Skip to main content

ಹಝ್ರತ್ ಇಮಾಂ ಅಹ್ಮದ್ ರಝಾಖಾನ್ ಬರೇಲ್ವಿ (ರ) ಬರೇಲಿ ಉತ್ತರಪ್ರದೇಶ.....ಗಫೂರ್ ಬಾಯಾರ್

ಹಜ್ರತ್ ಇಮಾಂ ಅಹ್ಮದ್ ರಝಾಖಾನ್ ಬರೇಲ್ವಿ (ರ) ಬರೇಲಿ ಉತ್ತರ ಪ್ರದೇಶ*

"ನನ್ನನ್ನು ಮದೀನಾಕ್ಕೆ ಕೊಂಡು ಹೋಗು..
ನನಗಿರುವ ಮದ್ದು ಅಲ್ಲಿಯಾಗಿದೆ ಇರುವುದು...."
     _ಅಹ್ಮದ್ ರಝಖಾನ್ ಬರೇಲ್ವಿ (ರ)_

ಉತ್ತರ ಭಾರತದ ಮುಸ್ಲಿಂಗಳ ಹೃದಯದಲ್ಲಿ ಮಾಯದೆ, ಮರೆಯದೆ, ನಿಲ್ಲುವ ಹೆಸರು..

ಸ್ನೇಹ ಲೋಕದ  ಆಶಿಖಿಗಳನ್ನು ಮದೀನಕ್ಕೆ ತನ್ನ ಉರ್ದು ಕಾವ್ಯದಿಂದ ಕೈ ಬೀಸಿ ಕರೆದವರು....

ಹಿಜರಿ 1272, ಶವ್ವಾಲ್ 10ರಂದು
(1856 ಜೂನ್ 14 )
*ಅಹ್ಮದ್ ರಝಾಖಾನ್* (ರ)ರವರು ಉತ್ತರ ಪ್ರದೇಶದ ಬರೇಲಿಯಲ್ಲಿ ಜನಿಸಿದರು.

ತಂದೆಯವರಾದ ಮೌಲಾನ ನಖಿ ಅಲಿ ಖಾನ್ (ರ) ಹಾಗೂ ಪಿತಾಮಹರಾದ ಮೌಲಾನ ರಝಾ ಅಲಿ ಖಾನ್ (ರ) ಎಂಬಿಬ್ಬರು ಮಹೋನ್ನತರಾದ ಪಂಡಿತರಾಗಿದ್ದರು.
ತಂದೆಯವರು ಹಿಜರಿ 1297ರಲ್ಲಿಯೂ (1880), ಪಿತಾಮಹರು ಹಿಜರಿ 1282ರಲ್ಲಿಯೂ (1866) ವಫಾತಾದರು.

ಪಿತಾಮಹರಾದ ಮೌಲಾನಾ ರಝಾ ಅಲಿ ಖಾನ್ ರವರಾಗಿದ್ದರು *ಅಹ್ಮದ್ ರಝಾ* ಎಂಬ ಹೆಸರು ನಿರ್ದೇಶಿಸಿರುವುದು.

ಪ್ರವಾದಿ ﷺ  ಸ್ನೇಹದ ಪ್ರವಿಶಾಲ ಲೋಕದಲ್ಲಿ ಅನೇಕ ರಚನೆಗಳನ್ನು ರಚಿಸಿ ತನ್ನ ವ್ಯಕ್ತಿತ್ವವನ್ನು ಲೋಕಕ್ಕೆ ತಿಳಿಸಲು ಅವರಿಂದ ಸಾಧ್ಯವಾಯಿತು. ನಂತರದ ಕಾಲದವರಿಗೆ ಈ ಕ್ಷೇತ್ರದಲ್ಲಿ ರಚನೆಗಳ ನಡೆಸಿದವರೆಲ್ಲರಿಗೂ, ಮಹಾನರ ರಚನೆಗಳು ಅತ್ಯಧಿಕ ಉಪಯುಕ್ತವಾಯಿತ್ತು.

ಅಲ್ಲಾಮಾ ಇಖ್ಬಾಲ್ (ರ) ಒಳಪಟ್ಟ ಪ್ರವಾದಿ ﷺ ರವರ ಪ್ರಕೀರ್ತನಾ ರಚನೆಗಳನ್ನು ರಚಿಸಲು ಒಳ ಪ್ರೇರಣೆ ಲಭಿಸಿರುವುದು ಅಹ್ಮದ್ ರಝಾ ಖಾನ್ (ರ) ರವರ ರಚನೆಗಳಿಂದಾಗಿವೆ.

ಇಸ್ಲಾಮಿಕ ಲೋಕದಲ್ಲಿ ವಿಶ್ವಾಸದ ವಿಷಯಗಳಲ್ಲಿ ವ್ಯತಿಚಲಿಸಿದ  ನೂತನವಾದಿಗಳ ವಿರುದ್ಧವಾಗಿ ಮಹಾನವರು ಸಶಕ್ತವಾಗಿ ನೆಲೆಗೊಂಡರು.

ವಹ್ಹಾಬಿಸಂ ಉತ್ತರ ಭಾರತದಲ್ಲಿ ಬೇರೂರಲು ಶ್ರಮಿಸಿದಾಗ ಧೈರ್ಯದಿಂದ ಮುನ್ನುಗಿ ಜನರ ಎಡೆಯಲ್ಲಿ ಬೋಧವಲ್ಕರಣ ನಡೆಸಿ, ನವೀನವಾದಿಗಳ ವಿರುಧ್ಧ ಸಮರನ್ನೇ ಸಾರಿದರು. ಉತ್ತರ ಭಾರತದ ಮುಸ್ಲಿಂಗಳಿಗೆ ಆದರ್ಶ ಬೋಧನೆ, ಇಸ್ಲಾಮಿಕ ಸಂಸ್ಕೃತಿಯನ್ನು ಕಲಿಸಿ ಕೊಟ್ಟು, ವೈಜ್ಞಾನಿಕ ವಲಯದ ದಿಟ್ಟವಾದ ಸಂಭಾವನೆಗಳಿಂದ ವಿಶ್ವಾಸಿ ಹೃದಯಗಳಲ್ಲಿ ಅಹ್ಮದ್ ರಝಾ ಖಾನ್ (ರ) ರವರು ಚಿರ ಪ್ರಸಿದ್ಧಗೊಂಡರು.

*ಹನಫೀ* ಕರ್ಮಶಾಸ್ತ್ರದಲ್ಲಿ ಪೂರ್ಣ ಅರಿವು ಇದ್ದ ಮಹಾನರಿಗೆ ಕರ್ಮಶಾಸ್ತ್ರ ಗ್ರಂಥ ರಚನೆಯು ಪರಿಪೂರ್ಣ ಆಸಕ್ತಿಯ ವಿಷಯವಾಗಿತ್ತು.

ಗೌರವ ಪೂರ್ವಕವಾಗಿ
*ಅಹ್ಲಾ ಹಝ್ರತ್* ಎಂದಾಗಿದೆ ಉತ್ತರ ಭಾರತದ ಮುಸ್ಲಿಂಗಳ ಎಡೆಯಲ್ಲಿ ಮಹಾನರು ಗುರುತಿಲ್ಪಡುವುದು.

ಸುನ್ನತ್ತ್ ಜಮಾಅತ್ತಿನ ನೈಜ ವಿಶ್ವಾಸಧಾರೆಯನ್ನು ಬಲವಾಗಿ ವಿಶ್ವಾಸವಿರಿಸುವ ಮುಸ್ಲಿಂ ವ್ಯಕ್ತಿತ್ವ ವಾಗಿದೆ ಬರೇಲ್ವಿಯವರದ್ದೆಂದು ಪ್ರಸಿದ್ಧ.

ಸುನ್ನಿಗಳನ್ನು ಅಹ್ಲಾ ಹಝ್ರತ್ತಿನ ನಾಮಧೇಯದಲ್ಲಿ ಸೇರಿಸಿಯಾಗಿದೆ ಬರೇಲ್ವಿಗರು  ಎಂದು ಕರೆಯುತ್ತಿರುವುದು.

ಮಹಾನರು ಅಂತ್ಯ ವಿಶ್ರಮ ಹೊಂದುತ್ತಿರುವ ಪ್ರದೇಶವನ್ನು
*ಬರೇಲಿ ಶರೀಫ್* ಎಂದು ಗೌರವದಿಂದ ಮಾತ್ರವೇ ವಿಶ್ವಾಸಿಗಳು ಕರೆಯುವುದು.

*ಖುರ್ಆನ್ ವ್ಯಾಖ್ಯಾನ, ಹದೀಸ್, ಕರ್ಮಶಾಸ್ತ್ರ, ಫಿಲೋಸಫಿ, ತಜ್ ವೀದ್, ತಾರೀಖ್, ಅಖಾಯಿದ್, ಮ್ಯಾಥಮಾಟಿಕ್ಸ್, ಗೋಳಶಾಸ್ತ್ರ, ಭಾಷೆ, ತಸವ್ವವುಫ್,* ಮೊದಲಾದ ಹಲವಾರು ಜ್ಞಾನ ಶಾಖೆಗಳಲ್ಲಿ ಮಹಾನರು ಗ್ರಂಥಗಳನ್ನು ರಚಿಸಿದ್ದಾರೆ.  ಇಷ್ಟೊಂದು ಅಧಿಕ  ವೈಜ್ಞಾನಿಕ ರಂಗದಲ್ಲಿ ಒಂದೇ ಸಮಯದಲ್ಲಿ ಗ್ರಂಥ ರಚನೆ ಮಾಡಿದ ಖ್ಯಾತಿ ಒಂದೊಮ್ಮೆ ಮಹಾನರಿಗೆ ಮಾತ್ರ ಅರ್ಹವಾಗಿರಬಹುದು.

*55*ರಷ್ಟು ವಿಷಯಗಳಲ್ಲಾಗಿ ಸಾವಿರದಷ್ಟು ಗ್ರಂಥಗಳನ್ನು ಮಹಾನರು ರಚಿಸಿದ್ದಾರೆ.

ಉರ್ದು ಭಾಷೆಯಲ್ಲಿರುವಷ್ಟೇ ಗ್ರಂಥಗಳನ್ನು ಪಾರ್ಸಿ ಮತ್ತು ಅರಬಿ ಭಾಷೆಗಳಲ್ಲಿಯೂ ರಚಿಸಿದ್ದಾರೆ!

ವಿಶ್ವದ ವಿವಿಧ ದೇಶಗಳಲ್ಲಿ 25 ರಷ್ಟು ಕಾಲೇಜುಗಳಲ್ಲಿ #ಅಹ್ಲಾ_ಹಝ್ರತ್  ಕಲಿಸುವ ವಿಷಯವಾಗಿದೆ. ಹಲವಾರು ವಿಶ್ವವಿದ್ಯಾಲಯಗಳಲ್ಲಿ ಮಹಾನರ ಕಾವ್ಯಸಂಗ್ರಹಗಳನ್ನು ಹಾಗೂ ಬೇರೆ ಕೆಲವು ಗ್ರಂಥಗಳನ್ನು ಪಠ್ಯಪುಸ್ತಕದಲ್ಲಿ ಸೇರಿಸಲಾಗಿದೆ.
ಹಿಜರಿ ವರ್ಷ 1340, ಸಫರ್ 25ನೇ ಶುಕ್ರವಾರ ಮಧ್ಯಾಹ್ನ 2:38 ಕ್ಕೆ ಬರೇಲಿಯಲ್ಲಾಗಿತ್ತು ಮಹಾನುಭಾವರ ವಿಯೋಗ (ವಫಾತ್).

ವಿಶ್ವಾಸಿ ಸಮೂಹಕ್ಕೆ ಮಾರ್ಗದರ್ಶನ ನೀಡಿ, ವೈಜ್ಞಾನಿಕ ಲೋಕಕ್ಕೆ ಅತ್ಯಮೂಲ್ಯ ಕೊಡುಗೆಗಳನ್ನು ನೀಡಿಯಾಗಿದೆ ಧನ್ಯವಾದ ಆ ಪವಿತ್ರ ಜೀವನದ ಗಳಿಗೆಗಳು ಸಾಗಿರುವುದು..

ಮಹಾನರ ಅಂತ್ಯನಿಮಿಷಗಳಿಗೆ ಸಾಕ್ಷಿಯಾದ *ಮೌಲಾನ ಹುಸೈನ್ ರಝಾ ಖಾನ್* ಬರೆಯುತ್ತಾರೆ..

ಎಲ್ಲವೂ ಮೊದಲೇ ನಿಶ್ಚಯಿಸಿದಂತೆಯಾಗಿತ್ತು ಮಹಾನರುಗಳ ಅಂದಿನ ಸ್ವಭಾವ. ಸಮಯ ಮಧ್ಯಾಹ್ನ 1:56ಕ್ಕೆ ಮಹಾನರು ಸಮಯ ಕೇಳುತ್ತಾರೆ, ಗಡಿಯಾರವನ್ನು ಕೆಳಗೆ ಇಡಲು, ಚಿತ್ರಗಳನ್ನು ಕೋಣೆಯಿಂದ ತೆಗೆಯಲು ಹೇಳಿದರು.  ಕೋಣೆಯಲ್ಲಿ ಚಿತ್ರಗಳು ಇರಲಿಲ್ಲ.
ಕೂಟವಾಗಿ ನಿಂತಿರುವ ಜನರು ಆಶ್ಚರ್ಯಭರಿತರಾಗಿ ನೋಡುತ್ತಾ ಇದ್ದರು. ಆದರೆ ಕಾರ್ಡುಗಳು, ಕರೆನ್ಸಿ ಹಾಗೂ ಕವರುಗಳು ಎಂಬಿತ್ಯಾದಿಗಳನ್ನು ಉದ್ದೇಶಿಸಿಯಾಗಿತ್ತು ಮಹಾನವರು ಚಿತ್ರ ಎಂದು ಹೇಳಿರುವುದೆಂದು ವ್ಯಕ್ತಪಡಿಸಿದರು. ತದನಂತರ ಸಹೋದರನಾದ ಮೌಲಾನಾ ಮುಹಮ್ಮದ್ ರಝಾ ಖಾನ್ ನೊಂದಿಗೆ ವುಳೂಹ್ ಮಾಡಿ ಮುಸ್ಹಫ್ ನೊಂದಿಗೆ ಬರಲು ಆವಶ್ಯಪಟ್ಟರು. ಆಮೇಲೆ ಮತ್ತೊಂದು ಸಹೋದರನಾದ ಮುಸ್ತಫಾ ರಝಾಖಾನ್ ನ ಹತ್ತಿರ ಯಾಸಿನ್, ರಹ್ ದ್ ಸೂರಗಳ ಪಾರಾಯಣ ಮಾಡಲು ನಿರ್ದೇಶಿಸಿದ್ದರು.

ಯುಗಪುರುಷರಾದ ಮಹಾನರು  ನಮ್ಮಿಂದ ಬೇರ್ಪಡುವ ನಿಮಿಷಗಳು ಹತ್ತಿರವಾದವು. ಇನ್ನು ಕೆಲವೇ ನಿಮಿಷಗಳು ಮಾತ್ರ ಆ ಪವಿತ್ರ ಜೀವ ಬಾಕಿ ಇರುವುದು. ಮಹಾನರ ನಿರ್ದೇಶದಂತೆ 2 ಸೂರಾಃ ಗಳು ಪಾರಾಯಣ ಮಾಡಿ ಮುಗಿಸಿದ ಸಂದರ್ಭ, ಸಹೋದರನೊಂದಿಗೆ ಮಹಾನರವರು ಕೂಡ ಮೆಲು ದ್ವನಿಯಲ್ಲಿ ಖುರಾನ್ ಪಾರಾಯಣ ಮಾಡುತಿದ್ದರು. ಅದೃಶ್ಯ ಲೋಕದಿಂದ ನಿರ್ದೇಶನ ಸಿಕ್ಕಿದಾಗೆ ದೈನಂದಿನದ ಪ್ರಾರ್ಥನೆಗಳು, ಕೆಲವು ಪ್ರತ್ಯೇಕ ದ್ಸಿಕ್ರ್ ಹಾಗೂ ಪ್ರಾರ್ಥನೆಗಳಲ್ಲಿ ನಿರತರಾದರು.

ನಂತರ *ಕಲಿಮಃ* ಉಚ್ಚರಿಸಿದರು. ಶ್ವಾಸ ಎದೆಯಲ್ಲಿ ನಿಂತ ಹಾಗೆ ವಚನಗಳು ತುಟಿಗಳಲ್ಲಿ ಅಲುಗಾಡುವುದು ಕಾಣಲು ಸಾಧ್ಯವಾಯಿತು. ಒಂದು ನಿಮಿಷ ಮಹಾನವರುಗಳ ಮುಖ ಕಮಲ ಪ್ರಕಾಶಗೊಂಡಿತು. ಸೂರ್ಯಪ್ರಭೆ ಮುಖದ ಸುತ್ತಲೂ ಪಸರಿಸಿದ ರೀತಿಯಲ್ಲಿ ಆಗಿತ್ತು ಈ ಕ್ಷಣಗಳು.
ಆ ಪ್ರಕಾಶ ಅಪ್ರತ್ಯಕ್ಷವಾದಾಗಲೇ ಪವಿತ್ರವಾದ ಆ ಅತ್ಮವು ಅಲ್ಲಾಹನೆಡೆಗೆ ಯಾತ್ರೆಯಾಗಿತ್ತು. ಇನ್ನಾಲಿಲ್ಲಾಹ್....

ಬರೇಲಿಯಲ್ಲಿ ಮಹಾನರುಗಳ ಮಖ್ಬರದಲ್ಲಿ ಜನರ ನಿರಂತರವಾದ  ಜನಪ್ರವಾಹವು ಸದಾ ಸಮಯವೂ ಕಾಣಬಹುದು.

ಮಸೀದಿ ಮತ್ತು ದೀನಿ ಮತ ವಿಜ್ಞಾನ ಸಮುಚ್ಚಯವು ಮಖ್ಬರದ ಹತ್ತಿರವೇ ಇದೆ.

ನಮ್ಮ ಊರಿನ ದರ್ಸ್ ಸಂಪ್ರದಾಯವನ್ನು ಅನುಸ್ಮರಿಸುವ ರೀತಿಯಲ್ಲಿ ಬೆಳಿಗ್ಗೆ ಮಸೀದಿಯಲ್ಲೇ ದೀನಿ ವಿದ್ಯೆ ನಡೆಸುವುದು  ಆಕರ್ಷಣೀಯವಾಗಿದೆ.

ಫಜರ್ ನಮಾಜಿನ ನಂತರ ನಿತ್ಯವೂ
*ಮುಸ್ತಫಾ ಜಾನೆ ರಹ್ಮತ್ ಪೆ ಲಾಖೋ ಸಲಾಂ* ಎಂಬ ಪ್ರವಾದಿ ﷺ ಪ್ರಕೀರ್ತನೆ ಕಾವ್ಯ ಆಲಾಪಿಸಿಯಾಗಿದೆ ಜನರು ಮರಳಿ ಹೋಗುವುದು.

ಉತ್ತರ ಭಾರತದ ಮಖ್ಬರಗಳಲ್ಲಿ ನೆಲೆಗೊಳ್ಳುವ ಅನಾಚಾರಗಳು, ಸ್ತ್ರೀ ಪುರುಷ ಸಮ್ಮಿಲನವು ಇಲ್ಲಿ ಕಾಣಲಿಕ್ಕಿಲ್ಲ. ಮುತ್ತು ನಬಿ ﷺ ರವರ ಪವಿತ್ರ ಕೇಶ ಮಖ್ಬರದೊಂದಿಗೆ ಇರುವ ಕೋಣೆಯಲ್ಲಿ ಸಂರಕ್ಷಿಸಿಡಲಾಗಿದೆ. ಈ ಕೋಣೆಯ ಸಮೀಪದಲ್ಲಿಯು ಪ್ರಕೀರ್ತನೆ ಕಾವ್ಯಗಳನ್ನು ಆಲಾಪಿಸುವ ಪ್ರವಾದಿ ﷺ ಸ್ನೇಹಿಗಳನ್ನು ಕಾಣಬಹುದು.

ವರ್ಷದಲ್ಲಿ 2 ಸಲ ಮಾತ್ರ ಪ್ರತ್ಯೇಕ ಸಂರಕ್ಷಿಸಿದ ಪುಣ್ಯ ಪವಿತ್ರ ಕೇಶವನ್ನು ಹೊರ ತೆಗೆದು ಪ್ರದರ್ಶಿಸುವುದು.

ಝಿಯಾರತಿಗೆ ಬರುವ ಸ್ತ್ರೀಯರಿಗೆ ಪ್ರತ್ಯೇಕ ಸೌಕರ್ಯಗಳನ್ನು ಅಲ್ಲೇ ಏರ್ಪಡಿಸಲಾಗಿದೆ.

ಕೇರಳಿಯರ ಕುರಿತು ಅಲ್ಲಿಯ ವಿದ್ಯಾರ್ಥಿಗಳಿಗೆ ಒಳ್ಳೆಯ ಅಭಿಪ್ರಾಯವಾಗಿದೆ.
*ಶೈಖ್ ಅಬೂಬಕ್ಕರ್ ಅಹ್ಮದ್* (ಎ.ಪಿ ಉಸ್ತಾದ್) ರವರ ಕೇರಳದ ಇಸ್ಲಾಮಿಕ ನವಜಾಗರಣದ ಕುರಿತು ಉತ್ತರ ಭಾರತದ ವಿದ್ಯಾರ್ಥಿಗಳು ಹೇಳುವುದು ಕೇಳುವಾಗ ಯಾರು ಕೂಡ ಆಶ್ಚರ್ಯಚಕಿತರಾಗುವರು.

ಬರೇಲಿ ಶರೀಫಿನ ಪಂಡಿತರನ್ನು ಜೊತೆ ಸೇರಿಸಿ ದೇಶದ ಎಲ್ಲಾ ಸ್ಥಳಗಳಲ್ಲಿ *ಕಾಂತಪುರಂ ಉಸ್ತಾದರು* ನಡೆಸುವ ಜೀವ ಕಾರುಣ್ಯ ಪ್ರವರ್ತನೆಗಳು, ಐಕ್ಯ ಶ್ರಮಗಳ ಅಂಗೀಕಾರವನ್ನು ಹಾಗು ಉತ್ತರ ಭಾರತದ ಜನ ಸಮೂಹದ ಹಿಂದುಳಿದ ಅವಸ್ಥೆಯನ್ನು ಇಲ್ಲದಾಗಿಸಲು ಶ್ರಮಿಸುವ ಅವರ ಕಠಿಣ ಪರಿಶ್ರಮ ಅಪಾರವಾಗಿದೆ ಎಂದು ಅಲ್ಲಿಯವರು ಸದಾ ಹೇಳುತ್ತಾ ನೆನಪಿಸುತ್ತಾರೆ.

ಅಹ್ಮದ್ ರಝಾಖಾನ್ (ರ) ರವರ ಶಿಷ್ಯ ಸಂಪತ್ತು ವಿಶಾಲವಾಗಿದೆ.

ಕೇರಳದ ಪಂಡಿತ ಲೋಕದ ವಿಸ್ಮಯವಾಗಿದ್ದ *ಅಹ್ಮದ್ ಕೋಯ ಶಾಲಿಯಾತ್ತಿ* (ರ) ರವರ ಹನಫೀ ಕರ್ಮಶಾಸ್ತ್ರದ ಉಸ್ತಾದರಾಗಿದ್ದರು ಮಹಾನರು.

ಇಂದು ಕೂಡಾ ಉತ್ತರ ಭಾರತದ
ಮುಸ್ಲಿಂ ಜನ ಸಮೂಹದ ಜೀವನದ ಭಾಗವಾದ *ಮುಸ್ತಫಾ ಜಾನೆ ರಹ್ಮತ್ ಪೆ ಲಾಖೋ ಸಲಾಂ* ಎಂದು ಆರಂಭಿಸುವ *ಬೈತ್ತ್* ಪ್ರವಾದಿ ﷺ ರವರ ಪ್ರಕೀರ್ತನೆ ರಂಗದಲ್ಲಿ ಮಹಾನವರ ಸಂಭಾವನೆಗಳಲ್ಲಿ ಅತೀ ಹೆಚ್ಚು ಜನಪ್ರಿಯ ಪ್ರಚಾರ ಆರ್ಜಿಸಿದ ಸಾಲುಗಳಲ್ಲಿ ಒಂದಾಗಿ ನೆಲೆಗೊಂಡಿರುತ್ತದೆ. ಪ್ರವಾದಿ ﷺ ರವರ ಮೇಲೆ ಇರುವ ಸ್ನೇಹ, ಅರಿವು,  ವಿಶ್ವಾಸ ದೃಢತೆ ಮತ್ತು ಆಶಯ ಆದರ್ಶ ಬೋಧನೆಯನ್ನು ಪಸರಿಸಿ, ಆದರ್ಶ ವ್ಯತ್ಯಾಸ ಚಿಂತನೆಗಾರರನ್ನು ಕಠಿಣವಾಗಿ ಪ್ರತಿರೋಧಿಸಿದ  ಪ್ರಮುಖ ಪಂಡಿತರು, ಸೂಫಿವರ್ಯರು, ವೈಜ್ಞಾನಿಕ ಲೋಕದ ತೇಜಸ್ಸು ಆದ  ಹಝ್ರತ್ತ್ ಅಹ್ಮದ್ ಖಾನ್ (ರ)ರವರನ್ನು ಎಲ್ಲಾ ಕಾಲವೂ ಸ್ಮರಿಸುತ್ತಿದೆ.

ಮಹಾನರನ್ನು ಸಂದರ್ಶಿಸಲು, ಅವರ ಹಕ್ ಜಾಹ್ ಬರ್ಕತ್ತಿನಿಂದ ಅಲ್ಲಾಹು ನಮಗೆಲ್ಲರಿಗೂ ತೌಫೀಖ್ ನೀಡಿ ಅನುಗ್ರಹಿಸಲಿ ಆಮೀನ್.

ಮುಗಿಯಿತು..

✍ ಗಫೂರ್ ಬಾಯಾರ್

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...