ಗೌಸುಲ್ ಆಝಮ್ ರಳಿಯಲ್ಲಾಹು ಅನ್ಹು'ರವರ ಬಾಲ್ಯದಲ್ಲಿನ 7 ಕರಾಮತ್'ಗಳು,
ಗೌಸುಲ್ ಆಝಮ್ ರಳಿಯಲ್ಲಾಹು ಅನ್ಹು ಜನಿಸುವಾಗಲೇ ವಲಿಯ್ಯ್ ಎಂಬ ಪಟ್ಟವನ್ನು ಗಳಿಸಿದವರಾಗಿದ್ದಾರೆ. ಬಾಲ್ಯದಲ್ಲಿನ ಈ ಎಲ್ಲಾ ಕರಾಮತ್'ಗಳಿಂದ ಅವರು ಅಲ್ಲಾಹನ ವಲಿಯ್ಯ್ ಎಂಬುವುದು ವ್ಯಕ್ತವಾಗುತ್ತದೆ.
(1) ಗೌಸುಲ್ ಆಝಮ್ ರಳಿಯಲ್ಲಾಹು ಅನ್ಹು ರವರ ತಾಯಿ ಗರ್ಭಿಣಿಯಲ್ಲಿ ಸೀನಿದಾಗ ಅಲ್ ಹಮ್ದುಲಿಲ್ಲಾಹ್ ಎಂದು ಹೇಳಿದರೆ ಗರ್ಭಾಶಯದಲ್ಲಿರುವ ಗೌಸುಲ್ ಆಝಮ್ ರಳಿಯಲ್ಲಾಹು ಅನ್ಹು ರವರು "ಯರ್'ಹಮ್ಕುಮುಲ್ಲಾಹ್" ಎಂದು ಉತ್ತರಿಸುತ್ತಿದ್ದರು.
(ಅಲ್ ಹಖಾಯಿಕ್ ಫಿಲ್ ಹದಾಯಿಖ್ ಪುಟ-139 )
(2) ಗೌಸುಲ್ ಆಝಮ್ ರಳಿಯಲ್ಲಾಹು ಅನ್ಹು ರಮಝಾನಿನ ಪ್ರಥಮ ದಿನ ಸೂರ್ಯೋದಯದ ಸಮಯದಲ್ಲಿ ಜನಿಸಿರುತ್ತಾರೆ. ಅವರ ತುಟಿಯಿಂದ "ಅಲ್ಲಾಹ್..! ಅಲ್ಲಾಹ್" ಎಂಬ ಶಬ್ದವು ಹೊರಬರುತ್ತಿರುವುದನ್ನು ಕೇಳಲಾಗುತ್ತಿತ್ತು
(ಅಲ್ ಹಖಾಯಿಕ್ ಫಿಲ್ ಹದಾಯಿಖ್ ಪುಟ-139)
(3) ಗೌಸುಲ್ ಆಝಮ್ ರಳಿಯಲ್ಲಾಹು ಅನ್ಹು ಜನಿಸಿದ ದಿನದಂದು ಇರಾಖಿನ ಜಿಲಾನ್ ಪ್ರದೇಶದಲ್ಲಿ 1100 ಗಂಡು ಮಗು ಜನಿಸುತ್ತಾರೆ. ಅವರೆಲ್ಲರೂ ಅಲ್ಲಾಹನ ವಲಿಯ್ಯ್ ಆಗಿದ್ದಾರೆ.
(ತಾರಿಖ್ ಉಲ್ ಕಥೀರ್, ಪುಟ-15)
(4) ಗೌಸುಲ್ ಆಝಾಂ ರಳಿಯಲ್ಲಾಹು ಅನ್ಹು ರವರು ತಾನು ಜನಿಸಿದ ದಿನವೇ ಸೂರ್ಯಾಸ್ತಮವಾಗುವವರೆಗೆ ತನ್ನ ತಾಯಿಯ ಮೊಲೆಹಾಲನ್ನು ಕುಡಿಯದೆ ಉಪವಾಸ ಆಚರಿಸಿದ್ದಾರೆ. ರಮಝಾನಿನ ಎಲ್ಲಾ ದಿವಸಗಳಲ್ಲೂ ಇದೆ ರೀತಿ ಉಪವಾಸ ಆಚರಿಸುತ್ತಿದ್ದರು.
( ಬಹಜತುಲ್ ಅಸ್ರಾರ್
Comments