ಮಹ್ಳರತುಲ್ ಬದ್ರಿಯ್ಯ ಎಂಬ ದ್ಸಿಕ್ರ್ ಹೇಳುವಾಗ ಪಾಲಿಸಬೇಕಾದ ನಿಬಂದನೆಗಳು
ಮಹ್ಳರತುಲ್ ಬದ್ರಿಯ್ಯ ಆತ್ಮೀಯ ಮಜ್ಲಿಸ್ ನಲ್ಲಿ ಹೇಳಬೇಕಾದ ಈ ದ್ಸಿಕ್ರ್ ಗಳ ಕ್ರೇೂಢೀಕರಣವನ್ನು ಸುಲ್ತಾನುಲ್ ಉಲಮಾ ಶೖಖುನಾ ಎ.ಪಿ ಉಸ್ತಾದರು ಹೇಳಲು ಪ್ರತ್ಯೇಕ ಅನುಮತಿ ನೀಡಿರುವಂತಹದ್ದಾಗಿದೆ. ಸಂಪೂರ್ಣ ಆತ್ಮಾನುಭೂತಿ ಕರಗತವಾಗಲು ಕೆಳಗೆ ವಿವರಿಸುವಂತಹ ನಿರ್ದೇಶನಗಳನ್ನು ಪಾಲಿಸುವುದು ಅನಿವಾರ್ಯವಾಗಿದೆ.
🔖ಎಲ್ಲಾ ಮೊಹಲ್ಲಾಗಳಲ್ಲಿ,ಮಸೀದಿ,ದರ್ಸ್,ಮದ್ರಸಾಗಳಲ್ಲಿ,ಸೆಂಟರ್ ಗಳಲ್ಲಿ ಮತ್ತು ಮನೆಗಳನ್ನು ಕೇಂದ್ರವಾಗಿರಿಸಿ ಸೌಕರ್ಯವಿರುವ ದಿವಸಗಳಲ್ಲಿ ಭಕ್ತಿಪೂರ್ಣವಾಗಿ ಈ ಮಜ್ಲಿಸ್ ನಡೆಸಬೇಕಾಗಿದೆ.
🔖ಇದನ್ನು 1:30 ಗಂಟೆಯಲ್ಲಿ ಮುಗಿಸಬೇಕಾಗಿದ್ದು ಅದರಲ್ಲಿ 45 ನಿಮಿಷ ಮಹ್ಳರತುಲ್
ಬದ್ರಿಯ್ಯದ ದ್ಸಿಕ್ರ್, 30 ನಿಮಿಷ ಉಧ್ಬೇೂದನೆ ಮತ್ತು 15 ನಿಮಿಷ ದುಆ ಮಾಡಲು ಕ್ರಮವಾಗಿ ಸಮಯ ತೆಗದುಕೊಳ್ಳಬೇಕಾಗಿದೆ.
🔖ಮೊದಲನೆಯದಾಗಿ ಸೂರಃ ಫಾತಿಹ,ಇಖ್ಲಾಸ್,ಮುಅವ್ವಿಝತೈನಿ ಓದಿ ದುಆ ಮಾಡಬೇಕಾಗಿದ್ದು ತದನಂತರ ಎಲ್ಲರೂ ಒಟ್ಟಾಗಿ ಅಸ್ಮಾಉಲ್ ಹುಸ್ನಾ ಹೇಳಬೇಕಾಗಿದ್ದು.
🔖ನಂತರ ಇರುವ ನಾಲ್ಕು ದ್ಸಿಕ್ರ್ ಗಳನ್ನು ಅರ್ಥವನ್ನು ಚಿಂತಿಸಿ ಧ್ವನಿತಗ್ಗಿಸಿ ಪ್ರತಿಯೊಂದನ್ನೂ 100 ಸಲ ಹೇಳುವುದು.
🔖ಐದನೇ ದ್ಸಿಕ್ರ್ الله ಎನ್ನುವ 'ಜಲಾಲತ್ ನ ಇಸ್ಮ್' ಇದನ್ನು ಎಲ್ಲರೂ ಎದ್ದು ನಿಂತು ಹೇಳಬೇಕಾಗಿದೆ.
🔖ನಂತರ ಪ್ರವಾದಿ ಮುಹಮ್ಮದ್ صل الله عليه وسلم ರ ಮೇಲೆ 50 ಅಥವಾ 100 ಸ್ವಲಾತ್ ಕುಳಿತು ಕೊಂಡು ಹೇಳುವುದು.
🔖ಕೊನೆಯಲ್ಲಿ ಸಮಸ್ತ ಮುಶಾವರದ ಸ್ಥಾಪಕ ನಾಯಕರಲ್ಲಿ ಓರ್ವರಾದ ಅಹ್ಮದ್ ಕೇೂಯ ಶಾಲಿಯಾತಿಯವರು ರಚಿಸಿರುವ ಅಸ್ಮಾಉಲ್ ಬದ್ರಿಯ್ಯೀನ್ ಎಲ್ಲರೂ ಒಟ್ಟಾಗಿ ಪದ್ಯದ ದಾಟಿಯಲ್ಲಿ ಹೇಳಿ ನಾಲ್ಕು ಗೆರೆ ಓದಿದ ಬಳಿಕ ಅದರ ಜವಾಬನ್ನು ಉಚ್ಚರಿಸುವುದು.
🔖ನಂತರ ದುಆ ನೆರವೇರಿಸುವುದು.
ಸಮಯವಿದ್ದರೆ ಕುಂಡೂರ್ ಉಸ್ತಾದರು ರಚಿಸಿದ 'ಆರಂಬ ಪೂವಾಯ' ಎಂಬ ಬೈತ್ ಹೇಳುವುದು.
🔹🔹🔹🔹🔹🔹🔹🔹🔹🔹
Comments