Skip to main content

ಭಕ್ಷ್ಯಯೋಗ್ಯ ಮುಳ್ಳುಹಂದಿ



ಭಕ್ಷ್ಯಯೋಗ್ಯ ಮುಳ್ಳುಹಂದಿ

 *✒ಯೂಸುಫ್ ನಬ್‌ಹಾನಿ ಕುಕ್ಕಾಜೆ*
📞00971553499119


   ▪ *ಮುಳ್ಳುಹಂದಿಯ* ಬಗ್ಗೆ ನಮ್ಮಲ್ಲಿ ತಿಳಿದವರು ಬಹಳ ಕಡಿಮೆ. ಮಾತ್ರವಲ್ಲ ಅದು ಸಾಮಾನ್ಯ ಹಂದಿಯ ಬೇರೊಂದು ವಿಭಾಗವಾಗಿದೆ ಎಂದು ಭಾವಿಸಿದವರೂ ನಮ್ಮಲ್ಲಿದ್ದಾರೆ. ಸಾಧಾರಣ ಹಂದಿಗೂ ಈ ಮುಳ್ಳುಹಂದಿಗೂ ಯಾವುದೇ ಸಂಬಂಧವಿಲ್ಲ.
   ▪ *ಸುಮಾರು* ಹತ್ತು ವರ್ಷಗಳ ತನಕ ಬದುಕುವ ಈ ಪ್ರಾಣಿಗೆ ಹಗಲಿನಲ್ಲಿ ದೃಷ್ಟಿಶಕ್ತಿ ಬಹಳ ಕಡಿಮೆ. ಆದ್ದರಿಂದ ಇದು ಯಾವಾಗಲೂ ತನ್ನ ಹೊಟ್ಟೆಪಾಡಿಗಾಗಿ ರಾತ್ರಿ ಸಂಚಾರ ಮಾಡುತ್ತದೆ.
   ▪ *ಗರ್ಭಧಾರಣೆಯಾಗಿ* ಒಂದೂವರೆ ತಿಂಗಳಾಗುವಾಗ ಸುಮಾರು ಎರಡರಿಂದ ಐದರ ತನಕ ಮರಿ ಹಾಕುತ್ತದೆ. ಇತರ ಯಾವುದೇ ಜೀವಿಗಳಿಗೆ ಇಲ್ಲದ ತನ್ನ ಶರೀರವನ್ನು ಮಾತ್ರ ಸಂಪೂರ್ಣವಾಗಿ ಆವರಿಸಿರುವ ಮುಳ್ಳುಗಳಾಗಿದೆ ಇದರ ಏಕೈಕ ಆಯುಧ. ಆಕ್ರಮಣ ಮಾಡಲು ಬರುವ ಅಕ್ರಮಿಯ ಕಣ್ಣು , ಮೂಗು, ಹೊಟ್ಟೆಯ ಮಧ್ಯಭಾಗ ಇತ್ಯಾದಿ ಮುಖ್ಯವಾದ ಭಾಗಗಳನ್ನು ಗುರಿಯಿಟ್ಟು ತನ್ನ ಶರೀರದಲ್ಲಿ ಯಥೇಚ್ಛವಾಗಿ ಬೆಳೆದು ಬರುವ ಮುಳ್ಳನ್ನು ಹಾರಿಸಿ ಬಿಡುತ್ತದೆ. ಎಷ್ಟರತನಕವೆಂದರೆ, ಒಬ್ಬ ಬಿಲ್ಲು ವಿದ್ಯೆಗಾರನಿಗಾದರೂ ಗುರಿತಪ್ಪಬಹುದು. ಆದರೆ ಮುಳ್ಳುಹಂದಿಗೆ ತಪ್ಪಿಹೋಗದು. ಅಷ್ಟಕ್ಕೂ ಇದು ಚತುರನಾಗಿರುತ್ತದೆ. ಬೇಟೆಯಾಡುವವನ ಕಣ್ಣು ತಪ್ಪಿಸಲು ಇದು ತನ್ನ ಮುಳ್ಳನ್ನು ಒಳಗೆ ಮಡಚಿ ಗೋಚರಕ್ಕೆ ಒಂದು ಪುಟ್ಟ ಮರದ ದಿಮ್ಮಿಯಂತೆ ಒಂದು ಕಡೆ ಇರುತ್ತದೆ.  ಬೇಟೆಯಾಡಿ ಹಿಡಿದರೆ ತನ್ನ ಕತ್ತನ್ನು ಒಳಗೆ ಮಡಚಿ ದ್ಸಬಹ್ ಮಾಡದಂತೆ ಪೇಚಾಟ ಮಾಡುತ್ತದೆ.
   ▪ *ಯಾವಾಗಲೂ* ಶುದ್ಧವಾದ ಗಾಳಿಯನ್ನು ಬಯಸುವ ಈ ಪ್ರಾಣಿಯ ಗೂಡಿಗೆ ಎರಡು ದ್ವಾರವಿರುತ್ತದೆ. ಒಂದು ದ್ವಾರವು ಉತ್ತರ ದಿಕ್ಕಿನಲ್ಲಾದರೆ ಮತ್ತೊಂದು ದಕ್ಷಿಣದಲ್ಲಾಗಿರುತ್ತದೆ. ಗಾಳಿಯು ಚೆನ್ನಾಗಿ ಹರಿದು ಹೋಗಲಿಕ್ಕೆ ಬೇಕಾಗಿ ಮಾಡುವ ಒಂದು ವಿಧಾನವಾಗಿದೆ ಇದು.
   ▪ *ಹಣ್ಣು* ಹಂಪಲುಗಳು, ತರಕಾರಿಗಳು, ಇಲಿ, ಹುಳ, ಹಾವುಗಳಾಗಿದೆ ಇದರ ಭೋಜನವಸ್ತು. ಎಂತಹಾ ವಿಷಹಾವನ್ನು ಬೇಕಾದರೂ ತಿನ್ನುತ್ತದೆ. ವಿಷಹಾವೆಂದರೆ ಈತನಿಗೆ ಬಹಳ ಇಷ್ಟ. ಅದಾಗ್ಯೂ ಇದಕ್ಕೆ ಯಾವುದೇ ತೊಂದರೆಯಿಲ್ಲ. ಹಾವನ್ನು ಹಿಡಿದ ಕೂಡಲೇ ಮೊದಲಾಗಿ ತಲೆಯ ಭಾಗಕ್ಕೆ ತ್ವರಿತ ಗತಿಯಲ್ಲಿ ತನ್ನ ಮುಳ್ಳಿನಿಂದ ನಾಲ್ಕೈದು ಚುಚ್ಚುಮದ್ದು ಕೊಡುತ್ತದೆ. ಕೊಟ್ಟ ಚುಚ್ಚುಮದ್ದಿನಿಂದ ಹತೋಟಿಗೆ ಬಂದ ಕೂಡಲೇ ಅದನ್ನು  ಬಾಲದ ಭಾಗದಿಂದ ತುಂಡು ತುಂಡು ಮಾಡಿ ನಂತರ ತಿನ್ನಲು ಶುರುಮಾಡುತ್ತದೆ. ತಲೆಯ ತನಕ ತಿಂದು ತಲೆಯನ್ನು ಹಾಗೆಯೇ ಬಿಡುತ್ತದೆ.
   ▪ *ಮುಳ್ಳುಹಂದಿಯು*  ಶಾಫಿಯೀ ಮದ್‌ಹಬಿನಲ್ಲಿ ಭಕ್ಷ್ಯಯೋಗ್ಯವಾಗಿದೆ. ಹನಫೀ ಮತ್ತು ಹಂಬಲಿಯಲ್ಲಿ ನಿಷಿದ್ಧವಾಗಿದೆ. ಮಾಲಿಕಿಯಲ್ಲಿ ಭಿನ್ನಾಭಿಪ್ರಾಯವಿದೆ.
   ▪  *ಪ್ರವಾದಿ* ಮುಹಮ್ಮದ್ (ಸ) ರವರ ಸನ್ನಿಧಿಗೆ ಉಮ್ಮು ಹಫೀದ್ (ರ) ಎಂಬ ಸಹಾಬಿ ವನಿತೆಯು ಮುಳ್ಳುಹಂದಿಯ ಮಾಂಸವನ್ನು ತಂದಿಟ್ಟಾಗ ಪ್ರವಾದಿಯವರು ಅದನ್ನು ತಿನ್ನದೆ ತನ್ನ ಕೈಯಿಂದ ದೂಡಿದರು. ಹಾಗೆಯೇ ಬೇರೊಬ್ಬರು ಸಹಾಬಿ ಹೇಳುತ್ತಾರೆ. "ಪ್ರವಾದಿ ಸನ್ನಿಧಿಯಲ್ಲಿ ಮುಳ್ಳುಹಂದಿಯ ಬಗ್ಗೆ ಪ್ರಸ್ತಾಪ ಬಂದಾಗ *ಅದರಷ್ಷು ನೀಚ ಮತ್ತು ಕೆಟ್ಟದ್ದರಲ್ಲಿ ಕೆಟ್ಟ ಪ್ರಾಣಿ ಬೇರೊಂದಿಲ್ಲ* ಎಂದು ಪ್ರವಾದಿಯವರು ಹೇಳಿದ್ದನ್ನು ನಾನು ಕೇಳಿದ್ದಾಗಿ ಸಹಾಬೀಶ್ರೇಷ್ಠ ಹಝ್ರತ್ ಅಬೂಹುರೈರ (ರ)  ನನ್ನಲ್ಲಿ ಹೇಳಿದ್ದಾರೆ" ಈ ಹದೀಸನ್ನು ಇಮಾಮ್ ಬೈಹಖೀ ವರದಿ ಮಾಡಿದ್ದಾರೆ.
   ▪ *ಈ ಎರಡು* ಫಟನೆಗಳ ಪೈಕಿ ಎರಡನೇ ಘಟನೆಯಲ್ಲಿ ಪ್ರವಾದಿ ಮುಹಮ್ಮದ್ (ಸ) ರು ಮುಳ್ಳುಹಂದಿಯನ್ನು ತಾನು ತಿನ್ನದೆ ತಿರಸ್ಕರಿಸಿದ್ದೇ ವಿನಾ ಹಾಜರಿರುವವರಲ್ಲಿ "ನೀವು ತಿನ್ನಬೇಡಿ" ಎಂದು ಹೇಳಲಿಲ್ಲ. ಹಾಗೆಯೇ "ಕೆಟ್ಟದ್ದರಲ್ಲಿ ಕೆಟ್ಟದ್ದು" ಎಂದರೆ ಪ್ರವಾದಿಯವರು ಹೇಳಿದ್ದು ಅದರ ಮಾಂಸದ ಬಗ್ಗೆಯಲ್ಲ. ಹೊರತು ಅದರ ಮುಳ್ಳು ಹಾರಿಸಿ ಬಿಡುವಂತಹಾ ನೀಚ ಚಲನವಲನಗಳ ಬಗ್ಗೆಯಾಗಿದೆ ಎಂದು ಈ ಹದೀಸಿನ ವ್ಯಾಖ್ಯಾನದಲ್ಲಿ ಕೆಲವು ಉಲಮಾಗಳು ಅಭಿಪ್ರಾಯ ಪಟ್ಟಿದ್ದಾರೆ.
   ▪ *ಆದ್ದರಿಂದ* ಈ ಮೃಗದ ಮಾಂಸ ತಿನ್ನುವುದರ ಬಗ್ಗೆ ನಾಲ್ಕು ಮದ್‌ಹಬಿನಲ್ಲಿ ವಿಭಿನ್ನವಾದ ಅಭಿಪ್ರಾಯಗಳಿದ್ದರೂ ಶಾಫಿಯೀ ಮದ್‌ಹಬಿನ ಪ್ರಕಾರ ಹಲಾಲ್ ಆಗಿದೆ.
   ▪ *ಈ ಮೃಗವು*  ದ್ರಾಕ್ಷಿಹಣ್ಣಿನ ಹುಂದರವನ್ನು (ದೊಂಪ) ಕಂಡರೆ ಅದರ ಮೇಲೆ ಹತ್ತಿ ಸಿಕ್ಕಾಪಟ್ಟೆ ತುಂಡು ಮಾಡಿ ಹಾಕುತ್ತದೆ. ನಂತರ ಕೆಳಗಿಳಿದು ಬೇಕಾದಷ್ಟು ತಿಂದು  ಬಾಕಿ ಉಳಿದಿರುವುದ ಮೇಲೆ ಹೊರಳುತ್ತದೆ. ಹೊರಳಿದಾಗ ತನ್ನ ಮುಳ್ಳಿನಲ್ಲಿ ಸಿಕ್ಕಿಕೊಂಡ ದ್ರಾಕ್ಷಿಯೊಂದಿಗೆ ಗೂಡಿಗೆ ಹೋಗಿ ತನ್ನ ಮರಿಗಳಿಗೆ ತಿನ್ನಿಸುತ್ತದೆ.

   ▪ *ಶರೀರದ* ಯಾವುದಾದರೊಂದು ಭಾಗದ ಕೂದಲನ್ನು ಕತ್ತಿ ಅಥವಾ ಬ್ಲೇಡಿನಲ್ಲಿ ಕ್ಷೌರ ಮಾಡದೆ ಹಾಗೆಯೇ ಕಿತ್ತು ತೆಗೆದ ಕೂಡಲೇ ಮುಳ್ಳುಹಂದಿಯ ಪಿತ್ತಕೋಶವನ್ನು ಜಜ್ಜಿ ಅಲ್ಲಿಗೆ ಸವರಿದರೆ ಮತ್ತೆ ಜೀವನಪರ್ಯಂತ ಆ ಜಾಗದಲ್ಲಿ ಕೂದಲು ಚಿಗುರುವುದಿಲ್ಲ. ಅಂತೆಯೇ ಅದನ್ನು ಗಂಧಕದೊಂದಿಗೆ ಮಿಶ್ರಣ ಮಾಡಿ ಚರ್ಮರೋಗವಾದ ತೊನ್ನಿಗೆ(Vitiligo) ಸವರಿದರೆ ಅದು ಕ್ರಮೇಣ ಮಾಯವಾಗುತ್ತದೆ. ಮಾತ್ರವಲ್ಲ ಕ್ಷಯರೋಗ, ಕುಷ್ಠರೋಗ, ಬಟ್ಟೀಬೇನೆ ಅಥವಾ ಶೀತಭೇದಿ (tenesmus) ಮುಂತಾದ ಖಾಯಿಲೆ ಇರುವವರಿಗೆ ಇದರ ಪಿತ್ತಕೋಶವನ್ನು ತಿಂದರೆ ಬಹಳ ಫಲ ಕಾಣುತ್ತದೆ. ಹಾಗೆಯೇ ಇದರ ಮಾಂಸವನ್ನು ಆಗಾಗ್ಗೆ ತಿನ್ನುವುದು ಕ್ಷಯರೋಗ, ಕುಷ್ಠರೋಗ, ಆನೆಕಾಲುರೋಗ, ಗ್ಯಾಸ್ ಟ್ರಬಲ್, ಮೂತ್ರಜನಕಾಂಗದ ತೊಂದರೆ, ಸ್ನಾಯುವಿನ ಸೆಳೆತ, ಎಲ್ಲಾ ವಿಷಜಂತುಗಳ ಕಡಿತ, ರಾತ್ರಿ ಚಾಪೆಯಲ್ಲಿ ಮೂತ್ರಶಂಕೆ ಮಾಡುವುದು ಇತ್ಯಾದಿ ಖಾಯಿಲೆಗಳಿಗೆ ಬಹಳ ಒಳ್ಳೆಯದು.
  ▪  *ಇದರ* ಎಡ ಭಾಗದ ಕಣ್ಣನ್ನು ಕಿತ್ತು ತೆಗೆದು ತೆಂಗಿನ ಎಣ್ಣೆಯಲ್ಲಿ ಚೆನ್ನಾಗಿ ಬೇಯಿಸಿ ನಂತರ ಆ ಎಣ್ಣೆಯಿಂದ ಒಂದೆರಡು ಹನಿ ಕಿವುಡನ ಕಿವಿಗೆ ಹಾಕಿದರೆ ಕೆಲವು ದಿನಗಳಾಗುವಾಗ ಅವನ ಕಿವುಡುತನ ನಿವಾರಣೆಯಾಗುತ್ತದೆ. ಅಂತೆಯೇ ಅದರ ಪಿತ್ತಕೋಶವನ್ನು ಗುಲಾಬಿ ನೀರಿನಲ್ಲಿ ಮಿಶ್ರಣ ಮಾಡಿ ಅದರಿಂದ ಒಂದೆರಡು ಹನಿ ಕಿವುಡನ ಕಿವಿಗೆ ಹಾಕಿದರೆ ಕ್ರಮೇಣ ಅವನಿಗೆಆ ಶ್ರವಣ ಶಕ್ತಿ ದೊರೆಯುತ್ತದೆ.
   ▪ *ಮುಳ್ಳುಹಂದಿಯ* ಪ್ಲೀಹವನ್ನು ಜೇನಿನೊಂದಿಗೆ ಮಿಶ್ರಣ ಮಾಡಿ ಪ್ಲೀಹ ಸಂಬಂಧವಾದ ಖಾಯಿಲೆ ಇರುವವನು ಕುಡಿದರೆ ಅದು ಗುಣವಾಗುತ್ತದೆ.
   ▪ *ಉರಿಮೂತ್ರ* ಅಂತೆಯೇ ಮೂತ್ರ ಸಂಬಂಧವಾದ ತೊಂದರೆ ಇರುವವನು ಇದರ ಮೂತ್ರಕೋಶವನ್ನು ಒಣಗಿಸಿ ಪುಡಿಮಾಡಿ ನಂತರ ಕಪ್ಪುಕಡಲೆಕಾಯಿ ಬೀಜವನ್ನು ಬೇಯಿಸಿದ ನೀರಿನಲ್ಲಿ ಮಿಶ್ರಣ ಮಾಡಿ ಕುಡಿದರೆ ತೊಂದರೆ ನಿವಾರಣೆಯಾಗುತ್ತದೆ.
   ▪ *ಹುಚ್ಚುನಾಯಿ* ಕಚ್ಚಿದ ಜಾಗಕ್ಕೆ, ಕಚ್ಚಿದ ಕೂಡಲೇ ಇದರ ರಕ್ತವನ್ನು ಲೇಪಿಸಿದರೆ ನೋವು ಕಡಿಮೆಯಾಗಿ ಸಾವಿನಿಂದ ಪಾರಾಗುತ್ತಾನೆ.
   ▪ *ಮುಳ್ಳುಹಂದಿಯ* ಚರ್ಮವನ್ನು ಸುಟ್ಟು ಕೀಲೆಣ್ಣೆಯೊಂದಿಗೆ (ಟಾರ್) ಮಿಶ್ರಣ ಮಾಡಿ ಬೋಳುತಲೆಗೆ ಸವರಿದರೆ ಕ್ರಮೇಣ ಕೂದಲು ಬರಲು ಶುರುವಾಗುತ್ತದೆ.
   ▪ *ಇದರ* ಬಲಗಾಲನ್ನು ಅದು ಜೀವಂತವಿರುವಾಲೇ ತುಂಡುಮಾಡಿ ಕೂಡಲೇ ನಾರುಬಟ್ಟೆಯಲ್ಲಿ ಕಟ್ಟಿ ವಿಪರೀತ ಚಳಿಜ್ವರ ಇರುವವನ ಸೊಂಟಕ್ಕೆ ಕಟ್ಟಿದರೆ ಜ್ವರ ನಿಮಿಷದಲ್ಲೇ ಬೆಟ್ಟ ಹತ್ತುತ್ತದೆ.
   ▪ *ಮುಳ್ಳುಹಂದಿಯ* ಬಲ ಕಣ್ಣನ್ನು ಕಿತ್ತುತೆಗೆದು ಒಂದು ತಾಮ್ರದ ಪಾತ್ರೆಯಲ್ಲಿ ಎಳ್ಳೆಣ್ಣೆಯಲ್ಲಿ ಚೆನ್ನಾಗಿ ಹುರಿಯಬೇಕು. ನಂತರ ಆ ಹುರಿದ ಎಣ್ಣೆಯನ್ನು ಕಣ್ಣಿಗೆ ಸಾಧಾರಣ ಸುರುಮ ಪೂಸುವಂತೆ ಒಬ್ಬನಿಗೆ ಪೂಸಿದರೆ ಅವನಿಗೆ ರಾತ್ರಿಯಲ್ಲಿ ಹಗಲಿನಂತೆ ಕಾಣುತ್ತದೆ. ಮಾತ್ರವಲ್ಲ ಎಂತಹಾ ಮುಸುಕಿರುವ ಜಾಗದಲ್ಲೂ ಯಾವುದೇ ಭಯವಿಲ್ಲದೆ ಹೋಗಬಹುದು. ಅದೇರೀತಿ ಅದರ ಎಡ ಕಣ್ಣನ್ನು ತೆಂಗಿನಕಾಯಿ ಎಣ್ಣೆಯಲ್ಲಿ ಹುರಿದು ಆ ಎಣ್ಣೆಯನ್ನು ನಿದ್ದೆ ಬಾರದೆ ನರಳುತ್ತಿರುವ ಒಬ್ಬನ ಮೂಗಿನ ಹತ್ತಿರ ಹಿಡಿದರೆ ಕ್ಷಣದಲ್ಲೇ ಆತ ಕನಸಿನ ಲೋಕಕ್ಕೆ ಹೋಗುತ್ತಾನೆ. ರಾತ್ರಿ ನಿದ್ರೆ ಹಿಡಿಯಲು ತುಂಬಾ ಸಮಯ ಬೇಕಾಗುವವರಿಗೆ ಮನೆಯಲ್ಲಿರಬೇಕಾದ ಒಂದು ಸಿದ್ದ ಔಷಧವಾಗಿದೆ ಇದು.
   ▪ *ವಿಪರೀತ* ಜ್ವರದಿಂದ ಬಳಲುತ್ತಿರುವವನ ಹತ್ತಿರ ಇದರ ಉಗುರನ್ನು ಸುಟ್ಟು ಹೊಗೆ ಹಾಕಿದರೆ ಜ್ವರ ವಾಸಿಯಾಗತ್ತದೆ. ಅಂತೆಯೇ ಮೂರರ ಚಳಿಜ್ವರ  ಇರುವವನಿಗೆ ಇದರ ಹೃದಯವನ್ನು ಕಿತ್ತು ಅವನ ಶರೀರಕ್ಕೆ ತೂಗು ಹಾಕಿದರೆ ಜ್ವರ ಗುಣವಾಗುತ್ತದೆ.
   ▪ *ಪಾಂಡುರೋಗಿಯು* ಇದರ ಕೊಬ್ಬನ್ನು ಅವನ ಶರೀರಕ್ಕೆ ಕೆಲವು ಬಾರಿ ಸವರಿದರೆ ಅದು ಮಾಯವಾಗುತ್ತದೆ. ಹಾಗೆಯೇ ಇದನ್ನು ಸಂಪೂರ್ಣವಾಗಿ ಸುಟ್ಟು ಅದರ ಬೂದಿಯನ್ನು ಮೂಲವ್ಯಾಧಿ ಖಾಯಿಲೆ ಇರುವವನ ಗುದದ್ವಾರಕ್ಕೆ ತುಂಬಿಸಿದರೆ ಅದು ಗುಣವಾಗುತ್ತದೆ.
   ▪ *ಜೇನುತುಪ್ಪವನ್ನು* ಜೇನುಗೂಡಿನಿಂದ ಬೇರ್ಪಡಿಸದೆ ಗೂಡು ಸಮೇತ ಮುಳ್ಳುಹಂದಿಯ ವೃಷಣದೊಂದಿಗೆ ಮಿಶ್ರಣ ಮಾಡಿ ತಿಂದರೆ ಲೈಂಗಿಕ ಶಕ್ತಿ ಜಾಸ್ತಿಯಾಗುತ್ತದೆ. ಅಂತೆಯೇ ಪತ್ನಿಯಾಗಿ ಲೈಂಗಿಕ ಚಟುವಟಿಕೆಯಲ್ಲಿ ಆಸಕ್ತಿ ಇಲ್ಲದವನ ಶರೀರವನ್ನು ಇದರ ಕೊಬ್ಬು ಮತ್ತು ರಕ್ತ ಮಿಶ್ರಣ ಮಾಡಿ ಒಂದೆರೆಡು ಬಾರಿ ಸವರಿ ಚೆನ್ನಾಗಿ ಮಸಾಜು ಮಾಡಿದರೆ ನಂತರ ಮನೆ ಬಿದ್ದರೂ ಪತ್ನಿಯನ್ನು ಬಿಟ್ಟು ಹೋಗಲಾರನು.
‌   ▪ *ಮುಳ್ಳುಹಂದಿಯನ್ನು* ಮನುಷ್ಯ ರಕ್ತ ಮತ್ತು ಮಾಂಸವನ್ನು ಸ್ಪರ್ಶಿಸದ (ಅಂದರೆ ಮನುಷ್ಯನನ್ನು ಕೊಲೆ ಮಾಡದ) ಒಂದು ಖಡ್ಗದಲ್ಲಿ ಚೂರಿಹಾಕಿ ನಂತರ  ಅದರ ಶವವನ್ನು ಹುಚ್ಚು ಹಿಡಿದವನು, ಮೂರ್ಛೆ ಹೋದವನು ಅಂತೆಯೇ ಅಪಸ್ಮಾರ ರೋಗಿಯ ಕತ್ತಿಗೆ ತೂಗು ಹಾಕಿದರೆ ನಿಮಿಷದಲ್ಲೇ ಮಾಮೂಲು ಸ್ಥಿತಿಗೆ ಬರುತ್ತಾರೆ.
   ▪ *ಮುಳ್ಳುಹಂದಿಯನ್ನು* ಕನಸಲ್ಲಿ ಕಾಣುವುದರ ಬಗ್ಗೆ ಕನಸಿನ ಉಲಮಾಗಳು ಹೆಚ್ಚಿನ ವ್ಯಾಖ್ಯಾನ ಅಥವಾ ಮಾಹಿತಿಯನ್ನು ಕೊಡಲಿಲ್ಲ. ಮುಳ್ಳುಹಂದಿಯನ್ನು ಕನಸಲ್ಲಿ ಕಾಣುವುದು ಶುಭ ಕನಸಲ್ಲ. ಒಟ್ಟಿನಲ್ಲಿ ಒಬ್ಬನಿಗೆ ಇದರ ಕನಸು ಬಿದ್ದರೆ ಆತ ಜನರೆಡೆಯಲ್ಲಿ ಅಪಮಾನಕ್ಕೆ ಈಡಾಗುವುದರ ನಿಶಾನೆಯಾಗಿದೆ. ಕೆಲವೊಮ್ಮೆ ಯಾರಾದರೊಬ್ಬನ ವಂಚನೆಯಲ್ಲಿ ಸಿಲುಕಿ ತೊಂದರೆಗೀಡಾಗುವುದರ ಸಂಕೇತವಾಗಿದೆ.
   ▪ *ಮುಳ್ಳುಹಂದಿಗೆ* ತನ್ನ ಬಾಯಿಯಲ್ಲಿ ಬರೀ ಐದು ಹಲ್ಲುಗಳಿರುವುದು ಎಂದು ಹೇಳಲಾಗುತ್ತದೆ.

 ಸಂಗ್ರಹ: ಇಮಾಮ್ ದುಮೈರಿಯ *ಹಯಾತುಲ್ ಹಯವಾನ್,* ಇಮಾಮ್ ಅಬ್‌ಶೀಹಿಯ *ಮುಸ್‌ತತ್‌ರಫ್* ಮತ್ತು ಇಮಾಮ್ ಖಝ್‌ವೀನಿಯ *ಅಜಾಯಿಬುಲ್ ಮಖ್‌ಲೂಖಾತ್* ಎಂಬ ಗ್ರಂಥಗಳು.

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...