Skip to main content

ಜಾಣ ದೊರೆಯೊಬ್ಬನ ಕತೆ ಸಂ: ಫಾಝು'ಪ್ರಿಯ.. ಮರಣ ಖಬರ್


         ಅದೊಂದು ಗ್ರಾಮ. ಆ ಗ್ರಾಮವನ್ನು ಆಳುತ್ತಿದ್ದ ಪ್ರತಿಯೊಬ್ಬ ದೊರೆಯೂ ವರ್ಷವೊಂದು ಕಳೆಯುವ ಹೊತ್ತಿಗೆ ದುಃಖಿತನಾಗುತ್ತಿದ್ದ! ಯಾಕೆಂದರೆ, ಆ ಗ್ರಾಮವನ್ನಾಳುವ ಯಾವನೇ ದೊರೆಯು ಕೇವಲ ಒಂದು ವರ್ಷ ಮಾತ್ರ ಅಧಿಕಾರದಲ್ಲಿರಬೇಕಿತ್ತು. ಒಂದು ವರ್ಷ ಕಳೆದರೆ ಆ ಊರಿನ ಪ್ರಜೆಗಳೆಲ್ಲರೂ ಸೇರಿ ಆ ರಾಜನನ್ನು ಅಲಂಕರಿಸಿ ವೈಭವದಿಂದ ಸುಸಜ್ಜಿತ ದೋಣಿಯೊಂದರಲ್ಲಿ ಹೊಳೆಯಾಚೆಯ ದ್ವೀಪವೊಂದಕ್ಕೆ ಬಿಟ್ಟು ಬರುತ್ತಿದ್ದರು. ದ್ವೀಪವಾದರೋ, ಅಲ್ಲಿ ಹೋದವ ಮರಳಿ ಬರುತ್ತಿರಲಿಲ್ಲ. ಕ್ರೂರ ಪ್ರಾಣಿಗಳ ಸಾಮ್ರಾಜ್ಯವಾಗಿತ್ತದು!ಅಲ್ಲಿ ದೋಣಿಯಿಂದ ಇಳಿದವರನ್ನು ಆ ಹಿಂಸ್ರ ಪ್ರಾಣಿಗಳು ಕೊಂದು ಮುಗಿಸುತ್ತಿದ್ದವು!
*ಪ್ರತೀ ವರ್ಷವೂ ಇದೇ ರೀತಿ ನಡೆಯುವುದು ಸಾಮಾನ್ಯವಾಗಿತ್ತು. ಒಂದು ವರ್ಷ ಸುಖಲೋಲುಪತೆಯಿಂದ ಗಡದ್ದಾಗಿ ಬದುಕು ಮುಗಿಸುವ ಎಲ್ಲಾ ದೊರೆಗಳ ಅವಸ್ಥೆ, ಕೊನೆಯದಾಗಿ ಒಂಟಿಯಾಗಿ ಊರು ಬಿಡುವಾಗ ದುಃಖದ ಮಡುವಿನಲ್ಲಾಗಿತ್ತು ಅವರು ಹೋಗುತ್ತಿದ್ದದ್ದು.*
     *ಮಾಮೂಲಿಯೆಂಬಂತೆ ಈ ವರ್ಷವೂ ಅಧಿಕಾರಕ್ಕೇರಲು ಬಂದ ದೊರೆ ಮೊತ್ತಮೊದಲು ಮಾಡಿದ್ದು, ಶಸ್ತ್ರಸಜ್ಜಿತರಾದ ಎರಡು ಮೂರು ದೋಣಿಗಳಷ್ಟು ಸೈನಿಕರನ್ನು ಆ ದ್ವೀಪಕ್ಕೆ ಕಳುಹಿಸಿ, ಅಲ್ಲಿದ್ದ ಎಲ್ಲಾ ಕ್ರೂರ ಪ್ರಾಣಿಗಳನ್ನು ಕೊಲ್ಲಲು ಆಜ್ಞಾಪಿಸಿದ. ಸೈನಿಕರು ಹೋಗಿ ಆ ಕೆಲಸ ಮುಗಿಸಿ ಬಂದರು. ತದನಂತರ ಅಲ್ಲಿದ್ದ ಭೂಮಿಯಲ್ಲಿ ಬಗೆಬಗೆಯ ಹೂಗಿಡಮರಗಳನ್ನು ನೆಟ್ಟು ಸುಂದರವಾದ ಉದ್ಯಾನವನ್ನು ಮಾಡಲು ಆಜ್ಞಾಪಿಸಿದ. ಸೈನಿಕರ ನಿರಂತರ ಪರಿಶ್ರಮದಿಂದ ಕೆಲವು ತಿಂಗಳ ಒಳಗೆ ಆ ಕೆಲಸವೂ ಮುಗಿದವು. ತದನಂತರ ಮರಳಿದ ಸೈನಿಕರೊಂದಿಗೆ ಅಲ್ಲೊಂದು ಸುಂದರವಾದ ಭವ್ಯ ಮಹಲನ್ನು ಕಟ್ಟಿಸಿ ಊರಲ್ಲಿದ್ದ ತನ್ನ ಪ್ರೀತಿಯ ಮಡದಿ-ಮಕ್ಕಳನ್ನು ಅಲ್ಲಿಗೆ ತಲುಪಿಸಲು ಹೇಳಿದ. ಸೈನಿಕರು ಹಾಗೇ ಮಾಡಿದರು. ಅಷ್ಟಾದಾಗ ದೊರೆಯ ವರ್ಷವೊಂದು ಮುಗಿದಿತ್ತು. ಊರವರೆಲ್ಲರೂ ಸೇರಿ ದೊರೆಯನ್ನು ಆ ದ್ವೀಪಕ್ಕೆ ಬಿಟ್ಟು ಬರಲು ತಯಾರಾದಾಗ ದೊರೆ ಅತೀವ ಸಂತೋಷಿಯಾಗಿದ್ದ. ಹಿಂದಿನ ದೊರೆಗಳ ಮುಖದಲ್ಲಿದ್ದ ದುಃಖದ ಛಾಯೆಯು ಅವನಲ್ಲಿರಲಿಲ್ಲ! ಯಾಕೆಂದರೆ, ಆತ ತಾನಿರುವಲ್ಲಿ ಸುಖವಾಗಿ ಬದುಕುವ ಬದಲು, ತಾನು ಹೋಗುವ ಸ್ಥಳದಲ್ಲಿ ಸುಖವಾಗಿ ಬದುಕಲು ಬೇಕಾದ ಎಲ್ಲಾ ಏರ್ಪಾಟುಗಳನ್ನು ಮಾಡಿಟ್ಟಿದ್ದ!*
   🌺🌸 *ಇದೇ ರೀತಿಯಾಗಿದೆ ನಮ್ಮ ಬದುಕು ಕೂಡಾ. ನಾವಿಲ್ಲಿ, ಹೇಗೆ ಬೇಕಾದರೂ ಬದುಕಬಹುದಾದ ದೊರೆಗಳು. ಆದರೆ, ನಮ್ಮನ್ನು ಒಂದು ದಿನ, ನಮ್ಮವರೇ ಕ್ರೂರ ಪ್ರಾಣಿಗಳಿರುವ ದ್ವೀಪವೆಂಬ ಭಯಾನಕ  ಖಬ್'ರಿಗೆ ಬಿಟ್ಟು ಬರಲಿಕ್ಕಿದ್ದಾರೆ. ಆಗ, ನಾವು ರೋಧಿಸುತ್ತಾ ದೋಣಿಯೇರುತ್ತಿದ್ದ ದೊರೆಗಳಂತಾಗಬಾರದು. ಬದಲು, ಇಲ್ಲಿ ಬದುಕಿರುವಾಗ ಸತ್ಕರ್ಮಗಳೆಂಬ ಎಲ್ಲಾ ಏರ್ಪಾಟುಗಳೊಂದಿಗೆ ನಗುತ್ತಾ ದೋಣಿ ಹತ್ತುತ್ತಿದ್ದ ದೊರೆಯಂತಾಗಬೇಕು.*

🤷🏻‍♂*_ಜೀವನವೆಂದರೆ ಇಷ್ಟೇ... ಕೇವಲ ಬೆರಳೆಣಿಕೆಯ ದಿನರಾತ್ರೆಗಳು... ನಿಜವಾದ ಜೀವನವೋ, ಅನಂತಾನಂತ...ಕೊನೆಯಿಲ್ಲದ ಜೀವನ.

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...