ಅಂತ್ಯ ದಿನದ ಲಕ್ಷಣಗಳು : 8 *ನರಕ ಏಳು ವಿಧ* *1* ಜಹನ್ನಂ : ಸತ್ಯವಿಶ್ವಾಸಿಗಳಲ್ಲಿ ಮಹಾ ಪಾಪ ಎಸಗಿದವರು ವಾಸಿಸುವ ಸ್ಥಳವಿದು. ಪ್ರವಾದಿ(ಸ.ಅ)ರವರಿಂದ ಶಫಾಅತ್ ದೊರೆತರೆ ಮಾತ್ರ ಅವರು ಅದರಿಂದ ಹೊರಬರುವರು. *2* ಲಳಾ : ಇದು ಘೋರ ಬೆಂಕಿಯಿಂದ ಹೊತ್ತಿ ಉರಿಯುವ ನರಕ. ಇದರ ಬೆಂಕಿಗೆ ಹೊಗೆ ಇರುವುದಿಲ್ಲ. ಇಬ್ಲೀಸ್ ಅವನ ಅನುಚರರು ಮತ್ತು ಮಜೂಸಿ (ಅಗ್ನಿ ಆರಾಧಕ)ಗಳ ವಾಸಸ್ಥಳವಿದು. *3* ಹುತ್ವಮ : ಇದು ಯಹೂದಿಗಳಿಗಾಗಿ ತಯಾರಿಸಲಾಗಿರುವ ನರಕ. *4* ಸ'ಈರ್ : ನಿರಂತರವಾಗಿ ಹೊತ್ತಿ ಉರಿಯುವ ಈ ಮಹಾ ಅಗ್ನಿ ಕುಂಡದಲ್ಲಿ ಬೆಂಕಿಯ ಹಾವು, ಚೇಳು ಮತ್ತು ಸಂಕೋಲೆಗಳಿವೆ. ನರಕಗಳ ಪೈಕಿ ಇದು ಅತೀ ಭೀಕರವಾದುದು. ನಸ್ರಾಣಿಗಳು ಅದರ ಅವಕಾಶಿಗಳಾಗಿರುತ್ತಾರೆ. *5* ಸಖರ್ : ಇದು ಯಹೂದಿಗಳ ಪೈಕಿ ಸ್ವಾಭಿ ಎಂಬ ಒಂದು ವರ್ಗದವರಿಗಾಗಿ ತಯಾರಿಸಲ್ಪಟ್ಟ ನರಕ. *6* ಜಹೀಮ್ : ಇದರ ಒಂದು ಕೆಂಡವು ಇಡೀಯ ಪ್ರಪಂಚವನ್ನೇ ಭಸ್ಮಗೊಳಿಸಬಲ್ಲದು. ಅತೀ ಕಠೋರ ಮತ್ತು ಅತ್ಯಂತ ನಿಕೃಷ್ಟವಾದ ಈ ನರಕದ ಯಾತನೆಗೆ ಬಹು ದೇವಾರಾಧಕರು ಮತ್ತು ವಿಗ್ರಹಾರಾಧಕರು ಬಲಿಯಾಗುವರು. *7* ಹಾವಿಯತ್ : ಬಹಳ ಕಠಿಣ ತಾಪವನ್ನು ಹೊಂದಿದ ನರಕ. ಇದನ್ನು ಪ್ರವೇಶಿಸುವವರು ಎಂದೆಂದಿಗೂ ಅಲ್...
ಇದು ಅಹ್ಲುಸ್ಸುನ್ನತಿ ವಲ್ ಜಮಾಅತಿನ ನೈಜ ಆಶಯಾದರ್ಶಗಳನ್ನು ವಿವರಿಸುವ ಬ್ಲಾಗ್ ಆಗಿದೆ. More info cont - Nawaz Saqafi Al Amjadi Ullala.