Skip to main content

Posts

Showing posts from 2024

ಪಳ್ಳಿ ದರ್ಸ್‌ ಪರಂಪರೆ : ಇಸ್ಲಾಮೀ ಗುರುಕುಲ ಪದ್ದತಿ

ಪಳ್ಳಿ ದರ್ಸ್‌ ಪರಂಪರೆ : ಇಸ್ಲಾಮೀ ಗುರುಕುಲ ಪದ್ದತಿ -------------------------------------- ಬ್ಯಾರಿ ಭಾಷೆಯಲ್ಲಿ ಪಳ್ಳಿ ಎಂದರೆ ಮಸೀದಿ ಮತ್ತು ದರ್ಸ್ ಎಂದರೆ ಪಾಠಶಾಲೆ. ಪ್ರಾಥಮಿಕ ಇಸ್ಲಾಮೀ ಶಿಕ್ಷಣ ನೀಡುವ ಪಾಠಶಾಲೆಗಳಿಗೆ ದರ್ಸ್ ಅಥವಾ ಮದ್ರಸಾ ಎನ್ನುತ್ತೇವೆ.ಉನ್ನತ ಧಾರ್ಮಿಕ ಶಿಕ್ಷಣ ನೀಡುವ ಅಂದರೆ ಆಲಿಂ ಶಿಕ್ಷಣ ನೀಡುವ ಸಂಸ್ಥೆಗಳಿಗೆ ಈಗ ಶರೀ‌ಅತ್ ಕಾಲೇಜು, ಅರೆಬಿಕ್ ಕಾಲೇಜು, ದ‌ಅ್‌ವಾ ಕಾಲೇಜು ಮುಂತಾದ ಹೆಸರುಗಳಿವೆ.ಇಲ್ಲೆಲ್ಲಾ ನೀಡುವ  ಶಿಕ್ಷಣಗಳು ಹೆಚ್ಚು ಕಡಿಮೆ ಒಂದೇ ರೀತಿಯದ್ದು.ಈ ರೀತಿಯ ಕಾಲೇಜ್‌ಗಳು ಆರಂಭವಾಗುವ ಮುನ್ನವೂ ನಮ್ಮಲ್ಲಿ ಉಲಮಾಗಳಿದ್ದರು. ಅವರಿಗೆ ನಿರ್ದಿಷ್ಟವಾದ ಪದವಿಗಳಿರಲಿಲ್ಲ. ಆಗ ಹೆಚ್ಚಿನೆಲ್ಲಾ ಉಲಮಾಗಳು ತಮ್ಮ ಹೆಸರಿನ ಜೊತೆಗೆ ಮುಸ್ಲಿಯಾರ್ ಎಂಬ ಬಿರುದನ್ನು ಸ್ವಯಂ ಸೇರಿಸಿಬಿಡುತ್ತಿದ್ದರು.ವಾಸ್ತವದಲ್ಲಿ ಮುಸ್ಲಿಯಾರ್ ಎನ್ನುವುದು ಕೇರಳದ ಪೊನ್ನಾಣಿಯ ಮಕ್ದೂಮಿ‌ ಇಸ್ಲಾಮೀ ಶಿಕ್ಷಣ ಸಂಸ್ಥೆಯಲ್ಲಿ ನೀಡುವ ಬಿರುದಾಗಿತ್ತು. ಆದರೆ ಮುಸ್ಲಿಯಾರ್ ಎನ್ನುವುದು ತನ್ನ ಸಂಸ್ಥೆಯಲ್ಲಿ ವಿದ್ಯಾರ್ಜನೆಗೈದು ಉತ್ತೀರ್ಣರಾದವರಿಗೆ ನೀಡುತ್ತಿದ್ದ ಪದವಿಯಾದರೂ ಆ ಸಂಸ್ಥೆ ಅದಕ್ಕೆ ತನ್ನ ಕಾಪಿರೈಟ್ ಕ್ಲೈಮ್ ಮಾಡಲು ಹೋಗದಿದ್ದುದರಿಂದ ಅಂದಿನಿಂದ ಇಂದಿನವರೆಗೂ ನಿರ್ದಿಷ್ಟ  ಇಸ್ಲಾಮಿಕ್ ಶಿಕ್ಷಣಾಲಯದ ಪದವಿ ಪಡೆಯದ ಎಲ್ಲಾ ಆಲಿಂಗಳೂ ಅದನ್ನೇ ತಮ್ಮ ಹೆಸರಿನೊಂದಿಗೆ ಸೇರಿಸುತ್ತಿದ್ದರು. ಅವರು ಮಾತ್ರವಲ್ಲದೇ ...

ಗೌಜಿ ಗದ್ದಲವಿಲ್ಲದೆ ಬದುಕಲು ಇಷ್ಟಪಟ್ಟ ತಂಙ್ಙಳ್ ಹಾಗೆಯೇ ಸದ್ದಿಲ್ಲದೆ ಹೋಗಿಬಿಟ್ಟರು

ಗೌಜಿ ಗದ್ದಲವಿಲ್ಲದೆ ಬದುಕಲು ಇಷ್ಟಪಟ್ಟ ತಂಙ್ಙಳ್ ಹಾಗೆಯೇ ಸದ್ದಿಲ್ಲದೆ ಹೋಗಿಬಿಟ್ಟರು ----- ಅಬೂಶಝ ಕೂರ್ನಡ್ಕ "ಇವಿಡೆ ಓರ್ ವರುಮ್,ಇವಿಡತ್ತೆ ಮಣ್ಣುಂ ವೆಳ್ಳವುಂ ಔಷಧಮಾವುಂ" ಇದು ಶೈಖುನಾ ಮಡವೂರು ಸಿ ಎಂ ವಲಿಯುಲ್ಲಾಹಿ ತಂಙ್ಙಳ್‌ರವರು ಅದೆಷ್ಟೋ ವರ್ಷಗಳ ಮುಂಚೆ ನಡೆಸಿದ ಪ್ರವಚನವಾಗಿತ್ತು! ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನಿಂದ ಹದಿನೆಂಟು ಕಿಲೋಮೀಟರ್ ದೂರದಲ್ಲಿರುವ ಕೂರ ಎಂಬ ಕುಗ್ರಾಮದಲ್ಲಿ ವಾಸಿಸುತ್ತಿದ್ದ ಯೂಸುಫ್ ಹಾಜಿ ಎಂಬ ಮುತವಲ್ಲಿಯವರು ಕುಂಬೋಳ್ ಪಾಪಂ ಕೋಯ ತಂಙಳ್, ಶೈಖುನಾ ಸಿ ಎಂ ವಲಿಯುಲ್ಲಾಹಿ ಮಡವೂರು ಮುಂತಾದ ಆಧ್ಯಾತ್ಮಿಕ ದಿಗ್ಗಜರೊಂದಿಗೆ ಆತ್ಮೀಯ ನಂಟು ಹೊಂದಿದವರಾಗಿದ್ದರು.ಹಾಗಾಗಿಯೇ ಅವರು ಕೂರತ್ ಎಂಬ ಕುಗ್ರಾಮಕ್ಕೆ ಬಂದು ಹಾಜಿಯವರ ಮನೆಯಲ್ಲಿ ತಂಗುತ್ತಿದ್ದರು.ಹೀಗೆ ಬೇಟಿ ನೀಡಿದ ಸಂಧರ್ಭದಲ್ಲೊಮ್ಮೆ ಸಿಎಂ ವಲಿಯುಲ್ಲಾಹಿ ಹೇಳಿದ ಮಾತಾಗಿತ್ತು."ಅವರು ಇಲ್ಲಿಗೆ ಬರುವರು,ಇಲ್ಲಿನ ಮಣ್ಣು ನೀರು ಔಷಧಿಯಾಗಲಿದೆ" ಪ್ರಸ್ತುತ ಪ್ರವಚನದ ಬಗ್ಗೆ ಅಂದು ಅವರಿಗೆ ಏನೆಂದು ಅರ್ಥವಾಗಲಿಲ್ಲವಾದರೂ ವರ್ಷಗಳ ನಂತರ ಸಯ್ಯದ್ ಕೂರತ್ ತಂಙಳ್ ಆ ಮಣ್ಣಿಗೆ ಕಾಲಿಟ್ಟಾಗ ಇತಿಹಾಸದ ಪ್ರಕಾಶ ಬೆಳಗಿತು. ಕೇರಳದ ಪಯ್ಯನ್ನೂರು ಎಟ್ಟಿಕ್ಕುಳಂ ನಾಲೂರಪ್ಪಾಟ್ಠ್ ಮಟ ತಂಙಳ್ ಹೌಸ್‌ನ ತಾಜುಲ್ ಉಲಮಾ ಅಸ್ಸಯ್ಯದ್ ಅಬ್ದುರ್ರಹ್ಮಾನ್ ಅಲ್ ಬುಖಾರಿ ತಂಙಳ್- ಪಝಯಂಙ್ಙಾಡಿ ಏಝಿಮಲ ತಂಙ್ಙಳ್ ಎಂದು ಪ್ರಸಿದ್ದ...

ವಿವಾಹ ಮತ್ತು ತನ್ನ ಧರ್ಮಪತ್ನಿ ಬಗ್ಗೆ ಶೈಖುನಾ ಎ ಪಿ ಉಸ್ತಾದರು ಹೇಳಿದ ಆತ್ಮ ಕತೆಯಿಂದ ತೆಗೆದ ಬರಹ

ವಿವಾಹ ಮತ್ತು ತನ್ನ ಧರ್ಮಪತ್ನಿ ಬಗ್ಗೆ ಶೈಖುನಾ ಎ ಪಿ ಉಸ್ತಾದರು ಹೇಳಿದ  ಆತ್ಮ ಕತೆಯಿಂದ ತೆಗೆದ ಬರಹ.. [ಇಂಟ್ರಸ್ಟಿಂಗ್ ಸ್ಟೋರಿ....] ಸ್ವಂತವಾಗಿ ಜಾಗ ಮತ್ತು ಮನೆಯೊಂದು ಆಯಿತು.ಆಗಲೇ ನಿಧಾನವಾಗಿ ವಿವಾಹಾಲೋಚನೆಗಳು ಬರಲು ಆರಂಭವಾಯಿತು.ಅದರಲ್ಲಿ ನಾನು ಸೇವೆಗೈಯುವ ಮಸೀದಿಯ ಪದಾಧಿಕಾರಿಗಳು ನನ್ನ ನೆರೆಯ ಮತ್ತು ಕುಟುಂಬದ ಹಿರಿಯರು ಇದ್ದರು.ಒಬ್ಬ ಮುಸ್ಲಿಯಾರ್ ಎಂಬ ನೆಲೆಯಲ್ಲಿ ಅವರಿಗೆ ನನ್ನೊಂದಿಗೆ ಪ್ರೀತಿ ಇತ್ತು.ನನ್ನ ಮದುವೆ ವಿಷಯದಲ್ಲಿ ಅವರೇ ಮುತುವರ್ಜಿ ವಹಿಸಿದ್ದರು.         ಊರಿನ ಸಮೀಪವಿರುವ ಒಬ್ಬರು ವಿದ್ವಾಂಸರ ಕುಟುಂಬದ ವಧುವನ್ನ ಮೊದಲು ಆಲೋಚಿಸಲಾಯಿತು.ನನ್ನ ಆರ್ಥಿಕ ಸ್ಥಿತಿ ಕೆಳಮಟ್ಟದಲ್ಲಿದೆ ಎಂಬ ಕಾರಣಕ್ಕೆ ಅವರು ಅದನ್ನು ನಿರಾಕರಿಸಿದರು.ಈ ವಿವಾಹಾಲೋಚನೆ ನಡೆಸಲು ಹೋದವರಲ್ಲಿ ಅವರುಂಕುನ್ನನ್ ಅಹ್ಮದ್ ಹಾಜಿ ಎಂಬವರಿದ್ದರು. ವಧುವಿನ ಮನೆಯವರ ನಿರಾಕರಣೆಯ ಉತ್ತರದಿಂದ ಅವರು ಬಹಳ ನೊಂದಿದ್ದರು. ಇದ್ಯಾವುದೂ ನನಗೆ ತಿಳಿದಿರಲಿಲ್ಲ.ಇದೇ ಅಹ್ಮದ್ ಹಾಜಿಗೆ ಪೂನೂರ್ ಬಜಾರಿನಲ್ಲಿ ವಸ್ತ್ರದ ವ್ಯಾಪಾರವಿದೆ.ವಿದ್ಯಾರ್ಥಿದೆಸೆಯಲ್ಲೇ ನನಗೆ ಅವರ ಪರಿಚಯವಿದೆ. ಅವರು ಇಲ್ಮಿನೊಂದಿಗೆ ಸ್ನೇಹವಿರುವ ವ್ಯಕ್ತಿಯಾಗಿದ್ದರು. (ಆಲಿಂ) ವಿದ್ವಾಂಸ ರನ್ನು ಮತ್ತು (ಮುತ ಅಲ್ಲಿಂ) ವಿದ್ಯಾರ್ಥಿಗಳನ್ನು ಕರೆದು ಸತ್ಕರಿಸುವುದರಲ್ಲಿ ಬಹಳ ಸಂತಸವನ್ನ ಕಂಡಿದ್ದ ಮೇರು ವ್ಯಕ್ತಿಯಾಗಿದ್ದರು.ಹಲವು ಬಾರಿ ಅವರ...

ಲೈಂಗಿಕ ಸಂಪರ್ಕದ ಬಳಿಕ ಜನಾಬತ್ ಉಂಟಾಗಿ ಫರಲ್ ಸ್ನಾನ ಮಾಡಿದ ಬಳಿಕ ಪುನಃ ವೀರ್ಯಾಣು ಬಂದರೆ!?

SIRJ ಬಾರೆಬೆಟ್ಟು. ಪ್ರಶ್ನೆ: ಪತಿ ಮತ್ತು ಪತ್ನಿ ಲೈಂಗಿಕ ಸಂಪರ್ಕದಲ್ಲಿ ಏರ್ಪಟ್ಟು ಜನಾಬತ್ ಉಂಟಾಗಿ ಸ್ನಾನ ಮಾಡಿದ ಬಳಿಕ ಪುನಃ ವೀರ್ಯಾಣು ಬಂದರೆ ಏನು ಮಾಡಬೇಕು ? ಪುನಃ ಸ್ನಾನ ಕಡ್ಡಾಯವಾಗುವುದೇ!? ಜನಾಬತ್ ಗಾರ ಎನ್ನುವುದು ಪುರುಷ ಮತ್ತು ಸ್ತ್ರೀಯರಿಗೆ ಇಬ್ಬರಿಗೂ ಇರುವ ವಿಶೇಷತೆ ಆಗಿದೆ ! ಈ ರೀತಿ ಕರೆಯುವುದು ಯಾವಾಗ ?  ಪತಿ ಮತ್ತು ಪತ್ನಿ ಲೈಂಗಿಕ ಸಂಪರ್ಕದಲ್ಲಿ ಏರ್ಪಟ್ಟರೆ ಅಥವಾ ಲೈಂಗಿಕ ಸಂಪರ್ಕದಲ್ಲಿ ಏರ್ಪಡದೆ ವೀರ್ಯ ಹೊರಬಂದರೆ ಅವನಿಗೆ ಸ್ನಾನ ಕಡ್ಡಾಯವಾಗುವ ಅವಸ್ಥೆಯನ್ನು ಜನಾಬತ್ ಎನ್ನುವರು. ಇಮಾಂ ಇಬ್ನ್ ಹಜರ್ (ರ) ಅವರ ತುಹುಫತುಲ್ ಮುಹ್ ತಾಜ್ ಫೀ ಶರಹಿಲ್ ಮಿನ್ ಹಾಜ್ ಎಂಬ ಗ್ರಂಥದ ಒಂದನೇ ಭಾಗ 301ನೇ ಪುಟದಲ್ಲಿ ಹೇಳುವುದು ಕಾಣಬಹುದು :  وَأَنْ يُؤَخِّرَ مَنْ أَجْنَبَ بِخُرُوجِ الْمَنِيِّ غُسْلَهُ عَنْ بَوْلِهِ لِئَلَّا يَخْرُجَ مَعَهُ فَضْلَةُ مَنِيِّهِ فَيَبْطُلُ غُسْلُهُ ವೀರ್ಯಾಣು ಹೊರಬರುವ ಮೂಲಕ ಜನಾಬತ್ ಉಂಟಾದ ವ್ಯಕ್ತಿ (ಅದು ಪತಿ ಪತ್ನಿಯ ಲೈಂಗಿಕ ಸಂಪರ್ಕದಿಂದಲೂ ಅಥವಾ ಸ್ವಪ್ನಸ್ಕಲನದಿಂದಲೂ  ಆಗಬಹುದು)ಆ ವ್ಯಕ್ತಿ ಸ್ನಾನ ಮಾಡುವ ಮುನ್ನ ಮೂತ್ರ ಮಾಡುವುದು ಸುನ್ನತ್ ಆಗಿದೆ ಕಾರಣ ಸ್ನಾನ ಮಾಡಿದ ಬಳಿಕ ಮೂತ್ರ ಮಾಡಿದರೆ ಅದರ ಜೊತೆಗೆ ಬಾಕಿಯಾದ ಕೆಲವೊಂದು ವೀರ್ಯಾಣುವಿನ ಅಂಶಗಳು ಬರಲು ಸಾಧ್ಯತೆಯಿದೆ ಆ ರೀತಿ ಸ್ನಾನ ಮಾಡಿದ ಬಳಿಕ ಪುನಃ ವೀರ್ಯಾಣು ಬಂದರೆ ಅವನು...