Skip to main content

Posts

Showing posts from June, 2023

ಅಲ್ ಅಝ್‌ಹರ್ ಯುನಿವರ್ಸಿಟಿ.

ಇಸ್ಲಾಮಿನ ಪುರಾತನ ವಿದ್ಯಾಲಯಗಳ ಪೈಕಿ ಅತ್ಯಂತ ಪ್ರಸಿದ್ದವೂ, ಜಗತ್ತಿನ ಬೌಧ್ದಿಕ ವಲಯದ ಪಥ ಬದಲಿಸುವಲ್ಲಿ ಹೆಚ್ಚಿನ ಪಾತ್ರ ವಹಿಸಿದ ವಿದ್ಯಾಲಯವೂ ಆಗಿದೆ ಅಲ್ ಅಝ್‌ಹರ್ ಯುನಿವರ್ಸಿಟಿ. ಇದು ಈಜಿಪ್ಟ್‌ನ ಕೈರೋದಲ್ಲಿದೆ. ಫಾತ್ವಿಮೀ ಖಲೀಫಾ ಅಲ್ ಮುಇಸ್ಸ್‌, ಸಿಸಿಲಿಯಾ ಮೂಲದ ಜೌಹರ್ ಎಂಬ ಸೇನಾ ಮೇಧಾವಿಯನ್ನು ಕಳುಹಿಸಿ ಈಜಿಪ್ಟ್ ವಶಪಡಿಸಲು ಆದೇಶಿಸಿದರು. ಹಾಗೂ  ತಮ್ಮ ತೆಕ್ಕೆಗೆ ಬಂದ ಆ ಪ್ರದೇಶದಲ್ಲಿ ಒಂದು ಪಟ್ಟಣ ಮತ್ತು ಮಸೀದಿಯನ್ನು ನಿರ್ಮಿಸುವಂತೆ ಅಜ್ಞಾಪಿಸಿದರು. ಹಾಗೆ ಹಿಜ್ರಾ 358(ಕ್ರಿ.ಶ 969)ರಲ್ಲಿ ಕೈರೋ ನಗರವನ್ನು ಮತ್ತು ಅದರ ಪಕ್ಕದಲ್ಲೇ ಒಂದು ಮಸೀದಿಯನ್ನೂ ಜೌಹರ್ ನಿರ್ಮಿಸಿದರು. ಅಂದಾಜು ಎರಡು ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಂಡ ಮಸೀದಿಯು ಹಿ. 361 ರಮಳಾನ್ 7(ಜೂನ್ 22 972)ಕ್ಕೆ ನಮಾಜಿಗೆ ಸಜ್ಜೀಕೃತಗೊಂಡಿತು. ಅಂದಿನಿಂದ ಮುಸ್ಲಿಂ ಜಗತ್ತಿನ ಪ್ರಸಿದ್ದ ಮಸೀದಿಗಳ ಸಾಲಿಗೆ ಅಲ್ ಅಝ್‌ಹರ್ ಸೇರಿಕೊಂಡಿತು.  ಈ ಮಸೀದಿಯ ಸುತ್ತಲೂ ಮನೋಹರವಾದ ಹೂದೋಟಗಳಿದ್ದರಿಂದ ಇದಕ್ಕೆ ಅಲ್ ಅಝ್‌ಹರ್ ಎಂಬ ಹೆಸರು ಲಭಿಸಿತ್ತೆಂದು ಹೇಳಲಾಗುತ್ತದೆ. ಭವಿಷ್ಯದಲ್ಲಿ ಶಿಕ್ಷಣದ ಉದ್ಯಾನವಾಗಿ, ಉದ್ಯಾನಗಳು ಚಿಟ್ಟೆ-ಪತಂಗಗಳನ್ನು ತನ್ನತ್ತ ಸೆಳೆಯುವಂತೆ ಈ ವಿದ್ಯಾಲಯವೂ ವಿದ್ಯಾದಾಹಿಗಳನ್ನು ತನ್ನತ್ತ ಸೆಳೆಯಲಿದೆಯೆಂಬ ಅಂದಿನ ವಿಧ್ವಾಂಸರ ದೂರಧೃಷ್ಟಿಯಿಂದಲೇ ಈ ಹೆಸರು ಬರಲು ಕಾರಣವೆಂದೂ ಮತ್ತೊಂದು ವಿಭಾಗ ಚರಿತ್ರೆಗಾರರು ಅಭಿಪ್...

ಹಜ್ ಯಾತ್ರಿಕರ ದಾಹ ನೀಗಿಸಿದ ಐನ್ ಝುಬೈದ

ಮಕ್ಕಾದ ಪುರಾತನ ಜಲಾಶಯಗಳಲ್ಲೊಂದಾಗಿದೆ ಐನ್ ಝುಬೈದ. ಆಧುನಿಕ ತಂತ್ರಜ್ಞಾನ ಅಳವಡಿತ ನೀರಾವರಿ ಪದ್ಧತಿಯನ್ನೂ ಮೀರಿಸುವಂತಿರುವ ಈ ಪುರಾತನ ನೀರಾವರಿ ವ್ಯವಸ್ಥೆಯು ಇಂದಿಗೂ ನೋಡುಗರಲ್ಲಿ ಹುಟ್ಟಿಸುವ ವಿಸ್ಮಯ ಸಣ್ಣದ್ದಲ್ಲ. ಸರಿಸುಮಾರು ಸಾವಿರದ ಇನ್ನೂರು ವರ್ಷಗಳಷ್ಟು ಇತಿಹಾಸವಿರುವ ಈ ಜಲಾಶಯಕ್ಕೆ ಮರುಭೂಮಿಯ ರಣ ಬಿಸಿಲಿಗೆ ಬೆಂದು ಹೋದ ಅನೇಕ ಹಜ್ಜ್, ಉಮ್ರಾ ಯಾತ್ರಿಕರ ದಾಹವನ್ನು ನೀಗಿಸಿದ ಪ್ರತೀತಿಯಿದೆ. ಅಮೋಘವಾದ ನಿರ್ಮಾಣ ಶೈಲಿ, ನಿಖರವಾದ ವಿನ್ಯಾಸ, ಅತ್ಯಾಧುನಿಕ ವ್ಯವಸ್ಥೆ ಇತ್ಯಾದಿ ವಿಶೇಷತೆಗಳನ್ನು ಹೊಂದಿರುವ ಐನ್ ಝುಬೈದ ಇಂದಿಗೂ ಖಿಲಾಫತ್‌ನ ಸುವರ್ಣ ಯುಗದ ಗತ ವೈಭವವನ್ನು ಎತ್ತಿ ಹಿಡಿದಿದೆ. ಆ ನಂತರದ ಆಡಳಿತ ವರ್ಗ ತೋರಿದ ದಿವ್ಯ ನಿರ್ಲಕ್ಷ್ಯ ಹಾಗೂ ಪ್ರಾಕೃತಿಕ ವಿಕೋಪಗಳಿಂದಾದ ಹಾನಿಯಿಂದ ಇದರ ಚೈತನ್ಯ ಒಂದಷ್ಟು ಕುಂದಿರುವುದು ನಿಜ. ಆದರೂ ಕಾಲದ ಏರಿಳಿತಗಳನ್ನು ದಾಟಿ ಕಳೆದ ಶತಮಾನದವರೆಗೂ ಇದು ಸುಲಲಿತವಾಗಿ ಹರಿದಿದೆ. ಇಸ್ಲಾಮೀ ಪರಂಪರೆಯ ಶ್ರೇಷ್ಠ ಸಂಕೇತವಾಗಿರುವ ಈ ಜಲಾಶಯ ನೂರಾರು ವರ್ಷಗಳಿಂದ ಹಜ್ಜ್ ಯಾತ್ರಿಕರ ಪಾಲಿಗೆ ಚೈತನ್ಯ ಒದಗಿಸಿದೆ. ಗತಕಾಲದ ಪುರಾತನ ಸ್ಮಾರಕಗಳನ್ನು ಪುನರುಜ್ಜೀವಗೊಳಿಸುವುದಾಗಿ ಸೌದಿ ಸರ್ಕಾರ ವರ್ಷಗಳ ಹಿಂದೆಯಷ್ಟೇ ಘೋಷಿಸಿತ್ತು. ಸರಕಾರದ ಈ ನಿರ್ಧಾರದ ಬಳಿಕ ಐನ್‌ಝುಬೈದ ಮತ್ತೆ ಜನರ ಗಮನ ಸೆಳೆಯತೊಡಗಿದೆ. ಪುರಾತನ ಕಾಲದಲ್ಲಿ ಮಕ್ಕಾದ ನೀರಿನ ಮೂಲವು ದಾರಿಗಳಲ್ಲಿನ ಬಾವಿಗಳಾಗಿದ್ದವು. ಹಜ್...

ನಾವೆಷ್ಟು ಭಾಗ್ಯವಂತರುಈ ವ್ಯಕ್ತಿಯ ಹೆಸರೇಳಿದರೆ ಗುರುತಿಸುವುದು ದೇಶವನ್ನು.

ನಾವೆಷ್ಟು ಭಾಗ್ಯವಂತರು ಈ ವ್ಯಕ್ತಿಯ ಹೆಸರೇಳಿದರೆ  ಗುರುತಿಸುವುದು ದೇಶವನ್ನು! ಒಂದು ದಿನ ಫೇಸ್ಬುಕ್ನಲ್ಲಿ ಇಂಡೋನೇಷಿಯಾದ ವ್ಯಕ್ತಿಯೊಬ್ಬರು ಪರಿಚಯಗೊಂಡರು.ಅಲ್ಪಸಮಯ ಪರಸ್ಪರ ಮಾತುಕತೆ ನಡೆಸಿದ ಬಳಿಕ ನನ್ನ ಹೆಸರು ಮತ್ತು ದೇಶ ಭಾರತ ಎಂದ ಕೂಡಲೇ ಅವರು ಕೇಳಿದ ಮಾತು ನೀವು ಕೇರಳದವರೇ? ನಾನು ಆಶ್ಚರ್ಯ ಚಿಕಿತನಾಗಿ ಕೇಳಿದೆ! ನಿಮಗೆ ಹೇಗೆ ಕೇರಳ ಗೊತ್ತು ? ಅವರು ಹೇಳಿದ ಮಾತು...  ಅಲ್ಲೊಂದು ಮಹಾ ವಿದ್ವಾಂಸರಿರುವರು... ಸಾವಿರಾರು ಅನಾಥರ ತಂದೆ (ಅಬುಲ್ ಐತಾಂ) ಖಮರುಲ್ ಉಲಮಾ(ಉಲಮಾಗಳ ಚಂದ್ರ) ಅವರನ್ನು ಅತಿಯಾಗಿ ಇಷ್ಟಪಡುವೆನು. ಅವರ ಜೀವನವೇ ನನಗೆ ಸ್ಫೂರ್ತಿ... ಅವರ ಕಾರ್ಯವೈಖರಿ ಕಂಡು ನಾವೂ ಅದೇ ರೀತಿ ಇಲ್ಲಿ ಇಸ್ಲಾಂ ಕಲಿಸಲು ಪ್ರತ್ನಿಸುತ್ತಿದ್ದೇವೆ... ನಾನು ಭಾರತ ಎಂಬ ದೇಶ ಅರಿತದ್ದೇ ಉಸ್ತಾದರಿಂದ...ಉಸ್ತಾದರನ್ನು ಕಾಣುವುದೇ  ಒಂದು ಆನಂದ... ನಾವೆಷ್ಟು ಭಾಗ್ಯವಂತರಲ್ಲವೇ  ಆ ಜ್ಞಾನಮರದ ನೆರಳು ಅನುಭವಿಸಲು ಅಲ್ಲಾಹು ನಮಗೆಲ್ಲರಿಗೂ ಭಾಗ್ಯ ನೀಡಿದ... ಅಲ್ಲಾಹು ಇನ್ನಷ್ಟು ಕಾಲ ದೀರ್ಘಾಯುಷ್ಯ ನೀಡಿ ಅನುಗ್ರಹಿಸಲಿ ಆಮೀನ್.... SIRJ ಬಾರೆಬೆಟ್ಟು