Skip to main content

ತವಸ್ಸುಲ್, ಇಸ್ತಿಗಾಸಃ, ತಹ್ಲೀಲ್

ವಿಷಯ:
👉🏻 *ತಹ್ಲೀಲ್ ಸಮರ್ಪಣೆ ಹಾಗೂ ಇಬ್ನು ತೈಮಿಯ್ಯ*
👉🏻 *ತವಸ್ಸುಲ್ ಇಸ್ತಿಗಾಸ ಶಿರ್ಕಾದರೆ ಅವುಗಳನ್ನು ತಮ್ಮ ಗ್ರಂಥಗಳಲ್ಲಿ ಉದ್ಧರಿಸುವರೇ...ಇಮಾಮರುಗಳು..?*
⏬⏬⏬⏬⏬
*ತಹ್ಲೀಲ್ ಸಮರ್ಪಣೆ*
ವಹಾಬಿಗಳು ಅಂಗೀಕರಿಸುವ ಓರ್ವ ರಾಗಿದ್ದಾರೆ ಇಬ್ನು ತೈಮಿಯ್ಯ ಇವರ ಫತಾವದಲ್ಲಿ ಇವರಲ್ಲಿ ಕೇಳಲಾದ ಪ್ರಶ್ನೆಗೆ ಉತ್ತರಿಸುವುದು ಹೀಗೆ...
وسئل عن قراءة أهل الميت تصل إليه ؟ والتسبيح والتحميد والتهليل والتكبير إذا أهداه إلى الميت يصل إليه ثوابها أم لا ؟ .
ಪ್ರಶ್ನೆ: ಮೃತ ವ್ಯಕ್ತಿಯ ಕುಟುಂಬದ ವರ ಕುರ್ ಆನ್ ಪರಾಯಣ, ತಸ್ಬೀಹ್,ತಹ್ಲೀಲ್ ಮೊದಲಾದ ದ್ಸಿಕ್ರ್ ಗಳ ಪ್ರತಿ ಫಲವನ್ನು ಮಯ್ಯಿತ್ ಗೆ ಹದ್ಯ ಮಾಡಿದರೆ ಅದರ ಪ್ರತಿಫಲ ಮಯ್ಯಿತ್ ಗೆ ಲಭ್ಯವಾಗುತ್ತದೆಯೇ..ಇಲ್ಲವೋ?
فأجاب : يصل إلى الميت قراءة أهله وتسبيحهم وتكبيرهم وسائر ذكرهم لله تعالى إذا أهدوه إلى الميت وصل إليه والله أعلم .
ಉತ್ತರ: *"ಮೃತ ವ್ಯಕ್ತಿಯ ಕುಟುಂಬದ ಖುರ್ ಆನ್ ಪಾರಾಯಣ,ತಸ್ಬೀಹ್,ತಕ್ಬೀರ್ ಮೊದಲಾದ ದ್ಸಿಕ್ರ್ ಗಳು ಮಯ್ಯಿತ್ ಗೆ ತಲುಪುವುದು."*
(ಫತಾವ ಇಬ್ನು ತೈಮಿಯ್ಯ)
         👂👂👂
ذكر ابن كثير عن وفاة شيخ الإسلام ابن تيمية : " أنّ الناس دخلوا عند ابن تيمية بعد وفاته فقرأوا القرآن قبل الغسل ، وأنهم تبركوا بالنظر إليه وتقبيله "
ಇಬ್ನು ತೈಮಿಯ್ಯ ರ ಮರಣದ ಕುರಿತು ಇಬ್ನು ಕಸೀರ್ ಹೇಳುವುದು ಹೀಗೆ:
*"ಇಬ್ನು ತೈಮಿಯ್ಯ ಮರಣ ಹೊಂದಿದ ನಂತರ ಅವರನ್ನು ಸ್ನಾನ ಮಾಡುವ ಮೊದಲು ಜನರು ಅವರ ಮೇಲೆ ಕುರ್ ಆನ್ ಪರಾಯಣ ಮಾಡಿದರು ನಂತರ ಅವರಿಂದ ಬರ್ಕತ್ ಕರಸ್ಥ ಮಾಡಿದರು."*
ಇಬ್ನು ತೈಮಿಯ್ಯ ರ ಇಬಾರತ್ ನೀಡಿದ ನಂತರ ಇಲ್ಲಿನ ವಹಾಬಿಗಳಿಗೆ ಬೇರೆ ಪುರಾವೆಯ ಅವಶ್ಯಕತೆ ಇರುವುದಿಲ್ಲ..
✒ *ನಿಸಾರ್ ಮುಕ್ಕಚ್ಚೇರಿ*
⏬⏬⏬⏬⏬
👉🏻 *ತವಸ್ಸುಲ್ -ಇಸ್ತಿಗಾಸ ಶಿರ್ಕಾಗಿದ್ದರೆ ಅದನ್ನು ತಮ್ಮ ಗ್ರಂಥಗಳಲ್ಲಿ ಪ್ರತಿಪಾದಿಸುವರೆ..*
ಖುರ್ ಆನ್ ಮತ್ತು ಹದೀಸ್ ಚೆನ್ನಾಗಿ ಕಲಿತು ನೂರಾರು ಗ್ರಂಥಗಳನ್ನು ಸಮುದಾಯಕ್ಕೆ ಸಮರ್ಪಿಸಿದ ಇಮಾಮರುಗಳು ನಡೆಸಿದ ಸಾವಿರಾರು ಇಸ್ತಿಗಾಸ ಅವರ  ಗ್ರಂಥಗಳಲ್ಲಿ ಇದೆ.*
*ಅವರು ಅಂಬಿಯಾ - ಔಲಿಯಾಗಳೊಂದಿಗೆ ಇಸ್ತಿಗಾಸ ನಡೆಸಿದ್ದಾರೆ.*

ಅವರಿಗೆ ಶಿರ್ಕ್ ತೌಹೀದ್ ಗೊತ್ತಿರಲಿಲ್ಲವೇ?
ಅವರು ಮುಸ್ಲಿಮರನ್ನು ಮುಶ್ರಿಕರನ್ನಾಗಿ ಮಾಡಲು ಗ್ರಂಥಗಳಲ್ಲಿ ಇಸ್ತಿಗಾಸ ಕಲಿಸಿಕೊಟ್ಟರೇ?

*14 ಶತಮಾನಗಳಲ್ಲಿ ಇಮಾಮರುಗಳು ನಡೆಸಿದ ಇಸ್ತಿಗಾಸವನ್ನು ನೋಡಿರಿ.*

*1ನೇ ಶತಮಾನ:*

1.ಸ್ವಹಾಬಿಯಾದ ಇಬ್ನ್ ಉಮರ್ (ರ) ನಡೆಸಿದ ಇಸ್ತಿಗಾಸ ಇಮಾಮ್ ಬುಖಾರಿಯ ಅದಬುಲ್ ಮುಫ್ರದ್ 132 ಪುಟ .

2.ಬಿಲಾಲ್ ಬಿನ್ ಅಲ್ ಹಾರಿಸ್ (ರ) ರವರ ಇಸ್ತಿಗಾಸ ಮುಸನ್ನಫ್  ಇಬ್ನ್ ಅಬೀ ಶೈಬ 2/495 ಪುಟ.

*2 ನೇ ಶತಮಾನ :*

1.ಇಮಾಮ್ ಅಬೂ ಹನೀಫ (ರ) ರವರ ಇಸ್ತಿಗಾಸ , ಅಲ್ ಖಸೀದತುನ್ನುಅ ಮಾನಿಯ್ಯ 13 ನೇ ಪುಟ.

2.ಇಮಾಮ್ ಶಾಫಿಈ (ರ) ರವರ ಇಸ್ತಿಗಾಸ  ತಾರೀಖ್ ಬಗ್ದಾದ್ 1/123 ಪುಟ.

3.ಇಮಾಮ್ ಮಾಲಿಕ್ (ರ) ರವರ ಇಸ್ತಿಗಾಸ, ವಫಾಉಲ್ ವಫಾ ದ 4/1376 ಪುಟ.

*3 ನೇ ಶತಮಾನ:*

1.ಇಮಾಮ್ ಅಹ್ಮದ್ ಬಿನ್ ಹಂಬಲ್ (ರ) ರವರ ಇಸ್ತಿಗಾಸ, ಇಬ್ನ್ ಕಸೀರ್ ನ 10/418 ಪುಟ.

2.ಹಾಫಿಲ್ ಇಬ್ನ್ ಅಬೀಶೈಬ ರವರ ಇಸ್ತಿಗಾಸ ಮುಸನ್ನಫ್ 2/495 ನಲ್ಲಿ ಇದೆ.

3.ಅಶೈಖ್ ಅಬೂಅಬ್ದುಲ್ ರಹ್ಮಾನ್ ಉತುಬೀ ಯವರ ಇಸ್ತಿಗಾಸ ,ಕಿತಾಬುಶ್ಶಾಮಿಲ್ ನಲ್ಲಿ ಇದೆ.

*4 ನೇ ಶತಮಾನ.*

1.ಇಮಾಮ್ ಅಬುಲ್ ಕಾಸಿಂ ಅಲ್ ಮುಖ್ರೀ(ರ) ರವರ ಇಸ್ತಿಗಾಸ, ದಫ್ ಇ ಶಬಹ್ ನ 89 ಪುಟ ಹಾಗೂ ಅಲ್ ವಫಾ ಬಿ ಅಹ್ ವಾಲಿಲ್ ಮುಸ್ತಫಾ 818 ಪುಟ.

2.ಇಮಾಮ್ ತ್ವಬ್ ರಾನಿಯ ಇಸ್ತಿಗಾಸ ಮುಅಜಮ್ ನಲ್ಲಿ ಇದೆ.

3.ಇಮಾಮ್ ಇಬ್ನುಸ್ಸುನ್ನಿಯ ಇಸ್ತಿಗಾಸ , ಅಮಲುಲ್ ಯೌಮಿ ವಲ್ಲೈಲ 169 ಪುಟ.

*5 ನೇ ಶತಮಾನ:*

1.ಇಮಾಮ್ ಗಝ್ಝಾಲಿಯ ಇಸ್ತಿಗಾಸ, ಅಲ್ ಮಳ್ ನೂನುಲ್ ಕಬೀರ್ 86 ಪುಟ.

2.ಇಮಾಮ್ ಅಬೂ ಮಂಸೂರ್ ಅಲ್ ಆಬಿ ಯ ಇಸ್ತಿಗಾಸ, ನಳ್ ಮುದ್ದುರರ್ 1/354ಪುಟ.

3.ಇಮಾಮ್ ಇಸ್ಬಹಾನಿಯ ಇಸ್ತಿಗಾಸ , ಹಿಲ್ ಯತುಲ್ ಔಲಿಯಾ 3/255 ಪುಟ.

*6ನೇ ಶತಮಾನ*

1.ಇಮಾಮ್ ರಾಝೀ ಯವರ ಇಸ್ತಿಗಾಸ, ತಫ್ಸೀರ್ ನ1/179 ,2/150 ಪುಟ.

2.ಇಬ್ನುಲ್ ಜೌಝಿ ಯ ಇಸ್ತಿಗಾಸ, ಅಲ್ ವಫಾ ದ 817 ಪುಟ.

*7 ನೇ ಶತಮಾನ*

1.ಇಮಾಮ್ ನವವೀ ರವರ ಇಸ್ತಿಗಾಸ , ಶರಹುಲ್ ಮುಹದ್ದಬ್ ನ3/286, ಈಳಾಹ್ 489   ಪುಟ.

2.ಇಮಾಮ್ ಸರ್ ಸರೀ ಯವರ ಇಸ್ತಿಗಾಸ, ಶವಾಹಿದುಲ್ ಹಖ್ಖ್ 351 ಪುಟ.

3.ಇಮಾಮ್ ಅಬೂಬಕರ್ ಅಲ್ ಬಗ್ದಾದಿ ಯ ಇಸ್ತಿಗಾಸ , ಅಲ್ ಖಸೀದತುಲ್ ವಿತ್ರಿಯ್ಯ 3 ಪುಟ.

*8 ನೇ ಶತಮಾನ:*

1.ಇಮಾಮ್ ಸುಬ್ ಕೀಯ ಇಸ್ತಿಗಾಸ , ಶಿಫಾಉಸ್ಸಖಾಮ್ ಗ್ರಂಥ.

2.ಹಾಫಿಲ್ ಇಬ್ನ್ ಕಸೀರ್ ನ ಇಸ್ತಿಗಾಸ ಅಲ್ ಬಿದಾಯ 7/92 ಪುಟ.

3.ತಾಜುದ್ದಿನ್ ಅಲ್ ಇಸ್ಕಂದರೀ ಯ ಇಸ್ತಿಗಾಸ ಅಲ್ ಫಜ್ರುಲ್ ಮುನೀರ್ 263 ಪುಟ.

*9 ನೇ ಶತಮಾನ*

1.ಇಮಾಮ್ ಹಾಫಿಲ್ ಇಬ್ನ್ ಹಜರ್ ರವರ ಇಸ್ತಿಗಾಸ , ಅದ್ದುರರುಲ್ ಕಾಮಿನ 1/155 ಪುಟ.

2.ಅಲ್ ಇಮಾಮ್ ಅಹ್ಮದ್ ಅಲ್ ಅಬ್ ಶಹೀ ಯ ಇಸ್ತಿಗಾಸ , ಅಲ್ ಮುಸ್ತತ್ರಿಫ್ 2/289 ಪುಟ.

*10 ನೇ ಶತಮಾನ*

1.ಇಮಾಮ್ ಅಹ್ಮದ್ ಇಬ್ನ್ ಹಜರ್ ( ರ) ರವರ ಇಸ್ತಿಗಾಸ , ಅಲ್ ಜೌಹರುಲ್ ಮುನಳ್ಳಮ್ 73 ಪುಟ.

2.ಇಮಾಮ್ ಸುಯೂಥಿಯವರ ಇಸ್ತಿಗಾಸ ಕಿತಾಬುರ್ರಹ್ಮ 225, ಅಲ್ ಹಾವೀ ಲಿಲ್ ಫತಾವ .

3.ನೂರುದ್ದೀನ್ ಅಸ್ಸುಮ್ಹೂದಿ ಯ ಇಸ್ತಿಗಾಸ,  ವಫಾಉಲ್ ವಫಾ 4/1379 ಪುಟ.

*11 ನೇ ಶತಮಾನ*

1.ಇಮಾಮ್ ಖಫ್ಫಾಜೀ ಇಸ್ತಿಗಾಸ ,ಶವಾಹಿದುಲ್ ಹಖ್ಖ್ 359 ಪುಟ.

2.ಇಮಾಮ್ ರಂಲಿ ಯ ಇಸ್ತಿಗಾಸ  , ಫತಾವಾ 4/382 ಪುಟ.

3.ಮುಲ್ಲಾ ಅಲಿಯ್ಯುಲ್ ಖಾರೀ ಯ ಇಸ್ತಿಗಾಸ, ಶರಹುಶ್ಶಿಫಾ 4/43 ಪುಟ.

*12 ನೇ ಶತಮಾನ*

1.ಇಮಾಮ್ ನಾಬಲ್ಸಿ ಯ ಇಸ್ತಿಗಾಸ, ಶವಾಹಿದುಲ್ ಹಖ್ಖ್ 355 ಪುಟ.

2.ಇಸ್ಮಾಯಿಲ್ ಅಲ್ ಹಿಖ್ಖಿಯ ಇಸ್ತಿಗಾಸ , ರೂಹುಲ್ ಬಯಾನ್ ನಲ್ಲಿ ಇದೆ.

3.ಇಮಾಮ್ ಝುರ್ಖಾನಿ ಯ ಇಸ್ತಿಗಾಸ,  ಶರಹುಲ್ ಮವಾಹಿಬುಲ್ಲದುನ್ನಿಯ್ಯದಲ್ಲಿ ಇದೆ.

*13 ನೇ ಶತಮಾನ:*

1.ಇಮಾಮ್ ಅದವಿಯ ಇಸ್ತಿಗಾಸ, ಮಶಾರಿಖುಲ್ ಅನ್ವಾರ್ 85 ಪುಟ.

2.ಇಮಾಮ್ ಶರ್ವಾನಿ ಯ ಇಸ್ತಿಗಾಸ, ಹಾಶಿಯತುಶ್ಶರ್ವಾನಿಯ 4/145 ಪುಟ.

*14 ನೇ ಶತಮಾನ:*

1.ಇಮಾಮ್ ನಬ್ ಹಾನಿ ಯ ಇಸ್ತಿಗಾಸ ಶವಾಹಿದುಲ್ ಹಖ್ಖ್ 292 ಪುಟ.

2.ಇಮಾಮ್ ಝೈನೀ ದಹ್ಲಾನ್ ರ ಇಸ್ತಿಗಾಸ ಅದ್ದುರರುಸ್ಸನಿಯ್ಯ 13 ಪುಟ.

ಹೀಗೆ ಎಲ್ಲಾ ಶತಮಾನಗಳಲ್ಲಿ ಜೀವಿಸಿದ ಮಹಾತ್ಮರು ಇಸ್ತಿಗಾಸ ನಡೆಸಿದ್ದಾರೆ.ಅದನ್ನಾಗಿದೆ ಮೇಲೆ ನಾವು ಓದಿದ್ದು.
ಇಸ್ತಿಗಾಸ ಶಿರ್ಕಾಗಿದ್ದರೆ ಇಮಾಮರುಗಳು ಅದನ್ನು ನಡೆಸುತ್ತಿರಲಿಲ್ಲ.ಗ್ರಂಥಗಳಲ್ಲಿ ಅವರು ಅದನ್ನು ಉಲ್ಲೇಖಿಸುತ್ತಿರಲಿಲ್ಲ.
ದುರ್ವಾಖ್ಯಾನದ ಗೂಡಾದ ವಹ್ಹಾಬಿಗಳು ಈ ಇಮಾಮರುಗಳನ್ನೆಲ್ಲಾ ಮುಶ್ರಿಕೆಂದು ಹೇಳುವರೇ?

ಇಮಾಮರುಗಳು ಇಸ್ತಿಗಾಸ ನಡೆಸಿದ , ನಡಸಬಹುದೆಂದು ಹೇಳಿದ ಸಾವಿರಾರು ಉಲ್ಲೇಖಗಳು ಗ್ರಂಥಗಳಲ್ಲಿ ಇವೆ.
- *ಮುನೀರ್ ಸಖಾಫಿ ಸಾಲೆತ್ತೂರು*

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...