Skip to main content

ಧರ್ಮ ಕ್ರಾಂತಿಯ ಧ್ವನಿ ಎಸ್ಸೆಸ್ಸೆಫ್

ಧರ್ಮ ಕ್ರಾಂತಿಯ ಧ್ವನಿ ಎಸ್ ಎಸ್ ಎಫ್

ಅಖಿಲ ಭಾರತ ಮಟ್ಟದಲ್ಲಿ ಯಶಸ್ವಿಯಾಗಿ ಕಾರ್ಯಾಚರಿಸುತ್ತಿರುವ ಎಸ್ ಎಸ್ ಎಫ್ ಎಂಬ ಸಂಘಟನೆ ಮಹಾನುಭಾವರಾದ ಶಂಸುಲ್ ಉಲಮ (ನ.ಮ.) ತಾಜುಲ್ ಉಲಮ (ನ.ಮ.) ನೂರುಲ್ ಉಲಮ (ನ.ಮ.)  ಹಾಗೂ ವರ್ತಮಾನ ಜಗತ್ತಿನ ವಿಸ್ಮಯ ವಿದ್ವತ್ ಪ್ರತಿಭೆ ಖಮರುಲ್ ಉಲಮ ಎ.ಪಿ.ಅಬೂಬಕರ್ ಮುಸ್ಲಿಯಾರ್ ಕಾಂತಪುರಂ ಅವರ ಆಶಿರ್ವಾದದೊಂದಿಗೆ 1973 ರಲ್ಲಿ ಪಟ್ಟಿಕ್ಕಾಡ್ ಜಾಮಿಅಃ ನೂರಿಯ್ಯ ಅರಬಿಕ್ ಕಾಲೇಜ್‌ನಲ್ಲಿ ರಚನೆಗೊಂಡ ವಿದ್ಯಾರ್ಥಿ, ಯುವಜನ ಸಂಘಟನೆಯಾಗಿದೆ.
ಪವಿತ್ರ ಇಸ್ಲಾಂ ಧರ್ಮದ ಶಾಂತಿ ಸಂದೇಶಗಳನ್ನು ಜಗದೆಲ್ಲೆಡೆಗೆ ಸಾರಿ,ಮಾನವೀಯತೆ,ಸೌಹಾರ್ದತೆ,ಐಕ್ಯತೆ ಹಾಗೂ ಸ್ನೇಹ, ಸಹಬಾಳ್ವೆಯನ್ನು ನಡೆಸಲು ಪ್ರೇರಣೆ ನೀಡಿ ಉತ್ತಮ ಸಮಾಜದ ನಿರ್ಮಾಣ ಎಸ್ ಎಸ್ ಎಫ್ ನ ಪರಮ ಧ್ಯೇಯವಾಗಿದೆ.
ಸಂತಪುರುಷರು,ಸಾದಾತ್ ಗಳು,ವಿದ್ವಾಂಸರು ಮೊದಲಾದವರ ನಾಯಕತ್ವವನ್ನು ಸಂಪೂರ್ಣವಾಗಿ ಅಂಗೀಕರಿಸಿ ಅವರ ಅಣತಿಯಂತೆ, ಪವಿತ್ರ ಇಸ್ಲಾಂ ಧರ್ಮದ ಚೌಕಟ್ಟನ್ನು ಮೀರದೆ ಸೃಷ್ಟಿಕರ್ತ ಅಲ್ಲಾಹುವಿನ ತೃಪ್ತಿಗಾಗಿ ಮಾತ್ರ ಕಾರ್ಯಾಚರಿಸುವ ಎಸ್ ಎಸ್ ಎಫ್ ,ಖುರ್ ಆನ್,ಹದೀಸ್, ಇಜ್ ಮಾಅ್,ಖಿಯಾಸ್ ಎಂಬ  ನಾಲ್ಕು ಪ್ರಮಾಣಗಳ ಆಧಾರದಲ್ಲಿ ಮಾತ್ರ   ಯಾವುದೇ ಒಂದು ಕಾರ್ಯಕ್ರಮವನ್ನೂ ಹಮ್ಮಿಕೊಳ್ಳುತ್ತಿದೆ.
ಎಸ್ ಎಸ್ ಎಫ್ ಸಂಘಟನೆಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದವರು ತಮಗೆ ತೋಚಿದಂತೆ ಆರೋಪಗಳನ್ನು ಹೊರಿಸಿ ಸಂಘಟನೆಯನ್ನು ಕೀಳಾಗಿ ಚಿತ್ರಿಸುವ ಹತಾಶ ಪ್ರಯತ್ನ ಮಾಡುತ್ತಿರುವುದನ್ನು ‌ಕಾಣಬಹುದು.
ಆದರೆ ಎಸ್ ಎಸ್ ಎಫ್  ಏನು ಎಂಬುದನ್ನು ಪ್ರಜ್ಞಾವಂತ ಜನರು ಎಂದೋ ಅರ್ಥ ಮಾಡಿಕೊಂಡಿದ್ದಾರೆ.
"ಬೆಂಕಿಯಲ್ಲಿ ಮೊಳಕೆಯೊಡೆದದ್ದು ಬಿಸಿಲಿನಲ್ಲಿ ಬಾಡದು" ಎಂಬಂತೆ ಎಸ್ ಎಸ್ ಎಫ್ ಬಗ್ಗೆ ಯಾರೇ  ಆಗಲಿ ಕಪೋಲ ಕಲ್ಪಿತ ಸುಳ್ಳಾರೋಪಗಳನ್ನು ಮಾಡಿದರೆ ಅದನ್ನು ನಂಬಲು ಜನರು ತಯ್ಯಾರಿಲ್ಲ.
.ಯಾಕೆಂದರೆ ಎಸ್ ಎಸ್ ಎಫ್ ನಾಯಕತ್ವ  ಜಾಗತಿಕ ಮಟ್ಟದಲ್ಲಿ ನಡೆಸುತ್ತಿರುವ ಧರ್ಮ ಕ್ರಾಂತಿಯ ವಿಸ್ಮಯಕಾರಿ ದೃಶ್ಯಗಳನ್ನು  ಮಾನವ ಸಮುದಾಯ ಬೆರಗುಗಣ್ಣುಗಳಿಂದ ವೀಕ್ಷಿಸುತ್ತಿದೆ.
ಕರ್ನಾಟಕದಲ್ಲೇ ನೂರಾರು ವಿದ್ಯಾಸಂಸ್ಥೆಗಳ  ಮಾದರಿ ಕಾರ್ಯವೈಖರಿ  ಎಂಥವರನ್ನೂ ಅಚ್ಚರಿಗೊಳಿಸದಿರದು.
ಸರಕಾರಗಳು, ನಾಡಿನ ಧನಿಕರು,ಜನಸಾಮಾನ್ಯರು,ಹೀಗೆ ನಾನಾ ಸ್ತರಗಳಲ್ಲಿರುವವರು ಎಸ್ ಎಸ್ ಎಫ್ ನ ಎಲ್ಲಾ ಚಟುವಟಿಕೆಗಳಿಗೆ ಸಂಪೂರ್ಣ ಸಹಕಾರಗಳನ್ನು ನೀಡಿ ಪ್ರಾಮಾಣಿಕತೆ ಮೆರೆಯುತ್ತಿರುವುದನ್ನು ನಾವು  ದೈನಂದಿನೇ ಮಾಧ್ಯಮಗಳ ಮೂಲಕ ತಿಳಿದುಕೊಳ್ಳುತ್ತಿದ್ದೇವೆ.
ಇಸ್ಲಾಂ ಧರ್ಮದ ನಿಲುವನ್ನು ಬಹಿರಂಗವಾಗಿ ತೋರ್ಪಡಿಸಿ,ಇಸ್ಲಾಂ ಧರ್ಮದ ಚೌಕಟ್ಟು ಮೀರದೆ ಕೆಲವರೊಂದಿಗೆ ಕೆಲವು  ಸಂದರ್ಭಗಳಲ್ಲಿ ಸೇರಲು ತಯ್ಯಾರಾಗದಿರುವ ಆದರ್ಶ ಬದ್ಧತೆ ಯನ್ನು ಕೆಲವರು ತಪ್ಪಾಗಿ ವ್ಯಾಖ್ಯಾನಿಸಿ "ಎಸ್ ಎಸ್ ಎಫ್ ನವರನ್ನು ಒಂಟಿಯಾಗಿಸಿರಿ,ಅವರು ಐಕ್ಯತೆಯನ್ನು ಬಯಸದವರು" ಎಂದು  ಯಾರಾದರೂ ಬೊಬ್ಬಿರಿದರೆ ಅದು ಅರಣ್ಯ ರೋಧನವಾದೀತೇ ವಿನಃ ಅದರಿಂದ ಯಾವುದೇ ಯಶಸ್ಸು ಯಾರೂ ನಿರೀಕ್ಷಿಸುವುದು ಬೇಡ.
ಎಸ್ ಎಸ್ ಎಫ್ ಯಾವ ರೀತಿಯ ಕಾರ್ಯಚಟುವಟಿಕೆಗಳನ್ನು ಸಮಾಜದ ಮುಂದಿಡುತ್ತಿದೆ ಎಂಬುದು ಎಸ್ ಎಸ್ ಎಫ್ ಸಂಘಟನೆಯನ್ನು ವಿನಾಕಾರಣ ನಿಂದಿಸಿ ಸಮಯ ವ್ಯರ್ಥ ಮಾಡುವವರಿಗೂ ಚೆನ್ನಾಗಿ ಗೊತ್ತಿದೆ.
"ಇಸ್ಲಾಂ ಧರ್ಮ ಎಂದರೆ ಇದು " ಜಗತ್ತಿಗೆ ತೋರಿಸಿಕೊಡಲು ಎಸ್ ಎಸ್ ಎಫ್ ಯಾವತ್ತೂ ಕಟಿಬದ್ಧವಾಗಿದೆ.
ಸತ್ಯವನ್ನು ‌ಹೇಳುವಾಗ ಯಾರದೇ ಮುಖನೋಡದೆ ಇದ್ದುದನ್ನು ಇದ್ದ ಹಾಗೆ ಹೇಳುವುದು ಎಸ್ ಎಸ್ ಎಫ್ ಸಂಪ್ರದಾಯ.
ಇದು ಕೆಲವರಿಗೆ ಕೆಂಡದಂಥಾ ಕೋಪ ಬರಿಸಿದರೆ ಅದಕ್ಕೆ ಎಸ್ ಎಸ್ ಎಫ್ ಹೊಣೆಯಲ್ಲ.
ಸರ್ವ ಜನ ಸಮುದಾಯವೂ ಪ್ರೀತಿ, ವಿಶ್ವಾಸದೊಂದಿಗೆ ಸಹಬಾಳ್ವೆ ನಡೆಸಬೇಕೆಂಬುದು ಎಸ್ ಎಸ್ ಎಫ್ ನ ಬಯಕೆ.
ಭಯೋತ್ಪಾದನೆ,ಉಗ್ರವಾದ, ನೂತನವಾದ ಮೊದಲಾದ ಮಾನವಕುಲದ ಶತ್ರು ಮನೋಭಾವ ,ಯಾರಿಂದಲೂ ಉಂಟಾಗಬಾರದೆಂದು ಎಸ್ ಎಸ್ ಎಫ್ ಸರ್ವರೊಂದಿಗೂ ಬೋಧಿಸುತ್ತಿದೆ.
ನೇರ ಹಾದಿಯನ್ನು ಬಿಟ್ಟು ಯಾರೊಂದಿಗೂ ಎಂಥಾ ಸಂದರ್ಭಗಳಲ್ಲೂ ಎಸ್ ಎಸ್ ಎಫ್  ಯಾವುದೇ ರೀತಿಯ  ರಾಜಿಗೂ ಸಿದ್ಧವಿಲ್ಲ ಎಂಬುದನ್ನೂ ಪ್ರತಿಯೊಬ್ಬರೂ ಅರ್ಥಮಾಡಿಕೊಳ್ಳಬೇಕು.
ಶರೀರಗಳ ರಕ್ಷಣೆಗಿಂತ ಈಮಾನ್ ರಕ್ಷಣೆ ಎಸ್‌ ಎಸ್ ಎಫ್ ಗೆ ಮುಖ್ಯವಾಗಿರುವುದರಿಂದ ಕೆಲವು ಕಠಿಣ ನಿಲುವುಗಳಿಗೆ ಎಸ್ ಎಸ್ ಎಫ್ ಬದ್ಧವಾಗಿದೆ.
ಇದು ಇಸ್ಲಾಂ ಧರ್ಮದ ನಿಲುವು ಎಂದು  ಪ್ರತಿಯೊಬ್ಬರೂ ಅರ್ಥ ಮಾಡುವ ಹೃದಯ ವೈಶಾಲ್ಯತೆಯ ಮನೋಭಾವ ತೋರಿಸಿದರೆ ಇಲ್ಲಿ  ಯಾವುದೇ ಸಮಸ್ಯೆಗಳಿರದು.
ಇಲ್ಲಿ ಇಸ್ಲಾಂ ಧರ್ಮದ ಹೊರತಾಗಿ ಇನ್ನಿತರ ಸಾವಿರಾರು ಸಂಸ್ಕೃತಿಗಳಿವೆ.
ಅವರ   ಯಾವುದೇ ಚಟುವಟಿಕೆಗಳನ್ನು ಮುಸ್ಲಿಮರು ಪ್ರಶ್ನಿಸುವುದಿಲ್ಲ.
ಇದು ಮುಸ್ಲಿಮರ ಉದಾತ್ತ ಸಂಸ್ಕೃತಿಯ ಜ್ವಲಂತ ನಿದರ್ಶನವಾಗಿದೆ.
ಅದನ್ನು ಪ್ರಶ್ನಿಸಬೇಕೆಂದು ಇಸ್ಲಾಂ ಧರ್ಮ ಕಲಿಸಲೂ ಇಲ್ಲ.
  ಇದೇ ವೇಳೆ ಮುಸ್ಲಿಮರ ವಿಶ್ವಾಸಾಚಾರಗಳನ್ನು ಇತರ ಸಮುದಾಯದವರು ಪ್ರಶ್ನಿಸುವ ಒಂದು ಕೆಟ್ಟ ಸಂಪ್ರದಾಯ ಚಾಲ್ತಿಯಲ್ಲಿದೆ.
ಇಂಥಾ ಸಂದರ್ಭಗಳಲ್ಲಿ ನಾವು ಯಾವತ್ತೂ ಇತರ ಸಮುದಾಯದ ಮೇಲೆ ಮುಗಿಬೀಳದೆ ಶಾಂತಿಯುತ ರೀತಿಯಲ್ಲಿ ಅವರಿಗೆ ನಿಜಸಂಗತಿ ಮನದಟ್ಟು ಮಾಡಿಕೊಡುವ ಹೃದಯ ವಿಶಾಲತೆ ತೋರಿಸಬೇಕು.
ಯಾಕೆಂದರೆ ನಾವು ಈಮಾನ್ ಎಂಬ "ವಜ್ರಾಯುಧ " ಇರುವ ಉತ್ತಮ ಸಮುದಾಯ.
ಅವರಾದರೋ ವಿಶ್ವಾಸವಿಲ್ಲದ ಒಂದು ಸಮುದಾಯ.
ನಾವೂ ಅವರೂ  ಒಂದೇ ನಿಲುವು ವ್ಯಕ್ತ ಪಡಿಸಿದರೆ ಇಸ್ಲಾಂ, ಈಮಾನ್ ಇರುವ ನಮಗೂ  ಕೇವಲ ಐಹಿಕ ಸುಖಕ್ಕಾಗಿ ಮಾತ್ರ ಜೀವಿಸುವ ಅವರಿಗೂ ಏನು ವ್ಯತ್ಯಾಸವಿದೆ?
ನಮಗೆ ಇಲ್ಲಿ ಯಾರೂ ಶತ್ರುಗಳಿಲ್ಲ.
ಆದರೆ ಖುರ್ ಆನ್ ಪ್ರಸ್ತಾಪಿಸಿದ ಶತ್ರುಗಳ ಬಗ್ಗೆ ನಾವು ಸದಾ ಜಾಗೃತರಾಗಲೂಬೇಕು.
"ಖಂಡಿತ ಪಿಶಾಚಿ ನಿಮ್ಮ ಸ್ಪಷ್ಟ ಶತ್ರು"
ಎಂಬುದು ಖುರ್ ಆನ್ ನುಡಿ. ಶತ್ರುವನ್ನು ಅತಿಯಾಗಿ ದ್ವೇಷಿಸದಿರು,ಅವನು ಒಂದು ದಿನ ಮಿತ್ರ ನಾಗಲೂ ಬಹುದು.ಮಿತ್ರ ನನ್ನು ಅತಿಯಾಗಿ ಪ್ರೀತಿಸದಿರು,ಒಂದು ದಿನ ಅವನು ಶತ್ರುವಾಗಲೂ ಬಹುದು"
ಇದು ಕಾರುಣ್ಯದ ಪ್ರವಾದಿ ಮುಹಮ್ಮದ್ ಮುಸ್ತಫಾ ಸ್ವಲ್ಲಲ್ಲಾಹು ಅಲೈಹಿವ ಸಲ್ಲಮರ ಒಂದು ಪ್ರಸಿದ್ಧ ಹದೀಸ್.
ಅಬೂಜಹಲ್ ನಂಥ ಇಸ್ಲಾಮಿನ ಪರಮ ಶತ್ರುಗಳ ಕುರಿತೂ ಶಾಂತಿಯ ಪ್ರವಾದಿ ಮುಹಮ್ಮದುರ್ರಸೂಲುಲ್ಲಾಹಿ ಸ್ವಲ್ಲಲ್ಲಾಹು ಅಲೈಹಿವ ಸಲ್ಲಂ ಇದೇ ನಿಲುವು ಸ್ವೀಕರಿಸಿದ್ದಾಗಿ ಇಸ್ಲಾಮಿಕ್ ಗ್ರಂಥಗಳಲ್ಲಿ ಕಾಣಬಹುದು.
ಮುಸ್ಲಿಮರಾದ ನಮಗೆ ಇತರ ಎಲ್ಲಾ ಸಮುದಾಯಗಳಿಗಿಂತ ಶ್ರೇಷ್ಠ ವಾದ ನಿಲುವುಗಳಿವೆ.
ಅವುಗಳು ಖುರ್ ಆನ್ ಹದೀಸ್ ಗಳ  ನಿಲುವುಗಳೇ ಆಗಿವೆ.
ಆದ್ದರಿಂದ ನಾವು ನಮ್ಮ ನಡುವೆಯಿರುವ ತಪ್ಪುಕಲ್ಪನೆಗಳನ್ನು ತೊರೆದು ನೈಜ ಮುಸ್ಲಿಮರಾಗಿ ಜೀವಿಸಲು ಇಂದೇ ಪಣ ತೊಡೋಣ.ನಮ್ಮ ನಡುವಿನ ಸಹೋರತೆ ಸದಾ ಹಸಿರಾಗಿರಲಿ.
ತಪ್ಪು ಕಲ್ಪನೆಯುಳ್ಳ ಎಲ್ಲರಿಗೂ ಅಲ್ಲಾಹು ಸದ್ಬುದ್ದಿ ಕರುಣಿಸಲಿ.

✍ *ಕೆ.ಎ.ಅಬ್ದುಲ್ ಅಝೀಝ್ ಝುಹ್ ರಿ ಪುಣಚ*
*ಅಧ್ಯಕ್ಷ ಎಸ್ ಎಸ್ ಎಫ್ ಪುಣಚ ಶಾಖೆ*

🇸🇱🇸🇱🇸🇱🇸🇱🇸🇱🇸🇱🇸🇱🇸🇱🇸🇱🇸🇱

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...