Skip to main content

ಗ್ರಹಣ ನೋಡಿ ದೃಷ್ಟಿ ಕಳೆದುಕೊಂಡ ಸ್ವಹಾಬಿ


ಗ್ರಹಣ ನೋಡಿ ದೃಷ್ಟಿ ಕಳೆದುಕೊಂಡ ಸ್ವಹಾಬಿ

*✒ಯೂಸುಫ್ ನಬ್‌ಹಾನಿ ಕುಕ್ಕಾಜೆ*

  ▪ *ಪ್ರವಾದಿ* ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಪುತ್ರನಾದ ಹಝ್ರತ್ ಇಬ್ರಾಹೀಮರು ಹದಿನೆಂಟು ತಿಂಗಳ ಪುಟ್ಟ ಮಗುವಾಗಿರುವಾಗಲೇ ಇಹಲೋಕ ತ್ಯಜಿಸಿದರು.
   ▪ *ಈ ಕಂದನ* ವಫಾತಿನ ದಿನ ಸಂಪೂರ್ಣ ಸೂರ್ಯಗ್ರಹಣವಾಗಿತ್ತು. ಸೂರ್ಯಗ್ರಹಣ ಮತ್ತು ಪ್ರವಾದಿಯವರ ಪುತ್ರನ ಮರಣ ಒಂದೇ ದಿನವಾದಾಗ ಕೆಲವು ಸಹಾಬಿಗಳು ಹೇಳಿದರು. *"ಇಬ್ರಾಹೀಮರ ಮರಣವೇ ಈ ಗ್ರಹಣಕ್ಕೆ ಕಾರಣ"* ಇದನ್ನು ಕೇಳಿದ ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಹೇಳಿದರು. *"ಯಾವೊಬ್ಬನ ಜನನದ ಅಥವಾ ಮರಣದ ಕಾರಣದಿಂದ ಗ್ರಹಣವುಂಟಾಗದು,ಸೂರ್ಯ ಮತ್ತು ಚಂದ್ರ ಇವೆರಡೂ ಅಲ್ಲಾಹನ ಮಹಾ ದೃಷ್ಟಾಂತಗಳು. ಅವುಗಳು ಅವುಗಳ ಪಥದಲ್ಲಿ ಚಲಿಸುತ್ತಿರುವಾಗ ಅಲ್ಲಾಹನು ನಿಶ್ಚಯಿಸಿದ ಸಮಯದಲ್ಲಿ ಗೃಹಣವಾಗುತ್ತದೆ. ಗ್ರಹಣವಾದರೆ  ಸುನ್ನತ್ತಾದ ನಮಾಝ್ ಮಾಡಿ."*
   ▪ *ಉಲ್ಲೇಖನೀಯವೆಂದರೆ,* ಸ್ವಹಾಬಿಶ್ರೇಷ್ಠ ಹಝ್ರತ್ *ಮುಗಯ್‌ರ ಬಿನ್ ಶುಅ್‌ಬಾಃ* (ರ) ರವರು ಈ ಗ್ರಹಣವನ್ನು ನೇರವಾಗಿ ನೋಡಿದರು. ಆ ಕಾರಣದಿಂದ ಅವರಿಗೆ ಸಂಪೂರ್ಣವಾಗಿ ದೃಷ್ಟಿ ನಷ್ಟವಾಯಿತು.!!!
   ▪ *ಹಿಜ್‌ರಾ* ವರ್ಷ ಐವತ್ತರಲ್ಲಿ ವಫಾತಾದ ಇವರ ಮಖ್‌ಬರ ಇರಾಕಿನ ಕೂಫಾದಲ್ಲಿದೆ.

ಸಂಗ್ರಹ: ಇಮಾಮ್ ಝಹಬಿಯ *ಸಿಯರು ಅ‌ಅ್‌ಲಾಮಿನ್ನುಬಲಾಅ್* ಮತ್ತು ಇಮಾಮ್ ಇಬ್‌ನು ಅಸಾಕಿರ್‌ರ *ತಾರೀಖ್ ದಿಮಷ್‌ಖ್* ಎಂಬ ಗ್ರಂಥಗಳು.

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...