Skip to main content

Posts

Showing posts from December, 2024

ಪಳ್ಳಿ ದರ್ಸ್‌ ಪರಂಪರೆ : ಇಸ್ಲಾಮೀ ಗುರುಕುಲ ಪದ್ದತಿ

ಪಳ್ಳಿ ದರ್ಸ್‌ ಪರಂಪರೆ : ಇಸ್ಲಾಮೀ ಗುರುಕುಲ ಪದ್ದತಿ -------------------------------------- ಬ್ಯಾರಿ ಭಾಷೆಯಲ್ಲಿ ಪಳ್ಳಿ ಎಂದರೆ ಮಸೀದಿ ಮತ್ತು ದರ್ಸ್ ಎಂದರೆ ಪಾಠಶಾಲೆ. ಪ್ರಾಥಮಿಕ ಇಸ್ಲಾಮೀ ಶಿಕ್ಷಣ ನೀಡುವ ಪಾಠಶಾಲೆಗಳಿಗೆ ದರ್ಸ್ ಅಥವಾ ಮದ್ರಸಾ ಎನ್ನುತ್ತೇವೆ.ಉನ್ನತ ಧಾರ್ಮಿಕ ಶಿಕ್ಷಣ ನೀಡುವ ಅಂದರೆ ಆಲಿಂ ಶಿಕ್ಷಣ ನೀಡುವ ಸಂಸ್ಥೆಗಳಿಗೆ ಈಗ ಶರೀ‌ಅತ್ ಕಾಲೇಜು, ಅರೆಬಿಕ್ ಕಾಲೇಜು, ದ‌ಅ್‌ವಾ ಕಾಲೇಜು ಮುಂತಾದ ಹೆಸರುಗಳಿವೆ.ಇಲ್ಲೆಲ್ಲಾ ನೀಡುವ  ಶಿಕ್ಷಣಗಳು ಹೆಚ್ಚು ಕಡಿಮೆ ಒಂದೇ ರೀತಿಯದ್ದು.ಈ ರೀತಿಯ ಕಾಲೇಜ್‌ಗಳು ಆರಂಭವಾಗುವ ಮುನ್ನವೂ ನಮ್ಮಲ್ಲಿ ಉಲಮಾಗಳಿದ್ದರು. ಅವರಿಗೆ ನಿರ್ದಿಷ್ಟವಾದ ಪದವಿಗಳಿರಲಿಲ್ಲ. ಆಗ ಹೆಚ್ಚಿನೆಲ್ಲಾ ಉಲಮಾಗಳು ತಮ್ಮ ಹೆಸರಿನ ಜೊತೆಗೆ ಮುಸ್ಲಿಯಾರ್ ಎಂಬ ಬಿರುದನ್ನು ಸ್ವಯಂ ಸೇರಿಸಿಬಿಡುತ್ತಿದ್ದರು.ವಾಸ್ತವದಲ್ಲಿ ಮುಸ್ಲಿಯಾರ್ ಎನ್ನುವುದು ಕೇರಳದ ಪೊನ್ನಾಣಿಯ ಮಕ್ದೂಮಿ‌ ಇಸ್ಲಾಮೀ ಶಿಕ್ಷಣ ಸಂಸ್ಥೆಯಲ್ಲಿ ನೀಡುವ ಬಿರುದಾಗಿತ್ತು. ಆದರೆ ಮುಸ್ಲಿಯಾರ್ ಎನ್ನುವುದು ತನ್ನ ಸಂಸ್ಥೆಯಲ್ಲಿ ವಿದ್ಯಾರ್ಜನೆಗೈದು ಉತ್ತೀರ್ಣರಾದವರಿಗೆ ನೀಡುತ್ತಿದ್ದ ಪದವಿಯಾದರೂ ಆ ಸಂಸ್ಥೆ ಅದಕ್ಕೆ ತನ್ನ ಕಾಪಿರೈಟ್ ಕ್ಲೈಮ್ ಮಾಡಲು ಹೋಗದಿದ್ದುದರಿಂದ ಅಂದಿನಿಂದ ಇಂದಿನವರೆಗೂ ನಿರ್ದಿಷ್ಟ  ಇಸ್ಲಾಮಿಕ್ ಶಿಕ್ಷಣಾಲಯದ ಪದವಿ ಪಡೆಯದ ಎಲ್ಲಾ ಆಲಿಂಗಳೂ ಅದನ್ನೇ ತಮ್ಮ ಹೆಸರಿನೊಂದಿಗೆ ಸೇರಿಸುತ್ತಿದ್ದರು. ಅವರು ಮಾತ್ರವಲ್ಲದೇ ...