Skip to main content

Posts

Showing posts from 2019

ಭಕ್ಷ್ಯಯೋಗ್ಯ ಮುಳ್ಳುಹಂದಿ

ಭಕ್ಷ್ಯಯೋಗ್ಯ ಮುಳ್ಳುಹಂದಿ  *✒ಯೂಸುಫ್ ನಬ್‌ಹಾನಿ ಕುಕ್ಕಾಜೆ* 📞00971553499119    ▪ *ಮುಳ್ಳುಹಂದಿಯ* ಬಗ್ಗೆ ನಮ್ಮಲ್ಲಿ ತಿಳಿದವರು ಬಹಳ ಕಡಿಮೆ. ಮಾತ್ರವಲ್ಲ ಅದು ಸಾಮಾನ್ಯ ಹಂದಿಯ ಬೇರೊಂದು ವಿಭಾಗವಾಗಿದೆ ಎಂದು ಭಾವಿಸಿದವರೂ ನಮ್ಮಲ್ಲಿದ್ದಾರೆ. ಸಾಧಾರಣ ಹಂದಿಗೂ ಈ ಮುಳ್ಳುಹಂದಿಗೂ ಯಾವುದೇ ಸಂಬಂಧವಿಲ್ಲ.    ▪ *ಸುಮಾರು* ಹತ್ತು ವರ್ಷಗಳ ತನಕ ಬದುಕುವ ಈ ಪ್ರಾಣಿಗೆ ಹಗಲಿನಲ್ಲಿ ದೃಷ್ಟಿಶಕ್ತಿ ಬಹಳ ಕಡಿಮೆ. ಆದ್ದರಿಂದ ಇದು ಯಾವಾಗಲೂ ತನ್ನ ಹೊಟ್ಟೆಪಾಡಿಗಾಗಿ ರಾತ್ರಿ ಸಂಚಾರ ಮಾಡುತ್ತದೆ.    ▪ *ಗರ್ಭಧಾರಣೆಯಾಗಿ* ಒಂದೂವರೆ ತಿಂಗಳಾಗುವಾಗ ಸುಮಾರು ಎರಡರಿಂದ ಐದರ ತನಕ ಮರಿ ಹಾಕುತ್ತದೆ. ಇತರ ಯಾವುದೇ ಜೀವಿಗಳಿಗೆ ಇಲ್ಲದ ತನ್ನ ಶರೀರವನ್ನು ಮಾತ್ರ ಸಂಪೂರ್ಣವಾಗಿ ಆವರಿಸಿರುವ ಮುಳ್ಳುಗಳಾಗಿದೆ ಇದರ ಏಕೈಕ ಆಯುಧ. ಆಕ್ರಮಣ ಮಾಡಲು ಬರುವ ಅಕ್ರಮಿಯ ಕಣ್ಣು , ಮೂಗು, ಹೊಟ್ಟೆಯ ಮಧ್ಯಭಾಗ ಇತ್ಯಾದಿ ಮುಖ್ಯವಾದ ಭಾಗಗಳನ್ನು ಗುರಿಯಿಟ್ಟು ತನ್ನ ಶರೀರದಲ್ಲಿ ಯಥೇಚ್ಛವಾಗಿ ಬೆಳೆದು ಬರುವ ಮುಳ್ಳನ್ನು ಹಾರಿಸಿ ಬಿಡುತ್ತದೆ. ಎಷ್ಟರತನಕವೆಂದರೆ, ಒಬ್ಬ ಬಿಲ್ಲು ವಿದ್ಯೆಗಾರನಿಗಾದರೂ ಗುರಿತಪ್ಪಬಹುದು. ಆದರೆ ಮುಳ್ಳುಹಂದಿಗೆ ತಪ್ಪಿಹೋಗದು. ಅಷ್ಟಕ್ಕೂ ಇದು ಚತುರನಾಗಿರುತ್ತದೆ. ಬೇಟೆಯಾಡುವವನ ಕಣ್ಣು ತಪ್ಪಿಸಲು ಇದು ತನ್ನ ಮುಳ್ಳನ್ನು ಒಳಗೆ ಮಡಚಿ ಗೋಚರಕ್ಕೆ ಒಂದು ಪುಟ್ಟ ಮರದ ದಿಮ್ಮಿಯಂತೆ ಒಂದು ಕ...

ಇದೆಂತಹಾ ಅ್ಯಾಂಟೀಬಯೋಟಿಕ್

ಇದೆಂತಹಾ ಅ್ಯಾಂಟೀಬಯೋಟಿಕ್ *✒ಯೂಸುಫ್ ನಬ್‌ಹಾನಿ ಕುಕ್ಕಾಜೆ*    ▪ಸ್ವಹಾಬಿಯಾದ *ಫುದೈಕ್ ಬಿನ್ ಅಮ್‌ರ್*(ರ) ರವರು ಒಮ್ಮೆ ಒಂದು ಗುಡ್ಡಗಾಡು ಪ್ರದೇಶದಲ್ಲಿ ಒಂಟೆಯಲ್ಲಿ ಸಂಚಾರ ಮಾಡುತ್ತಿರುವಾಗ ಒಂದು ಕಡೆ ಇಳಿಯುವ ಅಗತ್ಯ ಬಂದಾಗ ಅಕಸ್ಮಾತ್ ತಿಳಿಯದೆ ಮಹಾ ವಿಷ ಸರ್ಪದ ಮೊಟ್ಟೆಯ ಮೇಲೆ ಕಾಲಿಟ್ಟರು.     ▪ *ವಿಷಪೂರಿತ* ಹಾವಿನ ಮೊಟ್ಟೆಯ ಮೇಲೆ ಪಾದರಕ್ಷೆಯಿಲ್ಲದೆ ಕಾಲಿಟ್ಟ ಕಾರಣ ಕೆಲವು ದಿನಗಳು ಕಳೆಯುವಾಗ ಅದರ ವಿಷದ ಫಲವಾಗಿ  ಅವರ ಎರಡು ಕಣ್ಣಿನ ದೃಷ್ಟಿ ಸಂಪುರ್ಣವಾಗಿ ನಷ್ಟವಾಯಿತು. ತುಂಬು ಯೌವನದಲ್ಲಿ ಉಂಟಾದ ಈ ಮಹಾ ದುರಂತ ಅವರಿಗೆ ತನ್ನ ಭವಿಷ್ಯದ ಬದುಕನ್ನು ಮುಂದಕ್ಕೆ ಕೊಂಡು ಹೋಗುವುದಕ್ಕೆ ಒಂದು ಅಡ್ಡಿಯಾಯಿತು.    ▪ *ಅಂತೆಯೇ* ಇವರನ್ನು ಇತರ ಕೆಲವು ಸ್ವಹಾಬಿಗಳು ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಸನ್ನಿಧಿಗೆ ತಂದರು. ಕೂಡಲೇ ಕುರುಡನಾಗಿದ್ದ *ಪುದೈಕ್* (ರ) ರವರ ಎರಡು ಕಣ್ಣುಗಳಿಗೂ ಪ್ರವಾದಿಯವರು ತನ್ನ ಪವಿತ್ರ ಉಗುಳು ನೀರನ್ನು ಉಗುಳಿದರು. ಸುಬ್‌ಹಾನಲ್ಲಾಹ್.. ಉಗುಳಿದ್ದೇ ತಡ ನಷ್ಟವಾದ ದೃಷ್ಟಿ ಸಂಪೂರ್ಣವಾಗಿ ಮರಳಿ ಬಂತು.    ▪ *ಗಮನಾರ್ಹ* ಸಂಗತಿಯೆಂದರೆ, ಈ ಸ್ವಹಾಬಿಯವರಿಗೆ ಸುಮಾರು ಎಂಬತ್ತು ವರ್ಷ ಕಳೆದ ನಂತರವೂ ತನ್ನ ಬಟ್ಟೆ ಹೊಲಿಯುವ ಅಗತ್ಯ ಬರುವಾಗ ತಾನೇ ಸೂಜಿಗೆ ದಾರ (ನೂಲು) ಹಾಕುತ್ತಿದ್ದರು.! ಆಗಲೂ  ಆ ಪ್ರವಾದಿಯ...

ಗ್ರಹಣ ನೋಡಿ ದೃಷ್ಟಿ ಕಳೆದುಕೊಂಡ ಸ್ವಹಾಬಿ

ಗ್ರಹಣ ನೋಡಿ ದೃಷ್ಟಿ ಕಳೆದುಕೊಂಡ ಸ್ವಹಾಬಿ *✒ಯೂಸುಫ್ ನಬ್‌ಹಾನಿ ಕುಕ್ಕಾಜೆ*   ▪ *ಪ್ರವಾದಿ* ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಪುತ್ರನಾದ ಹಝ್ರತ್ ಇಬ್ರಾಹೀಮರು ಹದಿನೆಂಟು ತಿಂಗಳ ಪುಟ್ಟ ಮಗುವಾಗಿರುವಾಗಲೇ ಇಹಲೋಕ ತ್ಯಜಿಸಿದರು.    ▪ *ಈ ಕಂದನ* ವಫಾತಿನ ದಿನ ಸಂಪೂರ್ಣ ಸೂರ್ಯಗ್ರಹಣವಾಗಿತ್ತು. ಸೂರ್ಯಗ್ರಹಣ ಮತ್ತು ಪ್ರವಾದಿಯವರ ಪುತ್ರನ ಮರಣ ಒಂದೇ ದಿನವಾದಾಗ ಕೆಲವು ಸಹಾಬಿಗಳು ಹೇಳಿದರು. *"ಇಬ್ರಾಹೀಮರ ಮರಣವೇ ಈ ಗ್ರಹಣಕ್ಕೆ ಕಾರಣ"* ಇದನ್ನು ಕೇಳಿದ ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಹೇಳಿದರು. *"ಯಾವೊಬ್ಬನ ಜನನದ ಅಥವಾ ಮರಣದ ಕಾರಣದಿಂದ ಗ್ರಹಣವುಂಟಾಗದು,ಸೂರ್ಯ ಮತ್ತು ಚಂದ್ರ ಇವೆರಡೂ ಅಲ್ಲಾಹನ ಮಹಾ ದೃಷ್ಟಾಂತಗಳು. ಅವುಗಳು ಅವುಗಳ ಪಥದಲ್ಲಿ ಚಲಿಸುತ್ತಿರುವಾಗ ಅಲ್ಲಾಹನು ನಿಶ್ಚಯಿಸಿದ ಸಮಯದಲ್ಲಿ ಗೃಹಣವಾಗುತ್ತದೆ. ಗ್ರಹಣವಾದರೆ  ಸುನ್ನತ್ತಾದ ನಮಾಝ್ ಮಾಡಿ."*    ▪ *ಉಲ್ಲೇಖನೀಯವೆಂದರೆ,* ಸ್ವಹಾಬಿಶ್ರೇಷ್ಠ ಹಝ್ರತ್ *ಮುಗಯ್‌ರ ಬಿನ್ ಶುಅ್‌ಬಾಃ* (ರ) ರವರು ಈ ಗ್ರಹಣವನ್ನು ನೇರವಾಗಿ ನೋಡಿದರು. ಆ ಕಾರಣದಿಂದ ಅವರಿಗೆ ಸಂಪೂರ್ಣವಾಗಿ ದೃಷ್ಟಿ ನಷ್ಟವಾಯಿತು.!!!    ▪ *ಹಿಜ್‌ರಾ* ವರ್ಷ ಐವತ್ತರಲ್ಲಿ ವಫಾತಾದ ಇವರ ಮಖ್‌ಬರ ಇರಾಕಿನ ಕೂಫಾದಲ್ಲಿದೆ. ಸಂಗ್ರಹ: ಇಮಾಮ್ ಝಹಬಿಯ *ಸಿಯರು ಅ‌ಅ್‌ಲಾಮಿನ್ನುಬಲಾಅ್* ಮತ್ತು ಇಮಾಮ್ ಇಬ್...

ಪೈಸಾಚಿಕ ಸಹಾಯ

ಪೈಸಾಚಿಕ ಸಹಾಯ *✒ಯೂಸುಫ್ ನಬ್‌ಹಾನಿ ಕುಕ್ಕಾಜೆ* 📞00971553499119    ▪ *ಒಮ್ಮೆ* ಹನಫೀ ಮದ್‌ಹಬಿನ ಇಮಾಮರಾದ ಜ್ಞಾನಸೂರ್ಯ ಇಮಾಮ್ ಅಬೂ ಹನೀಫ (ರ‌ಅ) ರವರ ಸನ್ನಿಧಿಗೆ ಒಬ್ಬನು ಬಂದು ಹೇಳಿದನು. *"ಇಮಾಮರೇ.., ನಾನೊಂದು ದೊಡ್ಡ ಸಮಸ್ಯೆಗೆ ಒಳಗಾಗಿದ್ದೇನೆ. ನಾನು ಒಂದೆರಡು ವರ್ಷಗಳ ಮೊದಲು ಕಳ್ಳರ ಹಾವಳಿ ಮತ್ತು ಇತರ ಕೆಲವು ಸಮಸ್ಯೆಗಳಿಂದಾಗಿ ನನ್ನಲ್ಲಿರುವ ಬಂಗಾರ, ಬೆಳ್ಳಿ, ಹಣ ಅಂತೆಯೇ ಹಲವಾರು ಬೆಲೆಬಾಳುವ ವಸ್ತುಗಳನ್ನು ಒಂದು ಪೆಟ್ಟಿಗೆಯಲ್ಲಿಟ್ಟು ಒಂದು ಕಡೆ ಹುಗಿದಿಟ್ಟಿದ್ದೆನು. ಆದರೆ ಈಗ ಅದರ ಅಗತ್ಯ ಬರುವಾಗ ಹುಗಿದಿಟ್ಟ ಜಾಗ ನೆನಪಿನಿಂದ ಮರೆತು ಹೋಗಿದೆ. ಏನು ಮಾಡಬೇಕೆಂದು ತಿಳಿಯದೆ ಕಂಗಾಲಾಗಿದ್ದೇನೆ. ತಲೆಬಿಸಿಯಿಂದ ಹಲವಾರು ದಿನಗಳಿಂದ ನಿದ್ದೆ ಬರುವುದಿಲ್ಲ. ಊಟ ಪಾನೀಯಗಳು ಕೂಡ ಬೇಡವೆಂದೆನಿಸುತ್ತದೆ. ಆದ್ದರಿಂದ ಅದನ್ನು ಸಿಗುವಂತೆ ಮಾಡಲು ನಿಮ್ಮಲ್ಲಿ ಏನಾದರೂ ಮಾರ್ಗವಿದೆಯಾ..? ದಯೆಮಾಡಿ ನನಗೆ ತಿಳಿಸುವಿರಾ..? ಅದಕ್ಕೋಸ್ಕರ ನಾನು ನಿಮ್ಮ ಈ ಮಹಾ ಸನ್ನಿಧಿಗೆ ಬಂದಿದ್ದೇನೆ."*    ▪ *ಇಮಾಮ್* ಅಬೂಹನೀಫ (ರ‌ಅ) ಹೇಳಿದರು. *"ನನ್ನಲ್ಲಿ ಇದಕ್ಕೆ ಏನು ಪರಿಹಾರ..? ನಾನೊಬ್ಬ  ಇಸ್ಲಾಮಿನ ಕರ್ಮಶಾಸ್ತ್ರ ಪಂಡಿತ. ಆ ವಿಷಯದಲ್ಲಿ ಏನಾದರು ಸಮಸ್ಯೆಯಿದ್ದಲ್ಲಿ ಪರಿಹಾರ ಹುಡುಕಬಹುದಿತ್ತು. ಆದರೆ ಇದಕ್ಕೆ ನನ್ನಲ್ಲಿ ಪರಿಹಾರವಿಲ್ಲ."*    ▪ *ಸಮಸ್ಯೆಗೊಳಗಾದ* ಬಡಪಾಯಿಯು, ಇಮಾಮ್ ಅಬ...

ಮಂಕೂಸ್ ಮೌಲಿದ್

ಮಂಕೂಸ್ ಮೌಲಿದ್ *ರಬೀವುಲ್ ಅವ್ವಲ್ ತಿಂಗಳಾದ್ದರಿಂದ ಎಲ್ಲಾ ಕಡೆಯೂ ಮಂಕೂಸ್ ಮೌಲಿದ್‌ನ ಪಾರಾಯಣ ಜೋರಾಗಿ ನಡೆಯುತ್ತಿದೆ.ಕಾರಣ ನಮ್ಮ ಹಿರಿಯ ತಲೆಮಾರಿನ ಔಲಿಯಾಗಳು,ಸಾದಾತ್‌ಗಳು,ಉಲಮಾಗಳ ಭವ್ಯ ಪರಂಪರ...

ಡಯಾಬಿಟಿಸ್ ರೋಗದ ನಿಯಂತ್ರಣ ಹೇಗೆ

ಡಯಾಬಿಟಿಸ್ ವ್ಯಕ್ತಿಗಳಿಗೆ ಊಟದ ಟೈಮ್ ಟೆಬಲ್ ಬೆಳಗ್ಗೆ 6 ರಿಂದ 7 ಗಂಟೆಗೆ: ಹಾಲು/ಟೀ/ಕಾಫಿ – 1 ಲೋಟ (ಸಕ್ಕರೆ ಇಲ್ಲದೆ) *ಬೆಳಗ್ಗೆ 8 ರಿಂದ 9 ಗಂಟೆಗೆ: ಇಡ್ಲಿ – 3/ ದೋಸೆ -2/ ಉಪ್ಪಿಟ್ಟು – 1 ಕಪ್ / ಮಂಡಕ್ಕಿ – 1 ಕಪ್/ ಅವಲಕ್ಕಿ ...

ಪುಣ್ಯ ಮದೀನಕ್ಕೊಂದು ಪತ್ರ.

الصلاه والسلام عليك يا سيدي يا رسول الله صلى الله عليه وسلم ಪ್ರೇಮ ಭಾಜನರೇ..... ﷺ ನನ್ನನ್ನು ಕ್ಷಮಿಸಿರಿ.... ನನ್ನ ಅತಿಯಾದ ಪಾಪದ ಕಾರಣ ತಮ್ಮಯ ﷺ ಉಮ್ಮತ್ತ್ ಎಂಬ ಮಹಾ ಪದವಿಗೆ ಕಳಂಕ ತಂದಿರುವೆ. ತಮ್...

ಆಧ್ಯಾತ್ಮ ಘಟನೆಗಳು

ಆಧ್ಯಾತ್ಮ ಘಟನೆಗಳು *"ನಾನು ಶವಭಕ್ಷಕನೇ?"* _ಮಹಾತ್ಮರಾದ ಹಝ್ರತ್ ಜುನೈದ್ (ರ)ರವರು ಒಮ್ಮೆ ಪೇಟೆಯತ್ತ ನಡೆದುಕೊಂಡು ಹೋಗುತ್ತಿದ್ದಾಗ ಆರೋಗ್ಯವಂತ ಫಕೀರರೊಬ್ಬರು ಜನರಲ್ಲಿ ಯಾಚಿಸುತ್ತಿರುವುದನ್ನು ಕಂಡ...

ಪ್ರವಾದಿಯ ಮಹಿಮೆ

ಪ್ರವಾದಿಯ ಮಹಿಮೆ 15 ಅಬೂ ಹುರೈರಾ(ರ) ರವರಿಂದ ವರದಿ; ನಬಿ ﷺರವರು ಅಲಿಯ್ಯ್(ರ) ರವರ ಮಡಿಲಲ್ಲಿ ತಲೆಯನ್ನಿಟ್ಟು ನಿದ್ರಿಸಿದ್ದರು. ಅಸರ್ ನಮಾಝ್ ನಿರ್ವಹಿಸಿರಲಿಲ್ಲ. ಎಚ್ಚರಗೊಂಡು ನೋಡುವಾಗ ಮಗ್ರಿಬ್ ನ ಟೈಮಾ...

ಮೌಲಿದ್, ಪ್ರವಾದಿ ಪ್ರೇಮ

ನಬಿ ದಿನ ಕೊನೆಗೊಂಡಿದೆ ನಬಿ ಸ್ನೇಹ ಕೊನೆಗೊಳ್ಳಲಿಲ್ಲ 1. *ಅಲೀ(ರ) ಹೇಳಿದರು*: *ನಾವು ನಮ್ಮ ಸಂಪತ್ತಿಗಿಂತಲೂ ಮಕ್ಕಳಿಗಿಂತಲೂ ಮಾತಾ ಪಿತರಿಗಿಂತಲೂ ನಮಗೆ ತೀವ್ರ ಬಾಯಾರಿಗೆಯಾಗುವಾಗ ನಾವು ಇಷ್ಟಪಡುವ ತಂಪು ...