*﷽*
*🎙️Madeena Madh Singers*
🪀Whatsapp Group
*Singer🎤:-Nizam Inoli*
*------------------------------------*
*🎙️Eid Meelad Songs*
ಎದೆಯ ತೊರೆಯು ಹರಿವ ಸದ್ದು ಕೇಳಬೇಕು ಬದುಕಿಸಿ
ಶೇರದಿ ಸೇರುವ ದಿನವ ನೆನೆದು
ಬದುಕಲೀಗ ಬಲು ಖುಷಿ
ಕೊಚ್ಚಿ ಹೋದ ನನ್ನ ಭಾವ
ಎಲ್ಲಿ ಮುಗಿಯಿತು ಎಲ್ಲಿ ಮುಳುಗಿತು
ಈಜು ಬಾರದೆ ಕುಳಿತ ನನ್ನನು
ತ್ವೈಬ ಮಣ್ಣಿಗೆ ತಲುಪಿಸಿ
*(ಎದೆಯ ತೊರೆಯು)*
ಕನಸಿನಲ್ಲಿ ಕವಿತೆ ಬರೆಯುವ
ಧನ್ಯ ರಾತ್ರಿಯ ತೋರಿಸಿ
ಮನದ ಮಡಿಲಲಿ ಬರವ ನೀಗುವ
ಪ್ರೇಮ ಮಳೆಗೆ ಪ್ರಾರ್ಥಿಸಿ
ನೊಂದ ಹ್ರದಯದ ಪ್ರೇಮ ನಾದ
ಎಲ್ಲಿ ಕನಲಿತು ಎಲ್ಲಿ ಹತ್ತಿತು
ನಿದ್ದೆ ಬಾರದೆ ಕುಳಿತ ನನ್ನನು
ತ್ವೈಬ ಮಣ್ಣಿಗೆ ತಲುಪಿಸಿ
*(ಎದೆಯ ತೊರೆಯು)*
ಭಿತ್ತಿಯಲ್ಲಿ ಮಾಸಿ ಹೋಗದ
ಹಸಿರು ಗುಂಬದ್ ಚಿತ್ರಿಸಿ
ಉಸಿರ ಸಂಜೆಗೆ ಕಾದು ನಿಂತಿದೆ
ದಿವ್ಯ ಮುಖವ ನಿರೀಕ್ಷಿಸಿ
ಹ್ರದಯ ನುಡಿಸಿದ ಪ್ರೇಮ ರಾಗ
ಎಲ್ಲಿ ಉಡುಗಿತು ಎಲ್ಲಿ ಅಳಿಯಿತು
ಧ್ವನಿಯು ಹೊರಡದ ಮೂಕ ನಾನು
ಪ್ರೇಮ ಪದವನು ಹಾಡಿಸಿ
*(ಎದೆಯ ತೊರೆಯು)*
*(ಕೊಚ್ಚಿ ಹೋದ)*
*(ಎದೆಯ ತೊರೆಯು)*
*_______________________________*
*✍️Madeena Madh Singers🎤*
🪀Whatsapp Group
*📱ಅಹ್ಮದ್ ನವಾಝ್ ಕೊಣಾಜೆ*
Comments