Skip to main content

ಇಂಡಿಯನ್ ಗ್ರಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎಪಿ ಉಸ್ತಾದ್



🌹ಸುನ್ನತ್ ಜಮಾಹತ್ ಸುಲ್ತಾನ್🌹

*✨ಇಂಡಿಯನ್ ಗ್ರಾಂಡ್ ಮುಫ್ತಿ✨*

* *🌙ಕಮರುಲ್ ಉಲಮಾ ಎಪಿ ಉಸ್ತಾದ್* 

🖊️ ಹಮೀದ್ ಕಜ ಮಂಜೇಶ್ವರ

 ಎರಡು ವರ್ಷದ ನನ್ನ ಮಗ ಮುಹಮ್ಮದ್ ಆಫಿಕ್ ಬೆಳಿಗ್ಗೆ ಬಂದ ಸಿರಾಜ್ ದಿನಪತ್ರಿಕೆಯನ್ನು ನನಗೆ ಕೊಟ್ಟು ಅದರಲ್ಲಿದ್ದ ಫೊಟೋ ತೋರಿಸುತ್ತಾ ಎಪಿ ಉತ್ತಾ ಎಂದು ಹೇಳುತ್ತಾನೆ..
  *ನನ್ನ ಆಯುಷ್ಯವನ್ನು ಕಡಿಮೆ ಮಾಡಿಯಾದರು ಎಪಿ ಉಸ್ತಾದ್ ರವರಿಗೆ ದೀರ್ಘಾಯುಷ್ಯ ನೀಡು ಅಲ್ಲಾಹ್.. ಎಂದು ಬಹಳಷ್ಟು  ಮಂದಿ ಪ್ರಾರ್ಥಿಸುತ್ತಾರೆ..*
    *ಸಲಾಲ ಕಾಫಿ ಶಾಪ್'ಗೆ ಬಂದ  ಒಮಾನಿ ಅರಬಿ ನನ್ನಲ್ಲಿ ಊರು ಕೇಳುತ್ತಾರೆ ಇಂಡಿಯಾ ಅಂದ ತಕ್ಷಣ ಶೇಕ್ ಅಬೂಬಕ್ಕರ್ ಅಹಮದ್ ಗೊತ್ತಾ..? ನಾನು ಮುಖ ನೋಡಿದಾಗ ಮೊಬೈಲ್ ತೆಗೆದು ಗ್ಯಾಲರಿ ತುಂಬಾ ಎಪಿ ಉಸ್ತಾದ್ ಫೊಟೊ ಅನ ಹುಬ್ಬಕ್ ಅಂದರು.*
*ನಾನು ಕೇಳಿದೆ ಶೈಕ್'ರನ್ನು ನೋಡಿದ್ದೀರ..? ಇಲ್ಲ  ನೋಡಬೇಕು ಮರ್ಕಝಿಗೆ ಹೋಗಬೇಕು.. ಇನ್ಶಾಅಲ್ಲಾ ಅಂದರು.*
*ಅಹ್ಲುಬೈತಿನ ಎಲ್ಲರೂ ಭಯ ಭಕ್ತಿಯಿಂದ ಕಾಣುವ ಆತ್ಮೀಯ ತಂಙಳ್ಉಪ್ಪಾಪ ಎಂಬವರಲ್ಲಿ ಶಿಷ್ಯರೊಬ್ಬ ಹೇಳುತ್ತಾರೆ ಅಲ್ಪ ಸಮಯದಲ್ಲಿ ಕಾಂತಪುರಂ ಉಸ್ತಾದ್ ಇಲ್ಲಿಗೆ ಬರಲಿದ್ದಾರೆ ಕೇಳಿದ್ದೆ ತಡ ತಟ್ಟನೆ  ಎದ್ದು ಗೇಟಿನ ಬಳಿ ಹೋಗಿ ನಿಲ್ಲುತ್ತಾರೆ ಎಪಿ ಉಸ್ತಾದ್'ರನ್ನು ಬರಮಾಡಿ ಕೊಳ್ಳಲು. ಶಿಷ್ಯಂದಿರು ಆಶ್ಚರ್ಯರಾಗುತ್ತಾರೆ*
   
   *ಕಾಂತಪುರಂ ಎಂಬ ಎಪಿ ಉಸ್ತಾದ್ ರವರನ್ನು ಚಿಕ್ಕ ಮಕ್ಕಳಿಂದ ವಯಸ್ಸಾದ ಮುದಿ ತಾತಂದಿರ ತನಕ ಯಾಕೆ ಇಷ್ಟೊಂದು ಪ್ರೀತಿಸುತ್ತಾರೆ..?*

     *1939 ಮಾರ್ಚ್ 22 ಕೋಝಿಕ್ಕೋಡ್ ಜಿಲ್ಲೆಯ ಕಾಂತಪುರಂ ಎಂಬಲ್ಲಿ ಮೌತ್ತಾರಿಯಿಲ್ ಅಹಮದ್ ಹಾಜಿ ಹಾಗೂ ಕುಂಞಿಮ ಹಜ್ಜುಮ್ಮ ಎಂಬವರಿಗೆ  ಮುದ್ದಿನ ಗಂಡು ಮಗು ಜನನ ಅಬೂಬಕ್ಕರ್ ಎಂದು ಹೆಸರಿಟ್ಟು ಮುದ್ದಿನಿಂದ ಸಾಕುತ್ತಾರೆ*
 *ಕುರಾನ್ ಪಂಡಿತರಾದ ತಂದೆ ಅಹಮದ್ ಹಾಜಿ ಮಗನಿಗೆ ಹನ್ನೆರಡು ವರ್ಷ ತುಂಬುವಾಗ ವಫಾತ್ ಆಗುತ್ತಾರೆ. ಕಾಂತಪುರ  ಎ ಎಂ LP ಸ್ಕೂಲಿನಲ್ಲಿ ಪ್ರಾಥಮಿಕ ವಿಧ್ಯಾಭ್ಯಾಸ ಶುರು ಮಾಡಿದ ಎಪಿ ಉಸ್ತಾದ್ ಹೈಸ್ಕೂಲ್ ವಿಧ್ಯಾಭ್ಯಾಸ ಪೂರ್ತೀಕರಿಸಿ ಮುಂದಿನ ವಿಧ್ಯಾಭ್ಯಾಸಕ್ಕಾಗಿ 1961ರಲ್ಲಿ ವೆಳ್ಳೂರ್ ಬಾಕಿಯಾತುಸ್ಸಾಲಿಯಾತ್ ಅರಬಿಕ್ ಕಾಲೇಜಿಗೆ ತೆರಳುತ್ತಾರೆ.ಅಲ್ಲಿ ಕಲಿತು ಬಾಖವಿ ವಿರುದಿನಿಂದ ಊರಿಗೆ ಮರಳುತ್ತಾರೆ*
  
*ಆಕರ್ಷಕ ಮೈಕಟ್ಟು ಗಾಂಭೀರ್ಯ ಶಬ್ದದ ಉಸ್ತಾದದರು 1962 ತನ್ನ ಇಪ್ಪತ್ತೈದನೇ ವರ್ಷದಲ್ಲಿ ಎಲಯತ್ತ್ ಮಾಂಙಾಟ್ಟ್ ಮಸೀದಿಯಲ್ಲಿ ಮೊತ್ತ ಮೊದಲ ಬಾರಿಗೆ ಧಾರ್ಮಿಕ ಮತ ಪಠನ ಕ್ಲಾಸ್ ಆರಂಭಿಸುತ್ತಾರೆ. ತದನಂತರ  1970ರಲ್ಲಿ ಕೊಳ್ಳಿಕ್ಕಲ್ ಜುಮಾ ಮಸೀದಿ ಯಲ್ಲಿ ಆರು ವರ್ಷಗಳು ಕ್ಲಾಸ್ ನಡೆಸಿ ನಂತರ ಕೋಝಿಕ್ಕೋಡ್ ಜಿಲ್ಲೆಯ ತನ್ನ ಸ್ವಂತ ಊರಾದ ಕಾಂತಪುರಮಿಗೆ ಬಂದು ಜುಮಾ ಮಸೀದಿಯಲ್ಲಿ  ದರ್'ಸ್ ನಡೆಸಲು ಶುರುಮಾಡುತ್ತಾರೆ. ಅಲ್ಲಿರುವಾಗ ಮರ್ಕಝ್ ಸಖಾಫತ್ ಸುನ್ನಿಯ್ಯ ಎಂಬ ಸ್ಥಾಪನೆಯನ್ನು ಸ್ಥಾಪಿಸುತ್ತಾರೆ.ಈಗ ಜಾಮಿಯ ಮರ್ಕಝ್ ಅತೀ ದೊಡ್ಡ ಅಂತರಾಷ್ಟ್ರೀಯ ಇಸ್ಲಾಮಿಕ್ ವಿಶ್ವ ವಿಧ್ಯಾನಿಲಯವಾಗಿ ಮಾರ್ಪಟ್ಟಿದೆ* 
*1974 ಎಪ್ರಿಲ್'ನಲ್ಲಿ ಸಮಸ್ತ ಕೇರಳ ಜಮ್ಯತುಲ್ ಉಲಮಾದ ಕೇಂದ್ರ  ಮುಶಾವರದ ಅಂಗ ಆಗುತ್ತಾರೆ*

*ಜಾಮಿಯ ಮರ್ಕಝ್ ನಿರ್ಮಿಸಲು ಜಾಗ ಖರೀದಿಸಿ ಅದಕ್ಕೆ ಅಡಿಪಾಯ ಪರಿಶುದ್ಧ ಮಕ್ಕಾ ಶರೀಫ್ ಉನ್ನತ ಪಂಡಿತ ವಿದ್ವಾಂಸರಾದ ಮುಹಮ್ಮದ್ ಅಲವಿ ಅಲ್ ಮಾಲಿಕಿ ಅವರನ್ನು ಸಮೀಪಿಸಿದಾಗ ನನಗೆ ರಸೂಲ್ ಸ್ವಲ್ಲಲ್ಲಾಹು ಅಲೈವಸೆಲ್ಲರ ಅನುಮತಿ ಇಲ್ಲದೆ ಬರಲಾಗದು ಎಂದರು ನಂತರ ಅನುಮತಿ ಸಿಕ್ಕಿತೆಂದು ಕೋಝಿಕ್ಕೋಡ್ ಕಾರಂದೂರಿಗೆ ಬಂದು ಕಣ್ಣಿಯತ್ ಉಸ್ತಾದ್, ಶಂಸುಲ್ ಉಲಮಾ ಹಾಗೂ ಅಪಾರ ವಿಂದ್ವಾಸರ ಸಾನಿಧ್ಯದಲ್ಲಿ ಅಲವೀ ಅಲ್ ಮಾಲಿಕಿ ಅಡಿಪಾಯ ಹಾಕಿದರು. ಶೀಘ್ರವೇ ಸುನ್ನಿ ಮರ್ಕಝ್ ಇಸ್ಲಾಮಿಕ್ ಅಧ್ಯಯನ, ಕಲೆ, ವಾಣಿಜ್ಯ, ವಿಜ್ಞಾನ, ತಾಂತ್ರಿಕ, ಎಲ್ಲಾ ತರದ ಧಾರ್ಮಿಕ ಲೌಕಿಕ ವಿದ್ಯಾಭ್ಯಾಸದ ಕೇಂದ್ರವಾಗಿ ಮಾರ್ಪಟ್ಟಿತು*

*1981 ಮರ್ಕಝ್'ನಲ್ಲಿ ಸದರ್'ಮುದರ್ರಿಸ್ ಹಾಗೂ ಪ್ರಿನ್ಸಿಪಾಲರಾಗುತ್ತಾರೆ. ಮುಸ್ಲಿಮರೊಳಗೊಂಡ ದುರ್ಬಲರು ಮತ್ತು  ಅಸಾಯಕರಿಗೆ ಸಾಮೂಹಿಕವಾಗಿ ಉನ್ನತ ವಿಧ್ಯಾಭ್ಯಾಸ ನೀಡಬೇಕೆಂಬ ಇರಾದೆಯಿಂದ ಮುಂದೆ ಸಾಗಿದ ಕಾಂತಪುರಂ ಉಸ್ತಾದ್ ಯತೀಂ ಖಾನ, ಅಗದಿಮಂದಿರ, ಕುರಾನ್ ಕಂಟಪಾಠ ಕ್ಲಾಸ್ (ಸಾವಿರಾಕ್ಕೂ ಹೆಚ್ಚು ಹಾಫಿಳ್'ಗಳು ವಿವಿಧ ನಾಡಿನಲ್ಲಿ ಕೆಲಸದಲ್ಲಿದ್ದಾರೆ), ಶರೀಅತ್, ಮಹಿಳಾ ಕಾಲೇಜ್,* *ಇಂಜಿನಿಯರಿಂಗ್ ಕಾಲೇಜ್, ಸ್ವಯಂ ಕಾರ್ಮಿಕ ಪರಿಶೀಲನೆ ಕೇಂದ್ರ, ಅಂತರಾಷ್ಟ್ರೀಯ ಇಂಗ್ಲೀಷ್ ವಿಧ್ಯಾಭ್ಯಾಸ ಕೇಂದ್ರ, ಲಾ ಕಾಲೇಜ್, ಮಹಿಳಾ ಹಿಫ್ಳ್ ಕುರಾನ್ ಕ್ಲಾಸ್ ಮತ್ತು ವನಿತಾ ವಿಧ್ಯಾಭ್ಯಾಸ ಕೇಂದ್ರ,* *ಆಸ್ಪತ್ರೆಗಳು ವ್ಯಾಪಾರ ಸ್ಥಾಪನೆಗಳು ಮುಂತಾದವುಗಳನ್ನು ನಿರಂತರ ನಿರ್ಮಿಸಿ ಮುಂದೆ ಸಾಗುತ್ತಾ ಇದ್ದಾರೆ*

*ಇಸ್ಲಾಮಿನ ಆತ್ಮೀಯ ದರ್ಶನ, ವಿಶುದ್ದ ಪ್ರವಾಜಗನ್'ಮ್ಮಾರ್, ಅಲ್ ಹಜ್ಜ್,, ಕೂಟ ಪ್ರಾರ್ಥನ, ಜುಮುಹ ಕುತುಬ, ಸ್ತ್ರೀ ಜುಮ್'ಹ, ಮೈಂಡ್ ಆಫ್ ಇಸ್ಲಾಂ, ಅಮೇರಿಕನ್ ಡೈರಿ, ಇಸ್ಲಾಮುಂ ಕಾದಿಯಾನಿಸವುಂ, ತರೀಕತ್ ಒರು ಪಡನಂ, ಮುಹಮ್ಮದ್ರ್'ರಸೂಲ್, ಇಸ್ಲಾಂ  ಪಡನತ್ತಿನ್ ಒರು ಆಮುಗಂ, ಮುಂತಾದ ಅನೇಕ ಪುಸ್ತಕ ಗ್ರಂಥಗಳನ್ನು ಬರೆದರು. ಅದಲ್ಲದೆ ಇಪ್ಪತ್ತರಷ್ಟು ಅರಬಿ ಭಾಷೆಯಲ್ಲಿ ಗ್ರಂಥಗಳನ್ನು ರಚಿಸಿದರು*
 *ಮಲಯಾಳಂ ಅರಬಿಕ್ ಉರ್ದು ಇಂಗ್ಲಿಷ್ ತಮಿಳ್ ಮುಂತಾದ ಭಾಷೆ ಗೊತ್ತಿರುವ ಎಪಿ ಉಸ್ತಾದರ ಗ್ರಂಥಗಳೆಲ್ಲವೂ ಹಲವಾರು ಭಾಷೆಗಳಿಗೆ ಭಾಷಾಂತರಿಸಲಾಗಿದೆ ಅಲ್ ಹಜ್ಜ್, ಎಂಬ ಪುಸ್ತಕ ಹಜ್ಜ್ ನಿರ್ವಹಿಸಲು ಹೋಗುವ ಕನ್ನಡಿಗರಿಗೆ ತುಂಬಾ ಉಪಕಾರವಾಗುತ್ತಿದೆ* 

 *ಸೌದಿ ರಿಯಾದ್ ನಲ್ಲಿ ಫಹದ್ ರಾಜರ ಕಾಲದಲ್ಲಿ ಒಮ್ಮೆ ನೂತನವಾದಿಗಳು ಎಪಿ ಉಸ್ತಾದ್'ರ ಕೈಯಲ್ಲಿ ಮೌಲೀದ್ ಕಿತಾಬ್ ಇದೆ ಎಂದು ಕಂಪ್ಲೇಂಟ್ ಕೊಟ್ಟು ಪೋಲೀಸರು ಬಂಧಿಸಿ ಜೈಲಿಗೆ ಹಾಕಿದರು ಕೋರ್ಟಿಗೆ ಹಾಜರು ಪಡಿಸಿದಾಗ ನ್ಯಾಯಾಧೀಶರು ಮೌಲಿದ್ ಬಗ್ಗೆ ಕೇಳಿದಾಗ ಪವಿತ್ರ ಮದೀನ ರೌಳಾ ಶರೀಫ್'ನಲ್ಲಿ ಬರೆದಿರುವ ಮೌಲಿದ್'ಗಳನ್ನು ಆಳಿಸುವುದಾದರೆ ನನ್ನ ಕೈಯಲ್ಲಿರುವ ಕಿತಾಬನ್ನು ತ್ಯಜಿಸುವೆ ಅಂದರು ಕೇಸ್ ತೆಗೆಯದೆ ತಬ್ಬಿಬ್ಬಾದ ಸರ್ಕಾರ ಅಬ್ದುಲ್ಲ ರಾಜರ ಡ್ರೈವರ್ ವಿಮಾನ ನಿಲ್ದಾಣಕ್ಕೆ ಕಾಂತಪುರ ಉಸ್ತಾದರನ್ನು ಮುಟ್ಟಿಸಿದರು.*
*ಆಗ ಜೈಲಿನಲ್ಲಿ ರಸೂಲ್ ಸ್ವಲ್ಲಲ್ಲಾಹು ಅಲೈವಸೆಲ್ಲಮರ ಬಗ್ಗೆ ಪುಸ್ತಕ ಬರೆಯಬೇಕೆಂಬ ನಿಯ್ಯತ್ ಮಾಡಿ ರಚಿಸಿದ ಕಿತಾಬ್ ಆಗಿದೆ ಮುಹಮ್ಮದ್ರಸೂಲ್. ಅರಬ್ ನಾಡಲ್ಲಿ ಬಾರಿ ಬೇಡಿಕೆ ಇದೆ.*
 *ಕೇರಳದಲ್ಲಿ ಸಿರಾಜ್ ಎಂಬ ದಿನ ಪತ್ರಿಕೆ ಚಾಲನೆ ಮಾಡಿದರು ನಂತರ ಗಲ್ಫ್ ನಾಡಿನಲ್ಲೂ ಚಾಲನೆಗೊಂಡಿತು*

*1992 ಉತ್ತಮ ಸಾಮೂಹಿಕ ಪ್ರವರ್ತೆನೆಗೆ ಯು ಎ ಇ ರಾಸಲ್'ಕೈಮ ಇಸ್ಲಾಮಿಕ್ ಅಕಾಡಮಿ ಅವಾರ್ಡ್, ಅತ್ಯುತ್ತಮ ವಿದ್ಯಾಭ್ಯಾಸ ಸೇವೆಗೆ 2016ರಲ್ಲಿ ಮಲೇಶಿಯಾ ಕುಲಾಲಂಪುರ್ ಓಐಸಿ ಟುಡೆ  ಏರ್ಪಡಿಸಿದ ದಿ ಪೀರಿಯಸ್ ಜುವಲ್ಸ್ ಆಫ್ ಮುಸ್ಲಿಂ ವರ್ಡ್ ಪೀಸ್ ಅವಾರ್ಡ್, ಉತ್ತಮ ಸಾಮಾಜಿಕ ವಿಧ್ಯಾಭ್ಯಾಸ ಸೇವೆಗೆ ಇಂಡಿಯನ್ ಇಸ್ಲಾಮಿಕ್ ಸೆಂಟ್ರಲ್  ಅವಾರ್ಡ್. 2000 ಇಸವಿಯಲ್ಲಿ ಸುಲ್ತಾನುಲ್ ಉಲಮಾರಿಗೆ ಲಭಿಸಿತು ಮತ್ತು 2005ರಲ್ಲಿ ಉನ್ನತ ಇಸ್ಲಾಮಿಕ್ ವಿಧ್ಯಾಭ್ಯಾಸ ಹಾಗೂ ಅನಾಥ ಮಕ್ಕಳ ಸಂರಕ್ಷಣೆಗೆ ಹಾಮಿಲ್ ಅಲ್ ಗೊಯಿಬ್ ಇಂಟರ್ನೇಷನಲ್ ಹಾಲಿ ಕುರಾನ್ ಅವಾರ್ಡ್, 2016 ನವೆಂಬರ್ ನಲ್ಲಿ ಯುಎಇ ಮ್ಯಾಕ್ ಇಂಡೊ ಅರಬ್ ಇಸ್ಲಾಮಿಕ್ ಪೇರ್ಸನಾಲ್ಟಿ ಅವಾರ್ಡ್, ಇಸ್ಲಾಮಿನ ನೈತಿಕ ಪಾವಿತ್ರ್ಯತೆ ಸಂರಕ್ಷಣೆಗೆ ಜಿದ್ದಾದಿಂದ ಇಸ್ಲಾಮಿಕ್ ಹೆರಿಟೇಡ್ ಅವಾರ್ಡ್, ಮತ್ತು ಅರಬ್ಬಿ ಭಾಷೆ ಸಂರಕ್ಷಣೆಗೆ ಆದ್ಯತೆ ನೀಡಿದ ಪ್ರಯುಕ್ತ ಡಾಕ್ಟರ್ ಅಬ್ದು ಯಾನಿ ಸ್ಮಾರಕ  ಅಲಿಫ್ ಅವಾರ್ಡ್,  ಕಳೆದ ಐದು ದಶಕಗಳಿಂದ ಅತೀ ಹೆಚ್ಚು ಸ್ವಾದೀನ ಪಡಿಸಿದ ವ್ಯಕ್ತಿ ಯಾಗಿ ಮಕ್ದೂಮ್ ಅವಾರ್ಡ್, ಕೇರಳ ಪ್ರವಾಸಿ ಭಾರತಿ ಅವಾರ್ಡ್, ಪ್ರಥಮ ಇಸ್ಲಾಮಿಕ್ ಹೆರಿಟೇಜ್ ಅವಾರ್ಡ್, ಈಗಲೂ ಹಲವಾರು ಪ್ರಶಸ್ತಿಗಳು ಕಮರುಲ್ ಉಲಮಾರನ್ನು ಹುಡುಕಿಕೊಂಡು ಬರುತ್ತಾ ಇದೆ* 

*ಮುಂಬೈಯಲ್ಲಿ ಕೊಲ್ಲಲ್ಪಟ್ಟ ಹೇಮಂತ್ ಕರ್ಕರೆಯ ಪತ್ನಿ ಭಾರತ ಸರ್ಕಾರದ ಧನ ಸಹಾಯವನ್ನು ನಿರಾಕರಿಸಿದರೂ ಜಿದ್ದಾ ಹೆರಿಟೇಜ್ ಅವಾರ್ಡ್ ನಿಂದ ಸಿಕ್ಕ ಇಪ್ಪತ್ತು ಲಕ್ಷದಿಂದ ಎರಡು ಲಕ್ಷ ಎಪಿ ಉಸ್ತಾದ್' ನೀಡಿದಾಗ ಕರ್ಕರೆಯ ವಿಧವೆ ತೆಗೆದು ಕೊಂಡಿದ್ದು ಸುದ್ದಿಯಾಗಿತ್ತು*

*ಎಪಿ ಉಸ್ತಾದ್ ನನಗೆ ಅಲ್ಲಾಹು ನೀಡಿದ ಅನುಗ್ರಹ ಎಂದು ತಾಜುಲ್ ಉಲಮಾ ಹೇಳುತ್ತಾ ಇದ್ದರು. ಸುನ್ನತ್ ಜಮಾಹತ್ ಆಶಯ ಆದರ್ಶವನ್ನು ವಿಸ್ತರಿಸಿದ ಎಪಿ ಎಂಬ ಅದ್ಭುತವಾದ ಸುಲ್ತಾನುಲ್ ಉಲಮಾರನ್ನು ಲಕ್ಷಾಂತರ ಜನರು ತಮ್ಮ ಹೃದಯದಿಂದ ಪ್ರೀತಿಸಲು ತೊಡಗಿದರು ಅಸೂಯೆಯಿಂದ ಎಷ್ಟೋ ಎದುರಾಳಿಗಳು ಹಿಯಾಳಿಸಲು ನೋಡಿದರು ಶತ್ರುಗಳಿಗೆ ಯಾವ ಉತ್ತರವು ಕೊಡದೆ ಮುಗ್ಳುನಗುತ್ತಾ ಮುಂದೆ ಸಾಗಿದರು. ಅಲ್ಲಾಹನು ಕಮರುಲ್ ಉಲಮಾರನ್ನು ಉನ್ನತದಿಂದ ಅತ್ಯುನ್ನತಕ್ಕೆ ಎತ್ತಿಸುತ್ತಲೇ ಇದ್ದಾನೆ. ಕಮರುಲ್ ಉಲಮಾ, ಸುಲ್ತಾನುಲ್ ಉಲಮಾ, ಅಬುಲ್ ಐತಮಿ,(ಯತೀಂ ಮಕ್ಕಳ ತಂದೆ) ಈಗೆ ಹಲವಾರು ನಾಮಗಳನ್ನಿಟ್ಟು ಅರಬ್ ರಾಷ್ಟ್ರದ ವಿದ್ವಾಂಸರು ಕರೆದರು. ಉತ್ತರ ಭಾರತದ ಬರ್ವೇಲಿಯ ಮತಪಂಡಿತರು ಭಾರತದ "ಇಂಡಿಯನ್ ಗ್ರಾಂಡ್ ಮುಫ್ತಿ" ಪಟ್ಟ ಧರಿಸಲು ಎಪಿ ಉಸ್ತಾದ್ ಮಾತ್ರ ಅರ್ಹರು ಎಂದು ಕಂಡುಕೊಂಡರು.*

*ಮರ್ಕಝ್ ನಾಲೆಡ್ಜ್ ಸಿಟಿ ಅಥವಾ ಜ್ಞಾನ ನಗರ ಕೇರಳದ ಕೋಝಿಕೋಡಿನಲ್ಲಿರುವ ಮರ್ಕಝ್ ವಿಶ್ವವಿದ್ಯಾನಿಲಯದ ಒಂದು ಯೋಜನೆಯಾಗಿದೆ. ಯೋಜನಾ ಅಡಿಪಾಯವನ್ನು ಡಿಸೆಂಬರ್ 24, 2012 ರಂದು ಸಮಸ್ತ ಕೇರಳ ಸುನ್ನಿ ಜಂ-ಇಯತುಲ್ ಉಲಮಾ ಅಧ್ಯಕ್ಷರಾಗಿದ್ದ ತಾಜುಲ್ ಉಲಮಾ ಅಸ್ಸಯ್ಯದ್ ಅಬ್ದುರ್ರಹ್ಮಾನ್ ಅಲ್ ಬುಖಾರಿ ತಂಙಳ್ ಹಾಕಿದರು. ಯೋಜನೆಯ ವೆಚ್ಚವು 10 ಮಿಲಿಯನ್ ಎಂದು ಅಂದಾಜಿಸಲಾಗಿದೆ.*
*ವಯನಾಡ್ ಎಂಬ ಸುಂದರ ಅತೀ ಮನೋಹರ* *ಘಾಟಿಯಿಂದ ಕೆಳಗಡೆ ಕಾಣುವ ಕೈದಪೊಯಿಲ್ 125 ರಷ್ಟು ಎಕರೆ ಸ್ಥಳದಲ್ಲಿ* 
*ಮರ್ಕಝ್ ನಾಲೆಡ್ಜ್ ಸಿಟಿ• ಶಹರೇ ಮುಬಾರಕ್ ಗ್ರ್ಯಾಂಡ್ ಮಸೀದಿ • ಮರ್ಕಝ್ ಆಟ್ರ್ಸ್ ಮತ್ತು ಸೈನ್ಸ್ ಕಾಲೇಜ್ • ಮರ್ಕಝ್ ಲಾ ಕಾಲೇಜ್ • ಮರ್ಕಝ್ ದುಬೈ • ಇಶತ್ ಪಬ್ಲಿಕ್ ಸ್ಕೂಲ್. ಯುನಾನಿ ವೈದ್ಯಕೀಯ ಕಾಲೆಜು ಮತ್ತು ಆಸ್ಪತ್ರೆ. ಅಪಾರ್ಟ್'ಮೆಂಟ್. ಕಮರ್ಷಿಯಲ್ ಸೌಧಗಳು ಮುಂತಾದ ಅನೇಕ ಪದ್ಧತಿಗಳ ನಿರ್ಮಾಣದ ಕೊನೆಯ ಅಂತದಲ್ಲಿದೆ*
*ಮರ್ಕಝ್ ನಾಲೆಡ್ಜ್ ಸಿಟಿ ಹೋಟೆಲ್ ಮತ್ತು ಕನ್ವೆನ್ಶನ್ ಸೆಂಟರ್, ಶಾಪಿಂಗ್ ಮಾಲ್, ಮತ್ತು ಸೈಬೊಲ್ಯಾಂಡ್ ಐಟಿ ಪಾರ್ಕುಗಳನ್ನು ಒಳಗೊಂಡಿದೆ.*

*ಮರ್ಕಝ್ ವಿಶ್ವವಿದ್ಯಾನಿಲಯವು ಜಗತ್ತಿನ ಹಲವು ರಾಷ್ಟ್ರಗಳ ಉನ್ನತ ವಿದ್ಯಾಸಂಸ್ಥೆಗಳೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದು ಹಲವು ವಿಶ್ವವಿದ್ಯಾನಿಯಲಗಳಿಂದ ಮಾನ್ಯತೆಯನ್ನು ಪಡೆದಿದೆ.ಮರ್ಕಝ್ ವಿಶ್ವವಿದ್ಯಾನಿಲಯವು ಈಜಿಫ್ಟ್ ಕೈರೋದ ಅಲ್-ಅಝ್ಹರ್ ವಿಶ್ವವಿದ್ಯಾನಿಯಲದ ಮಾನ್ಯತೆಯನ್ನು ಪಡೆದಿದೆ. ಅಲ್-ಅಝ್ಹರ್ ವಿಶ್ವವಿದ್ಯಾನಿಯದಲ್ಲಿ ನೀಡುವ ಅಝ್ಹರಿ ಪದವಿಯನ್ನು ಮರ್ಕಝ್ ವಿಶ್ವವಿದ್ಯಾನಿಯದಲ್ಲಿ ನೀಡಲಾಗುತ್ತದೆ*
*ತುರ್ಕಿ - ಫತಿಹ್ ವಿಶ್ವವಿದ್ಯಾಲಯ • ಮಲೇಷಿಯಾ – ಐ.ಐ.ಯು.ಎಮ್ • ಯುಎಇ - ಅಲ್ ಕ್ವಾಸಿಮಿಯಾ ವಿಶ್ವವಿದ್ಯಾಲಯ • ಈಜಿಪ್ಟ್ - ಅಲ್ ಅಝ್ಹರ್ ವಿಶ್ವವಿದ್ಯಾಲಯ • ಜೋರ್ಡಾನ್ - ವಿಶ್ವ ಇಸ್ಲಾಮಿಕ್ ವಿಜ್ಞಾನ ಮತ್ತು ಶಿಕ್ಷಣ ವಿಶ್ವವಿದ್ಯಾಲಯ • ಯುಕೆ - ಇಸ್ಲಾಮಿಕ್ ಹಸ್ತಪ್ರತಿ ಅಸೋಸಿಯೇಷನ್ • ಯೆಮೆನ್ - ದಾರ್ ಅಲ್-ಮುಸ್ತಫಾ ಇದರಿಂದಲೂ ಮರ್ಕಝ್ ಮಾನ್ಯತೆ ಪಡೆದಿದೆ*

*ಜೀವ ಕಾರುಣ್ಯದಲ್ಲಿ ಪ್ರಥಮ ಸ್ಥಾನದಲ್ಲಿರುವ ಮರ್ಕಝ್ ಕಲ್ಯಾಣ ಸೇವೆಗಳಿಗೂ ಒತ್ತು ನೀಡುತ್ತಿದೆ. ವಿವಿಧ ರೀತಿಯಲ್ಲಿ ಜನರಿಗೆ ಸೇವೆಯನ್ನು ಒದಗಿಸುತ್ತದೆ. ಉನ್ನತ ಅಧ್ಯಯನಗಳಿಗಾಗಿ ಬಡ ವಿದ್ಯಾರ್ಥಿಗಳಿಗೆ ಮರ್ಕಝ್ ಆರ್ಥಿಕ ಸಹಾಯವನ್ನು ಒದಗಿಸುತ್ತದೆ. ದೇಶದಲ್ಲಿ ಮತ್ತು ವಿದೇಶದಲ್ಲಿ ಅಧ್ಯಯನ ಮಾಡಲು ಆಸಕ್ತರಾಗಿರುವ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಸಂಸ್ಥೆಯಲ್ಲಿ ವಿಶೇಷ ನಿಧಿಯನ್ನು ಸ್ಥಾಪಿಸಲಾಗಿದೆ. ಉನ್ನತ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಈಜಿಪ್ಟ್, ರಷ್ಯಾ ರಾಷ್ಟ್ರಗಳ ಉನ್ನತ ವಿಶ್ವವಿದ್ಯಾನಿಲಯಗಳಲ್ಲಿ ಶಿಕ್ಷಣವನ್ನು ಮುಂದುವರೆಸಲು ಮರ್ಕಝ್ ಧನ ಸಹಾಯವನ್ನು ಒದಗಿಸುತ್ತದೆ. ಕೇರಳ ಮತ್ತು ಇತರ ರಾಜ್ಯಗಳಲ್ಲಿ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಮರ್ಕಝ್ ಪ್ರಾಯೋಜಕತ್ವದಲ್ಲಿ ಶಿಕ್ಷಣದ ವ್ಯವಸ್ಥೆಯನ್ನು ಮಾಡಲಾಗಿದೆ. ಕರ್ನಾಟಕ, ಉತ್ತರಪ್ರದೇಶ ಮತ್ತು ದೆಹಲಿಯಲ್ಲಿ ಮರ್ಕಝ್ ವಿಶೇಷ ಸೇವಾ ಕೇಂದ್ರಗಳನ್ನು ತೆರೆದಿದೆ. ಇಸ್ಲಾಮಿಕ್ ಅಧ್ಯಯನದಲ್ಲಿ ಮರ್ಕಝ್ ಉನ್ನತ ವಿದ್ಯಾಭ್ಯಾಸವನ್ನು ನೀಡುತ್ತಿದೆ. ಮೌಲವೀ ಫಾಝಿಲ್ ಸಖಾಫಿ ಮತ್ತು ಮೌಲವೀ ಫಾಝಿಲ್ ಖಕಾಮಿಲ್ ಸಖಾಫಿ ಎಂಬ ಬಿರುದನ್ನು ನೀಡುತ್ತಿದೆ. ಇದು ಇಸ್ಲಾಮಿಕ್ ಅಧ್ಯಯನದಲ್ಲಿ ಸ್ನಾತಕೋತ್ತರ ಪದವಿಯಾಗಿದೆ. ಮರ್ಕಝ್ ಅಧೀನದಲ್ಲಿ ಇಸ್ಲಾಮಿಕ್ ಧಾರ್ಮಿಕ ಪದವಿಯನ್ನು ಪಡೆದ ಸುಮಾರು 15,000ದಷ್ಟು ಧಾರ್ಮಿಕ ವಿದ್ವಾಂಸರು ಜಗತ್ತಿನ ವಿವಿಧ ರಾಷ್ಟ್ರಗಳಾದ ಆಫ್ರಿಕಾ, ಯುಕೆ, ಯುಎಸ್ಎ. ನ್ಯೂಜಿಲೆಂಡ್, ಸೌದಿ ಅರೇಬಿಯಾ, ಈಜಿಫ್ಟ್ ಮುಂತಾದ ಕಡೆಗಳಲ್ಲಿ ಸೇವೆಯಲ್ಲಿ ನಿರತರಾಗಿದ್ದಾರೆ.*

*ಇಸ್ಲಾಂ ದೀನನ್ನು ನೂತನವಾದಿಗಳು, ಫ್ಯಾಸಿಸ್ಟ್'ಗಳು ಕೊಳ್ಳೆ ಹೊಡೆಯಲು ಶ್ರಮಿಸುತ್ತಿರುವಾಗ, ಅವರನ್ನು ದಿಟ್ಟೆದೆಯಿಂದ ಎದುರಿಸಿ, ಸುನ್ನತ್ ಜಮಾಅತಿನ ನೈಜ ಆಶಯಾದರ್ಶಗಳನ್ನು  ಪ್ರಮಾಣಗಳ ಮೂಲಕ ನಿರ್ಭೀಡತೆಯಿಂದ ಪ್ರಭಾಷಿಸಿ, ಇಸ್ಲಾಂ ವಿರೋಧಿಗಳ ಮಟ್ಟ ಹಾಕುವ ಮೂಲಕ, ಸುನ್ನತ್ ಜಮಾಅತ್ ಅಂತ್ಯ ದಿನದವರೆಗೂ ನೆಲೆ ನಿಲ್ಲಬೇಕೆಂಬ ನಿಟ್ಟಿನಲ್ಲಿ, ನಾಲ್ಕು  ಸಾವಿರಕ್ಕಿಂತಲೂ ಅಧಿಕ ಮಸೀದಿ ನಿರ್ಮಿಸಿ, ಸಾವಿರಕ್ಕೂ ಹೆಚ್ಚು ಬಾವಿ, ಬೋರ್ ವೆಲ್, ನಿರ್ಮಿಸಿದ್ದು ಜನರು ಜಾತಿ ಮತ ವೇದವಿಲ್ಲದೆ ಭಾರತದ 8530 ಗ್ರಾಮಗಳಲ್ಲಿ ಶುದ್ಧ ನೀರು ಉಪಯೋಗಿಸುತ್ತಾರೆ.  ಸಾವಿರಾರು ಯತೀಂ ಮಕ್ಕಳ ಮನೇಗೆ ಮರ್ಕಝ್ ಹೊಂ ಕೇರ್ ಪದ್ಧತಿಯಲ್ಲಿ ಖರ್ಚಿಗೆ ಹಣ ಕಳಿಸಿ, ಹತ್ತು ಸಾವಿರಕ್ಕೂ ಹೆಚ್ಚು ಯುವಕರನ್ನು ವಿದೇಶ ನಾಡಿಗೆ ಕೆಲಸಕ್ಕೆ ಕಳಿಸಿ, ವಿದ್ಯಾ ಸ್ಥಾಪನೆಗಳನ್ನು ಸ್ಥಾಪಿಸಿ, ಸುನ್ನೀ ಸಂಘಟನೆಗಳನ್ನು ರಚಿಸಿ ಹಾದಿ ತಪ್ಪುತ್ತಿರುವ ಯುವ ಸಮೂಹವನ್ನು ನೈಜ ಸುನ್ನತ್ ಜಮಾಅತಿನ ಚೌಕಟ್ಟಿನೊಳಗೆ ನೆಲೆ  ನಿಲ್ಲಿಸಿ, ಸುನ್ನತ್ ಜಮಾಅತ್ ಬೃಹತ್ ಶಕ್ತಿಯಾಗಿ ಮಾರ್ಪಾಡಾಗುವಂತೆ ಮಾಡಿದ ಕೀರ್ತಿವೆತ್ತ ಘನ ವಿದ್ವಾಂಸ ಕಾಂತಪುರಂ ಉಸ್ತಾದ್ ಆಗಿದ್ದಾರೆ..*

*ಮರ್ಕಝ್ ಅಧೀನದಲ್ಲಿ ದೇಶದ ಪ್ರಮುಖ ರಾಜ್ಯಗಳಾದ ಕೇರಳ, ಕರ್ನಾಟಕ, ತಮಿಳುನಾಡು, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಗುಜರಾತ್, ಮಧ್ಯಪ್ರದೇಶ, ಉತ್ತರಾಖಂಡ್, ಜಮ್ಮು ಮತ್ತು ಕಾಶ್ಮೀರ, ಮಣಿಪುರ ಮತ್ತು ಗಲ್ಫ್ ಹಾಗೂ ಅರಬ್ ಸಂಯುಕ್ತ ಸಂಸ್ಥಾನದ ದುಬೈನಲ್ಲಿ ಶಿಕ್ಷಣ ಸಂಸ್ಥೆಗಳನ್ನು ತೆರೆದಿದ್ದಾರೆ. ಉಸ್ತಾದ್'ರವರ ಅಧೀನದಲ್ಲಿ ಜೀವ ಕಾರುಣ್ಯ, ಸಹಾಯ ಸಹಕಾರ,  ದುಬೈ ಮರ್ಕಝ್. SYS, SSF, ICF, KCF, ಮುಸ್ಲಿಂ ಜಮಾಹತ್'ಗಳೆಲ್ಲವೂ ಪ್ರಥಮ ಸ್ಥಾನದಲ್ಲಿದ್ದೆ*
*ಯುಎಇ ಪ್ರಮುಖ ಮತ ಪಂಡಿತರಾದ ಕಝ್ರಜ್ ಕುಟುಂಬದಿಂದ ಪ್ರವಾದಿ ಸ್ವಲ್ಲಲ್ಲಾಹು ಅಲೈವಸೆಲ್ಲರ ಪುಣ್ಯ ಕೇಶ ಪ್ರವಾದಿ ಪ್ರೇಮಿಯಾದ ಸುಲ್ತಾನುಲ್ ಉಲಮಾರಿಗೆ ಲಭಿಸಿದೆ.*
*ಕಾಂತಪುರ ಎಪಿ ಉಸ್ತಾದ್ ರವರು ನಡೆಸಿದ ಕೇರಳ ಯಾತ್ರೆ ಹಾಗೂ ಕರ್ನಾಟಕ ಯಾತ್ರೆ ಜಗತ್ಪ್ರಸಿದ್ದವಾಗಿದೆ. ಎಲ್ಲರ ಮನಸ್ಸಿಲ್ಲಿ ಸದಾ ನೆಲೆ ನಿಂತಿದೆ.*

*ಎಪಿ ಉಸ್ತಾದ್ ಝೈನಬ ಎಂಬ ಪತ್ನಿ ಮತ್ತು  ಈಜಿಫ್ಟ್ ಜಾಮಿಅ ಅಝ್'ಹರಿಯಲ್ಲಿ ವಿಧ್ಯಾಭ್ಯಾಸ ಪೂರ್ತಿ ಮಾಡಿ ಬಿರುದು ಪಡೆದ. ಹಾಫಿಳ್ ಡಾಕ್ಟರ್ ಅಬ್ದುಲ್ ಹಕೀಂ ಅಝ್'ಹರಿ ಏಕೈಕ ಪುತ್ರನನ್ನು ಹೊಂದಿದ್ದಾರೆ*
 *ಉಸ್ತಾದ್'ರಿಗೆ ಆರೋಗ್ಯ ಮತ್ತು ಆಫಿಯತ್ ಹೊಂದಿದ ದೀರ್ಘಾಯುಷ್ಯ ನೀಡಿ ಅಲ್ಲಾಹು ಅನುಗ್ರಹಿಸಲಿ. ಉನ್ನತದಿಂದ ಇನ್ನಷ್ಟು ಅತ್ಯುನ್ನತಕ್ಕೆ ಬೆಳೆಯಲು ಸೃಷ್ಟಿಕರ್ತನು ತೌಫೀಕ್ ನೀಡಲಿ. ನಮ್ಮೆಲ್ಲರನ್ನೂ ಅಲ್ಲಾಹು ಸ್ವರ್ಗ ಲೋಕದಲ್ಲಿ ಒಂದು ಗೂಡಿಸಲಿ..ಆಮೀನ್*

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...