ರಮದಾನಿನ ಕೃಷಿಕ ! ವಯೋಸಹಜ ರೋಗದಿಂದ ಚೇತರಿಸಿಕೊಂಡಿದ್ದ ಉಳ್ಳಾಲದ ಗುರು ತಾಜುಲ್ ಉಲಮಾ ತಂಙಳರನ್ನು ಭೇಟಿ ಮಾಡಲೆಂದು ಆಪ್ತರೊಬ್ಬರು ತೆರಳಿದ್ದರು. ಅದು ರಮದಾನ್ ಕಳೆದ ಶವ್ವಾಲ್ ತಿಂಗಳು. ಸಂದರ್ಶನಕ್ಕಾಗಿ ತೆರಳಿದ ಅವರಲ್ಲಿ ತಂಙಳ್ " ಎಲ್ಲವೂ ಹೋಯಿತು !" ಎಂದೇಳಿ ಅತ್ತಿದ್ದರು. ಅವರು ವಿವರ ಕೇಳಿದಾಗ ಉಳ್ಳಾಲ ತಂಙಳರ ಪ್ರತಿಕ್ರಿಯೆ ಹೀಗಿತ್ತು ಕಳೆದ ರಮದಾನ್ ನಲ್ಲಿ ಹದಿನಾರು ಬಾರಿ ಪೂರ್ಣವಾಗಿ ಕುರಾನ್ ಓದಲು ಸಾಧ್ಯವಾಗಿತ್ತು. ಈ ರಮದಾನ್ ನಲ್ಲಿ ನನಗದು ಸಾಧ್ಯವಾಗಿಲ್ಲ. ಎಲ್ಲವೂ ಹೋಯಿತು ಎಂದು ನೋಯುವ ಹೃದಯದೊಂದಿಗೆ ಹೇಳಿದ್ದರು. ನನ್ನ ಇಷ್ಟ ಜನರೇ, ಆ ಬಾರಿ ತಂಙಳ್ ಒಂಭತ್ತೋ/ ಹನ್ನೆರಡು ಖತಮ್ ಓದಿದ್ದರು. ಆದಾಗ್ಯೂ ತಂಙಳ್ ಎದೆಗುಂದಿದ್ದರು. ತಂಙಳುಸ್ತಾದರ ಪ್ರತಿಕ್ರಿಯೆ ಕಳವಳಕಾರಿಯಾಗಿತ್ತು. ಅಲ್ಲಾಹನ ಮೇಲಿರುವ ಅಗಾಧ ಭಯ ಭಕ್ತಿ ಮತ್ತು ಪೈಗಂಬರ್ ಮುಹಮ್ಮದ್ ﷺ ರೊಂದಿಗಿರುವ ಅದಮ್ಯ ಪ್ರೆಮಾನುಭಂದ ತಂಙಳ್ ರ ಬಾಲ್ಯದಲ್ಲೇ ಅಂತರ್ಗತವಾದ ಕಾರಣ ಆರಾಧನೆಯಲ್ಲಿ ಯಾವತ್ತೂ ವಿನಾಯಿತಿ ನಿರೀಕ್ಷಿದವರಲ್ಲ. ಶಾರೀರಿಕವಾಗಿ ಅಸ್ವಸ್ಥಗೊಂಡರೆ ಲಕ್ಷಗಟ್ಟಲೆ ದೈವಿಕ ಜಪಗಳನ್ನು ಮುದಿರಿಸಿ ಪ್ರಾರ್ಥಿಸುವುದು ಅವರ ಜೀವನಕ್ರಮ.ರಮದಾನ್ ಬಂತೆಂದರೆ ಎಲ್ಲಿಲ್ಲದ ಸಂತೋಷ. ಎಲ್ಲಾ ಕಾರ್ಯಕ್ರಮಗಳನ್ನೂ ಮೊಟಕುಗೊಳಿಸಿ ದಿನನಿತ್ಯ ಕುರಾನ್ ಓದುವ ಹವ್ಯಾಸ. ಅವರ ಓದು ಮತ್ತು ನಮಾಜು ನೋಡಿ ನಿಲ್ಲುವುದೇ ಒಂದು ಆನಂದವಾಗಿತ್ತು. ಓದುವ ಸೂಕ್ತಗಳ...
ಇದು ಅಹ್ಲುಸ್ಸುನ್ನತಿ ವಲ್ ಜಮಾಅತಿನ ನೈಜ ಆಶಯಾದರ್ಶಗಳನ್ನು ವಿವರಿಸುವ ಬ್ಲಾಗ್ ಆಗಿದೆ. More info cont - Nawaz Saqafi Al Amjadi Ullala.