Skip to main content

ಒಬ್ಬ ಮನುಷ್ಯನಿಗೆ ಹಲವು ಶರೀರಗಳು ಸಲಪಿಯ ಅಜ್ಞಾನತನ ತೊಲಗುವುದೆಂದು

ಒಬ್ಬ ಮನುಷ್ಯನಿಗೆ ಹಲವು ಶರೀರಗಳು
ಸಲಪಿಯ ಅಜ್ಞಾನತನ ತೊಲಗುವುದೆಂದು

📝ಮುನೀರ್ ಸಖಾಫಿ ,ಸಾಲೆತ್ತೂರು.
____________________________________
ಕೆಲವು ಔಲಿಯಾಗಳ ಚರಿತ್ರೆಗಳಲ್ಲಿ ಒಂದಕ್ಕಿಂತ ಹೆಚ್ಚು ಸ್ಥಳಗಳಲ್ಲಿ ಅವರು ಪ್ರತ್ಯಕ್ಷವಾದ ಬಗ್ಗೆ  ಉಲ್ಲೇಖಿಸಲಾಗಿದೆ.
ಅಜ್ಞಾನ ಬಂಡಾರವಾಗಿಸಿದ  ಒಬ್ಬ ಸಲಪಿಯು ಇದನ್ನು ಗೇಲಿ ಮಾಡಿ  ಬರೆದ ಲೇಖನ ಓದಲು ಸಾಧ್ಯವಾಯಿತು.ಔಲಿಯಾಗಳ ಬಗ್ಗೆ ನಿಂದನಾತ್ಮಕ ಬರಹಗಳನ್ನು ನೋಡಿದಾಗ ತುಂಬಾ ಬೇಸರವಾಯಿತು.
ಅದಕ್ಕೋಸ್ಕರ ಈ ಲೇಖನವನ್ನು ಬರೆಯುತ್ತಿದ್ದೇನೆ.
ಅಂಬಿಯಾ ಔಲಿಯಾಗಳನ್ನು ನಿಂದಿಸಲೆಂದೇ ಹುಟ್ಟಿದ ಸಲಪಿಗಳಿಂದ ಇಂತಹಾ ಪರಿಹಾಸ್ಯಗಳನ್ನದೆ ಬೇರೇನನ್ನೂ ನಿರೀಕ್ಷಿಸುವಂತಿಲ್ಲ.
ಆ ಲೇಖನ ಆತನ ಜಹಾಲತ್ ಎಷ್ಟಿದೆ ಎಂದು ತೋರಿಸಿ ಕೊಟ್ಟಿದೆ.

ಈ ವಿಷಯದಲ್ಲಿ ಇಸ್ಲಾಮಿನ ಪ್ರಮಾಣಗಳು ಮತ್ತು ಚರಿತ್ರೆಗಳೇನಿವೆ? ಎಂಬುವುದನ್ನು ಆಳವಾಗಿ ತಿಳಿದುಕೊಳ್ಳುವುದು ಮುಸ್ಲಿಮನ ಕರ್ತವ್ಯವಾಗಿದೆ.
ಕೆಲವೊಂದು ಪ್ರಾಮಾಣಿಕ ಗ್ರಂಥಗಳ ಉಲ್ಲೇಖಗಳನ್ನು ಇಲ್ಲಿ ನೀಡುತ್ತಿದ್ದೇನೆ.

 وعن قرة المزني: أن رجلاً كان يأتي النبي - صلى الله عليه وسلم - ومعه ابن له. فقال له النبي - صلى الله عليه وسلم -: أتحبه؟ فقال: يا رسول الله! أحبك الله كما أحبه. ففقده النبي - صلى الله عليه وسلم -، فقال: ما فعل ابن فلان؟ قالوا: يا رسول الله - صلى الله عليه وسلم مات. فقال رسول الله - صلى الله عليه وسلم -: أما تحب أن لا تأتي باباً من أبواب الجنة إلا وجدته ينتظرك؟ فقال رجل: يا رسول الله! له خاصة، أم لكلنا؟ قال: بل لكلكم. رواه أحمد.
(مشكاة المصابيح 1756)
ಖುರ್ರತುಲ್ ಮುಝ್'ನಿ(ರ)ವರದಿ;
ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರ ಬಳಿ ಒಬ್ಬರು ತನ್ನ ಮಗನೊಂದಿಗೆ ಬರುತ್ತಿದ್ದರು.ಒಮ್ಮೆ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಅವರೊಂದಿಗೆ ಕೇಳಿದರು,ನೀವು ನಿಮ್ಮ ಮಗನನ್ನು ಪ್ರೀತಿಸುತ್ತೀರಾ?
ಅವರು ಹೇಳಿದರು;" ನನ್ನ ಮಗನನ್ನು ನಾನು ಇಷ್ಟಪಟ್ಟಂತೆ ತಮ್ಮನ್ನು ಅಲ್ಲಾಹನು ಇಷ್ಟಪಡಲಿ".
ಒಂದು ದಿನ ಆ ತಂದೆ ಮಾತ್ರ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರ ಬಳಿ ಬಂದರು.ಜತೆಯಾಗಿ ಬರುತ್ತಿದ್ದ ಮಗನನ್ನು ಕಾಣದೆಯಿರುವಾಗ ಮಗನ ಕುರಿತು ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರ ವಿಚಾರಿಸಿದರು.
ಆ ಮಗ ಮರಣ ಹೊಂದಿದಾಗಿ ತಂದೆ ಹೇಳಿದರು.
ಆಗ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಹೇಳಿದರು;
"ಸ್ವರ್ಗದ ಎಲ್ಲಾ ಬಾಗಿಲುಗಳ ಬಳಿ ನಿಮ್ಮ ಮಗನು ನಿಮ್ಮನ್ನು ಕಾಯುತ್ತಲಿರುವುದನ್ನು ನೀವು ಇಷ್ಟಪಡುವುದಿಲ್ಲವೇ?.
ವರದಿ :ಅಹ್ಮದ್
(ಮಿಷ್ಕಾತ್1756)

ಈ ಹದೀಸ್ ನ ವ್ಯಾಖ್ಯಾನದಲ್ಲಿ ಇಮಾಮ್ ಮುಲ್ಲಾ ಅಲಿಯ್ಯುಲ್ ಖಾರೀ (ರ) ಬರೆಯುತ್ತಾರೆ,ಸ್ವರ್ಗದ ಎಲ್ಲಾ ಬಾಗಿಲುಗಳ ಬಳಿ ಒಬ್ಬ ಮಗು ನಿಲ್ಲುವನು ಎಂಬ ಮಾತು ಒಬ್ಬನ ಶರೀರವು ಒಂದಕ್ಕಿಂತ ಹೆಚ್ಚು ಸ್ಥಳದಲ್ಲಿ  ಗೋಚರಿಸುವವು  ಎಂಬ ಅದ್ಭುತಕ್ಕೆ  ಸೂಚನೆಯಾಗಿದೆ.
(ಮಿರ್'ಖಾತ್2/403)
ಒಬ್ಬನೇ ಒಬ್ಬ ಮಗು ಸ್ವರ್ಗದ ಎಲ್ಲಾ ಬಾಗಿಲುಗಳ ಬಳಿ ನಿಲ್ಲುವನೆಂಬ ಪ್ರವಾದೀ ಸಲ್ಲಲ್ಲಾಹು ಅಲೈಹಿ ವಸಲ್ಲಮರ ಮಾತನ್ನು ಸ್ವಹಾಬಿಗಳ್ಯಾರೂ ಕೂಡಾ ಆ ಮಾತನ್ನು ಗೇಲಿ ಮಾಡಿಲ್ಲ.ಕುರುಟು ಪ್ರಶ್ನೆ ಕೇಳಿಲ್ಲ.

ಇಮಾಮ್ ಅಹ್ಮದ್,ಇಮಾಮ್ ನಸಾಈ  ವರದಿ ಮಾಡಿದ ಇನ್ನೊಂದು ಹದೀಸ್ ನೋಡಿ,
 عن ابن عباس قال : قال رسول الله صلى الله عليه وسلم : "لما أسري بي فأصبحت بمكة قطعت وعرفت أن الناس مكذبي " - فذكر الحديث إلى أن قال : قالوا وتستطيع أن تنعت المسجد وفي القوم من قد سافر إليه ، قال رسول الله صلى الله عليه وسلم : " فذهبت أنعت فما زلت أنعت حتى التبس علي بعض النعت فجيء بالمسجد وأنا أنظر إليه حتى وضع دون دار عقيل " - أو عقال " فنعته وأنا أنظر إليه " 
ಇಬ್ನು ಅಬ್ಬಾಸ್ (ರ)ಹೇಳುತ್ತಾರೆ,ಪ್ರವಾದೀ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಹೇಳಿದರು;
ಇಸ್ರಾ ಯಾತ್ರೆ ಮುಗಿಸಿ ನಾನು ಮಕ್ಕಾಗೆ ತಲುಪಿದಾಗ ಜನರು ನನ್ನ ಮಾತನ್ನು ಸುಳ್ಳಾಗಿ ಕಂಡರು.ಅವರು ಬೈತುಲ್ ಮುಖದ್ದಸ್'ನ ಕುರಿತು ಒಂದೊಂದಾಗಿ ಕೇಳ ತೊಡಗಿದರು.ಆವಾಗ ಅಲ್ಲಾಹನು ನನ್ನ ಎದುರಿನಲ್ಲಿ ಬೈತುಲ್ ಮುಖದ್ದಸ್ ತೋರಿಸಿದನು.ಅದನ್ನು ನೋಡಿ ಅವರಿಗೆ ಆ ಬೈತುಲ್ ಮುಖದ್ದಸ್ ನ ವಿಶೇಷತೆಯನ್ನು ಒಂದೊಂದಾಗಿ ಹೇಳತೊಡಗಿದೆ.
(ಅಹ್ಮದ್,ನಸಾಈ)
ಈ ಹದೀಸ್ ಸ್ವಹೀಹ್ ಆಗಿದೆಯೆಂದು ಇಮಾಮ್ ಸುಯೂಥೀ ಅಲ್ ಹಾವೀ ಲಿಲ್ ಫತಾವ 1/295 ದಲ್ಲಿ ವಿವರಿಸಿದ್ದಾರೆ.

ಈ ಹದೀಸಿನಲ್ಲಿ ಹೇಳಿದ "ಅಲ್ಲಾಹನು ನನ್ನ ಎದುರಿನಲ್ಲಿ ಬೈತುಲ್ ಮುಖದ್ದಸ್ ತೋರಿಸಿದನು."ಎಂಬುವುದರ ಕುರಿತು ಇಮಾಮ್ ಸುಯೂಥೀ  ಹೇಳುತ್ತಾರೆ.ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರಿಗೆ ಮಕ್ಕಾದಲ್ಲಿ ಬೈತುಲ್ ಮುಖದ್ದಸ್ ತೋರಿಸಿ ಕೊಟ್ಟ ಸಂದರ್ಭ ಫೆಲಸ್ತೀನ್ ನಲ್ಲಿ ಅದು ರೀತಿಯಲ್ಲೇ ಇತ್ತು.
( ಅಲ್ ಹಾವೀ ಲಿಲ್ ಫತಾವ 1/295)
ಫೆಲಸ್ತೀನ್ ನಲ್ಲಿ ಬೈತುಲ್ ಮುಖದ್ದಸ್ ಇದ್ದ ಅದೇ ಸ್ಥಿತಿಯಲ್ಲಿ ಮಕ್ಕದಲ್ಲೂ ಅದನ್ನು ಕಂಡರು ಎಂದು ಹೇಳುವಾಗ 2 ಬೈತುಲ್ ಮುಖದ್ದಸ್ ಒಂದೇ ಸಂದರ್ಭದಲ್ಲಿ ಗೋಚರವಾಯಿತೆಂದು ಬಹಳ ಸ್ಪಷ್ಟ.
-------------------------------------------
ಪ್ರವಾದೀ ಯೂಸುಫ್ ಅಲೈಹಿಸ್ಸಲಾಮರನ್ನು ಝುಲೀಖ ಎಂಬ ಮಹಿಳೆ ತನ್ನ ತನ್ನ ಆಸೆ ಆಡೇರಿಸಲು ಆಹ್ವಾನಿಸಿದಾಗ ಪ್ರವಾದೀ ಪ್ರವಾದೀ ಯೂಸುಫ್ ಅಲೈಹಿಸ್ಸಲಾಮರ ಬಳಿ ಪಿತರಾದ ಯಅಖೂಬ್ ಅಲೈಹಿಸ್ಸಲಾಮರು ಪ್ರತ್ಯಕ್ಷವಾದರೆಂದು ವಿವರಿಸುವ ಘಟನೆಯನ್ನು ಇಮಾಮ್ ಇಬ್ನ್ ಜರೀರ್,ಇಬ್ನ್ ಅಬೀ ಹಾತಿಂ,ಇಬ್ನುಲ್ ಮುಂದಿರ್(ರ)ರವರು ಇಬ್ನ್ ಅಬ್ಬಾಸ್(ರ) ರಿಂದ ತಮ್ಮ ತಫ್ಸೀರ್ ಗಳಲ್ಲೂ ಇಮಾಮ್ ಹಾಕಿಂ ತನ್ನ ಮುಸ್ತದ್'ರಕ್'ನಲ್ಲೂ  ವಿವರಿಸಿ ಸ್ವಹೀಹ್ ಆಗಿದೆಯೆಂದೂ ಹೇಳಿದ್ದಾರೆ,(ಅಲ್'ಹಾವೀ ಲಿಲ್ ಫತಾವಾ )
ومن ذلك ما أخرجه ابن جرير ، وابن أبي حاتم ،وابن المنذر في تفاسيرهم ، والحاكم في المستدرك وصححه عن ابن عباس في قوله تعالى : ( لولا أن رأى برهان ربه ) قال : مثل له يعقوب ، 
(الحاوي للفتاوي1/295)
_____________________________________
ನಂತರ ಇಮಾಮ್ ಸುಯೂಥೀ(ರ)ಹೇಳುತ್ತಾರೆ;
، وأخرج ابن جرير مثله عن سعيد بن جبير ، وحميد بن عبد الرحمن ، ومجاهد ، والقاسم بن أبي بزة ، وعكرمة ، ومحمد بن سيرين ، وقتادة ، وأبي صالح ، وشمر بن عطية ، والضحاك ، وأخرج عن الحسن قال : انفرج سقف البيت فرأى يعقوب ، وفي لفظ عنه قال : رأى تمثال يعقوب .
(الحاوي للفتاوي 1/295) 
ಅದೇ ರೀತಿ ಇಮಾಮ್ ಇಬ್ನ್ ಜರೀರ್ ಸಈದು ಬಿನ್ ಜುಬೈರ್(ರ),ಹುಮೈದ್ ಬಿನ್ ಅಬ್ದುರಹ್ಮಾನ್(ರ),ಮುಜಾಹಿದ್(ರ),ಖಾಸಿಮ್ (ರ),ಇಬ್ನ್ ಅಬೀ ಬಝ್ಝ (ರ),ಇಕ್ರಿಮ(ರ),ಮುಹಮ್ಮದ್ ಬಿನ್ ಸೀರೀನ್(ರ),ಖತಾದ(ರ),ಳಹ್ಹಾಕ್(ರ) ರಿಂದಲೂ ವರದಿ ಮಾಡಿದ್ದಾರೆ.
ಹಸನ್ (ರ)ರವರ ವರದಿಯಲ್ಲಿ ಮನೆಯ ಮೇಲ್ಭಾಗದಿಂದ ಪ್ರವಾದೀ ಯಅಖೂಬ್ ಅಲೈಹಿಸ್ಸಲಾಮರನ್ನು ದರ್ಶಿಸಿದರು ಎಂದಿದೆ. 
_____________________________________
فهذا القول من هؤلاء السلف دليل على إثبات المثال ، أو طي المسافة ، وهو شاهد عظيم لمسألتنا ؛ حيث رأى يوسف - عليه السلام - وهو بمصر أباه ، وكان إذ ذاك بأرض الشام ، ففيه إثبات رؤية يعقوب - عليه السلام - بمكانين متباعدين في وقت واحد ، بناء على إحدى القاعدتين اللتين ذكرناهما ، والله أعلم . 
ಸಲಫ್ ಗಳಾದ ಈ ಮಹಾತ್ಮರ ಮಾತು ಒಂದಕ್ಕಿಂತ ಹೆಚ್ಚು ಸ್ಥಳಗಳಲ್ಲಿ ಒಬ್ಬ ವ್ಯಕ್ತಿಯನ್ನು ದರ್ಶಿಸಲು ಸಾಧ್ಯ ಎಂಬುವುದಕ್ಕೆ ಪುರಾವೆಯಾಗಿದೆ.ಪ್ರಸ್ತುತ ವೇಳೆ ಪ್ರವಾದೀ ಯೂಸುಫ್ ಅಲೈಹಿಸ್ಸಲಾಮರು ಮಿಸ್ರ್'ನಲ್ಲಿದ್ದರೆ  ಯಅಖೂಬ್ ಅಲೈಹಿಸ್ಸಲಾಮರು ಶಾಮ್ ನಲ್ಲಿದ್ದರು.ಬಹಳ ದೂರದ ಸ್ಥಳದಲ್ಲಿದ್ದ ವ್ಯಕ್ತಿಯನ್ನು ಯೂಸುಫ್ ಅಲೈಹಿಸ್ಸಲಾಂ ನೋಡಿದರು.
(ಅಲ್ ಹಾವೀ ಲಿಲ್ ಫತಾವಾ 1/295)

ಮಿಸ್ರ್ ನಲ್ಲಿ ಯಅಖೂಬ್ ಅಲೈಹಿಸ್ಸಲಾಮ್ ಪ್ರತ್ಯಕ್ಷವಾದಾಗ ಶಾಂಮ್ ನಲ್ಲೂ ಕೂಡಾ ಅದೇ ವೇಳೆ ಉಪಸ್ಥಿತರಿದ್ದರೆಂದು ಹೇಳುವಾಗ ಒಬ್ಬರ ಶರೀರ ಎರಡು ಸ್ಥಳದಲ್ಲಿ ಗೋಚರಿಸಿತು ಎಂಬುವುದು ಸ್ಪಷ್ಟವಲ್ಲವೇ?
_____________________________________
ಇಮಾಮ್ ಸುಯೂಥೀ ಹೇಳುತ್ತಾರೆ;
 ، ورأيت في مناقب الشيخ تاج الدين بن عطاء الله لبعض تلاميذه أن رجلا من جماعة الشيخ حج ، قال : فرأيت الشيخ في المطاف ، وخلف المقام ، وفي المسعى ، وفي عرفة ، فلما رجعت سألت عن الشيخ ، فقيل : هو طيب ، فقلت : هل سافر أو خرج من البلد ؟ فقيل : لا ، فجئت إليه ، وسلمت عليه ، فقال لي : من رأيت في سفرتك هذه من الرجال ؟ قلت : يا سيدي ، رأيتك ، فتبسم ، وقال : الرجل الكبير يملأ الكون(الحاوي)
ಶೈಖ್ ತಾಜುದ್ದೀನ್ ಇಬ್ನ್ ಅತಾಇಲ್ಲಾಹಿ (ರ)ರವರ ಚರಿತ್ರೆಯಲ್ಲಿ ಹೀಗಿದೆ.
"ಶೈಖ್ ರವರ ಬಳಿಯಿಂದ ಒಬ್ಬರು ಹಜ್ಜ್'ಗೆ ತೆರಳಿದರು.ಆವಾಗ ಕಅಬಾದ ಮತಾಫ್ ನಲ್ಲಿ ಶೈಖ್ ತಾಜುದ್ದೀನ್ ರವರನ್ನು ನೋಡಿದರು.ಮಖಾಮ್ ಇಬ್ರಾಹೀಂ ನ ಹಿಂಬದಿ ಬಂದಾಗ ಅಲ್ಲೂ ಪ್ರಸ್ತುತ ಶೈಖ್ ಇದ್ದರು.ಮಸ್'ಆದಲ್ಲೂ ನಂತರ ಅರಫಾದಲ್ಲೂ ಶೈಖ್ ಹಾಜರಿದ್ದರು.ನಾನು ಊರಿಗೆ ಮರಳಿದಾಗ  ಶೈಖ್ ತಾಜುದ್ದೀನ್ ರವರ ಹಜ್ಜ್ ಯಾತ್ರೆಯ ಬಗ್ಗೆ ಕೇಳಿದಾಗ ಅವರು ಹಜ್ಜ್'ಗೆ ಹೋಗಿಲ್ಲವೆಂದು ಉತ್ತರ ಲಭಿಸಿತು.ನಾನು ನೇರ ಶೈಖ್ ರವರ ಮುಂದೆ ಹೋಗಿ ನಿಂತೆ.ನನ್ನನ್ನು ನೋಡಿದ ತಕ್ಷಣ ಶೈಖ್ ಕೇಳಿದರು;ಹಜ್ಜ್ ಯಾತ್ರೆಯಲ್ಲಿ ಯಾರನ್ನು ನೀನು ನೋಡಿದೆ?
ತಮ್ಮನ್ನು ನೋಡಿದೆ ಎಂದು ನಾನು ಉತ್ತರಿಸಿದಾಗ ಶೈಖ್ ಹೇಳಿದರು,
ಸಾತ್ವಿಕನಾದ ಮನುಷ್ಯನು ಪ್ರಪಂಚವಿಡೀ ಆವರಿಸಿರುತ್ತಾನೆ.
(ಅಲ್ ಹಾವೀ ಲಿಲ್ ಫತಾವಾ 1/295)
_____________________________________
 قال العلامة علاء الدين القونوي في تأليف له يسمى الإعلام ، ما نصه : وفي الممكن أن يخص الله تعالى بعض عباده في حال الحياة بخاصية لنفسه الملكية القدسية ، وقوة لها يقدر بها على التصرف في بدن آخر غير بدنها المعهود مع استمرار تصرفها في الأول.
ಇಮಾಮ್ ಖೌನವೀ ತನ್ನ ಅಲ್ ಇಅಲಾಮ್ ಎಂಬ ಗ್ರಂಥದಲ್ಲಿ ಹೇಳುತ್ತಾರೆ,
ಕೆಲವು ಮನುಷ್ಯರಿಗೆ ಅಲ್ಲಾಹನು ಮಲಕುಗಳಂತೆ ಸಾಮರ್ಥ್ಯವನ್ನು ನೀಡುವನು.ಒಂದನೇ ಶರೀರದ ಎಲ್ಲಾ ವ್ಯವಹಾರಗಳು ನಡೆಯುತ್ತಿದ್ದಂತೆ ಎರಡನೇ ಶರೀರದಿಂದಲೂ ಅವರು ವ್ಯವಹರಿಸುವರು.
(ಅಲ್ ಹಾವೀ ಲಿಲ್ ಫತಾವಾ 1/291)
ಮಲಕುಗಳು ಒಂದೇ ಸಮಯದಲ್ಲಿ ಹಲವು ಸ್ಥಳಗಲ್ಲಿ ಪ್ರತ್ಯಕ್ಷಗೊಳ್ಳುವ ಬಗ್ಗೆ ವಿವರಿಸಬೇಕಾದ ಅಗತ್ಯವಿಲ್ಲ ತಾನೇ?
ಜಗತ್ತಿನ ಎಲ್ಲೆಡೆ ಮರಣ ಹೊಂದಿದವರನ್ನು ದಫನ್ ಮಾಡಿದರೂ ಮುಂಕರ್ ನಕೀರ್ ಎಂಬ ಮಲಕುಗಳು ಅವರ ಖಬರಿಗೆ ಬರುವರೆಂದಲ್ಲವೇ ನಮ್ಮ ವಿಶ್ವಾಸ?.
ಇದನ್ನು ಇಮಾಮ್ ಸುಯೂಥಿ(ರ)ರವರೇ ವಿವರಿಸಿದ್ದಾರೆ.
_____________________________________
 يحكى عن قضيب البان الموصلي ، وكان من الأبدال أنه اتهمه بعض من لم يره يصلي بترك الصلاة وشدد النكير عليه في ذلك ، فتمثل له على الفور في صور مختلفة ، وقال : في أي هذه الصور رأيتني ما أصلي
(الحاوي)
ಖಳೀಬುಲ್ ಬಾನಿ ಎಂಬ ಸಾತ್ವಿಕ ಪುರುಷರೊಬ್ಬರ ಕುರಿತು ಈ ರೀತಿ ಚರಿತ್ರೆಯಿದೆ.
ಅವರು ನಮಾಝು ಮಾಡುತ್ತಿಲ್ಲವೆಂದು ಕೆಲವರು ಆಕ್ಷೇಪವೆತ್ತಿದರು.ಆಕ್ಷೇಪವು ಮಿತಿ ಮೀರಿದಾಗ ಖಳೀಬುಲ್ ಬಾನಿ ಎಂಬ ಆ ಮಹಾತ್ಮರು ಹಲವು ರೂಪದಲ್ಲಿ ಪ್ರತ್ಯಕ್ಷಗೊಂಡು ಕೇಳಿದರು,
"ನನ್ನ ಯಾವ ಶರೀರ ನಮಾಝು ಮಾಡುತ್ತಿಲ್ಲವೆಂದು ನೀವು ಹೇಳುತ್ತಿರುವಿರಿ?".
(ಅಲ್ ಹಾವೀ 1/291)
_____________________________________
ಔಲಿಯಾಗಳು ಒಂದಕ್ಕಿಂತ ಹೆಚ್ಚು ಕಡೆ ಪ್ರತ್ಯಕ್ಷಗೊಳ್ಳುವರು ಎಂಬುವುದು ಸಮಸ್ತದವರ ಮಾತ್ರ ವಾದವಲ್ಲ.ಅದು ಖುರ್'ಆನ್ ,ಹದೀಸ್,ಚರಿತ್ರೆಗಳಿಂದ ಸಾಬೀತಾದ ಸಂಗತಿಯಾಗಿದೆ.
----------------------------------------------------------
ವಹ್ಹಾಬಿಗಳ ಅಂಗೀಕೃತ ನಾಯಕ ಮಿಸ್ಟರ್ ಆಲೂಸಿ ಹೇಳುವುದು ನೋಡಿ,

يحكى عن بعض الأولياء - قدست أسرارهم - أنهم يرون في وقت واحد في عدة مواضع، 
( تفسير روح المعاني 14/23)
ಹಲವು ಔಲಿಯಗಳು ಒಂದೇ ಸಮಯದಲ್ಲಿ ಹಲವು ಸ್ಥಳಗಳಲ್ಲಿ ಕಾಣಿಸಿಕೊಂಡದ್ದು ಉಲ್ಲೇಖಿಸಲ್ಪಡಲಾಗಿದೆ.
(ರೂಹುಲ್ ಮಆನಿ,ಪುಟ 14/ಭಾಗ 23)
_____________________________________
ನಂತರ ಆಲೂಸಿ ಹೇಳುತ್ತಾರೆ.
وقد رأى صلى الله عليه وسلم ليلة أسري به جماعة من الأنبياء غير موسى - عليه السلام - في السماوات مع أن قبورهم في الأرض ولم يقل أحد إنهم نقلوا منها إليها على قياس ما سمعت آنفا،
( تفسير روح المعاني 14/23)
ಇಸ್ರಾ ನ ರಾತ್ರಿ ಪ್ರವಾದೀ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಮೂಸಾ ನೆಬಿಯನ್ನು ಹೊರತು ಪಡಿಸಿ ಹಲವು ಪ್ರವಾದಿಗಳನ್ನು ಆಕಾಶದಲ್ಲಿ ಕಂಡಿದ್ದಾರೆ.ಅವರೆಲ್ಲರ ಖಬರ್ ಭೂಮಿಯಲ್ಲಾಗಿತ್ತು.ಅವರ ಖಬ್'ರ್ ನಿಂದ ಅವರನ್ನು ಆಕಾಶಕ್ಕೆ ಕೊಂಡು ಹೋಗಿದ್ದು ಎಂದು ಯಾರೂ ಕೂಡಾ ಹೇಳಿಲ್ಲ.
(ರೂಹುಲ್ ಮಆನಿ,ಪುಟ 14/ಭಾಗ 23)
ಇಲ್ಲಿ ಆಲೂಸಿ ಹೇಳುವುದು,ಪ್ರವಾದೀ ಸಲ್ಲಲ್ಲಾಹು ಅಲೈಹಿ ವಸಲ್ಲಮರು ನೋಡಿದ ಅಂಬಿಯಾಗಳ ಶರೀರವು ಭೂಮಿಯಲ್ಲಿ ದಫನ್ ಮಾಡಲ್ಪಟ್ಟ ಶರೀರವಲ್ಲ.ಅದು ಬೇರೆಯೇ ಶರೀರವಾಗಿತ್ತು ಎಂದಾಗಿದೆ.
ಅಂಬಿಯಾಗಳಿಗೆ ಒಂದಕ್ಕಿಂತ ಹೆಚ್ಚು ಶರೀರದೊಂದಿಗೆ ಪ್ರತ್ಯಕ್ಷಗೊಳ್ಳಲು ಸಾಧ್ಯವಿದೆ ಎಂದು ಆಲೂಸಿಯೇ ಹೇಳಿದಂತಾಯಿತು.
ಸಲಪಿಗಳಿಗೆ ಇದಕ್ಕೇನಾದರೂ ಉತ್ತರಿಸಲಿದ್ದರೆ ಆಲೂಸಿಯ ಖಬರ್ ಬಳಿ ಹೋಗಿ ಉತ್ತರಿಸಲಿ.
_____________________________________
ಇಮಾಮ್ ಬೈಹಖೀ (ರ)ಹೇಳುತ್ತಾರೆ,
قال البيهقي : وحلولهم في أوقات مختلفة في أماكن متعددة جائز عقلا (مرقاة 3/241)
ಯಾವುದೇ ಸಮಯದಲ್ಲೂ ಅಂಬಿಯಾಗಳು ಹಲವು ಸ್ಥಳಗಳಲ್ಲಿ ಪ್ರತ್ಯಕ್ಷವಾಗುವರು.ಹದೀಸ್'ನಲ್ಲಿ ಆ ರೀತಿ ವರದಿಯಾಗಿದೆ.
(ಮಿರ್'ಖಾತ್ 3/241).
_____________________________________
ಇಮಾಮ್ ಗಝ್ಝಾಲೀ(ರ)ಹೇಳುತ್ತಾರೆ,
 قال الامام الغزالي رحمه الله تعالى والرسول عليه السلام له الخيار فى طواف العوالم مع أرواح الصحابة رضى الله عنهم لقد رآه كثير من الأولياء
(روح البيان 10/99)
ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರಿಗೆ ಸ್ವಹಾಬಿಗಳ ಆತ್ಮದೊಂದಿಗೆ ಪ್ರಪಂಚವಿಡೀ ಸುತ್ತುವ ಸ್ವಾತಂತ್ರ್ಯವನ್ನು ಅಲ್ಲಾಹನು ನೀಡಿದ್ದಾನೆ.ಹಲವು ಔಲಿಯಾಗಳು ಅವರನ್ನು ಕಂಡಿದ್ದಾರೆ.
(ರೂಹುಲ್ ಬಯಾನ್ 10/99).
_____________________________________
ವಹ್ಹಾಬಿಗಳ ನಾಯಕ ಶೌಕಾನಿ ಹೇಳುವುದು ನೋಡಿ,

وإنما يغلط أكثر الناس في هذا الموضع حيث يعتقد أن الروح من جنس ما يعهد من الأجسام التي إذا شغلت مكانا لم يمكن أن تكون في غيره وهذا غلط محض بل الروح تكون فوق السموات في أعلى عليين وترد إلى القبر فترد السلام وتعلم بالمسلم وهي في مكانها هناك وروح رسول الله في الرفيق الأعلى دائما ويردها الله سبحانه إلى القبر فترد السلام على من سلم عليه وتسمع كلامه وقد رأى رسول الله موسى قائما يصلى في قبر ورآه في السماء السادسة والسابعة. 
(كتاب الروح 139)

ಕೆಲವರಿಗೆ ತಪ್ಪಾದ ಒಂದು ಭಾವನೆ ಇದೆ.ಅದೇನೆಂದರೆ 'ರೂಹ್' ಒಂದು ಕಡೆ ಇದ್ದರೆ ಇನ್ನೊಂದು ಕಡೆ ಆ ರೂಹ್ ಇರಲಾರದು ಎಂಬುವುದು.ಇದು ಶುಧ್ಧ ತಪ್ಪಾಗಿದೆ.
ರೂಹ್ "ಇಲ್ಲಿಯ್ಯೀನ್" ಎಂಬ ಸ್ಥಳದಲ್ಲಿದ್ದರೂ(ಸ್ವರ್ಗದಲ್ಲಿರುವ ಒಂದು ಉನ್ನತ ಸ್ಥಳ) ಖಬರಿನೊಂದಿಗೆ "ರೂಹ್" ಗೆ ಸಂಪರ್ಕವಿರುತ್ತದೆ ಎಂಬುವುದಾಗಿದೆ ವಾಸ್ತವ.ಆದುದರಿಂದಲೇ ಸಲಾಂ ಹೇಳಿದವನ ಸಲಾಮ್'ಗೆ ರೂಹ್ ಉತ್ತರಿಸುತ್ತದೆ.
ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಮೂಸಾ ನೆಬಿಯವರು ಖಬರಿನಲ್ಲಿ ನಮಾಝು ಮಾಡುವುದನ್ನು ನೋಡಿ 6 ನೇ ಆಕಾಶಕ್ಕೆ ತಲುಪಿದಾಗ ಅಲ್ಲೂ ಅವರನ್ನು ಕಂಡರು.
(ಕಿತಾಬುರ್ರೂಹ್ 139).
_____________________________________
ಒಟ್ಟಿನಲ್ಲಿ ಅಂಬಿಯಾ ,ಔಲಿಯಾಗಳು ನಮ್ಮಂತಹ ಜನರಲ್ಲ.ಅವರಿಗೆ ಅಲ್ಲಾಹನು ಅದ್ಭುತ ಶಕ್ತಿ ನೀಡಿದ್ದಾನೆ.ನಿಮಿಷಾರ್ಧದಲ್ಲಿ ಜಗತ್ತಿನ ಯಾವುದೇ ಮೂಲೆಗೆ ತಲುಪಲು ಅವರಿಗೆ ಸಾಧ್ಯವಿದೆ.
ಒಬ್ಬರ ಶರೀರವು ಹಲವು ಸ್ಥಳಗಳಲ್ಲಿ ಪ್ರತ್ಯಕ್ಷವಾದ ಬಗ್ಗೆಯೂ ಧಾರಾಳ ಪುರಾವೆ
ಮೇಲಿನ ಲೇಖನದಲ್ಲಿ  ನೀಡಿದ್ದೇನೆ.
ಹಲವು ಚರಿತ್ರೆಗಳು ಇನ್ನೂ ಕೂಡಾ ನಮ್ಮ ಮುಂದಿದೆ.ಇದನ್ನೆಲ್ಲಾ ಗೇಲಿ ಮಾಡುವವನು ಖುರ್'ಆನ್ ಮತ್ತು ಹದೀಸನ್ನು ಗೇಲಿ ಮಾಡುವ ಕಪಟಿಗಳ ಸಾಲಿನಲ್ಲಿ ಒಳಪಡುತ್ತಾನೆ.
ಇಲ್ಲಿ ಹೇಳದ ಹಲವಾರು ಚರಿತ್ರೆಗಳು  ಇವೆ.
ಅರಬೀ ಗ್ರಂಥ ಪಾರಾಯಣ ಮಾಡಲು ಗೊತ್ತಿರುವವರಿಗಾಗಿ ಗ್ರಂಥಗಳ ಹೆಸರು ಮತ್ತು ಕಾಂಡ,ಪುಟಗಳನ್ನು ಕೆಳಗೆ ನೀಡುತ್ತೇನೆ.ಅದನ್ನು ನೋಡಿ ತಿಳಿದುಕೊಳ್ಳಬೇಕಾಗಿ ವಿನಂತಿ.

1.ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರ ಆತ್ಮ ಎಲ್ಲಾ ಕಡೆ ಇರುತ್ತದೆ.
(ಶರಹುಶ್ಶಿಫಾ 2/117, ರೂಹುಲ್ ಮಆನೀ 22/37).

2.ಔಲಿಯಾಗಳು ಒಂದಕ್ಕಿಂತ ಹೆಚ್ಚು ಸ್ಥಳಗಳಲ್ಲಿ ಪ್ರತ್ಯಕ್ಷವಾಗುವುದನ್ನು ಗೇಲಿ ಮಾಡುವವರಿಗೆ ಸೂಕ್ತ ಉತ್ತರ ನೀಡಿದ್ದಾರೆ ಇಮಾಮ್ ತಫ್'ತಾಝಾನೀ(ರ).
(ಶರಹುಲ್ ಮಖಾಸಿದ್ 5/75)

3.ಇಬ್ರಾಹೀಂ ಬಿನ್ ಅದ್'ಹಂ (ರ)ರವರು ಬಸರದಲ್ಲಿ ಇದ್ದ ಅದೇ ವೇಳೆ ಮಕ್ಕಾದಲ್ಲೂ ಇದ್ದರು.
(ಶರಹುಲ್ ಮಖಾಸಿದ್ 5/75)

4.ಒಬ್ಬರು ವಲಿಯ್ಯನ್ನು ಕಅಬಾ ಸಂದರ್ಶಿಸಿದ ಘಟನೆ.
(ಶರಹುಲ್ ಮಖಾಸಿದ್ 5/75)

5.ಮುಂಕರ್ ,ನಕೀರ್ ಎಲ್ಲಾ ಖಬರಿನಲ್ಲಿ ಪ್ರತ್ಯಕ್ಷವಾಗುವಂತೆ  ಔಲಿಯಾಗಳೂ ಪ್ರತ್ಯಕ್ಷವಾಗುವರು.
(ಅಲ್ ಹಾವೀ ಲಿಲ್ ಫತಾವಾ
1/289)

6.ಎರಡು ಸ್ಥಳದಲ್ಲಿ ಒಬ್ಬನನ್ನು ಕಾಣಬಹುದಾಗಿದೆ.
(ಅಲ್ ಯವಾಖೀತು ವಲ್ ಜವಾಹಿರ್ 2/36).

7.ಔಲಿಯಾಗಳಿಗೆ ಹಲವು ಶರೀರಗಳಿರುವುದಕ್ಕೆ ಯಾವುದೇ ವಿರೋಧವಿಲ್ಲ.
(ಮಿರ್'ಖಾತ್ 4/31).

8.ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರ ಆತ್ಮ ಎಲ್ಲಾ ಕಡೆ ಸಂಚರಿಸುತ್ತದೆ.ಜನರ ಎಲ್ಲಾ ಅವಸ್ಥೆಗಳನ್ನು ತಿಳಿಯುವರು.
(ಅಲ್ ಮವಾಹಿಬುಲ್ಲದುನ್ನಿಯ್ಯ 8/348,
ಅಲ್ ಮದ್'ಖಲ್ 1/252).

ಇವೆಲ್ಲವುಗಳ ಅರಬಿ ಉಧ್ಧರಣಿಗಳು ನನ್ನ ಬಳಿ ಇದ್ದು ಅಗತ್ಯ ಬಂದಲ್ಲಿ ವಿವರಿಸುವೆನು.
_____________________________________

*ಮುಗಿಯಿತು.*

_ಸಲಪಿಗೆ ತಲುಪುವ ತನಕ ಶೇರ್ ಮಾಡಿ_

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...