Skip to main content

ಸುನ್ನೀ ಸಮಸ್ತ ವಿಜಯದ ಹಾದಿಯಲ್ಲಿ

 ಸುನ್ನೀ ಸಮಸ್ತ ವಿಜಯದ ಹಾದಿಯಲ್ಲಿ


ಅಂದು 1933, ಮಾರ್ಚ್ 5..

ಸಮಸ್ತ ಅಧ್ಯಕ್ಷರಿಗೆ ವಕೀಲರ ನೋಟಿಸ್.


ಕೇರಳ ಜಂಇಯ್ಯತುಲ್ ಉಲಮಾದ ಹೆಸರಲ್ಲಿ ಫಾರೂಖ್‌ನಲ್ಲಿ

ಸಮಸ್ತ ಸಮ್ಮೇಳನ ನಡೆಸಲು ಆಯೋಜಿಸಲಾಗಿದೆ ಎಂಬ ಮಾಹಿತಿ ನಮಗೆ ಸಿಕ್ಕಿದೆ.

ಕೇರಳ ಜಂಇಯ್ಯತುಲ್ ಉಲಮಾ ಈಗಾಗಲೇ ನೊಂದಾಯಿತ ಸಂಸ್ಥೆಯಾಗಿದೆ. 

ಈ ಸಂಘನೆಯ ಗಮನಕ್ಕೆ ಬಾರದೇ, ಅವರ ಅನುಮತಿಯನ್ನು ಪಡೆಯದೇ ಅವರ ಹೆಸರಲ್ಲಿ ಸಮ್ಮೇಳನ ನಡೆಸುವುದು ಕಾನೂನು ಬಾಹಿರವಾಗಿದೆ. 

ಸಮ್ಮೇಳನ ನಡೆಸಿದ್ದಲ್ಲಿ ಕ್ರಿಮಿನಲ್ ಕ್ರಮ ಕೈಗೊಳ್ಳಲಾಗುವುದು.


ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ದ ಆರನೇ ವಾರ್ಷಿಕ ಸಮ್ಮೇಳನಕ್ಕೆ ಮುಂಚಿತವಾಗಿ ವಕೀಲ ಕೆ. ಕೆ. ಪೋಕರ್ ಸಾಹೆಬ್ ಮುಖಾಂತರ ಸಲಫಿಗಳು ನೀಡಿದ ನೋಟಿಸ್ ಇದಾಗಿತ್ತು.


ನಾಲ್ಕು ಮದ್‌ಹಬ್ ಗಳಲ್ಲಿ ಪ್ರಾವೀಣ್ಯತೆ ಪಡೆದಿದ್ದ, 

20 ನೇ ಶತಮಾನದ ಮುಜದ್ದಿದ್ ಇಮಾಂ ಅಹ್ಮದ್ ರಝಾಖಾನ್ ( ರ ) ರವರ ಶಿಷ್ಯ 

ಇಮಾಂ ಅಹ್ಮದ್ ಕೋಯ  ಶಾಲಿಯಾತೀ ( ರ ) ಸಮ್ಮೇಳನದ ಅಧ್ಯಕ್ಷರಾಗಿದ್ದರು.


ಇಮಾಂ ಶಾಲಿಯಾತೀ ( ರ ) ತಕ್ಷಣ ಉತ್ತರಿಸಿದರು.

ಸಮ್ಮೇಳನ ನಡೆಸುವುದು ಸಮಸ್ತ ಕೇರಳ ಜಂಇಯ್ಯತುಲ್ ಉಲಮಾದ ಹೆಸರಲ್ಲಿ.

ಅದಕ್ಕೂ ಕೇರಳ ಜಂಇಯ್ಯತುಲ್ ಉಲಮಾಕ್ಕೂ, ಯಾವುದೇ ಸಂಬಂಧವಿಲ್ಲ.

ಅದರೊಂದಿಗೆ ಯಾವುದೇ ವ್ಯವಹಾರವೂ ಇಲ್ಲ.


ಸಮಸ್ತ..

ಇಸ್ಲಾಮಿನ ನೈಜ ಆದರ್ಶ ಸಂಹಿತೆಯನ್ನು ‌ಹುಟ್ಟು ಹಾಕಲು ರಚಿಸಿದ ಸಂಸ್ಥೆ. ನೂತನವಾದಿಗಳು ಇಸ್ಲಾಮಿನ ತತ್ವಾದರ್ಶಗಳನ್ನು ವಿಕೃತಗೊಳಿಸಿದಾಗ , ಸುಮ್ಮನಿರುವುದು ತರವಲ್ಲವೆಂದು ಭಾವಿಸಿ , ಧರ್ಮದ ರಕ್ಷಣೆಗಾಗಿ ವಿದ್ವಾಂಸರು ಹುಟ್ಟು ಹಾಕಿದ ಚಳವಳಿಯಿದು.


ಈ ಮಹತ್ತರ ಚಳವಳಿಗೆ 96 ರ ಸಂಭ್ರಮ.


ಒಂದು ಕಾಲದಲ್ಲಿ ಇಸ್ಲಾಮಿಗೆ, ನೂತನವಾದಿಗಳ ಮಾತ್ರ ಬೆದರಿಕೆಯಿತ್ತು, 

ಆದರೆ ಕಳೆದ 50 - 40 ವರ್ಷಗಳಿಂದೀಚೆಗೆ ರಾಜಕೀಯದಿಂದಲೂ ಬೆದರಿಕೆ ಬಂದಿದೆ.

ಆಗಲೂ ಸಮಸ್ತ ತನ್ನ ದೌತ್ಯವನ್ನು ಯಶಸ್ವಿಯಾಗಿ ನಿಭಾಯಿಸಿದೆ.


ಅಂದು ವರಕ್ಕಲ್ ಮುಲ್ಲಕೋಯ ತಂಙಲ್ (ರ) ರವರ ನೇತೃತ್ವದಲ್ಲಿ ನೂತನವಾದದ ವಿರುದ್ದ ಸಮರ ಸಾರಿದರೆ..

ನಂತರ ತಾಜುಲ್ ಉಲಮಾ (ಖ:ಸಿ) ರ ನೇತೃತ್ವದಲ್ಲಿ ನೂತನವಾದ ಮತ್ತು ಕುಟಿಲ ರಾಜಕಾರಣದ 

ವಿರುದ್ಧ ಜಂಟಿ ಸಮರ ಸಾರಲಾಯಿತು.


ಸಮಸ್ತದ ಈ ಐತಿಹಾಸಿಕ ನಡೆಯೇ ಅದರ ವಿಜಯಕ್ಕೆ ಕಾರಣ.

ಯಾರ ಮುಂದೆಯೂ ಆದರ್ಶ ಹೇಳಬಲ್ಲ ದಿಟ್ಟ ನಾಯಕರ ದಂಡೇ ಈಗ ನಮಗಿದೆ.

ಎದುರುಗಿವವನು ನೂತನವಾದಿಯೇ ಆಗಲೀ, ರಾಜಕೀಯ ನಾಯಕನೇ ಆಗಲೀ, 

ಅಥವಾ ಯಾವುದೇ ಗಣ್ಯನೇ ಆಗಲೀ 

ಇಸ್ಲಾಮಿನ ಅದರ್ಶ ಹೇಳಲು ಹಿಂದೆ ಮುಂದೆ ನೋಡದ ದಿಟ್ಟ ನೇತೃತ್ವ ಸಮಸ್ತಕ್ಕಿದೆ.

ಅಲ್ಲಾಹನ ಸಹಾಯದಿಂದ 

ಈ ನಾಯಕತ್ವ ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ.


ಅಲ್ಲಾಹನೇ ಸಮಸ್ತ ನಾಯಕರಾದ ಸುಲೈಮಾನ್ ಉಸ್ತಾದರಿಗೂ, ಕಾಂತಪುರಂ ಎಪಿ ಉಸ್ತದರಿಗೂ, ಅದೇ ರೀತಿ ಸರ್ವ ನಾಯಕರಿಗೂ ದೀರ್ಘಾಯುಷ್ಯ, ಆಫಿಯತ್ ನೀಡಿ ಅನುಗ್ರಹಿಸು ಆಮೀನ್

*@ ಅಬೂ ರಾಝೀ*

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...