SIRJ ಬಾರೆಬೆಟ್ಟು.
ಪ್ರಶ್ನೆ: ಪತಿ ಮತ್ತು ಪತ್ನಿ ಲೈಂಗಿಕ ಸಂಪರ್ಕದಲ್ಲಿ ಏರ್ಪಟ್ಟು ಜನಾಬತ್ ಉಂಟಾಗಿ ಸ್ನಾನ ಮಾಡಿದ ಬಳಿಕ ಪುನಃ ವೀರ್ಯಾಣು ಬಂದರೆ ಏನು ಮಾಡಬೇಕು ? ಪುನಃ ಸ್ನಾನ ಕಡ್ಡಾಯವಾಗುವುದೇ!?
ಜನಾಬತ್ ಗಾರ ಎನ್ನುವುದು ಪುರುಷ ಮತ್ತು ಸ್ತ್ರೀಯರಿಗೆ ಇಬ್ಬರಿಗೂ ಇರುವ ವಿಶೇಷತೆ ಆಗಿದೆ ! ಈ ರೀತಿ ಕರೆಯುವುದು ಯಾವಾಗ ?
ಪತಿ ಮತ್ತು ಪತ್ನಿ ಲೈಂಗಿಕ ಸಂಪರ್ಕದಲ್ಲಿ ಏರ್ಪಟ್ಟರೆ ಅಥವಾ ಲೈಂಗಿಕ ಸಂಪರ್ಕದಲ್ಲಿ ಏರ್ಪಡದೆ ವೀರ್ಯ ಹೊರಬಂದರೆ ಅವನಿಗೆ ಸ್ನಾನ ಕಡ್ಡಾಯವಾಗುವ ಅವಸ್ಥೆಯನ್ನು ಜನಾಬತ್ ಎನ್ನುವರು.
ಇಮಾಂ ಇಬ್ನ್ ಹಜರ್ (ರ) ಅವರ ತುಹುಫತುಲ್ ಮುಹ್ ತಾಜ್ ಫೀ ಶರಹಿಲ್ ಮಿನ್ ಹಾಜ್ ಎಂಬ ಗ್ರಂಥದ ಒಂದನೇ ಭಾಗ 301ನೇ ಪುಟದಲ್ಲಿ ಹೇಳುವುದು ಕಾಣಬಹುದು :
وَأَنْ يُؤَخِّرَ مَنْ أَجْنَبَ بِخُرُوجِ الْمَنِيِّ غُسْلَهُ عَنْ بَوْلِهِ لِئَلَّا يَخْرُجَ مَعَهُ فَضْلَةُ مَنِيِّهِ فَيَبْطُلُ غُسْلُهُ
ವೀರ್ಯಾಣು ಹೊರಬರುವ ಮೂಲಕ ಜನಾಬತ್ ಉಂಟಾದ ವ್ಯಕ್ತಿ (ಅದು ಪತಿ ಪತ್ನಿಯ ಲೈಂಗಿಕ ಸಂಪರ್ಕದಿಂದಲೂ ಅಥವಾ ಸ್ವಪ್ನಸ್ಕಲನದಿಂದಲೂ ಆಗಬಹುದು)ಆ ವ್ಯಕ್ತಿ ಸ್ನಾನ ಮಾಡುವ ಮುನ್ನ ಮೂತ್ರ ಮಾಡುವುದು ಸುನ್ನತ್ ಆಗಿದೆ ಕಾರಣ ಸ್ನಾನ ಮಾಡಿದ ಬಳಿಕ ಮೂತ್ರ ಮಾಡಿದರೆ ಅದರ ಜೊತೆಗೆ ಬಾಕಿಯಾದ ಕೆಲವೊಂದು ವೀರ್ಯಾಣುವಿನ ಅಂಶಗಳು ಬರಲು ಸಾಧ್ಯತೆಯಿದೆ ಆ ರೀತಿ ಸ್ನಾನ ಮಾಡಿದ ಬಳಿಕ ಪುನಃ ವೀರ್ಯಾಣು ಬಂದರೆ ಅವನು ಪುನಃ ಕಡ್ಡಾಯವಾದ ಜನಾಬಾತ್ ಸ್ನಾನ ಮಾಡಬೇಕಿದೆ ಅವನ ಮೊದಲ ಸ್ನಾನ ಅಸಿಂಧುವಾಗುವುದು.
(قَوْلُهُ فَيَبْطُلُ غَسْلُهُ) يَعْنِي فَيَحْتَاجُ إلَى غُسْلٍ آخَرَ
ಇಸ್ಲಾಮ್ ಸ್ಪಷ್ಟವಾಗಿ ಕಲಿಸಿಕೊಟ್ಟಿತು ಲೈಂಗಿಕ ಸಂಪರ್ಕದ ಬಳಿಕ ಮೂತ್ರ ಮಾಡುವುದು ಸುನ್ನತ್ ಆಗಿದೆಯೆಂದು ಇದನ್ನೇ ಆಗಿದೆ ಈಗ ಶಾಸ್ತ್ರಕೂಡ ಹೇಳುತ್ತಿರುವುದು ಕೆಲವೊಬ್ಬರಿಗೆ ಇವತ್ತು ಮೂತ್ರಕಲ್ಲಿನಂತಹ (Urinary stone) ರೋಗ ಬರಲು ಪ್ರಮುಖ ಕಾರಣ ಲೈಂಗಿಕವಾಗಿ ಏರ್ಪಟ್ಟ ಬಳಿಕ (ಅಥವಾ ಸ್ವಯಂಭೋಗದ ಬಳಿಕ) ಮೂತ್ರ ಮಾಡದೆ ಮಲಗುವುದು ಇದರಿಂದ ವೀರ್ಯಾಣುವಿನ ಅಂಶಗಳು ಅವರ ಗುಪ್ತದ್ವಾರಗಳಲ್ಲಿ ಬಾಕಿಯಾಗಿ ಅದು ಅಲ್ಲಿಗೆ ಒಣಗಿ ಹಲವಾರು ರೋಗಗಳಿಗೆ ಕಾರಣವಾಗುತ್ತದೆ.
ಆದ್ದರಿಂದ ಫರಲ್ ಆದ (ಕಡ್ಡಾಯ)ಸ್ನಾನ ಮಾಡುವ ವೇಳೆ ಇದನ್ನು ಪ್ರತಿಯೊಬ್ಬರೂ ಕೂಡ ಗಮನಿಸುವುದು ಉತ್ತಮವಾಗಿದೆ.
ಇಮಾಂ ಝೈನುದ್ದೀನ್ ಮಖ್ ದೂಮ್ (ರ)ರವರ ಗ್ರಂಥವಾದ ಫತುಹುಲ್ ಮುಹೀನ್ ನಲ್ಲಿರುವ ಈ ವಿಷಯದ ಭಾಗವನ್ನು ವಿವರಿಸುತ್ತಾ ಇಮಾಂ ಸಯ್ಯಿದುಲ್ ಬಕರಿ (ರ) ಇಹಾನತುತ್ವಾಲಿಬೀನ್ ನ 1ನೇ ಭಾಗ 93ನೇ ಪುಟದಲ್ಲಿ ವಿವರಿಸುವುದು ಕಾಣಬಹುದು:
وأن يبول من أنزل قبل أن يغتسل ليخرج ما بقي بمجراه.
ವೀರ್ಯಾಣು ಹೊರಬಂದ ವ್ಯಕ್ತಿ ಸ್ನಾನ ಮಾಡುವ ಮುನ್ನ ಮೂತ್ರ ಮಾಡುವುದು ಸುನ್ನತ್ ಆಗಿದೆ ಕಾರಣ ಅವರ ಗುಪ್ತದ್ವಾರದಲ್ಲಿ ಅಡಗಿರುವ ಅವಶಿಷ್ಟಗಳು ಹೊರಹೊಮ್ಮಲು ಬೇಕಾಗಿ.
وذلك لأنه لو لم يبل قبله لربما خرج منه بعد الغسل فيجب عليه إعادة
ಇನ್ನು ಆ ರೀತಿ ಸ್ನಾನ ಮಾಡುವ ಮುನ್ನ ಮೂತ್ರ ಮಾಡದೆ ಸ್ನಾನ ಮಾಡಿದ ಬಳಿಕ ಪುನಃ ವೀರ್ಯಾಣು ಹೊರಬಂದರೆ ಅವನ ಮೇಲೆ ಪುನಃ ಸ್ನಾನ ಕಡ್ಡಾಯವಾಗುವುದು.ಇನ್ನು ವೀರ್ಯಾಣು ಹೊರಬರದೆಯಿದ್ದರೆ ತೊಂದರೆಯಿಲ್ಲ.ಇಲ್ಲಿ ಚರ್ಚೆ ವೀರ್ಯಾಣು ಹೊರಬಂದರೆ ಮಾತ್ರ.
*ಗಮನಿಸಬೇಕಾದ ಇನ್ನೊಂದು ವಿಷಯ :*
ಇಮಾಂ ಸಯ್ಯಿದುಲ್ ಬಕರಿ (ರ) ಇಹಾನತುತ್ವಾಲಿಬೀನ್ ನ 1ನೇ ಭಾಗ 96ನೇ ಪುಟದಲ್ಲಿ ವಿವರಿಸುವುದು ಕಾಣಬಹುದು :
(فرع) يسن لجنب وحائض ونفساء بعد انقطاع دمهما غسل فرج ووضوء لنوم وأكل وشرب، ويكره فعل شئ من ذلك بلا وضوء
ಜನಾಬತ್ ಆದವರು ಅಥವಾ ಹೈಲ್ ಗಾರ್ತಿ (ಮುಟ್ಟು ರಕ್ತ) ಮತ್ತು ನಿಫಾಸ್ ಗಾರ್ತಿ (ಪ್ರಸವ ರಕ್ತ) ಅವರಿಬ್ಬರ ರಕ್ತ ನಿಂತ ಬಳಿಕ ಸ್ನಾನ ಮಾಡುವ ಮುನ್ನ ಅವರು ನಿದ್ರಿಸಲು ಅಥವಾ ತಿನ್ನಲು ಅಥವಾ ಕುಡಿಯಲು ಅಥವಾ ಲೈಂಗಿಕ ಕ್ರಿಯೆ ಉದ್ದೇಶಿಸಿದರೆ ಅವರ ಗುಹ್ಯಭಾಗ ತೊಳೆಯುವುದು ಮತ್ತು ವುಲೂಹ್ ನಿರ್ವಹಿಸುವುದು ಸುನ್ನತಾಗಿದೆ.ಈ ರೀತಿ ತೊಳೆಯದೆ ಮತ್ತು ವುಲೂಹ್ ನಿರ್ವಹಿಸದೆ ತಿನ್ನುವುದು ಕುಡಿಯುವುದು ಮಲಗುವುದು ಕರಾಹತ್ ಆಗಿದೆ.
ಆದರೆ ಇಮಾಂ ಇಬ್ನ್ ಹಜರ್ (ರ) ಅವರ ಗ್ರಂಥವಾದ ತುಹುಫಾದಲ್ಲಿ ಹೇಳಿರುವುದು ಈ ರೀತಿ ಹೈಲ್ ಗಾರ್ತಿ ಅಥವಾ ನಿಫಾಸ್ ಗಾರ್ತಿಯ ರಕ್ತ ನಿಂತರೆ ಸ್ನಾನ ಮಾಡುವ ಮುನ್ನ ಅವಳು ಪತ್ನಿಯ ಜೊತೆ ಸಂಭೋಗ(ಲೈಂಗಿಕತೆ)ನಡೆಸಲು ಅಥವಾ ತಿನ್ನಲು ಕುಡಿಯಲು ನಿದ್ರಿಸಲು ಉದ್ದೇಶಿಸುವುದಾದರೆ ಅವಳ ಗುಹ್ಯಾಭಾಗ ತೊಳೆಯುವುದು ಮತ್ತು ವುಲೂಹ್ ಸುನ್ನತಾಗಿದೆ.ಇನ್ನು ವುಲೂಹ್ ಮಾಡದೆ ತೊಳೆದರೆ ಮಾತ್ರ ಕೂಡ ಸುನ್ನತ್ ನ ಪ್ರತಿಫಲ ದೊರಕುತ್ತದೆ ಇನ್ನು ತೊಳೆಯದೆ ಆ ಕಾರ್ಯಗಳು ಮಾಡುವುದು ಕರಾಹತಾಗಿದೆ.
وقوله: بلا وضوء ظاهره أنه يكره ذلك ولو مع غسل الفرج، وليس كذلك، بل يكفي غسل الفرج في حصول أصل السنة، كما في التحفة ونصها: ويحصل أصل السنة بغسل الفرج إن أراد نحو جماع أو نوم أو أكل أو شرب، وإلا كره.
SIRJ ಬಾರೆಬೆಟ್ಟು
Comments