*ಪ್ರವಾದಿ ಪ್ರಪಂಚ 👉🏻 83*
*ಯೂಸುಫ್ ನಬ್‌ಹಾನಿ ಕುಕ್ಕಾಜೆ*
00971553499119
▪️ *ಪ್ರವಾದಿ* ಮುಹಮ್ಮದ್ ﷺ ರಿಗೆ ಅವರ ತಾಯಿ ಬೀವಿ ಆಮಿನಾ (ರ) ಅಲ್ಲದೆ ಹಲವಾರು ತಾಯಂದಿರು ಮೊಲೆಯುಣಿಸಿದ್ದಾರೆ.
▪️ *ಮಕ್ಕಾದಿಂದ* ನೂರಾರು ಕಿಲೋಮೀಟರ್ ದೂರದಲ್ಲಿರುವ ತಾಯಿಫಿನಿಂದ ಮಕ್ಕಾಕ್ಕೆ *"ಮೊಲೆಯುಣಿಸುವ ತಾಯಿಯಿದೆ. ಮಕ್ಕಳು ಯಾರಾದರೂ ಇದ್ದಾರಾ?"* ಎಂದು ಹುಡುಕಿ ಬಂದ ಒಬ್ಬರು ಮಹಿಳೆಯಾಗಿದ್ದರು ಬೀವಿ ಹಲೀಮತುಸ್ಸಅದಿಯ್ಯಾ (ರ) ರವರು. ವಿಷಯ ತಿಳಿದ ಪ್ರವಾದಿಯವರ ತಾತ ಅಬ್ದುಲ್ ಮುತ್ತಲಿಬ್‌ರವರು ತನ್ನ ಮೊಮ್ಮಗನನ್ನು ಬೀವಿ ಹಲೀಮಾ (ರ) ರವರಿಗೆ ಒಪ್ಪಿಸಿದರು.
▪️ *ಪ್ರವಾದಿ* ಮುಹಮ್ಮದ್ ﷺ ರು ಹಲವಾರು ಮಹಿಳೆಯರಿಂದ ಮೊಲೆ ಕುಡಿದಿದ್ದರೂ ಬೀಬಿ ಹಲೀಮರಿಂದ ಕುಡಿದಷ್ಟು ಯಾರಿಂದಲೂ ಕುಡಿಯಲಿಲ್ಲ. ತಾನು ಮೊಲೆ ಕುಡಿಯುವುದನ್ನು ಬಿಡುವ ತನಕ ಅವರು ಬೀವಿ ಹಲೀಮರ ಬಳಿಯೇ ಇದ್ದರು.
▪️ *ಗಮನಾರ್ಹ* ಸಂಗತಿಯೆಂದರೆ ಪ್ರವಾದಿ ಮುಹಮ್ಮದ್ ﷺ ರು ಬೀವಿ ಖದೀಜಾ (ರ) ನ್ನು ಮದಿವೆಯಾದ ನಂತರ ಮೊಲೆಯುಣಿಸಿದ ಈ ಮಹಾ ಭಾಗ್ಯವಂತೆ ತಾಯಿ, ಬೀವಿ ಹಲೀಮಾ (ರ)
ರವರು ಒಂದೆರಡು ಸಲ ತನ್ನ ಮಗನಾದ ಪ್ರವಾದಿಯವರನ್ನು ಕಾಣಲು ಮಕ್ಕಾಕ್ಕೆ ಅವರ ಮನೆಗೆ ಬಂದಿದ್ದರು. ಈ ಬಂದ ವೇಳೆಯಲ್ಲಿ ಅವರನ್ನು ಕಾಣುವಾಗ ಪ್ರವಾದಿಯವರು ಎದ್ದುನಿಂತು ಅವರು ಕುಳಿತುಕೊಳ್ಳುವ ಸ್ಥಳಕ್ಕೆ ತಾನು ಧರಿಸುವ ಬಟ್ಟೆಯನ್ನು ಹಾಸಿ ಗೌರವಿಸಿದ್ದರು.
▪️ *ಒಮ್ಮೆ* ಬಂದಾಗ ತನ್ನ ಆರ್ಥಿಕ ಸಂಕಷ್ಟವನ್ನು ಪ್ರವಾದಿಯವರಲ್ಲಿ ಹೇಳಿಕೊಂಡಾಗ ತನ್ನಲ್ಲಿ ಸಂಪತ್ತು ಇಲ್ಲದಿದ್ದರೂ ಶ್ರೀಮಂತೆಯಾದ ತನ್ನ ಪತ್ನಿ ಬೀವಿ ಖದೀಜಾ (ರ) ರಿಂದ ಸುಮಾರು ನಲವತ್ತು ಆಡುಗಳನ್ನು ತೆಗೆದು ಅವರಿಗೆ ದಾನವಾಗಿ ಕೊಟ್ಟಿದ್ದರು.
*✍🏻ಸಂಗ್ರಹ:* ಇಮಾಮ್ ಇಬ್‌ನ್ ಕಸೀರ್‌ರವರ *ಅಲ್ ಬಿದಾಯಾ ವನ್ನಿಹಾಯಾ* ಎಂಬ ಗ್ರಂಥದಿಂದ.

Comments