ಪೈಸಾಚಿಕ ಸಹಾಯ *✒ಯೂಸುಫ್ ನಬ್‌ಹಾನಿ ಕುಕ್ಕಾಜೆ* 📞00971553499119 ▪ *ಒಮ್ಮೆ* ಹನಫೀ ಮದ್‌ಹಬಿನ ಇಮಾಮರಾದ ಜ್ಞಾನಸೂರ್ಯ ಇಮಾಮ್ ಅಬೂ ಹನೀಫ (ರಅ) ರವರ ಸನ್ನಿಧಿಗೆ ಒಬ್ಬನು ಬಂದು ಹೇಳಿದನು. *"ಇಮಾಮರೇ.., ನಾನೊಂದು ದೊಡ್ಡ ಸಮಸ್ಯೆಗೆ ಒಳಗಾಗಿದ್ದೇನೆ. ನಾನು ಒಂದೆರಡು ವರ್ಷಗಳ ಮೊದಲು ಕಳ್ಳರ ಹಾವಳಿ ಮತ್ತು ಇತರ ಕೆಲವು ಸಮಸ್ಯೆಗಳಿಂದಾಗಿ ನನ್ನಲ್ಲಿರುವ ಬಂಗಾರ, ಬೆಳ್ಳಿ, ಹಣ ಅಂತೆಯೇ ಹಲವಾರು ಬೆಲೆಬಾಳುವ ವಸ್ತುಗಳನ್ನು ಒಂದು ಪೆಟ್ಟಿಗೆಯಲ್ಲಿಟ್ಟು ಒಂದು ಕಡೆ ಹುಗಿದಿಟ್ಟಿದ್ದೆನು. ಆದರೆ ಈಗ ಅದರ ಅಗತ್ಯ ಬರುವಾಗ ಹುಗಿದಿಟ್ಟ ಜಾಗ ನೆನಪಿನಿಂದ ಮರೆತು ಹೋಗಿದೆ. ಏನು ಮಾಡಬೇಕೆಂದು ತಿಳಿಯದೆ ಕಂಗಾಲಾಗಿದ್ದೇನೆ. ತಲೆಬಿಸಿಯಿಂದ ಹಲವಾರು ದಿನಗಳಿಂದ ನಿದ್ದೆ ಬರುವುದಿಲ್ಲ. ಊಟ ಪಾನೀಯಗಳು ಕೂಡ ಬೇಡವೆಂದೆನಿಸುತ್ತದೆ. ಆದ್ದರಿಂದ ಅದನ್ನು ಸಿಗುವಂತೆ ಮಾಡಲು ನಿಮ್ಮಲ್ಲಿ ಏನಾದರೂ ಮಾರ್ಗವಿದೆಯಾ..? ದಯೆಮಾಡಿ ನನಗೆ ತಿಳಿಸುವಿರಾ..? ಅದಕ್ಕೋಸ್ಕರ ನಾನು ನಿಮ್ಮ ಈ ಮಹಾ ಸನ್ನಿಧಿಗೆ ಬಂದಿದ್ದೇನೆ."* ▪ *ಇಮಾಮ್* ಅಬೂಹನೀಫ (ರಅ) ಹೇಳಿದರು. *"ನನ್ನಲ್ಲಿ ಇದಕ್ಕೆ ಏನು ಪರಿಹಾರ..? ನಾನೊಬ್ಬ ಇಸ್ಲಾಮಿನ ಕರ್ಮಶಾಸ್ತ್ರ ಪಂಡಿತ. ಆ ವಿಷಯದಲ್ಲಿ ಏನಾದರು ಸಮಸ್ಯೆಯಿದ್ದಲ್ಲಿ ಪರಿಹಾರ ಹುಡುಕಬಹುದಿತ್ತು. ಆದರೆ ಇದಕ್ಕೆ ನನ್ನಲ್ಲಿ ಪರಿಹಾರವಿಲ್ಲ."* ▪ *ಸಮಸ್ಯೆಗೊಳಗಾದ* ಬಡಪಾಯಿಯು, ಇಮಾಮ್ ಅಬ...
ಇದು ಅಹ್ಲುಸ್ಸುನ್ನತಿ ವಲ್ ಜಮಾಅತಿನ ನೈಜ ಆಶಯಾದರ್ಶಗಳನ್ನು ವಿವರಿಸುವ ಬ್ಲಾಗ್ ಆಗಿದೆ. More info cont - Nawaz Saqafi Al Amjadi Ullala.