Skip to main content

ಶೈಖ್ ಅಬ್ದುಲ್ ಖಾದಿರ್ ಜೀಲಾನಿ ರಹ್ಮತುಲ್ಲಾಹಿ ಅಲೈಹಿ.


ಶೈಖ್ ಅಬ್ದುಲ್ ಖಾದಿರ್ ಜೀಲಾನಿ ರಹ್ಮತುಲ್ಲಾಹಿ ಅಲೈಹಿ.

 _✒️ನಿಝಾರ್ ಸುಲ್ತಾನಿ ಅಸ್ಸಖಾಫಿ ಉಳ್ಳಾಲ_ 
➖➖➖➖➖

 *🟡ಸತ್ಯವಂತ ಅವರು:* 

يقول الشيخ القدرة أبو عبد الله قائد الأواني كنت عند الشيخ عبد القادر فسأله سائل على ما بنيت أمرك قال علی الصدق ما كذبت قط.
ಶೈಖ್ ಅಬೂ ಅಬ್ದುಲ್ಲಾ ಖಾಯಿದುಲ್ ಅವಾನಿ ರಹ್ಮತುಲ್ಲಾಹಿ ಅಲೈಹಿ ರವರು ಹೇಳುತ್ತಾರೆ: _ನಾನು ಶೈಖ್ ಅಬ್ದುಲ್ ಖಾದಿರ್ ರಹ್ಮತುಲ್ಲಾಹಿ ಅಲೈಹಿ ರವರ ಸಮೀಪ ಇದ್ದೆ. ಆಗ ಒಬ್ಬರು ಅವರಲ್ಲಿ ಕೇಳಿದರು: ನಿಮಗೆ ಪದವಿ ಲಭಿಸಲು ಕಾರಣ ವೇನು.?
ಮಹಾನುಭಾವರು ಹೇಳಿದರು: ಸತ್ಯದ ಕಾರಣದಿಂದ, ಜೀವನದಲ್ಲಿ ನಾನು ಅಸತ್ಯವನ್ನು ನುಡಿದಿಲ್ಲ. ಮದ್ರಸದಲ್ಲಿ ಕಲಿಯುತ್ತಿದ್ದ ಕಾಲದಲ್ಲೂ ಕೂಡಾ._ 

 *🟡ಪಶು ಮಾತಾಡಿತು:* 

ثم قال رضي الله منه: كنت صغيرا في بلدنا فخرجت إلى السواد يوم عرفة وتبعن بقرة حرث فالتفتت الي بقرة وقالت با عبد القادر ما لهذا خلقت ولا بهذا امرت فرجعت فزعا إلى دارنا وصعدت إلی سطح الدار فرأيت الناس واقفين بعرفات فجئت إلى أمي وقلت لها هبينئ  لله عزوجل واذني لي بالمسير إلى بغداد اشتغل بالعلم وازور الصالحين. (بهجة الأسرار :٨٧)

ನಂತರ ಹೇಳಿದರು: ನಾನು ನನ್ನ ಸಣ್ಣ ವಯಸ್ಸಿನಲ್ಲಿ ಊರಿನಲ್ಲಿ ಅರಫಾ ದಿವಸ ಗ್ರಾಮೀಣ ಪ್ರದೇಶಕ್ಕೆ ಹೊರಟೇ, ಅಲ್ಲಿ ನಾನು ರೈತರ ಪಶುವನ್ನು ಹಿಂಬಾಲಿಸಿದೆ. ಆಗ ಒಂದು ಪಶು ತಿರುಗಿ ನಿಂತು ಹೀಗೆ ಹೇಳಿತು: 'ಇದಕ್ಕೆ ಬೇಕಾಗಿ ಅಲ್ಲ ನಿಮ್ಮನ್ನು ಸೃಷ್ಟಿಸಿದ್ದು, ಇದಲ್ಲ ತಮ್ಮೊಂದಿಗೆ ಅಜ್ಞಾಪಿಸಲ್ಪಟ್ಟದ್ದು.' ಭಯ ಭೀತನಾಗಿ ನಾನು ಮನೆಗೆ ಓಡಿ ಹೋದೆನು. ಮನೆಯಲ್ಲಿನ ಎತ್ತರದ ಸ್ಥಳದಿಂದ ನೋಡಿದಾಗ ಅರಫದಲ್ಲಿ ಜನರು ಸಂಗಮಿಸಿದ್ದನ್ನು ನಾನು ಕಂಡೆನು. 
ನನ್ನ ತಾಯಿ ಯ ಹತ್ತಿರ ಹೇಳಿದೆ: "ಅಲ್ಲಾಹನೆಡೆಗೆ ನನ್ನನ್ನು ಸಮರ್ಪಿಸಿರಿ" ನನಗೆ ಬಗ್ಧಾದ್ ಗೆ ಹೋಗಲು ಸಮ್ಮತಿ ನೀಡಿರಿ. ನಾನು ಇಲ್ಮ್ ಕಲಿಯುವೆನು ಸಜ್ಜನರನ್ನು ಸಂದರ್ಶಿಸುವೆನು. (ಬಹ್ಜತುಲ್ ಅಸ್ರಾರ್)

 *🟡ಬದಲಾವಣೆಯ ಸಮಯ* 

أخبرنا الشيخ عبد الرزاق رحمه الله قال الشيخ عبد القادر رضي الله عنه : كلما هممت أن ألعب مع الصبيان سمعت يقول لي إلى أين يا مبارك؟ فأهرب فزعا وألقى نفسي في حجر أمي وإني لأسمع الآن هذا في خلوتي وكنت في زمن مجاهدتي اذ أخذتني سنة اسمع قائلا يقول يا عبد القادر اما خلقتك للنوم...
 (بهجة الأسرار)

ಶೈಖ್ ಅಬ್ದುಲ್ ರಝ್ಝಾಖ್ ರಹ್ಮತುಲ್ಲಾಹಿ ಅಲೈಹಿ ರವರು ಹೇಳಿದರು: ಶೈಖ್ ಜೀಲಾನಿ ರಹ್ಮತುಲ್ಲಾಹಿ ಅಲೈಹಿ ರವರು ಈ ರೀತಿ ಹೇಳಿದರು: ನಾನು ಮಕ್ಕಳೊಂದಿಗೆ ಆಟ ಆಡಲು ಬೇಕಾಗಿ ಹೋಗುವಾಗ ಒಬ್ಬರು ಪ್ರಶ್ನಿಸುವುದು ನನಗೆ ಕೇಳುತ್ತಿತ್ತು. ಓ ಅನುಗ್ರಹವುಳ್ಳವರೇ, ತಾವೆಲ್ಲಿಗೆ ಹೋಗುತ್ತಿರುವಿರಿ.? ಆಗ ನಾನು ಹೆದರಿ ಓಡುವೆನು. ತಾಯಿಯ ಮಡಿಲಲ್ಲಿ ಆಶ್ರಯ ಪಡೆಯುತ್ತಿದ್ದೆನು. ಆ ಶಬ್ಧ ಈಗಾಲೂ ಏಕಾಂತತೆಯಲ್ಲೂ ನಾನು ಕೇಳಿರುವೆನು.ನಾನು ಒಮ್ಮೆ ಅರಾಧನೆಯಲ್ಲಿ ತಲ್ಲೀನನಾಗಿ ನಿದ್ರೆಗೆ ಜಾರಿದೆ. ಆಗ ಒಬ್ಬರು ಹೇಳುದನ್ನು ಕೇಳಿದೆನು: 'ಓ ಅಬ್ದುಲ್ ಖಾದಿರ್ ನಿಮ್ಮನ್ನು  ಸೃಷ್ಟಿಸಿದ್ದು ನಿದ್ರಿಸಲಾ'. (ಬಹ್ಜತುಲ್ ಅಸ್ರಾರ್:)

 *🟡ಅವರನ್ನು ಮಲಕುಗಳು ಸಮೀಪಿಸುತ್ತಿದ್ದರು:* 

أنه سئل:متى علمت أنك ولي لله تعالى؟قال: كنت وأنا ابن عشر سنين في بلدنا أخرج من داري وأذهب إلى المكتب فأرى الملائكة عليهم السلام تمشي حولي , فإذا وصلت إلى المكتب سمعت الملائكة يقولون:أفسحوا الطريق لولي الله حتى يجلس " 
فمر بنا رجل لم أعرفه يومئذ فسمع الملائكة يومئذ تقول ذلك فقال لأحدهم ما هذا الصبي فقال له يكون له شأن عظيم هذا يعطى فلا يمنع ويمكن فلا يحجب ويقرب فلا يمكر به ثم عرفت ذلك الرجل بعد أربعين سنة فإذا هو من ابدال ذلك الوقت-(بهجة الأسرار-٢١)

ಶೈಖ್ ಅಬ್ದುರ್ರಝ್ಝಾಖ್ ರಹ್ಮತುಲ್ಲಾಹಿ ಅಲೈಹಿ ರವರು ಹೇಳುತ್ತಾರೆ: ಶೈಖ್ ಅಬ್ದುಲ್ ಖಾದಿರ್ ರಹ್ಮತುಲ್ಲಾಹಿ ಅಲೈಹಿ ರವರೊಂದಿಗೆ 'ನೀವು ಅಲ್ಲಾಹನ ವಲಿಯ್ಯ್ ಎಂದು ಯಾವಾಗ ತಿಳಿಯಿತು' ಎಂದು ಒಬ್ಬ ವ್ಯಕ್ತಿ ಕೇಳಿದರು.?
 ಅವರು ಹೇಳಿದರು: ನನಗೆ ಹತ್ತು ವಯಸ್ಸು ಪ್ರಾಯವಾದಗ ನಾನು ಊರಿನಲ್ಲಿದೆ. ನಾನು ಮನೆಯಿಂದ ಮದ್ರಸಕ್ಕೆ ಹೋಗುತ್ತಿದೆ.
ನನ್ನೊಂದಿಗೆ ಮಲಕುಗಳು ಸುತ್ತುವರಿಯುತ್ತಿದ್ದರು. ಮದ್ರಸಕ್ಕೆ ತಲುಪಿದರೆ ಮಲಕುಗಳು ಕರೆದು ಹೇಳುತ್ತಿದ್ದರು: ಅಲ್ಲಾಹನ ವಲಿಯ್ಯ್ ಗೆ ಕೂರಲು ಸ್ಥಳ ಸೌಕರ್ಯ ಮಾಡಿ ಕೊಡಿ.

ಒಂದು ದಿನ ನಮ್ಮ ಬಳಿಗೆ ಓರ್ವ ವ್ಯಕ್ತಿ ಬಂದನು. ಆ ವ್ಯಕ್ತಿ ಯನ್ನು ನನಗೆ ಪರಿಚಯ ಇರಲಿಲ್ಲ. ಮಲಕುಗಳು  ನನ್ನ ಕುರಿತು ಹೇಳುದನ್ನು ಆಲಿಸಿದರು. ಆಗ ಮಲಕುಗಳಲ್ಲಿ ಒಬ್ಬರೊಂದಿಗೆ ಅವರು ಕೇಳಿದರು: 'ಈ ಮಗುವಿನ ಅವಸ್ಥೆ ಏನು!' 
ಅವರು ಹೇಳಿದರು: ' ಈ ಮಗು ಉನ್ನತ ಅವಸ್ಥೆ ಉಳ್ಳವರೂ, ಎಲ್ಲವನ್ನೂ ನೀಡಲ್ಪಡುವವರೂ ಇವರಿಗೆ ಯಾವುದನ್ನೂ ತಡೆಯಲ್ಪಡುವುದಿಲ್ಲ...ನಂತರ, ನಲ್ವತ್ತು ವರ್ಷಗಳ ಬಳಿಕ ಅವರನ್ನು ನಾನು ಭೇಟಿಯಾದೆನು. ಅವರು ಆ ಸಮಯದಲ್ಲೇ 'ಅಬ್ದಾಲ್' ಎಂಬ ಅಲ್ಲಾಹನ ಔಲಿಯಾಗಳ ಪೈಕಿ ಓರ್ವರಾಗಿದ್ದರು. (ಗ್ರಂಥ: ಬಹ್ಜತುಲ್ ಅಸ್ರಾರ್ )

ಮಲಕುಗಳು ಸಜ್ಜನರನ್ನು ಸಮೀಪಿಸುವರು ಹಾಗೂ ಅವರೊಂದಿಗೆ ಸಂಭಾಷಣೆ ನಡೆಸುವರು ಅದಕ್ಕೆ ಖುರ್ ಆನಿನಲ್ಲಿ ಹಲವು ಪುರಾವೆಗಳು ತೋರಿಸಲು ಸಾಧ್ಯ. ಉದಾಹರಣೆಗೆ:

ಅಧ್ಯಾಯ: 3 ಶ್ಲೋಕ: 42
وَإِذْ قَالَتِ ٱلْمَلَٰٓئِكَةُ يَٰمَرْيَمُ إِنَّ ٱللَّهَ ٱصْطَفَىٰكِ وَطَهَّرَكِ وَٱصْطَفَىٰكِ عَلَىٰ نِسَآءِ ٱلْعَٰلَمِينَ

 ಮಲಕ್‍ಗಳು ಹೇಳಿದ ಸಂದರ್ಭ. ಓ ಮರ್ಯಮ್! ಖಂಡಿತವಾಗಿಯೂ ಅಲ್ಲಾಹನು ನಿಮ್ಮನ್ನು ವಿಶಿಷ್ಟವಾಗಿ ಆರಿಸಿರುವನು. ಶುದ್ಧಿಗೊಳಿಸಿರುವನು. ಹಾಗೂ ಲೋಕದ ಸ್ತ್ರೀಯರಲ್ಲಿ ನಿಮ್ಮನ್ನು ಉನ್ನತ ಸ್ಥಾನಕ್ಕೆ ಚುನಾಯಿಸಿರುವನು.

 *ಅಲ್ಲಾಹನು ಈ ಮಹಾನುಭಾವರ ಬರ್ಕತ್ ನಿಂದ ನಮ್ಮ ಬೇಜಾರುಗಳನ್ನು ನೀಗಿಸಲಿ..ನಮ್ಮ ಮಾನಸಿಕ ಹಾಗೂ ಶಾರೀರಿಕ ರೋಗ ರುಜಿನಗಳಿಗೆ ಶಿಫಾಆ್ ಕರುಣಿಸಲಿ..ಆಮೀನ್ ಯಾ ರಬ್ಬಲ್ ಅಲಮೀನ್*

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...