"ಬನೂ ಇಸ್ರಾಈಲ್ ವಿಭಾಗವು ಎಪ್ಪತ್ತೆರಡು ಪಂಗಡಗಳಾಗಿ ಛಿದ್ರವಾಗಿದ್ದರೆ ನನ್ನ ಸಮುದಾಯವು ಎಪ್ಪತ್ತಮೂರು ಪಂಗಡಗಳಾಗಿ ವಿಭಜನೆಯಾಗುವುದು. ಅವರ ಪೈಕಿ ಒಂದು ವಿಭಾಗವನ್ನು ಹೊರತುಪಡಿಸಿ ಉಳಿದವರೆಲ್ಲಾ ನರಕದ ಹಾದಿ ಹಿಡಿಯುವರು" ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ನುಡಿಯಿದು. ರಕ್ಷೆ ಹೊಂದುವ ಆ ವಿಭಾಗ ಯಾವುದೆಂದು ಸ್ವಹಾಬಿಗಳು ಕೇಳಿದಾಗ 'ಅದು ನಾನು ಮತ್ತು ನನ್ನ ಸ್ವಹಾಬಿಗಳ ಹಾದಿಯನ್ನು ಹಿಂಬಾಲಿಸುವವರು' ಎಂದರು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು. ಇಮಾಂ ತುರ್ಮುದೀ, ಇಮಾಂ ಅಹ್ಮದ್, ಇಮಾಂ ಅಬೂದಾವೂದ್ ಮುಂತಾದ ಹದೀಸ್ ವಿದ್ವಾಂಸರು ಈ ಹದೀಸನ್ನು ವರದಿ ಮಾಡಿದ್ದಾರೆ. ರಕ್ಷೆ ಹೊಂದುವ ವಿಭಾಗವನ್ನು ಅಹ್ಲುಸ್ಸುನ್ನತ್ ವಲ್‌ಜಮಾಅತ್ ಎಂದು ನಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಹೆಸರೆತ್ತಿ ಸ್ಪಷ್ಟವಾಗಿ ಹೇಳಿದ್ದಾಗಿ ಇಮಾಂ ಅಬುಲ್ಲೈಸ್ ಸಮರ್‌ಖಂದಿಯವರ ತಂಬೀಹುಲ್ ಗಾಫಿಲೀನ್‌ನಲ್ಲಿ ಕಾಣಬಹುದು.
ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ವಚನವು ಕಾಲಾಂತರದಲ್ಲಿ ನಿಜವಾಯಿತು. ಅವರು ಹೇಳಿದ ಹಾಗೆ ಇಲ್ಲಿ ಎಪ್ಪತ್ತ ಮೂರು ಪಂಗಡಗಳು ಪ್ರತ್ಯಕ್ಷವಾಯಿತು. ಇಮಾಂ ಮುಹ್ಯುದ್ದೀನ್ ಅಬ್ದುಲ್ ಖಾದಿರುಲ್ ಜೀಲಾನಿ(ರ) ಪ್ರಸ್ತುತ ಎಪ್ಪತ್ತಮೂರು ವಿಭಾಗವನ್ನು ತಮ್ಮ ಗುನ್ಯತು ತ್ವಾಲಿಬೀನ್‌ನಲ್ಲಿ ವಿವರಿಸಿದ್ದಾರೆ. ಅವರು ಹೇಳಿದರು: ಎಪ್ಪತ್ತಮೂರು ಪಂಗಡಗಳ ಮೂಲವು ಹತ್ತು ಪ್ರಮುಖ ವಿಭಾಗದಲ್ಲಿ ಸೇರುತ್ತದೆ. ಪ್ರತಿಯೊಂದರಲ್ಲಿ ವಿವಿಧ ಉಪಪಂಗಡಗಳಿವೆ.
1 ಅಹ್ಲುಸ್ಸುನ್ನತ್ ವಲ್ ಜಮಾಅ
2 ಖವಾರಿಜ್
3ಶೀಅತ್
4 ಮುಅತಝಿಲತ್
5 ಮುರ್‌ಜಿಅತ್
6 ಮುಶಬ್ಬಿಹತ್
7 ಜಹಮಿಯ್ಯ
8 ಳರ್ರಾರಿಯ್ಯ
9 ನಜ್ಜಾರಿಯ್ಯ
10 ಕಿಲಾಬಿಯ್ಯ
ಖವಾರಿಜ್‌ಗಳು ಹದಿನೈದು ವಿಭಾಗವಾಗಿ ಛಿದ್ರಗೊಂಡರೆ ಶಿಯಾಗಳು ಮೂವತ್ತೆರಡು ವಿಭಾಗಗಳಾಗಿ ಛಿದ್ರ ಗೊಂಡರು. ಮುಅತಝಿಲಿ ಗಳು ಆರು ಪಂಗಡಗಳಾಗಿ ಪತನವಾದರೆ ಮುರ್‌ಜಿಅತ್ ಹನ್ನೆರಡು ಪಂಗಡಗಳಾಗಿ ವಿಭಜನೆಗೊಂಡರು. ಅದೇ ರೀತಿ ಮುಶಬ್ಬಿಹತ್ ಮೂರು ವಿಭಾಗಗಳಾದರು. ಹೀಗೆ ಅರುವತ್ತೆಂಟು ವಿಭಾಗಗಳು, ಜೊತೆಗೆ ಜಹಮಿಯ್ಯ, ಳರ್ರಾರಿಯ್ಯ, ನಜ್ಜಾರಿಯ್ಯಾ, ಕಿಲಾಬಿಯ್ಯಾ, ಸೇರಿ ಎಪ್ಪತ್ತೆರಡು ದಾರಿ ತಪ್ಪಿದ ವಿಭಾಗಗಳು ಕೊನೆಯಲ್ಲಿ ಅಹ್ಲುಸ್ಸುನ್ನತ್ ವಲ್‌ಜಮಾಅತ್ ಎಂಬ ಸರಿಯಾದ ವಿಭಾಗ. ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಹೇಳಿದ ಎಪ್ಪತ್ತಮೂರು ವಿಭಾಗಗಳು ಇದರೊಂದಿಗೆ ಪೂರ್ಣವಾಗುತ್ತವೆ. ಇಂದು ಅನೇಕ ಹೆಸರುಗಳಲ್ಲಿ ಕಾರ್ಯಾಚರಿಸುತ್ತಿರುವ ಹೊಸ ಪಂಗಡಗಲೆಲ್ಲ ಮೇಲೆ ವಿವರಿಸಿದ ದಾರಿ ತಪ್ಪಿದ ಎಪ್ಪತ್ತೆರಡು ವಿಭಾಗಗಳಲ್ಲಿ ಒಂದಲ್ಲದಿದ್ದರೆ ಇನ್ನೊಂದು ರೀತಿಯಲ್ಲಿ ಸೇರಿಕೊಳ್ಳುವುದರಿಂದ ಅವುಗಳನ್ನು ಬೇರೆ ಎಣಿಸಬೇಕೆಂದಿಲ್ಲ. ಮೇಲಿನ ಎಪ್ಪತ್ತೆರಡು ವಿಭಾಗಗಳಿಗೂ ಅನೇಕ ರೀತಿಯ ಮೊಂಡು ವಾದಗಳಿವೆ. ಅವುಗಳನ್ನೆಲ್ಲಾ ಇಲ್ಲಿ ವಿವರಿಸಲು ಬಯಸುತ್ತಿಲ್ಲ. ಶಿಯಾ ಎಂಬ ಕೊಳೆತು ನಾರುವ ಪಂಗಡದ ಹೃಸ್ವರೀತಿಯ ವಿವರಣೆಯನ್ನೇ ಕೆಳಗಿನ ಗೆರೆಗಳಲ್ಲಿ ವಿವರಿಸ ಲಾಗುತ್ತಿದೆ.
*ಶಿಯಾ ಪಂಥ*
ಬಹುಮಾನ್ಯರಾದ ಅಲೀ(ರ)ರವರಿಗೆ ಅಮಿತವಾದ ಮಹತ್ವವನ್ನು ನೀಡುತ್ತಾ ಇತರ ಮೂರು ಖಲೀಫರುಗಳನ್ನು ಆಕ್ಷೇಪಿಸುತ್ತಾ ಸ್ವಹಾಬಿಗಳನ್ನು ಸತ್ಯನಿಷೇಧಿಗಳೆನ್ನುತ್ತಾ ರಂಗ ಪ್ರವೇಶಿಸಿದವರೇ ರಾಫಿಳಿಗಳು. ಇವರ ಇನ್ನೊಂದು ಹೆಸರು ಶೀಅತ್ ಅಥವಾ ಶೀಅತ್ ಅಲಿಯ್ಯ್(ಅಲೀ(ರ)ರ ಪಕ್ಷ) ಎಂದು ಕರೆಯುತ್ತಾರೆ. ಅಲಿಯ್ಯ್ (ರ) ರವರ ಕಾಲದಲ್ಲಿದ್ದ ಅಬ್ದುಲ್ಲಾಹಿಬ್ಬು ಸಬಾ ಎಂಬ ಯಹೂದಿಯಾಗಿದ್ದ ಇದರ ಸ್ಥಾಪಕ.
ಉಮವಿಯ್ಯ ಖಲೀಫ ಹಿಶಾಂ ಇಬ್ನ್ ಅಬ್ಲಿಲ್ ಮಲಿಕ್ ಎಂಬವರ ಆಡಳಿತ ಕಾಲದಲ್ಲಿ ಇರಾಕಿನ ಗವರ್ನರ್ ಆಗಿದ್ದ ಯೂಸುಫ್‌ಬ್ಬು ಉಮರ್‌ರ ವಿರುದ್ದ ಹರ್ಝತ್ ಹುಸೈನ್(ರ)ರ ಪೌತ್ರರಾದ ಝೈದ್ ಇಬ್ನ್ ಝೈನಿಲ್ ಆಬಿದೀನ್ (ಮರಣ, ಹಿ:122) ಯುದ್ಧ ಹೂಡಿದ್ದರು. ಹದಿನೈದು ಸಾವಿರ ಕೂಫಾ ನಿವಾಸಿಗಳು ಝೈದ್‌ರೊಂದಿಗೆ ಬೈಅತ್ ಮಾಡಿದರು. ಆದರೆ ಯುದ್ಧ ಆರಂಭಗೊಳ್ಳುವ ವೇಳೆಯಲ್ಲಿ ಅವರು ಹೇಳಿದರು. 'ಅಬೂಬಕರ್, ಉಮರ್ ಎಂಬ ಇಬ್ಬರು ಖಲೀಫಂದಿರು ತಮ್ಮ ಪಿತಾಮಹರಾದ ಅಲಿ(ಅ)ರನ್ನು ವಂಚಿಸಿ ಅಕ್ರಮವಾಗಿ ಅಧಿಕಾರ ಹಿಡಿದರು ಎಂದು ನೀವು ಒಪ್ಪ ಬೇಕು'. ಝೈದ್(ರ) ಅದಕ್ಕೆ ಒಪ್ಪದಿದ್ದಾಗ ಅವರು ಝೈದ್‌ರವರ ಪಕ್ಷದಿಂದ ಬಿಟ್ಟು ನಿಂತರು. ಆಗ ಝದ್(ರ)ರವರು 'ರಫಳ್ ತುಮೂನಿ' ನನ್ನನ್ನು ನೀವು ಬಿಟ್ಟು ಬಿಟ್ಟಿರಲ್ಲಾ! ಎಂದರು. ಅಂದಿನಿಂದ ಅವರಿಗೆ ರಾಫಿಳಿಗಳು ಎಂಬ ಹೆಸರು ಅಂಟಿಕೊಂಡಿತು.
ಶಿಯಾ ವಿಭಾಗದಲ್ಲಿನ ಮೂವತ್ತೆರಡು ಪಂಗಡಗಳು ಹಲವು ವಿಷಯಗಳಲ್ಲಿ ಭಿನ್ನಾಬಿಪ್ರಾಯವಿರುವವರಾದರೂ ಕೆಲವೊಂದು ವಿಷಯಗಳಲ್ಲಿ ಅವರೆಲ್ಲರೂ ಏಕ ಅಭಿಪ್ರಾಯವನ್ನು ತಾಳಿದ್ದಾರೆ. ಇಮಾಂಗಳು ಪಾಪ ಸುರಕ್ಷಿತರು, ಅವರನ್ನು ನೇಮಿಸುವುದು ಧರ್ಮದ ಪ್ರಧಾನ ಸ್ತಂಭವೆಂದು ಅವರೆಲ್ಲರೂ ವಿಶ್ವಾಸ ತಾಳುತ್ತಾರೆ. ಅದೇ ರೀತಿ ಅಲೀ(ರ) ರವರು ಸರ್ವಸ್ವಹಾಬಿಗಳಿಗಿಂತಲೂ ಶ್ರೇಷ್ಠರು ಎನ್ನುವುದರಲ್ಲೂ ಪ್ರವಾದಿಯವರ ಬಳಿಕ ಅವರೇ ಇಮಾಮರಾಗಬೇಕೆಂಬುವುದರಲ್ಲೂ,
ಅಬೂಬಕ್ಕರ್, ಉಮರ್ ಸೇರಿದಂತೆ ಇತರ ಸ್ವಹಾಬಿಗಳನ್ನು ಆಕ್ಷೇಪಿಸುವುದರಲ್ಲೂ ಅವರು ಒಮ್ಮತಾಭಿಪ್ರಾಯದಲ್ಲಿದ್ದಾರೆ. ಶಿಯಾ ಪಂಥದ ಮೂವತ್ತೆರಡು ಪಂಗಡಗಳ ಹೆಸರುಗಳನ್ನು ಈ ರೀತಿ ಸಂಗ್ರಹಿಸಬಹುದು. ಇವರ ಮೂಲ ಗಾಲಿಯ್ಯ,ಝೈದಿಯ್ಯ, ರಾಫಿಳ ಎಂಬ ಮೂರು ವಿಭಾಗದಲ್ಲಿದೆ. ಈ ಮೂರರ ಪೈಕಿ ಗಾಲಿಯ್ಯ 12 ವಿಭಾಗವಾದರೆ, ಝೈದಿಯ್ಯ ಆರು ವಿಭಾಗವಾಯಿತು. ಅದೇ ರೀತಿ ರಾಫಿಳ ಹದಿನಾಲ್ಕು ಪಂಗಡಗಳಾಗಿ ಛಿದ್ರವಾಯಿತು. ಹೀಗೆ ಒಟ್ಟು ಮೂವತ್ತೆರಡು ವಿಭಾಗಗಳು.
*ಅವರ ಹೆಸರುಗಳು*
ಬನ್ನಾನಿಯ್ಯ, ತಯ್ಯಾರಿಯ್ಯ, ಮನ್ಸೂರಿ ಯ್ಯ, ಮುಗೀರಿಯ್ಯ, ಖತ್ತಾಬಿಯ್ಯ, ಮಅಮರಿಯ್ಯ, ಬಝೀಇಯ್ಯ, ಮುಫಳ್ಳಲಿಯ್ಯ, ಮುತನಾಸಿಖ, ಶರೀಇಯ್ಯ, ಸಅಬಿಯ್ಯ, ಮುಫವ್ವಳ, ಜಾರೂದಿಯ್ಯ, ಸುಲೈಮಾನಿಯ್ಯ, ಬತರಿಯ್ಯ, ನುಅಯ್ಮಿಯ್ಯ, ಯಅಖೂಬಿಯ್ಯ, ಅಬೂಬಕ್ಕರ್ ಮತ್ತು ಉಮರ್(ರ)ರಿಂದ ಬಿಟ್ಟು ನಿಲ್ಲುವ ಒಂದು ವಿಶೇಷ ಗುಂಪು (ಝೈದಿಯ್ಯ ವಿಭಾಗದಲ್ಲಿನ ಈ ಆರನೇ ಪಂಗಡದ ಹೆಸರು ಸ್ಪಷ್ಟವಾಗಿ ಉಲ್ಲೇಖಿಸಲ್ಪಟ್ಟಿಲ್ಲ), ಖತ್ ಇಯ್ಯ, ಕೈಸಾನಿಯ್ಯ, ಉಮೈರಿಯ್ಯ, ಮುಹಮ್ಮದಿಯ್ಯ, ಹುಸೈನಿಯ್ಯ, ನಾವುಸಿಯ್ಯ, ಇಸ್ಮಾಈಲಿಯ್ಯ, ಖರಾಮಿಳಿಯ್ಯ, ಮುಬಾರಕಿಯ್ಯ, ಶುಮೈತಿಯ್ಯ, ಅಮ್ಮಾರಿಯ್ಯ, ಮತ್ಮೂರಿಯ್ಯ, ಮೂಸವಿಯ್ಯ, ಇಮಾಮಿಯ್ಯ. ಈ ಎಲ್ಲಾ ಪಂಗಡದಲ್ಲೂ ಕೊಳೆತು ಗಬ್ಬುವಾಸನೆ ಬೀರುವ ಇಸ್ಲಾಮಿನೊಂದಿಗೆ ಯಾವುದೇ ಸಂಬಂಧ ವಿಲ್ಲದ ಹಲವಾರು ವಾದಗಳಿವೆ. ಈ ವಿಭಾಗಗಳಲ್ಲಿ ಝೈದಿಯ್ಯದಲ್ಲಿ ಮಾತ್ರ ದಾರಿತಪ್ಪಿದ ಬಿದ್‌ಅತ್‌ಗಳಿರುವುದು. ಉಳಿದವುಗಳೆಲ್ಲಾ ಇಸ್ಲಾಮಿನಿಂದ ಹೊರನಡೆದ ವಿಭಾಗಗಳು ಅನ್ನುವುದರಲ್ಲಿ ಸಂಶಯವಿಲ್ಲ. ಝೈದಿಗಳು ಸ್ವಹಾಬಿಗಳನ್ನು ಆಕ್ಷೇಪಿ ಸುವುದಿಲ್ಲ.
*ವಿಕಲ ವಾದಗಳು*
ಇಸ್ಲಾಮಿನ ಲೇಬಲ್‌ನಲ್ಲಿ ಕಾರ್ಯಾಚರಿಸುತ್ತಾ ಅದರೊಂದಿಗೆ ಯಾವುದೇ ರೀತಿಯ ಸಂಬಂಧವೂ ಇಲ್ಲದ ಟೊಳ್ಳು ಪಂಥವೇ ಶಿಯಾ ಎಂದು ದಿಟವಾಯಿತು.ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಬಳಿಕ ಖಲೀಫರಾಗಬೇಕಾದುದು ಅಲೀ(ರ)ರವರಾಗಿದ್ದರೂ ಅದನ್ನು ಅಬೂಬಕ್ಕರ್, ಉಮರ್, ಉಸ್ಮಾನ್(ರ)ರವರು ಕಬಳಿಸಿದರು ಎಂದು ವಾದಿಸುತ್ತಾ ಅದಕ್ಕಾಗಿ ಖುರ್‌ಆನನ್ನು ದುರ್ವ್ಯಾಖ್ಯಾನ ಮಾಡಲು ಅವರು ಹಿಂಜರಿಯಲಿಲ್ಲ. "ಖೇಧಪಟ್ಟು ನಿನ್ನ ಹಾದಿ ತುಳಿದವರಿಗೆ ನೀನು ಮಾಫಿ ನೀಡು" (ಸೂರಃ ಗಾಫಿರ್-7) ಎಂಬ ಖುರ್‌ಆನ್ ಸೂಕ್ತಕ್ಕೆ ಅಬೂಬಕರ್, ಉಮರ್,ಉಸ್ಮಾನ್(ರ)ಮುಂತಾದವರ ನಾಯಕತ್ವವನ್ನು ಬಿಟ್ಟು ಮರಳಿ ಅಲೀ(ರ)ರ ದಾರಿಯನ್ನು ಅನುಸರಿಸಿದವರಿಗೆ ನೀನು ಮಾಫಿ ನೀಡು ಎಂದು ಅವರು ದುರ್ವ್ಯಾಖ್ಯಾನ ನೀಡಿದರು. (ತಸ್ವೀರು ಸ್ವಾವಿ)
ಜಗತ್ತಿನಾದ್ಯಂತವಿರುವ ಶಿಯಾಗಳಲ್ಲಿ ಮುಕ್ಕಾಲು ಶೇಕಡ ಜನರೂ ವಾಸಿಸುವುದು ಇರಾಕ್, ಇರಾನ್, ಪಾಕಿಸ್ತಾನ್, ಅಫ್ಘಾನಿಸ್ತಾನ್, ಬಹ್ರೈನ್, ಸೌದಿ ಅರೇಬಿಯ, ಭಾರತ ಮುಂತಾದ ರಾಷ್ಟ್ರಗಳಲ್ಲಾಗಿದೆ. ಅಹ್ಲು ಬೈತಿನೊಂದಿಗೆ ತಮಗೆ ಅತಿಯಾದ ಪ್ರೀತಿಯಿದೆಯೆಂದು ಅವರು ಬಾಹ್ಯವಾಗಿ ತೋರಿಸುತ್ತಾರಾದರೂ ಅದು ಕಾಪಟ್ಯ ಮತ್ತು ಕಳಂಕ ತುಂಬಿದ ಸ್ನೇಹ ಎಂಬುವುದರಲ್ಲಿ ಸಂಶಯವಿಲ್ಲ. ಅಹ್ಲುಬೈತಿಗೆ ಸೇರಿದ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಪಿತೃ ಸಹೋದರ ಪುತ್ರರೂ ಆದ ಅಬ್ಬಾಸ್(ರ) ಮತ್ತು ಅವರ ಪುತ್ರರ ಬಗ್ಗೆ ಆಕ್ಷೇಪ ನಡೆಸಿ ಅವರು ಕಾಫಿರ್‌ಗಳೆಂದೂ ಕೂಡಾ ಇವರು ಘೋಷಿಸಿದರು. 'ಇಹಲೋಕದಲ್ಲಿ ಅನಾಥ ನಾದವನು ಪರಲೋಕದಲ್ಲೂ ಅನಾಥನೂ, ದಾರಿ ತಪ್ಪಿದವನೂ ಆಗಿರುವನು' (ಇಸ್ರಾಅ- 72) ಎಂಬ ಖುರ್‌ಆನ್ ಸೂಕ್ತ ಅವತೀರ್ಣಗೊಂಡದ್ದು ಅಬ್ಬಾಸ್(ರ)ರವರ ಕುರಿತೆಂದೂ, ಮಹಾವಿದ್ವಾಂಸರೂ ವಿಖ್ಯಾತ ಖುರ್ಆನ್ ವ್ಯಾಖ್ಯಾನಗಾರರೂ ಆದ ಅಬ್ದುಲ್ಲಾಹಿಬ್ಬು ಅಬ್ಬಾಸ್(ರ) ರವರು ಶಪಿಸಲ್ಪಟ್ಟವರೂ, ಮೂರ್ಖರೂ ಆಗಿದ್ದಾರೆ ಎಂದೂ ಇವರು ಬರೆದಿದ್ದರು. (ಉಸೂಲುಲ್ ಕಾಫಿ)
ಇದಕ್ಕಿಂತಲೂ ಮಾರಕವಾದ ಅನೇಕಾರು
ವಾದಗಳು ಇವರಿಗಿವೆ ಎಂಬುವುದನ್ನು ವಾಚಕರು ತಿಳಿದಿರಬೇಕು. ಸುಜೂದಿಗಿಂತ ಮುಂಚೆಯಿರುವ ಖುನೂತ್, ಸಣ್ಣ ಕಲ್ಲುಗಳ ಮೇಲೆ ಸುಜೂದ್ ಗೈಯ್ಯುವುದು, ನಮಾಝಿನ ಬಳಿಕ ತೊಡೆಗೆ ಬಡಿಯುವುದು ಇಂತವುಗಳು ಮಾತ್ರ ಶಿಯಾ-ಸುನ್ನಿಗಳೆಡೆಯಿರುವ ವ್ಯತ್ಯಾಸ ಎಂದು ಭಾವಿಸಿದವರಿದ್ದಾರೆ. ವಾಸ್ತವದಲ್ಲಿ ವಿಶ್ವಾಸ (ಈಮಾನ್)ವನ್ನೇ ಬುಡಮೇಲು ಗೊಳಿಸುವ ವಾದಗಳು ಅವರಿಗಿವೆ. ಸತ್ಯವಿಶ್ವಾಸಿಗಳ ಮಾತೆಯರಾದ ಆಯಿಶಾ ಬೀವಿ, ಹಫ್ಸಾ ಬೀವಿ(ರ)ರವರು ಕಾಫಿರುಗಳೆಂದು ಹೇಳಿದವರು ಶಿಯಾಗಳಲ್ಲಿ ಇದ್ದಾರೆ. ಅವರೊಂದಿಗೆ ಶಾರೀರಿಕ ಸಂಬಂಧ ಬೆಳೆಸಿದ್ದರಿಂದ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ರಹಸ್ಯಾಂಗವನ್ನು ಬೆಂಕಿಸ್ವರ್ಶಿಸುವುದೆಂದೂ..!!! ಅದಕ್ಕೆ ಕಾರಣ ಕಾಫಿರ್‌ಗಳೊಂದಿಗೆ ಸಂಬಂಧ ಬೆಳೆಸಿದ್ದೆಂದೂ ಹೇಳಲು ಅವರು ಧೈರ್ಯ ತೋರಿದರು. (ಅಲೀ ಮುಹಮ್ಮದ್ ಸ್ವಲ್ಲಾ ಬಿಯ 'ಫಿಕ್‌ರುಲ್ ಖವಾರಿಜ್ ವಶ್ಶೀಅ ಫೀ ಮೀಝಾನಿ ಅಹ್ಲಿಸ್ಸುನ್ನತಿ ವಲ್‌ಜಮಾಅ-121)
ಅಬೂಬಕ್ಕರ್, ಉಮರ್(ರ)ರವರಂತ ಬಹು ಸಂಖ್ಯಾತ ಮುಹಾಜಿರ್‌ಗಳು, ಅನ್ಸಾರಿಗಳೂ ಆದ ಸ್ವಹಾಬಿಗಳೂ, ಆಯಿಷಾ ಬೀವಿ, ಹಫ್ಸಾ ಬೀವಿ(ರ) ಮುಂತಾದ ಪ್ರವಾದಿ ಪತ್ನಿಯಂದಿರೂ ಇತರ ಇಮಾಂಗಳೂ ಅಲ್ಲಾಹನಲ್ಲಿ ಅಲ್ಪ ಕೂಡಾ ವಿಶ್ವಾಸವಿಟ್ಟಿಲ್ಲ ಎಂಬ ಭೀಕರ ವಾದವನ್ನು ಬರೆದಿಟ್ಟರಲ್ಲದೆ ಸಈದ್‌ಬ್ರು ಮುಸಯ್ಯಬ್ (ರ) ಇಮಾಂ ಅಬೂಹನೀಫ, ಇಮಾಂ ಶಾಫಿಈ, ಮಅರೂಫಿಲ್ ಕರ್‌ಖೀ, ಸಹ್ಲಿಬ್ನು ಅಬ್ದುಲ್ಲಾಹಿತ್ತುಸ್ತರಿ, ಸುಫ್ಯಾನು ಸೌರಿ (ರ) ಮುಂತಾದ ಪ್ರಮುಖರೆಲ್ಲಾ ಯಹೂದಿ, ಕ್ರೈಸ್ತರಿಗಿಂತಲೂ ದೊಡ್ಡ ಕಾಫಿರ್‌ಗಳೆಂದೂ, ಖಾಝಿಗಳೆಲ್ಲಾ ಪಿಶಾಚಿಗಳಾದ ಕಾರಣ ಅವರನ್ನು ಬಿಟ್ಟು ನಿಲ್ಲಬೇಕೆಂದು ಕುರ್‌ಆನಿನಲ್ಲಿದೆ ಎಂದೂ ದಾಖಲಿಸಿಟ್ಟರು. ಅದೇ ರೀತಿ ಈಸಾ ನಬಿ(ಅ) ಅಂತ್ಯ ದಿನದಲ್ಲಿ ಮರಳಿ ಬರುವರು, ಮುಹಮ್ಮದ್ ನಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಮರಳಿ ಬರುವುದಿಲ್ಲ ಎನ್ನುವುದು ಸರಿಯಲ್ಲ. ಪ್ರವಾದಿ ಈಸಾರಿಗಿಂತಲೂ ಮರಳಿ ಬರಲು ಅರ್ಹರು ಮುಹ್ಮಮ್ಮದ್ ನಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಸಮರು ಎಂದು ಖುರ್‌ಆನಿನಲ್ಲಿದೆ ಎಂದರು. ಮರಣ ಹೊಂದಿದ ಅಲೀ(ರ) ಜಗತ್ತಿಗೆ ಮರಳಿ ಬರುವರು. ಅಲೀ(ರ) ಈಗ ಮೋಡದಲ್ಲಿದ್ದಾರೆ. ಸಿಡಿಲು ಉಂಟಾಗುವುದು ಅವರ ಶಬ್ದದಿಂದ. ಖುರ್‌ಆನಿನಲ್ಲಿ ತಿದ್ದುಪಡಿ ನಡೆದಿದೆ, ಅಹ್ಲುಬೈತಿನ ಶ್ರೇಷ್ಟತೆಯ ಬಗ್ಗೆಯಿರುವ ಸೂಕ್ತಗಳನ್ನು ಕುರ್‌ಆನಿನಿಂದ ಸ್ವಹಾಬಿಗಳು ತೆಗೆದು ಹಾಕಿದ್ದಾರೆ. 'ಸೂರತುಲ್ ವಿಲಾಯ' ಎಂಬ ದೀರ್ಘ ಅಧ್ಯಾಯಕ್ಕೂ, ಸೂರತು
ಶೃರಹಿನಲ್ಲಿದ್ದ “ನಾವು ಅಲಿಯ್ಯನ್ನು ನಮ್ಮ ಅಳಿಯನನ್ನಾಗಿ ಮಾಡಿದ್ದೇವೆ” ಎಂಬ ಸೂಕ್ತಕ್ಕೂ ಕತ್ತರಿ ಪ್ರಯೋಗ ನಡೆದಿದೆ ಎಂಬುದು ಶಿಯಾಗಳ ಮೊಂಡುವಾದಗಳು. ಅಲೀ(ರ)ರವರನ್ನು ಯಥೇಚ್ಛ ಗೌರವಿಸಲು ಹೋಗಿ ಧರ್ಮದಿಂದಲೇ ಹೊರನಡೆದವರಿವರು. ಕ್ರೈಸ್ತರು ಈಸಾ ನಬಿಯನ್ನು ಗೌರವಿಸಿ ಕೊನೆಗೆ ಅವರು ಅಲ್ಲಾಹನ ಪುತ್ರರೆಂದು ಹೇಳಿ ಪರಾಜಯದ ಆಳ ಕಂದಕದಲ್ಲಿ ಬಿದ್ದು ಹೊರಳಾಡುವಂತೆ ಇವರ ಅತಿ ಗೌರವವು ಇವರಿಗೇ ಮುಳುವಾಗಿದೆ.
ಇನ್ನೂ ಅನೇಕ ವಿತಂಡ ವಾದಗಳು ಅವರ ಗ್ರಂಥಗಳನ್ನು ನೋಡಿದರೆ ಕಾಣಬಹುದು. ಕೆಲವು ವ್ಯಕ್ತಿಗಳನ್ನು ನಿಂದಿಸಲು ಇನ್ನು ಕೆಲವರನ್ನು ಹೊಗಳಿ ಅಟ್ಟಕ್ಕೇರಿಸಲು ಅವರು ಹಲವು ನಕಲಿ ಉಲ್ಲೇಖಗಳನ್ನು ತಮ್ಮ ಕೃತಿಗಳಲ್ಲಿ ದಾಖಲಿಸಿಟ್ಟರು. 'ಯಾರಾದರೂ ಹುಸೈನ್(ರ) ರವರ ಖಬ್‌ರನ್ನು ಸಮೀಪಿಸದರೆ ಒಂದು ಹಜ್ಜ್ ಗೈದ ಪ್ರತಿಫಲ ಅವನಿಗೆ ಲಭಿಸುತ್ತದೆ'. (ಇಬ್ಬು ಖುಲ ವೈಹಿಲ್ ಕುಮ್ಮಿಯ್/ಕಾಮಿಲು ರ
ಝಿಯಾರತ್-170) 'ಯಾರಾದರೂ ಪೆರ್ನಾಳ್ ಅಲ್ಲದ ದಿನ ಹುಸೈನ್(ರ)ರವರ ಮಹತ್ವವನ್ನು ಅರಿತು ಅವರ ಖಬ್‌ರ್ ಬಳಿ ತಲುಪಿದರೆ ಸ್ವೀಕೃತವಾದ 20 ಹಜ್ಜ್ ಹಾಗೂ 20 ಉಮ್ರಾಗಳ ಪ್ರತಿಫಲ ಲಭ್ಯ. ಅದೇ ರೀತಿ ಪ್ರವಾದಿ ಅಥವಾ ಇಮಾಂರೊಂದಿಗೆ ನಡೆಸುವ 20 ಹಜ್ಜ್-ಉಮ್ರಗಳ ಪ್ರತಿಫಲವನ್ನು ಅಲ್ಲಾಹು
ಅವನಿಗೆ ನೀಡುವನು', 'ಪೆರ್ನಾಲ್ ನಂದು ಹುಸೈನ್(ರ) ಖಬ್‌ರ್ ಸಂದರ್ಶಿಸಿದರೆ 100 ಹಜ್ಜ್ ಮತ್ತು 100 ಉಮ್ರಾ ಹಾಗೂ ಪ್ರವಾದಿ ಅಥವಾ ಇಮಾಂರೊಂದಿಗೆ 100 ಯುದ್ಧಗಳಲ್ಲಿ ಭಾಗವಹಿಸಿದ ಪ್ರತಿಫಲ ಲಭಿಸುವುದು'. (ಅಲ್‌ಕಾಫಿ-4/580) ಇಂಥಹ ಅಪ್ಪಟ ಸುಳ್ಳಿನ ಅಂತೆ-ಕಂತೆಗಳನ್ನು ಅವರು ತಮ್ಮ ಗ್ರಂಥಗಳಲ್ಲಿ ಬರೆದಿಟ್ಟಿದ್ದಾರೆ.
ಹುಸೈನ್(ರ) ಖಬ್‌ರ್ ಸಂದರ್ಶನವು ಯಾವಾಗಲೂ ಪುಣ್ಯ ಕರ್ಮವಾದರೂ ಮುಹರಂ ಹತ್ತರಂದು ಸಂದರ್ಶಿಸುವುದು ಸ್ವರ್ಗ ಪ್ರವೇಶಕ್ಕೆ ಕಾರಣವಾಗುವುದೆಂದೂ ಒಂದು ರಾತ್ರಿ ಅಲ್ಲಿ ವಾಸಿಸುವುದು ಕರ್ಬಲಾದಲ್ಲಿ ರಕ್ತಸಾಕ್ಷಿಯಾಗುವುದಕ್ಕೆ ಸಮ ಎಂದೂ ಶಿಯಾಗಳು ನಂಬುತ್ತಾರೆ. 'ಯಾರಾದರೂ ಆಶುರಾಅ ದಿನದ ಮಹತ್ವವನ್ನು ಮನಗಂಡು ಹುಸೈನ್(ರ)ರವರ ಝಿಯಾರತ್ ನಡೆಸಿದರೆ ಅವನು ಅರ್ಶಿನಲ್ಲಿ ಅಲ್ಲಾಹನನ್ನು ಸಂದರ್ಶಿಸಿದಂತೆ 'ಯಾರಾದರೂ ಹುಸೈನ್(ರ) ರವರ ಖಬ್‌ರ್ ಬಳಿ ಪಾನೀಯ ನೀಡಿದರೆ ಅವನು ಹುಸೈನ್(ರ)ರವರ ಸೈನ್ಯಕ್ಕೆ ನೀರು ನೀಡಿ ಅವರೊಂದಿಗೆ ಹುತಾತ್ಮನಾದವನಂತೆ. (ಕಾಮಿಲುಝಿಯಾರತ್ 191-192)
ಇಸ್ಲಾಮೀ ಚರಿತ್ರೆಯಲ್ಲಿ ಮುಹರ್ರಂ ಹತ್ತಕ್ಕೆ ತುಂಬಾ ವಿಶೇಷಗಳಿವೆ. ಅನೇಕಾರು ಐತಿಹಾಸಿಕ ಘಟನೆಗಳಿಗೆ ಸಾಕ್ಷಿಯಾದ ದಿನವದು.ನಿಷ್ಠುರವಾದ ಕರ್ಬಲಾ (ಕರ್‌ಬ್-ಬಲಾಅ) ಯುದ್ಧ ನಡೆದ ದಿನ ಕೂಡಾ. ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಮೊಮ್ಮಗ ಹುಸೈನ್(ರ)ರವರೊಂದಿಗೆ ಮುಆವಿಯಾ(ರ) ಮಗ ಯಝೀದ್ರ ಆಡಳಿತದಲ್ಲಿ ಇಬ್ನು ಝಿಯಾದ್‌ನ ಸೈನ್ಯವು ಕಾದಾಡಿದ ಹಿಜ್‌ರ 61 ಮುಹರಂ ಹತ್ತರ ಪ್ರಸ್ತುತ ಘಟನೆಯು ಇಸ್ಲಾಮೀ ಚರಿತ್ರೆಯಲ್ಲಿ ಕಪ್ಪು ಅಧ್ಯಾಯ. ಹುಸೈನ್(ರ)ರವರ ಮಗನಾದ ಝೈನುಲ್ ಆಬಿದೀನ್(ರ) ಮತ್ತು ಕೆಲವು ಸ್ತ್ರೀಗಳನ್ನು ಬಿಟ್ಟು ಉಳಿದವರೆಲ್ಲರೂ ಅಂದು ಶತ್ರುಗಳ ಖಡ್ಗಕ್ಕೆ ಬಲಿಯಾಗಿದ್ದರು ಕರ್ಬಲಾದಲ್ಲಿ. ಈ ದುರಂತವನ್ನು ನೆನೆದು ಅನಾಚಾರಕ್ಕಿಳಿಯಬೇಕೆಂದೋ, ಶಾರೀರಿಕ ದಂಡನೆ ನಡೆಸಬೇಕೆಂದೋ ಇಸ್ಲಾಂ ಎಲ್ಲೂ ಹೇಳಿಲ್ಲ. ಆದರೆ ಶಿಯಾಗಳು ಇದಕ್ಕೆಲ್ಲಾ ವಿರುದ್ಧವಾಗಿ ಮುಹರ್ರಂ ಹತ್ತನ್ನು ವಿಕೃತವಾಗಿ ಆಚರಿಸುತ್ತಾರೆ. ಧರ್ಮದ ಸರ್ವ ಸೀಮೆಗಳನ್ನು ಉಲ್ಲಂಘಿಸಿ ಜಗತ್ ವ್ಯಾಪಕವಾಗಿ ಅವರು ನಡೆಸುವ ರಕ್ತ ಚೆಲ್ಲಾಟಕ್ಕೆ ಇಸ್ಲಾಮಿನ ಬೆಂಬಲವಿಲ್ಲ. ಹತ್ತಿರ ಪ್ರದೇಶದಲ್ಲಿರುವ ಆಸ್ಪತ್ರೆಗಳನ್ನು ಮೊದಲೇ ಬುಕ್‌ಮಾಡಿ ಶರೀರಕ್ಕೆ ತಿವಿದು ರಕ್ತ ಹರಿಸುವ ವಿಕೃತಾಚರಣೆಯು ಇಸ್ಲಾಮಿಗೊಂದು ಕಪ್ಪುಚುಕ್ಕೆ. ಇದನ್ನು ಇಸ್ಲಾಂ ಎಂದು ಯಾರೂ ಭಾವಿಸಬೇಕೆಂದಿಲ್ಲ. ಇಸ್ಲಾಮೀ ಪ್ರಮಾಣಗಳು ಇದನ್ನು ಖಂಡತುಂಡವಾಗಿ ವಿರೋಧಿಸುತ್ತವೆ. ಇಬ್ಬುರಜಬುಲ್ ಹಂಬಲೀ(ರ) ಬರೆಯುವುದನ್ನು ನೊಡಿ. “ಹುಸೈನ್(ರ)ರ ವಧೆಯ ಹೆಸರಲ್ಲಿ ಆಶುರಾಅ ದಿನದಂದು ನಡೆಸಲಾಗುವ ಆಚರಣೆ 'ಇಹದಲ್ಲಿ ದಾರಿ ತಪ್ಪಿದವರು ತಾವು ಮಾಡುತ್ತಿರುವುದು ಉತ್ತಮವಾದುದು' (ಅಲ್‌ಕಹ್ಫ್-104) ಎಂದು ಭಾವಿಸುವವರ ಪ್ರವೃತಿಯಾಗಿದೆ. ಪ್ರವಾದಿಗಳಿಗೆ ವಿಪತ್ತುಗಳುಂಟಾದ ದಿನಗಳಲ್ಲೋ ಅವರ ವಫಾತ್ ದಿನಗಳಲ್ಲೋ ದುಃಖಾಚರಣೆ ನಡೆಸಲು ಅಲ್ಲಾಹು ಮತ್ತು ಅವನ ರಸೂಲರು ಕಲಿಸಿಲ್ಲ ಎಂದಿರುವಾಗ ಅವರಿಗಿಂತ ಕೆಳಗಿನ ಪದವಿಯಲ್ಲಿರುವವರ ಹೆಸರಲ್ಲೇನಿದೆ ದುಃಖಾಚರಣೆ ನಡೆಸಲು...?”
(ಲತಾಇಫುಲ್ ಮಆರಿಫ್)
*ಶಿಯಾ-ಸುನ್ನೀ*
ಜಗತ್ತಿನ ಮುಸ್ಲಿಂ ಜನಸಂಖ್ಯೆಯ ಒಟ್ಟು ಅಂಕಿಅಂಶಗಳನ್ನು ಗಮನಿಸುವಾಗ ಶಿಯಾಗಳು ಹದಿನೈದು ಶೇಖಡಕ್ಕಿಂತಲೂ ಕಡಿಮೆಯಿದ್ದಾರೆ. ಇವರು ಅತೀ ಹೆಚ್ಚಿನ ಸಂಖ್ಯೆಯಲ್ಲಿರುವುದು ಇರಾನ್ ನಲ್ಲಿ (89%). ಇರಾಖ್ (65%), ಬಹ್ರೈನ್ (70%)ನಲ್ಲೂ ಬಹುಸಂಖ್ಯಾತರು ಅವರೇ. ಯಮನ್, ಆಝರ್‌ಬೈಜಾನ್, ಸಿರಿಯಾ, ಲಬನಾನ್, ಮುಂತಾದ ರಾಷ್ಟ್ರಗಳಲ್ಲೂ ಇವರು ನೆಲೆಯೂರಿದ್ದಾರೆ. ಇರಾನ್ ಶಿಯಾಗಳಿಗೆ ಅಧಿಕಾರವಿರುವ ಏಕ ಮುಸ್ಲಿಂ ರಾಷ್ಟ್ರ. 1979 ಎಪ್ರಿಲ್1 ರಂದು ಇರಾನ್‌ನಲ್ಲಿ ಕುಮೈನಿ ಇಸ್ಲಾಮಿಕ್ ರಿಪಬ್ಲಿಕ್ ಸ್ಥಾಪಿಸಿದರು. ಈಜಿಪ್ಟಿನ ಫಾತಿಮಿ, ಪೇರ್ಷ್ಯಾದ ಸಫವಿ ಇವು ಶಿಯಾ ಕೂಟವಾಗಿತ್ತು. ಅಬ್ಬಾಸಿ ಆಡಳಿತದ ಶಕ್ತಿ ಕ್ಷಯಿಸುವುದರೊಂದಿಗೆ ಜಗತ್ತಿನಲ್ಲಿ ಶಿಯಾಗಳು ಬೆಳೆದರಲ್ಲದೆ ಪ್ರಬಲ ಶಕ್ತಿಯಾಗಿ ರೂಪುಗೊಂಡರು.
ಮಧ್ಯ ಪ್ರಾಚ್ಯ ರಾಷ್ಟ್ರಗಳಲ್ಲಿ, ಆಫ್ರಿಕಾದ ವಿವಿದೆಡೆಗಳಲ್ಲೂ, ಅರಬ್ ಜಗತ್ತಿನಾದ್ಯಂತವಿರುವ ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರಗಳಲ್ಲೂ ಇಂದು ನಡೆಯುತ್ತಿರುವ ಗಲಭೆಗಳಿಗೂ, ಅಶಾಂತಿಗೂ ಶಿಯಾಗಳು ಕೂಡಾ ಕಾರಣ ಕರ್ತರು. ಸಾಮ್ರಾಜ್ಯಶಾಹಿ ಶಕ್ತಿಗಳು ಇವರನ್ನು ಅನ್ನ ನೀರು ಕೊಟ್ಟು ಪೋಷಿಸುತ್ತಿದೆ. ಶಿಯಾ ಎಂಬುವುದಕ್ಕೆ ವಿರುದ್ಧ ಪದವಾಗಿ ಸುನ್ನಿ ಎಂಬುವುದನ್ನು ಜಗತ್ತಿನ ದೃಶ್ಯಶ್ರಾವ್ಯ ಮಾಧ್ಯಮಗಳು ಪ್ರಯೋಗಿಸುತ್ತಿರುವುದನ್ನು ನಾವು ಕಾಣುತ್ತಿದ್ದೇವೆ.
ಮಾಧ್ಯಮಗಳು ಪರಿಚಯಿಸುವ ಸುನ್ನಿಗಳಿಗೂ ನಿಜವಾದ ಸುನ್ನಿಗಳಿಗೂ ರಾತ್ರಿ ಹಗಲೆಂಬ ವ್ಯತ್ಯಾಸವಿದೆ. ಶಿಯಾ ಭೀಕರವಾದವು ಯಾವ ರೀತಿ ಸಾಮ್ರಾಜ್ಯಶಾಹಿ ಶಕ್ತಿಗಳಿಗೆ ಲಾಭವುಂಟುಮಾಡುತ್ತಿದೆಯೋ ಅದಕ್ಕಿಂತಲೂ ದುಪ್ಪಟ್ಟು ಲಾಭ ಈ ನಾಮಧಾರಿ ಸುನ್ನಿಗಳಿಂದ! ಅವರಿಗಾಗುತ್ತಿದೆ. ಸುನ್ನಿಗಳೆಂದು ಕರೆಯಲ್ಪಡುವ ಈ ಇಸ್ಲಾಮಿಸ್ಟ್‌ಗಳು ನಿಜಕ್ಕೂ ಇಸ್ಲಾಮಿಗೆ ಮಾರಕ. ಧರ್ಮದ ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸುವವರೆ ನಿಜವಾದ ಸುನ್ನಿಗಳು. ಆದರೆ ಇಸ್ಲಾಮಿಸ್ಟ್‌ಗಳೆಂದು ಸ್ವಯಂ ಹೇಳಿಕೊಳ್ಳುವ ಇವರು ನಾವು ಇಸ್ಲಾಮಿನ ಸರಿಯಾದ ವಕ್ತಾರರೆಂದೂ, ಇಸ್ಲಾಮಿನ ರಾಜಕೀಯ ಮತ್ತು ಸಾಮೂಹಿಕ ಸಂಸ್ಕೃತಿಗಳನ್ನು, ನಾಗರಿಕತೆಗಳನ್ನು ಜಗತ್ತಿನಲ್ಲಿ ಪ್ರಯೋಗಿಸಲು ನಾವು ಹೊರಟಿದ್ದೇವೆ ಎನ್ನುತ್ತಾರೆ. ಮುಸ್ಲಿಂ
ಬ್ರದರ್ ಹುಡ್(ಇಖ್‌ವಾನುಲ್ ಮುಸ್ಲಿಮೀನ್),ಅನ್ನದ್‌ವ, ಜಮಾಅತೆ ಇಸ್ಲಾಮಿಯಿಂದ ಹಿಡಿದು ಅಲ್‌ಖಾಇದಾ, ಅಲ್‌ಶಬಾಬ್ ಮುಂತಾದ ಉಗ್ರವಾದಿ ಸಂಘಟನೆಗಳೆಲ್ಲಾ ಈ ಸಾಲಲ್ಲಿ ಸೇರುತ್ತದೆ. ತುರ್ಕಿಯ ಎ.ಕೆ ಪಾರ್ಟಿಯ ನಾಯಕ ತ್ವಯಿಬ್ ಉರ್ದುಗಾನ್, ಸುಡಾನ್ ಆಡಳಿತಾಧಿಕಾರಿ ಉಮರ್ ಅಲ್‌ಬಾಶಿರ್ ಅದೇರೀತಿ ಜಮಾಅತುದ್ದವಾ ಮೇಧಾವಿ ಹಾಗೂ ಲಶ್ಕರೇ ತೈಬಾ ಸ್ಥಾಪಕನಾದ ಹಾಫಿಝ್ ಸಈದ್ ಕೂಡಾ ಇಂತಹಾ ಇಸ್ಲಾಮಿಸ್ಟ್‌ಗಳೇ. ಶಿಯಾ ಮತ್ತು ಈ ಸುನ್ನಿ ವಿಭಾಗಗಳನ್ನು ಪರಸ್ಪರ ಹೊಡೆದಾಡಿಸಿ ಅಮೇರಿಕಾದಂತಹ ಪಾಶ್ಚಾತ್ಯ ರಾಷ್ಟ್ರಗಳು ಇಸ್ಲಾಮೀ ರಾಷ್ಟ್ರಗಳಲ್ಲಿ ತಮ್ಮ ಬೇಳೆ ಬೇಯಿಸುತ್ತಿದೆಯಷ್ಟೆ.!
1979ರ ಕ್ರಾಂತಿಯು ಇರಾನಲ್ಲಿ ಶಿಯಾಗಳಿಗೆ ಆಧಿಪತ್ಯ ನೀಡಿತು. ಇರಾಕಿನಲ್ಲಿ ಧೀರ್ಘಕಾಲ ಶಿಯಾಗಳಿಗೆ ಎದ್ದು ನಿಲ್ಲಲಾಗದಿದ್ದರೂ ಸದ್ದಾಂ ಹುಸೇನರ ಅಂತ್ಯದ ಬಳಿಕ ಅವರು ಅಲ್ಲೂ ಶಕ್ತಿ ಪಡೆದು ಮುನ್ನುಗ್ಗಿದರು. ಸುನ್ನಿಗಳನ್ನು ಗುರಿಯಾಗಿಸಿ ಎಲ್ಲಾ ರೀತಿಯ ಅಕ್ರಮಗಳನ್ನು ನಡೆಸಿದರು. 'ಸುನ್ನೀ ಭೀಕರರು' ಎಂದು ಇಂದು ಮಾಧ್ಯಮಗಳು ವಿಶ್ಲೇಷಿಸುತ್ತಿರುವುದು ಶಿಯಾ ವಿಭಾಗವಲ್ಲದವರು ಎಂದರ್ಥದಲ್ಲಾಗಿದೆ. ಅವರು ಒಮ್ಮೆಯೂ ನಾವು ಬಳಸುವ ನಿಜವಾದ ಸುನ್ನಿಗಳಲ್ಲ. ಯೂನುಸ್ ನಬಿ(ಅ) ಮತ್ತು ಇತರ ಅನೇಕ ಸಜ್ಜನರ ಖಬ್‌ರ್ಗಳನ್ನು ನಾಮಾವಶೇಷ ಮಾಡಿದ ಈ ಸುನ್ನಿಗಳು ವಾಸ್ತವದಲ್ಲಿ ವಹ್ಹಾಬಿಸಂನ ನಕಲು ಪ್ರತಿ. ಜಗತ್ತಿನಲ್ಲಿ ಉಂಟಾದ ಎಲ್ಲಾ ಅಂತಃ ಕಲಹಗಳಿಗೂ ಶಿಯಾಗಳು ಮತ್ತು ಈ ನಾಮಧಾರಿ ಸುನ್ನೀ ಭೀಕರವಾದಿಗಳೇ ಕಾರಣ ಎನ್ನಬಹುದು, ಆದ್ದರಿಂದ ಇಸ್ಲಾಮೀ ಸಮೂಹವನ್ನು ಶಿಥಿಲಗೊಳಿಸಲು ರಂಗ ಪ್ರವೇಶ ಮಾಡಿದ ಇಂಥವರ ನಿಜರೂಪವನ್ನು ಜಗತ್ತಿಗೆ ತಿಳಿಸುವ ಹೊಣೆಯು ಪರಂಪರಾಗತ ಸುನ್ನೀ ವಿಶ್ವಾಸಿಗಳ ಮೇಲಿದೆ.
ಆಕರ:
ಅಖೀದತುಸ್ಸುನ್ನ,
ದುರರುಲ್ ಫವಾಇದ್,
ಸುನ್ನೀ ವೋಯ್ಸ್,
ಇಸ್ಲಾಮಿಗ ಚಿಂದೆ ಸತ್ಯವುಂ ಮಿಥ್ಯವುಂ.
ಇಸ್ಮಾಈಲ್ ಸಅದಿ ಮಾಚಾರ್
10/05/2014
Comments