ವಿವಾಹ ಮತ್ತು ತನ್ನ ಧರ್ಮಪತ್ನಿ ಬಗ್ಗೆ ಶೈಖುನಾ ಎ ಪಿ ಉಸ್ತಾದರು ಹೇಳಿದ ಆತ್ಮ ಕತೆಯಿಂದ ತೆಗೆದ ಬರಹ..
[ಇಂಟ್ರಸ್ಟಿಂಗ್ ಸ್ಟೋರಿ....]
ಸ್ವಂತವಾಗಿ ಜಾಗ ಮತ್ತು ಮನೆಯೊಂದು ಆಯಿತು.ಆಗಲೇ ನಿಧಾನವಾಗಿ ವಿವಾಹಾಲೋಚನೆಗಳು ಬರಲು ಆರಂಭವಾಯಿತು.ಅದರಲ್ಲಿ ನಾನು ಸೇವೆಗೈಯುವ ಮಸೀದಿಯ ಪದಾಧಿಕಾರಿಗಳು ನನ್ನ ನೆರೆಯ ಮತ್ತು ಕುಟುಂಬದ ಹಿರಿಯರು ಇದ್ದರು.ಒಬ್ಬ ಮುಸ್ಲಿಯಾರ್ ಎಂಬ ನೆಲೆಯಲ್ಲಿ ಅವರಿಗೆ ನನ್ನೊಂದಿಗೆ ಪ್ರೀತಿ ಇತ್ತು.ನನ್ನ ಮದುವೆ ವಿಷಯದಲ್ಲಿ ಅವರೇ ಮುತುವರ್ಜಿ ವಹಿಸಿದ್ದರು.
ಊರಿನ ಸಮೀಪವಿರುವ ಒಬ್ಬರು ವಿದ್ವಾಂಸರ ಕುಟುಂಬದ ವಧುವನ್ನ ಮೊದಲು ಆಲೋಚಿಸಲಾಯಿತು.ನನ್ನ ಆರ್ಥಿಕ ಸ್ಥಿತಿ ಕೆಳಮಟ್ಟದಲ್ಲಿದೆ ಎಂಬ ಕಾರಣಕ್ಕೆ ಅವರು ಅದನ್ನು ನಿರಾಕರಿಸಿದರು.ಈ ವಿವಾಹಾಲೋಚನೆ ನಡೆಸಲು ಹೋದವರಲ್ಲಿ ಅವರುಂಕುನ್ನನ್ ಅಹ್ಮದ್ ಹಾಜಿ ಎಂಬವರಿದ್ದರು. ವಧುವಿನ ಮನೆಯವರ ನಿರಾಕರಣೆಯ ಉತ್ತರದಿಂದ ಅವರು ಬಹಳ ನೊಂದಿದ್ದರು. ಇದ್ಯಾವುದೂ ನನಗೆ ತಿಳಿದಿರಲಿಲ್ಲ.ಇದೇ ಅಹ್ಮದ್ ಹಾಜಿಗೆ ಪೂನೂರ್ ಬಜಾರಿನಲ್ಲಿ ವಸ್ತ್ರದ ವ್ಯಾಪಾರವಿದೆ.ವಿದ್ಯಾರ್ಥಿದೆಸೆಯಲ್ಲೇ ನನಗೆ ಅವರ ಪರಿಚಯವಿದೆ. ಅವರು ಇಲ್ಮಿನೊಂದಿಗೆ ಸ್ನೇಹವಿರುವ ವ್ಯಕ್ತಿಯಾಗಿದ್ದರು. (ಆಲಿಂ) ವಿದ್ವಾಂಸ ರನ್ನು ಮತ್ತು (ಮುತ ಅಲ್ಲಿಂ) ವಿದ್ಯಾರ್ಥಿಗಳನ್ನು ಕರೆದು ಸತ್ಕರಿಸುವುದರಲ್ಲಿ ಬಹಳ ಸಂತಸವನ್ನ ಕಂಡಿದ್ದ ಮೇರು ವ್ಯಕ್ತಿಯಾಗಿದ್ದರು.ಹಲವು ಬಾರಿ ಅವರ ಮನೆಗೆ ಹೋಗಿ ನಾನು ಊಟ ಮಾಡಿದ್ದೆ.
ಹೀಗಿರಲು,ಒಮ್ಮೆ ನಾನು ಪುನೂರು ಬಜಾರಿಗೆ ಹೋದಾಗ,ಅಹ್ಮದ್ ಹಾಜಿ ನನ್ನಲ್ಲಿ ಕೇಳಿದರು. ನನ್ನ ಮಗಳು ಝೈನಬಳನ್ನು ತಾವು ನಿಕಾಹ್ ಆಲೋಚನೆ ನಡೆಸಬೇಕೆಂದಿದ್ದೇನೆ ನಿಮ್ಮ ಅಭಿಪ್ರಾಯ ಏನು? ಧೀರ್ಘ ಕಾಲದಿಂದಲೂ ಪರಿಚಯವಿರುವ ವ್ಯಕ್ತಿ ಎಂಬ ನೆಲೆಯಲ್ಲಿ ನನಗೆ ಏನೂ ಹೇಳುವಂತಿಲ್ಲ.ಅವರಲ್ಲಿ ಸಮ್ಮತಿ ಸೂಚಿಸಿದೆ.ನಂತರ ನೇರ ತಾಯಿಯ ಬಳಿ ಈ ಮದುವೆ ಪ್ರಸ್ಥಾಪವನ್ನು ಹೇಳಿದೆ.ಅದಾದ ನಂತರ ಅವೇಲತ್ ತಂಙಳೂಂದಿಗೆ ವಿವರಗಳನ್ನು ತಿಳಿಸಿದೆ.ಆಗಿನ ಕಾಲದಲ್ಲಿ ಹೆಣ್ಣಿನ ಮನೆಗೆ ಹೋಗಿ ಹೆಣ್ಣು ನೋಡುವ ಸಂಪ್ರದಾಯವಿರಲಿಲ್ಲ.ಎರಡೂ ಕುಟುಂಬಗಳು ಪರಸ್ಪರ ಮಾತನಾಡಿ ವಿವಾಹ ನಿಶ್ಚಯಿಸುವುದು ರೂಡಿ.
ಹಾಗೆ ಎರಡು ಕುಟುಂಬಗಳ ಮದ್ಯೆ ಪರಸ್ಪರ ಮಾತುಕತೆ ನಡೆಯಿತು.
ಅಹ್ಮದ್ ಹಾಜಿಯವರೂಂದಿಗೆ ಈ ವಿವಾಹಾಲೋಚನೆಯ ಪ್ರಸ್ಥಾಪ ಮೊದಲು ನಡೆಸಿದ್ದು ತಯ್ಯಿಲ್ ಸಯಿದಾಲಿ ಮುಸ್ಲಿಯಾರಾಗಿದ್ದರು. ತಿರುನಾವ ಎಂಬ ಊರಿನವರಾದ ಅವರು ನಂತರ ಕುಟುಂಬ ಸಮೇತ ಪೂನೂರಿಗೆ ಬಂದು ನೆಲೆಸಿದವರು. ಅವರು1920-30ರ ಕಾಲಘಟ್ಟದಲ್ಲಿ ತಾಮರಶ್ಶೇರಿ ಭಾಗಲ್ಲಿ ಹಲವಾರು ಶಾಲೆಗಳನ್ನು ಪ್ರಾರಂಭಿಸಿದ್ದರು.
1964 ಡಿಸೆಂಬರ್ 13 ಆದಿತ್ಯವಾರ ಮದುವೆ ದಿನವನ್ನು ನಿಶ್ಚಯಿಸಲಾಯಿತು.
ಕ್ಯಾಲಿಕಟ್ ಪ್ರೆಸ್ಸ್ ಒಂದರಲ್ಲಿ ಮದುವೆ ಕಾಗದ ಅಚ್ಚು ಮಾಡಿದೆ. ಬಿಳಿ ಕಾಗದದಲ್ಲಿ ಸ್ವರ್ಣ ಬರಹವಿರುವ ಸಣ್ಣ ಲೆಟರ್!
ನನ್ನ ದರ್ಸ್ ನ ಮುತಅಲ್ಲಿಮ್ ಮಕ್ಕಳಲ್ಲಿ ಕೆಲವರು ಮದುವೆ ಆಮಂತ್ರಿಸಲು ಹೋದರು.ಆವಾಗ ಮದುವೆ ಕಾಗದ ವೇಸ್ಟ್ ಅಲ್ಲವೇ ಎಂದು ಕೆಲವರು ಅವರಲ್ಲಿ ಕೇಳಿದರೆಂದು ಮುತ ಅಲ್ಲಿಂಗಳು ಬಂದು ನನ್ನ ಹತ್ತಿರ ಹೇಳಿದರು.ಕಾರಣ ಅಂದು ಮದುವೆಗೆ ಆಹ್ವಾನ ಪತ್ರ ಪ್ರಿಂಟ್ ಮಾಡುವ ಅಭ್ಯಾಸ ಬಹಳ ವಿರಳವಾಗಿತ್ತು.ಹಾಗಾಗಿ ಕೇಳಿರಬೇಕು.
ಏಳು ಮಹ್ರ್ ಮಿಸ್ಲ್ ಆಗಿತ್ತು. ಮಹರಾಗಿ ನಿಶ್ಚಯಿಸಿದ್ದು.ಒಂದು ಮಹ್ರ್ ಮಿಸ್ಲ್ ಅಂದರೆ ಅವತ್ತು ಐದು ರೂಪಾಯಿ!
ಮದುಮಗನಿಗೆ ಊಟ ವಧುವಿನ ಮನೆಯಲ್ಲಾಗಿತ್ತು. ಏನಾದರೂ ಜಾಸ್ತಿ ಸೌಕರ್ಯ ಏರ್ಪಡಿಸಬೇಕೆ? ಎಂದು ಅಹ್ಮದ್ ಹಾಜಿ ಕೇಳಿದರು.ಧಾರಾಳ ಸ್ನೇಹಿತರಿದ್ದಾರೆ ಆದ್ದರಿಂದ ಊಟಕ್ಕೆ ಸ್ವಲ್ಪ ಅಧಿಕ ಜನರಿರಬಹುದು ಎಂದು ಹೇಳಿದೆ. ಅದೆಷ್ಟಿದ್ದರೂ ತೂಂದರೆಯಿಲ್ಲ ಎಂದರು.
ನನ್ನ ಮನೆಯ ವಿವಾಹ ಸತ್ಕಾರ ತುಪ್ಪದೂಟ ಮತ್ತು ಬೀಫ್ ಕರಿ ಆಗಿತ್ತು.ಮದ್ಯಾಹ್ನ ಪ್ರಾರಂಭವಾಗಿ ರಾತ್ರಿವರೆಗೆ ಊಟ ಇತ್ತು.
ಈಂದ್ ಮರದ ಗರಿಗಳಿಂದ ನಿರ್ಮಿಸಿ ಅಲಂಕರಿಸಿದ ಚಪ್ಪರ. ಎರಡು ಕಡೆಗಳಲ್ಲಿಯೂ ಧಾರಾಳ ಜನರು ಸೇರಿದರು.ರಾತ್ರಿ ವಧುವನ್ನು ಕರೆತರಲಾಯಿತು. ವಧು ಝೈನಬಳಿಗೆ ಒಂದು ಬುರ್ಖ ತೆಗೆದಿದ್ದೆ.ಅವತ್ತು ಬುರ್ಕ ಅಷ್ಟು ರೂಢಿಯಿಲ್ಲಿರಲಿಲ್ಲ. ಮಧುಮಗನನ್ನು ಸ್ವಾಗತಿಸಿ ಶಿಷ್ಯಂದಿರಾದ ಪಿ ಕೆ ಮುಹ್ಯುದ್ದೀನ್ ಮುಸ್ಲಿಯಾರ್ ಹಾಗೂ ಎ. ಸಿ. ಅಬ್ದುರಹ್ಮಾನ್ ಮುಸ್ಲಿಯಾರ್ ಹಾಡಿದರು. ಎ. ಸಿ. ಎ ಕಾಂದಪುರಂ ಎಂಬ ಹೆಸರಲ್ಲಿ ಅವರು ಹಾಡು ರಚಿಸುತ್ತಿದ್ದರು.
ಸಾಮಾನ್ಯ ಉತ್ತಮವಾದ ಆರ್ಥಿಕ ನೆಲೆ ಗಟ್ಟಿನಿಂದ ಬಂದವಳಾಗಿದ್ದಳು ಝೈನಬ. ಈ ಮದುವೆಗೆ ತಲುಪಿಸಿದ ಸನ್ನಿವೇಶ ಏನೆಂದು ಅವಳ ತಂದೆ ಅವಳೂಂದಿಗೆ ಏನು ಹೇಳಿರಬಹುದೆಂದು ಗೊತ್ತಿಲ್ಲ. ಕಾಂತಪುರದ ಮೊಯಿಲಾರಾಗಿದ್ದಾರೆ ಮದುಮಗನೆಂದೂ,ನಾನು ಹಣವನ್ನಲ್ಲ ಕೇವಲ ಇಲ್ಮ್(ಜ್ಞಾನ) ವನ್ನು ಮಾತ್ರವಾಗಿದೆ ನೋಡಿದ್ದು,ಎಂದು ಅವಳೂಂದಿಗೆ ಹಾಜಿ ಹೇಳಿದ್ದರೆಂದು ನಂತರ ತಿಳಿಯಿತು.
ಅವಳಿಗೆ ಮದುವೆ ಪ್ರಾಯ ಆದಾಗಲೇ ಒಬ್ಬ ವಿದ್ವಾಂಸರನ್ನು ವರನಾಗಿ ಸ್ವೀಕರಿಸಲು ತೀರ್ಮಾನಿಸಿದ್ದರಂತೆ.
ನನ್ನ ಕುಟುಂಬದ ಆರ್ಥಿಕ ಹಿನ್ನೆಲೆಯ ಕಾರಣದಿಂದ ಅದನ್ನು ಬೊಟ್ಟು ಮಾಡಿ ಈ ಮದುವೆಯಿಂದ ಹಿಂಜರಿಯ ಬೇಕೆಂದು ಹಲವರು ಅಹ್ಮದ್ ಹಾಜಿಯವರನ್ನ ಒತ್ತಾಯಿಸದ್ದಾರೆಂದು ನಂತರ ತಿಳಿಯಿತು. (ನೀವು ಪರಸ್ಪರ ವಿವಾಹಿತರಾಗಿರಿ. ನೀವು ಬಡವರಾಗಿದ್ದರೆ,ಅಲ್ಲಾಹು ಅವನ ಕೃಪೆಯಿಂದ ನಿಮ್ಮನ್ನು ಐಶ್ವರ್ಯ ವಂತರಾಗಿಸುವನು.) ಎಂದು ಖುರ್ ಆನಿನಲ್ಲಿ ಹೇಳಿದೆ. ಮತ್ತೇಕೆ ಭಯಪಡಬೇಕು.?
ಆ ವಾಗ್ದಾನ ಮಾತ್ರವಾಗಿತ್ತು ಏಕ ಭರವಸೆ.
ಖುರ್‌ಆನಿನ ಈ ವಾಗ್ದಾನವನ್ನು ಮನದಟ್ಟು ಮಾಡಿಸುವಂತಿತ್ತು ನಮ್ಮ ವೈವಾಹಿಕ ಜೀವನ.ನನ್ನ ಜೀವನದ ಎಲ್ಲಾ ಇತಿಮಿತಿಗಳನ್ನು ಅರ್ಥ ಮಾಡಿಕೊಂಡು ಸಹಜೀವನ ನಡೆಸುವವರಾಗಿದ್ದರು ಝೈನಬ. ನಾವು ಒಮ್ಮೆಯೂ ಜಗಳವಾಡಿಲ್ಲ. ಕೋಪದೂಂದಿಗೆ ಒಂದು ಮಾತನ್ನು ಪರಸ್ಪರ ಆಡಿಲ್ಲ. ನಾನು ವಹಿಸಿಕೊಂಡ ಜವಾಬ್ದಾರಿಗಳಲ್ಲಿ ಒಮ್ಮೆಯೂ ಅವಳು ನೀರಸವನ್ನ ವ್ಯಕ್ತಪಡಿಸಲಿಲ್ಲ. ಅದೆಲ್ಲವೂ ನಾವು ಮಾಡಬೇಕಾದ ಕರ್ತವ್ಯಗಳಲ್ಲವೇ ಎಂಬ ಮನೋಭಾವ ಅವಳಿಗಿತ್ತು.! ಆದ್ದರಿಂದಲೇ ಟೀಕೆಗಳು ಆರೋಪಗಳು ಸಂದಿಗ್ಧ ಘಟ್ಟಗಳು ಅವರನ್ನು ಕುಸಿಯುವಂತೆ ಮಾಡಲಿಲ್ಲ.
ಅದು ನನಗೆ ನೀಡಿದ ಶಕ್ತಿ ಬಹಳ ದೂಡ್ಡದಾಗಿತ್ತು.
ಝೈನಬರ ತಾಯಿ ಒಳ್ಳೆಯ ಅಡುಗೆಯವರಾಗಿದ್ದರು.ಅದರ ಕೈ ಪುಣ್ಯ ಝೈನಬರಿಗೂ ಇತ್ತು. ಮಾಂಸಹಾರ ಸೇವಿಸದಿದ್ದರೂ ಎಲ್ಲವನ್ನೂ ಚೆನ್ನಾಗಿ ಅಡುಗೆ ಮಾಡುತ್ತಿದ್ದಳು.ಅವಳ ಆಹಾರದ ಅಭ್ಯಾಸ ಮಕ್ಕಳಿಗೂ ಬಂದಿತ್ತು. ಮದುವೆ ಇನ್ನಿತರ ಕಾರ್ಯಕ್ರಮಗಳಿಗೆ ಹೋದರೆ ದಾಲ್ ಇದೆಯೇ ಎಂದು ಹುಡುಕುತ್ತಿದ್ದವು.
ಅವಳೊಂದಿಗಿರುವ ನನ್ನ ಮುಖ್ಯ ಹಕ್ಕು ನಮಾಜಿನೊಂದಿಗಿರುವ ಅವಳ ಕೃತ್ಯ ನಿಷ್ಠೆಯಾಗಿತ್ತು. ಸಂಸ್ಥೆಗಳು ಮತ್ತು ಸಂಘಟನೆಯ ಜವಾಬ್ದಾರಿಯನ್ನು ವಹಿಸಿಕೊಂಡ ನಂತರ ವಾರದಲ್ಲಿ ಒಮ್ಮೆ ಮಾತ್ರ ಮನೆಗೆ ಹೋಗುತ್ತಿದ್ದೆ.ಅದೂ ದೀರ್ಘ ದೂರದ ಯಾತ್ರೆಯ ನಂತರ. ನಾನು ನಿದ್ರೆ ಹೋಗಿ ಬಿಟ್ಟರೂ ತಹಜ್ಜುದ್‌ನ ಸಮಯವಾದರೆ ಎಬ್ಬಿಸುತ್ತಿದ್ದರು. ಮದುವೆಯ ಮೂದಲ ದಿನದಿಂದಲೇ ಇದು ಪ್ರಾರಂಭವಾಗಿತ್ತು. ಅವತ್ತು ನಾನು ನಮಾಜು ಮಾಡುವುದನ್ನು ಕಂಡಾಗ ಅದರ ಕುರಿತು ವಿವರವಾಗಿ ಕೇಳಿ ತಿಳಿದಳು.ನಾನು ತಹಜ್ಜುದ್ ನಿತ್ಯರೂಡಿ ಮಾಡುವುದರ ಒಳಿತನ್ನು ತಿಳಿಸಿ ಕೊಟ್ಟೆ.
ಅದರ ನಂತರ ಒಮ್ಮೆ ಯೂ ಅವಳು ತಹಜ್ಜುದ್ ಬಿಟ್ಟಿಲ್ಲ. ಹಲವು ದಿಕ್ರ್ ಗಳ ಇಜಾಝತ್‌ಗಳನ್ನ ಕೇಳಿ ಅವುಗಳನ್ನು ರೂಢಿ ಮಾಡಿಕೊಂಡಿದ್ದಾಳೆ.
ಒಮ್ಮೆ ಶೈಖುನಾ ಸಿ ಎಂ ಮಡವೂರ್ ಶೈಖ್ರವರು ಮನೆಗೆ ಬಂದಿದ್ದರು.ಮಾತಿನ ಮಧ್ಯೆ ಮನೆಯ ಒಡತಿ ಇಲ್ಲವೇ ಎಂದು ಕೇಳಿದರು. ಚಹಾ ರೆಡಿಮಾಡುತ್ತಿದ್ದಾರೆ ಎಂದೆ. ಇಲ್ಲಿ ಚಹಾ ಮಾಡುವುದು ಅವರೇ? ಎಂದು ಸಿ ಯಂ ರವರು ಮೂರುಸಲ ಕೇಳಿದರು.ಪ್ರಶ್ನೆಯ ಶೈಲಿಯಲ್ಲಿ ಸ್ವಲ್ಪ ಕಠಿಣತೆ ಇತ್ತು. ಕೂಡಲೇ ನಾನು ಒಬ್ಬರು ಕಲಸದಾಳನ್ನ ವ್ಯವಸ್ಥೆಗೊಳಿಸಿದೆ. ಅದರ ನಂತರ ಮನೆಯಲ್ಲಿ ಸಹಾಯಿಗಳಿಲ್ಲದ ದಿನ ಕಳೆದು ಹೋಗಿಲ್ಲ. ಮನೆಯ ಎಲ್ಲಾ ಮೇಲ್ನೋಟವೂ ಅವರಿಗೇನೇ. ಎಲ್ಲ ಕಾರ್ಯವನ್ನೂ ಬರೆದಿಡುವ ಒಂದು ನೋಟ್ಸ್ ಬುಕ್ ಅವಳ ಕೈಯಲ್ಲಿದೆ. ಕುಟುಂಬದಲ್ಲಿ ನಡೆಯುವ ಜನನ ಮರಣ, ಎಲ್ಲದರ ಲೆಕ್ಕ. ಖರೀದಿಸಿದ ವಸ್ತುಗಳು ಖರ್ಚು ಎಲ್ಲವೂ ಅದರಲ್ಲಿದೆ. ನಾನು ಕೇಳಿದ್ದಕ್ಕೆ ಅಥವಾ ನನಗೆ ತೋರಿಸಲೋ ಅಲ್ಲ. ವ್ಯಾಪಾರಿಯಾದ ತಂದೆಯಿಂದ ಲಭಿಸಿದ ಸ್ವಭಾವವಾಗಿತ್ತದು.
ಮದುವೆಯ ಮೊದಲ ಸಮಯಗಳಲ್ಲಿ ಝೈನಬ ಅವರ ಮನೆಯಲ್ಲೇ ಜಾಸ್ತಿ ಇರುತ್ತಿದ್ದರು.
ಮಕ್ಕಾ ಮದೀನಾಗಳಿಗೆ ಹಲವು ಬಾರಿ ಒಟ್ಟಿಗೆ ಯಾತ್ರೆ ಮಾಡಿದ್ದೇವೆ. ಒಮ್ಮೆ ಬೈತುಲ್ ಮುಖದ್ದಸ್ ಅಜ್ಮೀರ್ ಏರ್ವಾಡಿ ಯಾತ್ರೆ ಮಾಡಿದ್ದೇವೆ. ಒಬ್ಬನೇ ಯಾತ್ರೆ ಹೋದರೆ ಅವಳಿಗಾಗಿ ಏನಾದರೂ ಹದ್ಯಾ ತರುತ್ತೇನೆ.
ಮನೆಯ ಅಸೌಕರ್ಯಗಳ ಬಗ್ಗೆ ಅವಳು ಒಮ್ಮೆಯೂ ತಲೆಕೆಡಿಸಲಿಲ್ಲ,ದೂರಲಿಲ್ಲ, ದುಖಿಸಲಿಲ್ಲ. ಸೀಮಿತ ಸೌಕರ್ಯವಿರುವ ಮನೆಗೆ 1975-76 ರ ಕಾಲದಲ್ಲಿ ವಿದ್ಯುತ್ ಕನೆಕ್ಷನ್ ಸಿಕ್ಕಿದ್ದು.1980 ರ ಸಮಯದಲ್ಲಿ ಕ್ಯಾಲಿಕಟ್ ನಿಂದ ಒಂದು ಸೆಕೆಂಡ್ ಹ್ಯಾಂಡ್ ಫ್ಯಾನ್ ಖರೀದಿಸಿದ್ದು ನನಗೀಗಲೂ ನೆನಪಿದೆ. ಇದೇ ರೀತಿ ಎರಡು ಕುರ್ಚಿಗಳನ್ನ ಅಲ್ಲಿಂದ ಖರೀದಿಸಿ ನಾನು ಮತ್ತು ಪುತ್ರ ಹಕೀಂ ಮನೆಗೆ ಬಸ್ಸಿನಲ್ಲಿ ತಂದಿದ್ದೆವು. ಪತ್ನಿ ಮತ್ತು ಮಕ್ಕಳೊಂದಿಗೆ ಅತ್ಯಂತ ಒಳ್ಳೆಯ ರೀತಿಯಲ್ಲಿ ವ್ಯವಹರಿಸುವವರಾಗಿದ್ದಾರೆ ನಿಮ್ಮಲ್ಲಿ ಅತ್ಯಂತ ಉತ್ತಮರು ಎಂದು ಪ್ರವಾದಿ ವಚನವಿದೆಯಲ್ಲವೇ. ಹದೀಸಿನಲ್ಲಿ ವಾಗ್ದಾನ ಮಾಡಿದ ಆ ಪದವಿಯನ್ನು ಪಡೆಯುವುದಾಗಿದೆ ಪತಿ ಎಂಬ ನೆಲೆಯಲ್ಲಿ ನನ್ನ ಕರ್ತವ್ಯ.
ಜೀವನದಲ್ಲಿ ಅವಳು ಸಹಿಸಿದ ಸಹನೆ ಮತ್ತು ಉದಾರತೆಯಾಗಿದೆ ನನ್ನ ಸಮಾಜಸೇವೆಗಳನ್ನು ಸುಲಭ ಗೊಳಿಸಿದ್ದು.
ಸಮಾಜ ಸೇವೆ ಮಾಡಬೇಕೆಂದು ಆಗ್ರಹ ಇರುವವರಿಗೆ ಮಾತ್ರ ಅದು ಸಾಧ್ಯ. ಅದಕ್ಕಾಗಿ ನಾನು ಅವರಿಗೆ ಯಾವಾಗಲೂ ಚಿರರುಣಿಯಾಗಿದ್ದೇನೆ.ಆದರೆ ಈ ಭೂಮಿಯಲ್ಲಿ ಅದಕ್ಕಿರುವ ಕೃತಜ್ಞತೆ ಸಲ್ಲಿಸಲು ನಾನು ಅಶಕ್ತನಾಗಿರುವೆ.!
ನಾನು ಯಾವುದಾದರೊಂದು ಸತ್ಕರ್ಮಗಳನ್ನು ಮಾಡಿದರೂ ಅದರಲ್ಲಿ ಅವರನ್ನೂ ಒಳಪಡಿಸುತ್ತೇನೆ.ಪರಲೋಕಕ್ಕೆ ತಲುಪುವಾಗ ಝೈನಬರಿಗಿರುವ ನನ್ನ ಗಿಫ್ಟ್ ಆಗಿದೆ ಅದು.!!
الشيخ أبو بكر أحمد
ಅಶೈಖ್ ಅಬೂಬಕ್ರ್ ಅಹ್ಮದ್ ಕಾಂದಪುರಂ.
(ಭಾಷಾಂತರ:::ಅಬ್ದುರಹ್ಮಾನ್ ಸಖಾಫಿ ಮಂಜನಾಡಿ)
Comments