Skip to main content

Posts

Showing posts from April, 2024

ವಿವಾಹ ಮತ್ತು ತನ್ನ ಧರ್ಮಪತ್ನಿ ಬಗ್ಗೆ ಶೈಖುನಾ ಎ ಪಿ ಉಸ್ತಾದರು ಹೇಳಿದ ಆತ್ಮ ಕತೆಯಿಂದ ತೆಗೆದ ಬರಹ

ವಿವಾಹ ಮತ್ತು ತನ್ನ ಧರ್ಮಪತ್ನಿ ಬಗ್ಗೆ ಶೈಖುನಾ ಎ ಪಿ ಉಸ್ತಾದರು ಹೇಳಿದ  ಆತ್ಮ ಕತೆಯಿಂದ ತೆಗೆದ ಬರಹ.. [ಇಂಟ್ರಸ್ಟಿಂಗ್ ಸ್ಟೋರಿ....] ಸ್ವಂತವಾಗಿ ಜಾಗ ಮತ್ತು ಮನೆಯೊಂದು ಆಯಿತು.ಆಗಲೇ ನಿಧಾನವಾಗಿ ವಿವಾಹಾಲೋಚನೆಗಳು ಬರಲು ಆರಂಭವಾಯಿತು.ಅದರಲ್ಲಿ ನಾನು ಸೇವೆಗೈಯುವ ಮಸೀದಿಯ ಪದಾಧಿಕಾರಿಗಳು ನನ್ನ ನೆರೆಯ ಮತ್ತು ಕುಟುಂಬದ ಹಿರಿಯರು ಇದ್ದರು.ಒಬ್ಬ ಮುಸ್ಲಿಯಾರ್ ಎಂಬ ನೆಲೆಯಲ್ಲಿ ಅವರಿಗೆ ನನ್ನೊಂದಿಗೆ ಪ್ರೀತಿ ಇತ್ತು.ನನ್ನ ಮದುವೆ ವಿಷಯದಲ್ಲಿ ಅವರೇ ಮುತುವರ್ಜಿ ವಹಿಸಿದ್ದರು.         ಊರಿನ ಸಮೀಪವಿರುವ ಒಬ್ಬರು ವಿದ್ವಾಂಸರ ಕುಟುಂಬದ ವಧುವನ್ನ ಮೊದಲು ಆಲೋಚಿಸಲಾಯಿತು.ನನ್ನ ಆರ್ಥಿಕ ಸ್ಥಿತಿ ಕೆಳಮಟ್ಟದಲ್ಲಿದೆ ಎಂಬ ಕಾರಣಕ್ಕೆ ಅವರು ಅದನ್ನು ನಿರಾಕರಿಸಿದರು.ಈ ವಿವಾಹಾಲೋಚನೆ ನಡೆಸಲು ಹೋದವರಲ್ಲಿ ಅವರುಂಕುನ್ನನ್ ಅಹ್ಮದ್ ಹಾಜಿ ಎಂಬವರಿದ್ದರು. ವಧುವಿನ ಮನೆಯವರ ನಿರಾಕರಣೆಯ ಉತ್ತರದಿಂದ ಅವರು ಬಹಳ ನೊಂದಿದ್ದರು. ಇದ್ಯಾವುದೂ ನನಗೆ ತಿಳಿದಿರಲಿಲ್ಲ.ಇದೇ ಅಹ್ಮದ್ ಹಾಜಿಗೆ ಪೂನೂರ್ ಬಜಾರಿನಲ್ಲಿ ವಸ್ತ್ರದ ವ್ಯಾಪಾರವಿದೆ.ವಿದ್ಯಾರ್ಥಿದೆಸೆಯಲ್ಲೇ ನನಗೆ ಅವರ ಪರಿಚಯವಿದೆ. ಅವರು ಇಲ್ಮಿನೊಂದಿಗೆ ಸ್ನೇಹವಿರುವ ವ್ಯಕ್ತಿಯಾಗಿದ್ದರು. (ಆಲಿಂ) ವಿದ್ವಾಂಸ ರನ್ನು ಮತ್ತು (ಮುತ ಅಲ್ಲಿಂ) ವಿದ್ಯಾರ್ಥಿಗಳನ್ನು ಕರೆದು ಸತ್ಕರಿಸುವುದರಲ್ಲಿ ಬಹಳ ಸಂತಸವನ್ನ ಕಂಡಿದ್ದ ಮೇರು ವ್ಯಕ್ತಿಯಾಗಿದ್ದರು.ಹಲವು ಬಾರಿ ಅವರ...