುಮಾರು ಆರುನೂರು ವರ್ಷಗಳ ಹಿಂದೆಯೇ ಅಂದರೆ ಉಳ್ಳಾಲದ ಮೊದಲ ಸೂಫಿ ಸಂತರಾದ ವಲಿಯುಲ್ಲಾಹಿ ಅಚ್ಚಿಸಾಹಿಬ್ ಖ.ಸಿ ರವರ ಕಾಲದಲ್ಲೇ ಕೊಳವಿತ್ತು ಎಂದೂ ಅಲ್ಲ ಅವರ ಕಾಲದ ನಂತರ ಕೊಳ ನಿರ್ಮಾಣವಾದದ್ದು ಎಂದು ಎರಡಭಿಪ್ರಾಯವಿದೆ. ಏನೇ ಆದರೂ ಸಯ್ಯಿದ್ ಮದನಿ ಖ.ಸಿ ರವರ ಕಾಲದಲ್ಲಿ ಅಳೇಕಲದ ಕೊಳ ಪ್ರಸಿದ್ಧಿ ಪಡೆಯಿತು.  ಒಂದು ದಿನ ಸಯ್ಯಿದ್ ಮದನಿ ತಂಗಳ್ ಖ.ಸಿ ತನ್ನ ಪತ್ನಿಯ ಊರಾದ ಈ ಅಳೇಕಲದ ಮಸೀದಿ ಸಮೀಪದ ಇದೇ ಕೊಳದಲ್ಲಿ ನಮಾಝ್ ಗಾಗಿ ವುಲೂ ನಿರ್ವಹಿಸುತ್ತಿದ್ದರು. ವುಲೂ ನಿರ್ವಹಿಸುತ್ತಿರುವುದರ ಮಧ್ಯೆ ಒಂದೇ ಸಮನೆ ತನ್ನ ಎರಡು ಕೈಗಳಿಂದ ನೀರನ್ನೆತ್ತಿ ಮೇಲಕ್ಕೆ ಚಿಮ್ಮುತ್ತಲಿದ್ದರು. ಸನಿಹವಿದ್ದವರು ಮೂಕ ಪ್ರೇಕ್ಷಕರಾಗಿ ಇದನ್ನೇ ನೋಡುತ್ತಿದ್ದರು. ನೀರು ಚಿಮ್ಮಿಸುವುದನ್ನು ನಿಲ್ಲಿಸಿದಾಗ ಸನಿಹವಿದ್ದವರು ಆಶ್ಚರ್ಯದಿಂದ ಕೇಳಿದರು. ಮದನಿ ತಂಗಳರೇ. ತಾವು ಯಾಕೆ ವುಲೂವಿನ ಮಧ್ಯೆ ನೀರನ್ನು ಮೇಲಕ್ಕೆ ಚಿಮ್ಮಿಸಿದಿರಿ. ಮದನಿ ತಂಗಳ್ ಹೇಳಿದರು.ನಾನು ವುಲೂ ನಿರ್ವಹಿಸುತ್ತಿರುವುದರ ಮಧ್ಯೆ ಪವಿತ್ರ ಮಕ್ಕಾದ ಹರಂ ಶರೀಫ್ ನಲ್ಲಿ ಬೆಂಕಿ ಅನಾಹುತ ಸಂಭವಿಸುವುದನ್ನು ಕಂಡೆನು. ಅಲ್ಲಾಹನ ಆಜ್ಞೆಯಂತೆ ಆ ಬೆಂಕಿಯನ್ನು ನಂದಿಸಲು ನೀರನ್ನು  ಚಿಮ್ಮಿಸಿದೆ. ಅಲ್ಲಾಹನ ಅನುಗ್ರಹದಿಂದ ಬೆಂಕಿ ನಂದಿತು ಎಂದರು. ಸಯ್ಯಿದ್ ಮದನಿ ತಂಗಳ್ ರವರ ಈ ಅದ್ಬುತದಿಂದ  ಜನರು ಭಾರೀ ಅನಾಹುತದಿಂದ ರಕ್ಷೆ ಪಡೆದರು. ಆ...

ಮಹಾತ್ಮರೊಂದಿಗೆ ಆಟವಾಡದಿರಿ

ಸಯ್ಯಿದ್ ಮದನಿ ತಂಙಲ್ ರವರ ವಫಾತಿನ ಬಳಿಕ ನಡೆದ ಅದ್ಭುತ ಒಂದು ಘಟನೆ. ಒಂದಭಿಪ್ರಾಯದಂತೆ ಅಳೇಕಲದ ಪೊಲ್ಕರೆಯ ಮದನಿ ತಂಙಲ್ ರವರ ಮನೆಯ ತೆಂಗಿನ ಮರಗಳಿಂದ ಕಾಯಿ ಸೀಳಲು ಬಂದ ವ್ಯಕ್ತಿ ಸೋಮಾರಿತನ, ಅಸಡ್ಡೆ ತೋರಿಸಿದಾಗ ಸನಿಹವಿದ್ದವರು ನೀನು ಏನು ಮಾಡ್ತಾ ಇರುವೆ. ಇದು ಸಯ್ಯಿದ್ ಮದನಿ ತಂಙಲ್ ರವರ ತೆಂಗಿನ ಮರಗಳು ಎಂದು ಹೇಳಿದರಂತೆ. ಅದಕ್ಕೆ ಆತ ಅದಕ್ಕೇನಂತೆ, ಅವರ ತೆಂಗಿನಕಾಯಿಗೆ ಕೊಂಬಿದೆಯೇ ಎಂದು ತಾತ್ಸಾರ ಮನೋಭಾವದಿಂದ ಮಾತನಾಡಿದನಂತೆ. ಬಳಿಕ ಮರ ಹತ್ತಿ ತೆಂಗಿನ ಕಾಯಿ ಸೀಳಲು ಅಣಿಯಾದಾಗ ಏನದ್ಭುತ, ತೆಂಗಿನ ಕಾಯಿ ಗೊನೆಯಲ್ಲಿ ಕೊಂಬು ಕಂಡು ಆತ ಆಶ್ಚರ್ಯ ಚಕಿತನಾದನು. ಮತ್ತೆ ತನ್ನ ತಪ್ಪಿನ ಅರಿವಾಗಿ ಕ್ಷಮೆಯಾಚಿಸಿದನು. ಮತ್ತೊಂದು ಅಭಿಪ್ರಾಯದ ಪ್ರಕಾರ ಸಯ್ಯಿದ್ ಮದನಿ ತಂಗಳರ ಅತಿಯಾಗಿ ಗೌರವಿಸುತ್ತಿದ್ದ ಓರ್ವರು ತನ್ನ ಜಾಗದಲ್ಲಿ ತೆಂಗಿನ ಕಾಯಿಯನ್ನು ನೆಡುವಾಗ ಇದು ಮುಂದಕ್ಕೆ ಫಸಲು ನೀಡಿದರೆ ಮೊದಲ ಫಸಲಿನ ತೆಂಗಿನಕಾಯಿ ಗೊನೆಯನ್ನು ಸಯ್ಯಿದ್ ಮದನಿ ತಂಙಲ್ ಖ.ಸಿ ರವರ ದರ್ಬಾರಿಗೆ ನೀಡುತ್ತೇನೆ ಎಂದು ಹರಕೆ (ನೇರ್ಚೆ) ಮಾಡಿ ನೆಟ್ಟರು. ಆಗ ಅಲ್ಲಿದ್ದ ಓರ್ವ ವ್ಯಕ್ತಿ ಮದನಿ ತಂಙಲ್ ಹೆಸರಿನಲ್ಲಿ ಯಾಕೆ ಹರಕೆ ಮಾಡ್ತೀಯಾ, ಅವರಿಗೆ ಹರಕೆ ಮಾಡಿದರೆ ತೆಂಗಿನಕಾಯಿಗೆ ಕೊಂಬು ಬರುತ್ತದೆಯೇ ಎಂದು ವ್ಯಂಗ್ಯವಾಗಿ ಹೇಳಿದನಂತೆ. ತೆಂಗಿನ ಕಾಯಿ ಮೊಳಕೆಯೊಡೆಯಿತು. ಬೆಳೆಯಿತು. ಮರವಾಯಿತು. ಫಸಲು ನೀಡಿತು. ಮೊದಲ ಗೊನೆಯಲ್ಲಿ ಕೊಂಬಿರುವ ತೆಂಗಿನಕಾಯಿಗಳು ಪ್ರ...

ಅಚ್ಚಿ ಸಾಹಿಬ್ ಎಂಬ ನಾಮದ ರಹಸ್ಯ.

ಸುಮಾರು ಆರು ನೂರು ವರ್ಷಗಳ ಹಿಂದೆ ಉಳ್ಳಾಲ ಅಳೇಕಲಕ್ಕೆ ಬಂದ ವಲಿಯುಲ್ಲಾಹಿ ಅಚ್ಚಿಸಾಹಿಬ್ ಖ ಸಿ  ರವರು ಪುಟ್ಟ ಬಾಲಕನಾಗಿದ್ದರು ಮತ್ತು ಅವರು ತಾಯಿಯೊಂದಿಗೆ ಬಂದು ಅಳೇಕಲವನ್ನು ವಾಸ್ತವ್ಯದ ಊರನ್ನಾಗಿ ಆಯ್ಕೆ ಮಾಡಿಕೊಂಡಿದ್ದರು. ವಲಿಯುಲ್ಲಾಹಿ ಅಚ್ಚಿಸಾಹಿಬ್ ಖ ಸಿ ದೊಡ್ಡವರಾಗುತ್ತಿದ್ದಂತೆ ಅಳೇಕಲದಲ್ಲಿ ಇದ್ದ ಪುಟ್ಟ ಮಸೀದಿಯಲ್ಲಿ ಅಲ್ಲಾಹನ ಆರಾಧನೆ, ಧ್ಯಾನದಲ್ಲಿ ಮಗ್ನರಾಗುತ್ತಿದ್ದರು. ಅಲ್ಲಾಹನ ಇಷ್ಟದಾಸರ ಹಲವು ಸ್ವಭಾವಗಳು ಅವರು ಮೈಗೂಡಿಸಿ ಕೊಂಡಿದ್ದರು.  ಮಕ್ಕಳೊಂದಿಗೆ ಅತೀವ ಪ್ರೀತಿ ತೋರುತ್ತಿದ್ದ ಅವರು ಮ್ರದು ಸ್ವಭಾವದೊಂದಿಗೆ ಸರಳವಾಗಿ ಬಾಳಿ ಬದುಕಿದ್ದರು. ಅಳೇಕಲ ಸುತ್ತ ಮುತ್ತ ಅವರ ಬಗ್ಗೆ ಆಗಲೇ ಮನೆ ಮಾತಾಗಿತ್ತು. ಹೀಗಿರಲು ಅಳೇಕಲದಲ್ಲಿದ್ದ (ಭಂಡಸಾಲೆ) ಪಾಂಡಿಗಸಾಲೆಗೆ ಕೊಡಗಿನಿಂದ ವ್ಯಾಪಾರಿಯೊಬ್ಬರು ಅಚ್ಚಿ ಚಕ್ಕರೆ ಎತ್ತಿನ ಗಾಡಿಯ ಮೂಲಕ ತಂದಾಗ ಅಳೇಕಲ ಮಸ್ಜಿದ್ ಸಮೀಪ ವಲಿಯುಲ್ಲಾಹಿ ಅಚ್ಚಿಸಾಹಿಬ್ ಖ.ಸಿ ಅದೇನೆಂದು ಕೇಳಿದರು. ಸತ್ಯ ಹೇಳಿದರೆ ಇವರಿಗೆ ಅಚ್ಚಿಚಕ್ಕರೆ ಕೊಡಬೇಕಾಗಬಹುದು ಎಂದು ಎತ್ತಿನಗಾಡಿಯಲ್ಲಿ ಮಣ್ಣಾಗಿದೆ ಇರುವುದು ಎಂದು ಸುಳ್ಳು ಹೇಳಿದನು. ಓ ಮಣ್ಣಾ! ಹಾಗಾದರೆ ಹಾಗೆಯೇ ಆಗಲಿ ಎಂದು ಮಹಾನರು ಪ್ರತಿಕ್ರಯಿಸಿದರು. ಆತನು ಸೀದಾ ಅದನ್ನು (ಭಂಡಸಾಲೆ) ಪಾಂಡಿಗಸಾಲೆಗೆ ಹೋಗಿ ಅದನ್ನು ಅದರ ವ್ಯಾಪಾರಿಗಳಿಗೆ ನೀಡಲು ತೆರೆದಾಗ ಅಚ್ಚಿಚಕ್ಕರೆ ಪೂರ್ತಿ ಮಣ್ಣಾಗಿತ್ತು. ವ್ಯಾಪಾರಿಗಳು ಇದೇನಿ...

ಪ್ರಿಯ ಪತ್ನಿಯ ಬದುಕು ನಿರ್ವಹಣೆಗೆ ಬೆಳ್ಳಿ ನಾಣ್ಯ

ಸಯ್ಯಿದ್ ಮದನಿ ತಂಙಲ್ ಖ.ಸಿ ರವರ ವಫಾತಿನ ಬಳಿಕ ಪ್ರಿಯ ಪತ್ನಿಯ ಬದುಕು ನಿರ್ವಹಣೆಗೆ ಬೆಳ್ಳಿ ನಾಣ್ಯ ಸಯ್ಯಿದ್ ಮದನಿ ಖ.ಸಿ ರವರ ವಿವಾಹ ಅಳೇಕಲದ ಉತ್ತಮ ಮನೆತನದ ದೀನೀ ಜ್ಞಾನವಿರುವ ಸ್ತ್ರೀಯೊಂದಿಗೆ ನಡೆದಿತ್ತು. ಮದನಿ ತಂಗಳ್ ರವರ ಆಗಮನಕ್ಕಿಂತ ಮುಂಚೆಯೇ ಅಳೇಕಲ, ಸುತ್ತ ಮುತ್ತ ಇಸ್ಲಾಮಿನ ಜ್ಞಾನ, ಧಾರ್ಮಿಕತೆ ಇದ್ದುದರಿಂದ ಮತ್ತು ಅಧಿಕ ಸಂಖ್ಯೆಯ ಸಾದಾತುಗಳ ವಾಸ ಸ್ಥಳ ಅಳೇಕಲವಾದುದರಿಂದ ಇಲ್ಲಿನ ಸ್ತ್ರೀಯೊಂದಿಗೆ ವಿವಾಹವಾಗಿರಬಹುದು. ಸಯ್ಯಿದ್ ಪುತ್ತುಕೋಯ ತಂಙಲ್ ಇವರ ನಿಕಾಹ್ ನೆರವೇರಿಸಿಕೊಟ್ಟಿದ್ದರೆಂಬುದು ಹೆಚ್ಚಿನ ಜನರ ಅಭಿಮತ. ಸಯ್ಯಿದ್ ಪುತ್ತುಕೋಯ ತಂಗಲ್ ರವರ ಮಖ್ಬರ ಕೂಡಾ ಅಳೇಕಲದಲ್ಲಿ ಕಾಣಬಹುದು. ಮದನಿ ತಂಗಲ್ ರವರ ವಿವಾಹ ನಡೆದ ಪೊಲ್ಕರೆಯಲ್ಲಿರುವ ಮನೆ ಈಗಲೂ ಇದೆ. ಆ ಮನೆಯ ಹಿಸ್ಟರಿಯೇ ಬಲು ಅದ್ಭುತ. ಅದು ಮೊದಲು ಬ್ರಾಹ್ಮಣ ಕುಟುಂಬದ ಮನೆಯಾಗಿತ್ತು. ಆ ಮನೆಯಲ್ಲಿ ಮದನಿ ತಂಗಲ್ ರವರ ಪತ್ನಿ ಮತ್ತು ಪತ್ನಿಯ ಹಿರಿಯ ಸಹೋದರಿ ವಾಸಿಸುತ್ತಿದ್ಥರು. ಒಂದು ದಿನ ಸಯ್ಯಿದ್ ಮದನಿ ತಂಙಲ್ ಖ.ಸಿ ಮನೆಗೆ ಬಂದಾಗ ಪತ್ನಿ ಮತ್ತು ಹಿರಿಯ ಸಹೋದರಿ ಬೇಸರದಲ್ಲಿದ್ದರು. ವಿಷಯ ಏನು ಅಂತ ಕೇಳಿದಾಗ ಪತ್ನಿ ಹೇಳಿದರು. ಮನೆಯ ಯಜಮಾನ ಬಂದು ನಮ್ಮೊಂದಿಗೆ ಮನೆ ಖಾಲಿ ಮಾಡಲು ತಿಳಿಸಿದ್ಜಾನೆ. ಆಗ ಮದನಿ ತಂಙಲ್ ಹೇಳಿದರು. ನೀವು ಬೇಸರಪಡದಿರಿ. ಏನೂ ಆಗಲ್ಲ ಅಂತ ಹೇಳಿದರು. ಅಂದು ರಾತ್ರಿ ಮನೆಯ ಯಜಮಾನನಿಗೆ ಯಾರೋ ಬಂದು ಹೊಡೆಯುತ್ತಿರುವ ಕನಸು...

ಉಳ್ಳಾಲದ ಮೊದಲ ಸೂಫಿ ಸಂತ ಅಚ್ಚೀ ಸಾಹಿಬ್ ವಲಿಯುಲ್ಲಾಹ್...!

ಉಳ್ಳಾಲದ ಅಳೇಕಲ ಎಂಬ ಊರಿನಲ್ಲಿ ಸಮಾಧಿಸ್ಥರಾಗಿರುವ ಸೂಫಿ ಸಂತ ಅಚ್ಚೀ ಸಾಹಿಬ್ ವಲಿಯುಲ್ಲಾಹ್ ಉಳ್ಳಾಲದಲ್ಲಿ ಪ್ರಸಿದ್ಧಿಗೆ ಬಂದ ಮೊದಲ ಸೂಫಿ ಸಂತ. ನಮ್ಮಲ್ಲನೇಕರು ಹೇಳುವಂತೆ ಮದೀನಾ ನಗರಿಯಿಂದ ಕಡಲ ತೆರೆಗಳ ದಾಟಿ ಬಂದ ಸೂಫಿ ಸಂತ ಸಯ್ಯದ್ ಮದನಿಯವರು ಬರುವುದಕ್ಕಿಂತ ಮುಂಚೆ ಉಳ್ಳಾಲದಲ್ಲಿ ಇಸ್ಲಾಮ್ ಧರ್ಮದ ಆಚಾರ ವಿಚಾರಗಳೇ ಇರಲಿಲ್ಲ ಎನ್ನುವುದು ಒಂದು ಕಪೋಲ ಕಲ್ಪಿತ ವಿಚಾರ.ಸಯ್ಯದ್ ಮದನಿ‌(ಖ.ಸಿ) ಅವರು ಬರುವುದಕ್ಕಿಂತ ಮುಂಚೆ ಉಳ್ಳಾಲದಲ್ಲಿ ಎರಡು ಮಸೀದಿಗಳಿದ್ದವು.  -ಒಂದು ಈಗ  ಮದನಿ ಮಸೀದಿ ಎಂದು ಪ್ರಸಿದ್ಧಿಯಾಗಿರುವ ಮಸೀದಿ. ಅದನ್ನು ಹಿಂದೆ ಕೂಡಂಕಾರೆ ಪಳ್ಳಿ ಎನ್ನುತ್ತಿದ್ದರು.ಸಯ್ಯದ್ ಮದನಿಯವರು ಬಂದು ಅಲ್ಲೇ ಧ್ಯಾನ ನಿರತರಾಗಿದ್ದು ಜನರ ಸಮಸ್ಯೆಗಳಿಗೆ ಪರಿಹಾರವನ್ನು ಕಲ್ಪಿಸುತ್ತಿದ್ದರು. ಅವರ ಕಾಲಾನಂತರ ಅವರು ಧ್ಯಾನನಿರತರಾಗುತ್ತಿದ್ದ ಕೂಡಂಕಾರೆ ಪಳ್ಳಿಗೆ ಮದನಿ ಮಸೀದಿ ಎಂದು ಹೆಸರಾಯಿತು. ಸರಕಾರಿ ದಾಖಲೆಗಳಲ್ಲಿ ಅದು ಇಂದಿಗೂ ಸಯ್ಯದ್ ಮದನಿ ಗುಡಿ ಎಂದೇ ಇದೆ. -ಎರಡನೆಯ ಮಸೀದಿ ಉಳ್ಳಾಲದ ಅಳೇಕಲ ಮಸೀದಿ. ಈ ಮಸೀದಿಗೊಂದು ರಾಜಕೀಯ ಐತಿಹ್ಯವಿದೆ. ಉಳ್ಳಾಲದ ರಾಣಿ ಅಬ್ಬಕ್ಕ ಪೋರ್ಚುಗೀಸರ ವಿರುದ್ಧ ಹೋರಾಡುತ್ತಿದ್ದ ಕಾಲವದು. ಮೊದಲ ಬಾರಿ ಪೋರ್ಚುಗೀಸರ ವಿರುದ್ಧ ಬಂಡೆದ್ದ ಅಬ್ಬಕ್ಕ ತನ್ನ ಸ್ಥಳೀಯ ಸೇನೆಯ ಬಲದಿಂದ ಅವರನ್ನು ಹಿಮ್ಮೆಟಿಸಿದ್ದಳು. ಕೆಲ ಸಮಯದ ಬಳಿಕ ಯಾವುದೇ ಪೂರ್ವ ಸೂಚನೆ ನೀಡದೇ ಏಕಾ ಏಕಿಯಾಗಿ ಸ...