ನೂರುಲ್ ಉಲಮಾ ಅದೊಂದು ಸಭೆ,ಸಾಧಾರಣ ಸಭೆ ಅಲ್ಲ, ಉಲಮಾ ದಿಗ್ಗಜರ ಸಭೆ, ಪಂಡಿತ ಶಿರೋಮಣಿಗಳ ಸಭೆ, ಸಮುದಾಯವನ್ನು ಇಸ್ಲಾಮಿನ ನೈಜ ಆಶಯದತ್ತ ಕೊಂಡೊಯ್ಯುವ ಚಿಂತನೆಯಿಂದ ನಡೆಸುವ ಸಭೆ, ನೂತನವಾದಿಗಳ ಶಡ್ಯಂತ್ರಕ್ಕೆ ಒಳಗಾಗುವವರಿಗೆ ಸನ್ಮಾರ್ಗದ ದಾರಿ ತೋರಿಸುವ ಸಲುವಾಗಿ ನಡೆಸುವ ಜಿಹಾದಿನ ಸಭೆ, ಸಮಾಜದಲ್ಲಿರುವ ಕಟ್ಟ ಕಡೆಯ ಮನುಷ್ಯರಿಗೆ ಉತ್ತಮವಾದ ಬದುಕನ್ನು ಕೊಟ್ಟು ಅಂತವರನ್ನು ಸಮಾಜದ ಮುಖ್ಯ ವಾಹಿನಿಯಲ್ಲಿ ತರಲು ಚಿಂತನ ಮಂಥನ ನಡೆಸುವಂತಹ ಸಭೆ, ಸಮುದಾಯ ಇಸ್ಲಾಮಿನ ವಿಧಿ ವಿಧಾನಗಳನ್ನು ಮನದಂತರಾಳದಿಂದ ತಿಳಿಯಲು, ಅಧ್ಯಾತ್ಮಿಕತೆಯನ್ನು ಮೈಗೂಡಿಸಿಕೊಳ್ಳಲು ಯಾವ ರೀತಿ ಸಂಘಟಿತ ಆಗಬೇಕೊ ಅದಕ್ಕಾಗಿ ರೂಪುರೇಷೆ ರೂಪಿಸುವ ಸಭೆ, ಅಲ್ಲಿ ಉಲಮಾ ಲೋಕದ ಮಹಾ ಪಂಡಿತರುಗಳಿದ್ದರು, ಎಲ್ಲರೂ ಘಾಡವಾದ ಚರ್ಚೆಯಲ್ಲಿರುವಾಗ, ಅವರಲ್ಲೊಬ್ಬರು ಒಂದು ಲೇಖನವನ್ನು ತಂದು ಸಭೆಯ ಮುಂದಿಟ್ಟರು, ಅದು ಅಲ್ ಬಯಾನ್ ಪತ್ರಿಕೆಯಲ್ಲಿ ಪ್ರಕಟಗೊಂಡ ಲೇಖನವಾಗಿತ್ತು. ಅದನ್ನು ಓದಿದೊಡನೆ ನೆರೆದ ಪಂಡಿತರಲ್ಲಿ ಮನ ಸಂತಸ ಗೊಳ್ಳವ ಸಂಚಲನ, ಇಷ್ಟರ ವರೆಗೆ ನಾವು ಚರ್ಚೆಮಾಡಿ ನಮ್ಮ ಮೆದುಳಿಗೆ ಇಂತಹ ಪ್ಲಾನ್ ಬಂದಿರಲಿಲ್ಲ. *ಅಲ್ ಹಂದುಲಿಲ್ಲಾಹ್* ಈ ಒಂದು ವಿಷಯವನ್ನು ನಾವು ಚರ್ಚೆಗೆ ತೆಗೆದುಕೊಂಡು ಜಾರಿಗೆ ತಂದರೆ, ದಾರ್ಮಿಕ ವಿಧ್ಯಾಭ್ಯಾಸ ಕಲಿಯಲು ಮುಂದೆ ಇದು ಒಂದು ಹೊಸತನ ಬರಲಿದೆ ಎಂದು ಅಭಿಪ್ರಾಯ ಬಂತು. ಅಷ್ಟಕ್ಕೂ ಈ ಲೇಖನ...
ಇದು ಅಹ್ಲುಸ್ಸುನ್ನತಿ ವಲ್ ಜಮಾಅತಿನ ನೈಜ ಆಶಯಾದರ್ಶಗಳನ್ನು ವಿವರಿಸುವ ಬ್ಲಾಗ್ ಆಗಿದೆ. More info cont - Nawaz Saqafi Al Amjadi Ullala.