ಅರಫಾ ದಿನದಲ್ಲಿ ಹೇಳಲು ವಿದ್ವಾಂಸರು ಕಲಿಸಿದ ದ್ಸಿಕ್ರ್, ಸ್ವಲಾತ್ ಗಳು..
1) ಆ ದಿನ ನಾಲ್ಕು ರಕಾಅತ್ ಸುನ್ನತ್ ನಮಾಝ್ ನಿರ್ವಹಿಸಬೇಕು.
ಒಂದೊಂದು ರಕಾಅತ್ ನಲ್ಲೂ ಫಾತಿಹಾದ ನಂತರ 3 ಬಾರಿ ಸೂರತುಲ್ ಖದರ್, 21 ಬಾರಿ ಸೂರತುಲ್ ಇಖ್ಲಾಸ್ ಓದಬೇಕು.
ಸಲಾಂ ನಿರ್ವಹಿಸಿದ ಬಳಿಕ ನಬಿﷺ ರವರ ಮೇಲೆ ಈ ಸ್ವಲಾತ್ 70 ಬಾರಿ ಹೇಳಬೇಕು.
اللهم صل على سيدنا محمد وعلى آل سيدنا محمد و بارك وسلم
ಅದರ ನಂತರ,
استغفر الله لي وللمؤمنين والمؤمنات
ಎಂದು 70 ಬಾರಿ ಹೇಳಬೇಕು.
-ಈ ರೀತಿಯಾಗಿ ಒಬ್ಬ ಹೇಳಿದರೆ ಅವನ ಹತ್ತು ವರ್ಷಗಳ ಪಾಪಗಳನ್ನು ಅಲ್ಲಾಹು ಮನ್ನಿಸುವನು.
2) ಅರಫಾ ದಿನದಲ್ಲಿ
لا اله الا الله وحده لا شريك له
له الملك وله الحمد وهو على كل شيء قدير
ಎಂಬ ದ್ಸಿಕ್ರ್ ಧಾರಾಳವಾಗಿ ಹೇಳಬೇಕು.
3) ಅರಫಾ ದಿನದಲ್ಲಿ ಸೂರ್ಯಾಸ್ತಮಾನದ ಮೊದಲು ಈ ದ್ಸಿಕ್ರ್ ಗಳನ್ನು 100 ಬಾರಿ ಹೇಳಬೇಕು.
بسم الله ما شاء الله لا قوة إلا بالله
بسم الله ما شاء الله لا يسوق الخير الا الله
بسم الله ما شاء الله لا يكشف السوء إلا الله
بسم الله ما شاء الله كل نعمة من الله
بسم الله ما شاء الله الخير كله بيد الله
بسم الله ما شاء الله لا يصرف السوء إلا الله
4) ಅರಫಾ ದಿನದಲ್ಲಿ 360 ಬಾರಿ ಆಯತುಲ್ ಹಿರ್ಸ್ ಹೇಳಲು ಶೈಖ್ ಅಹ್ಮದ್ ಹಿಜಾನಿ ತಂಙಳ್ ರವರು ಹೇಳಿರುವರು. ಯಾರಾದರೂ ಆ ಸೂಕ್ತವನ್ನು ಓದಿದರೆ ಅವನಿಗೆ ಅಲ್ಲಾಹು ಪ್ರತ್ಯೇಕವಾದ ರಕ್ಷಣೆಯನ್ನು ನೀಡುವನು..
( لَقَدْ جَاءَكُمْ رَسُولٌ مِنْ أَنْفُسِكُمْ عَزِيزٌ عَلَيْهِ مَا عَنِتُّمْ حَرِيصٌ عَلَيْكُمْ بِالْمُؤْمِنِينَ رَءُوفٌ رَحِيمٌ
فَإِنْ تَوَلَّوْا فَقُلْ حَسْبِيَ اللَّهُ لَا إِلَهَ إِلَّا هُوَ عَلَيْهِ تَوَكَّلْتُ وَهُوَ رَبُّ الْعَرْشِ الْعَظِيمِ
5) ಅರಫಾ ದಿನದಲ್ಲಿ 770 ಬಾರಿ ಸೂರತುಲ್ ಖುರೈಶ್ ಓದುವವರಿಗೆ ಒಂದು ಹಜ್ ನಿರ್ವಹಿಸಿದ ಪ್ರತಿಫಲ ಲಭಿಸಲಿದೆ ಎಂದು ವಿದ್ವಾಂಸರು ಹೇಳಿರುವರು.
6) ಅರಫಾ ದಿನದಲ್ಲಿ 360 ಬಾರಿ ಸೂರತುಲ್ ಕೌಸರ್ ಓದಿ ಪ್ರಾರ್ಥಿಸಿದರೆ ಆ ಪ್ರಾರ್ಥನೆ ಅಲ್ಲಾಹು ಸ್ವೀಕರಿಸುವನು ಹಾಗೂ ಅವನು ಅಪೇಕ್ಷಿಸಿದರೆ ನೀಡುವನು.
7) ಅರಫಾ ದಿನದಲ್ಲಿ ನಬಿﷺ ರವರ ಮೇಲೆ ಧಾರಾಳವಾಗಿ ಸ್ವಲಾತ್ ಹೇಳಲು ಮರೆಯಬಾರದು. ವಿಶೇಷವಾಗಿ ಸ್ವಲಾತುಲ್ ಫಾತಿಹ್.
ಗರಿಷ್ಠ 1000 ಕನಿಷ್ಠ 40 ಬಾರಿಯಾದರೂ ಓದಬೇಕು.
اللَّهُمَّ صَل عَلَى سَيِّدِنَا مُحَمَّدٍ ۩۞۩ الفَاتِحِ لِمَا أُغْلِقَ ۩۞۩ وَالخَاتِمِ لِمَا سَبَقَ ۞ نَاصِرِ الحَقِّ بِالحَقِّ ۩۞۩ وَالهَادِي إِلَى صِرَاطِكَ المُسْتَقِيمِ ۩۞۩ وَعَلَى آلِهِ حَقَّ قَدْرِهِ وَمِقْدَارِهِ العَظِيمِ ۩۞۩
ಅಲ್ಲಾಹು ತೌಫೀಖ್ ನೀಡಲಿ, ಆಮೀನ್.
-ಇಕ್ಬಾಲ್ ಜಿ.ಕೆ.ಗುಲ್ವಾಡಿ
🍁🍁🍁🍁🍁🍁🍁🍁🍁🍁
🔹 ಹಬೀಬ್ﷺ ರವರ ಮೇಲೆ ಸ್ವಲಾತ್.
*💫اللَّهُمَّ صَلِّ عَلَى سَيِّدِنَا مُحَمَّدٍ عَدَدَ مَا فِي عِلْمِ الله صَلاَةً دَائِمَةً بِدَوَامِ مُلْكِ الله🌹*
〰〰〰〰〰〰〰〰〰〰
ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...
Comments