Skip to main content

Posts

Showing posts from April, 2020

ರಮಳಾನ್ ಕುರಿತಾದ ಪ್ರಶ್ನೋತ್ತರ ವೇದಿಕೆಯಾಗಿದೆ

ಪ್ರಗಲ್ಭ ಕರ್ಮ ಶಾಸ್ತ್ರ ಪಂಡಿತರೂ ಸಮಸ್ತ ಕೇಂದ್ರ ಮುಶಾವರ ಸದಸ್ಯರು ಆದ ಜಲೀಲ್ ಸಖಾಫಿ ಚೆರುಶ್ಯೋಲ ಉಸ್ತಾದ್.  https://youtu.be/JMu8SAvqcVY  ರಮಳಾನ್ ಕುರಿತಾದ ಪ್ರಶ್ನೋತ್ತರ ವೇದಿಕೆಯಾಗಿದೆ ಪ್ರಗಲ್ಭ ಕರ್ಮ ಶಾಸ್ತ್ರ ಪಂಡಿತರಾದ ಜಲೀಲ್ ಸಖಾಫಿ ಚೆರ್ಶೋಲ ಉತ್ತರಿಸುತ್ತಾರೆ. ಪ್ರಶ್ನೆ 1 1. *ಉಪವಾಸ ಯಾರಿಗೆ ಕಡ್ಡಾಯ? ಯಾರಿಗೆ ಕಡ್ಡಾಯವಿಲ್ಲ? ಪ್ರಾಯಶ್ಚಿತ ಯಾರೆಲ್ಲ ಮಾಡಬೇಕು?* ಉತ್ತರ - 6ನಿಮಿಷ 54ಸೆಕೆಂಡ್ https://youtu.be/JMu8SAvqcVY ಪ್ರಶ್ನೆ 2 2. *ಪ್ರತಿನಿತ್ಯ ನಿಯ್ಯತ್ ಹೇಳಬೇಕೆ? ಹೇಳದಿದ್ದರೆ ವೃತ ಭಂಗವೇ? ನಿಯ್ಯತ್ ಬಾಯಿಯಲ್ಲಿ ಕೇವಲ ಹೇಳಿದರೆ ಸಾಕೇ?* ಉತ್ತರ  1ನಿಮಿಷ 54ಸೆಕೆಂಡ್ https://youtu.be/7o4uc3TUhkc ಪ್ರಶ್ನೆ 3 3. *ಗಂಡ ಹೆಂಡತಿ ಸಂಯೋಗದಿಂದ ವೃತ ಭಂಗವಾಗುವುದೇ? ಭಂಗವಾದರೆ ಪ್ರಾಯಶ್ಚಿತವೇನು? ಸ್ವ ಸ್ಖಲಿಸುದರಿಂದ ವೃತ ಭಂಗವಾಗುವುದೇ? ಚುಂಬಿಸಬಹುದೇ?* ಉತ್ತರ 5ನಿಮಿಷ 27ಸೆಕೆಂಡ್ https://youtu.be/TzeP-VlWDcA ಪ್ರಶ್ನೆ 4 4. *ವಾಕರಿಕೆ ಸೃಷ್ಟಿ ಮಾಡಿ ವಾಂತಿ ಮಾಡುವುದು, ಕಣ್ಣಿಗೆ ಸುರುಮ ಹಚ್ಚುವುದು, ಕಿವಿ, ಮೂಗಿಗೆ ಲಸಿಕೆ ಹಾಕುವುದು, ಶರೀರದ ತೆರೆದ ಭಾಗಗಳ ಮೂಲಕ ನೀರು ಅಥವಾ ಇತರ ಘನ ವಸ್ತು ಒಳ ಸೇರುವುದರಿಂದ, ಶುದ್ಧ ಎಂಜಲು ನುಂಗುವುದರಿಂದ ವೃತ ಭಂಗವಾಗುವುದೇ??* ಉತ್ತರ 3ನಿಮಿಷ 43ಸೆಕೆಂಡ್ https://youtu.be/vNHBG5IQ2YM ಪ್ರಶ್ನೆ 5 5. *ವೃತ ಹಿಡಿಯದ ವ...

SSF ಜನಾಕರ್ಷಣೆ ಪಡೆದದ್ದು ಹೇಗೆ ಗೊತ್ತಾ ..

SSF ಸ್ಥಾಪಕ‌ ದಿನದ ಶುಭಾಶಯಗಳು - ಏಪ್ರಿಲ್ 29 SSF ಜನಾಕರ್ಷಣೆ ಪಡೆದದ್ದು ಹೇಗೆ ಗೊತ್ತಾ .. ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ (SSF) ಈ ಹೆಸರೇ ಅಚ್ಚರಿ. ಇದರ ಕಾರ್ಯ ಚಟುವಟಿಕೆ ರೋಮಾಂಚನಕಾರಿ. ಕಾರ್ಯಕರ್ತರು ಪ್ರಾಣ ಒತ್ತೆಯಿಟ್ಟು ಕೆಲಸ ಮಾಡುತ್ತಾರೆ.ಏನೇ ಬಂದರು ಆದರ್ಶದಲ್ಲಿ ದೃಢವಾಗಿ ನಿಲ್ಲುತ್ತಾರೆ.ಉಲಮಾಗಳ ಹಿಂದೆ ಭದ್ರವಾಗಿ ಕೆಲಸ ಮಾಡುತ್ತಾರೆ. ಇದಕ್ಕೆ ಕಾರಣವೇನೆಂದು ಹುಡುಕುತ್ತಾ ಹೊರಟರೆ ತಿಳಿಯುವುದು  ಅಚ್ಚರಿಯ ಸಂಗತಿ. ಸಾಧಾರಣ ಎಲ್ಲಾ ಮುಸ್ಲಿಮರಿಗೆ ಪರಲೋಕದ ಮೇಲೆ ಬಲವಾದ ವಿಶ್ವಾಸ.ಅಲ್ಲಾಹು ,ಪ್ರವಾದಿಗಳನ್ನು, ಮಹಾತ್ಮರನ್ನು ಜೀವಕ್ಕಿಂತ ಜಾಸ್ತಿ ಪ್ರೀತಿಸುವುದು ಇದೇ ಕಾರಣಕ್ಕಾಗಿ.ಮುಸ್ಲಿಮರ ಅಂತಿಮ ಗುರಿ ಪರಲೋಕದ ವಿಜಯ ತಾನೇ. ಇಲ್ಲಿ ಎಷ್ಟೇ ಕಷ್ಟ ಬಂದರು ಪರವಾಗಿಲ್ಲ ,ಪರಲೋಕದಲ್ಲಿ ವಿಜಯ ಸಿಕ್ಕರೆ ಸಾಕೆಂದು ಎಲ್ಲಾ ಮುಸ್ಲಿಮರ ಭಾವನೆ  ಇದೇ ಕಾರಣಕ್ಕಾಗಿ ಆರಾಧನೆ,ದಾನ,ಉಪವಾಸ,ಪರಸ್ಪರ ಸಹಾಯ ಸಹಕಾರ ಮಾಡುತ್ತಿರುತ್ತಾರೆ. ಶ್ರೀಮಂತನಾದರೂ ಕೂಡ ಆತನ ಮನದಲ್ಲಿರುವುದು ಅಲ್ಲಾಹನ ಸಂತ್ರಪ್ತಿ, ಪರಲೋಕದ ವಿಜಯ. ಅದಕ್ಕಾಗಿ ಆತ ಝಕಾತ್, ದಾನ ಧರ್ಮ ಮಾಡುತ್ತಾನೆ. ಬಡವನು ಕೂಡ ಇಲ್ಲಿ ಎಷ್ಟೇ ಕಷ್ಟ ಬಂದರೂ ಪರವಾಗಿಲ್ಲ, ಪರಲೋಕದಲ್ಲಿ ಸುಖ ಸಿಕ್ಕರೆ ಸಾಕೆಂದು ಭಾವಿಸುತ್ತಾನೆ. ಜನರ ಈ ಆಧ್ಯಾತ್ಮಿಕ ವಾಂಛೆಯನ್ನು, ಆಗ್ರಹವನ್ನು SSF ಪ್ರೋತ್ಸಾಹಿಸಿತು  . ಒಂದರ್ಥದಲ್ಲಿ ಹೇಳುವುದಾದರೆ  ಯುವ ಜನತೆಯಲ್ಲಿ ಧರ್ಮದ ನ...

ಸೂಫಿಯ ಸೇವಕನ ಸ್ಥಾನ

🌵 ಸೂಫಿ ಕಥೆಗಳು-೧     ಸಿ.ಯಂ ಹನೀಫ್ ಬೆಳ್ಳಾರೆ ಸೂಫಿಯ ಸೇವಕನ ಸ್ಥಾನ ಸೂಫಿ ಸಂತ ಅಬ್ದುಲ್ ಖಾದಿರ್ ಜೀಲಾನಿ ಅವರ ಬಳಿ ಹಲವರು ಬಂದು ಹೋಗುತ್ತಿದ್ದರು. ಅವರಲ್ಲಿ ಹೆಚ್ಚಿನವರು ಪಾಪಿಯಾಗಿ ಬಂದು ಸಂತರಾಗಿ ಮರಳುತ್ತಿದ್ದರು. ಕೇವಲ ಒಂದು ಸಂದರ್ಶನದಲ್ಲಿ ಹೀಗೆ ಬದಲಾಗುವುದನ್ನು ಕಂಡು ಅವರ ಬಳಿ ಬರುವವರ ಸೇವೆ ಮಾಡುತ್ತಿದ್ದ ವ್ಯಕ್ತಿಗೆ ಆಶ್ಚರ್ಯವಾಗುತ್ತಿತ್ತು. ಎಲಾ, ನಾನು ಇಷ್ಟು ವರ್ಷ ಅವರ ಬಳಿ ಸೇವೆಯಲ್ಲಿ ನಿರತನಾಗಿದ್ದು ಕೂಡ ನನಗೇನೂ ಆ ರೀತಿಯ ಅನುಭವ ಆಗಿಲ್ಲವಲ್ಲ. ಹೀಗೆ ಆಲೋಚನೆ ಮಾಡಿದ ಆ ಸೇವಕ ಒಂದು ದಿನ ಜೀಲಾನಿ ಅವರಲ್ಲಿ ಈ ವಿಷಯ ಪ್ರಸ್ತಾಪ ಮಾಡಿದ. ಜೀಲಾನಿ ಏನೂ ಹೇಳದೆ ನಕ್ಕು ಸುಮ್ಮನಾದರು. ಆದರೆ ಸೇವಕ ಪಟ್ಟು ಬಿಡಲಿಲ್ಲ, ಕೊನೆಗೆ ಜೀಲಾನಿ ಅವರು ಅವನನ್ನು ಇಂತಿಂತಹ ಕಡೆ ಹೋಗುವಂತೆ ನಿರ್ದೇಶಿಸಿದರು. ಹಾಗೆ ಅವರ ಅನುಮತಿ ಪಡೆದು ಅವರು ನಿರ್ದೇಶಿಸಿದ ಕಡೆಗೆ ಹೊರಟ ಸೇವಕ ಅಲ್ಲಿ ಇಬ್ಬರು ವ್ಯಕ್ತಿಗಳು ಅಲ್ಲಾಹನ ಧ್ಯಾನದಲ್ಲಿ ಮಗ್ನರಾಗಿರುವುದನ್ನು ಕಂಡ. ಅಲ್ಲೇ ತಾನೂ ಕುಳಿತು ಸ್ವಲ್ಪ ಹೊತ್ತು ಧ್ಯಾನ ಮಾಡಿ ಮತ್ತೆ ಅದರಿಂದ ವಿರಮಿಸಿದ. ಅಲ್ಲಿದ್ದ ಇಬ್ಬರೂ ಇನ್ನೂ ಧ್ಯಾನ ಮಗ್ನರಾಗಿದ್ದರು. ತುಂಬಾ ಹೊತ್ತು ಕಳೆದ ಮೇಲೆ ಸೇವಕನಿಗೆ ಹಸಿವಾಗತೊಡಗಿತು. ಅವರನ್ನು ಎಬ್ಬಿಸಿ ಹಸಿವಾಗುತ್ತಿದೆ ಏನಾದರೂ ತಿನ್ನೋಣ ಎಂದ. ಅವರು ಧ್ಯಾನದಿಂದ ವಿರಮಿಸಿ ಊಟಕ್ಕೆ ಕುಳಿತರು. ಅವರಲ್ಲಿ ಒಬ್ಬ ಕಣ್ಣು ಮುಚ್ಚಿ ಪ್ರಾರ್ಥಿಸತೊಡಗಿದರು. ಆಗ ಆ...

ವೆಳಿಯಂಗೋಡ್ ಉಮರ್ ಖಾಝಿ (ರ) ವೆಳಿಯಂಗೋಡು, ಮಲಪ್ಪುರಂ. ✍ ಗಫೂರ್ ಬಾಯಾರ್

ವೆಳಿಯಂಗೋಡ್ ಉಮರ್ ಖಾಝಿ (ರ) ವೆಳಿಯಂಗೋಡು, ಮಲಪ್ಪುರಂ. ✍ ಗಫೂರ್ ಬಾಯಾರ್ ಸುಮಾರು 300 ವರ್ಷಗಳ ಕಾಲ ಭಾರತೀಯರನ್ನು ಗುಲಾಮರನ್ನಾಗಿಸಿಕೊಂಡು ದುರಾಡಳಿತ ನಡೆಸಿದ ಬ್ರಿಟಿಷರ ವಿರುದ್ಧ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ನೇತೃತ್ವದಲ್ಲಿ 1920ರ ನಂತರ ಆರಂಭವಾದ ಅಸಹಕಾರ ಚಳುವಳಿಗೂ ಮುನ್ನವೇ ಅಂದರೆ 17ನೇ ಶತಮಾನದಲ್ಲಿ ಬ್ರಿಟಿಷರ ಅನ್ಯಾಯದ ತೆರಿಗೆ ಪದ್ದತಿಯ ವಿರುದ್ಧ ಕಾನೂನು ಅಸಹಕಾರ ಚಳುವಳಿಯಲ್ಲಿ ಮುಂಚೂಣಿಯ ನಾಯಕರಾಗಿ ಪಾಲ್ಗೊಂಡು ಜೈಲುವಾಸ ಅನುಭವಿಸಿದ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರಲ್ಲೊಬ್ಬರಾಗಿದ್ದಾರೆ ವೆಳಿಯಂಗೋಡು ಉಮರ್ ಖಾಝಿ (ರ) ಕೊಡುಂಗಲ್ಲೂರಿಗೆ ಆಗಮಿಸಿದ ಮಾಲಿಕುಲ್ ಹಬೀಬ್ (ರ)ರವರು ಏರಮತ್ತಾಲ್ ಇಲ್ಲತ್ತ್‌ನ ಸೂಫಿವರ್ಯರಾದ  ಹುಸೈನ್ (ರ) ಪರಂಪರೆಯ ತಾನೂರ್ ಖಾಝಿಯಾರಕತ್ತ್  ಆಲಿ ಮುಸ್ಲಿಯಾರ್ (ರ) ಮತ್ತು ವೇಳಿಯಂಗೋಡು ಕಾಕತ್ತರ ವೀಟಿಲ್ ಆಮಿನಾ (ರ) ಎಂಬ ದಂಪತಿಗಳ ದ್ವಿತೀಯ ಪುತ್ರನಾಗಿ ಕೇರಳದ ಮಲಪ್ಪುರಂ ಜಿಲ್ಲೆಯ ಪೊನ್ನಾನಿ ಎಂಬಲ್ಲಿ 1765ರಲ್ಲಿ ಜನಿಸಿದರು.  ಪ್ರಾಥಮಿಕ ವಿದ್ಯಾಭ್ಯಾಸದ ನಂತರ ಪೊನ್ನಾನಿಯ ವಲಿಯ ಜಮಾಅತ್ ಮಸೀದಿಯ ಖಾಝಿಯಾದ ಮಮ್ಮಿಕುಟ್ಟಿ (ಖ.ಸಿ) ಯವರಿಂದ ವಿದ್ಯಾರ್ಜನೆ ಮಾಡಿದ ನಂತರ ತಾನೂರ್, ಪೊನ್ನಾನಿ ಮತ್ತು ವೆಳಿಯಂಗೋಡು ಪಳ್ಳಿ ದರ್ಸ್‌ಗಳಲ್ಲಿ ಹಲವಾರು ವರ್ಷಗಳ ಕಾಲ ಅಧ್ಯಾಪಕರಾಗಿ ಸೇವೆ ಸಲ್ಲಿಸಿದರು. ಹಿಜರಿ 1218ರಲ್ಲಿ ವೆಳಿಯಂಗೋಡಿನ ಖಾಝಿಯಾಗಿ ನೇಮಿಸಲ್ಪಟ್ಟರು. ಅನಂತರ ಪುನ...

ಉಲಮಾಗಳ ಜೀವನ ಶೈಲಿ ಕಂಡು ನಿಂದಿಸುವವರು ಓದಲೇಬೇಕಾದ ನೈಜ ಕಥೆ.

ಉಲಮಾಗಳ ಜೀವನ ಶೈಲಿ ಕಂಡು ನಿಂದಿಸುವವರು ಓದಲೇಬೇಕಾದ ನೈಜ ಕಥೆ... 🌿🌿🌿🌿🌿🌿🌿🌿🌿🌿 ಶೈಖ್ ಅಬೂ ಮುಸ್ಲಿಂ ಅಲ್-ಫಾರಿಸಿ(ರ.ಅ) ಒಂದನುಭವ ವಿವರಿಸುತ್ತಾರೆ: ಒಂದು ದಿನ ನಾನು ಸಮಕಾಲಿನ ಶ್ರೇಷ್ಠ ವಿದ್ವಾಂಸರು, ‌ಔಲಿಯಾ‌,‌ ಸೂಫೀ‌ ಪ್ರಮುಖರೂ ಆದ‌ ಶೈಖ್ ಅಬೂ ಸ'ಈದ್‌ ಬ್ನ್ ಅಬಿಲ್ ಖೈರ್(ರ.ಅ) ಎಂಬವರ ಸಂದರ್ಶಿಸಲು‌‌ ತೆರಳಿದೆ. ಮಹಾನರು ಆಗ ಒಂದು ಪೀಠದ ಮೇಲೆ ನಾಲ್ಕು ತಲೆದಿಂಬನ್ನಿಟ್ಟು ಸ್ವಸ್ಥವಾಗಿ ಮಲಗುತ್ತಿದ್ದರು. ಕಾಲನ್ನಿಡಲು ಮತ್ತೊಂದು ದಿಂಬು. ಇಷ್ಟಕ್ಕೆ ಮುಗಿಯಲಿಲ್ಲ. ಮಹಾನರು ಒಳ್ಳೆಯ ಫಸ್ಟ್ ಕ್ಲಾಸ್ ಈಜಿಪ್ಟ್ ನಿರ್ಮಿತ ಮೇಲಂಗಿಯನ್ನೂ ಧರಿಸಿದ್ದರು. ನಾನಾದರೆ‌ ಒಂದೇ ಬಟ್ಟೆ ಧರಿಸಿರುವೆನು. ಅದೂ ಕೂಡ ಮಣ್ಣು,‌ ಕೊಳಕು ಆವರಿಸಿ ಬಟ್ಟೆಯ ಬಣ್ಣವೇ‌ ಬದಲಾಗಿತ್ತು. ನಿರಂತರವಾಗಿ ಎಲ್ಲವನ್ನೂ  ಪರಿತ್ಯಾಗ(ಮುಜಾಹದಃ) ಮಾಡಿದರಿಂದ ನನ್ನ ಶರೀರ ತೀವ್ರವಾಗಿ ಹದಗೆಟ್ಟಿತು. ಕೆನ್ನೆ ಹಳದಿ ಬಣ್ಣಕ್ಕೆ ತಿರುಗಿತ್ತು. ಶೈಖರ ಈ ಅವಸ್ಥೆ ಕಂಡಾಗ ನನ್ನ ಮನದಲ್ಲಿ ಜಿಗುಪ್ಸೆ ಭಾವ ಮೂಡಿತು. ನಾನು ನನ್ನೊಂದಿಗೆ ಹೇಳಿದೆ "ಇವರೂ ಒಂದು ದರ್ವೇಷ್(ಫಕೀರ್), ನಾನೂ ಒಬ್ಬ ದರ್ವೇಷ್, ನಾನು ಇಷ್ಟೆಲ್ಲಾ ಪರಿತ್ಯಾಗ ಮಾಡಿ ನಿರಾಡಂಬರವಾಗಿ ಜೀವಿಸುತ್ತಿರುವಾಗ ಇವರು ಮಾತ್ರ ಈ ಕಾಣುವ ಐಹಿಕ ಸುಖಲೋಲುಪತೆಯ ಆಡಂಬರ ಜೀವನ ಸಾಗಿಸುತ್ತಿದ್ದಾರಲ್ಲವೇ..!!" ಇಷ್ಟು ಭಾವಿಸಿದ್ದೇ ತಡ.. ಶೈಖ್ ನನ್ನ ಮನಸ್ಸು ವಾಚಿಸಿದರು.‌ ನ...

ಅಹ್ಲುಬೈತ್'ನೊಂದಿಗಿನ ಸ್ನೇಹ

ಅಹ್ಲುಬೈತ್'ನೊಂದಿಗಿನ ಸ್ನೇಹ ಮುಹಮ್ಮದ್ ತೌಸ್ವೀಫ್ ಕಾಪು       ಬಗ್ದಾದಿನ ವ್ಯಾಪಾರಿಯೊಬ್ಬರು ನಮಾಝ್ ನಿರ್ವಹಿಸಲು ಮಸ್ಜಿದ್'ಗೆ ಪ್ರವೇಶಿಸಿದರು. ಅಲ್ಲಿ *ಜಮಾಅತ್ (ಸಾಮೂಹಿಕ)* ನಮಾಝ್ ನಡೆಯುತ್ತಿತ್ತು. ನಮಾಝ್ ಮುಗಿದೊಡನೆ ಆ ನಮಾಝಿನಲ್ಲಿ ಭಾಗವಹಿಸಿದ್ದ ವ್ಯಕ್ತಿಯೊಬ್ಬರು ಎದ್ದು ನಿಂತು ಹೇಳಿದರು; *'ಸ್ನೇಹಿತರೇ ನಾನು ನಬಿ ಕುಟುಂಬದ ಓರ್ವ ಸದಸ್ಯನಾಗಿದ್ದೇನೆ. ನನಗೆ ವಿವಾಹ ಪ್ರಾಯ ತಲುಪಿದ ಓರ್ವ ಮಗಳಿದ್ದಾಳೆ. ಅವಳನ್ನು ಮದುವೆ ಮಾಡಿಕೊಡಲು ಆರ್ಥಿಕ ಸಾಮರ್ಥ್ಯವು ನನಗಿಲ್ಲ. ಆದ್ದರಿಂದ ನನ್ನ ಪಿತಾಮಹರಾದ ನಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರನ್ನು ನೆನೆದು ನೀವು ನನಗೆ ಸಹಾಯ ಮಾಡಬೇಕು.'*      ನಮಾಝ್ ಮುಗಿಸಿ ಹೊರಟ ಹಲವರು, *'ಇವರಂತೆ ಅದೆಷ್ಟೋ ಮಂದಿಯನ್ನು ನಾವು ಕಂಡಿದ್ದೇವೆ'* ಎಂಬ ಭಾವನೆಯೊಂದಿಗೆ ಆ ವ್ಯಕ್ತಿಯನ್ನು ಕಡೆಗಣಿಸಿದರು. ಕೆಲವೇ ಕೆಲವರು ಮಾತ್ರ ಸಣ್ಣ ಪುಟ್ಟ ಸಹಾಯವನ್ನು ಮಾಡಿದರು. *ಆದರೆ ಒಬ್ಬ ವ್ಯಾಪಾರಿಗೆ ಈ ಅಪೇಕ್ಷೆಯು ಸಣ್ಣದಾಗಿ ಕಾಣಲಿಲ್ಲ. ಓರ್ವ ಸಯ್ಯದ್ ಅಲ್ಲವೇ ಈ ರೀತಿ ಕೇಳುತ್ತಿರುವುದು? ಮತ್ತವರು ಹೆಚ್ಚೇನೂ ಚಿಂತಿಸಲಿಲ್ಲ. ತನ್ನ ಕೈಯಲ್ಲಿದ್ದ ಐನೂರು ಬೆಳ್ಳಿ ನಾಣ್ಯಗಳನ್ನು ಆ ಸಯ್ಯದರಿಗೆ ಅವರು ಕೊಟ್ಟುಬಿಟ್ಟರು‌.! ಸಯ್ಯದ್‌ರವರಿಗೆ ತುಂಬಾ ಸಂತೋಷವಾಯಿತು. ಓರ್ವ ಸಯ್ಯದರಿಗೆ ಸಹಾಯ ಮಾಡಿದ್ದೇನೆಂದು ವ್ಯಾಪಾರಿಗೂ ಆತ್ಮ ತೃಪ್ತಿ! ಇಬ್ಬರೂ ಪರಸ್ಪರ ಬೀಳ್ಕೊಟ್ಟು...

ಕಲ್ಲು ಕರಗಿಸುವ ಕಲ್ಲಂಗಡಿ ಹಣ್ಣು

ಕಲ್ಲು ಕರಗಿಸುವ  ಕಲ್ಲಂಗಡಿ ಹಣ್ಣು  (ಬಚ್ಚಂಗಾಯಿ, Watermelon, بطيخ) ಯೂಸುಫ್ ನಬ್‌ಹಾನಿ ಕುಕ್ಕಾಜೆ 📞00971 553499119    ▪ ಕಲ್ಲಂಗಡಿ ಹಣ್ಣಿನ ಬಗ್ಗೆ ತಿಳಿಯದವರು ಯಾರೂ ಈ ಜಗತ್ತಿನಲ್ಲಿ ಇರಲಿಕ್ಕಿಲ್ಲ. ಕಲ್ಲಂಗಡಿಯು ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರಿಗೆ ಬಹಳ ಇಷ್ಟವಾದ ಹಣ್ಣಾಗಿತ್ತು. ಅವರು ಅದನ್ನು ತಿನ್ನುವಾಗ ಅದರೊಂದಿಗೆ ಒಂದೆರಡು ಹಸಿ ಖರ್ಜೂರವನ್ನು ಕೂಡ ಕೆಲವೊಮ್ಮೆ ತಿನ್ನುತ್ತಿದ್ದರು. ಅದರ ಕಾರಣವೇನೆಂದು ಕೇಳಿದಾಗ, *"ಕಲ್ಲಂಗಡಿಯು ಬಹಳ ತಂಪಾಗಿದೆ. ಖರ್ಜೂರವು ಬಹಳ ಉಷ್ಣವಾಗಿದೆ. ಆದ್ದರಿಂದ ಕಲ್ಲಂಗಡಿ ತಿಂದು ಶೀತ ಆಗುವ ಭಯವಿದ್ದರೆ ಅದರೊಂದಿಗೆ ಖರ್ಜೂರವನ್ನೂ ಸೇವಿಸಿರಿ. ಒಂದರ ಉಷ್ಣತೆಯ ಪ್ರಮಾಣವನ್ನು ಮತ್ತೊಂದರ ಶೀತವು ನಿಯಂತ್ರಣ ಮಾಡುವಾಗ ಇನ್ನೊಂದರ ಶೀತವನ್ನು ಮತ್ತೊಂದರ ಉಷ್ಣವು ಹತೋಟಿ ಮಾಡುತ್ತದೆ"* ಎಂದು ಉತ್ತರಿಸಿದರು.    ▪ *"ಕಲ್ಲಂಗಡಿಯನ್ನು* ನೀವು ಕಚ್ಚಿ ತಿನ್ನಿರಿ. ಅದರ ಒಳಗಿರುವ ನೀರು ಅಲ್ಲಾಹನ ಪ್ರತ್ಯೇಕ ಅನುಗ್ರಹವಾಗಿದೆ. ಅದರ ಅಸಾಮಾನ್ಯ ರುಚಿ ಸ್ವರ್ಗದ ಹಣ್ಣಿನ ರುಚಿಯಾಗಿದೆ. ಪ್ರಪ್ರಥಮವಾಗಿ  ಪ್ರಪಂಚಕ್ಕೆ  ಸ್ವರ್ಗದಿಂದ ತರಲಾದ ಹಣ್ಣು ಇದಾಗಿದೆ" ಎಂದು ಒಂದು ಹದೀಸಿನಲ್ಲಿ ವರದಿಯಾಗಿದೆ.    ▪ *ಯಾವಾಗಲೂ*  ಉಷ್ಣ ಶರೀರದವರು ಕಲ್ಲಂಗಡಿಯನ್ನು ಖರ್ಜೂರವಿಲ್ಲದೆ  ತಿನ್ನಬಹುದು. ತಿಂದ ಕೂಡಲೇ ...

ಬರಾಅತ್ : ತನ್ನದೇ ನಾಯಕರನ್ನು ತಿರಸ್ಕರಿಸಿದ ಸಲಫಿಗಳು

ಬರಾಅತ್ : ತನ್ನದೇ ನಾಯಕರನ್ನು ತಿರಸ್ಕರಿಸಿದ ಸಲಫಿಗಳು ಮದ್‌ಹಬ್‌ಗಳನ್ನು ವ್ಯಂಗ್ಯವಾಡುತ್ತಾ, ಮದ್‌ಹಬ್‌ಗಳನ್ನು ತಿರಸ್ಕರಿಸುತ್ತಾ ಸಲಫಿಸಂ‌ ಎಂಬ  ನವಪಂಥ ಕೇರಳದಲ್ಲಿ ಎಂಟ್ರಿ ಪಡೆಯಿತು.‌ ಮದ್ಹಬ್ ಇಮಾಮರಿಗಿಂತಲೂ ತಮ್ಮ ನಾಯಕರಿಗೆ ವಿದ್ಯೆಯಿದೆಯೆಂದು ಬೊಗಳೆ ಬಿಡುವುದು ಇವರ ವಾಡಿಕೆ. ಇದಕ್ಕೆ ಕಾರಣ 1400 ಇತಿಹಾಸದಲ್ಲಿ ಶೇಕಡಾ 95 ರಷ್ಟು ಉಲಮಾಗಳು ಸಲಫಿ ಸಿದ್ದಾಂತಕ್ಕೆ ವಿರುದ್ದವಾಗಿದ್ದರು. ಇವರ ಟಾಪ್ ನಾಯಕರೆಂದು ಇವರೇ ಹೇಳುವ ಇಬ್ನು ತೀಮಿಯ್ಯ ಬರಾಅತ್ ವಿಷಯದಲ್ಲಿ ಇವರ ವಿರುದ್ಧ ನಿಂತಿದ್ದಾರೆ. *ಬರಾಅತ್ ರಾತ್ರಿಯ ವಿಷಯದಲ್ಲಿ ಇಬ್ನು ತೀಮಿಯ್ಯ ಮುಸ್ಲಿಮರ ನಿಲುವನ್ನು ಸಮರ್ಥಿಸಿದ್ದು , ಸಲಫಿಸಂ‌ನ ಪೊಳ್ಳುತನ ಬಹಿರಂಗಗೊಳಿಸಿದ್ದಾರೆ.ಸಲಫಿಸಂನ್ನು ಪರೋಕ್ಷವಾಗಿ ಸಮ್ಮತಿಸುವವರು ಪರಲೋಕದಲ್ಲಿ ವಿಜಯಬೇಕಾದರೆ ಅದರಿಂದ ಹೊರಬನ್ನಿ.* ಬರಾಅತ್ ರಾತ್ರಿಯ ಮಹತ್ವದ ಕುರಿತು ಇಬ್ನು ತೀಮಿಯ್ಯ ವಿವರಿಸುವುದು ನೋಡಿ. ليلة النصف مِن شعبان. فقد روي في فضلها من الأحاديث المرفوعة والآثار ما يقتضي: أنها ليلة مُفضَّلة. وأنَّ مِن السَّلف مَن كان يَخُصّها بالصَّلاة فيها ، وصوم شهر شعبان قد جاءت فيه أحاديث صحيحة. ومِن العلماء من السلف، من أهل المدينة وغيرهم من الخلف: مَن أنكر فضلها ، وطعن في الأحاديث الواردة فيها، كحديث:[إن الله يغفر فيها لأكثر من ...

ಕಾಲದ ಸಂಗಾತಿ -- "ಸೂರತುಲ್ ವಾಖಿಅಃ"

 ಕಾಲದ ಸಂಗಾತಿ -- "ಸೂರತುಲ್ ವಾಖಿಅಃ" ಯೂಸುಫ್ ನಬ್‌ಹಾನಿ ಕುಕ್ಕಾಜೆ 📞00971 553499119 ▪ *ಪ್ರಖ್ಯಾತ* ಸ್ವಹಾಬಿ ಹಝ್ರತ್ ಅಬ್ದುಲ್ಲಾಹ್ ಬಿನ್ ಮಸ್‌ಊದ್ (ರ) ರವರು ಖಲೀಫಾ ಉಸ್‌ಮಾನ್ (ರ) ರ ಖಿಲಾಫತಿನ ವೇಳೆ ಇರಾಕಿನ 'ಕೂಫಾ' ಪ್ರಾಂತದ ಗವರ್ನರ್ ಆಗಿ ನಿಯುಕ್ತರಾಗಿದ್ದರು.    ▪ *ಅಧಿಕಾರದಲ್ಲಿರುವಾಗಲೇ* ಅನಾರೋಗ್ಯ ಪೀಡಿತರಾದ ಅವರು ತನ್ನ ಊರಾದ ಮದೀನಾಕ್ಕೆ ವಾಪಾಸಾದರು. ಸ್ವಗೃಹದಲ್ಲಿ ಖಾಯಿಲೆ ಪೀಡಿತರಾಗಿ ಮಲಗಿರುವಾಗ ಒಮ್ಮೆ ಖಲೀಫಾ ಉಸ್‌ಮಾನ್ (ರ), ಅವರನ್ನು ಸಂದರ್ಶಿಸಲು ಹೋದರು. ಮನೆ ತಲುಪಿದ ಖಲೀಫರು ಬಿನ್ ಮಸ್‌ಊದ್ (ರ) ರನ್ನುದ್ದೇಶಿಸಿ,  *"ತಾವು  ವಫಾತಿನ ನಂತರ ತಮ್ಮ ಮಕ್ಕಳಿಗೆ  ಬದುಕಲು ಏನಾದರು ಆಸ್ತಿಪಾಸ್ತಿ ಮಾಡಿ ಇಟ್ಟಿದ್ದೀರಾ.?ಇಲ್ಲವೆಂದಾದಲ್ಲಿ ನಾನು ಇಲ್ಲಿನ  ದಾನಿಗಳಿಂದ ಸಂಗ್ರಹಿಸಿ ತಮ್ಮ ಮಕ್ಕಳ ಭವಿಷ್ಯಕ್ಕೆ ಒಂದು ವ್ಯವಸ್ಥೆ ಮಾಡಿದರೆ ಹೇಗೆ?* ಮಹಾತ್ಮರು  ಮುಗುಳ್ನಗುತ್ತಾ   *"ಬೇಡ.. ಬೇಡ... ನನಗೆ ಅದರ ಅಗತ್ಯವಿಲ್ಲ. ದೊಡ್ಡ ಆಸ್ತಿಪಾಸ್ತಿ ಏನೂ ನಾನು ಮಾಡಿಟ್ಟಿಲ್ಲ. ಆದರೆ ನನ್ನ ಮಕ್ಕಳು ಮೂರು ಹೊತ್ತಿನ ಅನ್ನ ಸಿಗದೆ ಹಸಿವಿಗೆ ಈಡಾಗುವ ಭಯ ನನಗೆ ಕಿಂಚಿತ್ತೂ ಇಲ್ಲ. ಯಾಕೆಂದರೆ, ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಕಲಿಸಿ ಕೊಟ್ಟ ಖುರ್‌ಆನಿನ "ಸೂರಃ ಅಲ್ ವಾಖಿಅ" ವನ್ನು (الواقعة) ಅವರಿಗೆ  ನಾನು ಕಲಿಸಿ ...

ಸಾಮಾಜಿಕ ಅಂತರ

ಪ್ರವಾದಿ (ಸ) ಪಾಲಿಸಿದ "ಸೋಷಿಯಲ್ ಡಿಸ್ಟೆಂಸಿಂಗ್ ▪ *ಒಮ್ಮೆ* ತ್ವಾಯಿಫ್‌ನಲ್ಲಿ ಸಖಫಿಯ್ಯ್ ಗೋತ್ರದ ಕೆಲವರು ಇಸ್ಲಾಮ್ ಸ್ವೀಕರಿಸಿದರು. ನಂತರ ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಹತ್ತಿರ ಪರಸ್ಪರ ಒಪ್ಪಂದ ಮಾಡಲು ಮದೀನಕ್ಕೆ ಬಂದರು.  ▪ *ಮದೀನಕ್ಕೆ* ಬಂದ ಈ ನಿಯೋಗದಲ್ಲಿ ಒಬ್ಬರಿಗೆ ಹರಡುವ ಸಾಂಕ್ರಮಿಕ ಕುಷ್ಟ ರೋಗವಿತ್ತು. ಇದನ್ನು ತಿಳಿದ ಪ್ರವಾದಿಯವರು ಒಪ್ಪಂದದ ವೇಳೆ ನಿಯೋಗದ ಎಲ್ಲರಿಗೂ ಹಸ್ತದಾನ ಮಾಡಿದರೂ ಅವರಿಗೆ ಮಾತ್ರ ಕೈ ಕೊಡಲಿಲ್ಲ.!!! ▪ *ಸ್ವತಃ* ಪ್ರವಾದಿವರ್ಯರೇ ಬೋಧಿಸಿದ ಹಸ್ತದಾನ, ಆಲಿಂಗನ ಮುಂತಾದ  ಕೆಲವು ಶಿಷ್ಟಾಚಾರಗಳನ್ನು ಕೆಲವೊಮ್ಮೆ ಇಂತಹ ಕಾರಣಗಳಿಗಾಗಿ ಅವರೇ ನಿರುತ್ಸಾಹಗೊಳಿಸಿದ್ದಕ್ಕೆ ಮೇಲಿನ ಘಟನೆ ಒಂದು ನಿದರ್ಶನ. ‌ ◼️ಸಾಂಕ್ರಾಮಿಕ ರೋಗ ತಡೆಗೆ ಪ್ರವಾದಿ (ಸ) ತೋರಿಸಿದ ಈ "ಸಾಮಾಜಿಕ ಅಂತರ"ದ ಮಾದರಿ ಇಂದಿನ ಕೊರೋನಾ ಕಾಲಕ್ಕೆ ಅದೆಷ್ಟು  ಆದರ್ಶ ಪ್ರಾಯ ಎಂದು ಬೇರೆ ಹೇಳಬೇಕಾಗಿಲ್ಲ.!!!  ✍🏻ಸಂಗ್ರಹ: ಇಮಾಮ್ ಮುಲ್ಲಾ‌ ಅಲಿಯ್ಯ್ ಅಲ್ ಖಾರಿಅ್ ರವರ *ಮಿರ್‌ಖಾತುಲ್ ಮಫಾತೀಹ್* ಎಂಬ ಗ್ರಂಥದಿಂದ

ಲಕ್ಷಾಂತರ ಜನರನ್ನು ಬಲಿಪಡೆದ ಪ್ರಾಚೀನ ಕೊರೋನಾ

ಲಕ್ಷಾಂತರ ಜನರನ್ನು ಬಲಿಪಡೆದ ಪ್ರಾಚೀನ ಕೊರೋನಾ * ✍🏻ಯೂಸುಫ್ ನಬ್‌ಹಾನಿ ಕುಕ್ಕಾಜೆ * 00971553499119 * "ಒಂದು *   ಊರಿನಲ್ಲಿ ಅಥವಾ ಒಂದು ಪ್ರದೇಶದಲ್ಲಿ ಪ್ಲೇಗ್, ಕೊರೋನಾ, ಕಾಲರಾ ಮುಂತಾದ ಸಾಂಕ್ರಾಮಿಕ ರೋಗಗಳು ಬಂದರೆ ನೀವು ಇರುವ ಊರಿನಿಂದ ರೋಗವನ್ನು ಭಯಪಟ್ಟು  ಪಲಾಯನ ಮಾಡಬಾರದು. ಅಂತೆಯೇ ನೀವು ಸುರಕ್ಷಿತ ಜಾಗದಲ್ಲಿ ಇರುವುದಾರೆ ರೋಗಪೀಡಿತ ಜಾಗಕ್ಕೂ ಹೋಗಬಾರದು." ಎಂದು ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಹೇಳಿದ ಮಾತಿನ ಮಹತ್ವ ಮತ್ತು ಅದರ ಪರಿಣಾಮ ಎಷ್ಟೆಂದು ಹಾಲಿ ವಿದ್ಯಮಾನಗಳು ನಮಗೆ ಮನವರಿಕೆ ಮಾಡಿಕೊಡುತ್ತವೆ.    ▪️ * ಸುಮಾರು" * ಮೂರು ಸಾವಿರ ವರ್ಷಗಳ ಮುಂಚೆ ಪ್ರವಾದಿ ಹಝ್ರತ್ ಮೂಸಾ (ಅ) ಅವರ ವಫಾತಿನ ಕೆಲವು ವರ್ಷಗಳ ಬಳಿಕ ಬಂದ  ಪ್ರವಾದಿಯಾಗಿದ್ದರು ಹಝ್ರತ್ * "ಹಿಝ್‌ಖೀಲ್ * " (ಅ) . ಅವರ ಜನತೆ ಅವರನ್ನು ಅನುಸರಿಸದೆ ಹೋದಾಗ ಅಲ್ಲಾಹನು ಪ್ಲೇಗ್ ರೋಗ ಕೊಟ್ಟು ಅವರನ್ನು ಪರೀಕ್ಷಿಸಿಸಿದನು. ಮೊದಲೊಮ್ಮೆ ಸಣ್ಣ ಮಟ್ಟದಲ್ಲಿ ಪ್ಲೇಗು ಬಂದಾಗ ಊರಿನ ಕೆಲವರು ಅಲ್ಲಿಂದ ಪಲಾಯನ ಮಾಡಿದ್ದರು. ಪಲಾಯನ ಮಾಡಿದವರು ಬಚಾವು ಆಗಿದ್ದರು. ಅದನ್ನು ನೋಡಿ ಎರಡನೇ ಸಲ ಪ್ಲೇಗ್ ಬಂದಾಗ ಊರಿನ ಎಲ್ಲರೂ ಗುಂಪಾಗಿ ಹತ್ತಿರದ ಗ್ರಾಮಕ್ಕೆ ವಲಸೆ ಹೋದರು. ಹೋದವರ ಸಂಖ್ಯೆ ಹತ್ತು ಸಾವಿರವೆಂದೂ, ಮೂವತ್ತು ಸಾವಿರವೆಂದೂ, ಎಪ್ಪತ್ತು ಸಾವಿರವೆಂದೂ  ಅಭಿಪ್ರಾಯಗಳಿವೆ. ಅವರು ಹತ್ತ...