ಮನೆಯಲ್ಲಿ ಪತ್ನಿ ಮಕ್ಕಳೊಂದಿಗೆ ಜಮಾಅತ್ "ಏಕಾಂಗಿಯಾಗಿ ನಮಾಜ್ ಮಾಡುವುದಕ್ಕಿಂತ ಜಮಾಅತ್ ಆಗಿ ನಮಾಜ್ ಮಾಡಿದರೆ ಇಪ್ಪತ್ತೇಳು ಪಟ್ಟು ಜಾಸ್ತಿ ಪುಣ್ಯ ಲಭಿಸುತ್ತದೆ" (ಮುತ್ತು ನೆಬಿ ﷺ ) *A) ತಂದೆ ಮತ್ತು ಮಗ* ಒಬ್ಬ ಇಮಾಂ ಆಗಿ ನಿಲ್ಲಬೇಕು, ಮತ್ತೊಬ್ಬ ಇಮಾಮಿನ ಬಲಬದಿಯಲ್ಲಿ ಸ್ವಲ್ಪ ಹಿಂದಕ್ಕೆ ಸರಿದು ನಿಲ್ಲಬೇಕು. *B) ತಂದೆ ಹಾಗೂ ಒಂದಕ್ಕಿಂತ ಹೆಚ್ಚು ಗಂಡು ಮಕ್ಕಳು* ಒಬ್ಬ ಇಮಾಂ ನಿಲ್ಲುವುದು, ಉಳಿದವರು ಒಂದೇ ಸಫ್ಫ್ ಆಗಿ ಇಮಾಮಿನ ನೇರ ಹಿಂಬದಿಯಲ್ಲಿ ನಿಲ್ಲುವುದು. *C) ಗಂಡ ಮತ್ತು ಹೆಂಡತಿ ಮಾತ್ರ* ಗಂಡ ಇಮಾಂ ನಿಲ್ಲಬೇಕು, ಹೆಂಡತಿ ನೇರ ಹಿಂದೆ ಸರಿದು (ಸಫ್ಫ್ ನಿಲ್ಲುವಂತೆ) ನಿಲ್ಲಬೇಕು. *D) ಗಂಡ, ಹೆಂಡತಿ ಮತ್ತು ಒಬ್ಬ ಮಗ* ಗಂಡ ಅಥವಾ ಮಗ ಇಮಾಂ ನಿಲ್ಲಬೇಕು, ಮತ್ತೊಬ್ಬ ಇಮಾಮಿನ ಬಲಬದಿಯಲ್ಲಿ ಸ್ವಲ್ಪ ಹಿಂದಕ್ಕೆ ಸರಿದು ನಿಲ್ಲಬೇಕು. ಹೆಂಡತಿ ಇಮಾಮಿನ ನೇರ ಹಿಂದಕ್ಕೆ ಸರಿದು ನಿಲ್ಲಬೇಕು (ಸಫ್ಫ್ ನಿಲ್ಲುವಂತೆ) *E) ಗಂಡ, ಹೆಂಡತಿ ಮತ್ತು ಒಂದಕ್ಕಿಂತ ಹೆಚ್ಚು ಗಂಡು ಮಕ್ಕಳು* ಗಂಡಸರಲ್ಲಿ ಒಬ್ಬ ಇಮಾಂ ನಿಲ್ಲಬೇಕು, ಉಳಿದ ಗಂಡಸರು ಇಮಾಮಿನ ನೇರ ಹಿಂಬದಿಯಲ್ಲಿ ಸಫ್ಫಾಗಿ ನಿಲ್ಲಬೇಕು ಮತ್ತೆ ಅದರ ಹಿಂದೆ ಹೆಂಡತಿ ನಿಲ್ಲಬೇಕು. *F) ಗಂಡ, ಹೆಂಡತಿ, ಗಂಡು ಮಕ್ಕಳು ಮತ್ತು ಹೆಣ್ಣು ಮಕ್ಕಳು* ಗಂಡಸರಲ್ಲಿ ಒಬ್ಬ ಇಮಾಂ ನಿಲ್ಲಬೇಕು, ಅದರ ಹಿಂದೆ ಉಳಿದ ಗಂಡಸರು ಮತ್ತೆ ಅದರ ಹಿಂದೆ ಹೆಂಡತಿ ಮತ್ತು ಹೆಣ...
ಇದು ಅಹ್ಲುಸ್ಸುನ್ನತಿ ವಲ್ ಜಮಾಅತಿನ ನೈಜ ಆಶಯಾದರ್ಶಗಳನ್ನು ವಿವರಿಸುವ ಬ್ಲಾಗ್ ಆಗಿದೆ. More info cont - Nawaz Saqafi Al Amjadi Ullala.