Skip to main content

ಸ್ವರ್ಗ ನಮ್ಮದಾಗಿಸಬೇಕೆ? ಇತರರ ಮನಸ್ಸು ನೋಯಿಸದಿರೋಣ.


ಸ್ವರ್ಗ ನಮ್ಮದಾಗಿಸಬೇಕೆ?
ಇತರರ ಮನಸ್ಸು ನೋಯಿಸದಿರೋಣ.

✍️  ನವಾಝ್ ಸಖಾಫಿ ಉಳ್ಳಾಲ 

ಆ ಬರುತ್ತಿರುವ ವ್ಯಕ್ತಿಯನ್ನು ಗಮನಿಸಿ. ಸ್ವರ್ಗ ಪ್ರವೇಶಿಸುವ ವ್ಯಕ್ತಿಯನ್ನು ನೀವು ನೋಡಲು ಬಯಸಿದರೆ ಅವರನ್ನು ನೋಡಿ. ಬಾಗಿಲುಗಳನ್ನು ದೂಡಿ ತೆರೆದು ಒಳ ಪ್ರವೇಶಿಸಿದ ಸಅದುಬ್ನು ಅಬೀ ವಖ್ಖಾಸ್ ರವರ ಕುರಿತಾಗಿತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮ ಈ ರೀತಿ ಹೇಳಿದ್ದು.

  ( ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮ ಅವರ ಕುರಿತು ಈ ರೀತಿ ಬೇರೆ ಬೇರೆ ಮೂರು ಕಡೆಗಳಲ್ಲಿ ಹೇಳಿದ್ದರು.)

 ಮಸ್ಜಿದುನ್ನಬವಿಯಲ್ಲಿ ಪ್ರವಾದಿ (ಸ.ಅ) ರವರ ಸುತ್ತ ನೆರೆದಿದ್ದ ಸಹಾಬಿಗಳು ಒಳ ಪ್ರವೇಶಿಸಿದ ವ್ಯಕ್ತಿಯನ್ನು ನೋಡಿದರು.  ಅದೃಷ್ಟಶಾಲಿ ವ್ಯಕ್ತಿ. ಭಾಗ್ಯವಂತ. ಸಅದ್ (ರ) ರವರ ಈ ಸಾಧನೆಗೆ ಕಾರಣವೇನು?  ಸಭಿಕರೆಲ್ಲರೂ ಯೋಚಿಸಿದರು.  ಸಅದ್ (ರ) ನಾವು ಮಾಡದ ಒಳ್ಳೆಯ ಕೆಲಸವೇನಾದರೂ ಮಾಡುತ್ತಿದ್ದಾರೆಯೇ?  ಸಅದ್ (ರ) ಮದೀನಾ ಶರೀಫ್‌ನಲ್ಲಿರುವ ಸಾಮಾನ್ಯ ಕುಟುಂಬದ ಓರ್ವ ಸದಸ್ಯ.  ನಮ್ಮಂತೆಯೇ ಓರ್ವ ವಿಶ್ವಾಸಿ. ಸ್ವರ್ಗವು ಮುಂಚಿತವಾಗಿ ದೃಢೀಕರಿಸಲ್ಪಡುವಷ್ಟರ ಮಟ್ಟಿಗೆ ದೊಡ್ಡದೇನಾದರೂ ಒಳಿತು ಅವರು ಮಾಡುತ್ತಿರುವುದನ್ನು ನಾವು ತಿಳಿದಿಲ್ಲ.

 ಅಲ್ಲಾಹನು ಸತ್ಕರ್ಮಿಗಳಿಗೆ ಸ್ವರ್ಗದ ಭರವಸೆ ನೀಡಿದ್ದಾನೆ.  ಆದರೆ ಅದನ್ನು ತಿಳಿಯಬೇಕಾದರೆ ಸ್ವರ್ಗದ ಹೆಬ್ಬಾಗಿಲುಗಳ ಮೇಲೆ ಕಾಲಿಡುವುದನ್ನು ಬಿಟ್ಟು ಬೇರೆ ದಾರಿಯಿಲ್ಲ.  ಆದರೆ ಸಅದ್ (ರ) ರವರಿಗೆ ಪ್ರವಾದಿ (ಸ) ರವರು ಕೂಡಾ ಸ್ವರ್ಗದ ಭರವಸೆ ಈ ದುನಿಯಾದಲ್ಲೇ ನೀಡಿದ್ದಾರೆ.  ಸಹಾಬಿಗಳ ಚಿಂತನೆಗಳು, ಯೋಚನೆಗಳು ಹಲವು ದಿಕ್ಕಿನತ್ತ ಸಾಗಿತು. ಈ ವಿಷಯದಲ್ಲಿ ಸಅದ್ (ರ) ಬಗ್ಗೆ ಯಾರಿಗೂ ಹೊಟ್ಟೆಕಿಚ್ಚು ಇಲ್ಲ. ಆದರೆ ಸಅದ್ (ರ) ಸ್ವರ್ಗಕ್ಕೆ ಹೋಗಲು ಕಾರಣವಾದ ಅಂಶವಾದರೂ ಏನಿರಬಹುದು. ಅದನ್ನು ಕಂಡುಕೊಂಡಾಗ ಮಾತ್ರ ಅವರಿಗೆ ಸಮಾಧಾನವಾಗುತ್ತದೆ.

ಹೇಗಾದರೂ ಮಾಡಿ ಸಅದ್ (ರ) ಮಾಡುವ ಒಳಿತನ್ನು ಕಂಡು ಹಿಡಿಯಬೇಕು ಎಂದು ಅಬ್ದುಲ್ಲಾಹಿಬ್ನು ಅಮ್ರ್ (ರ) ತೀರ್ಮಾನಿಸಿದರು. ಆದರೆ ಹಗಲು ಹೊತ್ತಲ್ಲಿ ಮಾತ್ರ ವೀಕ್ಷಿಸಿದರೆ ಸಾಲದು. ರಾತ್ರಿಯಲ್ಲಿ ನಿದ್ದೆ ಬಿಟ್ಟು ಕೆಲವು ಸತ್ಕರ್ಮಗಳನ್ನು ಮಾಡುವವರಾಗಿರಬಹುದು. ಅದನ್ನು ನೋಡಬೇಕಾದರೆ ಸಅದ್ (ರ) ರವರ ಜೊತೆ ರಾತ್ರಿ ಕಳೆಯಬೇಕು.  ಅದಕ್ಕೇನು ಮಾರ್ಗ?  ಅಬ್ದುಲ್ಲಾಹಿಬ್ನು ಅಮ್ರ್ (ರ) ಚಿಂತಿಸಿದರು . ಕೊನೆಗೆ ಅವರು ಏನನ್ನೋ ನಿರ್ಧರಿಸಿದವರಂತೆ ಸಭೆಯಿಂದ ಎದ್ದು ಏನೋ ಖಾಸಗಿ ಮಾತು ಹೇಳುವವರಂತೆ ಸಅದ್ (ರ) ರವರ ಪಕ್ಕ ಕುಳಿತರು.
 "ನಾನು ನನ್ನ ತಂದೆಯೊಂದಿಗೆ ಸಣ್ಣದಾಗಿ ಮುನಿಸಿಕೊಂಡಿದ್ದೇನೆ."
ಅಬ್ದುಲ್ಲಾ, ನೀವು ಏನು ಹೇಳುತ್ತಿದ್ದೀರಿ?  ಸಅದ್ (ರ)  ಆಶ್ಚರ್ಯದಿಂದ ಅಬ್ದುಲ್ಲಾಹಿಬ್ನು ಅಮ್ರ್ ರವರೊಂದಿಗೆ ಕೇಳಿದರು.

 "ಅದೊಂದು ಸಣ್ಣ ಜಗಳ.  ಆದರೆ ನಾನು ಮೂರು ದಿನ ಆ ಮನೆಯಲ್ಲಿ ಉಳಿಯುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದೇನೆ."
 ತದನಂತರ? ...
 "ಮೂರು ದಿನ ಮನೆಯಿಂದ ದೂರ ಉಳಿಯುವುದೊಂದೇ ದಾರಿ.
 ನಿಮ್ಮ ಮನೆಯಲ್ಲಿ ಇರಬಹುದೇ...."
 ಸರಿ.  ನಾನು ಅನುಕೂಲ ಮಾಡಿಕೊಡಬಲ್ಲೆ.
 ಆ ರಾತ್ರಿ ಸಅದ್ (ರ) ಮನೆಗೆ ಬರುವಾಗ ಅಬ್ದುಲ್ಲಾಹಿಬ್ನು ಅಮ್ರ್ ಜೊತೆಗಿದ್ದರು.  ಉತ್ತಮ ಆತಿಥ್ಯ.  ಮಲಗಲು ಸಮಯವಾದಾಗ ಸಅದ್ (ರ) ರವರ ಪಕ್ಕದಲ್ಲಿ ಚಾಪೆ ಹಾಸಿದರು.  ದಿಂಬು, ಹೊದಿಕೆಗಳನ್ನು ಸಿದ್ಧಪಡಿಸಿ ಆಹ್ವಾನಿಸಲಾಯಿತು.
ನಂತರ ಸಅದ್ (ರ) ಹಾಸಿಗೆಯ ಬಳಿಗೆ ಬಂದು ಕೆಲವು ದ್ಸಿಕ್ರುಗಳನ್ನು ಹೇಳಿ ಬೆಳಕನ್ನು ಆರಿಸಿ, ಕಿಬ್ಲಾ ಕಡೆಗೆ ತಿರುಗಿ ಮಲಗಿದರು.  ಅಬ್ದುಲ್ಲಾಹಿಬ್ನು ಅಮ್ರ್ (ರ) ರವರಿಗೆ ನಿದ್ರೆ ಹತ್ತದೆ ಅತ್ತಿತ್ತ ಸರಿಯುತ್ತಾ ಮಲಗಿದರು...
 ನಿದ್ರೆ ಮಾಡಿದರೆ ವೀಕ್ಷನೆಯ ಕೆಲಸ ನಡೆಯಲ್ಲ. ನಿದ್ರೆ ಮಾಡದೇ ಇದ್ದರೆ ಶರೀರಕ್ಕೂ ಪ್ರಾಬ್ಲಂ ಇದೆ. 
 ನಿದ್ದೆಗೆ ಜಾರಿದ್ದ ಸಅದ್ (ರ) ಆಚೀಚೆ ಸರಿದು ಮಲಗುವುದನ್ನು ಅಬ್ದುಲ್ಲಾಹಿಬ್ನು ಅಮ್ರ್ (ರ) ನೋಡುತ್ತಿದ್ದರು. ಸಮರ್ಥನೂ ಮತ್ತು ಧೀರನೂ ಆದ ಈ ವ್ಯಕ್ತಿಯನ್ನು ಅಲ್ಲವೇ ನಾನು ವೀಕ್ಷಿಸುತ್ತಿರುವುದು ಎಂದು ಅಬ್ದುಲ್ಲಾಹಿಬ್ನು ಅಮ್ರ್ (ರ) ತೀವ್ರವಾಗಿ ಮನಃದಲ್ಲಿ ನೆನಪಿಸಿದರು. ನಿದ್ದೆ ಹತ್ತದ ಅಬ್ದುಲ್ಲಾಹಿಬ್ನು ಅಮ್ರ್ (ರ) ರವರ ಮನಸ್ಸು ಗತಕಾಲದ ಘಟನೆಗಳತ್ತ ಸಂಚರಿಸಿದವು.
 ಮಕ್ಕಾದಲ್ಲಿ ನಮಾಝ್ ಮಾಡುತ್ತಿದ್ದ ಆರಂಭಿಕ ಕಾಲದ ಮುಸ್ಲಿಮರು ಮಕ್ಕಾದ ಧರ್ಮದ್ರೋಹಿಗಳಿಂದ ಕಿರುಕುಳಕ್ಕೊಳಗಾಗಿದ್ದರು. ದೈಹಿಕ ತೊಂದರೆ ಅನುಭವಿಸಿದ್ದರು. ಮುಸ್ಲಿಮರು ಗುಂಪು ಗುಂಪಾಗಿ ನಮಾಝ್ ಮಾಡುತ್ತಿರುವಾಗ ದಾಳಿಕೋರರ ಉಪಟಳ ಸಾಮಾನ್ಯವಾಗಿ ತುಸು ಹೆಚ್ಚೇ ಇತ್ತು. ಜೋರಾಗಿ ಕೇಕೆ ಹಾಕುವುದು. ಅಪಹಾಸ್ಯ, ನಿಂದನೆ, ದಬ್ಬಾಳಿಕೆ ನಡೆಯುತ್ತಿತ್ತು.
 ಆ ಒಂದು ದಿನ ಸಂಜೆ ಒಂದು ಗುಂಪು ಸಹಾಬಿಗಳು ನಮಾಝ್, ಪ್ರಾರ್ಥನೆಯಲ್ಲಿ ತಲ್ಲೀನರಾಗಿದ್ದರು. ಗುಂಪಿನಲ್ಲಿ ಸಅದ್ (ರ) ಕೂಡ ಇದ್ದರು.  ಎಂದಿನಂತೆ ಶತ್ರುಗಳು ನಾನಾ ದಿಕ್ಕುಗಳಿಂದ ತಲುಪಿದರು.  ಅವರ ಆಗಮನ ಮತ್ತು ಅಪಹಾಸ್ಯ ನಿಂದನೆ ಸಅದ್ (ರ) ರವರಿಗೆ ಇಷ್ಟವಾಗಲಿಲ್ಲ.
 ಹೆಚ್ಚು ತಡಮಾಡದೆ ಸಅದ್ (ರ) ತನ್ನ ಕೈಗೆ ಸಿಕ್ಕಿದ ಒಂದು ಜೀವಿಯ ಮೂಳೆಯಿಂದ ಜಿಗಿದು ಬೀಸಿದರು.  ಶತ್ರುಗಳಲ್ಲಿ ಒಬ್ಬನ ತಲೆಗೆ ಗಂಭೀರ ಪೆಟ್ಟಾಗಿ ತೀವ್ರ ರಕ್ತಸ್ರಾವ ಉಂಟಾಯಿತು. ಇಸ್ಲಾಮಿನ ರಕ್ಷಣೆಗಾಗಿ ಹರಿದ ಮೊದಲ ರಕ್ತ.
ರಾತ್ರಿಯಲ್ಲಿ ಶಾಂತವಾಗಿ ನಿದ್ದೆ ಮಾಡಲು ಕೂಡಾ ಭಯ. ದುಷ್ಕರ್ಮಿಗಳು ಸುತ್ತುವರಿದು ಕೊಂದು ಹಾಕಿದರೆ? 
ಪ್ರತೀ ರಾತ್ರಿ ಒಬ್ಬೊಬ್ಬರೂ ಕಾವಲು ಕಾಯುವುದು ವಾಡಿಕೆಯಾಗಿತ್ತು. 
ಅದರಂತೆ ಪ್ರವಾದಿ (ಸ) ಒಮ್ಮೆ ಕೇಳಿದರು. ಇಂದು ಯಾರು ನನ್ನನ್ನು ಕಾಯುವವರು. 
ತಟ್ಟನೆ ಉತ್ತರ ಬಂತು. ನಾನು...
ಧ್ವನಿಯನ್ನು ಕೇಳಿದಾಗ ಆಯಿಶಾ (ರ) ತಿರುಗಿ ನೋಡಿದರು. ಅದು ಸಅದ್ (ರ) ರವರ ಧ್ವನಿಯಾಗಿತ್ತು. ಅಂದು ರಾತ್ರಿ ಪ್ರವಾದಿ (ಸ) ಸುಖ ನಿದ್ರೆ ಗಾಢವಾಗಿ ಮಾಡಿದರು.. ಅಂದು ನೆಬಿ (ಸ) ರವರ ನಿದ್ರಾ ವೀಕ್ಷಕನಾಗಿದ್ದ ಸಅದ್ (ರ) ರವರನ್ನಾಗಿದೆ ನಾನೀಗ ವೀಕ್ಷಿಸುತ್ತಿರುವುದು.
ಅಬ್ದುಲ್ಲಾಹಿಬ್ನು ಅಮ್ರ್ ಇದನ್ನು ನೆನಪಿಸಿಕೊಂಡರು.
ಸಅದ್ (ರ) ಮುಂಜಾನೆ ಎದ್ದರು.  ವುಝೂ ನಿರ್ವಹಿಸಿ ಸುಬಹಿ ನಮಾಝ್ ಮಾಡಿದರು. ಆ ದಿನ ಅರ್ಧರಾತ್ರಿಯ ನಮಾಝ್ ಅಥವಾ ಬೇರೆ ಯಾವುದೇ ಆರಾಧನೆ ನಾನು ಅವರಿಂದ ಕಂಡಿಲ್ಲ. ಹಗಲಿನಲ್ಲಿ ಸುನ್ನತ್ ಉಪವಾಸವೂ ಇರಲಿಲ್ಲ.  ಅಬ್ದುಲ್ಲಾಹಿಬ್ನು ಅಮ್ರ್ (ರ) ರವರು ಮೂರು ದಿನಗಳ ಕಾಲ ವೀಕ್ಷಣೆ ಮಾಡಿದರು. ಸಹಜವಾಗಿ ಹೆಚ್ಚು ಮಾತನಾಡದ ಸ್ವಭಾವದ ಸಅದ್ (ರ) ಏನಾದರು ಮಾತನಾಡುವುದಾದರೆ ಒಳ್ಳೆಯದನ್ನೇ ಮಾತನಾಡುತ್ತಿದ್ದರು. ಯಾರನ್ನೂ ನಿಂದಿಸುವುದಿಲ್ಲ. ದೂಷಣೆ ಮಾಡುವುದಿಲ್ಲ. ಇದರ ಹೊರತು ವೀಕ್ಷಣೆಯಲ್ಲಿ ಬೇರೆ ಯಾವುದೇ ಉತ್ತಮ ಸತ್ಕಾರ್ಯಗಳು ಕಂಡುಬಂದಿಲ್ಲ.  ಮತ್ತೆ ಹೇಗೆ ಅವರು ಸ್ವರ್ಗದ ಅವಕಾಶಿಯಾದರು?  ಮೂರು ದಿನಗಳು ಕಳೆದ ನಂತರವೂ ಇಲ್ಲಿಯೇ ಉಳಿಯುವುದು ಸರಿಯಲ್ಲ ಎಂದು ಅರಿತ ಅಬ್ದುಲ್ಲಾಹಿಬ್ನು ಅಮ್ರ್ (ರ) ಹೊರಡಲನುವಾದರು.  
"ಸಅದ್  ನಾನು ಹೊರಡುತ್ತಿದ್ದೇನೆ"
 ನೀವು ಹೋಗಲು ಬಯಸಿದರೆ ನಾನು ತಡೆಯುವುದಿಲ್ಲ. 
"ನಾನು ನನ್ನ ತಂದೆಯ ಜೊತೆ ಜಗಳವಾಡಲಿಲ್ಲ, ಮುನಿಸಿಕೊಂಡಿಲ್ಲ.."
ಹಾಗಿದ್ದರೆ ಇಲ್ಲಿಗೇಕೆ ಬಂದು ತಂಗಿದ್ದೀಯಾ?
"ಅದಕ್ಕೊಂದು ಕಾರಣವಿದೆ.
 ನೀವು ನನಗೆ ಹೇಳುವಿರಾ..?
"ಬೇರೆ ಬೇರೆ ಮೂರು ಕಡೆ ವ್ಯತ್ಯಸ್ಥ ಸಮಯದಲ್ಲಿ ನಾವು ಪ್ರವಾದಿಯವರ ಬಳಿ ಇದ್ದಾಗ ಒಂದು ಅನುಭವ ಉಂಟಾಯಿತು.  ಈಗ ಒಬ್ಬರು ಬರುತ್ತಾರೆ. ಅವರು ಸ್ವರ್ಗಕ್ಕೆ ಹೋಗುವವರಾಗಿದ್ದಾರೆ ಎಂದು ಪ್ರವಾದಿ (ಸ) ಭವಿಷ್ಯ ನುಡಿದರು. ಮೂರು ಕಡೆನೂ ತದನಂತರ ಆಗಮಿಸಿದ ವ್ಯಕ್ತಿ ನೀವಾಗಿದ್ದೀರಿ.  ಹಾಗಾಗಿ ಆ ಮಹತ್ತರವಾದ ಸ್ಥಾನವನ್ನು ಪಡೆಯಲು ನೀವು ಮಾಡುತ್ತಿರುವ ಸತ್ಕಾರ್ಯಗಳನ್ನು ಗಮನಿಸಿ ಆ ಸತ್ಕಾರ್ಯಗಳನ್ನು ಮಾಡಿದರೆ ನನಗೂ ಸ್ವರ್ಗ ಸಿಗಬಹುದಲ್ಲವೇ ಎಂದು ನೆನೆಸಿ ಮೂರು ದಿನ ನಿಮ್ಮೊಂದಿಗೆ ಇದ್ದೆ.  ಆದರೆ ನಾವು ನಿರ್ವಹಿಸುವ ಇಬಾದತುಗಳಿಗಿಂತ ಹೆಚ್ಚಿಗೆ ಯಾವುದೇ ಫರ್ಲ್ ಅಥವಾ ಸುನ್ನತ್ತಾದ ಇಬಾದತ್ ನೀವು ನಿರ್ವಹಿಸಿದ್ದಾಗಿ ಈ ಮೂರು ದಿನದಲ್ಲಿ ನಾನು ಕಂಡಿಲ್ಲ.
ನನಗೆ ಹೇಳಿ..
 ನಿಮ್ಮ ಜೀವನದ ರಹಸ್ಯವೇನು.?"
ಅದು ನನಗೆ ಗೊತ್ತಿಲ್ಲ .
ಆದರೆ ನನ್ನ ಮನಸ್ಸು ತುಂಬಾ ಶುದ್ಧವಾಗಿದೆ.
ಯಾವುದೇ ವ್ಯಕ್ತಿಯ ಬಗ್ಗೆ ತಪ್ಪು ಭಾವನೆ ನನ್ನಲ್ಲಿಲ್ಲ. ಯಾರನ್ನೂ ದ್ರೋಹಿಸುವ, ನೋಯಿಸುವ ಸ್ವಭಾವ ನನಗಿಲ್ಲ. ಯಾರೊಂದಿಗೂ ಹಗೆತನ, ಮತ್ಸರ, ಅಸೂಯೆ ಇಲ್ಲ. ಇತರರ ಒಳಿತನ್ನೇ ಬಯಸುತ್ತೇನೆ.
 ಅಬ್ದುಲ್ಲಾಹಿಬ್ನು ಅಮ್ರ್ (ರ) ರವರಿಗೆ ಸಂಗತಿ ಮನವರಿಕೆಯಾಯಿತು. 
ನಿಮ್ಮನ್ನು ಸ್ವರ್ಗದ ಅವಕಾಶಿಯನ್ನಾಗಿ ಮಾಡಿದ್ದು ಈ ನಿಮ್ಮ ಸ್ವಭಾವ ಅಲ್ಲದೆ ಬೇರೇನೂ ಅಲ್ಲ.
ನನಗೆ ಅಸಾಧ್ಯವಾದುದು ಇದುವೇ ಆಗಿದೆ.

ನೀತಿ ಪಾಠ.
ಹೃದಯದ ಪರಿಶುದ್ಧತೆ ಜೀವನದ ಯಶಸ್ಸಿನ ಕೀಲಿಯಾಗಿದೆ. 
ಅಸೂಯೆ, ಮತ್ಸರ, ಪರದೂಷಣೆ, ಹಗೆತನ ಮತ್ತು ದ್ವೇಷದಂತಹ ಎಲ್ಲಾ ದುರ್ಗುಣಗಳನ್ನು ತೊಡೆದುಹಾಕಿ ಪ್ರೀತಿ, ವಾತ್ಸಲ್ಯ ಮತ್ತು ಸಂತೋಷ ವಿನಿಮಯದಂತಹ ಸದ್ಗುಣಗಳು  ಹೃದಯವನ್ನು ಅಲಂಕರಿಸಬೇಕು.  ಆಗ ಮಾತ್ರ ಈಮಾನಿನ ಪ್ರಭೆ ಹೃದಯದಲ್ಲಿ ವರ್ಷಿಸುವುದು.

 ಕೇವಲ ಆರಾಧನೆಗಳಿಂದಾನೇ ರಾತ್ರಿ ಹಗಲು ದೂಡುವ ಹಲವರನ್ನು ಕಾಣುತ್ತೇವೆ. ರಾತ್ರಿ ನಿದ್ರೆ ಬಿಟ್ಟು ನಮಾಝ್, ಕುರ್ಆನ್ ಪಾರಾಯಣ, ಸುನ್ನತ್ ಉಪವಾಸ ಇವೆಲ್ಲ ಇದ್ದರೂ ಇತರರಿಗೆ ದ್ರೋಹ ಬಗೆಯುತ್ತಾರೆ. ಪರದೂಷಣೆ ಹೇಳ್ತಾರೆ. ಇತರರ ಮನಃ ನೋಯಿಸುವ ಮಾತುಗಳನ್ನಾಡುತ್ತಾರೆ. ಇತರರ ಮೇಲೆ ಕೋಪ, ಮತ್ಸರ, ಹೊಟ್ಟೆಕಿಚ್ಚು, ಹಗೆತನವಿಟ್ಟುಕೊಂಡಿರುತ್ತಾರೆ.
ಅವರ ಮನಸ್ಸು ಸರಿಯಿಲ್ಲ. ಹ್ರದಯದ ಮಾಲಿನ್ಯಗಳಿಂದ ಮುಕ್ತನಾದರೆ ಮಾತ್ರ ಸತ್ಕರ್ಮಗಳು ಫಲಪ್ರದವಾಗುವುದು ಮತ್ತು ಪರಿಣಾಮಕಾರಿಯಾಗುವುದು. ಸ್ವರ್ಗ ಪ್ರಾಪ್ತಿಯಾಗುವುದು.

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...