ಅಂಚೆ ತಲುಪುವ ಮುಂಚೆಯೇ ತಲುಪಿತು, ಪ್ರವಾದಿ ಸನ್ನಿಧಿಗೆ ಆ ಕಾವ್ಯ...
ಯೂಸುಫ್ ನಬ್‌ಹಾನಿ ಕುಕ್ಕಾಜೆ
8951287993
ಹನಫೀ ಮಹ್‌ಹಬಿನ ಇಮಾಮ್, ಇಮಾಮ್ ಅಬೂಹನೀಫ (ರ) ರವರು ಪ್ರವಾದಿ ಮುಹಮ್ಮದ್ ﷺ ಹೊಗಳಿ ಅರಬಿ ಭಾಷೆಯಲ್ಲಿ ಒಂದು ಬಯ್‌ತ್ (ಪದ್ಯ) ರಚನೆ ಮಾಡಿದ್ದರು. ಆದರೆ ಅದನ್ನು ತನ್ನ ಸಹಪಾಠಿಗಳೋ ಅಥವಾ ಇತರರಿಗೋ ಯಾರಿಗೂ ತೋರಿಸಿರಲಿಲ್ಲ. ತನ್ನ ಕೆಲವು ಬ್ಯುಸಿ ಶೆಡ್ಯೂಲುಗಳ ಕಾರಣದಿಂದ ಅದನ್ನು ಇಶ್ಯೂ ಮಾಡಲು ಸಮಯ ಕೂಡ ದೊರಕಲಿಲ್ಲ.
ಒಮ್ಮೆ ಇಮಾಮ್ ಅಬೂಹನೀಫರು ಮದೀನ ತಲುಪಿದಾಗ ಅಲ್ಲಿನ ಅವತ್ತಿನ ಮಸೀದಿಯ ಮುಅದ್ದಿನ್ (ಮುಕ್ರಿಕ) ರೌಲಾದ ಹತ್ತಿರ ಒಂದು ಕಡೆ ನಿಂತು ಏರು ದನಿಯಲ್ಲಿ ಈ ಪದ್ಯವನ್ನು ಹಾಡುತ್ತಿರುವುದು ತನ್ನ ಗಮನಕ್ಕೆ ಬಂತು. ತಾನು ರಚಿಸಿದ ಈ ಹಾಡು ಇವರಿಗೆ ಎಲ್ಲಿಂದ ದೊರಕಿತು? ಇದು ಹೇಗೆ ಸ್ಪ್ರೆಡ್ ಅಯಿತು? ಎಂದು ಅದ್ಬುತಗೊಂಡು ಮುಕ್ರಿಕರವರು ಪದ್ಯಹಾಡಿ ಮುಗಿಸಿದ ಕೂಡಲೇ ಅವರನ್ನು ಸಮೀಪಿಸಿ ಕೇಳಿದರು. "ಈ ಹಾಡು ಯಾರು ರಚನೆ ಮಾಡಿದ್ದು?"
ಮುಕ್ರಿಕ: ಇಮಾಮ್ ಅಬೂಹನೀಫ (ರ).
ಅಬೂಹನೀಫ: ನಿಮಗೆ ಅವರ ಪರಿಚಯ ಇದೆಯಾ? ನೀವು ಅವರನ್ನು ಕಂಡಿದ್ದೀರಾ?
ಮುಕ್ರಿಕ: ಇಲ್ಲ.
ಅಬೂಹನೀಫ: ಹಾಗಾದರೆ ಈ ಪದ್ಯ ನಿಮಗೆ ಎಲ್ಲಿಂದ ದೊರಕಿತು?
ಮುಕ್ರಿಕ: ಈ ಹತ್ತಿರದಲ್ಲಿ ಒಮ್ಮೆ ಪ್ರವಾದಿಯವರ ಎದುರಲ್ಲಿ ನಿಂತು ಒಬ್ಬರು ಈ ಪದ್ಯವನ್ನು ಹಾಡುತ್ತಿರುವುದನ್ನು ನಾನು ಕನಸಲ್ಲಿ ಕಂಡೆನು. ಅವರು ಹಾಡುತ್ತಿರುವಂತೆಯೇ ನಾನದನ್ನು ಬಾಯಿಪಾಠ ಮಾಡಿದೆನು. ನಂತರ ಹಾಡಿದ ವ್ಯಕ್ತಿ ಯಾರೆಂದು ಪ್ರವಾದಿಯವರಲ್ಲಿ ಕೇಳಿದಾಗ ಇಮಾಮ್ ಅಬೂಹನೀಫರೆಂದು ಉತ್ತರಿಸಿದರು.
ಸುಬ್‌ಹಾನಲ್ಲಾಹ್...!! ಮದೀನಾ ಮಸೀದಿಯಲ್ಲಿ ಬಾಂಗು ಕೊಡುವ ವ್ಯಕ್ತಿಯಿಂದ ಈ ಉತ್ತರ ದೊರೆತಾಗ ಇಮಾಮ್ ಅಬೂಹನೀಫರ ಕಣ್ಣಲ್ಲಿ ಸಂತೋಷದ ನೀರು ಹರಿದು ಬಂತು.
ಆ ಅರಬಿ ಭಾಷೆಯಲ್ಲಿರುವ ಪದ್ಯ ಇದಾಗಿದೆ⬇️⬇️⬇️
یا سيد السادات جئتك قاصدا
أرجو رضاك و أحتمي بحماك
والله يا خير الخلائق إن لي
قلبا مشوقا لا يروم سواك
وبحق جاهك إنني بك مغرم
والله يعلم أنني أهواك
أنت الذي لولاك ما خلق امرؤ
كلا و لا خلق الورى لولاك
أنت الذي من نورك البدر اكتسى
والشمس مشرقة بنور بهاك
أنت الذي لمارفعت إلى السماء
بك قد سمت و تزينت لسراك
أنت الذي ناداك ربك مرحبا
ولقد دعاك لقربه و حباك
أنت الذي فينا سألت شفاعة
ناداك ربك لم تكن لسواك
أنت الذي لما توسل آدم
من زلة بك فاز و هو أباك
وبك الخليل دعا فعادت ناره
بردا وقد خمدت بنور سناك
وبك المسيح أتى بشيرا مخبرا
بصفات حسنك مادحا لعلاك
و كذاك موسى لم يزل متوسلآ
بك في القيامة محتم بحماك
والأنبياء و كل خلق في الورى
والرسل والأملاك تحت لواك
✍🏻ಸಂಗ್ರಹ: ಮನ್‌ಹುರ್ರಹ್‌ಮಾನ್ ಫೀ ಖಸೀದತಿ ಅಬೀ ಹನೀಫತಿ ಅನ್ನುಅ್‌ಮಾನ್ ಎಂಬ ಗ್ರಂಥದಿಂದ
Comments