Skip to main content

ಇದೆಂತಹಾ ಅ್ಯಾಂಟೀಬಯೋಟಿಕ್


ಇದೆಂತಹಾ ಅ್ಯಾಂಟೀಬಯೋಟಿಕ್

*✒ಯೂಸುಫ್ ನಬ್‌ಹಾನಿ ಕುಕ್ಕಾಜೆ*

   ▪ಸ್ವಹಾಬಿಯಾದ *ಫುದೈಕ್ ಬಿನ್ ಅಮ್‌ರ್*(ರ) ರವರು ಒಮ್ಮೆ ಒಂದು ಗುಡ್ಡಗಾಡು ಪ್ರದೇಶದಲ್ಲಿ ಒಂಟೆಯಲ್ಲಿ ಸಂಚಾರ ಮಾಡುತ್ತಿರುವಾಗ ಒಂದು ಕಡೆ ಇಳಿಯುವ ಅಗತ್ಯ ಬಂದಾಗ ಅಕಸ್ಮಾತ್ ತಿಳಿಯದೆ ಮಹಾ ವಿಷ ಸರ್ಪದ ಮೊಟ್ಟೆಯ ಮೇಲೆ ಕಾಲಿಟ್ಟರು. 
   ▪ *ವಿಷಪೂರಿತ* ಹಾವಿನ ಮೊಟ್ಟೆಯ ಮೇಲೆ ಪಾದರಕ್ಷೆಯಿಲ್ಲದೆ ಕಾಲಿಟ್ಟ ಕಾರಣ ಕೆಲವು ದಿನಗಳು ಕಳೆಯುವಾಗ ಅದರ ವಿಷದ ಫಲವಾಗಿ  ಅವರ ಎರಡು ಕಣ್ಣಿನ ದೃಷ್ಟಿ ಸಂಪುರ್ಣವಾಗಿ ನಷ್ಟವಾಯಿತು. ತುಂಬು ಯೌವನದಲ್ಲಿ ಉಂಟಾದ ಈ ಮಹಾ ದುರಂತ ಅವರಿಗೆ ತನ್ನ ಭವಿಷ್ಯದ ಬದುಕನ್ನು ಮುಂದಕ್ಕೆ ಕೊಂಡು ಹೋಗುವುದಕ್ಕೆ ಒಂದು ಅಡ್ಡಿಯಾಯಿತು.
   ▪ *ಅಂತೆಯೇ* ಇವರನ್ನು ಇತರ ಕೆಲವು ಸ್ವಹಾಬಿಗಳು ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಸನ್ನಿಧಿಗೆ ತಂದರು. ಕೂಡಲೇ ಕುರುಡನಾಗಿದ್ದ *ಪುದೈಕ್* (ರ) ರವರ ಎರಡು ಕಣ್ಣುಗಳಿಗೂ ಪ್ರವಾದಿಯವರು ತನ್ನ ಪವಿತ್ರ ಉಗುಳು ನೀರನ್ನು ಉಗುಳಿದರು. ಸುಬ್‌ಹಾನಲ್ಲಾಹ್.. ಉಗುಳಿದ್ದೇ ತಡ ನಷ್ಟವಾದ ದೃಷ್ಟಿ ಸಂಪೂರ್ಣವಾಗಿ ಮರಳಿ ಬಂತು.
   ▪ *ಗಮನಾರ್ಹ* ಸಂಗತಿಯೆಂದರೆ, ಈ ಸ್ವಹಾಬಿಯವರಿಗೆ ಸುಮಾರು ಎಂಬತ್ತು ವರ್ಷ ಕಳೆದ ನಂತರವೂ ತನ್ನ ಬಟ್ಟೆ ಹೊಲಿಯುವ ಅಗತ್ಯ ಬರುವಾಗ ತಾನೇ ಸೂಜಿಗೆ ದಾರ (ನೂಲು) ಹಾಕುತ್ತಿದ್ದರು.! ಆಗಲೂ  ಆ ಪ್ರವಾದಿಯವರಿಂದ ಪವಾಡವಾಗಿ ದೊರೆತ ಅ್ಯಾಂಟೀಬಯೋಟಿಕ್‌ನ ಫಲಕ್ಕೆ ಯಾವುದೇ ಕೊರತೆಯಿರಲಿಲ್ಲ.

ಸಂಗ್ರಹ ; ಬಿನ್ ಹಜರ್ ಅಸ್‌ಖಲಾನಿಯ *ಅಲ್ ಇಸಾಬಾ ಫೀ ತಮ್‌ಯೀಝ್ ಅಲ್ ಸ್ವಹಾಬಾ* ಎಂಬ ಗ್ರಂಥ.

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...