ಝಿಯಾರತ್ತ್ ಕೇಂದ್ರ 4⃣8⃣ ಖುತ್ತುಬುಲ್ ಅಖ್ತಾಬ್ ಶಾಹುಲ್ ಹಮೀದ್ ವಲಿಯುಲ್ಲಾಹಿ (ರ). ನಾಗೂರ್ ಶರೀಫ್, ಚಿತ್ತೂರ್ ತಮಿಳುನಾಡು
ಝಿಯಾರತ್ತ್ ಕೇಂದ್ರ
4⃣8⃣
ಖುತ್ತುಬುಲ್ ಅಖ್ತಾಬ್ ಶಾಹುಲ್ ಹಮೀದ್ ವಲಿಯುಲ್ಲಾಹಿ (ರ). ನಾಗೂರ್ ಶರೀಫ್, ಚಿತ್ತೂರ್ ತಮಿಳುನಾಡು
ಹಿಜರಿ ವರ್ಷ 910 ಜಮಾದುಲ್ ಆಖಿರ್ 10 ಶುಕ್ರವಾರ ದಿನದ ರಾತ್ರಿಯ ಸಮಯದಲ್ಲಿ "ಖುತ್ತುಬುಲ್ ಅಖ್ತಾಬ್ ಅಲ್ ಫರ್ದುಲ್ ಮಜೀದ್ ಅಶೈಖ್ ಅಸ್ಸಯ್ಯಿದ್ ಅಬ್ದುಲ್ ಖಾದಿರ್ ಶಾಹುಲ್ ಹಮೀದ್ ಮಿರಾನ್ ಮುಹ್ಯಿದ್ದೀನ್ ಗಂಜುಸವಾಈ ಗಂಜು ಬಖ್ಶ್ (ಖ:ಸಿ) ರವರು ಜನಿಸಿದರು.
ವಿಶ್ವ ನೇತಾರರಾದ 'ಸಯ್ಯಿದುಲ್ ವುಜೂದ್' ಮುಹಮ್ಮದ್ ರಸೂಲುಲ್ಲಾಹಿ ﷺ ರವರಿಗೆ ತಲುಪುವ ಮಹನೀಯ ಪರಂಪರೆಯ ಒಂದು ಕೊಂಡಿಯಾಗಿದ್ದಾರೆ ಮಹಾನುಭಾವರು.
ಖುರೈಶಿ ಮನೆತನದಲ್ಲಿ ಹಾಶಿಮ್ ವಂಶದ ಸದಸ್ಯರಾಗಿ ಗೌಸುಲ್ ಅಹ್'ಳಮ್ ಮುಹ್ಯಿದ್ದೀನ್ ಅಬ್ದುಲ್ ಖಾದಿರ್ ಜಿಲಾನಿ (ರ) ಯುವರ ಸಂತಾನ ಪರಂಪರೆಯಲ್ಲಿ 11ನೇಯ ಪೌತ್ರರಾಗಿದ್ದಾರೆ ಮಹಾನವರು.
ತಂದೆಯವರು ಅಶೈಖ್ ಅಸ್ಸಯ್ಯಿದ್ ಅಬೂ ಯೂಸುಫ್ ಹಸ್ಸನ್ ಖುದ್ಸಿ (ರ). ಹಾಗೂ
ಅಸ್ಸಯ್ಯಿದ್ ಹಮಿಮುದ್ದೀನ್ (ರ) ಅವರ ಪುತ್ರಿಯಾದ ಉಮ್ಮ್ ಫಾತಿಮಾ (ರ). ಎಂಬ
ಸದ್ಘುಣರಾದ ಮಾತಾಪಿತರಿಂದ ಉತ್ತರ ಪ್ರದೇಶದ ಅಲಹಬಾದ್'ನ ಹತ್ತಿರ "ಮಾಣಿಕ್ಯಪ್ಪುರ್" ಎಂಬ ಊರಿನಲ್ಲಿ ಮಹಾನವರ ಜನನವಾಯಿತು.
ಮಹಾನರ ಜನನದ ಮೊದಲು ಸಯ್ಯಿದ್ ಯೂಸುಫ್ ಎಂಬ ಹೆಸರಿರುವ ಒಬ್ಬ ಮಗು ಅವರಿಗಿತ್ತು. ಬಾಲ್ಯಕಾಲದಲ್ಲೇ ಆ ಮಗು ಮರಣಗೊಂಡಿತು.
ತಮ್ಮ ಪ್ರೀತಿಯ ಮಗನ ಅಗಲುವಿಕೆಯಿಂದ ಮನ ನೊಂದಿರುವಾಗ ಆ ತಾಯಿಗೆ "ಒಂದು ಅಶರೀರ ವಾಣಿ ಕೇಳಿಸಿತು, ಓ ನನ್ನ ಅಡಿಯಾಳುಗಳೇ..! ನಾನು ದಯಾಪೂರ್ವ ನಿಮಗೆ ರಹ್ಮತ್ ನೀಡಿದೆನಾದರೂ ನನ್ನ ನೀತಿ ಪ್ರಕಾರ ಅದನ್ನು ಮರಳಿ ಪಡೆದಿರುವೆನು.
ಅದರಿಂದ್ದ ನೀವು ಕ್ಷಮಿಸಿರಿ..! ಅದಕ್ಕಿಂತ ಉತ್ತಮವಾದ ಓರ್ವ ಸಂತಾನವನ್ನು ನಾನು ನಿಮಗೆ ಕರುಣಿಸುವೆನು. ಆ ಮಗು ಜಗತ್ತಿನ ಗೌಸ್ ಆಗಿರುವರು.
ಇದನ್ನು ಕೇಳಿದ ದಂಪತಿಗಳು ಅತ್ಯಧಿಕ ಸಂತೋಷಗೊಂಡು, ಆ ಕ್ಷಣವೇ ಅಲ್ಲಾಹನನ್ನು ಸ್ತುತಿಸಿದರು.
ತಾಯಿಯ ಗರ್ಭದಲ್ಲೇ ಪವಾಡಗಳು (ಕರಾಮತ್ತುಗಳು)
ಗರ್ಭಸ್ಥ ಶಿಶು ಆಗಿರುವಾಗ ತಂದೆ ಹಸ್ಸನ್ ಖುದ್'ಸಿ (ಖ:ಸಿ) ರವರಿಗೆ ಮಾರಕವಾದ ಖಾಯಿಲೆ ತಗುಲಿ ದೈನಂದಿನ ರೋಗ ಅಧಿಕಗೊಂಡು ಚಿಕಿತ್ಸೆ ಫಲ ಶೂನ್ಯವಾಯಿತು. ಈ ವೇಳೆಯಲ್ಲಿ ಶೈತಾನ್ ವೇಷ ಬದಲಿಸಿ ಬಂದು ಅಲ್ಲಿ ನೆರೆದಿರುವ ಜನರು ಕೇಳುವ ರೀತಿಯಲ್ಲಿ ತಂದೆಯವರ ಬಳಿ ಶೈತಾನ್ ಹೇಳಿದನು; ನಿಮ್ಮ ಪತ್ನಿ ಗರ್ಭ ಧರಿಸಿದ ಮಗುವಿನ ಲಕ್ಷಣ ದೋಷದಿಂದಾಗಿದೆ ಈ ಮಾರಕ ರೋಗ ನಿಮಗೆ ತಗುಲಿರುವುದು. ಇದು ಕೇಳಿ ಅತೀವ ದುಃಖದಲ್ಲಾದ ಪ್ರಿಯ ತಾಯಿಯ ಬಳಿ ಗರ್ಭಸ್ಥ ಶಿಶು ಕರೆದು ಹೇಳಿತು; ತಾಯಿಯವರೇ, ನೀವು ದುಃಖಿಸಬೇಡಿ. ಅಲ್ಲಾಹು ನಿಮ್ಮನ್ನು ಸಹಾಯ ಮಾಡುವನು, ತಂದೆಯವರ ರೋಗವು ಕೂಡಲೇ ವಾಸಿವಾಗಬಹುದು. ಈ ವಿವರವನ್ನು ಮಹದಿಯವರು ತನ್ನ ಪತಿಗೆ ತಿಳಿಸಿದಾಗ ಅವರು ಇನ್ನಷ್ಟು ಸಂತೋಷಭರಿತರಾದರು.
ಅಂದೇ ಆ ತಂದೆಯವರ ಖಾಯಿಲೆಯು ಸಂಪೂರ್ಣವಾಗಿ ವಾಸಿಯಾಯಿತು.
೨. ಗರ್ಭಸ್ಥ ಶಿಶುವಿಗೆ 7 ತಿಂಗಳು ಪ್ರಾಯವಾದಾಗ ಊರಿಡೀ ಬರಗಾಲ ಆವರಿಸಿತು. ಇದರಿಂದ್ದ 3 ದಿವಸಗಳ ಕಾಲ ಮಾತಾಪಿತರಿಗೆ ಹಾಗೂ ಅಲ್ಲಿನ ನಾಗರಿಕರಿಗೆ ಆಹಾರ ಲಭಿಸದಾಯಿತು.
ಆಗ ಗರ್ಭಸ್ಥ ಶಿಶು ಗರ್ಭದಿಂದ ತನ್ನ ಪ್ರೀತಿಯ ತಾಯಿಯನ್ನು ಕರೆದು ಹೇಳಿತು.
ಓ.. ಪ್ರಿಯ ಉಮ್ಮಾ.. ನೀವು ಆಹಾರದ ಪಾತ್ರವನ್ನು ಒಲೆಯಲ್ಲಿ ಇಡಿರಿ. ಅಲ್ಲಾಹನ ಔದಾರ್ಯದಿಂದ ನಿಮಗೆ ಆಹಾರ ಲಭಿಸುವುದು.
ಮಗುವಿನ ಈ ಮಾತು ಆ ತಕ್ಷಣವೇ ಸತ್ಯವಾಯಿತು. ಪಾತ್ರೆಯಲ್ಲಿ ತುಂಬಾನೇ ಆಹಾರಗಳು. ಆ ಕುಟುಂಬದ ಹಸಿವು ನೀಗುವವರೆಗೂ ಅವರು ಭಕ್ಷಿಸಿದರು. ಸ್ವಲ್ಪವೂ ಕಡಿಮೆಯಾಗಿಲ್ಲ. ನಂತರ ಅಲ್ಲಿಯ ಊರಿನವರೆಲ್ಲರೂ ಈ ಆಹಾರದಿಂದ ಹಸಿವು ನೀಗಿಸಿದರು. ಅವರು ಅಲ್ಲಾಹನನ್ನು ಸ್ತುತಿಸಿದರು.
ಆ ಊರಿನ ಎಲ್ಲರ ಹಸಿವೂ ನೀಗಿದ ಕಾರಣದಿಂದ ಅವರು ಅಲ್ಲಾಹನನ್ನು ಸ್ತುತಿಸಿದರು.
ಒಂದು ದಿನ ರಾತ್ರಿ ತಹಜ್ಜುದ್ ನಮಾಝ್ ಮಾಡಲು ನೀರು ಸೇದಲು ಬಾವಿಯ ಹತ್ತಿರ ತಲುಪಿದ ಪ್ರಿಯ ತಾಯಿಯವರ ಕೈಯಿಂದ ನೀರಿನ ಕೊಡ ಬಾವಿಯೊಳಗೆ ಬಿತ್ತು. ಇನ್ನು ಏನು ಮಾಡುವುದೆಂದು ಅಲೋಚಿಸಿ ತನ್ನ ತಹಜ್ಜುದ್ ನಮಾಝ್ ಮೊಟಕಾಗಬಹುದೋ ಎಂದು ಭಯಭೀತರಾಗಿ ಮನಸ್ಸು ಚಂಚಲಗೊಳ್ಳಲು ಪ್ರಾರಂಭವಾದಾಗ ಆ ತಾಯಿಯ ಗರ್ಭಸ್ಥ ಶಿಶು; *ಓ.. ಉಮ್ಮಾ.. ನೀವು ಭಯಪಡದಿರಿ, ಎಂದಾಗಲೇ ಆ ತಾಯಿ ನೋಡುತ್ತಲೇ ತನ್ನ ಕಾಲಿನ ಹತ್ತಿರ ನೀರು ತುಂಬಿದ ನೀರಿನ ಕೊಡ ಕಾಣಲಾಯಿತು. ಅದ್ಭುತದೊಂದಿಗೆ ಅದಕ್ಕಿಂತಲೂ ಮಿಗಿಲಾದ ಸಂತೋಷದೊಂದಿಗೆ ಮಹದಿಯವರು ಅಲ್ಲಾಹನಿಗೆ ಸ್ತುತಿ ಅರ್ಪಿಸಿದರು.*
ಫಾತಿಮಾ ಬೀವಿ (ರ) ರವರು 6 ತಿಂಗಳ ಗರ್ಭಿಣಿಯಾಗಿದ್ದಾಗ ಒಮ್ಮೆ ಖಿಳ್'ರ್ ನಬಿ (ಅ) ರವರು ಪ್ರತ್ಯಕ್ಷಪಟ್ಟು ಹೇಳಿದರು; *ಓ.. ಫಾತಿಮಾ: (ರ) ನಿಮ್ಮ ಉದರದಲ್ಲಿರುವ ಮಗು ಓರ್ವ ಖುತುಬ್ ಆಗಿದ್ದಾರೆ. ಹಾಗೆಯೇ ಹಲವಾರು ವಿಶೇಷತೆಗಳು ಹೇಳಿದ ನಂತರ, ಮಗುವಿಗೆ ಅಬ್ದುಲ್ ಖಾದಿರ್ ಎಂದು ನಾಮಕರಣ ಮಾಡಲು ನಿರ್ದೇಶಿಸಿದರು.*
ಹೀಗೆ ಗರ್ಭಸ್ಥದಲ್ಲೇ ಅದ್ಬುತಗಳ ಸರ್ವಸ್ವವಾದರು.
ಜೀವರಾಶಿಗೆ ಸಂಪೂರ್ಣವಾಗಿ ಸನ್ಮಾರ್ಗ ನೀಡಿ ಸತ್ಯದೆಡೆಗೆ ದಾರಿ ತೋರಿಸಿದ ಆತ್ಮಜ್ಞಾನ ಜ್ಯೋತಿಯಾಗಿದ್ದಾರೆ ನಾಗೂರ್'ದಾನ ಮಹಾನವರು.
ಮಹಾ ಅದ್ಬುತಗಳಾಗಿ ಎ.ಡಿ.1489ರಲ್ಲಿ ಆ ತಾಯಿ ಮಗುವಿಗೆ ಜನ್ಮವಿತ್ತರು. ಕಂದನನ್ನು ಖಿಳ್'ರ್ ನಬಿ (ಅ) ಕೈಗೆತ್ತಿದರು.
ಪವಿತ್ರ ನಾಲಗೆಯಿಂದ ಅಝಾನ್ ಕೊಟ್ಟರು. ಸಯ್ಯಿದ್ ಅಬ್ದುಲ್ ಖಾದಿರ್ ಎಂದು ನಾಮಕರಣ ಮಾಡಿದರು. ಜೊತೆಗಿದ್ದ ಇಲ್ಯಾಸ್ ನಬಿ (ಅ) ರವರು ಮೂರು ಬಾರಿ ಹೆಸರನ್ನು ಉಚ್ಛರಿಸಿದರು. ನಂತರ ಇಬ್ಬರೂ ಅಪ್ರತ್ಯಕ್ಷರಾದರು.
ಶೈಶವ ದಶಕಗಳ ಮಹಾ ಅದ್ಬುತಗಳಲ್ಲಿ ಒಂದು, ರಮಳಾನ್ ತಿಂಗಳಲ್ಲಿ ಕಾರ್ಮೋಡವೃತವಾದ ಆಕಾಶವಾದರಿಂದ್ದ ಚಂದ್ರನನ್ನು ಕಾಣಲು ಸಾಧ್ಯವಾಗದೆ ಜನರು ಬೇಸರದಲ್ಲಿದ್ದ ಸಂದರ್ಭ..
ನಿದ್ರೆಯಿಂದ ಎಚ್ಚೆತ್ತ ಕೂಡಲೇ ಎದೆಹಾಲು ಕುಡಿಯುವ ವಾಡಿಕೆ ಇರುವ ಮಗುವಿಗೆ ಪ್ರಿಯ ಮಾತೆಯು ಎಷ್ಟೇ ಎದೆಹಾಲು ಉಣಿಸಲು ಶ್ರಮಿಸಿದರೂ ಕುಡಿಯದೆ ಇರುವಾಗಲೇ ವಿಷಯ ತಿಳಿಯುದು. ಅಂದು ಉಪವಾಸ ಆರಂಭವಾಗಿದೆ ಎಂದು, ಈ ವಿಷಯವನ್ನು ಜನರಿಗೆ ತಿಳಿಸಲಾಯಿತು. ಅಂದು ಉಪವಾಸವಾಗಿದೆ ಎಂದು ಊರಿಡೀ ಘೋಷಣೆ ಮಾಡಲಾಯಿತು. ಇದರಿಂದ್ದ ಮಗು ಪ್ರಸಿದ್ಧರಾದರು.
ಮಗುವನ್ನು ಕಾಣಲು ಬರುವವರು ಮಗುವನ್ನು ಎತ್ತಿ, ಅಲ್ಲಾಹುವೇ ಈ ಮಗುವಿನ ಮುಖಾಂತರ ನಮ್ಮ ಸಮಸ್ಯೆಗಳಿನ್ನು ಪರಿಹರಿಸು ಎಂದು ಬೇಡಿದ ಕೂಡಲೇ ಅವರ ಕಾರ್ಯಗಳು ನೆರವೇರುತ್ತಿತ್ತು.
*ಬಾಲ್ಯ ಕಾಲ*
ಬಾಲ್ಯಕಾಲ ಜೀವನವೇ ಪರಿಶುದ್ಧಿಯಿಂದಲೂ, ಸೂಕ್ಷ್ಮತೆಯಿಂದಲೂ ಕೂಡಿತ್ತು.
ಸಾಮಾನ್ಯ ಮಕ್ಕಳಂತೆ ವಿನೋದಗಳಲ್ಲಿ ನಿರತರಾಗುವ ಅಭ್ಯಾಸವಿರುತ್ತಿರಲಿಲ್ಲ.
ಉಳಿದ ಮಕ್ಕಳು ಆಡುವ ಸಂದರ್ಭದಲ್ಲಿ ಮಗುವಾದ ಅಬ್ದುಲ್ ಖಾದಿರ್ (ರ) ಯಾವುದಾದರೂ ವೃಕ್ಷದ ಕೆಳಗೆ ಕುಳಿತು ನೀಲಾಕಾಶವನ್ನು ನೋಡಿ ಅಲ್ಲಾಹನ ಚಿಂತೆಯಲ್ಲಿ ಮಗ್ನರಾಗುತ್ತಿದರು.
ಹೀಗೆ ಇರುವಾಗ ಒಮ್ಮೆ ಒಂದು ಮರದ ಬುಡದಲ್ಲಿ ಧ್ಯಾನಮಗ್ನವಾಗಿದ್ದ ಮಗುವನ್ನು ಸಮೀಪಿಸಿ ಬಾಯಿ ತೆರೆಯಲು ಒಬ್ಬರು ಆವಶ್ಯಪಟ್ಟರು. ಮಗು ಬಾಯಿ ತೆರೆದಾಗ 3 ಸಲ ತನ್ನ ಉಗುಳು ನೀರನ್ನು ಮಗುವಿನ ಬಾಯಿಗೆ ಉಗುಳಿದರು.
ಶುಭ್ರವಸ್ತ್ರದಾರಿಯಾದ ಆ ಮನುಷ್ಯನ ಹತ್ತಿರ ನೀವು ಯಾರೆಂದು ಕೇಳಿದಾಗ, ನಾನಾಗಿದ್ದೇನೆ *ಖಿಳ್'ರ್* (ಅ) ಎಂದು ಉತ್ತರಿಸಿದರು.
ಇದರ ನಂತರವೂ ಹಲವು ಸಲ ಖಿಳ್'ರ್ ನಬಿ (ಅ) ರನ್ನು ಭೇಟಿಯಾಗಿದ್ದರು.
*ವಿದ್ಯಾಭ್ಯಾಸ*
ಯುವತ್ವಕ್ಕೆ ತಲುಪಿದ ಮಹಾನವರು ವಿದ್ಯಾಭ್ಯಾಸವನ್ನು ಅತೀ ವೇಗದಲ್ಲಿ ಪೂರ್ತಿಗೊಳಿಸಿದರು.
*ಖುರ್'ಆನ್, ತಫ್'ಸೀರ್, ಹದೀಸ್, ಫಿಖ್ಹ್, ಚರಿತ್ರೆ, ಭೂಗೋಳ ಶಾಸ್ತ್ರ, ಗಣಿತ, ತತ್ವ ಶಾಸ್ತ್ರ, ತರ್ಕ ಮೊದಲಾದ ಸರ್ವ ಜ್ಞಾನಗಳಲ್ಲಿಯೂ ತೇರ್ಗಡೆ ಹೊಂದಿದವರಾಗಿದ್ದರು.*
ಬಾಲ್ಯಕಾಲದಿಂದಲೇ ಅತಿ ಕಡಿಮೆ ಮಾತನಾಡುವ ಅಭ್ಯಾಸವಾಗಿತ್ತು ಅವರದ್ದು. ಕಲಿಯುವ ಪ್ರಾಯದಲ್ಲಿಯೂ ಮಾತು, ಭಾವನೆ, ಕಾರ್ಯ ಚಟುವಟಿಕೆ ಎಂಬಿತ್ಯಾದಿಗಳಲ್ಲಿ ಓರ್ವ ಸೂಫಿಯ ರೀತಿಯ ನಡತೆಯಾಗಿತ್ತು.
ದಿನ ಕಳೆದಂತೆ ಅಲ್ಲಾಹನನ್ನು ತಿಳಿಯುವ ಆಗ್ರಹ ವರ್ಧಿಸಿಸುತಿತ್ತು. ಇದಾಕ್ಕಾಗಿ ಒಬ್ಬ ಸಿರಾತುಲ್ ಮುಸ್ತಕೀಂ ಆದ ಹಾದಿಯನ್ಮು ತೋರಿಸುವವರನ್ನು ಅನ್ವೇಷಣೆ ಮಾಡುತ್ತಿದ್ದರು. ಇದಕ್ಕಿರುವ ದಾರಿಗಳನ್ನು ಪ್ರಿಯ ಮಾತಾಪಿತರು ಸಿದ್ದಪಡಿಸಿ ಕೊಟ್ಟರು.
ಹೀಗೆ ಹಿಜರಿ ವರ್ಷ 928 ಜುಮಾದುಲ್ ಆಖಿರ್'ನ ಒಂದು ಸೋಮವಾರದಂದು ಉತ್ತಮವಾದ ಗುರುವನ್ನು ಹುಡುಕುತ್ತಾ ಯಾತ್ರೆ ಹೊರಟರು.
18 ವರ್ಷ ಪ್ರಾಯಕ್ಕೆ ತಲುಪಿದ ಮಹಾನರು ತನ್ನ ಮಾತಾಪಿತರನ್ನು, ಸ್ನೇಹಿತರನ್ನು, ಕುಟುಂಬದವರನ್ನು ಊರಿನವರನ್ನು, ತನ್ನ ಮುಂದೆ ಒಂದು ನೆರಳಾಗಿ ಮಾತ್ರ ಕಂಡರು. ಅವರಿಗೆ ತನ್ನ ಹೃದಯದಲ್ಲಿ *"ಅಲ್ಲಾಹ್"* ಎಂಬ ಪರಮ ಗುರಿ ಪ್ರಾಪ್ತಿಸುವ ಚಿಂತೆ ಮಾತ್ರವಾಗಿತ್ತು.
ಆ ಸಾತ್ವಿಕ ಜೀವನ ಎಲ್ಲರಿಗೂ ಮಾದರಿಯೋಗ್ಯವಾಗಿತ್ತು. ಇಲಾಹಿಯೆಡೆಗೆ ಇರುವ ಪ್ರಯಾಣಕ್ಕೆ ಅಡ್ಡಿಪಡಿಸುವವರಿಗೆ ಅವರು ಕನಿಷ್ಟ ಬೆಲೆ ಕೂಡಾ ಕಲ್ಪಿಸುತ್ತಿರಲಿಲ್ಲ. ಪ್ರಾಪ್ತರಾದ ಗುರುವನ್ನು ಹುಡುಕುತ್ತಾ ಮೈಲುಗಳು ದಾಟಿಯಾದರೂ ಕಂಡು ಹಿಡಿಯುತ್ತಿದ್ದರು.
ಹಿಜರಿ ವರ್ಷ 928ರ ನಂತರ ಶೈಖ್'ಅನ್ನು ಹುಡುಕಿಕೊಂಡು ಹೊರಟಿರುವುದು ಸಾಮಾನ್ಯ ವ್ಯಕ್ತಿಯಾಗಿರಲಿಲ್ಲ ಆಗಲೇ ಅಧ್ಯಾತ್ಮಿಕತೆಯ ಉನ್ನತ ಸ್ಥಾನಕ್ಕೆರಿದ ಮಹಾನರಾಗಿದ್ದರು ಶಾಹುಲ್ ಹಮೀದ್ (ಖ:ಸಿ) ರವರು.
(ಜ್ಞಾನಿಗಳು ಎಂದು ಸ್ವತಃ ತನ್ನನ್ನು ತಾನೇ ಹೇಳಿಕೊಂಡು ನಡೆಯುವ ಅಲ್ಪಜ್ಞಾನಿಗಳು ಈ ಸಾತ್ವಿಕ ಜೀವನವನ್ನು ಕಲಿಯುತ್ತಿರುತ್ತಿದ್ದರೆ ಅವರ ಜೀವನವು ಕೂಡಾ ಧನ್ಯವಾಗುತ್ತಿತ್ತು.)
ಕಣ್ಣು ಮುಚ್ಚಿ ಕತ್ತಲು ಮಾಡುವವರು ಸ್ವಾರ್ಥವನ್ನು ಬಿಟ್ಟು ಒಳ್ಳೆಯ ಮನಸ್ಸಿನೊಂದಿಗೆ ಚಿಂತಿಸಬೇಕು.
ಪರಿವರ್ತನೆಗೆ ತಯಾರಾಗಬೇಕು. ಎಂದು
ಆ ಯಾತ್ರೆಯಲ್ಲಿ ಜೊತೆಗಿದ್ದ ಸಹಯಾತ್ರಿಕರಾಗಿದ್ದ ಬಾಲಿಗ್ ಊರಿನವರಾದ "ಮುಈನುದ್ದೀನ್' (ಖ:ಸಿ) ಎಂಬವರೊಂದಿಗೆ ಶೈಖವರು ಉಪದೇಶಿಸಿದರು.
ಅಲ್ಲಾಹನ ಭಯ ಮತ್ತು ಭಕ್ತಿ ಯಾವಾಗಲೂ ಜೀವನದಲ್ಲಿ ಅಳವಡಿಸಬೇಕಾದ ಕಾರ್ಯವಾಗಿದೆ.
ಇಸ್ಲಾಮಿನಲ್ಲಿ 2 ಭಾಗಗಳು ಮಾತ್ರ ಇರುವುದು, ಅದು ಬಾಹ್ಯ ಮತ್ತು ಆಂತರಿಕ ಇವೆರಡೂ ಸಂಶುದ್ಧಿಯಾಗಿರಬೇಕು. ಹೀಗೆ ಶರೀಅತ್ತ್ ಮತ್ತು ತ್ವರೀಖತ್ತ್ ಸಮನ್ವಯಪಡುವುದಾಗಿದೆ ಪರಿಪೂರ್ಣ ದೀನುಲ್ ಇಸ್ಲಾಂ ಎಂಬ ಅರಿವು ವಿಶ್ವಕ್ಕೆ ಕಲಿಸಿದರು.
ಮಹಾನುಭಾವರು ದೀರ್ಘವಾದ ಯಾತ್ರೆ ಮುಂದುವರಿಸಿ, ಮಧ್ಯಪ್ರದೇಶ'ದ ಗ್ವಾಲಿಯರ್'ನ ಹಲವಾರು ಶಿಷ್ಯಂದಿರುಗಳ ಆತ್ಮೀಯ ಕೇಂದ್ರವೂ ಹಾಗು ತನ್ನ ಆತ್ಮೀಯ ಗುರುವೂ ಆದ "ಆಶೈಖ್ ಅಸ್ಸಯ್ಯಿದ್ ಮುಹಮ್ಮದುಲ್ ಗೌಸ್ (ಖ:ಸಿ) ರವರ ಸನ್ನಿದಿಗೆ ತಲುಪಿ ಬೈಅತ್ತ್ ಗೈದರು.
ನಂತರದ ಒಂದೊಂದು ನಿಮಿಷಗಳೂ ಅವರ್ಣಿಯಮಯವಾಗಿತು.
ಆತ್ಮೀಯ ಜ್ಞಾನದ ಜೊತೆ, ಮುಖದಲ್ಲಿ ಮಂದಹಾಸವು, ಪರಮಾನಂದವು ಕಾಣುವ ಅದ್ಬುತ ನಿಮಿಷಗಲಾಗಿತ್ತು.
ಶಿಷ್ಯನ ಪ್ರತಿಭೆಯನ್ನು ಲಕ್ಷ್ಯ ಸ್ಥಾನಕ್ಕೆ ತಲುಪಿಸಲು ಗುರುವಿಗೆ ಅನಾಯಾಸವಾಯಿತು.
ಆ ಆತ್ಮೀಯ ಹೂದೋಟದಲ್ಲಿ ಸುಮಾರು 10 ವರ್ಷದ ಜೀವನದಿಂದ ಅಲ್ಲಾಹನನ್ನು ತಿಳಿಯುವ ರೀತಿಯಲ್ಲಿ ತಿಳಿದು, ಗುರಿ ಮುಟ್ಟಿದ ಶಿಷ್ಯನನ್ನು ತನ್ನ ಖಿಲಾಫತ್ತ್ ನೀಡಿ ಅನುಗ್ರಹಿಸಿದರು.
ತದನಂತರ 400ರಷ್ಟು ಫಕೀರುಗಳೊಂದಿಗೆ ಶೈಖ್ ಶಾಹುಲ್ ಹಮೀದ್ (ಖ:ಸಿ) ರವರು ಒಳ್ಳದ ಮನಸ್ಸಿನಿಂದ ತನ್ನ ಊರಿಗೆ ಹೊರಟರು.
ಊರಿಗೆ ತಲುಪಿ ಪ್ರಿಯ ಮಾತಾಪಿತರುಗಳನ್ನು ಕಂಡು ಅನುಗ್ರಹವನ್ನು ಪಡೆದರು.
ನಂತರ ಹಜ್ಜ್ ಕರ್ಮಕ್ಕಾಗಿ ಹರಂ ಶರೀಫ್'ಗೆ ಹೋದರು. ಸುಮಾರು 7 ವರ್ಷದವರೆಗೆ ಅಲ್ಲಿ ತಂಗಿದರು. ಆಮೇಲೆ ಹಡಗು ಮೂಲಕ ಕಣ್ಣೂರು, ಕಲ್ಲಿಕೋಟೆ, ಪೊನ್ನಾನಿ, ಮಾಲ್'ದ್ವೀಪ್, ಶ್ರೀಲಂಕಾ ಮೊದಲಾದ ಹಲವು ಸ್ಥಳಗಳಲ್ಲಿ ಯಾತ್ರೆಕೈಗೊಂಡು ಕೊನೆಗೆ ನಾಗವೃಕ್ಷಗಳ ನಾಡಾದ "ನಾಗೂರ್" ಎಂಬ ಊರಿಗೆ ತಲುಪಿ ಅಲ್ಲಿ ವಾಸ್ತವ್ಯ ಹೂಡ್ಡಿದರು.
ಆ ಊರಿಗೆ ಆಗಮಿಸಿದ ಸುಂದರನಾದ ಯುವಕನನ್ನು ಕಂಡು ವಿವಾಹ ಆಲೋಚನೆಯೊಂದಿಗೆ ಬಂದಂತಹ ಕೆಲವು ಮಾತಾಪಿತರುಗಳ ಹತ್ತಿರ, "ನನ್ನ ಹೃದಯದಲ್ಲಿ ಅಲ್ಲಾಹನಿಗೆ ಮಾತ್ರವೇ ಸ್ಥಾನವಿರುವುದು" ಎಂದು ಹೇಳಿ ಅವರನ್ನು ಹಿಂದಿರುಗಿಸುತ್ತಿದ್ದರು.
*ಅದ್ಬುತ ಬಾಲಕ ಯೂಸುಫ್ ಜನಿಸುವರು*
ಪಾಕಿಸ್ತಾನ್'ನ ಲಾಹೋರ್ ನಗರದ ಅತೀ ದೊಡ್ಡ ಸಂಪತ್ತಿನ ಒಡೆಯರು ಮಾರ್ಗದರ್ಶಿಯೂ ಆಗಿದ್ದ ನೂರುದ್ದೀನ್ ಮುಫ್ತಿ (ಖ:ಸಿ) ಎಂಬವರು.
ಹಲವಾರು ಸುಖ ಸೌಕರ್ಯಗಳು ಇದ್ದರೂ, ಮಧ್ಯ ವಯಸಾದರೂ ಕೂಡಾ ಮಕ್ಕಳು ಇಲ್ಲದಿದ್ದರಿಂದ್ದ ಅತೀವ ದುಃಖದಲ್ಲಿದ್ದರು. ಹಲವಾರು ಮಹಾತ್ಮರುಗಳಿಗೆ ಸೇವೆ ಮಾಡಿ ದುವಾ ಮಾಡಿಸುತ್ತಿದ್ದರು. ನಿಮಗೆ ಸಂತಾನ ಭಾಗ್ಯವಿಲ್ಲ ಎಂದು ಕೆಲವು ಮಹಾತ್ಮರು ಹೇಳಿದ್ದರು. ಈ ಸಂದರ್ಭದಲ್ಲಾಗಿತು ಶಾಹುಲ್ ಹಮೀದ್ (ಖ:ಸಿ) ರವರ ಹೆಸರು ಮತ್ತು ಪ್ರಸಿದ್ದಿಯನ್ನು ಅರಿತ ಅವರು ಒಮ್ಮೆ ಮಹಾನವರನ್ನು ಸಮೀಪಿಸಿ ಅವರ ಪಾದಗಳಲ್ಲಿ ಮುಖವನ್ನು ಒತ್ತಿಟ್ಟು ಕಣ್ಣೀರಿನೊಂದಿಗೆ ಸಂತಾನ ಪ್ರಾಪ್ತಿಗಾಗಿ ಪ್ರಾರ್ಥಿಸಲು ಆವಶ್ಯಪಟ್ಟರು.
ಸಾತ್ವಿಕರಾದ ನೂರುದ್ದೀನ್ ಮುಫ್ತಿ (ಖ:ಸಿ)ರವರ ಮನೋವೇದನೆಯನ್ನು ಮನಗಂಡ ಮಹಾನರು ಅವರನ್ನು ಸಂತೈಸಿದರು.
ನಂತರ ಅವರ ಮತ್ತು ಪತ್ನಿಯ ಕುಲ ಮಹಿಮೆಯನ್ನು, ಪರಿಶುದ್ಧಿಯನ್ನು ತಿಳಿದ ಮಹಾನರು ತನ್ನ ಪವಾಡದಿಂದ ಅವರಿಗೆ ಒಬ್ಬ ಸಂತಾನನನ್ನು ಕರುಣಿಸಲು ಪ್ರಾರ್ಥಿಸಲು ಸಮ್ಮತಿಸಿದರು.
ಚಿಂತಾಮಗ್ನರಾಗಿ ಅಲ್ಪ ಸಮಯ ತಲೆ ತಗ್ಗಿಸಿ ಕುಳಿತ ನಂತರ ಮುಫ್ತಿ (ಖ:ಸಿ)ಯವರೊಂದಿಗೆ ಮಹಾನರು ವೀಳ್ಯದೆಲೆ ಮತ್ತು ಅಡಿಕೆಯನ್ನು ಕೊಂಡು ಬರಲು ಹೇಳಿದರು. ಮಹಾನುಭಾವರು ಅಲ್ಲಾಹನ ನಾಮ ಉಚ್ಛರಿಸಿ ಅದನ್ನು ಬಾಯಿಗೆ ಹಾಕಿದರು.
ಸ್ವಲ್ಪ ಸಮಯದ ವರೆಗೆ ಧ್ಯಾನದಲ್ಲಿ ಕುಳಿತ ನಂತರ ತನ್ನ ಬಾಯಿಯಲ್ಲಿರುವ ವೀಳ್ಯದೆಲೆ ಮತ್ತು ಅಡಿಕೆಯನ್ನು ತೆಗೆದು ನೂರುದ್ದೀನ್ ಮುಫ್ತಿ (ಖ:ಸಿ)ಯವರಿಗೆ ಕೊಟ್ಟು, ಪತ್ನಿಯ ಬಾಯಿಗೆ ಹಾಕಿ ಕೂಡಲೇ ನುಂಗಲು ನಿರ್ದೇಶಿಸಿದರು. ಮಹದಿ ಹಾಗೆ ಮಾಡಿದರು.
ನಂತರ ಹೇಳಿದರು, ಇದರಿಂದ ನಿಮಗೊಂದು ಗಂಡು ಮಗು ಜನಿಸಲಿದೆ ಎಂದೂ, ನನ್ನ ಮರಣಗೊಂಡ ಸಹೋದರ ಯೂಸುಫ್'ರವರ ಹೆಸರು ಮಗುವಿಗೆ ನಾಮಕರಣ ಮಾಡಬೇಕೆಂದು ನಿರ್ದೇಶಿಸಿದರು.
5ನೇ ಪ್ರಾಯದಲ್ಲಿ ಖುರ್'ಆನ್ ಕಂಠಪಾಠ ಮಾಡುವರೆಂದೂ, 7ನೇ ವಯಸ್ಸಿನಲ್ಲಿ ತನ್ನ ಜನನಕ್ಕೆ ಕಾರಣ ಯಾರೆಂದು ಅನ್ವೇಷಣೆ ಮಾಡುವರೆಂದು, ತನಗೆ ಅವರು ಏನು ಹದ್'ಯ ನೀಡಿರುವುದೆಂದು ಕೇಳುವಾಗ ಈ 'ಮಿಸ್'ವಾಕನ್ನು' ಕೊಡಬೇಕೆಂದು ಸೂಚಿಸಿದರು, ಆ ಮಹಾತ್ಮರ ಬಳಿ ಹೋಗಲು ಸಮ್ಮತ ಕೇಳಿದರೆ ನೀವು ಅನುಮತಿ ನೀಡಬೇಕೆಂದೂ ಹೇಳಿ ಶೈಖ್'ರವರು ಯಾತ್ರೆ ಹೇಳಿ ಅಲ್ಲಿಂದ ಹೊರಟು ಹೋದರು.
ನಂತರ ಆ ಮಗು ಜನಿಸಿತು. ಹೇಳಿದ ಪ್ರಕಾರ ಯೂಸುಫ್ (ಖ:ಸಿ) ಎಂಬ ಹೆಸರು ಇಡಲಾಯಿತು. ಶೈಖ್'ರವರು ಸೂಚಿಸಿದ ಹಾಗೆ 7 ನೇ ವಯಸ್ಸಾದಾಗ ಮಹಾತ್ಮರನ್ನು ಅನ್ವೇಷಿಸಿದಾಗ, ಮಾತಾಪಿತರು ವಿವರಿಸಿ ಕೊಟ್ಟರು. ನಂತರ ತಂದೆತಾಯಿಯವರ ಸಮ್ಮತದೊಂದಿಗೆ ನಾಗೂರ್ ಪಟ್ಟಣಕ್ಕೆ ತಲುಪಿದರು.
*ಮಹಾನುಭಾವರಿಗೆ ವಿಷ ಉಣಿಸಲಾಗುತ್ತದೆ.*
ಶೈಖ್ ಅವರನ್ನು ವಧಿಸಲು ತೀರ್ಮಾನಿಸಿ ಅಲ್ಲಿಯ ರಾಜನು ದೊಡ್ಡದೊಂದು ಸತ್ಕಾರ ಕೂಟವನ್ನು ಏರ್ಪಡಿಸಿದನು.
ಮಹಾನುಬಾವರನ್ನು ಸಮೀಪಿಸಿ ರಾಜನು ಹೇಳಿದನು: ನೀವು ಹಾಗೂ ನಿಮ್ಮ ಶಿಷ್ಯಂದಿರು ನನ್ನ ಮನೆಗೆ ಬಂದು ಆಹಾರ ಸೇವಿಸಿ ನನಗೆ ಅನುಗ್ರಹಿಸಬೇಕು.
ಶೈಖರು ತನ್ನ ಶಿಷ್ಯರೊಂದಿಗೆ ರಾಜನ ಆಮಂತ್ರಣ ಸ್ವೀಕರಿಸಿ ಅರಮನೆಗೆ ಹೋದರು.
ಆಹಾರವನ್ನು ಕೊಂಡುಬಂದಾಗ ಮಹಾನುಬಾವರು ಬಿಸ್ಮಿ ಹೇಳಿ ಸೇವಿಸಿದರು.
ಶಿಷ್ಯರೊಂದಿಗೆ ಆಹಾರ ತಿನ್ನಬಾರದೆಂದು ನಿರ್ದೇಶಿಸಿದರು.
ಶೈಖ್'ವರು ಒಂದು ಹಿಡಿ ಅನ್ನ ಸೇವಿಸಿದಾಗ ಅದರಲ್ಲಿದ್ದ ವಿಷ ರಾಜನ ಪಾದಕ್ಕೆ ತಲುಪಿತು. ಎರಡನೇ ಹಿಡಿ ಸೇವಿಸಿದಾಗ ವಿಷ ಕಾಲಿನ ಗಂಟಿನ ವರೆಗೆ ತಲುಪಿತು. ಮೂರನೇ ಹಿಡಿ ಸೇವಿಸಿದಾಗ ವಿಷ ಶರೀರ ಮೊತ್ತ ವ್ಯಾಪಿಸಿ ಕ್ಷಣಾರ್ಧದಲ್ಲಿ ರಾಜನು ಮರಣ ಹೊಂದಿದನು.
ಪ್ರಿಯತಮನ ಆಕಸ್ಮಿಕವಾದ ಸಾವಿನಿಂದ ಸ್ಮೃತಿಗೆಟ್ಟ ಪ್ರಿಯ ಪತ್ನಿಯ ಅಟ್ಟಹಾಸವನ್ನು, ಸಂಕಟವನ್ನು ಕಂಡು ಶೈಖವರಿಗೆ ದಯೆ ತೋರಿತು.
ಮಹಾನುಭಾವರು ಅಲ್ಲಾಹನಲ್ಲಿ ಪ್ರಾರ್ಥಿಸಿದರು. ಏನದ್ಬುತ ರಾಜನಿಗೆ ಜೀವ ಮರಳಿ ಸಿಕ್ಕಿತು.
*ವಫಾತ್ತ್*
ಆತ್ಮಜ್ಞಾನ ಗೋಪುರವಾದ ಮಾಣಿಕ್ಯಪುರದ ನಿರದೀಪ ಹಿಜರಿ ವರ್ಷ 978 ಜಮಾದುಲ್ ಆಖಿರ್ 10ಕ್ಕೆ ಶುಕ್ರವಾರ ರಾತ್ರಿ ತಹಜ್ಜುದ್ ನಮಾಜಿನ ಸಮಯದಲ್ಲಿ ಇಹಲೋಕ ಯಾತ್ರೆಯಾದರು.
ದಕ್ಷಿಣ ಭಾರತದ ತಮಿಳುನಾಡಿನ ಕಾವೇರಿ ನದಿ ತೀರದ ಪುಣ್ಯ ಝಿಯಾರತ್ತ್ ಕೇಂದ್ರವಾಗಿದೆ ಈ ನಾಗೂರ್.
*"ನಾಗೂರ್ ದರ್ಗಾ ಶರೀಫ್"*
*16ನೇ ಶತಮಾನದಲ್ಲಿ ವಫಾತ್ತ್ ಆದಂತಹ ಶೈಖ್'ವರುಗಳ ದರ್ಗಾ ಶರೀಫ್'ನ 5 ಚಿನ್ನದ ಮಿನಾರಗಳು ದರ್ಗಾದ ಆಕರ್ಷಣೆಯಾಗಿದೆ. ಹಿಂದೂ ಧರ್ಮದ ರಾಜನಿಗೆ ಮಾರಣ ನಿಮಿತ್ತ ಉಂಟಾದ ಮಾರರೋಗದಿಂದ ಮಹಾತ್ಮರ ಮುಖಾಂತರ ಸುಖ ಪ್ರಾಪ್ತಿಸಿದರಿಂದ್ದ ಪ್ರತಿಫಲವಾಗಿ ನೀಡಿದ 3000 ಎಕ್ಕರೆ ಸ್ಥಳ ಮತ್ತು ದರ್ಗಾ ಇಂದು ಜಾತಿಮತ ಭೇದವಿಲ್ಲದೆ ಸಮಸ್ತ ಜನತೆಯ ಅಭಯಕೇಂದ್ರವಾಗಿ ಮಾರ್ಪಟ್ಟಿದೆ. ಕಾವೇರಿ ನದಿ ತೀರದ 5 ಸಾವಿರದಷ್ಟು ಕ್ಷೇತ್ರಗಳ ನಡುವಿನಲ್ಲಿ ತಲೆ ಎತ್ತಿ ನಿಂತಿರುವ ಪುಣ್ಯ ಮಖಾಮ್ ಶರೀಫ್ ಮತ ಸೌಹಾರ್ಧದ ಮಹಾ ಪ್ರತೀಕವಾಗಿದೆ.*
*ಜೀವಿತ ಕಾಲದ ಹಾಗೆ ವಫಾತ್ತಿನ ನಂತರವೂ ಮಹಾನುಭಾವರ ಪವಿತ್ರ ಸನ್ನಿದಿಗೆ ತಲುಪುವವರಿಗೆ ಉದ್ದೇಶ ಸಫಲವಾಗುವುದು ಖಂಡಿತವಾಗಿದೆ*
*ಅಲ್ಲಾಹು ಗೌರವಿಸಿದವರನ್ನು, ಅವರ ಸರಣಿಯನ್ನು ನಿಷೇಧಿಸುವ ಹತಭಾಗ್ಯರಿಗೆ ನಾಗೂರ್ ದರ್ಗಾ ಶರೀಫ್ ಯಾವಾಗಲೂ ಸಿಂಹ ಸ್ವಪ್ನವಾಗಿದೆ.*
*ಅದೇ ರೀತಿ ವಿಶ್ವಾಸಿ ವೃಂದಕ್ಕೆ ಸಾಂತ್ವನದ ಕೇಂದ್ರವೂ ಆಗಿದೆ.*
✍ಗಫೂರ್ ಬಾಯಾರ್
✒✒✒✒✒✒✒✒✒
Comments