Skip to main content

Posts

Showing posts from July, 2021

ನೀವು ಇಹಕ್ಕಾಗಿ ಬದುಕಬಾರದು. ನೀವು ಅಲ್ಲಾಹನ ಧರ್ಮಕ್ಕಾಗಿ ಬದುಕಬೇಕು

 ಕಾಂತಪುರಂ ಉಸ್ತಾದ್ ಕೋಟ್ಯಂತರ ರೂಪಾಯಿ ಸಂಪಾದಿಸಿ ಐಷಾರಾಮಿ ಜೀವನ ನಡೆಸುತ್ತಾರೆ ಎಂದು ನಾಡಿನುದ್ದಗಲಕ್ಕೂ ಹೇಳಿ ನಡೆಯುವವರೊಂದಿಗೆ. ಸುಲ್ತಾನುಲ್ ಉಲಮಾ  ಉಸ್ತಾದರು ತನ್ನ ಅತಿದೊಡ್ಡ ನಿಧಿಯಾದ ತಮ್ಮ ಶಿಷ್ಯರಿಗೆ ಮರ್ಕಝಿನಲ್ಲಿ ಹೇಳಿದ ಹೃದಯ ಕರಗಿಸುವ ಮಾತುಗಳು ... ನನಗೆ ಒಳ್ಳೆಯ ಅಡಿಕೆ ತೋಟವಿದೆ. ಅದರಿಂದ ಪ್ರತೀ ವರ್ಷ ಅಡಿಕೆ ಮಾರಿ ಉತ್ತಮ ಸಂಖ್ಯೆ ನನಗೆ ಲಭಿಸುತ್ತಿತ್ತು. ಈ ಬಾರಿ ನನಗೆ 40,000 ಸಿಕ್ಕಿತು, ಕಳೆದ ಬಾರಿ ನನಗೆ 30,000 ಸಿಕ್ಕಿತು ಮತ್ತು ಅದರ ಹಿಂದಿನ ವರ್ಷ ನನಗೆ 50,000 ಸಿಕ್ಕಿತು. ಇದು ಮಾಸಿಕ ಆದಾಯವಲ್ಲ, ಇದು ಒಂದು ವರ್ಷದ್ದಾಗಿದೆ. ನನ್ನ ಬಳಿ ಒಂದು ಅಂಗಡಿ ಇದೆ ಮತ್ತು ಅದರಿಂದ ತಿಂಗಳಿಗೆ ನಾಲ್ಕು ಸಾವಿರ ರೂಪಾಯಿ ಸಿಗುತ್ತದೆ. ಇದರ ಹೊರತು ನನ್ನದೆಂದು ಹೇಳುವ ಯಾವುದೊಂದೂ ನನ್ನ ಬಳಿ ಇಲ್ಲ. ನನಗೆ ಅನಾರೋಗ್ಯ ಉಂಟಾಗಿ ಹಾಸಿಗೆ ಹಿಡಿದರೆ ಚಿಕಿತ್ಸೆಗಾಗಿಯೂ ನನ್ನ ಬಳಿ ಹಣ ಇಲ್ಲ. ಮಾಸಿಕ ಮತ್ತು ವಾರ್ಷಿಕವಾಗಿ ಸಿಗುವ ಈ ಆದಾಯ ನನಗೆ ಹೇಗೆ ಸಾಕಾಗಬಹುದು.  ನಾನು ಶುಕ್ರವಾರ ಮನೆಯಲ್ಲಿದ್ದಾಗ ಮನೆಗೆ ಬರುವವರಿಗೆ ಆಹಾರವನ್ನು ನೀಡಲು ಅಥವಾ ಬಡವರು ನನ್ನನ್ನು ಕೇಳಿದಾಗ ನೀಡಲು ಈ ಸಂಖ್ಯೆ ಸಾಕಾಗುವುದಿಲ್ಲ. ಮುತಅಲ್ಲಿಮರು, ಅನಾಥರು ಮತ್ತು ಇತರ ಧಾರ್ಮಿಕ ಚಟುವಟಿಕೆಗಳಿಗಾಗಿ ನಾನು ಸಾಕಷ್ಟು ದೇಣಿಗೆ ಪಡೆದಿದ್ದೇನೆ. ಆದರೆ ಇಲ್ಲಿಯವರೆಗೆ ನನ್ನ ಅಗತ್ಯಗಳಿಗಾಗಿ ನಾನು ಸಂಗ್ರಹಿಸಿದ ದೇಣಿಗೆಯಿಂದ ಐದು ಪೈಸೆ ಕ...

ತಾಜುಲ್ ಉಲಮಾ ಅಸ್ಸಯ್ಯಿದ್ ಅಬ್ದರ‍್ರಹ್ಮಾನ್ ಅಲ್ ಬುಖಾರಿ (ಖ.ಸಿ) ರವರ ಸಂಕ್ಷಿಪ್ತ ವ್ಯಕ್ತಿ ಪರಿಚಯ

ತಾಜುಲ್ ಉಲಮಾ ಅಸ್ಸಯ್ಯಿದ್ ಅಬ್ದರ‍್ರಹ್ಮಾನ್ ಅಲ್ ಬುಖಾರಿ (ಖ.ಸಿ) ರವರ ಸಂಕ್ಷಿಪ್ತ ವ್ಯಕ್ತಿ ಪರಿಚಯ ಪೂರ್ಣ ನಾಮ : ಅಸಯ್ಯದ್ ಅಬ್ದುರಹ್ಮಾನ್ ಕುಂಙಿಕ್ಕೋಯ ತಂಙಳ್ ಅಲ್ ಬುಖಾರಿ(ನ.ಮ.) ಉಳ್ಳಾಲ. ಗೌರವ ನಾಮ:  ತಾಜುಲ್ ಉಲಮಾ (ವಿದ್ವಾಂಸರ ಕಿರೀಟ). ಜನನ:  ಹಿಜರಿ 1341 ರಬೀಉಲ್ ಅವ್ವಲ್ 25 ಶುಕ್ರವಾರ. ಜನನ ಸ್ಥಳ:  ಕೇರಳದ ಫರೋಖ್ ಸಮೀಪದ ಕರುವನ್ ತುರುತ್ತಿ ಮನೆತನ: ಪ್ರತಿಷ್ಠಿತ ಬುಖಾರಿ ಸಾದಾತ್ ಪರಂಪರೆ. ತಂದೆ: ಸಯ್ಯಿದ್ ಅಬೂಬಕರ್ ಚೆರುಕುಂಞಿ ಕೋಯ ತಂಙಳ್ ಅಲ್ ಬುಖಾರಿ. ತಾಯಿ : ಸಯ್ಯದತ್ ಹಲೀಮಾ ಕುಂಞ ಬೀವಿ. (ವಾಝಕ್ಕಾಡ್ ಕೊನ್ನಾರ ಸಾದಾತ್ತುಗಳಲ್ಲಿ ಪ್ರಮುಖರಾಗಿದ್ದ ಅಹ್ಮದ್ ಕುಂಞುಳ್ಳ ತಂಜಲ್ ಬುಖಾರಿಯವರ ಪುತ್ರ ಸಯ್ಯದ್ ಅಬ್ದುರಹ್ಮಾನ್ನ್‌ ಅಲ್ ಬುಖಾರಿಯವರ ಸುಪುತ್ರಿ) ಸಹೋದರರು : ಸಯ್ಯದ್ ಇಂಬಿಚ್ಚಿಕೋಯ ಅಲ್ ಬುಖಾರಿ ಪ್ರಾಥಮಿಕ ಶಿಕ್ಷಣ : ಕರುವನ್ ತುರುತ್ತಿಯ ಪುತ್ತನ್‌ ವೀಟ್ಟಲ್ ಮುಹಮ್ಮದ್ ಮುಸ್ಲಿಯಾರ್ (ಖರ್‌ಆನ್ ಹಾಗೂ ಪ್ರಾಥಮಿಕ ದರ್ಸ್ ಗ್ರಂಥಗಳ ಅಧ್ಯಯನ), ಉನ್ನತ ವಾಸಂಗ : ತಮಿಳುನಾಡಿನ ವೆಲ್ಲೂರು ಬಾಖಿಯ್ತಾತುಸ್ವಾಲಿಹಾತ್ ಅರಬಿಕ್ ಕಾಲೇಜು. ಹುದ್ದೆ: ಉಳ್ಳಾಲ ಕಂಝುಲ್ ಉಲೂಮ್ ದರ್ಸ್‌ನಲ್ಲಿ ಮುದರ್ರಿಸ್ (1951ರಿಂದ 1978 ವರೆಗೆ) ಸಯ್ಯಿದ್ ಮದನಿ ಅರಬಿಕ್ ಕಾಲೇಜು ಪ್ರಿನ್ಸಿಪಾಲ್ (1978ರಿಂದ 2014ಫೆಬ್ರವರಿ 1ರ ವರೆಗೆ) ಸಾಂಘಿಕ ನೇತೃತ್ವ: 1956 ಸೆಪ್ಟಂಬರ್ 20ರಂದು ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ...

ಹೊ, ಅಂದೊಮ್ಮೆ ನನ್ನ ಜೀವನದಲ್ಲಿ ಮರೆಯಲಾಗದ ದಿನವಾಗಿತ್ತದು

 ಹೊ, ಅಂದೊಮ್ಮೆ ನನ್ನ ಜೀವನದಲ್ಲಿ ಮರೆಯಲಾಗದ ದಿನವಾಗಿತ್ತದು Author - Asim Ullal ಇನ್ನು ಮಹಾನರ ಮರಣ ವಾರ್ತೆ ಕೇಳಿ ಕಾರಿನಲ್ಲಿ ಹೊರಟ ನಮ್ಮ ಪರಿಸ್ಥಿತಿ ಹೇಳಿ ತೀರದು, ಇಡೀ ಸುನ್ನೀ ಸಮೂಹವೇ ಕಣ್ಣೀರ ಕಡಲಾಗಿತ್ತದು. ಒಂದು ಕಡೆ ಎಟ್ಟಿಕ್ಕುಳಂ ಸಮುದ್ರದ ಅಲೆಗಳು , ಮಗದೊಂದೆಡೆ ಜನಸ್ತೋಮವು ಪರಸ್ಪರ ಒಂದಾದ ಅನುಭವ. ರಾತ್ರಿ 10ಗಂಟೆಗೆ ಮಹಾನರನ್ನು ಅಂತಿಮವಾಗಿ ಒಂದು ನೋಟ ನೋಡಬೇಕೆಂಬ ಮಹದಾಸೆಯಿಂದ ಸರದಿ ಸಾಲಿನಲ್ಲಿ ನಿಂತ ನಾವು, ಸುಬ್ಹಾನಲ್ಲಾಹ್ ಬೆಳಿಗ್ಗೆ ಸುಬಹಿ ಬಾಂಗ್ ಸಮಯ ಮಹಾನರ ಸಾನಿಧ್ಯಕ್ಕೆ ತಲುಪಿ ಕೊನೆಯ ಬಾರಿ ಹತ್ತಿರದಿಂದ ಮುಖಪ್ರಸನ್ನ ವದನವನ್ನೊಮ್ಮೆ ನೋಡಿದೆನು.         7ವರ್ಷದ ಮೊದಲು, ಪ್ರಥಮ ಪಿಯುಸಿ ಶೈಕ್ಷಣಿಕ ವರ್ಷದ ಅಧ್ಯಯನದ ಸಮಯ. ಮಧ್ಯಾಹ್ನ ಗರಬಡಿದಂತೆ ಆ ವಾರ್ತೆ ಕಿವಿಗಪ್ಪಳಿಸಿತು. ಜೀವನದಲ್ಲಿ ಕೇಳಲು ಇಚ್ಚಿಸದ ವಾರ್ತೆಯಾದರೂ ಅಲ್ಲಾಹನ ತೀರ್ಮಾನ ಬಂದೆರಗಿತ್ತು. ಅದೇ ತಾಜುಲ್ ಉಲಮಾ ವಫಾತ್ ಆದ ವಾರ್ತೆ. ಇನ್ನಾಲಿಲ್ಲಾಹಿ ವ ಇನ್ನಾ ಇಲಹಿ ರಾಜಿಹೂನ್.       ತಾಜುಲ್ ಉಲಮಾರನ್ನು ನೇರವಾಗಿ ದೂರದಿಂದ ಕಂಡಿದ್ದೇನೆಯಾದರು ಸಾಮಿಪ್ಯವನ್ನು ತಲುಪಿ ಭೇಟಿಯಾದ ಅನುಭವ ಅದಕ್ಕಿಂತ ಮೊದಲು ನೆನಪಿಲ್ಲ, ಕಾರಣ ಆ ಮಹಾ ವ್ಯಕ್ತಿತ್ವದ ಮಾತುಗಳು ವೀಡಿಯೋಗಳ ಮೂಲಕವೇ ನೋಡುವಾಗ ಮೈ ಜುಮ್ಮೆನಿಸುತ್ತಿತ್ತು. ಮುಂದೆ ನಿಂತುಕೊಳ್ಳುವ ಧೈರ್ಯ ಇರಲಿಲ್ಲ. ಆದರೆ ಸಣ್ಣ ಪ್ರಾಯವಿರುವಾಗ ಮಹಾ...

ಸೌರ್ ಗುಹೆ

 ಸೌರ್ ಗುಹೆ (ಘಾರ್ ಸೌರ್): ಮಕ್ಕಾದಲ್ಲಿ ಕುರೈಶಿಗಳ ಉಪಟಳ ವಿಪರೀತಗೊಂಡಾಗ ಅಲ್ಲಾಹನ ಆಜ್ಞೆಯಂತೆ ಪ್ರವಾದಿ ​ﷺ​ ರವರು ಮದೀನಾಕ್ಕೆ ಹಿಜ್'ರಾ ಹೋಗಲು ಸನ್ನದ್ಧರಾದರು.ಜೊತೆಯಲ್ಲಿ ಅಬೂಬಕ್ಕರ್ ರದಿಯಲ್ಲಾಹು ಅನ್ಹು ರವರೂ ಇದ್ದಾರೆ. ಸಾಗುತ್ತಾ ಹೋದಂತೆ ದಾರಿ ಮಧ್ಯೆ ಅವರಿಗೆ ​ಸೌರ್​ ಗುಹೆ ಸಿಗುತ್ತದೆ. ತಂಗಲು ಇದೇ ಸೂಕ್ತ ಸ್ಥಳವೆಂದು ತೀರ್ಮಾನಿಸಿದ ಅವರು ಆ ಗುಹೆಯ ಒಳ ಪ್ರವೇಶಿಸಲು ಅಣಿಯಾದರು.ಆಗ ಅಬೂಬಕ್ಕರ್ ರದಿಯಲ್ಲಾಹು ಅನ್ಹು ರವರು ತಡೆಯುತ್ತಾ, "ಪ್ರವಾದಿ ​ﷺ​ ರವರೇ, ಮೊದಲು ನಾನು ಒಳಗೆ ಪ್ರವೇಶಿಸಿ ಏನಾದರೂ ವಿಷಜಂತುಗಳು ಇದೆಯಾ ಎಂದು ನೋಡಿ ಬರುತ್ತೇನೆ" ಎಂದರು. ಒಳಗೆ ಪ್ರವೇಶಿಸಿದ ಅಬೂಬಕ್ಕರ್ ರದಿಯಲ್ಲಾಹು ಅನ್ಹು ರವರು ಅಲ್ಲಿದ್ದ ಕಸಕಡ್ಡಿಗಳನ್ನು ತೆಗೆದು ಶುಚಿಗೊಳಿಸಿದರು.ತರುವಾಯ ಪ್ರವಾದಿ ​ﷺ​ ರವರನ್ನು ಒಳಗೆ ಕರೆದರು. ಗುಹೆಯೊಳಗೆ ಹಲವು ದ್ವಾರಗಳಿದ್ದವು.ಅವುಗಳನ್ನು ಅಬೂಬಕ್ಕರ್ ರದಿಯಲ್ಲಾಹು ಅನ್ಹುರವರು ವಸ್ತ್ರದ ತುಂಡುಗಳಿಂದಲೂ ಇತರ ವಸ್ತ್ರಗಳಿಂದಲೂ ಮುಚ್ಚಿದರು.ಇದೀಗ ಒಂದು ದ್ವಾರ ಮಾತ್ರವೇ ಬಾಕಿ ಉಳಿದಿತ್ತು.ಸಿದ್ದೀಕ್ ರದಿಯಲ್ಲಾಹು ಅನ್ಹುರವರು ಅದನ್ನು ತಮ್ಮ ಕಾಲಿನಿಂದ ಮುಚ್ಚಿದರು.ಅದೇ ದ್ವಾರದಲ್ಲಿ ವಿಷವೇರಿದ ಸರ್ಪವೊಂದಿತ್ತು.ಅದು ಸಿದ್ದೀಕ್ ರದಿಯಲ್ಲಾಹು ಅನ್ಹುರವರ ಕಾಲಿಗೆ ಕಚ್ಚಿಬಿಟ್ಟಿತು.ಅಸಹನೀಯ ನೋವು! ಸಿದ್ದೀಕ್ ರದಿಯಲ್ಲಾಹು ಅನ್ಹುರವರು ನೋವು ತಾಳಲಾರದೆ ಕಣ್ಣೀರಿಟ್ಟರು. ಅವರ ಮಡಿಲಲ್ಲಿ ...

ಅರಫಾ ದಿವಸ ರಾತ್ರಿ ಹಗಲು ಈ ದ್ಸಿಕ್ರ್ ನಿಂದ ಧನ್ಯಗೊಳಿಸಿರಿ..

ಅರಫಾ ದಿವಸ ರಾತ್ರಿ ಹಗಲು ಈ ದ್ಸಿಕ್ರ್ ನಿಂದ ಧನ್ಯಗೊಳಿಸಿರಿ.. *1)* 100 ಸಲ ಹೇಳಿರಿ  لاَ إِلَهَ إِلاَّ اللَّهُ وَحْدَهُ لاَ شَرِيكَ لَهُ لَهُ الْمُلْكُ وَلَهُ الْحَمْدُ يحي و يميت وَهُوَ عَلَى كُلِّ شَيْءٍ قَدِيرٌ. *2)* ಸೂರತುಲ್ ಇಖ್ಲಾಸ್ 100 ಸಲ ಹೇಳಿರಿ:  قُلْ هُوَ اللَّهُ أَحَدٌ,اللَّهُ الصَّمَدُ,لَمْ يَلِدْ وَلَمْ يُولَدْ,وَلَمْ يَكُنْ لَهُ كُفُوًا أَحَدٌ *3)* ಇಬ್ರಾಹಿಮಿಯ್ಯ ಸ್ವಲಾತ್ 100 ಸಲ ಹೇಳಿರಿ:  أَللّٰهُمَّ صَلِّ عَلَي سَيِّدِنَا مُحَمَّدٍ وَعَلَي آلِ سَيِّدِنَا مُحَمَّدٍ كَمَا صَلَّيْتَ عَلَي إِبْرَاهِيمَ وَعَلَي آلِ إِبْرَاهِيمَ وَبَارِكْ عَلَي سَيِّدِنَا مُحَمَّدٍ وَعَلَي آلِ سَيِّدِنَا مُحَمَّدٍ كَمَا بَارَكْتَ عَلَي إِبْرَاهِيمَ وَعَلَي آلِ إِبْرَاهِيمَ فِي الْعَالَمِينَ إِنَّكَ حَمِيدٌ مَجِيدٌ *4)* ಸೂರತುಲ್ ಹಶ್ರ್ ಓದಿರಿ *5)* ಸಯ್ಯದುನಾ ಖಿಳ್ರ್ ನೆಬಿ ಅಲೈಹಿ ಸಲಾಮ್ ರ ಪ್ರಾರ್ಥನೆ 100 ಸಲ ಹೇಳಿರಿ:  بِسْمِ اللَّهِ مَا شَاءَ اللَّهُ وَ لَا قُوَّةَ إِلَّا بِاَللَّهِ ,مَا شَاءَ اللَّهُ كُلُّ نِعْمَةٍ مِنْ اللَّهِ, مَا شَاءَ اللَّهُ الْخَيْرَ كُلَّهُ بِيَدِ اللَّهِ ,مَا شَاءَ اللَّهُ لَا يَصْرِ...

ಹಜ್ ಮತ್ತು ಈದುಲ್ ಅಳ್‌ಹಾ ಆಚರಿಸುವ ಅರ್ಹತೆ ಇರುವುದು ಸುನ್ನೀಗಳಿಗೆ ಮಾತ್ರ.

ಹಜ್  ಮತ್ತು ಈದುಲ್ ಅಳ್‌ಹಾ ಆಚರಿಸುವ ಅರ್ಹತೆ ಇರುವುದು  ಸುನ್ನೀಗಳಿಗೆ ಮಾತ್ರ.  ▶ ಅಬೂ ರಾಝೀ ಬಕ್ರೀದ್ ಮತ್ತು ಹಜ್ ಗಳಲ್ಲಿ ಸುನ್ನೀಗಳದ್ದೇ ದರ್ಬಾರ್. ಯಾಕೆ ಗೊತ್ತಾ ? ಮಹಾತ್ಮರ ಅನುಸ್ಮರಣೆ ಅದು ಇಸ್ಲಾಮೀ ಸಂಸ್ಕೃತಿಯ ಭಾಗ. ಖುರ್‌ಆನ್, ಹದೀಸ್ ಅದನ್ನೇ ಪ್ರತಿಪಾದಿಸಿದೆ. ಖುರ್‌ಆನ್ ನಲ್ಲಿ ಅನೇಕ ಕಡೆ ಮಹಾತ್ಮರಾದ ಅಂಬಿಯ - ಔಲಿಯಾಗಳ ಸ್ಮರಣೆ ಮಾಡಿದೆ. ಪ್ರವಾದಿ ﷺ ರವರು ಕೂಡ ಮಹಾತ್ಮರನ್ನು ಅನುಸರಿಸಲು ಅಜ್ಞಾಪಿಸಿದ್ದಾರೆ. ಇಸ್ಲಾಮಿನ ಅತೀ ದೊಡ್ಡ ಹಬ್ಬ ಈದುಲ್ ಅಳ್‌ಹಾ, ಇಸ್ಲಾಮಿನ ಅತೀ ದೊಡ್ಡ ಮಹಾ ಸಂಗಮ ಹಜ್  ಈ ಎರಡೂ ಕೂಡ ಮಹಾತ್ಮರ ಅನುಸ್ಮರಣೆಯ ಸಂಕೇತಗಳು. ಹಜ್ ಮತ್ತು ಬಕ್ರೀದ್ ನಲ್ಲಿ ನಡೆಯುವ ಪ್ರಮುಖ ಕಾರ್ಯಕ್ರಮಗಳು ಬಲಿದಾನ ಇದು ಅಲ್ಲಾಹನಿಗಾಗಿ ತನ್ನ ಮಗನನ್ನು ಬಲಿ ನೀಡಲು ಸಿದ್ದರಾದ ಪ್ರವಾದಿ ಇಬ್ರಾಹಿಂ ( ಅ ) ರವರ ಸ್ಮರಣೆಗಾಗಿ ನಡೆಯುವ ಕ್ರಿಯೆ. ಹಜ್ ಸಂದರ್ಭ ಸ್ವಫಾ ಮರ್ವಾದ ನಡುವೆ ಓಡಾಡುವುದು.. ಇದು ಹಾಜಿರಾ ಬೀವಿಯವರು ಮಗನ ಬಾಯರಿಕೆ ನೀಗಿಸಲು ಓಡಾಡಿದ ಸ್ಮರಣೆ. ಝಂ ಝಂ.. ಇದು ಇಸ್ಮಾಯಿಲ್ ( ಅ ) ಮಗುವಾಗಿದ್ದಾಗ ಕಾಲಿನ ಬಲಿ ಹೊರ ಚಿಮ್ಮಿದ ಬರಕತ್‌ನ ನೀರು. ಮಖಾಂ ಇಬ್ರಾಹಿಂ. ಇಬ್ರಾಹಿಂ ( ಅ ) ರವರ ಕಾಲಿನ ಗುರುತಿರುವ ಸ್ಥಳ. ಅದನ್ನು ಅಲ್ಲಾಹು ಗೌರವಿಸಿ ಅದಕ್ಕೆ ಬರಕತ್ ನೀಡಿದ . ಅದನ್ನು ಮಖಾಂ ಇಬ್ರಾಹಿಂ ಎಂದು ಖುರ್‌ಆನ್ ಕರೆದಿದೆ. ಅದರ ಹಿಂದೆ ನಮಾಝ್ ಮಾಡಲು ಸುನ್ನತ್ತಿದೆ. ಒಬ್ಬ ಪ್ರವಾದ...

ಮರೆಯಲಾಗದ ಅಪಾರ ಪಾಂಡಿತ್ಯದ ಒಡೆಯ ಶೈಖುನಾ ನೆಲ್ಲಿಕುತ್ತ್ ಉಸ್ತಾದ್

ವಿದ್ಟಾಂಸನ ಮರಣ ವಿಶ್ಟದ ಮರಣ  ಎಂಬ ನುಡಿಯು ಅನುಭಕ್ಕೆ ಬಂದ ದಿನವಾಗಿತ್ತು ಶೈಖುನಾ *ಶೈಖುಲ್ ಹದೀಸ್ ನೆಲ್ಲಿಕುತ್ತುಸ್ತಾದ್* ವಫಾತಾದ ದಿನ.   ಹಿರಿಯ ವಿದ್ಟಾಂಸ ˌಕೇರಳ ಕಂಡ ವಿದ್ಯೆಯ ಭಂಢಾರˌ   ಕರ್ಮ ಶಾಸ್ತ್ರ ˌಗೋಳ ಶಾಸ್ತ್ರ ಭೂಮಿ ಶಾಸ್ತ್ರ ಮುಂತಾದ ಎಲ್ಲಾ ವಿಷಯಗಳಲ್ಲಿ ಆಳವಾದ ಜ್ಞಾನವಿರುವ ಶೈಖುನಾ  ಉಸ್ತಾದರು ನಮ್ಮನ್ನಗಲಿ ಹತ್ತು ವರ್ಷವಾದರೂ ನೆನಪಿನಂಗಳದಲ್ಲಿ ಮಾಸದೆ ನೆಲೆಯೂರಿದ್ದಾರೆ . ಉಸ್ತಾದೆಂದರೆ ಎಲ್ಲರಿಗೂ ಅಚ್ಚುಮೆಚ್ಚು ಕಾರಣ ಯಾವ ವಿಷಯದಲ್ಲಿ ತರಗತಿ ಮಂಡಿಸಿದರೂ ಸವಿಸ್ತಾರವಾಗಿ ವಿವರಿಸಿ ಕೊಡುವುದರೊಂದಿಗೆ ಕೇಳುವ ಎಲ್ಲಾ ಪ್ರಶ್ನೆಗಳಿಗೆ ದಿಟ್ಟವಾದ ಉತ್ತರ ಕೊಡುತಿದ್ದರು. ಸಂಶಯ ನಿವಾರಣೆಯಾಗುವವರೆಗೆ ಉತ್ತರಿಸುತಿದ್ದರು. *ಜಾಮಿಅ* *ಮರ್ಕಝುಸ್ಸಖಾಫತಿಸ್ಸುನ್ನಿಯ್ಯಾ* ದಲ್ಲಿ ಶೈಖುನಾ ಉಸ್ತಾದರ ಬಳಿ ಎರಡು ವರ್ಷ ಕಲಿಯಳು ಭಾಗ್ಯ ಲಭಿಸಿದ ನನಗೆ ಉಸ್ತಾದರ ಅರಿವಿನ ಬಗ್ಗೆ ಹೇಳಲು ಅರ್ಹತೆಯಿಲ್ಲವೆಂದು ಚೆನ್ನಾಗಿ ತಿಳಿದಿದೆ ಆದರೂ ಶೈಖುನಾರ ಪಾಂಡಿತ್ಯವನ್ನು ವಿದ್ವಾಂಸ ದಿಗ್ಗಜರೇ ಅಂಗೀಕರರಿಸುತ್ತಾರೆ ಎಂಬುದನ್ನು ಮನವರಿಕೆ ಮಾಡಿದ್ದೇನೆ. ಉಸ್ತಾದರ ಮಾತೆಂದರೆ  ಮುತ್ತಿನಂತಹ ಮಾತು ಆ ಮಾತು ಕೇಳಿದರೆ  ಎಂತಹ ನೀಚರೂ ಒಳಿತಿನೆಡೆಗೆ ಬಗ್ಗತಿದ್ದರು  ಅವರ ಮಾತಿಗೆ ಪೈಪೋಟಿ ಮಾಡಲು ಹೊರಟರೆ ಅವನು ಸೋತು ಸುಣ್ಣವಾಗುವನೆಂಬುದರಲ್ಲಿ ಸಂದೇಹವಿಲ್ಲ.  ಕೇಳುಗರ ಅರ್ಹತೆಗೆ ತಕ್ಕಂತೆ ಮ...

ಜೈಲೊಳಗಿನ ಪಾದ್ರಿ ಪ್ರೇಮಿಗಳ ಆರಾಧಕನಾದ ಕಥೆ

 ಜೈಲೊಳಗಿನ ಪಾದ್ರಿ ಪ್ರೇಮಿಗಳ ಆರಾಧಕನಾದ ಕಥೆ.. ------------------------ ಟಿ.ಎಂ ಅನ್ಸಾರ್ ಸ‌ಅದಿ ತಂಬಿನಮಕ್ಕಿ ಅದು ಕ್ರಿ.ಶ ಮೂರನೇ ಶತಮಾನ. ಆ ಸಮಯಕ್ಕೆ ರೋಂ ಆಳುತ್ತಿದ್ದವ ಕ್ಲೋಡಿಯಸ್ ಚಕ್ರವರ್ತಿ. ಆತನೊಂದು ಅಸಂಬದ್ದ ತೀರ್ಮಾನಕ್ಕೆ ಬರುತ್ತಾನೆ. ರೋಂನಾದ್ಯಂತ ಹಠಾತ್ತನೆ ವಿವಾಹಕ್ಕೆ ನಿಶೇಧವನ್ನು ಹೇರುತ್ತಾನೆ.   ವಿವಾಹವಾದ ತರುಣರಿಗೆ ಮತ್ತು ಯೋಧರಿಗೆ ಸೇನೆಯಲ್ಲಿ ನಿಷ್ಠೆಯಿಂದ ಸೇವೆಗೈಯ್ಯಲು ಸಾಧ್ಯವಿಲ್ಲ, ಸಂಸಾರದಿಂದಾಗಿ ಅವರ ದೈಹಿಕ ಚೈತನ್ಯ ಕುಂದಿ ಯುದ್ದದೊಂದಿಗೆ ವಿರಕ್ತಿ ಮೂಡಲು ಕಾಣವಾಗಬಹುದು ಎಂದೆಲ್ಲಾ ದಾಂಪತ್ಯ ಬದುಕಿನ ಬಗ್ಗೆ ತಕರಾರು ಎತ್ತುತ್ತಾನೆ. ಕೆಥೋಲಿಕ್ ಬಿಷಪ್ ಆಗಿದ್ದ ಸೈಂಟ್ ವಾಲಂಟೈನ್ ಆ ಸೇನೆಯಲ್ಲಿದ್ದ. ರಾಜನ ಈ ನಿರ್ಧಾರದಿಂದ ಬೇಸತ್ತ ಅಷ್ಟೂ ತರುಣರ ಮನೀಷೆ ಮತ್ತು ಲೈಂಗಿಕ ಅಭಿಷ್ಟೆಯನ್ನು ಅರ್ಥೈಸಿದ್ದ ಸೈಂಟ್ ವಾಲಂಟೈನ್, ಪರಸ್ಪರ ಪ್ರೀತಿಸುತ್ತಿದ್ದವರನ್ನು ರಹಸ್ಯವಾಗಿ ವಿವಾಹ ಮಾಡಿಕೊಡಲಾರಂಭಿಸಿದ. ಸುದ್ದಿ ಚಕ್ರವರ್ತಿಗೆ ತಿಳಿಯಿತು. ವಾಲಂಟೈನನ್ನು ಜೈಲಿಗಟ್ಟಲಾಯಿತು. ಹಾಗೆ ಜೈಲು ಸೇರಿದ ವಾಲಂಟೈನ್ ಜೈಲು ಸಿಬ್ಬಂದಿಯ ಅಂಧೆಯಾದ ಪುತ್ರಿಯ ಸೌಂದರ್ಯಕ್ಕೆ ಪರವಶಗೊಂಡು ಪ್ರೇಮದ ಪಾಶಕ್ಕೆ ಬೀಳುತ್ತಾನೆ. ಪಾರಮ್ಯಕ್ಕೆ ತಲುಪಿದ ಪ್ರೇಮದ ತೀವ್ರತೆಯಿಂದಾಗಿ ಆಕೆಯ ಧೃಷ್ಟಿಯೇ ಮರಳಿತು ಎನ್ನುತ್ತದೆ ಚರಿತ್ರೆ. ಕಾರಾಗೃಹದಲ್ಲೂ ಬಿಡದ ವಾಲಂಟೈನನ ಪ್ರೇಮ ಕುಚೇಷ್ಟೆ ಚಕ್ರವರ್ತಿಯನ್ನು ಮತ್ತಷ್ಟು ...

ಖುನೂತುನ್ನಾಝಿಲಃ

قنوت النازلة ▫▪▫▪▫▪▫▪▫▪▫ *اللهم اهدنا في من هدیت * وعافنا في من عافیت * وتولنا في من تولیت * وبارك لنا فیما أعطیت * وقنا شر ما قضیت * فإنك تقضي ولایقضی علیك * وإنه لایذل من والیت * ولا یعز من عادیت * تبارکت ربنا وتعالیت * فلك الحمد علی ما قضیت * نستغفرك ونتوب إلیك* *اللهم ادفع عنا وعن أهل قریتنا هذه وعن أهل جمیع قری المسلمین * الغلاء والبلاء * والطاعون والوباء * الجدب والقحط والسیوف المختلفة * والشداید والمحن والفتن * ماظهر  منها ومابطن ** *اللهم احفظنا وحمیع المسلمین * من الأسقام والأٰلَام * والأمراض المخوفة والمعضلة والمعدیة * ومن الحمی والجدري والسرطان ** *اللهم إنا نعوذ بك من جهد البلاء * ودرك الشقاء * وسوء القضاء * وشماتة الأعداء **  *اللهم إنا نعوذ بك من البرص والجذام * والجنون ومن سیٸ الأسقام ** *وصلی الله علی خیر خلقه سیدنا محمد النبي الأمي وعلی اٰله وصحبه وسلَّم* *🖋الجمع والترتیب : محمد سالم السعدي الأفضلي*

ಝುಲ್-ಹಿಜ್ಜ ತಿಂಗಳಲ್ಲಿ ಕೆಲವು ಪ್ರತ್ಯೇಕ ಆರಾಧನೆಗಳು

 ಝುಲ್-ಹಿಜ್ಜ ತಿಂಗಳಲ್ಲಿ ಕೆಲವು ಪ್ರತ್ಯೇಕ ಆರಾಧನೆಗಳು ( *1*) 1ರಿಂದ 9 ರ ತನಕ ಉಪವಾಸ ಸುನ್ನತ್, 8 ರಂದು ಪ್ರತ್ಯೇಕ ಸುನ್ನತ್, ಒಂಬತ್ತರಂದು ಉಪವಾಸ ಶಕ್ತಿಯುತ ಸುನ್ನತ್. ( *2*)1 ರಿಂದ 10 ರ ತನಕ  ಆಡು,ಹಸು,ಒಂಟೆ ಇವುಗಳನ್ನು ಕಾಣುವಾಗ ಇವುಗಳ ಶಬ್ಧವನ್ನು ಕೇಳುವಾಗ ತಕ್ಬೀರ್(الله اكبر) ಹೇಳುವುದು. ( *3*)1 ರಿಂದ 10 ರ ತನಕ ಸೂರತುಲ್ ಫಜ್ರನ್ನು ಓದುವುದು. ( *4*)ಒಂಬತ್ತರ ಸುಬ್ಹಿನಿಂದ 13 ರ ಅಸ್ರ್-ನ ಕೊನೆ ತನಕ ಎಲ್ಲಾ ಫರ್ಳ್ ಹಾಗೂ ಸುನ್ನತ್ ನಮಾಜುಗಳ ಬಳಿಕ ತಕ್ಬೀರ್ ಹೇಳುವುದು. ( *5*)ಹತ್ತರ ಮಗ್ರಿಬಿನಿಂದ ಪೆರ್ನಾಳ್ ನಮಾಜಿಗೆ ಪ್ರವೇಶಿಸುವ ತನಕ ಅನುವದನೀಯವಾದ ಎಲ್ಲಾ ಸ್ಥಳ, ಸಂದರ್ಭಗಳಲ್ಲಿ ತಕ್ಬೀರ್ಗಳನ್ನು ಹೇಳುತ್ತಾ ಇರುವುದು. ( *6*)ಅರಫಾ ಹಾಗೂ ಪೆರ್ನಾಳಿನ ರಾತ್ರಿಯನ್ನು ಆರಾಧನೆಗಳಿಂದ ಜೀವಂತಗೊಳಿಸುವುದು ( *7*) ಪೆರ್ನಾಳಿನ ದಿನ ಈದ್ ನಮಾಜಿಗೆ ಮುಂಚಿತವಾಗಿ*  لااله الا  الله وحده لا شريك له له الملك وله الحمد وهو حي لا يموت بيده الخير وهو علي كل شيء قدير ಎಂಬ ಝಿಕ್ರನ್ನು 400 ಬಾರಿ ಹೇಳಿ ಮುಗಿಸುವುದು. ( *ನಿಹಾಯತುಲ್-ಅಮಲ್*) ( *8*)ಪೆರ್ನಾಳಿನ ಸುನ್ನತ್ ಸ್ನಾನವನ್ನು ನಿರ್ವಹಿಸುವುದು (9)ಖಾಲಿ ಹೊಟ್ಟೆಯಲ್ಲಿ ಪೆರ್ನಾಳ್ ನಮಾಜಿಗೆ ಹೊರಡುವುದು. (10)ಉತ್ತಮ ವಾದ ವಸ್ತ್ರ ಧರಿಸುವುದು.ಸುಗಂಧ ಹಚ್ಚುವುದು. (11)ಪೆರ್ನಾಳ್ ನಮಾಜು ಮಾಡುವುದು, ಜಮಾಅತಾಗಿ ನಿರ...

ಮಸ್ಜಿದುಲ್ ಹರಾಮಿನಿಂದ ಪರಾರಿಯಾದ ಸಲಫಿ

 ಮಸ್ಜಿದುಲ್ ಹರಾಮಿನಿಂದ ಪರಾರಿಯಾದ ಸಲಫಿ..‼ ಯೂಸುಫ್ ನಬ್‌ಹಾನಿ ಕುಕ್ಕಾಜೆ ವೀಡಿಯೋ ನೋಡಲು 2 ಬಾರಿ ಒತ್ತಿರಿ. ▪️  ಖ್ಯಾತ ವಿದ್ವಾಂಸ ಮತ್ತು ಸೂಫಿವರ್ಯ ಶೈಖ್ ಇಮಾದುದ್ದೀನ್ ಜಮೀಲ್ ಹಲೀಮ್‌ರವರು (ಲೆಬನಾನ್) ನಡೆಸಿದ ಒಂದು ಅರಬಿ ಪ್ರಭಾಷಣದ ನೇರ ತರ್ಜುಮೆ ಇದು.     ▪️ ನನಗೆ ಮಕ್ಕಾ ನಿವಾಸಿಯಾದ ನನ್ನ ಮಿತ್ರರೊಬ್ಬರು ಹೇಳಿದ ಒಂದು ಸತ್ಯ ಕತೆಯನ್ನು ನಾನು ನಿಮ್ಮ ಮುಂದಿಡುತ್ತೇನೆ. ಆ ಘಟನೆ ಈ ರೀತಿಯಾಗಿದೆ. "ನಾವು ಕೆಲವು ಮಂದಿ ಒಮ್ಮೆ ಮಕ್ಕಾದ ಮಸ್ಜಿದುಲ್ ಹರಾಮಿನಲ್ಲಿರುವಾಗ ಮಸೀದಿಯೊಳಗೆ ಅಲ್ಲಲ್ಲಿ ಹಲವು ಉಲಮಾಗಳ, ವಿದ್ವಾಂಸರ ವಿಭಿನ್ನ ಇಸ್ಲಾಮೀ ತರಗತಿಗಳು ನಡೆಯುತ್ತಿತ್ತು. ನಾವು ನಮ್ಮ ಗುರುವರ್ಯರಾದ ಸುನ್ನತ್ ಜಮಾಅತಿನ ನೇತಾರ ಶೈಖ್ ಹಸನುಲ್ ಮಶ್ಶಾತ್ ರಹಿಮಹುಲ್ಲಾಹ್ ರವರ ಮಜಿಲಿಸಿನಲ್ಲಿ ಕುಳಿತು ಅವರ ಅರ್ಥವತ್ತಾದ ತರಗತಿಯನ್ನು ಬಹಳ ಕುತೂಹಲದಿಂದ ಆಲಿಸುತ್ತಿದ್ದೆವು. ಮಸ್ಜಿದುಲ್ ಹರಾಮಿನ ಮುದರ್ರಿಸ್ ಮತ್ತು ಮಕ್ಕಾದ ಅಂದಿನ ಖಾಝಿಯಾಗಿದ್ದ ಅವರಿಗೆ, ಸಮಾನರಾದ ಬೇರೊಬ್ಬ ವಿದ್ವಾಂಸ ಅಂದು ಇರಲಿಲ್ಲ. ಅವರ ತರಗತಿಯೆಂದರೆ ಬಹಳ ಆಕರ್ಷಣೀಯವಾಗಿತ್ತು. ನೂತನವಾದಿಗಳ ಸುಳ್ಳು ವಾದಗಳನ್ನು ಯಾರನ್ನೂ ಭಯಪಡದೆ ಬಹಳ ಧೈರ್ಯದಿಂದ ಆಧಾರ ಸಹಿತ ಖಂಡಿಸುವವರಾಗಿದ್ದರು.   ▪️ ಅಂತೆಯೇ ಮಸ್ಜಿದುಲ್ ಹರಾಮಿನ ಬೇರೊಂದು ಕಡೆಯಲ್ಲಿ ಬರಕತ್ ಪಡೆಯುವುದನ್ನು ಮತ್ತು ಮಹಾತ್ಮರನ್ನು ಮಧ್ಯವರ್ತಿಯಾಗಿ ದುಆ ಮಾಡುವುದನ್ನು ...

ದಣಿವರಿಯದೆ ದುಡಿದ ಧೀರ ನಾಯಕನ ಯಶೋಗಾಥೆ.. ~ ಅಶ್ರಫ್ ನಾವೂರು, ಕೆ.ಜಿ.ಎನ್ ಮಿತ್ತೂರು

ಶತಮಾನ ಕಂಡ ಶ್ರೇಷ್ಟ ವ್ಯಕ್ತಿತ್ವ, ಜ್ಞಾನ ತರಂಗಗಳನ್ನೆಬ್ಬಿಸಿದ ಸಮುದ್ಧಾರಕ, ಆ ಪಾವನ ಬದುಕೇ ಮಾರ್ಗದರ್ಶಿ, ಆ ಚಿಂತನೆಗಳೇ ನೂರಾರು ವಿದ್ವಾಂಸರ ಹುಟ್ಟು. ಅವರೊಬ್ಬ ಕೇವಲ ವಿದ್ವಾಂಸ ಮಾತ್ರವಲ್ಲ. ಕನ್ನಡ ಮಣ್ಣಿಗೆ ಸಮನ್ವಯ ಶಿಕ್ಷಣ ಪರಿಚಯಿಸಿದ ಶಿಕ್ಷಣ ತಜ್ಞ. ಅನಾಥರ ಪೋಷಕ. ನವ ಚಿಂತನೆಯ ಹರಿಕಾರ. ಸೌಮ್ಯತನದಿಂದ  ಸದ್ದು ಮಾಡಿದ ಗುರು. ವಿನಯದಿಂದಲೇ ವಿಜಯಕ್ಕೇರಿದ ಧೀಮಂತ ಪುರುಷ. ಸಾಮಾನ್ಯನಿಗೂ ಸಾಧ್ಯವಿಲ್ಲದ ಸಾಧನೆಯನ್ನು ಮಾಡಿ ತೋರಿಸಿದ ಯಶಸ್ವೀ ನಾಯಕ. ಹಲವಾರು ಪ್ರಥಮಗಳಿಗೆ ಮುನ್ನುಡಿ ಬರೆದ ಸರದಾರ. ಸುನ್ನೀ ಸಮಾಜದ ಧೀರ ಶಕ್ತಿ. ದಾರುಲ್ ಇರ್ಷಾದ್ ಎಂಬ ಸುಜ್ಞಾನ ಸೌಧದ ಸಾರಥಿ. ಅವರಿಗೆ ಪರ್ಯಾಯ ವ್ಯಕ್ತಿಯಿಲ್ಲ. ಅವರಿಗೆ ಅವರೇ ಸಾಟಿ..!! ಸುನ್ನೀ ಜಗತ್ತನ್ನು ತನ್ನ ಜ್ಞಾನ ಪ್ರಭೆಯಿಂದ ಪ್ರಭರಗೊಳಿಸಿದ ಶತಮಾನದ ಪ್ರಭೆ. ಝೈನುಲ್ ಉಲಮಾರ ಬದುಕಿಗೊಂದು ಅಕ್ಷರದ ಮೆಲುಕು.  ಪಕ್ಕದ ಕೇರಳದಲ್ಲಿ ಬಹುಮುಖ ವಿದ್ಯಾಕೇಂದ್ರಗಳು ತಲೆಯೆತ್ತಿ ಹಲವು ದಶಕಗಳೇ ಕಳೆದರೂ ಕರ್ನಾಟಕದಲ್ಲಿ ಮಾತ್ರ ವಿದ್ಯಾಕೇಂದ್ರಗಳು ಮದ್ರಸಾ ಹಾಗೂ ಪಳ್ಳಿದರ್ಸ್‌ಗೆ ಸೀಮಿತವಾಗಿದ್ದವು. ಗಣನೀಯವಾಗಿ ಹೆಚ್ಚುತ್ತಿರುವ ಲೌಕಿಕ ವ್ಯಾಮೋಹದಿಂದ ಸಾಕಷ್ಟು ವಿದ್ಯಾರ್ಥಿಗಳು ಶಾಲಾ- ಕಾಲೇಜುಗಳನ್ನು ನೆಚ್ಚಿಕೊಂಡು ಧಾರ್ಮಿಕ ಶಿಕ್ಷಣಕ್ಕೆ ಬೆನ್ನು ತೂರಿಸುತ್ತಿದ್ದರು. ಇನ್ನೊಂದೆಡೆ ಧಾರ್ಮಿಕ ಶಿಕ್ಷಣಕ್ಕೆ ಮಾತ್ರ ಒಲವು ತೋರಿ ಲೌಕಿಕ ಜ್ಞಾನ ತೀರಾ ಇಲ್ಲದೆ ನಿರ್ಲಕ್ಷ್ಯಕ್...