ಈ ರಕ್ತ ಮಿಶ್ರಿತ ಕುರಾನ್ ಮರೆಯುವುದುಂಟೇ?
ಅದು,೨೦೧೩ ಮಾರ್ಚ್ ೨೩. ಸಿರಿಯದ ರಾಜಧಾನಿ ಡಮಸ್ಕಸಿನ ಪ್ರಧಾನ ಮಸೀದಿಯೊಂದರಲ್ಲಿ ಭೀಕರ ಸ್ಫೋಟವೊಂದು ಸಂಭವಿಸುತ್ತದೆ.ಪರಿಣಾಮ ನಲ್ವತ್ತೆಂಟು ನಾಗರಿಕರು ಬಲಿಯಾಗುತ್ತಾರೆ.ಜಾಗತಿಕ ಮಟ್ಟದಲ್ಲಿ ಈ ಸ್ಫೋಟದ ಸುದ್ದಿ ಚರ್ಚೆಯಾಗುತ್ತದೆ.ಅಲ್ಲಿನ ಸರಕಾರ ಮತ್ತು ವಿಪಕ್ಷ ಪರಸ್ಪರ ಆರೋಪ ಪ್ರತ್ಯಾರೋಪಗಳನ್ನು ಮಾಡಿ ಕೈ ತೊಳೆದುಕೊಳ್ಳಲು ಮುಂದಾಗುತ್ತಾರೆ,ಯಾವ ಉಗ್ರವಾದಿ ಸಂಘಟನೆಯೂ ಈ ಸ್ಫೋಟದ ಜವಾಬ್ದಾರಿಯನ್ನು ವಹಿಸಲು ಮುಂದಾಗಲ್ಲ,ಯಾಕೆ ಗೊತ್ತಾ!
ಆ ನಲ್ವತ್ತೆಂಟು ನಾಗರಿಕರ ಪೈಕಿ,ಮುಸ್ಲಿಂ ಧರ್ಮಗುರುವೊಬ್ಬರು ಸಾವಿಗೀಡಾಗಿರುತ್ತಾರೆ.ಆ ಕಾಲದಲ್ಲಿ ಇಡೀ ಮುಸ್ಲಿಂ ಜಗತ್ತಿಗೆ ಮೇರು ಗ್ರಂಥಗಳನ್ನು ಸಂಭಾವನೆಗೈದ ಅತ್ಯುನ್ನತ ಧರ್ಮಗುರುಗಳ ಪೈಕಿ ಒಬ್ಬರಾಗಿದ್ದರು ಅವರು.ಜಾಗತಿಕ ಮಟ್ಟದಲ್ಲಿ ಆ ಧರ್ಮ ಗುರುವಿನ ಕೊಲೆಗೆ ವ್ಯಾಪಕ ಖಂಡನೆಗಳು ಕೇಳಿ ಬರುತ್ತದೆ.ಪ್ರತಿಭಟನೆಗಳು ಮೇಲಿಂದ ಮೇಲೆ ವ್ಯಕ್ತವಾಗುತ್ತದೆ.ಅಷ್ಟಕ್ಕೂ ಆ ಧರ್ಮ ಗುರು ಯಾರು ಗೊತ್ತೇ?ಇಸ್ಲಾಂ ಧರ್ಮವನ್ನು ಮುಂದಿಟ್ಟು ಉಗ್ರವಾದ ಮೆರೆಯುವ ನೂತನವಾದಿ ಭಯತ್ಪಾದಕರ ವಿರುದ್ಧ ನಿರಂತರವಾಗಿ ಹೋರಾಡಿದ,ಮುಸ್ಲಿಂ ಜಗತ್ತಿನ ಮಹೋನ್ನತ ಧರ್ಮಗುರು ಸಯೀದ್ ರಮದಾನ್ ಅಲ್ ಬೂತಿ.
ಬೂತಿಯೂ ಇಮಾಂ ಗ್ರ್ಯಾಂಡ್ ಮಸೀದಿಯಲ್ಲಿ ಉಪನ್ಯಾಸ ನೀಡುತ್ತಿದ್ದ ವೇಳೆ,ಅವರು ಆಸೀನರಾಗಿರುವ ಮೇಜಿನಡಿಯಲ್ಲಿ ಬಾಂಬ್ ಸ್ಫೋಟಿಸುತ್ತದೆ.ಬೂತಿಯನ್ನು ಕೊಲ್ಲಲ್ಲೆಂದೇ ಬಾಂಬರ್ ತಯಾರಿಸಲಾಗಿತ್ತು ಎಂದು ನಂತರದ ತನಿಖೆಯಲ್ಲಿ ತಿಳಿದು ಬಂತು.ಬಾಂಬ್ ಸ್ಫೋಟಿಸಿದಾಗ ಬೂತಿಯ ದೇಹದಿಂದ ಚಿಮ್ಮಿದ ರಕ್ತ ಎದುರು ಇರಿಸಲಾದ ಕುರಾನಿನ ಮೇಲೆ ಚೆಲ್ಲಿತ್ತು. ಆ ದಿನ ಈ ಪಟ ಪ್ರತಿಯೋರ್ವ ಸಜ್ಜನರ ಮನಸ್ಸನ್ನೂ ಇರಿದಿತ್ತು.ನಾನಾಗ ಹನ್ನೆರಡು ವರ್ಷದ ಹುಡುಗ.ಮದ್ರಸಾದಲ್ಲಿ ಈ ಸುದ್ದಿಯನ್ನು ಕಣ್ಣೀರಿನೊಂದಿಗೆ ಉಸ್ತಾದರು ಹಂಚಿಕೊಂಡಿದ್ದು ಈಗಲೂ ನೆನಪಿದೆ.
ಅಕ್ರಮ,ಯುದ್ಧ,ಕೊಲೆ ಅರಾಜಕತೆ ಎಲ್ಲವೂ ಇಸ್ಲಾಮಿನ ಸಂಕೇತವೆಂಬಂತೆ ಬಿಂಬಿಸಲು ಹೊರಟ ಮಿಲಿಟರಿಯನ್ ಮತ್ತು ರಾಡಿಕಲ್ ಇಸ್ಲಾಮಿನ ವಿರುದ್ಧ ಬಹಿರಂಗವಾಗಿ ಸಡ್ಡು ಹೊಡೆದದ್ದು ಮತ್ತು ನೂತವಾದಿಗಳನ್ನು ಇನ್ನಿಲ್ಲದಂತೆ ಕಾಡಿದ್ದು ಬೂತಿಯರ ವಧೆಗೆ ಮುಖ್ಯ ಕಾರಣ.ನೂತನವಾದಿಗಳು ಬೂತಿಯ ಮೇಲೆ ಬಾಂಬ್ ಹಾಕುವ ಮೂಲಕ ಅವರ ದ್ವನಿಯನ್ನು ಅಡಗಿಸುವ ಹಗಲು ಕನಸು ಕಂಡರು.ಇದು ಹೊಸತೇನಲ್ಲ, ಶತಮಾನಗಳ ಕಾಲ ಇಂತಹ ನೂರಾರು ನಿಸ್ವಾರ್ಥ ಉಲಮಾಗಳನ್ನು ಕೊಂದು ರಕ್ತ ಕುಡಿದ ಇತಿಹಾಸ ಇವರಿಗಿದೆ.ಆದರೂ ಉಲಮಾಗಳು ಹಿಂದೆ ಸರಿದವರಲ್ಲ.
ಅಕ್ರಮಿ ರಾಜನೆದುರು ಸತ್ಯವನ್ನು ಹೇಳುವುದೇ ಅತೀ ದೊಡ್ಡ ಜಿಹಾದ್ ಎಂಬ ಹದೀತನ್ನು ಹೆಚ್ಚು ಅರ್ಥಮಾಡಿಕೊಂಡ ಇವರು,ಯಾರನ್ನೂ ಹೆದರಿದವರಲ್ಲ.
ಐಕ್ಯತೆಗೆ ಕರೆ ಕೊಡುವವರು ಮೊದಲು
ಇಂತಹ ನೂರಾರು ನಿದರ್ಶನಗಳನ್ನು ಓದಬೇಕು.ಅವರ ರಕ್ತಸಿಕ್ತ ಇತಿಹಾಸವನ್ನು ಜಾಲಾಡಬೇಕು.ನಂತರ ನೂತನವಾದದ ಕುರಿತಿರುವ
ಪ್ರವಾದಿ ವಚನಗಳನ್ನು ಓದಬೇಕು.ಆಗ ನಿಮ್ಮ ಐಕ್ಯತೆಯ ಮಂತ್ರ ಅದೆಷ್ಟು ಹೀನವಾಗಿದೆ ಎಂದು ಅರ್ಥ ಮಾಡಿಕೊಳ್ಳಬಹುದು.ತಿಳಿಯಿರಿ,ಅವರ ಮುಖ ನೋಡಿ ನಗಬಾರದು,ಅವರೊಂದಿಗೆ ಸಂಬಂಧ ಮುರಿಯಬೇಕು,ಅವರು ನರಕದ ನಾಯಿಗಳು,ಅವರು ನಮ್ಮವರಲ್ಲ ಎಂಬಿತ್ಯಾದಿ ಹದೀಸುಗಳ ಗಂಭೀರತೆ ತಿಳಿದವರಾರೂ ಈ ಕಪಟ ಐಕ್ಯತೆಯ ಮಾತುಗಳನ್ನಾಡಲ್ಲ!
ಶುದ್ಧ ನೀರು ಮತ್ತು ಕೊಳಚೆ ನೀರು ಬೇರೆ ಬೇರೆಯೇ ಹರಿಯುತ್ತಿರಬೇಕು!that's it.
ಅಲ್ ಫಾತಿಹ😥!
ಸಲಾಹ್ ಕುತ್ತಾರ್
Comments