Skip to main content

ಸುನ್ನತ್ ಜಮಾಹತ್ ಚಕ್ರವರ್ತಿ. ಮರ್'ಹೂಂ ತಾಜುಲ್'ಉಲಮಾ ("ಉಲಮಾಗಳ ಬಾದ್'ಷ")

*🌹ಸುನ್ನತ್ ಜಮಾಹತ್ ಚಕ್ರವರ್ತಿ🌹* *ಮರ್'ಹೂಂ ತಾಜುಲ್'ಉಲಮಾ* ("ಉಲಮಾಗಳ ಬಾದ್'ಷ") 🖊️ಹಮೀದ್ ಕಜ ಮಂಜೇಶ್ವರ *ತಾಜುಲ್ ಉಲಮಾ ಉಳ್ಳಾಲಂ ತಂಙಲ್ ಎಂಬ ಸಯ್ಯದ್ ಅಬ್ದುಲ್ ರಹಮಾನ್ ಕುಂಞಕೋಯ ಅಲ್ ಬುಖಾರಿ ತಂಙಳ್ ಅವರು 1921 ಹಿಜರಿ 1341 ರಬೀವುಲ್ ಅವ್ವಲ್ 25 ಶುಕ್ರವಾರ ಸಯ್ಯದ್ ಅಬೂಬಕ್ಕರ್ ಚೆರುಕುಂಞಿ ಕೋಯ ತಂಗಳ್ ಮತ್ತು ಹಲೀಮ ಕುಂಞಿ ಬೀಬಿಯವರ ಮುದ್ದಿನ ಮಗನಾಗಿ ಕ್ಯಾಲಿಕೆಟ್ ಕರುವಂತುರುತ್ತಿ ಎಂಬಲ್ಲಿ ಜನನ.* *ರಸೂಲ್ ಸ್ವಲ್ಲಲ್ಲಾಹು ಅಲೈವಸೆಲ್ಲಮರ ಮಗಳು ಫಾತಿಮ ಬೀಬಿಯವರ ಮಗ ಹಸನ್ (ರಅ)ರವರ 39 ನೇ ಪರಂಪರೆಯ ಪೌತ್ರ'ರಾಗಿದ್ದಾರೆ ತಾಜುಲ್ ಉಲಮ* *ಆತ್ಮೀಯತೆಯಿಂದ ಕೂಡಿದ ಉನ್ನತ ಕುಟುಂಬದ ತಂದೆ ಯವರನ್ನು ಎಲ್ಲರು ಗೌರವಿಸುತ್ತಾರೆ ಅಷ್ಟೇ ಭಯಪಡುತಿದ್ದರು. ತಮ್ಮ ಅಹವಾಲು ಕಷ್ಟಗಳನ್ನು ಮುಂದಿಟ್ಟು ಪ್ರಾರ್ಥಿಸಬೇಕೆಂದು ನಾನಾ ಕಡೆಗಳಿಂದ ಜನರು ಬರುತಿದ್ದರು* *ತಾಯಿ ಕುಂಞಿ ಬೀಬಿಯವರು ಯಾವಾಗಲೂ ಸುನ್ನತ್ ಉಪವಾಸ ಹಿಡಿದು ಹೆಚ್ಚೆಚ್ಚು ನಮಾಜ್ ನಿರ್ವಹಿಸುತ್ತಾ ಮಕ್ಕಳು ಉನ್ನತ ಸ್ಥಾನಕ್ಕೆ ಮುಟ್ಟಬೇಕೆಂದು ಸದಾ ಪ್ರಾರ್ಥಿಸುತ್ತಿದ್ದರು. ಹದಿನೈದು ವರ್ಷದವರೇಗೆ ಧಾರ್ಮಿಕ ವಿಧ್ಯಾಭ್ಯಾಸ ಆಗ ರಾಮಂತಳಿ ಸಯ್ಯದ್ ಅಹಮದ್ ಕೋಯ ತಂಙಳರವರ ಪುತ್ರಿ ಫಾತಿಮ ಕುಂಞಿ ಬೀಬಿಯರೊಂದಿಗೆ ತಂದೆ ನಿಕಾಹ್ ಮಾಡಿಸಿ ಬಿಡುತ್ತಾರೆ ಚಿಕ್ಕ ಪ್ರಾಯದಲ್ಲೇ ಇಲ್'ಮಿನಲ್ಲಿ ಅಗಾಧ ಪಾಂಡಿತ್ಯವಿದ್ದ ತಂಙಳ್'ರವರು ಮುಹಮ್ಮದ್ ಮುಸ್ಲಿಯಾರ್, ಕಾಸರಗೋಡು ಕಾಝಿ ಅವರಾನ್ ಮುಸ್ಲಿಯಾರ್, ಪರವನ್ನ ಉಸ್ತಾದ್, ಕಣ್ಣಿಯತ್ ಉಸ್ತಾದ್, ಶಂಸುಲ್ ಉಲಮಾ, ಮುಂತಾದವರಿಂದ ದರ್ಸ್ ಕಲಿಯುತ್ತಾರೆ* *ಮದುವೆಯಾದ ಕೆಲವು ತಿಂಗಳುಗಳ ಬಳಿಕ ತಮಿಳುನಾಡಿನ ವೆಳ್ಳೂರ್ ಬಾಕಿಯಾತುಸ್ಸಾಲಿಯಾತಿಗೆ ಕಲಿಯಲು ಮನೆಯಲ್ಲಿ ಹೇಳದೆ ಯಾತ್ರೆ ಹೋಗಿ ಅಲ್ಲಿ ಪ್ರಮುಖ ಪಂಡಿತರಾದ ಹಜ್ರತ್ ಶೇಕ್ ಆದಂ, ಹಜ್ರತ್ ಶೇಕ್ ಹಸನ್, ಮುಂತಾದವರ ಶಿಷ್ಯರಾಗುತ್ತಾರೆ* *ಅಲ್ಲಿ ತನಗಿಂತ ಪ್ರಾಯದವರಿಗೆ ದರ್ಸ್ ಕಲಿಸಲು ಉಸ್ತಾದ್'ರವರ ಅಪ್ಪಣೆ ಮೇರೆಗೆ ಕಲಿಸುತ್ತಾರೆ.* *ಕೆಲವು ದಿನಗಳ ನಂತರ ವಿಪರೀತ ಜ್ವರ ಶುರು ಆಗುತ್ತದೆ ಇಪ್ಪತ್ತೊಂದು ದಿನಗಳವರೆಗೂ ಜ್ವರ ಮುಂದುರಿಯುತ್ತೆ.* *ಗುಣ ಮುಖವಾದಾಗ ತಾನು ಕಂಠಪಾಟ ಮಾಡಿದ ಕುರಾನ್ ಸೂರತ್ ಗಳಾದ ಅಲ್ ಕಹಫ್, ತ್ವಾಹ, ಯಾಸೀನ್, ಗಳೆಲ್ಲವೂ ಮರೆತು ಹೋಗುತ್ತದೆ.* *ದುಃಖದಿಂದ ಮುಂದೆ ಕಲಿಯಲು ಶುರುಮಾಡುತ್ತಾರೆ ನಂತರ ತಫ್ಸೀರ್ ಕಲಿಯುವ ಸಂದರ್ಭದಲ್ಲಿ ಒಂದು ಬಾರಿ ಓದಿದರೆ ಎಲ್ಲವು ಒಂದೇ ಬಾರಿಗೆ ಮನ ಪಾಠ ಆಗುತ್ತಿತ್ತು ಗುರುವರ್ಯರೆಲ್ಲರು ಅಚ್ಚರಿಗೊಳ್ಳುತ್ತಾರೆ.* *ಪ್ರಮುಖ ಪಂಡಿತ ಗುರುಗಳಿಂದ ಕಲಿತು ಪ್ರಥಮ ಸ್ಥಾನ ಒಂದನೇ ರಾಂಕ್ ನಲ್ಲಿ ಬಾಖವಿ ಬಿರುದು ಪಡೆದು ಊರಿಗೆ ಮರಳುತ್ತಾರೆ* *ಒಮ್ಮೆ ಕಣ್ಣಿಯತ್ ಉಸ್ತಾದ್ ದರ್ಸ್ ನಡೆಸುತ್ತಿರುವಾಗ ಒಂದು ವಿಷಯದ ಬಗ್ಗೆ ಉಳ್ಳಾಲ ತಂಙಳ್ ಅದು ಈ ತರ ಎಂದು ವಾದಿಸಿದರು ಗುರು ಶಿಷ್ಯರಲ್ಲಿ ಮೂರು ದಿನಗಳವರೆಗೂ ಚರ್ಚೆ ನಡೆಯಿತು ನಾಲ್ಕನೇ ದಿನ ತಡ ರಾತ್ರಿಯವರೇಗೂ ಕಿತಾಬುಗಳಲ್ಲಿ ಹುಡುಕಾಡಿ ರಾತ್ರಿ ಮುತಅಲ್ಲಿಮರು ಮಲಗಿದ ರೂಮಿಗೆ ಕಣ್ಣಿಯತ್ ಉಸ್ತಾದ್ ಹೋಗಿ ಬಾಗಿಲು ಬಡಿಯುತ್ತ ಎಲ್ಲರನ್ನು ಎಬ್ಬಿಸಿ ತಾಜುಲ್ ಉಲಮ ಹೇಳಿದ್ದು ಸರಿ ಎಂದು ಎಲ್ಲರಿಗೂ ತಿಳಿಸುತ್ತಾರೆ* *ಮಾವನವರನ್ನು ಕಾಣಬೇಕೆಂದು ಅವರನ್ನು ಕಾಣಲು ಅದುವರೆಗೂ ನೋಡದ ಎರ್ನಾಕುಲಮಿಗೆ ಟ್ರೈನ್ ಹತ್ತಿದ ತಾಜುಲ್ ಉಲಮ ಮಗ್ರಿಬ್'ಗೆ ಸ್ವಲ್ಪ ಮುಂಚೆ ಅಲ್ಲಿಗೆ ಮುಟ್ಟಿದ್ದು ಲುಹರ್ ಮತ್ತು ಅಸರ್ ಮೊದಲೇ ಜಮ್ಮುಕಸರ್ ಮಾಡಿದ್ದು* *ಅಲ್ಲಿ ಇಳಿದು ಒಂದು ಕುದುರೆ ಗಾಡಿಯಲ್ಲಿ ಹತ್ತಿರ ಮಸೀದಿಯಿದ್ದರೆ ಬಿಡಲು ಹೇಳಿದರು.* *ಮಸೀದಿಯಲ್ಲಿ ವುಳೂಹ್ ಮಾಡುತ್ತಿರುವಾಗ ಹುಚ್ಚನಂತೆ ಕಾಣುವ ತಿರುಗಾಡುತಿದ್ದ ಒಬ್ಬರನ್ನು ನೋಡಿದರು* *ನಮಾಜಿನ ನಂತರ ಇಮಾಮರನ್ನು ಮಾತಾಡಿಸಿ ಮಾವನನ್ನು ಹುಡುಕಿ ಬಂದಿದ್ದು ಮಾವನ ಹೆಸರು ಹೇಳಿದಾಗ ಅವರು ನನಗೆ ಗೊತ್ತು ಅಲ್ಲಿಗೆ ಬೋಟಿನಲ್ಲಿ ಹೋಗಬೇಕು ಗಾಳಿ ಮಳೆ ಇದ್ದ ಕಾರಣ ಸ್ವಲ್ಪ ತೊಂದರೆ ಇದೆ ಇವತ್ತು ನನ್ನ ಅತಿಥಿಯಾಗಿ ಇರಿ ಹೋಗುವ ಏರ್ಪಾಡು ನಾನು ಮಾಡುತ್ತೇನೆ ಎಂದು ತಿಳಿಸಿ ಇಷಾ ಹದ್ದಾದೆಲ್ಲ ಮುಗಿಸಿದ ನಂತರ ಮಸೀದಿ ಪಕ್ಕದಲ್ಲಿದ್ದ ಚಿಕ್ಕ ಗುಡಿಸಲಿನ ಇಮಾಮಿನ ರೂಮಿಗೆ ಇಬ್ಬರು ಹೋದರು* *ಅಲ್ಲಿ ಅವರಿಗೆ ಊಟ ತಂದಿಟ್ಟಿದ್ದರು ನಾನು ಮೂತ್ರ ಮಾಡಿ ಬರುತ್ತೇನೆಂದು ಇಮಾಂ ಹೊರಗಡೆ ಹೋದ ಸಂದರ್ಭದಲ್ಲಿ ಹೊರಗೆ ಮೊದಲು ನೋಡಿದ ಹುಚ್ಚನಾಗೆ ಕಾಣುವ ವ್ಯಕ್ತಿ ಬಂದು ಪಾತ್ರೆಯ ಮುಚ್ಚಳ ತೆಗೆದು ಕೈ ಹಾಕಿ ಅನ್ನ ತಿನ್ನಲು ಶುರುಮಾಡಿದರು ಅಷ್ಟರಲ್ಲಿ ಇಮಾಮ್ ಬಂದು ಅವರಿಗೆ ಕರಿ ಪದಾರ್ಥವನ್ನು ಕೊಟ್ಟರು.* *ತಿನ್ನದೇ ತಾಜುಲ್ ಉಲಮಾರತ್ತಿರ ಬಂದು ಕುಳಿತರು ದುವಾ ಮಾಡಲು ಹೇಳಿದಾಗ ಅರಬಿಯಲ್ಲಿ ಏನೂ ದುಹಾ ಮಾಡಿದಾಗ ತಾಜುಲ್ ಉಲಮ ಆಮೀನ್ ಹೇಳಿದರು ಅವರು ಹೋದರು.* *ಇಮಾಂ ಕೇಳಿದರು ಪರಿಚಯವಿಲ್ಲದ ಅವರತ್ತಿರ ಯಾಕೆ ದುವಾ ಮಾಡಿಸಿದಿರಿ.* *ಕೈ ಹಾಕಿ ತಿನ್ನುವಾಗ ಓಡಿಸದೆ ನೀವು ಕರಿ ಕೊಟ್ಟಿರಿ ಅದಕ್ಕೆ ದುವಾ ಮಾಡಿಸಿದೆ ಅಂದರು.* *ಅವರು ಯಾರು ಗೊತ್ತೇ..?* *ಅವರು ಪಳ್ಳಿಪಡಿ ಮಸ್ತಾನ್* *ಅವರತ್ತಿರ ಯಾರು ಎಷ್ಟೇ ಹೇಳಿದರು ದುವಾ ಮಾಡುವುದಿಲ್ಲ ನಿಮ್ಮ ಭಾಗ್ಯ ಇಮಾಂ ತಿಳಿಸಿದರು* *ಅವರ ಬಗ್ಗೆ ಮಾವನವರಿಂದ ಮುಂಚೆ ತುಂಬಾ ಕೇಳಿದ್ದರು.* *ಪಳ್ಳಿಪ್ಪಡಿ ಮಸ್ತಾನ್'ರ ದುವಾದ ಫಲವೇ ಉಳ್ಳಾಲಕ್ಕೆ ಬರಲು ಕಾರಣ ಎಂದು ಹಲವಾರು ಬಾರಿ ತಂಙಳ್'ರು ಹೇಳುತ್ತಿದ್ದರು* *ತನ್ನ ಉಸ್ತಾದ್ ಆದ ಕಾಸರಗೋಡು ಕಾಝಿ ಅವರಾನ್ ಮುಸ್ಲಿಯಾರ್ ನಿರ್ದೇಶನ ಪ್ರಕಾರ 1952ರಲ್ಲಿ ಉಳ್ಳಾಲಕ್ಕೆ ಮುದರಿಸ್ ಆಗಿ ಹೋಗುತ್ತಾರೆ ಸಯ್ಯದ್ ಮದನಿ(ರಅ)ಯವರ ಸಾನಿಧ್ಯದಲ್ಲಿ ತಾಜುಲ್ ಉಲಮಾ ಸಂತೋಷದಿಂದ* *ಮನುಷ್ಯನ ಹೃದಯದಲ್ಲಿ ಅಲ್ಲಾಹು ಇಟ್ಟು ಕೊಡುವ ಪ್ರಭೆ'ಪ್ರಕಾಶವಾಗಿದೆ ಇಲ್'ಮ್, ಎಂಟು ಮತಅಲ್ಲಿಮರಿಂದ ಶುರುಗೊಂಡ ದರ್ಸ್ 1971ರಲ್ಲಿ ಬ್ರಹತ್ ಸಯ್ಯದ್ ಮದನಿ ಅರಬಿಕ್ ಕಾಲೇಜು ಮತ್ತು ಹಲವಾರು ಮದ್ರಸ ಶಾಲೆ ಕಾಲೇಜುಗಳು ಸ್ಥಾಪನೆ ಆಗಿ ತಾಜುಲ್ ಉಲಮ ಅದರ ಪ್ರಿನ್ಸಿಪಾಲರಾಗಿ ಸೇವೆ ಶುರು ಮಾಡಿ ವಫಾತ್'ನವರೇಗೂ ಮುಂದುವರಿಯುತ್ತದೆ ತಂಙಳ್'ರ ಕಾಲದಲ್ಲಿ ಐಶ್ವರ್ಯ ಸಮೃದ್ಧವಾಗಿದ್ದ ಉಳ್ಳಾಲ ಈಗ ಬರಡಾಗಿದೆ.* *ಕರ್ನಾಟಕದ ನಾನಾ ಭಾಗಗಳಿಂದ ಉಳ್ಳಾಲಕ್ಕೆ ಕಲಿಯಲು ಮುತಅಲ್ಲಿಮರು ಬಂದು ಆತ್ಮೀಯ ನೆಚ್ಚಿನ ಗುರುಗಳಿಂದ ಕಲಿತು ಮದನಿ ಬಿರುದು ಪಡೆದು ಕತ್ತಲೆಯಾಗಿದ್ದ ಕರ್ನಾಟಕವನ್ನು ಇಲ್'ಮಿನಿಂದ ಬೆಳೆಗಿಸಿದರು.* *ತಾಜುಲ್ ಉಲಮಾ ಕಾಲಿಟ್ಟ ನಂತರ ಕರ್ನಾಟಕ ಮಣ್ಣಿನನಲ್ಲಿ ಸಾವಿರಾರು ಮಸೀದಿಗಳು ತಲೆ ಎತ್ತ ತೊಡಗಿತು* *ಉಳ್ಳಾಲ ಮಸೀದಿ ವಠಾರದಲ್ಲಿ ಸುತ್ತಲು ಕೂತಿರುವ ಶಿಷ್ಯಂದಿರಿಗೆ ಸುತ್ತಾಡಿಕೊಂಡು ಕಿತಾಬುಗಳನ್ನು ನೋಡದೆ ಪಾಠ ಹೇಳಿಕೊಡುತ್ತಿದ್ದ ತಾಜುಲ್ ಉಲಮಾರ ಅತ್ಯುನ್ನತ ಪಾಂಡಿತ್ಯದ ಬಗ್ಗೆ ಎಲ್ಲರೂ ಆಶ್ಚರ್ಯಪಟ್ಟರು* *ದಿನ ನಿತ್ಯ ತುಂಬಾ ಕುರಾನ್ ಓದುತ್ತಾ ಇರುವ ತಾಜುಲ್ ಉಲಮಾ ಪ್ರತಿ ರಂಜಾನ್ ತಿಂಗಳಲ್ಲಿ ಹದಿನೈದು ಕುರಾನ್ ಕತಮ್ ಮುಗಿಸುತಿದ್ದರು* *ಉಪ್ಪಾಪ ರಸೂಲ್ ಸ್ವಲ್ಲಲ್ಲಾಹು ಅಲೈವಸೆಲ್ಲಮರನ್ನು ಅತಿಯಾಗಿ ಪ್ರೀತಿಸುತ್ತಿದ್ದ ಉಳ್ಳಾಲಂ ತಂಙಳ್ ಬುರುದಾ: ಬೈತ್ ಹೆಚ್ಚಾಗಿ ಹಾಡಿಸಿ ಕೇಳುತ್ತಾ ಇದ್ದರು.* *ಇಷ್ಟು ಪ್ರಾಯ ಆದರೂ ನನಗೆ ಇಮ್ಮತ್ ಮತ್ತು ತಾಕತ್ತು ಇರಲು ಕಾರಣ ಸದಾ ನನ್ನ ತಲೆಯಲ್ಲಿ ಇರುವ ಟೊಪ್ಪಿಯಲ್ಲಿ ಮುತ್ತು ನಬಿ ಸ್ವಲ್ಲಲ್ಲಾಹು ಅಲೈವಸೆಲ್ಲಮರ ಕಾಲಿನ ಪಾದದ ನಿಶಾನಿನ ಚಿತ್ರವಿದೆ ಎಂದು ಹೇಳಿ ಹೆಮ್ಮೆ ಪಡುತ್ತಿದ್ದರು* *ಜಾಮಿಯ ಸಹದಿಯ್ಯ ಕಾಸರಗೋಡು ದೇಳಿಯಲ್ಲಿ ಕಲ್ಲಟ್ರ ಹಾಜಿಯವರು ನೀಡಿದ ಸ್ಥಳದಲ್ಲಿ ಕಟ್ಟಡ ನಿರ್ಮಿಸಿ ಎಂ ಎ ಉಸ್ತಾದ್ ರವರನ್ನು ಸಾರಥಿ ಮಾಡಿ ಉದ್ಘಾಟನೆಗೆ ಕಣ್ಣಿಯತ್ ಅಹಮದ್ ಉಸ್ತಾದ್'ರನ್ನು ಮತ್ತು ಅನೇಕ ಪಂಡಿತ ಶಿರೋಮಣಿಗಳನ್ನು ಕರೆಸಲಾಯಿತು ಆಗ ಕಣ್ಣಿಯತ್ ಉಸ್ತಾದ್ ತನ್ನ ಪ್ರಮುಖ ಶಿಷ್ಯನಾದ ತಾಜುಲ್ ಉಲಮಾರ ಕೈ ಹಿಡಿದು ಇದು ನನ್ನ ಆಪ್ತ ಶಿಷ್ಯ ಕಿತಾಬ್ ತಿರಿಯುಂ(ಗೊತ್ತು) ಅನ್ನುತ್ತಾ ಅವರನ್ನು ಅಧ್ಯಕ್ಷ ಸ್ಥಾನದಲ್ಲಿ ಕುಳಿತು ಕೊಳ್ಳಿ ಎಂದು ಹೇಳುತ್ತಾರೆ* *ತದನಂತರ ಉಳ್ಳಾಲ ತಂಙಳ್'ರವರು ವಫಾತ್ ಆಗುವವರೇಗೂ ಸುನ್ನತ್ ಜಮಾಹತಿನ ಚಕ್ರವರ್ತಿಯಾಗಿಯೇ ಉಳಿದಿದ್ದರು.* *1956 ರಲ್ಲಿ ಉಳ್ಳಾಲ ತಂಙಳ್ ಸಮಸ್ತ ಕೇರಳ ಜಮ್ಯತ್ತುಲ್ ಉಲಮ ಮೆಂಬರ್ ಆಗುತ್ತಾರೆ 1989ರಿಂದ ವಫಾತಿನವರೇಗೆ ಸಮಸ್ತ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿದರು.* *ಅವುಲಿಯಾಗಳರೊಂದಿಗೆ ಆತ್ಮೀಯ ಒಡನಾಟ ಇದ್ದ ತಾಜುಲ್ ಉಲಮಾರ ಹಲವಾರು ಕರಾಮತ್ ಗಳನ್ನು ನಾವು ಕೇಳಿದ್ದೇವೆ ಪೆಟ್ರೋಲ್ ಇಲ್ಲದೆ ಕಾರು ಓಡಿದ್ದು ಮತಪ್ರಸಂಗ ನಡೆಯುತ್ತಿರುವಾಗ ಜೊರಾಗಿ ಗಾಳಿ ಮಳೆ ತೊಡಗಿದಾಗ ಪ್ರಾರ್ಥಿಸಿದ ಕೂಡಲೇ ನಿಂತು ಹೋದ ಮುಂತಾದ ಸಂಭವಗಳು ಎಷ್ಟೋ ನಡೆದಿದೆ.* *ತಾಜುಲ್ ಉಲಮಾರನ್ನು ನಿರಂತರ ಬೇಟೆಯಾಡಿದ ಮಂಗಳೂರಿನಲ್ಲಿ ಬೈದು ಪ್ರಸಂಗಿಸಿದ ಒಬ್ಬ ವ್ಯಕ್ತಿ ಮರಣಹೊಂದಿದಾಗ ಆತನ ನಾಲಗೆ ಸುತ್ತಿದ ಸ್ಥಿತಿಯಲ್ಲಿ ಇತ್ತೆಂದು ಶಿಷ್ಯನೇ ತಂಙಳತ್ತಿರ ಬಂದು ತಿಳಿಸಿದ್ದಾರೆ* *ಪ್ರಥಮ ಹಜ್ಜ್ ನಿರ್ವಹಿಸಲು 1961ನೇ ಇಸವಿಯಲ್ಲಿ ಹಡಗಿನಲ್ಲಿ ಹೋದ ತಾಜುಲ್ ಉಲಮಾ ಸತತ ನಲುವತ್ತಕ್ಕಿಂತಲೂ ಹೆಚ್ಚು ಬಾರಿ ಹಜ್ಜ್ ನಿರ್ವಹಿಸಿರುತ್ತಾರೆ. ತಾಜುಲ್ ಉಲಮಾರ ಬಗ್ಗೆ ತಪ್ಪಾಗಿ ಭಾವಿಸಿದ ಹೊಸಂಗಡಿಯ ಒಬ್ಬರು ತಾನು ಹಜ್'ಗೆ ಹೋದ ಸಂದರ್ಭದಲ್ಲಿ ಮಕ್ಕಾದಿಂದ ಮೀನಾ ಮುಟ್ಟಲು ಐದಾರು ಗಂಟೆ ಸಮಯ ತಲುಗಿತು ಆ ಬಸ್ ನಲ್ಲಿ ಉಳ್ಳಾಲ ತಂಙಳ್ ಇದ್ದರು ಬಸ್ ಇಳಿಯುವವರೇಗೂ ಕುರಾನ್ ಓದುತ್ತಿದ್ದ ಅವರು ಮುಸ್ಹಪ್'ನಿಂದ ಕಣ್ಣೆತ್ತಿ ಒಮ್ಮೆಯು ಬೇರೆ ಕಡೆ ನೋಡದ ಅವರ ಬಗ್ಗೆ ಬೇಜಾರಾಗಿ ಬಸ್ ಇಳಿದಾಗ ಕ್ಷಮೆ ಕೇಳಿ ನೈಜ ಸುನ್ನಿಯಾದರು* *ನೂರಹದಿನೈದು ವರ್ಷ ಜೀವಿಸಿದ ವರಕ್ಕಲ್ ಮುಲ್ಲಕ್ಕೋಯ ತಂಙಳ್ ರವರ ಕಾಲದಲ್ಲಿ ಸ್ಥಾಪನೆಗೊಂಡ ಸಮಸ್ತವನ್ನು ಸುನ್ನತ್ ಜಮಾಹತಿನಿಂದ ಬೇರೆ ದೆಸೆಗೆ ಕೊಂಡುಹೋಗುವುದನ್ನ ಅರಿತ ತಾಜುಲ್ ಉಲಮಾ, ಕಮರುಲ್ ಉಲಮಾ, ನೂರುಲ್ ಉಲಮಾ, ಮತ್ತು ಸಂಗಡಿಗರು ವಿಂಗಡಣೆಗೆ ನಿರ್ಬಂಧಿತರಾದರು. ಸುನ್ನತ್ ಜಮಾಹತ್ ಆಶಯ ಆದರ್ಶ ಮಾತ್ರ ಇಸ್ಲಾಂ ಅದು ರಸೂಲ್ ಮತ್ತು ಸಹಾಬಿಗಳ ಚರ್ಯೆ ಅದನ್ನು ಹಿಡಿದವರು ಮಾತ್ರ ರಕ್ಷಣೆಗೊಳ್ಳುವರು ಸದಾ ಕಾಲ ತಾಜುಲ್ ಉಲಮಾ ನೆನಪಿಸುತ್ತಾ ಇದ್ದರು. ಎಸ್ ವೈ ಎಸ್, ಎಸ್ ಎಸ್ ಎಫ್, ಕೆ ಸಿ ಎಫ್, ಮುಸ್ಲಿಂ ಜಮಾತ್ ಮುಂತಾದ ಸಂಘಟನೆಗಳೆಲ್ಲವೂ ಇವರ ಕೈಯಲ್ಲಿ ಭದ್ರವಾಗಿ ಲಕ್ಷಾಂತರ ಮಂದಿ ಉತ್ತಮವಾಗಿ ಪ್ರವರ್ತಿಸುತ್ತಾ ಇದ್ದಾರೆ* *ಸಮಸ್ತ ವಿಂಗಡಣೆ ಗೊಂಡ ಸಮಯ ಉಳ್ಳಾಲ ಉರೂಸ್. ಎಲ್ಲಾ ಮತಪಂಡಿತರನ್ನು ಕರೆಯಬೇಕೆಂದು ತಾಜುಲ್ ಉಲಮ ತಿಳಿಸುತ್ತಾರೆ ತಾವು ಜೊತೆ ಬರಬೇಕೆಂದು ಕಮಿಟಿಯವರ ಒತ್ತಾಯಕ್ಕೆ ಜೊತೆಗೆ ಹೋಗಿ ಕಣ್ಣಿಯತ್ ಉಸ್ತಾದ್ ರವರ ಮನೆ ಮುಂದೆ ಕಾರಿನಲ್ಲೇ ಕೂತರು* *ವಿಷಯ ತಿಳಿಸಿದಾಗ ಕುಂಞಕೋಯ ಎಲ್ಲಿ..?* *ಕಾರಿನಲ್ಲಿದ್ದಾರೆ..* *ಕೂಡಲೇ ತಮ್ಮ ಜನರನ್ನು ಕಳಿಸಿ ತಂಙಳರನ್ನು ಕರೆಸಿದರು ಸೆಲಾಂ ಹೇಳಿ ಒಳಗಡೆ ಬಂದಾಗ. ಕುಂಞಕೋಯ ಎಂತಹ ಕೆಲಸ ಮಾಡಿದ್ದು ಇಲ್ಲಿಯವರೆಗೂ ಬಂದು...* *ಅದಕ್ಕೆ ನೀವು ನನ್ನನ್ನು ಹೊರದಬ್ಬಿದರಲ್ಲವೇ..* *ಪೇಪರ್ ನಲ್ಲೆಲ್ಲಾ ಬಂದಿದೆ..* *ತಾಜುಲ್ ಉಲಮ ತಿಳಿಸಿದಾಗ* *ಯಾರು ಹೇಳಿದ್ದುನಾನು ನಿಮ್ಮೊಟ್ಟಿಗೆ ಎಂದು ಕಣ್ಣಿಯತ್ ಉಸ್ತಾದ್ ತಿಳಿಸುತ್ತಾರೆ* *ಕೆಲವು ರಾಜಕೀಯ ಪಕ್ಷದ ಕುಬುದ್ದಿಗಳು ತಮ್ಮ ಲಾಭಕ್ಕಾಗಿ ಸುನ್ನತ್ ಜಮಾಹತನ್ನು ಹೊಡೆಯುವ ಕೆಲಸ ಮಾಡಿದರು* *ಎರಡು ಗಂಡು ಮತ್ತು ಐದು ಹೆಣ್ಣು ಮಕ್ಕಳನ್ನು ಹೊಂದಿರುವ ತಾಜುಲ್ ಉಲಮಾರ ಪುತ್ರ ಕೂರ'ತ್ ತಂಙಳ್ ಎಂಬ ಪಝಲ್ ಪೂಕೋಯ ತಂಙಳ್ ಅಧ್ಯಾತ್ಮ ಆತ್ಮೀಯ ಲೋಕದಲ್ಲಿ ಹಲವಾರು ಕರಾಮತ್ ಗಳನ್ನು ಕಂಡ ಕರ್ನಾಟಕದ ಜನರಿಗೆ ಆಸರೆಯಾಗಿದ್ದಾರೆ* *ತಾರೀಕು 01 ಫೆಬ್ರವರಿ 2014 ಶನಿವಾರ ಲಕ್ಷಾಂತರ ಜನರು ನಡುಗುವ ದುಃಖ'ಕರವಾದ ವಾರ್ತೆ ಉಳ್ಳಾಲಮ್ ತಂಙಳ್ ವಫಾತ್ ಎಂದು ಕೇಳಿ ಎಲ್ಲರೂ ದುಃಖಿತರಾದರು ಎಟ್ಟಿಕ್ಕುಳಂ ಅವರ ವಸತಿಗೆ ಲಕ್ಷೋಪ ಲಕ್ಷ ಜನರು ಮುಟ್ಟಿದರು ಹತ್ತು ಕಿಲೋ ಮೀಟರ್ ದೂರದಲ್ಲೇ ವಾಹನಗಳನ್ನಿಟ್ಟು ಜನರು ನಡೆದರು (ಹತ್ತು ಕಿಲೋ ಮೀಟರ್ ಗಿಂತ ಹೆಚ್ಚು ರಾತ್ರಿಡೀ ನಡೆದು ಜನಾಝ ನೋಡಲು ನಮಗೆ ಸಿಗಲಿಲ್ಲ) ಮೊದಲ ಜನಾಝ ನಮಾಜ್ ಬೆಳಿಗ್ಗೆ 7ಗಂಟೆಗೆ ಕೂರ'ತ್ ತಂಙಳ್ ನಂತರ ಎಪಿ.ಉಸ್ತಾದ್ ತದನಂತರ ಸಯ್ಯದ್ ಹಾಗೂ ಆಲಿಮ್'ಗಳ ನೇತೃತ್ವದಲ್ಲಿ ಅನೇಕನೇಕ ಬಾರಿ ಮಯ್ಯತ್ ನಮಾಜ್ ನಡೆಯಿತು ಕಬರಿಗೆ ಜನಾಝ ಇಟ್ಟು ಸುಲ್ತಾನುಲ್ ಉಲಮಾ ತಲ್ಕೀನ್ ಒದಿದರು* *ರಬೀವುಲ್ ಆಖರ್ ಒಂದನೇ ತಾರೀಕು ತಾಜುಲ್ ಉಲಮಾ, ಎರಡನೇ ತಾರೀಕು ರಹೀಸುಲ್ ಉಲಮಾ ಕಣ್ಣಿಯತ್ಉಸ್ತಾದ್,* *ಮೂರನೇ ತಾರೀಕು ಶಂಶುಲ್ ಉಲಮಾ'ರವರೆಲ್ಲಾ* *ರಬೀವುಲ್ ಆಖರ್'ನಲ್ಲಿ ವಫಾತ್, ತಾರೀಕಿನಲ್ಲಿ ವಿಸ್ಮಯ* *ಎಟ್ಟಿಕುಳಂ ತಾಜುಲ್ ಉಲಮಾ ದರ್ಗಾದಲ್ಲಿ ಪ್ರತಿ ದಿವಸ ನೂರಾರು ಜನರು ಸಂದರ್ಶನ ನಡೆಸುತ್ತಾ ಇದ್ದಾರೆ ಅವರ ಬರಕತಿನಿಂದ ನಮ್ಮೆಲ್ಲರ ಉದ್ದೇಶ ಈಡೇರಲಿ ಅವರೊಟ್ಟಿಗೆ ಉನ್ನತ ಸ್ವರ್ಗದಲ್ಲಿ ನಮ್ಮೆಲ್ಲರನ್ನೂ ಅಲ್ಲಾಹು ಒಗ್ಗೂಡಿಸಲಿ..ಆಮೀನ್* (ನಿಮ್ಮ ದುಆ:ದಲ್ಲಿ ನನ್ನ ಮತ್ತು ಕುಟುಂಬದವರನ್ನು ಸೇರಿಸಿ)

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...