ಅಂಚೆ ತಲುಪುವ ಮುಂಚೆಯೇ ತಲುಪಿತು, ಪ್ರವಾದಿ ಸನ್ನಿಧಿಗೆ ಆ ಕಾವ್ಯ... ಯೂಸುಫ್ ನಬ್‌ಹಾನಿ ಕುಕ್ಕಾಜೆ 8951287993 ಹನಫೀ ಮಹ್‌ಹಬಿನ ಇಮಾಮ್, ಇಮಾಮ್ ಅಬೂಹನೀಫ (ರ) ರವರು ಪ್ರವಾದಿ ಮುಹಮ್ಮದ್ ﷺ ಹೊಗಳಿ ಅರಬಿ ಭಾಷೆಯಲ್ಲಿ ಒಂದು ಬಯ್‌ತ್ (ಪದ್ಯ) ರಚನೆ ಮಾಡಿದ್ದರು. ಆದರೆ ಅದನ್ನು ತನ್ನ ಸಹಪಾಠಿಗಳೋ ಅಥವಾ ಇತರರಿಗೋ ಯಾರಿಗೂ ತೋರಿಸಿರಲಿಲ್ಲ. ತನ್ನ ಕೆಲವು ಬ್ಯುಸಿ ಶೆಡ್ಯೂಲುಗಳ ಕಾರಣದಿಂದ ಅದನ್ನು ಇಶ್ಯೂ ಮಾಡಲು ಸಮಯ ಕೂಡ ದೊರಕಲಿಲ್ಲ. ಒಮ್ಮೆ ಇಮಾಮ್ ಅಬೂಹನೀಫರು ಮದೀನ ತಲುಪಿದಾಗ ಅಲ್ಲಿನ ಅವತ್ತಿನ ಮಸೀದಿಯ ಮುಅದ್ದಿನ್ (ಮುಕ್ರಿಕ) ರೌಲಾದ ಹತ್ತಿರ ಒಂದು ಕಡೆ ನಿಂತು ಏರು ದನಿಯಲ್ಲಿ ಈ ಪದ್ಯವನ್ನು ಹಾಡುತ್ತಿರುವುದು ತನ್ನ ಗಮನಕ್ಕೆ ಬಂತು. ತಾನು ರಚಿಸಿದ ಈ ಹಾಡು ಇವರಿಗೆ ಎಲ್ಲಿಂದ ದೊರಕಿತು? ಇದು ಹೇಗೆ ಸ್ಪ್ರೆಡ್ ಅಯಿತು? ಎಂದು ಅದ್ಬುತಗೊಂಡು ಮುಕ್ರಿಕರವರು ಪದ್ಯಹಾಡಿ ಮುಗಿಸಿದ ಕೂಡಲೇ ಅವರನ್ನು ಸಮೀಪಿಸಿ ಕೇಳಿದರು. "ಈ ಹಾಡು ಯಾರು ರಚನೆ ಮಾಡಿದ್ದು?" ಮುಕ್ರಿಕ: ಇಮಾಮ್ ಅಬೂಹನೀಫ (ರ). ಅಬೂಹನೀಫ: ನಿಮಗೆ ಅವರ ಪರಿಚಯ ಇದೆಯಾ? ನೀವು ಅವರನ್ನು ಕಂಡಿದ್ದೀರಾ? ಮುಕ್ರಿಕ: ಇಲ್ಲ. ಅಬೂಹನೀಫ: ಹಾಗಾದರೆ ಈ ಪದ್ಯ ನಿಮಗೆ ಎಲ್ಲಿಂದ ದೊರಕಿತು? ಮುಕ್ರಿಕ: ಈ ಹತ್ತಿರದಲ್ಲಿ ಒಮ್ಮೆ ಪ್ರವಾದಿಯವರ ಎದುರಲ್ಲಿ ನಿಂತು ಒಬ್ಬರು ಈ ಪದ್ಯವನ್ನು ಹಾಡುತ್ತಿರುವುದನ...
ಇದು ಅಹ್ಲುಸ್ಸುನ್ನತಿ ವಲ್ ಜಮಾಅತಿನ ನೈಜ ಆಶಯಾದರ್ಶಗಳನ್ನು ವಿವರಿಸುವ ಬ್ಲಾಗ್ ಆಗಿದೆ. More info cont - Nawaz Saqafi Al Amjadi Ullala.