ಉಳ್ಹಿಯ್ಯತ್ ಕೆಲವು ಮಸ್‌ಅಲಗಳು.
ಸಂಗ್ರಹ:
ಅಬೂಶಝ ಕೂರ್ನಡ್ಕ
▪️ಉಳುಹಿಯ್ಯತ್ ನೀಡಿದರೆ ಸಹೀಹ್ ಆಗುವ ಪ್ರಾಣಿಗಳು
.
*ಆಡು,ಗೋವು [ಕೋಣ ಎಮ್ಮೆ,ದನ ಇತ್ಯಾದಿ..],ಒಂಟೆ*
▪️ಉಳುಹಿಯ್ಯತ್ ನೀಡಲ್ಪಡುವ ಜೀವಿಗಳ ವಯಸ್ಸು
*ಒಂಟೆ 5 ವರ್ಷ ಪ್ರಾಯ ಆಡು ಮತ್ತು ಗೋವು ಎರಡು ವರ್ಷ ಪ್ರಾಯ*
▪️ಉಳುಹಿಯ್ಯತ್ ನೀಡಲು ಶ್ರೇಷ್ಟತೆ ಇರುವ ಜೀವಿ
*ಒಂದನೇ ಸ್ಥಾನ ಒಂಟೆ*[ಕಾರಣ ಆಡು ಗೋವು ಇವುಗಳಿಗಿಂತ ಹೆಚ್ಚು ಪ್ರಮಾಣದ ಮಾಂಸ ಅದರಲ್ಲಿದೆ]
*ಎರಡನೇ ಸ್ಥಾನ ಗೋವು* [ಕಾರಣ ಆಡುಗಿಂತ ಅಧಿಕ ಮಾಂಸ ಇದರಲ್ಲಿದೆ]
*ಮೂರನೇ ಸ್ಥಾನ ಆಡು*
▪️ಒಂದು ಒಂಟೆ ಅಥವಾ ಒಂದು ಗೋವುಕ್ಕಿಂತ *7 ಆಡು* ಗಳನ್ನು ಉಳುಹಿಯ್ಯತ್ ನೀಡುವುದಾಗಿದೆ ಉತ್ತಮ.
[ಕಾರಣ,ಒಂದಕ್ಕಿಂತ ಅಧಿಕ ಉಳುಹಿಯ್ಯತ್‌ನ ದ್ಸಬಹ್ ನಡೆಯುತ್ತದೆ.ಜೊತೆಗೆ ಆಡು ಮಾಂಸ ಶ್ರೇಷ್ಠ ಮಾಂಸ.]
▪️ಉಳಿಹಿಯ್ಯತ್ ನೀಡಲ್ಪಡುವ ಮೃಗವನ್ನು ಪೌಷ್ಟಿಕಾಂಶ ಆಹಾರ ನೀಡಿ ದಷ್ಠಪುಷ್ಟಗೊಳಿಸುವುದು ಸುನ್ನತ್ ಆಗಿದೆ.
▪️ಎರಡು ಸಣಕಲು ಮೃಗಗಳನ್ನು ಬಲಿ ನೀಡುವುದಕ್ಕಿಂತ ದಷ್ಟಪುಷ್ಟವಾದ ಒಂದು ಮೃಗವನ್ನು ಉಳುಹಿಯ್ಯತ್ ನೀಡುವುದು ಉತ್ತಮ. [ತುಹ್ಫಾ ,9/359]
▪️ *ಉಳುಹಿಯ್ಯತ್ ನೀಡಲ್ಪಡುವ ಮೃಗಗಳ ಬಣ್ಣಗಳು*
ಒಂದನೇ ಸ್ಥಾನ ಬಿಳಿ ಬಣ್ಣ,
ನಂತರದ ಸ್ಥಾನ ಹಳದಿ ಬಣ್ಣ ಮೂರನೇ ಸ್ಥಾನ ತೆಳ್ಳಗಿನ ಬಿಳಿ ಬಣ್ಣ,
ನಾಲ್ಕನೇ ಸ್ಥಾನ ಸ್ವಲ್ಪ ಕಪ್ಪು ಮತ್ತು ಬಿಳಿ ಮಿಶ್ರಿತ ಬಣ್ಣ,
ಐದನೇ ಸ್ಥಾನ ಕಪ್ಪು ಬಣ್ಣ
*ಗಂಡು ಹೆಣ್ಣು*
ಒಂದನೇ ಸ್ಥಾನ ಅಧಿಕ ಪ್ರಮಾಣದಲ್ಲಿ ಸಂಭೋಗ ನಡೆಸದ ಗಂಡು, ಹೆಣ್ಣು ಮೃಗಕ್ಕಿಂತ ಉತ್ತಮ.
ನಂತರದ ಸ್ಥಾನ ಸಂತಾನೋತ್ಪತ್ತಿ ಮಾಡದ ಹೆಣ್ಣು ಮೃಗ.
ಸಂತಾನೋತ್ಪತ್ತಿ ಮಾಡಿದ ಹೆಣ್ಣು ಮೃಗಕ್ಕಿಂತಲೂ ಅಧಿಕ ಸಂಭೋಗ ಮಾಡಿದ್ದರೂ ಗಂಡು ಮೃಗವಾಗಿದೆ ಉತ್ತಮ.
▪️ಬೀಜ ಒಡೆದ ಮೃಗವನ್ನು ಉಳುಹಿಯ್ಯತ್‌ಗಾಗಿ ಉಪಯೋಗಿಸಬಹುದು.ಅದರ ಮಾಂಸ ಅಧಿಕ ಸ್ವಾಧಿಷ್ಟ ಕೂಡ.ಎರಡು ವೃಷಣಗಳನ್ನು ಸಾಮಾನ್ಯವಾಗಿ ಆಹಾರವಾಗಿ ಉಪಯೋಗಿಸುವುದಿಲ್ಲ ಮಾತ್ರವಲ್ಲ ವೃಷಣವನ್ನು ತಿನ್ನುವುದು ನಿಷಿದ್ದವಾಗಿದೆಯೆಂದು ಅನೇಕ ವಿದ್ವಾಂಸರು ಸ್ಪಷ್ಟಪಡಿಸಿದ್ದಾರೆ.
[ತುಹ್ಫಾ 9/349]
*7 ಮಂದಿ ಶೇರ್*
ಒಂಟೆ ಮತ್ತು ಗೋವುಗಳಲ್ಲಿ ಏಳು ಮಂದಿ ಶೇರ್ ಮಾಡಬಹುದಾಗಿದೆ.
ಏಳರಲ್ಲಿ ಒಂದು ಭಾಗ [1/7] ಪ್ರತಿಯೊಬ್ಬರ ಪಾಲಾಗಿರುತ್ತದೆ.
ಏಳು ಮಂದಿಗಿಂತ ಅಧಿಕ ಪಾಲುದಾರಿಕೆ ಸಲ್ಲದು.ಕಡಿಮೆ ಮಂದಿ ವಿರೋಧವಿಲ್ಲ.
▪️ಪ್ರತಿಯೊಬ್ಬರೂ ಅವರವರ ಪಾಲಿನಿಂದ ಉಳುಹಿಯ್ಯತ್ ನೀಡುವುದು ಕಡ್ಡಾಯ. [ಅಂದ್ರೆ ಎಲ್ಲರ ಪರವಾಗಿ ಒಬ್ಬಾತ ತನ್ನ ಪಾಲಿನಿಂದ ಸದಕ ನೀಡಿದರೆ ಸಿಂಧುವಲ್ಲ ಕಾರಣ ಅದು ಏಳು ಉಳಿಹಿಯ್ಯತ್‌ನ ಸ್ಥಾನದಲ್ಲಾಗಿದೆ ಹಾಗಾಗಿ ಏಳು ಮಂದಿ ಅವರವರ ಪಾಲಿನಿಂದ ಉಳುಹಿಯ್ಯತ್ ನೀಡಬೇಕು]
ಪ್ರತಿಯೊಬ್ಬರ ಪಾಲಿನಿಂದ ಸದಕ ಘಟಿಸಬೇಕೆ ಹೊರತು ಪ್ರತಿಯೊಬ್ಬರ ಪಾಲನ್ನು ಬೇರೆ ಬೇರೆ ಮಾಡಬೇಕೆಂಬ ಅರ್ಥವಿಲ್ಲ.ಉದಾ: ಒಟ್ಟು ಮಾಂಸದ ಮೂರರಲ್ಲಿ ಒಂದು ಭಾಗ ಬೇರ್ಪಡಿಸಿಟ್ಟು ಬಾಕಿ ಮಾಂಸ ಸದಕ ಮಾಡಿದರೆ ಎಲ್ಲರ ಪಾಲಿನಿಂದಲೂ ಉಳುಹಿಯ್ಯತ್ ಸಂಭವಿಸುತ್ತದೆ.
▪️ *ಎರಡು ಮೃಗಗಳಲ್ಲಿ 14 ಮಂದಿ ಪಾಲುದಾರಿಕೆ ಮಾಡಿ ಒಟ್ಟಿಗೆ ಉಳುಹಿಯ್ಯತ್ ನಡೆಸಿದರೆ ಅದು ಸಿಂಧುವಲ್ಲ*
ಕಾರಣ 1/7 ಭಾಗಿದಾರಿಕೆ ಮಾಡಬಹುದೇ ಹೊರತು 1/14 ಪಾಲುದಾರಿಕೆ ಸಿಂಧುವಲ್ಲ.
ಒಂದು ಮೃಗದಲ್ಲಿ 1/7 ಮಾತ್ರ ಸಿಂಧು.1/14 ಸಿಂಧುವಲ್ಲ.
▪️ *ಏಳು ಆಡು ದ್ಸಬಹ್ ಮಾಡಲು ಕಡ್ಡಾಯವಾಗಿರುವ ವ್ಯಕ್ತಿ ಅದಕ್ಕೆ ಬದಲಾಗಿ ಒಂದು ಒಂಟೆ ಅಥವಾ ಗೋವು ದ್ಸಬಹ್ ಮಾಡಿದರೆ ಸಿಂಧುವಾಗುವುದು.*
▪️ಒಂಟೆ ಮತ್ತು ಗೋವು ಇದರಲ್ಲಿ ಪಾಲುದಾರಿಕೆ ಮಾಡುವ ಎಲ್ಲರೂ ಉಳುಹಿಯ್ಯತ್ ಸಂಕಲ್ಪ ಮಾಡುವುದು ಕಡ್ಡಾಯವಲ್ಲ.ಅಂದ್ರೆ ಒಬ್ಬರಿಗೆ ಉಳುಹಿಯ್ಯತ್ ಮತ್ತೊಬ್ಬ ಪಾಲುದಾರ ಅಖೀಕತ್ ಸಂಕಲ್ಪ ಮಾಡಿ ಅವರವರ ಪಾಲು ಅವರ ಸಂಕಲ್ಪದಂತೆ ಸದಕ ನೀಡಬಹುದಾಗಿದೆ.
ಅದೇ ರೀತಿ ಉಳುಹಿಯ್ಯತ್ ನಿಯ್ಯತ್ ಮಾಡಿದವನು ಮತ್ತು ಮಾಂಸ ವ್ಯಾಪಾರಿ ಒಟ್ಟು ಸೇರಿ ಒಂದು ಮೃಗವನ್ನು ಖರೀದಿಸಿ ದ್ಸಬಹ್ ಮಾಡಬಹುದಾಗಿದೆ.
ಉಳುಹಿಯ್ಯತ್ ನಿಯ್ಯತ್ ಮಾಡಿದವನು ದ್ಸಬಹ್ ಸಮಯದಲ್ಲಿ ನಿಯ್ಯತ್ ಮಾಡಿ ಆತನ ಪಾಲು ಸದಕ ನೀಡಬಹುದು.ಮಾಂಸ ವ್ಯಾಪಾರಿ ಆತನ ಪಾಲನ್ನು ಮಾರಾಟ ಮಾಡಬಹುದು.
[ತುಹ್ಫಾ 9/349]
▪️ ಒಂದು ಆಡು ಒಬ್ಬರಿಗೆ ಮಾತ್ರ ಪಾಲುದಾರಿಕೆ. ಅದರಲ್ಲಿ ಇತರರಿಗೆ ಶೇರ್ ಇಲ್ಲ.ಹಾಗಾಗಿ ಇಬ್ಬರು ಎರಡು ಆಡು ಶೇರಲ್ಲಿ ಖರೀದಿಸಿ ಸದಕ ನೀಡಿದರೆ ಅದು ಉಳುಹಿಯ್ಯತ್ ಆಗಿ ಸಿಂಧುವಲ್ಲ.ಕಾರಣ ಇಬ್ಬರೂ ಪೂರ್ಣವಾದ ಒಂದು ಆಡನ್ನು ದ್ಸಬಹ್ ಮಾಡಿಲ್ಲ.
[ತುಹ್ಫಾ 9/349]
▪️ಆಡೊಂದರಲ್ಲಿ ಉಳುಹಿಯ್ಯತ್ ನೊಂದಿಗೆ ಅಖೀಕತ್ ನಿಯ್ಯತ್ ಮಾಡಿದರೆ ಎರಡರ ಪ್ರತಿಫಲವೂ ಲಭ್ಯವಾಗಲಿದೆ ಎಂದು ಇಮಾಮ್ ರಂಲಿ [,ರ] ಅಭಿಪ್ರಾಯ ಪಟ್ಟಿದ್ದಾರೆ.
[ಶರ್ವಾನಿ 9/370]
▪️ *ನ್ಯೂನತೆ ಇರುವ ಮೃಗಗಳು ಉಳುಹಿಯ್ಯತ್ ಗೆ ಸಿಂಧುವಲ್ಲ.*
ಮಾಂಸ ಕಮ್ಮಿಯಾಗುವ ನ್ಯೂನತೆ ದ್ಸಬಹ್ ಮೃಗಗಳಲ್ಲಿ ಇರಬಾರದೆಂಬುದು ನಿಬಂಧನೆಯಾಗಿದೆ. ಈಗ ಮಾಂಸ ಕಮ್ಮಿಯಾದದ್ದು,ಮುಂದೆ ಕಮ್ಮಿಯಾಗಲು ಸಾದ್ಯತೆ ಇರುವ ನ್ಯೂನತೆಗಳು ಇರಬಾರದು.
ಹಾಗಾಗಿ ಮೇಯಲು ಸಾದ್ಯವಿಲ್ಲದಂತಹ ಸ್ಪಷ್ಟವಾದ ವಿಕಲಾಂಗವಾಗಿರುವ ಮೃಗ ಉಳುಹಿಯ್ಯತ್ ಗೆ ಸಿಂಧುವಲ್ಲ.
▪️ಮೃಗದಿಂದ ಭಕ್ಷಿಸಲು ಯೋಗ್ಯವಾದ ಭಾಗವೆಲ್ಲವೂ ಮಾಂಸದ ವಿಭಾಗದಲ್ಲಿ ಪರಿಗಣಿಸಲಾಗುವುದು.ಹಾಗಾಗಿ ನಿತಂಬದಿಂದ ಅಥವಾ ಕಿವಿಯಿಂದ ಅಲ್ಪವಾದರೂ ಕತ್ತರಿಸಲ್ಪಟ್ಟಿದ್ದರೂ ಆ ಮೃಗ ಉಳುಹಿಯ್ಯತ್ ಗೆ ಸಿಂಧುವಲ್ಲ.
▪️ಮಾಂಸ ಪ್ರೇಮಿಗಳು ಇಷ್ಟಪಡದ ರೀತಿಯಲ್ಲಿ ಸಣಕಲಾದ ಮೃಗ ಉಳುಹಿಯ್ಯತ್ ಗೆ ಸಿಂಧುವಲ್ಲ.ಅದೇ ರೀತಿ ಹುಚ್ಚು ಹಿಡಿದದ್ದು,ಕಿವಿ,ಬಾಲ,ನಾಲಗೆ,
ಮೊಲೆ ಮುಂತಾದ ಭಾಗದಿಂದ ಅಲ್ಪವಾದರೂ ಕತ್ತರಿಸಲ್ಪಟ್ಟದ್ದು,
ಕುರುಡು,ಒಂದು ಕಣ್ಣಿಗೆ ಸ್ಪಷ್ಟವಾದ ನ್ಯೂನತೆ ಇರುವುದು,ಶಕ್ತವಾದ ರೋಗ,ಅಲ್ಪ ಪ್ರಮಾಣದಲ್ಲಾದರೂ ಕಜ್ಜಿ ಇದ್ದದ್ದು,ಎಲುಬು ತುಂಡಾದದ್ದು,ಹಲ್ಲುಗಳೆಲ್ಲವೂ ಉದುರಿ ಹೋದದ್ದು,ಹುಟ್ಟು ಕಿವಿ ಇಲ್ಲದ್ದು,ಗರ್ಭಿಣಿ ಮುಂತಾದ ಮೃಗಗಳು ಉಳುಹಿಯ್ಯತ್ ಗೆ ಸಿಂಧುವಲ್ಲ.
▪️ಕೊಂಬು ಇಲ್ಲದ ಅಥವಾ ಕೊಂಬು ಕತ್ತರಿಸಲ್ಪಟ್ಟ ಮೃಗಗಳು ಉಳುಹಿಯ್ಯತ್ ಗೆ ಸಿಂಧುವಾದರೂ ಕೊಂಬು ಇರುವ ಮೃಗಗಳು ಉತ್ತಮ.
ಅಲ್ಪವಾದರೂ ಮಾಂಸಕ್ಕೆ ಕಮ್ಮಿ ಬಾರದ ರೀತಿಯಲ್ಲಿರುವ ಕಿವಿ ಮುಂತಾದ ಭಾಗದಲ್ಲಿರುವ ತೂತುಗಳು ಉಳುಹಿಯ್ಯತ್ ಗೆ ಸಿಂಧು.
ತುಹ್ಫಾ 9/353]
*ಉಳುಹಿಯ್ಯತ್‌ನ ಸಮಯ:*
▪️ಬಲಿ ಪೆರ್ನಾಲ್ ದಿನ,
[ದ್ಸುಲ್ ಹಜ್ಜ್ 10] ಸೂರ್ಯೋದಯ ನಂತರ ಎರಡು ರಕಅತ್ ನಮಾಜು,ಎರಡು ಖುತುಬಾ ನಿರ್ವಹಿಸಲು ಅಗತ್ಯವಿರುವ ಸಮಯ ಕಳೆದರೆ ಉಳುಹಿಯ್ಯತ್‌ನ ಸಮಯ ಆರಂಭವಾಗುತ್ತದೆ.
ಅದಕ್ಕಿಂತ ಮುಂಚೆ ದ್ಸಬಹ್ ಮಾಡಿದರೆ ಅದು ಉಳುಹಿಯ್ಯತ್ ಆಗಿ ಪರಿಗಣಿಸಲಾಗದು.
ಸುನ್ನತ್ತಾದ ಸದಕ ಆಗಿ ಪರಿಗಣಿಸಲಾಗುವುದು.
▪️ *ಉಳುಹಿಯ್ಯತ್‌ನ ಸಮಯ ಕೊನೆ ?*
ದ್ಸುಲ್ ಹಜ್ಜ್ 13 ರ ಸೂರ್ಯ ಅಸ್ತಮಿಸುವ ತನಕ.
▪️ *ನಿಯ್ಯತ್*
ನವಯ್ತು ಸುನ್ನತಲ್ ಉಳುಹಿಯ್ಯ:
ಉಳುಹಿಯ್ಯತ್ ಎಂಬ ಸುನ್ನತ್ತನ್ನು ನಾನು ನಿರ್ವಹಿಸುವೆನು
ಅಥವಾ
ಞಾನ್ ಇದಿನೆ ಉಳುಹಿಯ್ಯತ್ ಅರಕ್ಕುನ್ನು
▪️ಮೃಗವನ್ನು ನಿರ್ಣಯಿಸುವಾಗ ಅಥವಾ ದ್ಸಬಹ್ ಮಾಡುವಾಗ ನಿಯ್ಯತ್ ಮಾಡಬೇಕು.
ದ್ಸಬಹ್ ನಂತರ ನಿಯ್ಯತ್ ಮಾಡಿದರೆ ಆ ನಿಯ್ಯತ್ ಸಿಂಧುವಲ್ಲ.
▪️ದ್ಸಬಹ್ ಮಾಡಲು ಮತ್ತು ಆತನಿಗೆ ಮೃಗವನ್ನು ಒಪ್ಪಿಸುವಾಗ ನಿಯ್ಯತ್ ಮಾಡಬಹುದಾಗಿದೆ.
ಆಥವಾ ವಿವೇಕವಿರುವ ಮುಸ್ಲಿಮ್ ವ್ಯಕ್ತಿಯನ್ನು ದ್ಸಬಹ್‌ಗೆ ಒಪ್ಪಿಸುವ ಸಂಧರ್ಭದಲ್ಲಿ ನಿಯ್ಯತ್ ಮಾಡಲು ಆತನನ್ನು ವಕಾಲತ್ ಮಾಡಬಹುದಾಗಿದೆ.
▪️ಒಂದಕ್ಕಿಂತ ಅಧಿಕ ಮಂದಿ ಶೇರ್ ಆಗಿರುವ ಮೃಗದಲ್ಲಿ ಪ್ರತಿಯೊಬ್ಬರೂ ನಿಯ್ಯತ್ ನಿರ್ವಹಿಸಬಹುದು ಅಥವಾ ನಿಯ್ಯತ್ ಗಾಗಿ ಒಬ್ಬ ವ್ಯಕ್ತಿಯನ್ನು ವಕಾಲತ್ ಮಾಡಬಹುದು.
▪️ *ಎಷ್ಟು ಸದಕ ನೀಡಬೇಕು?*
ಸುನ್ನತ್ತಾದ ಉಳುಹಿಯ್ಯತ್ ನಿಂದ ಸಾಮಾನ್ಯವಲ್ಲದ ರೀತಿಯಲ್ಲಿ ಅಲ್ಪವಾದರೂ ಫಖೀರ್ ಮಿಸ್ಕೀನ್ ಗಳಿಗೆ ಸದಕ ನೀಡುವುದು ಕಡ್ಡಾಯ.
▪️ಒಬ್ಬರಿಗೆ ನೀಡಿದರೂ ಸಾಕು,ಬೇಯಿಸದೆ ನೀಡಬೇಕು.ಅಲ್ಪವಾದರೂ ಸದಕ ಮಾಡದೆ ಇದ್ದಲ್ಲಿ ಉಳುಹಿಯ್ಯತ್ ಸಿಂಧುವಾಗಲಾರದು.
▪️ಸದಕ ನೀಡದೆ ಎಲ್ಲವನ್ನು ಸ್ವಂತಕ್ಕೆ ಉಪಯೋಗಿಸಿದರೆ,
ಅಥವಾ ಹದಿಯ ನೀಡಿದರೆ ಸದಕ ನೀಡಲು ಕಡ್ಡಾಯವಾಗಿರುವ ಅಳತೆಯಷ್ಟು ಆತ ಸಾಲಗಾರನಾಗಿರುವನು.
[ತುಹ್ಫಾ 9/364]
▪️ಸುನ್ನತ್ತಾದ ಉಳಿಹಿಯತ್ತಿನಿಂದ ಭಕ್ಷಿಸಲು ಸುನ್ನತ್!
ಮೂರರಲ್ಲೊಂದು ಭಾಗಕ್ಕಿಂತ ಅಧಿಕ ತೆಗೆಯದಿರುವುದು ಸುನ್ನತ್!
▪️ *ಬರಕತಿಗೆ ಬೇಕಾಗಿ ಅಲ್ಪ ತೆಗೆದು ಬಾಕಿ ಎಲ್ಲವನ್ನು ಸದಕ ಮಾಡುವುದಾಗಿದೆ ಅತ್ಯಂತ ಉತ್ತಮ ಕ್ರಮ ಕರುಳು ತೆಗೆಯುವುದು ಅತ್ಯಂತ ಶ್ರೇಷ್ಠ*
▪️ *ಎಷ್ಟು ದಿನ ಉಳುಹಿಯ್ಯತ್ ಮಾಂಸ ತೆಗೆದಿಡಬಹುದು?*
▪️ *ಕಡ್ಡಾಯವಾದ ಉಳುಹಿಯ್ಯತ್‌ನ ಮಾಂಸ ಸಂಪೂರ್ಣವಾಗಿ ಫಖೀರ್ ಮಿಸ್ಕೀನ್‌ಗಳಿಗೆ ಸದಕ ನೀಡಬೇಕು.ಸ್ವಂತಕ್ಕೆ ಅಲ್ಪವಾದರೂ ತೆಗೆಯಬಾರದು.*
▪️ಸುನ್ನತ್ತಾದ ಉಳುಹಿಯ್ಯತ್ ಮಾಂಸ ಧನಿಕರಿಗೆ ನೀಡಬಹುದು.ಬೇಯಿಸಿ ಅಥವಾ ಬೇಯಿಸದೆಯೂ ನೀಡಬಹುದು.
▪️ಅಮುಸ್ಲಿಮರಿಗೆ ಉಳುಹಿಯ್ಯತ್ ಮಾಂಸ ನೀಡಬಹುದೇ?
ದಾನ ಧರ್ಮ ಯಥೇಚ್ಛವಾಗಿ ಅಮುಸ್ಲಿಮರಿಗೆ ನೀಡಬಹುದು.
ಆದರೆ ಸುನ್ನತ್ತಾದ ಮತ್ತು ಕಡ್ಡಾಯವಾದ ಉಳುಹಿಯ್ಯತ್ ಮಾಂಸ ಅಮುಸ್ಲಿಮರಿಗೆ ನೀಡುವಂತಿಲ್ಲ.
ಬೇಯಿಸಿಯೂ ನೀಡುವಂತಿಲ್ಲ.
ಅದೇ ರೀತಿ, ಫಖೀರ್,ಮಿಸ್ಕೀನ್,ಧನಿಕನು ತನಗೆ ಲಭಿಸಿದ ಉಳುಹಿಯ್ಯತ್ ಮಾಂಸದಿಂದ ಬೇಯಿಸಿಯೂ ಅಲ್ಲದೆಯೂ ಅಮುಸ್ಲಿಮರಿಗೆ ನೀಡುವಂತಿಲ್ಲ
[ತುಹ್ಫಾ 9/364]
▪️ *ಉಳುಹಿಯ್ಯತ್ ಮಾಂಸ ಬೆಕ್ಕಿನಂತಹ ಪ್ರಾಣಿಗಳಿಗೆ ನೀಡಬಹುದಾ?*
ಸುನ್ನತ್ತಾದ ಉಳುಹಿಯ್ಯತ್ ನೀಡುವವನು ,ಅದೇ ರೀತಿ ಮಾಂಸ ಲಭ್ಯವಾದ ಫಖೀರ್ ಮಿಸ್ಕೀನ್ ನಂತವರು ಉಳುಹಿಯ್ಯತ್ ಮಾಂಸವನ್ನು ಬೆಕ್ಕಿನಂತಹ ಹುರ್ಮತ್ ಇರುವ ಜೀವಿಗಳಿಗೆ ನೀಡಬಹುದು.ಆದರೆ ಧನಿಕನು ತನಗೆ ಲಭ್ಯವಾದ ಉಳುಹಿಯ್ಯತ್ ಮಾಂಸ ಹದಿಯಾದುದರಿಂದ ಆತನು ಬೆಕ್ಕಿನಂತಹ ಪ್ರಾಣಿಗಳಿಗೆ ನೀಡಬಾರದು.
▪️ದ್ಸಬಹ್ ಮಾಡಿದ ಊರಿನಿಂದ ಉಳುಹಿಯ್ಯತ್ ಮಾಂಸವನ್ನು ಬೇರೆ ಊರಿಗೆ ಶಿಫ್ಟ್ ಮಾಡಬಹುದೇ?
ಸುನ್ನತ್ತಾದ ಉಳಿಹಿಯ್ಯತ್ ನಿಂದ ಅಲ್ಪವಾದರೂ ಮಾಂಸ ದ್ಸಬಹ್ ಮಾಡಿದ ಊರಿನಲ್ಲಿ ವಿತರಿಸದೆ ಎಲ್ಲವನ್ನು ಇನ್ನೊಂದು ಊರಿಗೆ ಶಿಫ್ಟ್ ಮಾಡುವುದು ತಪ್ಪಾಗಿರುತ್ತದೆ.
ಸಾಮಾನ್ಯವಾದ ಅಲ್ಪ ಮಾಂಸವಾದರೂ ದ್ಸಬಹ್ ನಡೆದ ಊರಿನಲ್ಲಿ ವಿತರಣೆ ಮಾಡಬೇಕು.
▪️ಕಡ್ಡಾಯ ಉಳುಹಿಯ್ಯತ್ ಆಗಿದ್ದಲ್ಲಿ ಸಂಪೂರ್ಣ ಮಾಂಸವನ್ನು ದ್ಸಬಹ್ ಮಾಡಿದ ಅದೇ ಊರಲ್ಲಿ ವಿತರಣೆ ಮಾಡುವುದು ಕಡ್ಡಾಯ.
▪️ಎಲ್ಲರಿಗೂ ಈದ್ ಶುಭಾಶಯ.
2025 ಜೂನ್ 07
Comments